Author: main-admin

ವಿಟ್ಲ: ಚಾಲಕನ ನಿಯಂತ್ರಣ ಕಳೆದು ಶಾಲಾ ಬಸ್ಸೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಸಮೀಪದ ಕುಂಟುಕುಡೇಲು ಎಂಬಲ್ಲಿ ನಡೆದಿದೆ. ವಿಟ್ಲದ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ತೆರಳುತ್ತಿದ್ದ ಬಸ್ ಕುಂಟುಕುಡೇಲು ಇಳಿಜಾರಿನ ರಸ್ತೆಯಲ್ಲಿ ತಾಂತ್ರಿಕ ದೋಷದಿಂದ ನೇರವಾಗಿ ಕೆಳಗಡೆ ಚಲಿಸಿದೆ. ಬಳಿಕ ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ಬಸ್ಸಿನಲ್ಲಿ 15ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಬಸ್ ಹಾನಿಗೊಂಡಿದೆ. ವಿದ್ಯುತ್ ಕಂಬ ಸಂಪೂರ್ಣವಾಗಿ ತುಂಡಾಗಿದೆ.

Read More

ಪಡುಬಿದ್ರೆ: ಹೆಬ್ರಿ ತಾಲೂಕಿನ ಮುದ್ರಾಡಿ ಹಾಗೂ ಮುನಿಯಾಲು ಪ್ರದೇಶದಲ್ಲಿ ರಬ್ಬರ್ ಮರಗಳನ್ನು ಕಡಿದು, ನಿಗದಿತ ಹಣ ಪಾವತಿಸದೆ ಮರದ ತುಂಡುಗಳನ್ನು ಲಾರಿಯಲ್ಲಿ ಸಾಗಿಸಿ ಪರಾರಿಯಾಗಲು ಯತ್ನಿಸಿದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರಬ್ಬರ್ ಮರ ತುಂಬಿದ್ದ ಲಾರಿಯನ್ನು ಪಡುಬಿದ್ರೆ ಟೋಲ್‌ಗೇಟ್ ಬಳಿ ಪೊಲೀಸರು ತಡೆದು ನಿಲ್ಲಿಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಮುದ್ರಾಡಿಯ ಸುಜಾತ ಶೆಟ್ಟಿ, ವಿಜೇಂದ್ರ ಶೆಟ್ಟಿ ಅವರ ಮನೆ, ಮುದ್ರಾಡಿಯ ಆಶಾ ಆಚಾರ್ ಅವರ ಮನೆ ಹಾಗೂ ಮುನಿಯಾಲಿನ ಸೀಜು ಎಂಬವರ ಜಾಗದಲ್ಲಿದ್ದ ರಬ್ಬರ್ ಮರಗಳನ್ನು ಶಕೀಮ್ ಮತ್ತು ರಮೇಶ್ ನೇತೃತ್ವದ ತಂಡ ಮುಂಗಡ ಹಣ ನೀಡಿ ಖರೀದಿಸಿತ್ತು ಎನ್ನಲಾಗಿದೆ. ಆದರೆ ಮರ ಕಟಾವು ಮಾಡಿದ ಬಳಿಕ ಬಾಕಿ ಹಣ ಪಾವತಿಸದೆ, ಮರದ ತುಂಡುಗಳನ್ನು ಸಾಗಿಸುವ ಸಂದರ್ಭದಲ್ಲಿ ಹಣ ನೀಡುವುದಾಗಿ ಹೇಳಲಾಗಿತ್ತು ಎಂದು ಆರೋಪಿಸಲಾಗಿದೆ.ಈ ಬಗ್ಗೆ ಮರ ನೀಡಿದವರು ಮೂರು ದಿನಗಳ ಹಿಂದೆಯೇ ಹೆಬ್ರಿ ಹಾಗೂ ಅಜೆಕಾರು ಪೊಲೀಸರಿಗೆ ದೂರು ನೀಡಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ.…

