ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಕದ್ದಳೆಂದು ಮಹಿಳೆಗೆ ಥಳಿಸಿದ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಮೀನುಗಾರಿಕೆಗೆ ತೆರಳಿದ ಬೋಟಿನಿಂದ ಬಂದರಿನಲ್ಲಿ ಮೀನು ಖಾಲಿ ಮಾಡುತ್ತಿದ್ದ ವೇಳೆ ಮಹಿಳೆ ದುಬಾರಿ ಸಿಗಡಿ ಮೀನನ್ನು ಕದ್ದಿದ್ದಾಳೆ. ಮೀನು ಕದ್ದಿದ್ದನ್ನು ವಿಚಾರಣೆ ಮಾಡಿದಾಗ ಆಕೆ ಒಪ್ಪಿಕೊಂಡಿಲ್ಲ. ಸ್ಥಳದಲ್ಲಿದ್ದ ಮರಕ್ಕೆ ಕಟ್ಟಿ ಹಾಕಿ ಬೋಟಿಗೆ ಸಂಬಂಧಪಟ್ಟವರು ಥಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಗೆ ಮಹಿಳೆಯನ್ನು ಕರೆತಂದು ವಿಚಾರಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಮಹಿಳೆ ತಾನು ಕದ್ದಿರುವುದಾಗಿ ಒಪ್ಪಿಕೊಂಡು, ದಂಡ ಕಟ್ಟಿದ್ದಾಳೆ. ಬೋಟ್‌ನ ಮಾಲೀಕರು ಮತ್ತು ಮಹಿಳೆಗೆ ಸಂಬಂಧಪಟ್ಟವರು ಕುಳಿತು ರಾಜಿ ಪಂಚಾಯಿತಿ ನಡೆಸಿ ವಾಪಸ್ಸಾಗಿದ್ದಾರೆ. ಘಟನೆಗೆ ಸಿಎಂ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಸಿಎಂ, ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೀನು ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ತಳಿಸಿದ ವೀಡಿಯೋ ಕಂಡು ದಿಗ್ಭ್ರಮೆಯಾಯಿತು. ಕಾರಣವೇನೇ ಇರಲಿ ಒಬ್ಬ ಮಹಿಳೆಯನ್ನು ಈ ರೀತಿ ಕೈಕಾಲು ಕಟ್ಟಿ ಹಲ್ಲೆ…
Author: main-admin
ಕಾರ್ಕಳ: ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು 34 ವರ್ಷ ಬಳಿಕ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ತೆಂಕ ಎಡಪದವಿನ ಲಿಯೋ ರೋಚ್ (64) ಎಂದು ಗುರುತಿಸಲಾಗಿದೆ. ಈತನ ವಿರುದ್ಧ 2004ರಲ್ಲಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 34 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಈತನ ಮೇಲೆ ನ್ಯಾಯಾಲಯವು LPC ವಾರೆಂಟು ಹೊರಡಿಸಿತ್ತು. ಎ.ಎಸ್.ಪಿ ಕಾರ್ಕಳ ಹರ್ಷ ಪ್ರಿಯವಂದಾ ರವರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ಮಂಜಪ್ಪ ಡಿ ಹಾಗೂ ಕಾರ್ಕಳ ನಗರ ಠಾಣಾ ಪಿಎಸ್ಐಗಳಾದ ಸಂದೀಪ್ ಕುಮಾರ್ ಶೆಟ್ಟಿ ಹಾಗು ಶಿವಕುಮಾರ್ ಎಸ್.