ಬಂಟ್ವಾಳ: ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟುವ ಸಲುವಾಗಿ ದ.ಕ ಜಿಲ್ಲೆಯ 30 ಕಡೆಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೋಲಾರ್ ವಿದ್ಯುತ್ ಆಧಾರಿತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದೆ. ಇಲಾಖೆಯು ಅತಿ ಹೆಚ್ಚು ಅಕ್ರಮ ಮರಳುಗಾರಿಕೆ ಕುರಿತು ದೂರು ಬರುತ್ತಿದ್ದ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದೆ. ಈ ಮೂಲಕ ಅಕ್ರಮ ಮರಳುಗಾರಿಕೆ ಮೇಲೆ ಕಣ್ಣಿಡಲು ಇಲಾಖೆ ನಿರ್ಧರಿಸಿದೆ.ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ 4 ಕಡೆ ಮತ್ತು ಮಂಗಳೂರು ಕಮಿಷನರೆಟ್ ವ್ಯಾಪ್ತಿಯ 26 ಕಡೆಗಳಲ್ಲಿ ಇಲಾಖೆ ಸಿಸಿ ಕ್ಯಾಮೆರಾವನ್ನು ಅಳವಡಿಸಿದೆ. ಕ್ಯಾಮೆರಾಗಳ ದೃಶ್ಯದ ಮೇಲೆ ಇಲಾಖೆ ನಿರಂತರವಾಗಿ ನಿಗಾ ವಹಿಸಲಿದೆ. ಅಕ್ರಮ ಸಾಗಾಟಕ್ಕೆ ಸಂಬಂಧಿಸಿ ಲಾರಿಯ ನಂಬರ್ ಆಧಾರದಲ್ಲಿ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.
Author: main-admin
ಮಂಗಳೂರು : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಜಿಲ್ಲೆಯಲ್ಲಿ 23 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದೆ. ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ 23 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿರುವ ಜಿಲ್ಲಾಡಳಿತ ಜಿಲ್ಲೆಯಲ್ಲಿನ ಹಣ ಸಾಗಾಟದ ಮೇಲೆ ತೀವ್ರ ನಿಗಾ ವಹಿಸಿದೆ. ಇನ್ನು ಕೇರಳದ ಕಾಸರಗೋಡಿನಲ್ಲೂ ಏ. 26 ರಂದೇ ಚುನಾವಣೆ ನಡೆಯುತ್ತಿದೆ. ಹೀಗಾಗಿ ಗಡಿಯಲ್ಲಿ ಎರಡೂ ರಾಜ್ಯಗಳ ಪೊಲೀಸರು ಮತ್ತು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.ಇನ್ನು ಜಿಲ್ಲೆಯಲ್ಲಿನ 23 ಚೆಕ್ ಪೋಸ್ಟ್ ಗಳಲ್ಲಿ ಅಂತರ್ ರಾಜ್ಯ 9, ಅಂತರ್ ರಾಜ್ಯ 7 ಹಾಗೂ ಸ್ಥಳೀಯ 7 ಚೆಕ್ ಪೋಸ್ಟ್ ಗಳಿವೆ.
ಉಳ್ಳಾಲ: ಗುಜರಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಗೆ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳ್ಳಾಲ ಠಾಣಾ ವ್ಯಾಪ್ತಿಯ ಮಹಾತ್ಮ ಗಾಂಧಿ ರಂಗ ಮಂದಿರ ಬಳಿ ಈ ಘಟನೆ ನಡೆದಿದ್ದು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಕ್ಕೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಲಾಗಿದೆ ಎನ್ನಲಾಗಿದೆ.