ಬೆಂಗಳೂರು : ಇನ್ಮುಂದೆ ಸಿಗ್ನಲ್ ಜಂಪ್ ಮಾಡಿದರೆ ಹುಷಾರ್! ಇದನ್ನು ನಾವು ಹೇಳ್ತಾಯಿಲ್ಲ ಸಂಚಾರ ಪೊಲೀಸರೇ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನಿಮಯ ಉಲ್ಲಂಘಿಸಿ ತಪ್ಪಿಸಿಕೊಂಡು ಬಿಡಬಹುದು ಎಂದು ಖುಷಿ ಪಡುವವರಿಗೆ ಇದೊಂದು ಬಿಗ್ ಶಾಕ್.ಹೌದು… ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಚಾಲನೆ, ಹೆಲ್ಮೆಟ್ ಇಲ್ಲದೆ ಸವಾರಿ ಹೀಗೆ ಸಂಚಾರ ನಿಯಮ ಉಲ್ಲಘಿಸಿದ ಎರಡನೇ ನಿಮಿಷದಲ್ಲಿ ನಾಗರಿಕರ ಮುಬೈಲ್‌ಗೆ ದಂಡ ಪಾವತಿಸುವಂತೆ ಸಂದೇಶ ಬರಲಿದೆ. ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ತ್ವರಿತ ಸಂದೇಶ ರವಾನಿಸುವ ಹೊಸ ವ್ಯವಸ್ಥೆಯನ್ನು ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗವು ಜಾರಿಗೊಳಿಸಿದೆ. ಇದಕ್ಕಾಗಿ ಅತ್ಯಾಧುನಿಕ ಕ್ಯಾಮೆರಾಗಳನ್ನು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಸಂಚಾರ ಪೊಲೀಸರು ಅಳವಡಿಸಲಿದ್ದಾರೆ. ಆ ಕ್ಯಾಮೆರಾಗಳು ಸೆರೆಹಿಡಿದ ಫೋಟೋಗಳನ್ನು ಆಧರಿಸಿ ಎರಡು ನಿಮಿಷದಲ್ಲಿ ನಿಯಮ ಉಲ್ಲಂಘಿಸಿದವರಿಗೆ ಸಂದೇಶ ಕಳುಹಿಸಲಿದ್ದಾರೆ.ಈ ಸಂದೇಶದಲ್ಲಿ ಲಿಂಕ್ ಇರುತ್ತದೆ. ಅದರಲ್ಲಿ ಯಾವ ರೀತಿಯ ಸಂಚಾರ ನಿಯಮ ಉಲ್ಲಂಘನೆಯಾಗಿದೆ ಎಂಬ ಫೋಟೋ, ಮಾಹಿತಿ ಇರುತ್ತದೆ.ಅಲ್ಲೇ ದಂಡ ಪಾವತಿಸಬಹುದು. ಈ…
Author: main-admin
ಪುತ್ತೂರು:ಕಬಕ ಸಮೀಪದ ಪೋಳ್ಯದಲ್ಲಿ ಎವಿಯೇಟರ್ ಸ್ಕೂಟರ್ ಮತ್ತು ಮಿನಿ ಟೂರಿಸ್ಟ್ ಬಸ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಫೆ.25ರಂದು ನಡೆದಿದೆ. ಮಾಸ್ಟರ್ ಪ್ಲಾನರಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಅಳಕೆಮಜಲು ನಿವಾಸಿ ಕ್ಲಿಫರ್ಡ್ ಮೊರಾಸ್ ರಾಜ(45ವ. )ಮೃತಪಟ್ಟವರು.ಸ್ಕೂಟರ್ ಸಹಸವಾರರಾಗಿದ್ದ, ಬಿಹಾರ ಮೂಲದವರಾಗಿದ್ದು ಮುರದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯ ಹೊಂದಿರುವ ಸುರೇಂದರ್ (29ವ) ಮತ್ತು ಸನ್ನೀಫ್ (28ವ)ಗಾಯಗೊಂಡಿದ್ದಾರೆ.