Read More

ಬಂಟ್ವಾಳ: ಆರೋಪಿಯೊಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬಂಟ್ವಾಳ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಹೊರಡಿಸಿದ್ದ ಆದೇಶಕ್ಕೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಧ್ಯಂತರ ತಡೆ ನೀಡಿದ್ದು, ಆರೋಪಿಯನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದೆ. 2025ರ ಸೆಪ್ಟೆಂಬರ್‌ನಲ್ಲಿ ಆಲಡ್ಕ–ಪಾಣೆಮಂಗಳೂರು ರಸ್ತೆಯಲ್ಲಿ ಬಂಟ್ವಾಳ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಘಟನೆ ನಡೆದಿತ್ತು. ಆಲಡ್ಕ ಕಡೆಯಿಂದ ಪಾಣೆಮಂಗಳೂರಿನತ್ತ ಸಮವಸ್ತ್ರ ಧರಿಸದೆ ಆಟೋ ರಿಕ್ಷಾ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕನಿಗೆ ಪೊಲೀಸರು ರಿಕ್ಷಾ ನಿಲ್ಲಿಸುವಂತೆ ಸೂಚಿಸಿದ್ದರು. ಆದರೆ ಚಾಲಕ ನಿಧಾನವಾಗಿ ರಿಕ್ಷಾ ನಿಲ್ಲಿಸುವಂತೆ ಮಾಡಿ, ಬಳಿಕ ಅಪಾಯಕಾರಿ ರೀತಿಯಲ್ಲಿ ಆಟೋವನ್ನು ತಿರುಗಿಸಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಕಾಲು ಹಾಗೂ ಭುಜಕ್ಕೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 103/2025ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 110, 281 ಹಾಗೂ ಮೋಟಾರು ವಾಹನ ಕಾಯ್ದೆಯ ಕಲಂ 184, 177, 179,…

Read More

ಉಡುಪಿಯ ಕಲ್ಪನಾ ಟಾಕೀಸ್ ಸಮೀಪ ಇರುವ ಸೊಸೈಟಿ ಒಂದರ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಸಚಿನ್ ಶೆಟ್ಟಿ (44) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿನ್ ಶೆಟ್ಟಿ ಕಳೆದ ನಾಲ್ಕು ವರ್ಷಗಳಿಂದ ಸಾಯಿರಾಜ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಬೆಳಿಗ್ಗೆ ತಾವು ವಾಸವಿದ್ದ ಅಂಬಲಪಾಡಿ ಸಮೀಪದ ಫ್ಲಾಟಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರ ತನಿಖೆಯ ಬಳಿಕವಷ್ಟೇ ಆತ್ಮಹತ್ಯೆಗೆ ಕಾರಣ ತಿಳಿದುಬರಲಿದೆ.