ಮೂಲತಃ ತಣ್ಣೀರು ಬಾವಿ ನಿವಾಸಿ ಇದೀಗ ಉಳ್ಳಾಲದಲ್ಲಿರುವ ಮೊಹಮ್ಮದ್ ಜಾವೇದ್ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಪಂಜಿಮೊಗೊರು ನಿವಾಸಿ ಗುಜರಿ ವ್ಯಾಪಾರಿ ಹಮೀದ್ ಎಂಬಾತನನ್ನು ಮನೆಗೆ ಕರೆದುಕೊಂಡು ಕೊಲೆ ಯತ್ನ ನಡೆಸಿದ್ದು, ಇದರಿಂದ ಗಂಭೀರ ಗಾಯಗೊಂಡ ಹಮೀದ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪಿ ಜಾವೇದ್ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಹಮೀದ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ
ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಂಟ್ವಾಳದ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ಪವನ್ (17) ಮೃತಪಟ್ಟ ಬಾಲಕ.ಮನೆಯಿಂದ ಬಿಸಿರೋಡು ಕಡೆಗೆ ಸ್ಕೂಟರ್ ನಲ್ಲಿ ಸಹಸವಾರನಾಗಿ ಸಂಚಾರ ಮಾಡುತ್ತಿದ್ದ ವೇಳೆ ನರಿಕೊಂಬು ದಿಂಡಿಗೆ ಎಂಬಲ್ಲಿ ಸ್ಕೂಟರ್ ಗೆ ರಿಕ್ಷಾ ಢಿಕ್ಕಿಯಾಗಿದೆ. ಪರಿಣಾಮ ಪವನ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಘಟನೆಯಿಂದ ರಿಕ್ಷಾ ಚಾಲಕ ಸಜೀಪ ನಿವಾಸಿ ಜಾಬೀರ್ ಕೂಡ ಗಾಯಗೊಂಡಿದ್ದು, ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಸುತೇಶ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪವನ್ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದ. ರಜಾ ದಿನಗಳಲ್ಲಿ ಅಜ್ಜನ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಮಂಗಳೂರು : ಸುಬ್ರಹ್ಮಣ್ಯ, ಕೂಜುಮಲೆ ಪರಿಸರದಲ್ಲಿ ನಕ್ಸಲ್ ತಂಡ ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಕಡಬ ತಾಲೂಕಿನ ಬಿಳಿನೆಲೆಯಲ್ಲಿ ನಕ್ಸಲ್ ತಂಡ ಪ್ರತ್ಯಕ್ಷವಾಗಿದೆ. ಈ ಮೂಲಕ ಸುಬ್ರಹ್ಮಣ್ಯ – ಕೊಡಗು ಗಡಿಭಾಗದಲ್ಲಿ ನಕ್ಸಲ್ ಚಟುವಟಿಕೆ ಬಿರುಸುಗೊಂಡ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ರಾತ್ರಿ 7ಗಂಟೆಗೆ ಬಿಳಿನೆಲೆಯ ಚೇರು ಎಂಬಲ್ಲಿ ನಕ್ಸಲರ ತಂಡ ಕಾಣಿಸಿಕೊಂಡಿದೆ. 6 ಮಂದಿಯಿದ್ದ ಶಸ್ತ್ರಸಜ್ಜಿತ ನಕ್ಸಲರ ತಂಡ ಮನೆಯೊಂದಕ್ಕೆ ಭೇಟಿ ನೀಡಿ ನೀಡಿದೆ. ಮನೆಗೆ ಬಂದವರು ಊಟ ಕೇಳಿ ಅಲ್ಲಿಯೇ ಊಟ ಮಾಡಿದೆ. ಬಳಿಕ ಮೊಬೈಲ್ ಚಾರ್ಜ್ ಮಾಡಿ ತಂಡ ಅಲ್ಲಿಂದ ತೆರಳಿದೆ. ಈ ವೇಳೆ ಮನೆಯಿಂದ ಅಕ್ಕಿ ಕೇಳಿ ಪಡೆದುಕೊಂಡು ಹೋಗಿದ್ದಾರೆ. ಕೆಲ ದಿನಗಳ ಇಂದೆ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮಕ್ಕೆ ನಕ್ಸಲ್ ತಂಡ ಭೇಟಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಎಎನ್‌ಎಫ್ ಕೂಂಬಿಂಗ್ ಕಾರ್ಯಚರಣೆ ನಡೆಸಿತ್ತು. ಈ ನಡುವೆ ಮತ್ತೆ ನಕ್ಸಲರು ಪ್ರತ್ಯಕ್ಷವಾಗಿದ್ದು, ಪೊಲೀಸರಿಗೆ ತಲೆನೋವಾಗಿದೆ.
