ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಭೀಕರ ಕಾರು ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಆಂಧ್ರ ಪ್ರದೇಶದ ಅನಂತಪುರ ಕದ್ರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಈ ಬಗ್ಗೆ ಖುದ್ದು ಭಾಸ್ಕರ್ ರಾವ್ ಅವರೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಘಟನೆ ವಿವರಿಸಿದ್ದಾರೆ. ಅಷ್ಟೇ ಅಲ್ಲದೇ ನಮಗೆ ಸರ್ವಿಸ್ ರಸ್ತೆಗಳು ಮತ್ತು ಅತ್ಯುತ್ತಮ ಟ್ರಾಮಾ ಕೇರ್ ಕೇಂದ್ರಗಳ ಅಗತ್ಯವಿದೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಮನವಿ ಮಾಡಿದ್ದಾರೆ. ಎಪ್ರಿಲ್ 23 ರಂದು ಟಯೋಟಾ ಇನ್ನೋವಾ ಹೈಬ್ರಿಡ್ ಹೈಕ್ರಾಸ್‌ನಲ್ಲಿ ಅನಂತಪುರ ಮತ್ತು ಕದ್ರಿ (ಆಂಧ್ರಪ್ರದೇಶ) ನಡುವೆ ಚಾಲನೆ ಮಾಡುವಾಗ ರಸ್ತೆ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಯಾವುದೇ ಎಚ್ಚರಿಕೆ ಫಲಕಗಳಿಲ್ಲದ ಕಾರಣ ಟಿಪ್ಪರಿಗೆ ಮುಖಾಮುಖಿ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ. ನಮ್ಮ ಕಾರು ಮೂರು ಬಾರಿ ಪಲ್ಟಿಯಾಗಿದ್ದು ನಾವೆಲ್ಲರೂ ಅಪಾಯದಿಂದ ಪಾರಾಗಿದ್ದೇವೆ. ವೆಂಕಿ ತೀವ್ರವಾಗಿ ಗಾಯಗೊಂಡಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.…
Author: main-admin
ಬೇಸಿಗೆಯ ಬಿಸಿ ಹೆಚ್ಚಾಗುತ್ತಿದ್ದಂತೆ ಮೊಟ್ಟೆಯ ಬೆಲೆಯಲ್ಲಿ ಇಳಿಕೆಯಾಗಿದೆ. 6.50ರ ಆಸುಪಾಸಿನಲ್ಲಿದ್ದ ಮೊಟ್ಟೆಯ ಬೆಲೆ ಮಂಗಳೂರು ಮತ್ತು ಉಡುಪಿಯಲ್ಲಿ 5.50 ರೂ.ಗೆ ಇಳಿದಿದೆ. ಹೆಚ್ಚು ದಾಸ್ತಾನು ಇರುವ ಅಂಗಡಿಗಳು 10 ಮೊಟ್ಟೆಗಳನ್ನು 52 ರೂ.ಗೆ ಮಾರಾಟ ಮಾಡುತ್ತಿವೆ. ಮೊಟ್ಟೆಯ ಸಗಟು ದರ 4.80 ರಿಂದ 4.90 ರೂ.ಗೆ ತಲುಪಿದೆ. ಕೆಲ ದಿನಗಳ ಹಿಂದೆ 5.20 ರೂ.ಗೆ ತಲುಪಿದ್ದರೂ ಈಗ ಮತ್ತೆ ಬೆಲೆ ಕುಸಿದಿದೆ.ಬೇಸಿಗೆಯ ತೀವ್ರತೆಯಿಂದಾಗಿ ಮೊಟ್ಟೆಯನ್ನು ಹೆಚ್ಚು ದಿನ ದಾಸ್ತಾನು ಇಡಲು ಸಾಧ್ಯವಾಗದ ಕಾರಣ ಬೆಲೆ ಇಳಿಕೆಯಾಗಿದೆ ಎನ್ನಲಾಗಿದೆ. ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆ ಸೇವಿಸುತ್ತಿದ್ದ ಅಂಗನವಾಡಿ ಆಟದ ಶಾಲೆಗಳು ಬೇಸಿಗೆ ರಜೆಗೆ ಬಂದ್ ಆಗಿವೆ. ಇದಲ್ಲದೆ, ಬೇಸಿಗೆಯಲ್ಲಿ ಮೊಟ್ಟೆಗಳು ಶಾಖವನ್ನು ಉಂಟುಮಾಡುತ್ತವೆ ಎಂಬ ಭಾವನೆ ಸಾರ್ವಜನಿಕರಲ್ಲಿದೆ, ಆದ್ದರಿಂದ ಮೊಟ್ಟೆಗಳನ್ನು ತಿನ್ನುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ.ಬೇಸಿಗೆಯ ಮಳೆಗೆ ಭೂಮಿ ತಂಪೆರೆದರೆ ಮತ್ತೆ ದರ ಏರಿಕೆಯಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.
