Author: main-admin

ಬೆಳ್ತಂಗಡಿ ಸಮೀಪ ವೇಶ್ಯಾವಾಟಿಕೆ ನಡೆಸುತ್ತಿರುವ ಅನುಮಾನದ ಮೇರೆಗೆ ಉಜಿರೆ ಹಳೆ ಪೇಟೆ ಸಮೀಪವಿರುವ ಎರಡು ಲಾಡ್ಜ್ಗಳಿಗೆ ದಾಳಿ ಮಾಡಿರುವ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಮಹಿಳೆಯನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ. ‌ ಪೊಲೀಸರು ಬಂಧಿಸಿದ ವ್ಯಕ್ತಿಗಳು ತುಮಕೂರು ಅರಳೇ ಪೇಟೆಯ ರೇಣುಕಾ ಪ್ರಸಾದ್‌ (29), ಕಾರ್ಕಳ ನಿಟ್ಟೆ ಗ್ರಾಮದ ರಾಜೇಶ್‌ ಮೋಹನ್‌ ನಾಯರ್‌ (34), ಕಾರ್ಕಳ ನೂರಾಲ್‌ ಬೆಟ್ಟು ಗ್ರಾಮದ ನಿತಿನ್‌ ಕುಮಾರ್‌(28) ಎಂದು ಗುರುತಿಸಲ್ಪಟ್ಟಿದ್ದಾರೆ. ವೇಶ್ಯಾವಾಟಿಕೆ ಬಗ್ಗೆ ಮಾಹಿತಿ ಬಂದ ಮೇರೆಗೆ ಬೆಳ್ತಂಗಡಿ ಪೊಲೀಸ್‌ ನಿರೀಕ್ಷಕರಾದ ಬಿ.ಜಿ. ಸುಬ್ಟಾಪೂರ ಮಠ್ ಅವರು ಸಿಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದಾಗ ವೇಶ್ಯಾವಾಟಿಕೆ ನಿರತರಾಗಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದ ಮಹಿಳೆಯನ್ನು ಮಹಿಳಾ ಸಿಬಂದಿಗಳ ಸಮಕ್ಷಮದಲ್ಲಿ ರಕ್ಷಿಸಿ ಆರೋಪಿಗಳ ವಿರುದ್ಧ ಹಾಗೂ ದಾಳಿಯ ವೇಳೆ ಓರ್ವ ಪರಾರಿಯಾದ ಆರೋಪಿಯ ವಿರುದ್ಧ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಳ್ತಂಗಡಿ ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದಾರೆ.

Read More

ಸುಳ್ಯ: ಸಾಕು ದನವನ್ನು ತೋಟದ ಬದಿಯಲ್ಲಿ ಕರೆದೊಯ್ಯುತ್ತಿದ್ದ ವೇಳೆ ದನ ಮೈಮೇಲೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದ ವ್ಯಕ್ತಿ ಸಾವನ್ನೊಪ್ಪಿದ ಘಟನೆ ದಕ್ಷಿಣ ಕನ್ನಡದ ಸುಳ್ಯದ ಚೊಕ್ಕಾಡಿಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಸುಳ್ಯ ತಾಲೂಕು ಅಮರಪಡ್ನೂರು ಗ್ರಾಮದ ಚೊಕ್ಕಾಡಿಯ ನಿವಾಸಿ ನಡುಗಲ್ಲು ರಾಧಾಕೃಷ್ಣ ಎಂದು ಗುರುತಿಸಲಾಗಿದೆ. ತಮ್ಮ ದನವನ್ನು ಮೇಯಿಸಲು ಕಟ್ಟಿ ಹಾಕಲು ತೋಟದ ಬದಿಯಲ್ಲಿ ಕರೆದೊಯ್ಯುತ್ತಿರುವಾಗ ಇಳಿಜಾರಿನಲ್ಲಿ ರಾಧಾಕೃಷ್ಣ ಅವರು ಕಾಲು ಜಾರಿ ಬಿದ್ದಿದ್ದಾರೆ. ಈ ಸಂದರ್ಭ ದನದ ಹಗ್ಗ ಅವರ ಕೈಯಲ್ಲಿದ್ದುದರಿಂದ ಎಳೆಯಲ್ಪಟ್ಟು ದನ ರಾಧಾಕೃಷ್ಣರ ಮೈಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಸ್ಥಳಕ್ಕೆ ಧಾವಿಸಿ ಬಂದ ಮನೆಯವರು ಸ್ಥಳೀಯರ ನೆರವಿನಿಂದ ಅವರನ್ನು ಮೇಲಕ್ಕೆತ್ತಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ರಾಧಾಕೃಷ್ಣ ಅವರು ಮೃತಪಟ್ಟಿದ್ದಾರೆ.