ಕ್ಲಿಫರ್ಡ್ ಮೊರಾಸ್ ಅವರು ಆದಿತ್ಯವಾರ ಮಾಸ್ಟರ್ ಪ್ಲಾನರಿ ಸಂಸ್ಥೆಗೆ ರಜೆಯಾದ್ದರಿಂದ, ಅಳಕೆಮಜಲಿನಲ್ಲಿ ಖಾಸಗಿ ಕೆಲಸ ನಿರ್ವಹಿಸಲೆಂದು ಬಿಹಾರ ಮೂಲದ ಕಾರ್ಮಿಕರಾದ ಸುರೇಂದರ್ ಮತ್ತು ಸನ್ನೀಫ್‌ರನ್ನು ಕರೆಸಿಕೊಂಡಿದ್ದರು. ರಾತ್ರಿ ವೇಳೆ ಅವರನ್ನು ಮುರ ರೂಮ್ ಗೆ ಬಿಡಲೆಂದು ಸ್ಕೂಟರ್‌ನಲ್ಲಿ ಪುತ್ತೂರು ಕಡೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರಾಜ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಹಾಗೂ ಮಡಿಕೇರಿಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಮಿನಿ ಬಸ್ ನಡುವೆ ಪೋಳ್ಯ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ರಾಜ ಅವರ ತೊಡೆಯ ಮೇಲೆಯೇ…
ಬಂಟ್ವಾಳ: ತರಕಾರಿ ಲಾರಿಯೊಂದು ರಿವರ್ಸ್ ತೆಗೆಯುವ ವೇಳೆ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸಾವನಪ್ಪಿದ ಘಟನೆ ಬಿ.ಸಿ.ರೋಡಿನ ಕೈಕಂಬ ಎಂಬಲ್ಲಿ ನಡೆದಿದೆ. ಮೃತರನ್ನು ಪಾಣೆಮಂಗಳೂರು – ಆಲಡ್ಕದಲ್ಲಿ ವಾಸ್ತವ್ಯವಿದ್ದ ಅಶ್ರಫ್ (32) ಎಂದು ಗುರುತಿಸಲಾಗಿದೆ. ಸ್ನೇಹತನಿಗೆ ಸಹಾಯ ಮಾಡಲು ಬಿಸಿರೋಡ್ ಗೆ ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ. ಅಶ್ರಫ್ ಇಂದು ಮುಂಜಾನೆ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತ ಆಲಡ್ಕ ನಿವಾಸಿ ತನ್ವೀರ್ ಎಂಬವರನ್ನು ತನ್ನ ಸ್ಕೂಟರ್ ನಲ್ಲಿ ಬಿ.ಸಿ.ರೋಡ್ ಕೈಕಂಬದಲ್ಲಿರುವ ಅಂಗಡಿಗೆ ಬಿಡಲು ತೆರಳಿದ್ದರು. ಹಾಗೆ 5:30ರ ಸುಮಾರಿಗೆ ಕೈಕಂಬಕ್ಕೆ ತಲುಪಿದ ಇವರು ತನ್ವೀರ್ ರನ್ನು ಸ್ಕೂಟರ್ ನಿಂದ ಇಳಿಸಬೇಕು ಅನ್ನುವಷ್ಟರಲ್ಲಿ ಅದೇ ಅಂಗಡಿಗೆ ತರಕಾರಿ ತಂದು ಹಿಂದಿರುಗುತ್ತಿದ್ದ ಲಾರಿಯನ್ನು ಅದರ ಚಾಲಕ ಅಜಾಗರೂಕತೆಯಿಂದ ಹಿಂಬದಿಗೆ ಚಲಿಸಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದಾನೆ ಎಂದು ಸ್ಥಳೀಯರು ಆರೋಪಿದ್ದಾರೆ. ಘಟನೆಯಿಂದ ಇಬ್ಬರಿಗೂ ಗಾಯಗಳಾಗಿದ್ದು, ಗಂಭೀರ ಗಾಯಗೊಂಡಿದ್ದ ಅಶ್ರಫ್ ರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ…
ಮೂಡುಬಿದಿರೆ: ಇಲ್ಲಿನ ಕಾಲೇಜೊಂದರ ಪ್ರಥಮ ವರ್ಷದ ಬಿಪಿಟಿ ವಿದ್ಯಾರ್ಥಿನಿ ಕಾಣೆಯಾದ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ. ಬೈಂದೂರು ತಾಲೂಕಿನ ಕೊಲ್ಲೂರಿನ ಆದಿರ (19) ಕಾಣೆಯಾದ ವಿದ್ಯಾರ್ಥಿನಿ. ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಈಕೆ ಎಂದಿನಂತೆ ಶುಕ್ರವಾರ ಬೆಳಗ್ಗೆ ಸಹಪಾಠಿಗಳ ಜತೆ ಸ್ವರಾಜ್ಯ ಮೈದಾನದಲ್ಲಿರುವ ಕಾಲೇಜಿಗೆ ವಿದ್ಯಾಸಂಸ್ಥೆಯ ಬಸ್ಸಿನಲ್ಲಿ ಬಂದು ಕನ್ನಡ ಭವನದ ಬಳಿ ಇಳಿದಿರುವ ಮಾಹಿತಿ ಇದ್ದು ಅನಂತರ ಅಲ್ಲಿಂದ ಕಾಲೇಜಿಗೆ ಹೋಗದೆ ಕಾಣೆಯಾಗಿರುವುದಾಗಿ ತಿಳಿದುಬಂದಿದೆ.ಬಿಳಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು ಕಾಣೆಯಾಗುವ ಸಂದರ್ಭ ಕಾಲೇಜಿನ ಸಮವಸ್ತ್ರ ಧರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ
ಮಂಗಳೂರು: ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಶನಿವಾರ ಮಧ್ಯಾಹ್ನ ನೀರಿನಲ್ಲಿ ಆಟವಾಡುವುದಕ್ಕೆ ತೆರಳಿದ್ದ ವಿದ್ಯಾರ್ಥಿಯೊಬ್ಬ ಸಮುದ್ರಪಾಲಾದ ಘಟನೆ ನಡೆದಿದೆ. ಬೈಕಂಪಾಡಿಯ ಮೀನಕಳಿಯ ಸರ್ಕಾರಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದ ಬಾಲಕ ತುಕರಾಮ(13) ಶಾಲೆ ಬಿಟ್ಟ ಬಳಿಕ ತನ್ನ ಸ್ನೇಹಿತನೊಂದಿಗೆ ಪಣಂಬೂರು ಬೀಚ್ ಗೆ ಬಂದಿದ್ದ. ನೀರಾಟವಾಡುತ್ತಿದ್ದಾಗ ಬೃಹತ್ ಅಲೆಗೆ ಕೊಚ್ಚಿಹೋಗಿ ಮುಳುಗಿ ನಾಪತ್ತೆಯಾಗಿದ್ದಾನೆ. ಬೀಚ್ ನಲ್ಲಿ ವಿದ್ಯಾರ್ಥಿ ಮುಳುಗುತ್ತಿರುವುದನ್ನು ಕಂಡ ಇತರರು ರಕ್ಷಣಾ ದಳಕ್ಕೆ ತಿಳಿಸಿದ್ದಾರೆ. ತತ್ ಕ್ಷಣ ಜೆಟ್ ಸ್ಕೀ ಮೂಲಕ ಕಾಪಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ . ಬಾಲಕ ಉತ್ತರ ಕರ್ನಾಟಕದ ಮೂಲದವರಾಗಿದ್ದು, ಕೆಲ್ಸದ ನಿಮಿತ್ತ ಈತನ ಪೋಷಕರು ಬೈಕಂಪಾಡಿ ಬಳಿಯ ಮೀನಕಳಿಯ ಬಳಿ ವಾಸವಿದ್ದಾರೆ. ಘಟನೆ ಕುರಿತು ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ ಆರೋಪಿಗಳ ಬೆನ್ನು ಹತ್ತಿದ ಕಂಕನಾಡಿ ನಗರ ಠಾಣಾ ಪೊಲೀಸರು ಕೇರಳ ಮೂಲದ ಅಂತಾರಾಜ್ಯ ಸರಗಳ್ಳರನ್ನು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಚೆರ್ಕಳ ಮೂಲದ ಸದ್ಯ ಬಂಟ್ವಾಳದ ಮಿತ್ತಬೈಲ್ ಶಾಂತಿಯಂಗಡಿಯಲ್ಲಿ ನಿವಾಸಿಯಾಗಿದ್ದ ಮೊಹಮ್ಮದ್ ಆಲಿ (32) ಮತ್ತು ಬಿಸಿ ರೋಡ್ ಶಾಂತಿಯಂಗಡಿ ನಿವಾಸಿ ಜುಬೈರ್ (32) ಬಂಧಿತ ಆರೋಪಿಗಳು. ಬಜಾಲ್ ಜೆಎಂ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕತ್ತಿನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಈ ಇಬ್ಬರು ಪರಾರಿಯಾಗಿದ್ದರು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಆರೋಪಿಗಳ ಬೆನ್ನುಬಿದ್ದ ಪೊಲೀಸರು ಇಬ್ಬರನ್ನು ಬಂಧಿಸಿ, ಚಿನ್ನದ ಸರವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಮೊಹಮ್ಮದ್ ಆಲಿ ವಿರುದ್ಧ ಕಾಸರಗೋಡು ಜಿಲ್ಲೆಯ ಬದಿಯಡ್ಕ ಮಂಜೇಶ್ವರ, ಬಂಟ್ವಾಳ, ವಿಟ್ಲ ಮಂಗಳೂರಿನ ಬರ್ಕೆ ಠಾಣೆಗಳಲ್ಲಿ ಮನೆ ಕಳವು, ಸರ ಸುಲಿಗೆ, ಜೈಲಿನಲ್ಲಿ ಹೊಡೆದಾಟ ಸೇರಿ 15 ಪ್ರಕರಣ ದಾಖಲಾಗಿದೆ. ಕಂಕನಾಡಿ ನಗರ ಠಾಣೆಯ ಇನ್ಸ್ ಪೆಕ್ಟರ್…
ಪುತ್ತೂರು: ದೇರಳಕಟ್ಟೆಯ ಖಾಸಗಿ ಯುನಿರ್ವಸಿಟಿಯಲ್ಲಿ ಪಿಹೆಚ್‌ಡಿ ಮಾಡುತ್ತಿದ್ದ ಪುತ್ತೂರಿನ ಚೈತ್ರಾ ನಾಪತ್ತೆಯಾಗಿರುವ ಬಗ್ಗೆ ಫೆ. 