ಕಾಸರಗೋಡು:ಮಂಜೇಶ್ವರದ ಚಿಗುರುಪಾದೆ ಎಂಬಲ್ಲಿ ಜನನಿಬಿಡ ಪ್ರದೇಶದಲ್ಲಿ ವಿಮಾನದ ಆಕಾರದ ಡ್ರೋನ್ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಘಟನಾ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಡ್ರೋನ್ ಗೇಲ್ ಕಂಪನಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಗ್ಯಾಸ್ ಪೈಪ್‌ಲೈನ್‌ನ ಸಮೀಕ್ಷೆ ನಡೆಸುತ್ತಿದ್ದಾಗ ಡ್ರೋನ್ ಜಿಪಿಎಸ್ ಸಂಪರ್ಕವನ್ನು ಕಳೆದುಕೊಂಡಿತು ಮತ್ತು ನಂತರ ನೆಲಕ್ಕೆ ಅಪ್ಪಳಿಸಿತು. GAIL ಇಲಾಖೆಯ ಸಿಬ್ಬಂದಿ ಡ್ರೋನ್ ಅನ್ನು ಹಿಂಪಡೆದಿದ್ದಾರೆ.ಡ್ರೋನ್ ಬಿದ್ದ ದೃಶ್ಯವನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಮಂಗಳೂರು : ಇತ್ತೀಚೆಗೆ ಅಡ್ಯಾರ್ ನಲ್ಲಿರುವ ಬೊಂಡಾ ಪ್ಯಾಕ್ಟರಿಯಲ್ಲಿ ಎಳ ನೀರು ಸೇವಿಸಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಯೋಗಾಲಯ ಪರೀಕ್ಷಾ ವರದಿ ಆರೋಗ್ಯ ಇಲಾಖೆಯ ಕೈ ಸೇರಿದ್ದು, ಸಹಜವಾಗಿತ್ತು ಎಳನೀರು ಎಂದು ವರದಿಯಲ್ಲಿ ತಿಳಿಸಲಾಗಿದೆ. ನಗರದ ಹೊರವಲಯದ ಅಡ್ಯಾರಿನ ಬೊಂಡ ಫ್ಯಾಕ್ಟರಿಯಲ್ಲಿ ಎಪ್ರಿಲ್ 9ರಂದು ಖರೀದಿಸಿದ ಎಳನೀರು ಕುಡಿದವರಲ್ಲಿ 138 ಜನರು ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡಿದ್ದರು. ಈ ಪ್ರಕರಣ ಗಮನಕ್ಕೆ ಬಂದ ಬೆನ್ನಲ್ಲೇ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಹಾಗೂ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಫ್ಯಾಕ್ಟರಿಯನ್ನು ಬಂದ್ ಮಾಡಿಸಿ ಎಳನೀರು ಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಘಟನೆ ನಡೆದ ಎರಡು ದಿನಗಳ ನಂತರ ಇದು ಗಮನಕ್ಕೆ ಬಂದಿದ್ದು, ಆ ದಿನ ಫ್ಯಾಕ್ಟರಿಯಲ್ಲಿ ಸಂಗ್ರಹಿಸಿದ್ದ ಎಳನೀರನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪ್ರಯೋಗಾಲಯ ಪರೀಕ್ಷೆಯ ವರದಿ ಎಪ್ರಿಲ್ 22ರಂದು ಆರೋಗ್ಯ ಇಲಾಖೆಯ ಕೈ ಸೇರಿದೆ. ಅಸ್ವಸ್ಥಗೊಂಡವರ ಮಲ ಮತ್ತು ರಕ್ತದ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿ ಪ್ರಕಾರ…
ಉಡುಪಿ: ನಾಲ್ಕು ದಶಕಗಳ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ ಅಪರೂಪದ ಕಲಾವಿದರೊಬ್ಬರು, ಯಕ್ಷಗಾನ ಪ್ರಸಂಗದಲ್ಲಿ ತನ್ನ ಕೊನೆಯ ಪಾತ್ರ ನಿರ್ವಹಣೆ ಮುಗಿಸಿ ಕೊನೆಯುಸಿರೆಳೆದ ಅಪರೂಪದ ವಿದ್ಯಮಾನ ಉಡುಪಿಯಲ್ಲಿ ಸಂಭವಿಸಿದೆ. ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ 42 ವರ್ಷ ತಿರುಗಾಟ ನಿರ್ವಹಿಸಿದ ಹಿರಿಯ ಸವ್ಯಸಾಚಿ ಕಲಾವಿದ ಗಂಗಾಧರ ಪುತ್ತೂರು (64 ವರ್ಷ) ನಿಧನರಾದವರು. ನಿನ್ನೆ (ಮೇ 1) ಕೋಟ ಗಾಂಧಿ ಮೈದಾನದಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಕುಕ್ಕಿತ್ತಾಯನ ವೇಷ ನಿರ್ವಹಿಸಿ, ಚೌಕಿಗೆ ಮರಳಿ ಕಿರೀಟ ಆಭರಣಗಳನ್ನು ತೆಗೆದಿಟ್ಟು ಮುಖದ ಬಣ್ಣ ತೆಗೆಯುತ್ತಿದ್ದ ಹಾಗೆ ರಾತ್ರಿ ಸುಮಾರು 12.25ಕ್ಕೆ ಚೌಕಿಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರು ಯಾವುದೇ ಪಾತ್ರ ನೀಡಿದರೂ ಸಮರ್ಥವಾಗಿ ನಿರ್ವಹಿಸುತ್ತಿದ್ದ ಹಿರಿಯ ಸವ್ಯಸಾಚಿ ಕಲಾವಿದರಾಗಿದ್ದರು. ಚೌಕಿಯಿಂದಲೇ ನಿರ್ಗಮಿಸಿದ ಹಿರಿಯ ಪುಣ್ಯಾತ್ಮರ ಸಾಲಿಗೆ ಗಂಗಾಧರರೂ ಸೇರಿದಂತಾಗಿದೆ. ಪ್ರಸಂಗದ ಕೊನೆಯ ದೃಶ್ಯದ ಮೊದಲಿನ ಭಾಗದಲ್ಲಿ ಇವರ ಪಾತ್ರ ನಿರ್ವಹಣೆ ಇತ್ತು. ನಿರ್ವಹಣೆ ಮುಗಿಸಿ ವೇಷ ಕಳಚುತಿದ್ದಂತೆ ಹೃದಯಾಘಾತ ಸಂಭವಿಸಿರುವುದು ಅಚ್ಚರಿಯನಿಸಿದೆ.
