Author: main-admin

ಮಂಗಳೂರು: ಎನ್‌ಡಿಪಿಎಸ್ ಆ್ಯಕ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದ ಬಳಿಕ 4ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ, ಒಳಪೇಟೆಯ, ಟಿ.ಸಿ.ರಸ್ತೆಯ ನಿವಾಸಿ ಸಲೀಂ ಅಲಿಯಾಸ್ ಮೊಹಮ್ಮದ್ ಸಲೀಂ(38) ಬಂಧಿತ ಆರೋಪಿ. ಇಎನ್‌ಸಿ ಠಾಣೆಯಲ್ಲಿ ಕಲಂ : 8©,20(b) (ii) (a) NDPS ACT ಪ್ರಕರಣಕ್ಕೆ ಸಂಬಂಧಿಸಿದ 2019ರಲ್ಲಿ ಈತನನ್ನು ದಸ್ತಗಿರಿ ಮಾಡಲಾಗಿತ್ತು. ನ್ಯಾಯಾಲಯ ಈತನಿಗೆ ಜಾಮೀನು ನೀಡಿತ್ತು. ಬಳಿಕ ಈತನು ಇಲ್ಲಿಯವರೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಅಕ್ಟೋಬರ್ 22ರಂದು ಸೆನ್ ಕ್ರೈಂ ಪೊಲೀಸ್ ಠಾಣಾ ಸಿಬ್ಬಂದಿ ಆತನನ್ನು ಪತ್ತೆ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

Read More

ಪುತ್ತೂರು: ನಗರ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಕೃಷ್ಣ ಶೆಟ್ಟಿ ನಿಧನರಾಗಿದ್ದಾರೆ. 70 ವರ್ಷ ವಯಸ್ಸಿನ ಕೃಷ್ಣ ಶೆಟ್ಟಿ ಅವರು ಅ.22 ನಸುಕಿನ ಜಾವ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಪುತ್ತೂರು ಮರ್ದಾಳ ಮೂಲದವರಾದ ಅವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ನಿವೃತ್ತಿಗೊಂಡಿದ್ದರು. ಬಳಿಕ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು ಎಂದು ತಿಳಿದು ಬಂದಿದೆ.

Read More

ಉಡುಪಿ: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನೆ ಕತ್ತು ಸೀಳಿ ಕೊಲೆಗೈದ ಭೀಕರ ಘಟನೆಯೊಂದು ಉಡುಪಿ ಹಳೆ ಕೆಎಸ್‌ಆರ್‌ಟಿಸಿ ಬಳಿಯ ಕೃಷ್ಣ ಕೃಪಾ ಬಿಲ್ಡಿಂಗ್‌ನ ನೆಲ ಅಂತಸ್ತಿನ ಕೊಠಡಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಕೊರಂಗ್ರಪಾಡಿಯ ಪ್ರಶಾಂತ್ ಶೆಟ್ಟಿ (32)ಕೊಲೆಯಾದ ವ್ಯಕ್ತಿ. ಈತನ ಸ್ನೇಹಿತ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ನಿವಾಸಿ ಈರಣ್ಣ ಯಾನೆ ದಿನೇಶ್ ಎಂಬಾತ ಕೊಲೆ ಮಾಡಿದ ಆರೋಪಿ. ಕಂಠಪೂರ್ತಿ ಕುಡಿದು ಇಬ್ಬರು ಜಗಳ ಮಾಡಿಕೊಂಡಿದ್ದು, ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಆರೋಪಿ ಈರಣ್ಣ ಹರಿತವಾದ ಚೂರಿಯಿಂದ ಪ್ರಶಾಂತ್ ನ ಕತ್ತು ಸೀಳಿದ್ದಾನೆ. ಗಂಭೀರವಾಗಿ ಗಾಯಗೊಂಡ ಪ್ರಶಾಂತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಕತ್ತು ಸೀಳಿದ ಬಳಿಕ ಆರೋಪಿಯು ಖುದ್ದು ಪೊಲೀಸರಿಗೆ ಕರೆ ಮಾಡಿ, ಸ್ನೇಹಿತನನ್ನು ಕೊಲೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ಎಸ್‌ಪಿ ಡಾ. ಅರುಣ್ ಕೆ., ಎಎಸ್ಪಿ ಸಿದ್ದಲಿಂಗಪ್ಪ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.…

Read More

ಮಂಗಳೂರು ನಗರದ ಉರ್ವಸ್ಟೋರ್‌ ಜಂಕ್ಷನ್‌ನಲ್ಲಿ ಸಿಟಿ ಮತ್ತು ಸರ್ವಿಸ್‌ ಬಸ್‌ ಸಿಬಂದಿಯ ನಡುವೆ ಮಧ್ಯಾಹ್ನ ಜಗಳ ಸಂಭವಿಸಿದೆ. ಸರ್ವಿಸ್‌ ಬಸ್‌ನ ಚಾಲಕ ಮತ್ತು ನಿರ್ವಾಹಕರಿಗೆ ಸಿಟಿ ಬಸ್‌ ನಿವಾಹಕ – ನಿರ್ವಾಹಕರು ಬೈದು ಒಂದು ಬಸ್ಸಿನ ಒಂದು ಬದಿಯ ಕನ್ನಡಿಯನ್ನು ಒಡೆದು ಹಾಕಿರುವ ಕುರಿತಂತೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ಕಿನ್ನಿಗೋಳಿ ಕಟೀಲು ನಡುವೆ ಸಂಚರಿಸುವ ‘ಟೀನಾ’ ಹೆಸರಿನ ಸರ್ವಿಸ್‌ ಬಸ್‌ನಲ್ಲಿ ಮಸೂದ್‌ ಅಹಮ್ಮದ್‌ ಚಾಲಕನಾಗಿ ಮತ್ತು ಹಸನ್‌ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದು, ರವಿವಾರ ಸಂಜೆಯ ಟ್ರಿಪ್‌ನಲ್ಲಿ 4.20ರ ವೇಳೆಗೆ ಕೊಟ್ಟಾರ ಚೌಕಿ ಕಡೆಗೆ ಬಂದಿದ್ದಾರೆ. ಈ ವೇಳೆ ಹಿಂದಿನ ಬಂದ ‘ದೀದರ್‌’ ಹೆಸರಿನ ಸಿಟಿ ಬಸ್‌ ಚಾಲಕ ಓವರ್‌ಟೇಕ್‌ ಮಾಡಿಕೊಂಡು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದಿದ್ದಾನೆ. ಬಳಿಕ 4.30ರ ವೇಳೆಗೆ ಉರ್ವಸ್ಟೋರ್‌ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಇಳಿಸುತ್ತಿದ್ದಾಗ ಓವರ್‌ ಟೇಕ್‌ ಮಾಡಿಕೊಂಡು ಬಂದು ಅಡ್ಡಲಾಗಿ ಬಸ್‌ ತಂದು ನಿಲ್ಲಿದ್ದಾನೆ. ಚಾಲಕ ಚೇತನ್‌ ಮತ್ತು ನಿರ್ವಾಹಕ ಮಹಮ್ಮದ್‌ ಹುಸೈನ್‌ ಸಪೀಲ್‌ ಬಸ್ಸಿನಿಂದ ಕೆಳಗಿಳಿದು…