17 ರಂದು ಉಳ್ಳಾಲ ಠಾಣೆಗೆ ದೂರು ನೀಡಲಾಗಿದ್ದು, ಇದೀಗ ಆಕೆಯ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದೇರಳಕಟ್ಟೆಯ ಖಾಸಗಿ ವಿವಿಯಲ್ಲಿ ಪಿಹೆಚ್‌ಡಿ ಮಾಡಲು ಅನುಕೂಲವಾಗಲು ಮಾಡೂರಿನಲ್ಲಿ ಪಿಜಿ ಒಂದರಲ್ಲಿದ್ದ ಚೈತ್ರಾ ಅನ್ಯ ಕೋಮಿನ ಯುವಕನ ಜೊತೆ ಸಂಪರ್ಕದಲ್ಲಿ ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪುತ್ತೂರಿನ ಅನ್ಯ ಕೋಮಿನ ಯುವಕನೊಬ್ಬ ಪಿಜಿಗೆ ಭೇಟಿ ನೀಡುತ್ತಿದ್ದ ಎಂಬ ಬಗ್ಗೆ ಮಾಡೂರಿನ ಬಜರಂಗದಳದ ಮುಖಂಡರು ಚೈತ್ರಾ ದೊಡ್ಡಪ್ಪನ ಗಮನಕ್ಕೆ ತಂದಿದ್ದರು. ಡ್ರಗ್ ಮಾಫೀಯಾ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದ ಬಜರಂಗದಳದ ಮುಖಂಡರು ಈ ಬಗ್ಗೆ ಎಚ್ಚರ ವಹಿಸುವಂತೆ ಚೈತ್ರಾ ದೊಡ್ಡಪ್ಪನ ಬಳಿ ಹೇಳಿದ್ದರು. ಇದಾದ ಬಳಿಕ ಚೈತ್ರಾ ನಾಪತ್ತೆಯಾಗಿದ್ದು, ಆಕೆ ಪುತ್ತೂರಿನ ಶಾರೂಕ್ ಶೇಖ್ ಎಂಬಾತನ ಜೊತೆ ಹೋಗಿರುವ ಬಲವಾದ ಅನುಮಾನ ಮೂಡಿದೆ. ಪುತ್ತೂರಿನ ಕೂರ್ನಡ್ಕದ ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದ ಬಂಟ್ವಾಳ ತಾಲೂಕಿನ ನೇರಳಕಟ್ಟೆಯ ಶಾರೂಕ್ ಶೇಖ್ ಗೆ…
ಕಡಬ : ಮನೆ ಎದುರು ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿರುವ ಆರೋಪದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕಡಬದ ಮರ್ಧಾಳ ಶಿವಾಜಿನಗರ ನಿವಾಸಿ ದಿ. ಇಲ್ಯಾಸ್ ಎಂಬವರ ಪುತ್ರ ಫಯಾಜ್ ಎಂಬಾತ ಗುರುವಾರ ಸಂಜೆ ತನ್ನ ತಾಯಿ ಮತ್ತು ಸಹೋದರರೊಂದಿಗೆ ತನ್ನ ಮನೆಯಲ್ಲಿದ್ದ ಸಂದರ್ಭದಲ್ಲಿ ಸುಮಾರು 7 ಗಂಟೆಯ ವೇಳೆಗ ಮನೆಯ ಹತ್ತಿರಕ್ಕೆ ಅಪರಿಚಿತ ಮಹಿಳೆಯೊಬ್ಬಳು ಚಿಕ್ಕ ಮಗುವನ್ನು ಎತ್ತಿಕೊಂಡು ಬಂದಿದ್ದು, ರಿಯಾಝ್ ನ ಮನೆ ಯಾವುದು ಎಂದು ಕೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ಇದು ರಿಯಾಝ್ ನ ಮನೆ ಅಲ್ಲ. ನೀವು ಇಲ್ಲಿಂದ ತೆರಳಿ ಎಂದು ಹೇಳಿದ್ದು, ಆ ಸಮಯದಲ್ಲಿ ಅಪರಿಚಿತ ಮಹಿಳೆಯು ಅಲ್ಲೇ ಮನೆ ಮುಂಭಾಗದಲ್ಲಿ ಅಳುತ್ತಾ ನಿಂತಿದ್ದರು ಎನ್ನಲಾಗಿದೆ. ಆ ಸಂದರ್ಭದಲ್ಲಿ ಫಯಾಝ್ ನ ತಾಯಿ ಅಪರಿಚಿತ ಮಹಿಳೆಯನ್ನು ಸಮಾಧಾನ ಮಾಡಿ ನಂತರ ಮನೆ ಪಕ್ಕದ ಇಬ್ರಾಹಿಂ ಎಂಬ ಹುಡುಗನ ಜೊತೆ ಈ ಮಹಿಳೆಯನ್ನು ಮರ್ಧಾಳ ಬಸ್ಸು ನಿಲ್ದಾಣದ ಹತ್ತಿರ ಬಿಟ್ಟು ಬಾ ಎಂದು ಹೇಳಿದಂತೆ ಆ ಹೆಂಗಸನ್ನು…