ಮಂಗಳೂರು : ಬರೋಬ್ಬರಿ 25 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಆಯುಕ್ತ ಮನ್ಸೂರ್ ಅಲಿಗೆ ನ್ಯಾಯಾಲಯ ಜಾಮೀನು ನಿರಾಕರಣೆ ಮಾಡಿದೆ. ಮಾರ್ಚ್ 23ರಂದು ಮುಡಾ ಆಯುಕ್ತ ಮನ್ಸೂರ್ ಅಲಿಯ ನಿರ್ದೇಶನದಂತೆ ಬ್ರೋಕರ್ ಮಹಮ್ಮದ್ ಸಲಿಂ ಎಂಬಾತ 25 ಲಕ್ಷ ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2024 ಕಲಂ 7(ಎ) ಭ್ರಷ್ಟಾಚಾರ ನಿರ್ಬಂಧಕ ಕಾಯ್ದೆ, 1988 (ತಿದ್ದುಪಡಿ ಕಾಯ್ದೆ, 2018) ರಡಿ ಪ್ರಕರಣ ದಾಖಲಾಗಿದೆ. ಇಬ್ಬರನ್ನು ದಸ್ತಗಿರಿ ಮಾಡಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಎಪ್ರಿಲ್ 8ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಬಳಿಕ ಮುಡಾ ಆಯುಕ್ತ ಮನ್ಸೂರ್ ಅಲಿ ಮತ್ತು ಬ್ರೋಕರ್ ಮಹಮ್ಮದ್ ಸಲಿಂ ನ್ಯಾಯಾಲಯಕ್ಕೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಎಪ್ರಿಲ್ 5ರಂದು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ…
ಬಜಪೆ : ಮನೆಯ ಬೀಗ ಒಡೆದು ಒಳನುಗ್ಗಿ ಮನೆಯೊಳಗಿದ್ದ ಲಕ್ಷಾಂತರ ರೂ ಬೆಲೆಬಾಳುವ ವಸ್ತುಗಳನ್ನು ಕಳವು ಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.ಬಡಗ ಎಡಪದವಿನ ಬೆಟ್ಟು ಜ್ಞಾರ ಮನೆ ಉರ್ಕಿ ನಿವಾಸಿ ರವಿ ಶೆಟ್ಟಿ(55) ಹಾಗೂ ಮೂಡಬಿದಿರೆಯ ತೋಡಾರು ಗ್ರಾಮದ ಕಲ್ಯ ಸಂಕ ನಿವಾಸಿ ಶಿವ ಪ್ರಸಾದ್ ಶೆಟ್ಟಿ (29) ಬಂಧಿತ ಆರೋಪಿಗಳು ಬಂಧಿತ ಆರೋಪಿಗಳು ಬಡಗ ಎಡಪದವಿನಲ್ಲಿರುವ ಯುವರಾಜ್ ಆಚಾರ್ಯ ರವರ ಮನೆಯ ಬೀಗವನ್ನು ಒಡೆದು ಮನೆಯಲ್ಲಿದ್ದ ಸುಮಾರು 1,40,000 ರೂಪಾಯಿ ಬೆಲೆ ಬಾಳುವ ಕೇಬಲ್, ಪ್ಯಾನ್, ಬಾಗಿಲು, ಕಿಟಿಕಿ ಹಾಗೂ ಇನ್ನಿತರ ವಸ್ತುಗಳನ್ನು ಕಳವು ಮಾಡಿದ್ದು,ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ನಂದೇಶ್ ಬಿ ಕುಂಬಾರ ರವರು ತಂಡವು ಆರೋಪಿಗಳನ್ನು ಶುಕ್ರವಾರದಂದು ಮೂಡಬಿದ್ರೆ ಸ್ವರಾಜ್ ಮೈದಾನ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಕಳವು ಮಾಡಿದ ಎಲ್ಲಾ ಸೊತ್ತುಗಳನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಸ್ವಾಧೀನ ಪಡಿಸಿಕೊಂಡ ಸೊತ್ತುಗಳ…
ಮಂಗಳೂರು: ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 112 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಂ.ಸಿ.ಸಿ. ಬ್ಯಾಂಕ್ ಮಾರ್ಚ್ 2024ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಲೆಕ್ಕ ಪರಿಶೋಧನಾ ಪೂರ್ವ 13.12 ಕೋಟಿ ರೂ. ವ್ಯವಹಾರಿಕ ಲಾಭ ಗಳಿಕೆ ದಾಖಲಿಸಿದೆ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ತಿಳಿಸಿದ್ದಾರೆ. ಮಿಲಾಗ್ರಿಸ್‌ನ ಸೆನೆಟ್ ಹಾಲ್‌ನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಸಿಸಿ ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆಗೊಳಿಸಲು ಶ್ರಮಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರಥಮ ಬಾರಿಗೆ 1.07% ಎನ್.ಪಿ.