Read More

ಮಂಗಳೂರು : ಜೆ.ಪಿ. ಮಾರ್ಗನ್ ಕಂಪೆನಿಯ ಪ್ರತಿನಿಧಿ ಎಂದು ತನ್ನನ್ನು ಪರಿಚಯಿಸಿಕೊಂಡು ಭಾರತದಲ್ಲಿ ಹೊಸದಾಗಿ ಕಂಪೆನಿಯನ್ನು ಪ್ರಾರಂಭಿಸುತ್ತಿದ್ದು, ಹೂಡಿಕೆ ಮಾಡುವಂತೆ ಆಮಿಷ ಒಡ್ಡಿ 20 ಲಕ್ಷ ರೂ. ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರಿಗೆ ಸೆ. 24ರಂದು ಅಪರಿಚಿತ ವ್ಯಕ್ತಿಯೋರ್ವ ತಾನು ವಿಶ್ವನಾಥನ್ ಮುಖ್ಯ ಹೂಡಿಕೆದಾರ ಸ್ಟ್ರ‍್ಯಾಟಜಿಸ್ಟ್ ಎಂದು ಹೇಳಿಕೊಂಡು ಸಂಪರ್ಕ ಮಾಡಿದ್ದಾನೆ. ನಂತರ ನೀತಾ ಶರ್ಮಾ ಎಂಬಾಕೆ ಜೆ.ಪಿ. ಮಾರ್ಗನ್ ಎಂಬ ಕಂಪೆನಿಯ ಪ್ರತಿನಿಧಿ ಎಂದು ಹೇಳಿಕೊಂಡು ವಿವಿಧ ನಂಬರ್‌ಗಳಿಂದ ಕರೆ ಮಾಡಿ ಸಂಪರ್ಕಿಸಿದ್ದಾರೆ. ಕಂಪೆನಿ ಪ್ರಾರಂಭಿಸುವ ಬಗ್ಗೆ ಮಾಹಿತಿ ನೀಡಿ ಲಿಂಕ್ ಕಳುಹಿಸಿ, 20 ಲಕ್ಷ ರೂ. ವರ್ಗಾವಣೆ ಮಾಡುವಂತೆ ತಿಳಿಸಿದ್ದಾನೆ. ಅದರಂತೆ ದೂರುದಾರರು ಅ. 14ರಂದು 20 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಷೇರುಗಳನ್ನು ಖರೀದಿಸುವಂತೆ ಹೇಳಿದ್ದು, 1 ಷೇರಿಗೆ 240 ರೂ.ನಂತೆ 1 ಸಾವಿರ ಷೇರುಗಳನ್ನು ಖರೀದಿ ಮಾಡಿದ್ದಾರೆ.ಅ. 15ರಂದು ಇನ್ನೊಂದು ಸಂಸ್ಥೆಯ ಷೇರುಗಳನ್ನು ಖರೀದಿಸುವಂತೆ ತಿಳಿಸಿದ್ದು, ಅದರಂತೆ…

Read More

ಉಡುಪಿ: ಕುಂದಾಪುರ ತಾಲೂಕಿನ ವಕ್ವಾಡಿ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಪ್ರವೀಣ್‌ ಕುಮಾರ್‌ ಶೆಟ್ಟಿ ಅವರ ಹೊಟೇಲೊಂದಕ್ಕೆ ಅಕೌಂಟೆಂಟ್‌ ಆಗಿ ಸೇರಿ 2.5 ಕೋಟಿಗೂ ಅಧಿಕ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವಾರ ಬಂಧಿಸಲ್ಪಟ್ಟಿದ್ದ ಬಾರ್ಕೂರು ಮೂಲದ ನಾಗೇಶ್‌ ಪೂಜಾರಿ (31) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬ್ರಹ್ಮಾವರ ಜೆ.ಎಂ.ಎಫ್‌.ಸಿ. ನ್ಯಾಯಾಲಯ ತಿರಸ್ಕರಿಸಿದೆ. ಆರೋಪಿಗೆ ಬ್ರಹ್ಮಾವರ ಜೆ.ಎಂ.ಎಫ್‌.ಸಿ. ನ್ಯಾಯಾಲಯ ನೀಡಿದ ಜಾಮೀನು ಆದೇಶವನ್ನು ರಾಜ್ಯ ಉಚ್ಚ ನ್ಯಾಯಾಲಯ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಉಡುಪಿ ಸೆನ್‌ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ 3 ದಿನಗಳ ಕಾಲ ಕಸ್ಟಡಿಗೆ ಪಡೆದು ಅ.16ರಂದು ಜೆ.ಎಂ.ಎಫ್‌.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಆದೇಶವನ್ನು ಅ.21 ಸೋಮವಾರಕ್ಕೆ ನಿಗದಿಪಡಿಸಿದ್ದರು.