Read More

ಕೆಎಸ್‌ಆರ್ಟಿಸಿ ಬಸ್ಸಿನ ಬ್ರೇಕ್ ಫೇಲ್ ಆಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿದ್ದ 45 ಪ್ರಯಾಣಿಕರು ಬದುಕು ಉಳಿದಿದ್ದಾರೆ. ಈ ಘಟನೆಯು ಚಿಕ್ಕಮಂಗಳೂರು ದಕ್ಷಿಣ ಕನ್ನಡ ಸಂಪರ್ಕಿಸುವ ಚಾರ್ಮಾಡಿ ಘಾಟ್ ತಿರುವಿನಲ್ಲಿ ನಡೆದಿದೆ. ಕೆಎಸ್‌ಆರ್ಟಿಸಿ ಬಸ್ ಕಡೂರಿನಿಂದ ಮಂಗಳೂರಿಗೆ ತೆರಳುತ್ತಿತ್ತು. ಈ ವೇಳೆ ಚಾರ್ಮಾಡಿ ಘಾಟ್ ತಿರುವಿನಲ್ಲಿ ಚಾಲಕನಿಗೆ ಬ್ರೇಕ್ ಕಂಟ್ರೋಲ್ ತಪ್ಪಿದೆ. ಈ ವೇಳೆ ಚಾಲಕ ಸಮಯ ಪ್ರಜ್ಞೆಯಿಂದ ಡಿವೈಡರ್ಗೆ ಬಸ್ ಡಿಕ್ಕಿ ಆಗಿದೆ.ಈ ವೇಳೆ ಚಾಲಕ ಡಿವೈಡರ್ಗೆ ಬಸ್ಸನ್ನು ಡಿಕ್ಕಿ ಹೊಡೆಸಿ ಬಸ್ಸನ್ನು ನಿಲ್ಲಿಸಿದ್ದಾನೆ. ಡಿಕ್ಕಿ ಹೊಡೆಯುತ್ತಿದ್ದಂತೆ ಬಸ್ನಿಂದ ಭಾರಿ ಪ್ರಮಾಣದ ಹೊಗೆ ಹೊರಗೆ ಬಂದಿದೆ. ಈ ವೇಳೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 45ಕ್ಕೂ ಹೆಚ್ಚು ಜನರು ಅದೃಷ್ಟವಶಾತ್ ಪ್ರಾಣ ಅಪಾಯದಿಂದ ಎಲ್ಲರೂ ಪಾರಾಗಿದ್ದಾರೆ. ಬಣಕಲ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯಾಗಿದೆ.

Read More

ವಿಟ್ಲ: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಕಳ್ಳತನ ಪ್ರಕರಣವಾಗಿ ತಿಂಗಳಾಗುತ್ತ ಬಂದಿದ್ದು, ಪೊಲೀಸರು ತನಿಖೆಯಲ್ಲಿ ಪ್ರಗತಿಯನ್ನು ಸಾಧಿಸಿದ್ದು, ಈಗಾಗಲೇ ನಾಲ್ವರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ದರೋಡೆಕೋರರು ದರೋಡೆಗೈದ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಪತ್ತೆ ಮಾಡಲಾಗಿದೆ. ಕೇರಳದ ಪೈವಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಾರ್ ಸಜಂಕಿಲ ಎಂಬಲ್ಲಿ ಹೂತಿಟ್ಟಿದ್ದ ಏಳು ಕೆಜಿ ಚಿನ್ನಾಭರಣ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಕರ್ನಾಟಕ ಪೊಲೀಸರಿಗೆ ಚಿನ್ನವನ್ನು ಹೂತಿಟ್ಟಿರುವುದು ಪತ್ತೆಯಾಗಿದೆ. ಅಡ್ಯಡ್ಕದಲ್ಲಿರುವ ಬ್ಯಾಂಕ್‌ನಿಂದ 4,20,70,000 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ದೋಚುವುದು ಇದರ ಉದ್ದೇಶ ಎಂದು ಪೊಲೀಸರು ಶಂಕಿಸಿದ್ದಾರೆ. ಕಳೆದ ತಿಂಗಳು 7ರಂದು ನಡೆದಿದ್ದ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ವಿಶೇಷ ಪೊಲೀಸ್ ತಂಡವು ಕಾಸರಗೋಡಿನ ನಾಲ್ವರನ್ನು ಬಾಯಾರಿನ ಒಬ್ಬ ಸೇರಿದಂತೆ ನಾಲ್ವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿತ್ತು. ಅವರಿಂದ ಬಂದ ಮಾಹಿತಿ ಮೇರೆಗೆ ಪೊಲೀಸರು ಸಜಿಂಕಿಲಾಗೆ ಆಗಮಿಸಿ ಚಿನ್ನವನ್ನು ಅಗೆದಿದ್ದಾರೆ ಎಂದು ವರದಿಯಾಗಿದೆ. ಸದ್ಯದಲ್ಲೇ ಈ ಕುರಿತು ಹೆಚ್ಚಿನ…