Read More

ಕನ್ನಡ ಕಿರುತೆರೆ ವೀಕ್ಷಕರಿಗೆ ಸ್ಟಾರ್ ಸುವರ್ಣ ವಾಹಿನಿಯು ವಿನೂತನ ಕಥಾಹಂದರವುಳ್ಳ ಧಾರಾವಾಹಿಗಳನ್ನು ನೀಡುತ್ತಾ ಬರುತ್ತಿದೆ. ಇತ್ತೀಚೆಗಷ್ಟೇ ಶುರುವಾದ ‘ಜೈಲಲಿತಾ’ ಹಾಗೂ ‘ಮರ್ಯಾದೆ ರಾಮಣ್ಣ’ ಧಾರಾವಾಹಿಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಇದೀಗ “ಆನಂದ ನಿಲಯ” ಎಂಬ ಹೊಸ ಕಥೆಯನ್ನು ಪ್ರಸಾರ ಮಾಡಲು ಸಜ್ಜಾಗಿದೆ. .ಇದೊಂದು ಸುಂದರ ಕೂಡು ಕುಟುಂಬದ ಕಥೆ. ತಂದೆಯ ಹಿಟ್ಟಿನ ಗಿರಣಿಯನ್ನು ಒಟ್ಟಾಗಿ ನಿರ್ವಹಿಸೋ ನಾಲ್ಕು ಜನ ಸಹೋದರರು ಧರ್ಮ, ಅರ್ಜುನ್, ಭುವನ್ ಮತ್ತು ನಕುಲ್. ತಮ್ಮಂದಿರ ಪಾಲಿಗೆ ತಂದೆಯಾಗಿ, ಗೆಳೆಯನಾಗಿ, ಅಣ್ಣನಾಗಿ ಅವರ ಬೆನ್ನೆಲುಬಾಗಿ ನಿಂತು, ಅವರೇ ತನ್ನ ಸರ್ವಸ್ವವೆಂದು ಬಾಳುತ್ತಿರುವ ಮನೆಯ ಹಿರಿಮಗ ಧರ್ಮ. ಇನ್ನು ಈ ‘ಆನಂದ ನಿಲಯʼಕ್ಕೆ ಮಹಾಲಕ್ಷ್ಮೀಯಂತಿರೋ ಧರ್ಮನ ಪತ್ನಿ ಸುಧಾ. ಮೈದುನರನ್ನು ಮಕ್ಕಳಂತೆ ಸಾಕಿ ಸಲಹುತ್ತಿರೋ ಈಕೆ, ಧರ್ಮನ ಸಹೋದರರಿಗೆ ಅಮ್ಮನಂತಿರೋ ಅತ್ತಿಗೆ..ಒಗ್ಗಟ್ಟಿನ ಸಾರವನ್ನು ಸಾರುವ ಈ ಕುಟುಂಬದಲ್ಲಿ ಸಂಬಂಧಗಳ ತಕ್ಕಡಿಯನ್ನು ಸಮಾನವಾಗಿ ತೂಗುತ್ತಿರುವ ಸುಧಾ, ಮುಂಬರುವ ಸವಾಲುಗಳನ್ನು ಹೇಗೆ ಎದುರಿಸುತ್ತಾಳೆ? ತಮ್ಮ ವೈವಾಹಿಕ ಜೀವನಕ್ಕಿಂತಲೂ ಮೂವರು ಸಹೋದರರ ಸಂತೋಷಕ್ಕೇ ಹೆಚ್ಚಿನ…

Read More

ಉಡುಪಿ:ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮತ್ತು ಗುತ್ತಿಗೆದಾರ ಡೇವಿಡ್ ಡಿಸೋಜಾ ಅವರ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಇಲ್ಲಿನ ನ್ಯಾಯಾಲಯವು 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಬಂಧಿತ ಆರೋಪಿಗಳಾದ ಉತ್ತರಾಖಂಡದ ಅಜಯ್ ಅಲಿಯಾಸ್ ಅನ್ಮೋಲ್ ರಸ್ತೋಗಿ ಮತ್ತು ಬಿಹಾರದ ಜಿಯಾವುಲ್ಲಾ ಅಲಿಯಾಸ್ ದೀಪಕ್ ಅವರನ್ನು ಈ ಹಿಂದೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು, ಅವರನ್ನು ಪ್ರಕರಣದ ತನಿಖಾಧಿಕಾರಿ ಕಾಪು ಪೊಲೀಸ್ ಇನ್ಸ್‌ಪೆಕ್ಟರ್ ಅಜ್ಮತ್ ಅಲಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹೆಚ್ಚಿನ ವಿಚಾರಣೆ ಮತ್ತು ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಪೊಲೀಸರು ನ್ಯಾಯಾಧೀಶ ಪುರುಷೋತ್ತಮ್ ಅವರನ್ನು ಕೋರಿದ್ದರು. ಮನವಿಗೆ ಸಮ್ಮತಿಸಿದ ನ್ಯಾಯಾಧೀಶರು ಇಬ್ಬರನ್ನೂ 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.