Read More

ಬೆಂಗಳೂರು : ರಾಜಧಾನಿಯಲ್ಲಿ ಆಯೋಜಿಸಿರುವ ಕಂಬಳಕ್ಕೆ ಸಂಕಷ್ಟ ಎದುರಾಗಿದ್ದು, ಇದನ್ನು ನಿಲ್ಲಿಸಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್​​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಅ.25 ರಂದು ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಕಂಬಳಕ್ಕಾಗಿ ರಾಜ್ಯಾದ್ಯಂತದಿಂಧ ಕೋಣಗಳನ್ನು ಬೆಂಗಳೂರಿಗೆ ಕರೆತರುವುದರಿಂದ, ಕೋಣಗಳಿಗೆ ಹಿಂಸೆ ಆಗುತ್ತದೆ. ಹೀಗಾಗಿ ಇದಕ್ಕೆ ತಡೆ ನೀಡಬೇಕು ಎಂದು ಕೋರಿ ಪೇಟಾ (ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಸಂಸ್ಥೆ) ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಈ ಸಂಬಂಧ ತುರ್ತು ವಿಚಾರಣೆ ನಡೆಸುವಂತೆ ಕೋರಿ ಪೇಟಾ ಮನವಿ ಮಾಡಿದ್ದು, ಹೀಗಾಗಿ ಅ.21ರಂದು ಕೋರ್ಟ್‌ ವಿಚಾರಣೆ ನಡೆಸಲಿದೆ

Read More

ಮಂಗಳೂರು: ಸುರತ್ಕಲ್‌ ಸಮೀಪದ ಮುಕ್ಕದ ಖಾಸಗಿ ಕಾಲೇಜಿನ ಎಂಜಿನಿಯರಿಂಗ್‌ ವಿದ್ಯಾರ್ಥಿಯೋರ್ವ ಸಮುದ್ರ ಪಾಲಾದ ಘಟನೆ ರವಿವಾರ ಸಂಜೆ ಸಂಭವಿಸಿದೆ.ಸಮುದ್ರ ಪಾಲಾದ ವಿದ್ಯಾರ್ಥಿ ಶಿವಮೊಗ್ಗದ ತಿಲಕ್‌ (21) ಎಂದು ತಿಳಿಯಲಾಗಿದೆ. ಇಡ್ಯಾದಲ್ಲಿ ಬಾಡಿಗೆ ಮನೆಯಲ್ಲಿ ಇದ್ದ ಅವರು ಸಂಜೆ ವಿಹಾರಕ್ಕೆಂದು ತೆರಳಿದ್ದರು.ಇತರ ವಿದ್ಯಾರ್ಥಿಗಳ ಜತೆ ಸಮುದ್ರದಲ್ಲಿ ಈಜಾಟ ನಡೆಸುತ್ತಿದ್ದಾಗ ಅಲೆಗೆ ಸಿಲುಕಿ ಕೊಚ್ಚಿ ಹೋಗಿದ್ದು, ಸ್ಥಳೀಯರ ನೆರವಿನಿಂದ ಮೃತದೇಹವನ್ನು ನೀರಿನಿಂದ ಮೇಲಕ್ಕೆ ತರಲಾಯಿತು. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಆರೋಪಿಗಳು ತನಿಖಾ ಸಂಸ್ಥೆಗೆ ಮೊಬೈಲ್ ಫೋನ್ ಸಲ್ಲಿಸದೇ ಇರುವುದು ಅಸಹಕಾರ ಎಂದು ಕರೆಯಲಾಗದು ಎಂದು ಆಂಧ್ರ ಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. ಮಾಜಿ ಸಂಸತ್ ಸದಸ್ಯ ಎನ್. ಸುರೇಶ್ ಬಾಬು ಮತ್ತು ಉದ್ಯಮಿ ಅವುತ್ತು ಶ್ರೀನಿವಾಸ ರೆಡ್ಡಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಆಂಧ್ರ ಪ್ರದೇಶ ಹೈಕೋರ್ಟ್‌ನ ನ್ಯಾ. ಡಾ. ವಿ.ಆರ್.ಕೆ. ಕೃಪಾಸಾಗರ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶ ಹೊರಡಿಸಿದೆ. ಆರೋಪಿಗಳಿಗೆ ಸಂವಿಧಾನದ ವಿಧಿ 20(3) ಸ್ವಯಂ ದೋಷಾರೋಣೆ ವಿರುದ್ಧದ ಹಕ್ಕು ಅಡಿಯಲ್ಲಿ ರಕ್ಷಣೆ ಒದಗಿಸಲಾಗಿದೆ. ಈ ಕಾರಣದಿಂದ ಗ್ಯಾಜೆಟ್ ಆನ್‌ಲೈನ್ ಖಾತೆಗಳ ಪಾಸ್‌ವರ್ಡ್‌ ನೀಡುವಂತೆ ಪೊಲೀಸರು ಆರೋಪಿಗಳಿಗೆ ಒತ್ತಾಯಿಸುವಂತಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ. ಸದ್ರಿ ಪ್ರಕರಣದಲ್ಲಿ ಆರೋಪಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ತನಿಖೆ ಹಿನ್ನೆಲೆಯಲ್ಲಿ ಪೊಲೀಸರಿಗೆ ಒಪ್ಪಿಸಿರಲಿಲ್ಲ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಅಭಿಯೋಜನೆಯ ಪರ ವಕೀಲರು ವಾದಿಸಿದ್ದರು. ಮೊಬೈಲ್ ಫೋನ್ ನೀಡದೇ ಇದ್ದ ಕಾರಣ ಪ್ರಕರಣದಲ್ಲಿ ವಾಟ್ಸ್ಯಾಪ್ ಸಂದೇಶಗಳನ್ನು…