Read More

ಮಂಗಳೂರು : ಲಂಚದ ಹಣ ಸ್ವೀಕಾರ ಮಾಡುವಾಗ ಜಮೀನು ಸರ್ವೆಯರ್ ಒಬ್ಬರು ಲೋಕಾಯುಕ್ತದ ಬಲೆಗೆ ಬಿದ್ದಿದ್ದು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಶೀತಲ್ ರಾಜ್ ಬಂಧಿತ ಆರೋಪಿಯಾಗಿದ್ದಾನೆ. ಜಮೀನಿನ ಪಹಣಿಯಲ್ಲಿನ ಹೆಸರನ್ನು ತೆಗೆಯಲು ನಿಯಮದಂತೆ ಜಮೀನನ್ನು ಸರ್ವೆ ಮಾಡಿ ನಕ್ಷೆ ತಯಾರಿಸಿ ತತ್ಕಾಲ್ ಪೋಡಿ ಮುಖಾಂತರ ತೆಗೆಯುವ ಪ್ರಕ್ರೀಯೆ ಇರುತ್ತದೆ.ಗುರುಪುರ ಹೋಬಳಿಯಲ್ಲಿರುವ ನೀರುಮಾರ್ಗ ಗ್ರಾಮದ ಶ್ರೀಮತಿ ಲಿಲ್ಲಿ ಪೀಟರ್ ವಾಸ್ ಅವರಿಗೆ 72 ವರ್ಷ ವಾಗಿದ್ದು ಆರೋಗ್ಯ ಸರಿ ಇಲ್ಲದ ಕಾರಣ ಅವರ ಪರವಾಗಿ ದೂರುದಾರರು ಸ್ಟೆಲ್ಲಾ ಜನೆಟ್ ವಾಸ್ ಇವರ ಹೆಸರಿಗೆ ತತ್ಕಾಲ್ ಪೋಡಿ ಮಾಡಿಕೊಡುವ ಬಗ್ಗೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಪಹಣಿ ವಿಭಾಗದಲ್ಲಿ ಆನ್ ಲೈನ್ ಮುಖಾಂತರ ಜಮೀನಿನ ತಾತ್ಕಾಲ್ ಪೋಡಿಗಾಗಿ ಅರ್ಜಿ ಸಲ್ಲಿಸಿ ಇದಕ್ಕಾಗಿ 1500 ರೂ ಯನ್ನು ಪವಾತಿ ಮಾಡಿ ರಶೀದಿ ಪಡೆದಿದ್ದರು. ಅದರಂತೆ ಫೆಬ್ರವರಿ 29 ರಂದು ಮಂಗಳೂರಿನ ಸರ್ವೇ ಇಲಾಖೆಯಲ್ಲಿ ಕೆಲಸ ಮಾಡುವ ಶೀತಲ್ ರಾಜ್ ಎಂಬ ಸರ್ವೆಯರ್ ಜಮೀನಿನ ಸರ್ವೆ…