ಮಂಗಳೂರು: ಸಿಸಿಬಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ನಿಷೇಧಿತ ಮಾದಕ ದ್ರವ್ಯ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ 16,13,800 ರೂ. ಮೌಲ್ಯದ ಸೊತ್ತು ವಶಕ್ಕೆ ತೆಗೆದುಕೊಂಡಿದ್ದಾರೆ. ಉಳ್ಳಾಲ ಪೋಸ್ಟ್ ಆಫೀಸ್ ಮುಂಭಾಗ, ಬಸ್ತಿಪಡ್ಪು ನಿವಾಸಿ ಮೊಹಮ್ಮದ್ ಇಶಾನ್(35), ಉಳ್ಳಾಲ, ಟಿ.ಸಿ. ರೋಡ್, ಅಕ್ಕರೆಕೆರೆ ನಿವಾಸಿ ಜಾಫರ್ ಸಾದಿಕ್(35) ಬಂಧಿತ ಆರೋಪಿಗಳು. ನಗರದ ಕೋಟೆಕಾರ್ ಬೀರಿ ಬಳಿಯ ಮನೆಯೊಂದರಲ್ಲಿ ಇಬ್ಬರು ಬೃಹತ್ ಪ್ರಮಾಣದ ಎಂಡಿಎಂಎ ಮಾದಕದ್ರವ್ಯವನ್ನು ಅಕ್ರಮವಾಗಿ ದಾಸ್ತಾನಿರಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂಬ ಬಂದ ಖಚಿತ ಮಾಹಿತಿ ಲಭ್ಯವಾಗಿತ್ತು. ಆದ್ದರಿಂದ ಮೇ 1ರಂದು ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳು ಬೆಂಗಳೂರಿನಿಂದ ಮಾದಕ ವಸ್ತುವನ್ನು ಖರೀದಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಗಳಿಂದ 9,00,000 ರೂ ಮೌಲ್ಯದ 407 ಗ್ರಾಂ ನಿಷೇಧಿತ ಎಂಡಿಎಂಎ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಳ್ಳಲಾಗಿದೆ.…
ಉಪ್ಪಿನಂಗಡಿ: ಕೌಕ್ರಾಡಿ ಗ್ರಾಮದ ಕಟ್ಟೆ ಮಜಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಸೋನು ಸೋಂಕರ್ ಅವರ ಪತ್ನಿ ರೀಮಾ ಸೋಂಕರ್ (26) ಮತ್ತು ಮಗು ರಿಯಾ (1) ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂಟೀರಿಯರ್ ಡೆಕೊರೇಟರ್ ಆಗಿರುವ ಸೋನು ಸೋಂಕರ್ ಉತ್ತರ ಪ್ರದೇಶದ ಅಜಾಮ್ ಘರ್ ಜಿಲ್ಲೆಯ ಅಮಹಾಮಾಫಿ ಗ್ರಾಮದ ನಿವಾಸಿಯಾಗಿದ್ದು, ಕೌಕ್ರಾಡಿಯಲ್ಲಿ ಕೃಷ್ಣಪ್ಪ ಅವರ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಎ. 22ರಂದು ಬೆಳಗ್ಗೆ ಕೆಲಸಕ್ಕೆಂದು ಹೋಗಿದ್ದು ಸಂಜೆ ಮರಳಿ ಬಂದಾಗ ಮನೆಯ ಬಾಗಿಲಿಗೆ ಬೀಗ ಹಾಕಿ ಪತ್ನಿ, ಮಗು ನಾಪತ್ತೆಯಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಂಗಳೂರು : ಮದುವೆ ಸಮಾರಂಭವೊಂದರಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮಧ್ಯವಯಸ್ಸಿನ ಇಬ್ಬರನ್ನು ಉಳ್ಳಾಲ ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕುಂಪಲ ಕುಜುಮ ಗದ್ದೆ ನಿವಾಸಿ ರತ್ನಾಕರ್ ಮತ್ತು ಕಾಪಿಕಾಡ್ ನಿವಾಸಿ ಗಂಗಾಧರ್ ಎಂದು ಗುರುತಿಸಲಾಗಿದೆ. ಕೊಲ್ಯದ ದೇವಸ್ಥಾನ ಒಂದರ ಕಲ್ಯಾಣ ಮಂಟಪದಲ್ಲಿ ಕುಟುಂಬಸ್ಥರ ಮದುವೆಗೆಂದು ಬಂಟ್ವಾಳ ಮೂಲದ ಅಪ್ರಾಪ್ತ ವಯಸ್ಸಿನ ಬಾಲಕಿ ಬಂದಿದ್ದು, ಆಕೆ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಆರೋಪಿಗಳಿಬ್ಬರು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ.ಸಂತ್ರಸ್ತೆ ಉಳ್ಳಾಲ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಾಸರಗೋಡು : ಕೇರಳದ ಕಾಸರಗೋಡಿನ ಜನ ನಿಭಿಡ ಪ್ರದೇಶದಲ್ಲಿ ಅಪರಿಚಿತ ದ್ರೋಣ್ ಪತ್ತೆಯಾಗಿದೆ. ಜಿಲ್ಲೆಯ ಚಿಗುರುಪಾದೆ ಎಂಬಲ್ಲಿ ಈ ವಿಮಾನ ಆಕಾರದ ದ್ರೋಣ್ ಪತ್ತೆಯಾಗಿದ್ದು ಸ್ಥಳಕ್ಕೆ ಮಂಜೇಶ್ವರ ಪೋಲೀಸರ ಧಾವಿಸಿದ್ದಾರೆ.ಈ ಅಪರಿಚಿತ ದ್ರೋಣ್ ನಿಂದ ಸ್ಥಳೀಯ ಜನ ಆತಂಕಿತರಾಗಿದ್ದು ಪುಟ್ಟ ವಿಮಾನ ಆಕಾರದ ಈ ದ್ರೋಣ್ ವೀಕ್ಷಣೆಗೆ ಸುತ್ತ ಮುತ್ತಲ ಜನ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.ದ್ರೋಣ್ ಮಾಹಿತಿ ಪಡೆದ ಪೊಲೀಸರು ಅದರ ವಾರಿಸುದಾರ ಮಾಹಿತಿ ಕಲೆ ಹಾಕಿದ್ದು ಕೊನೆಗೂ ಅದು ಗೇಲ್ ಕಂಪೆನಿಗೆ ಸೇರಿದ್ದಾಗಿ ವಿಚಾರಣೆಯಿಂದ ಗೊತ್ತಾಗಿದ್ದು ಗ್ಯಾಸ್ ಪೈಪ್ ಲೈನ್ ಸಂಬಂಧಿಸಿದಂತೆ ಸರ್ವೆ ನಡೆಸುತ್ತಿದ್ದಾಗ ಏಕಾಏಕಿ ಜಿಪಿಎಸ್ ಸಂಪರ್ಕ ಕಡಿದುಕೊಂಡು ಜನನಿಭಿಡ ಪ್ರದೇಶದಲ್ಲಿ ಹೋಗಿ ದ್ರೋಣ್ ಬಿದ್ದಿತ್ತು ಎನ್ನಲಾಗಿದೆ. ತೀವ್ರ ವಿಚಾರಣೆ ಬಳಿಕ ಗೇಲ್ ಕಂಪನಿ ಸಿಬ್ಬಂದಿ ದ್ರೋಣ್ ನ್ನು ವಶಕ್ಕೆ ಪಡೆದು ಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಬಂಟ್ವಾಳ: ನೇತ್ರಾವತಿ ನದಿಯ ನಿರ್ಮಾಣ ಹಂತದ ಡ್ಯಾಂ ಬಳಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಹಿಟಾಚಿ, ಟಿಪ್ಪರ್ ಹಾಗೂ ಇತರ ಸಾಮಾಗ್ರಿಗಳ ಸಹಿತ ಮರಳನ್ನು ವಶಕ್ಕೆ ಪಡೆದುಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಘಟನೆ ಬಿ ಕಸಬಾ ಗ್ರಾಮದ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ. ಆರೋಪಿಗಳನ್ನು ಅಬ್ದುಲ್ ಮುತಾಲಿಬ್ @ ನಾವೂರು ಪುತ್ತಾ ಹಾಗೂ ಇತರರು ಎಂದು ಪೊಲೀಸರು ತಿಳಿಸಿದ್ದಾರೆ, ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಜಕ್ರಿಬೆಟ್ಟು ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ನಿರ್ಮಾಣ ಹಂತದಲ್ಲಿರುವ ಡ್ಯಾಮ್ ನ ಬಳಿ, ನದಿಯಿಂದ ಕಳ್ಳತನದಿಂದ ಮರಳು ತೆಗೆದು ಅಕ್ರಮವಾಗಿ ಸಾಗಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ರಾಮ ಕೃಷ್ಣ ಪಿ ಎಸ್ ಐ (ಕಾ&ಸು) ಬಂಟ್ವಾಳ ನಗರ ಠಾಣೆರವರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿದಾಗ, ನದಿಯ ದಡದಲ್ಲಿ ಮರಳನ್ನು ರಾಶಿ ಹಾಕಿರುವುದು ಮತ್ತು 1 ಟಿಪ್ಪರ್ ಲಾರಿ, 1 ಹಿಟಾಚಿ ವಾಹನವನ್ನು…