Read More

ಮಂಗಳೂರು ನಗರದ ನಂತೂರು ಜಂಕ್ಷನ್ ಬಳಿ ನಡೆದ ವಾಹನ ಅಪಘಾತದಲ್ಲಿ ಯುವತಿಯೊಬ್ಬಳು ದಾರುಣ ಅಂತ್ಯ ಕಂಡಿದ್ದಾಳೆ. ಮೃತ ಯುವತಿಯನ್ನು ನಗರದ ಕೋಡಿಕಲ್‌ನ 27 ವರ್ಷದ ಕ್ರಿಸ್ತಿ ಕ್ರಾಸ್ತಾ ಎಂದು ಗುರುತಿಸಲಾಗಿದೆ. ರವಿವಾರ ಅಪರಾಹ್ನ 3.30 ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು ಕೋಡಿಕಲ್ ನಿವಾಸಿಯಾಗಿರುವ ಕುಮಾರಿ ಕ್ರಿಸ್ತಿ ಕ್ರಾಸ್ತಾ ರವರು ನಂತೂರು ಜಂಕ್ಷನ್ ನಿಂದ ಪಂಪ್ ವೆಲ್ ಕಡೆಗೆ ಹೋಗುತ್ತಿರುವ ವೇಳೆ ನಂತೂರು ಜಂಕ್ಷನ್ ಬಳಿ ಶಾಂತಿ ಕಿರಣ ಬಿಲ್ಡಿಂಗಿನ ಎದುರು ಕೆ ಎಲ್ 11 ಬಿವಿ 4718 ನಂಬರಿನ ಹಸಿ ಮೀನು ಸಾಗಿಸುವ ಕಂಟೇನರ್ ವಾಹನವನ್ನು ಕ್ರಿಸ್ತಿ ಚಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು ಈ ಸಂದರ್ಭ ಯುವತಿ ಕಂಟೇನರ್ ವಾಹನದ ಹಿಂಬದಿ ಚಕ್ರಕ್ಕೆ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.  ಕಂಟೇನರ್ ವಾಹನ ಚಾಲಕನ ಅಜಾಗೃತೆಯ ಚಾಲನೆಯೇ ಘಟನೆ ಕಾರಣವೆಂದು ಹೇಳಲಾಗಿದೆ. ಈ ಕುರಿತು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More