ಕಾಸರಗೋಡು: ಹೊಸದುರ್ಗದ ಮಡಿಕೈ ಮೂನುರೋಡ್ ಜಂಕ್ಷನ್ ಬಳಿಯ ಪಿ. ಶೈಜು ಅವರ ಮನೆ ಆವರಣದ 20 ಅಡಿ ಆಳದ ಬಾವಿಗೆ ಬಿದ್ದು ಜೀವನ್ಮರಣದ ಮಧ್ಯೆ ಅರಣ್ಯ ಪಾಲಕರು ರಕ್ಷಿಸಿದ ಕಾಡು ಕೋಣವನ್ನು ಬಳಿಕ ಸ್ಥಳೀಯ ಕಾಡಿಗೆ ಬಿಟ್ಟಿದ್ದರು. ಆದರೆ ಬಳಿಕ ಅದು ಪಳ್ಳಂಜಿ ಮಹಾಗನಿ ತೋಟದ ರಸ್ತೆ ಬಳಿ ಸಾವಿಗೀಡಾಗಿದೆ.ಕುಟ್ಟಿಕ್ಕೋಲ್ ಸರಕಾರಿ ವೆಟರ್ನರಿ ಕೇಂದ್ರದ ಡಾ| ಜಯಕೃಷ್ಣನ್ ಸ್ಥಳಕ್ಕೆ ತೆರಳಿ ಕಳೇಬರವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ.
ವೈಯಕ್ತಿಕ ಅವಶ್ಯಕತೆಗಳಿಗಾಗಿ ಮಹಿಳೆಯೋಬ್ಬರು ಧರ್ಮಸ್ಥಳ ಸಂಘದಲ್ಲಿ ಸಾಲವನ್ನು ಪಡೆದಿದ್ದರು, ಆದರೆ ಸಾಲದ ಕಂತು ಪಾವತಿಸದ ಹಿನ್ನೆಲೆಯಲ್ಲಿ ಧರ್ಮಸ್ಥಳ ಸಂಘದವರು ಮನೆ ಬಳಿ ಬಂದು ಗಲಾಟೆ ಮಾಡಿ ನಿಂದಿಸಿದ ಕಾರಣಕ್ಕೆ ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಶುಕ್ರವಾರ ವರದಿಯಾಗಿದೆ. ಶೃಂಗೇರಿ ಪಟ್ಟಣದ ಹನುಮಂತ ನಗರದ ನಿವಾಸಿ ಅರ್ಪಿತಾ(29) ಮೃತ ಮಹಿಳೆ ಎನ್ನಲಾಗಿದೆ. ಅರ್ಪಿತಾ ಕಳೆದ 6 ತಿಂಗಳ ಹಿಂದೆ ಧರ್ಮಸ್ಥಳ ಸಂಘದಲ್ಲಿ 1 ಲಕ್ಷ ರೂ. ಸಾಲ ಪಡೆದಿದ್ದು, ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡದ ಕಾರಣದಿಂದ ಸಂಘದ ಸದಸ್ಯರು ಶುಕ್ರವಾರ ಬೆಳಗ್ಗೆ ಅರ್ಪಿತಾ ಮನೆಗೆ ತೆರಳಿ ಸಾಲದ ವಿಚಾರವಾಗಿ ಗಲಾಟೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಎರಡೂ ಕಡೆಯವರಿಂದ ವಾಗ್ವಾದ ನಡೆದಿದ್ದು, ಈ ವೇಳೆ ಸಂಘದವರು, ಸಾಲ ಕಟ್ಟಲಾಗದಿದ್ದರೆ, ಎಲ್ಲಾದರು ಹೋಗಿ ಸಾಯಿ ಎಂದು ನಿಂದಿಸಿದ್ದಾರೆ ಎನ್ನಲಾಗಿದ್ದು, ಅರ್ಪಿತಾ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಹಲ್ಲೆ ನಿಂದನೆಯಿಂದ ಮನನೊಂದ ಅರ್ಪಿತಾ ಮನೆಯಲ್ಲಿ ತನ್ನ…