Read More

ರಾಜ್ಯದ ಹೋಟೆಲ್‌ಗಳಲ್ಲಿ ಸ್ವಚ್ಛತೆ ಮತ್ತು ಆಹಾರದ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮಹತ್ವದ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ. ಹೋಟೆಲ್‌ಗಳ ಅಡುಗೆ ಮನೆಯಲ್ಲಿ ಆಹಾರ ತಯಾರಿಸುವ ವಿಧಾನ ಮತ್ತು ಅಲ್ಲಿನ ನೈರ್ಮಲ್ಯವನ್ನು ಗ್ರಾಹಕರೇ ನೇರವಾಗಿ ವೀಕ್ಷಿಸುವಂತೆ ಕ್ಯಾಮೆರಾ ಅಳವಡಿಸುವ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ರಾಹಕರಿಗೆ ಪೂರೈಸಲಾಗುವ ಆಹಾರ ಹೇಗೆ ಸಿದ್ಧವಾಗುತ್ತಿದೆ ಮತ್ತು ಅಲ್ಲಿ ನೈರ್ಮಲ್ಯ ಪಾಲನೆಯಾಗುತ್ತಿದೆಯೇ ಎಂಬ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ಸಿಗುವಂತಿರಬೇಕು. ಹೋಟೆಲ್‌ಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಸಿಗುವಂತೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ಕುರಿತು ಶೀಘ್ರದಲ್ಲೇ ಹೊಸ ಕಾನೂನು ಮತ್ತು ಮಾರ್ಗಸೂಚಿಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯಲ್ಲಿ ಲೋಪ ಎಸಗುವ ಹೋಟೆಲ್‌ಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ. ಈಗಾಗಲೇ ರಾಜಧಾನಿಯ ಹಲವು ದೊಡ್ಡ ಹೋಟೆಲ್‌ಗಳ ಮೇಲೆ ಆರೋಗ್ಯ…

Read More

ಮಂಗಳೂರು: ತೊಕ್ಕೊಟ್ಟು ವಿನಮ್ರ ಬಾರ್‌ಗೆ ತಲವಾರು ಬೀಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಾರ್ ಬಂದ್ ಮಾಡುವಂತೆ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಕುಖ್ಯಾತ ರೌಡಿಶೀಟರ್ ಸೇರಿದಂತೆ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಉಳ್ಳಾಲದ ಮಾರ್ಗತಲೆ ನಿವಾಸಿ ಮೊಹಮ್ಮದ್ ಶಾಕಿರ್ (31) ಮತ್ತು ಉಳ್ಳಾಲದ ಮಂಚಿಲ ನಿವಾಸಿ ಅಶ್ಫಾಕ್ (28) ಎಂದು ಗುರುತಿಸಲಾಗಿದೆ. ಶಾಕಿರ್ ಕುಖ್ಯಾತ ರೌಡಿಶೀಟರ್ ಆಗಿದ್ದು ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ. ಅಶ್ಫಾಕ್ ಆಟೋರಿಕ್ಷಾ ಚಾಲಕನಾಗಿದ್ದ.ಭಾನುವಾರ ರಾತ್ರಿ 12:00 ರಿಂದ 12:20 ರ ನಡುವೆ ಈ ಘಟನೆ ನಡೆದಿದೆ. ಶಾಕಿರ್ ತಲವಾರು ಹಿಡಿದುಕೊಂಡು ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾನೆ. ಆರೋಪಿ ಅಶ್ಫಾಕ್ ರಿಕ್ಷಾದಲ್ಲಿ ಬಂದಿದ್ದ ಶಾಕಿರ್ ಬಾರ್‌ಗೆ ಬಂದು, ಮಾರಕಾಸ್ತ್ರವನ್ನು ಬೀಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಾರ್ ಅನ್ನು ಬಂದ್ ಮಾಡುವಂತೆ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಘಟನೆಯ ದೃಶ್ಯಾವಳಿಗಳು ಬಾರ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತಲವಾರು ಹಿಡಿದು ವ್ಯಕ್ತಿ ದಾಂಧಲೆ ನಡೆಸುತ್ತಿದ್ದ ವೇಳೆ…