ಎ. ದಾಖಲಿಸಿದೆ ಎಂದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯ ಕ್ಷೇತ್ರವನ್ನು ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಹೀಗೆ 5 ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಪ್ರಸಕ್ತ ವರ್ಷ ಬ್ಯಾಂಕ್ ಕಾರ್ಯವ್ಯಾಪ್ತಿಯನ್ನು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಲು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅನುಮತಿ ದೊರಕಿದ್ದು, ಇದೊಂದು ಮಹತ್ವದ ಸಾಧನೆಯಾಗಿದೆ. ಈಗಾಗಲೇ ಬ್ರಹ್ಮಾವರದಲ್ಲಿ ಬ್ಯಾಂಕ್‌ನ 17ನೇ ಶಾಖೆಯನ್ನು ತೆರೆಯಲಾಗಿದ್ದು, ಕಾವೂರು, ಬೆಳ್ತಂಗಡಿ…
ಬಜ್ಪೆ: ಇಲ್ಲಿನ ಬಡಗ ಎಡಪದವು ತಿಪ್ಪಬೆಟ್ಟುವ ಯುವರಾಜ್ ಆಚಾರ್ಯ ಎಂಬವರ ಮನೆಯ ಬೀಗ ಮುರಿದು ಗೃಹೋಪಯೋಗಿ ವಸ್ತುಗಳನ್ನು ಕಳವುಗೈದಿದ್ದ ಇಬ್ಬರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಡಗ ಎಡಪದವು ಗ್ರಾಮದ ನಿವಾಸಿ ರವಿ ಶೆಟ್ಟಿ (55), ಮೂಡುಬಿದಿರೆ ತೋಡಾರು ಗ್ರಾಮದ ನಿವಾಸಿ ಶಿವಪ್ರಸಾದ್ ಶೆಟ್ಟಿ (29) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರಿಂದ ಗೃಹಪಯೋಗಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಇದರ ಒಟ್ಟು ಮೌಲ್ಯ 1.40 ಲಕ್ಷ ರೂ. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಬಜ್ಪೆ ಪೊಲೀಸ್ ಠಾಣಾ ನಿರೀಕ್ಷಕರಾದ ನಂದೀಶ್ವರ ಬಿ ಕುಂಬಾರ ಪಿಎಸ್ಐಗಳಾದ ಗುರಪ್ಪ ಕಾಂತಿ, ರೇವಣಸಿದ್ದಪ್ಪ, ರವಿ ಎನ್.ಎನ್., ಶೋಭಾ ಆರ್, ಎಎಸ್ಐ ರಾಮ ಪೂಜಾರಿ ಮತ್ತು ಸಿಬ್ಬಂದಿಗಳಾದ ಸುಜನ್, ಪುರುಷೋತ್ತಮ, ರಶೀದ್, ದೇವಪ್ಪ ಹೊಸಮನಿ, ಬಸವರಾಜ ಪಾಟೀಲ್, ಪ್ರಕಾಶ್, ಚಿದಾನಂದ ಮೊದಲಾದವರು ಭಾಗವಹಿಸಿದ್ದರು.
ಮಂಗಳೂರು: ಅತ್ಯಾಚಾರ ಮತ್ತು ಹತ್ಯೆಗೊಳಗಾದ ಸೌಜನ್ಯಾ ಪ್ರಕರಣದಲ್ಲಿ ನ್ಯಾಯಕ್ಕೆ ಆಗ್ರಹಿಸಿ ಸೌಜನ್ಯಾಪರ ಹೋರಾಟಗಾರರು ನೋಟಾ ಜಾಗೃತಿ ಅಭಿಯಾನಕ್ಕೆ ಮುಂದಾಗಿದ್ದಾರೆ. ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 11 ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುತ್ತಿದೆ. ಆದರೂ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಈ ಬಗ್ಗೆ ಯಾವುದೇ ಸಹಕಾರ ನೀಡಿಲ್ಲ. ಅಲ್ಲದೆ ಧರ್ಮಸ್ಥಳದಲ್ಲಿ ಈ ಹಿಂದೆ ನಡೆದ ಪದ್ಮಲತಾ, ಆನೆ ಮಾವುತ, ವೇದವಲ್ಲಿ ಕೊಲೆ ಪ್ರಕರಣಗಳಿಗೂ ನ್ಯಾಯ ದೊರಕಬೇಕೆಂದು ಚುನಾವಣಾ ಆಯೋಗದ ನಿರ್ದೇಶನದಂತೆ ನೋಟಾ ಜನಜಾಗೃತಿ ಸಭೆಗಳನ್ನು ನಡೆಸಿ ಅತೀ ಹೆಚ್ಚು ನೋಟಾಕ್ಕೆ ಮತ ಬೀಳುವಂತೆ ಕರೆ ನೀಡಲಾಗುತ್ತದೆ. ಇದಕ್ಕಾಗಿ ಸೌಜನ್ಯಾಪರ ಹೋರಾಟದ ರೂವಾರಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ರಾಜ್ಯ ವ್ಯಾಪಿ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ನೋಟಾ ಅಭಿಯಾನ ನಡೆಸಲಾಗುತ್ತದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೋಟಾ ಮತ ಬೀಳವಂತೆ ಕರೆ ನೀಡಲಾಗುತ್ತದೆ. ಇದಕ್ಕಾಗಿ ಮನೆಮನೆಗಳಿಗೆ ತೆರಳಿ ನೋಟಾಕ್ಕೆ ಮತ ಹಾಕುವಂತೆ ವಿನಂತಿಸಲಾಗುತ್ತದೆ. ಅಲ್ಲಲ್ಲಿ ಸಭೆಗಳನ್ನು ನಡೆಸಲಾಗುತ್ತದೆ. ಎಪ್ರಿಲ್…