Read More

ಚಾಕೊಲೇಟ್ ಎಂದು ಮಾತ್ರೆ ಸೇವಿಸಿ 5 ವರ್ಷದ ಮಗು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಕಡಬನಕಟ್ಟೆ ಗ್ರಾಮದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಕಡಬನಕಟ್ಟೆ ಗ್ರಾಮದ ಪವಿತ್ರಾ ಎಂಬುವವರ ಮಗು ರುತ್ವಿಕ್ (5) ಮೃತಪಟ್ಟಿದೆ. ಪವಿತ್ರಾ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ವೈದ್ಯರಿಂದ ಕೆಲವು ಮಾತ್ರೆಗಳನ್ನು ಪಡೆದು ಮನೆಯಲ್ಲಿ ತಂದಿಟ್ಟುಕೊಂಡಿದ್ದರು. ಮನೆಯಲ್ಲಿ ಆಟವಾಡುತ್ತಿದ್ದ ಮಗು ಚಾಕೊಲೇಟ್ ಎಂದು ಭಾವಿಸಿ ಮಾತ್ರೆಗಳನ್ನು ತಿಂದಿದೆ. ಪರಿಣಾಮ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಪೋಷಕರು ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ವೈದ್ಯರ ಸೂಚನೆ ಮೇರೆಗೆ ಬೆಂಗಳೂರಿನ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ 4 ದಿನಗಳ ಬಳಿಕ ಇಂದು ಮಗು ಮೃತಪಟ್ಟಿದೆ. ಘಟನೆ ಸಂಬಂಧ ಚಿತ್ರದುರ್ಗದ ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಆರೋಪಿ ರಾಜೀವ್ 30ಗ್ರಾಂ ಗೋಲ್ಡ್ ನ ಚಿನ್ನಾಭರಣಗಳನ್ನು ಸ್ಥಳೀಯವಾಗಿ ಬ್ಯಾಂಕು, ಸೊಸೈಟಿಗಳಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣವನ್ನು ಪಡುಬಿದ್ರಿ ಪಿಎಸ್‌ಐ ಪ್ರಸನ್ನ ಮತ್ತು ತಂಡ ಬೇಧಿಸಿದ್ದಾರೆ. ರಾಜೀವ್‌ನಿಗೆ ಸಹಕರಿಸಿದ ಆರೋಪಿಗಳಾದ ಕುಮುಟಾದ ನಿತಿಲ್ ಭಾಸ್ಕರ್ ಶೇಟ್, ಸಂಜಯ್ ಶೇಟ್, ಮತ್ತು ಸಂತೋಷ್ ಶೇಟ್, ಹಾಗೂ ಬೆಳಗಾವಿಯ ಕೈಲಾಸ್ ಗೋರಾಡ, ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಗಳಿಂದ ನಕಲಿ 916 ಹಾಲ್‌ಮಾರ್ಕ್ ಸೀಲ್ ಹಾಕಲು ಬಳಸಲಾಗುತ್ತಿದ್ದ ಸುಮಾರು 3.5 ಲಕ್ಷ ರೂ. ಮೌಲ್ಯದ ಮೆಷಿನ್ ಕಂಪ್ಯೂಟರ್‌ಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ರಾಜೀವ್ 30 ಗ್ರಾಂ ಗೋಲ್ಡ್ ಬಳಸಿ20 ಗ್ರಾಂ ಚಿನ್ನಾಭರಣದೊಂದಿಗೆ ಗಲ್ ರಾಷ್ಟ್ರಕ್ಕೆ ಹೋಗುವ ಮತ್ತು ಅಲ್ಲಿಂದ ವಾಪಾಸಾಗುವ ವೇಳೆ 20 ಗ್ರಾಂ ಶುದ್ಧ ಚಿನ್ನದಾಭರಣವನ್ನೇ ಹಾಕಿಕೊಂಡು ಬರುವ ತನ್ನ ಪ್ಲಾನ್‌ಗೆ ಸಹಕರಿಸಲು ಪ್ರಕರಣದ ಇತರ ಆರೋಪಿಗಳಾದ ನಿತಿಲ್ ಭಾಸ್ಕರ್…

Read More

ಮಂಗಳೂರು: ತುಳುಭಾಷೆಗೆ ಅಧಿಕೃತ ರಾಜ್ಯಭಾಷೆಯ ಸ್ಥಾನಮಾನ ದೊರಕಬೇಕೆಂದು ನಗರದ ಉರ್ವಸ್ಟೋರ್ ನ ತುಳುಭವನದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಶಾಸಕ ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಕ್ಷ, ಜಾತಿ ಬೇಧ ಮರೆತು ಎಲ್ಲರೂ ಒಗ್ಗಟ್ಟಾಗಿ ಪಾಲ್ಗೊಂಡರು. ಜೊತೆಗೆ ತುಳುಭಾಷೆಗೆ ಅಧಿಕೃತ ಸ್ಥಾನಮಾನ ದೊರಕಬೇಕೆಂದು ರಾಜ್ಯ ಸರಕಾರದ ಮೇಲೆ ಒತ್ತಡ ಹಾಕಬೇಕು. ಆ ಬಳಿಕವೂ ಸರಕಾರದಿಂದ ವೇಗ ದೊರಕದಿದ್ದಲ್ಲಿ ಹೋರಾಟ, ಉಪವಾಸ ಸತ್ಯಾಗ್ರಹಕ್ಕೂ ಸನ್ನದ್ಧವಾಗಬೇಕೆಂದು ತೀರ್ಮಾನ ಕೈಗೊಳ್ಳಲಾಯಿತು. ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಬೇರೆ ರಾಜ್ಯಗಳು ಒಂದಕ್ಕಿಂತ ಅಧಿಕ ಭಾಷೆಗಳನ್ನು ಯಾವ ರೀತಿ ಅಧಿಕೃತ ಭಾಷೆಯನ್ನಾಗಿ ಮಾಡಿದರು ಎಂಬ ಸಂಪೂರ್ಣ ವರದಿಯನ್ನು ರಾಜ್ಯ ಸರಕಾರ ಈಗಾಗಲೇ ಪಡೆದಿದೆ. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕ್ಯಾಬಿನೆಟ್ ನಲ್ಲಿ ಆದೇಶಿಸಲು ಮಾತ್ರ ಬಾಕಿಯಿದೆ. 95% ಕೆಲಸಗಳು ಸಂಪೂರ್ಣಗೊಂಡಿದ್ದು, 5% ಕೆಲಸಗಳು ಮಾತ್ರ ಬಾಕಿಯಿದೆ. ಅದು ಕೂಡಾ ಆದಷ್ಟು ಶೀಘ್ರದಲ್ಲಿ ಆಗಬೇಕೆನ್ನುದು ನಮ್ಮ ಆಶಯ ಎಂದು ಹೇಳಿದರು. ಮಾಜಿ…