Read More

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ರೌಡಿಗಳ ನಡುವಿನ ಗಲಾಟೆ ಬಿಡಿಸಲು ತೆರಳಿದ್ದ ಕರ್ತವ್ಯನಿರತ ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ತಡರಾತ್ರಿ ಸಂಭವಿಸಿದೆ. ರೌಡಿಶೀಟರ್ ಹಾಗೂ ಆತನ ಗ್ಯಾಂಗ್‌ ನಡೆಸಿದ ಚಾಕು ಇರಿತದಿಂದ ಇಬ್ಬರು ಪೊಲೀಸ್ ಸಿಬ್ಬಂದಿ ಮತ್ತು ಒಬ್ಬ ಸ್ಥಳೀಯ ಯುವಕ ತೀವ್ರವಾಗಿ ಗಾಯಗೊಂಡಿದ್ದು, ಈ ಘಟನೆ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಮುರುಡೇಶ್ವರದ ಸ್ಥಳೀಯ ರೌಡಿಶೀಟರ್ ರಾಜು ಹಾಗೂ ಆತನ ಸಹಚರರು ಮನೋಜ್ ಎಂಬ ಯುವಕನೊಂದಿಗೆ ತಡರಾತ್ರಿ ಸಣ್ಣ ವಿಚಾರಕ್ಕೆ ತಂಟೆ ತೆಗೆದು ತೀವ್ರ ಜಗಳ ನಿರತರಾಗಿದ್ದರು. ಇವರ ಗಲಾಟೆಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಮುರುಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಲುಪಿದೊಡನೆಯೇ ಸ್ಥಳಕ್ಕೆ ಧಾವಿಸಿದ ಹವಾಲ್ದಾರ್ ಸಂಗಪ್ಪ ಹಾಗೂ ಕಾನ್ಸ್‌ಟೇಬಲ್ ವಿನಾಯಕ್ ಶೆಟ್ಟಿ ಅವರು ಜಗಳವನ್ನು ಶಾಂತಗೊಳಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರ ಮಧ್ಯಪ್ರವೇಶದಿಂದ ಆಕ್ರೋಶಗೊಂಡ ರೌಡಿಶೀಟರ್ ರಾಜು ಮತ್ತು ಆತನ…

Read More

ಭಾರತದಲ್ಲಿ ಗಲಭೆ ಎಬ್ಬಿಸಲು ವಿದೇಶಿ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ರಾಯಚೂರಿನ ಯುವಕನನ್ನು ಸದರ್‌ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೊಹಮ್ಮದ್ ಶಾಹಿಲ್ (24) ಎಂದು ಗುರುತಿಸಲಾಗಿದ್ದು, ಈತ ರಾಯಚೂರಿನಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದ ಎನ್ನಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ‘ರಾಣಾ ಭಾಯ್’ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಶಾಹಿಲ್ ವಿದೇಶಿ ವ್ಯಕ್ತಿಯೊಬ್ಬನೊಂದಿಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಆ ಖಾತೆಯಲ್ಲಿನ ಕೆಲವು ಪೋಸ್ಟ್‌ಗಳನ್ನು ಲೈಕ್ ಮಾಡುವುದರ ಜೊತೆಗೆ ಕಮೆಂಟ್ ಹಾಗೂ ಶೇರ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ವೇಳೆ, ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌ಗಳಿಂದ ಪ್ರಭಾವಿತನಾಗಿದ್ದ ಶಾಹಿಲ್, ರಾಣಾ ಭಾಯ್‌ಗೆ ಸಂದೇಶ ಕಳುಹಿಸಿ ಪಿಸ್ತೂಲ್‌ಗಾಗಿ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ವಿದೇಶಿ ವ್ಯಕ್ತಿ ಶಾಹಿಲ್‌ನ ವಾಟ್ಸ್‌ಆ್ಯಪ್ ಸಂಖ್ಯೆಯನ್ನು ಪಡೆದುಕೊಂಡಿದ್ದ ಎನ್ನಲಾಗಿದ್ದು, ಜುಲೈ 14ರಿಂದ ಇಬ್ಬರ ನಡುವೆ ಹಲವು ವಿಚಾರಗಳ ಕುರಿತು ಸಂಭಾಷಣೆ ನಡೆದಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಗಲಭೆ ಎಬ್ಬಿಸುವಂತೆ ಶಾಹಿಲ್‌ಗೆ ಪ್ರಚೋದನೆ ನೀಡಲಾಗಿದ್ದು, ಇದಕ್ಕಾಗಿ ಹಣ ಹಾಗೂ ಪಿಸ್ತೂಲ್…

Read More