Read More

ಪುತ್ತೂರು: ಕಳೆದ ಒಂದು ವಾರಗಳ ಹಿಂದೆ ಮಾಣಿ ಮೈಸೂರು ರಾಷ್ಟಿçÃಯ ಹೆದ್ದಾರಿಯ ಪುತ್ತೂರು ನಗರದ ಬೈಪಾಸ್‌ನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಬೀರ್ಮಕಜೆ ಎಂಬಲ್ಲಿನ ನಿವಾಸಿ ಪ್ರಸಾದ್(27) ಮೃತಪಟ್ಟ ಯುವಕ. ನಗರದ ಬೈಪಾಸ್‌ನಲ್ಲಿರುವ ಗ್ಯಾರೇಜ್‌ನಲ್ಲಿ ಮೆಕಾನಿಕ್ ಆಗಿರುವ ಪ್ರಸಾದ್ ಅವರು ಕಳೆದ ಫೆ. 29ರಂದು ತನ್ನ ಬೈಕ್‌ನಲ್ಲಿ ಬರುತ್ತಿದ್ದ ವೇಳೆಯಲ್ಲಿ ಬೈಕ್ ಸ್ಕಿಡ್ ಆಗಿ ಉರುಳಿ ಬಿದ್ದಿತ್ತು. ಈ ಸಂದರ್ಭದಲ್ಲಿ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಛಾಯಾಗ್ರಾಹಕ ಕೊಂಚಾಡಿ ಸಾಗರ್ ದೇವಾಡಿಗ ಅವರ ಮತ್ತೊಂದು ಛಾಯಾಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಮಂಗಳೂರಿನಲ್ಲಿ ಛಾಯಾಗ್ರಾಹಕರಾಗಿ ಹೆಸರು ಮಾಡಿದ್ದ ಸಾಗರ್ ದೇವಾಡಿಗ ಅವರ ಛಾಯಚಿತ್ರಗಳಿಗೆ ಈ ಹಿಂದೆಯೂ ಹಲವು ಪ್ರಶಸ್ತಿ ಲಭಿಸಿತ್ತು. ಇದೀಗ ಅಂತಾರಾಷ್ಟ್ರೀಯು ಪ್ರಶಸ್ತಿ ಲಭಿಸಿದ್ದು, ಕೊಲ್ಕೊತ್ತಾದಲ್ಲಿ ನಡೆದ ಫಸ್ಟ್‌ ಲೈಟ್‌ ಅಂತಾರಾಷ್ಟ್ರೀಯ ಸಲೋನ್ 2024 ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಜಿಲ್ಲೆಯಲ್ಲಿ ಪ್ರಸಿದ್ದಿ ಪಡೆದಿರುವ ಕೊಡಿಯಾಲ್ ತೇರು ಉತ್ಸವದ ಅಪೂರ್ವ ಕ್ಷಣಗಳನ್ನು ಸಾಗರ್ ದೇವಾಡಿಗ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. ಇದು ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇದೀಗ ಚಿನ್ನದ ಪದಕ ಲಭಿಸಿದೆ. ಸಣ್ಣ ಪ್ರಾಯದಲ್ಲೇ ಛಾಯಾಗ್ರಹಣದಲ್ಲಿ ಅಮೊಘ ಸಾಧನೆ ಮಾಡಿರುವ ಸಾಗರ್ ದೇವಾಡಿಗ ಅವರ ಈ ಸಾಧನೆಗೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ

Read More