ಆರ್ ರವರ ಸೂಚನೆಯಂತೆ ಕಾರ್ಕಳ ನಗರ ಠಾಣೆಯ ಹೆಚ್.ಸಿ ರಮೇಶ್ ಹೆಚ್. ಹಾಗೂ ಪಿಸಿ ದರ್ಶನ್ ಅವರು ವಾರೆಂಟ್ ಅಸಾಮಿ ತೆಂಕ ಎಡಪದವಿನ ಲಿಯೋ ರೋಚ್ (64). ನನ್ನು ಮಾರ್ಚ್ 19 ರಂದು ಇವರು ವಾರೆಂಟ್ ಅಸಾಮಿಯನ್ನು ಮಂಗಳೂರಿನ ಪಜೀರ್‌ನಲ್ಲಿ ಬಂಧಿಸಿದ್ದಾರೆ.…
ಕುಂದಾಪುರ: ಯಕ್ಷಗಾನದ ವೇಷದ ವಿಚಾರದಲ್ಲಿ ಕಿರಿಯ ಕಲಾವಿದನಿಗೆ ಕಲಾವಿದ ಹಲ್ಲೆ ನಡೆಸಿದ ಘಟನೆ ಮಾ. 18ರಂದು ಮಂಗಳವಾರ ರಾತ್ರಿ ಬೈಂದೂರು ತಾಲೂಕಿನ ಎಳ್ಳೂರಿನಲ್ಲಿ ಸಂಭವಿಸಿದೆ. ಮಾರಣಕಟ್ಟೆ ಯಕ್ಷಗಾನ ಮೇಳದ ಬಿ ತಂಡದಿಂದ ಮಾ. 18 ರಂದು ಬೈಂದೂರು ತಾಲೂಕಿನ ಎಳ್ಳೂರಿನಲ್ಲಿ “ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ” ಯಕ್ಷಗಾನ ನಡೆದಿತ್ತು. ಈ ವೇಳೆ ನಂದಿ ವೇಷ ಮಾಡುವ ವಿಚಾರದಲ್ಲಿ ಕಲಾವಿದ ಸ್ತ್ರೀ ವೇಷದಾರಿ ಪ್ರದೀಪ್ ನಾರ್ಕಳಿ ಮತ್ತು ಕಲಾವಿದ ಪ್ರದೀಪ್ ನಾಯ್ಕ್ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆಗಿತ್ತು. ಇದೇ ಕಾರಣಕ್ಕೆ ಬೆಳಗಿನ ಜಾವಾ ಆಟ ಮುಗಿದ ಮೇಲೆ ಕಲಾವಿದ ಪ್ರದೀಪ್ ನಾಯ್ಕ್ ಮನೆಗೆ ಹೋಗುವ ಸಂದರ್ಭದಲ್ಲಿ ರಾತ್ರಿ ನಡೆದ ವಿಚಾರವನ್ನು ತಗಾದೆ ತೆಗೆದು ಮೇಳೆದ ಚೌಕಿಯಲ್ಲಿ ಪ್ರದೀಪ್ ನಾರ್ಕಳಿ ಪ್ರದೀಪ್ ನಾಯ್ಕ್ ಗೆ ಕೈ ಯಿಂದ ಹಲ್ಲೆ ಮಾಡಿರುತ್ತಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ಹಲ್ಲೆ ನಡೆಸಿದ ಹಿರಿಯ ಕಲಾವಿದನ ಮೇಲೆ ತೀವ್ರ ಆಕ್ರೋಶ…
ಉಡುಪಿ: ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ ನಡೆದಿದೆ ಎನ್ನಲಾದ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಹಲ್ಲೆ ನಡೆಸಿದವರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಹಿಳೆ ಒಂದು ಬುಟ್ಟಿ ಮೀನು ಕದ್ದಿರುವುದಾಗಿ ಆರೋಪಿಸಲಾಗಿದೆ. ಬಳಿಕ ಆಕೆಯನ್ನು ಹಿಡಿದು ಮಹಿಳೆಯೊಬ್ಬರು ಕಪಾಳಕ್ಕೆ ಹೊಡೆಯುವ ದೃಶ್ಯಗಳು ವಿಡಿಯೋದಲ್ಲಿ ಕಂಡು ಬಂದಿವೆ. ಬಳಿಕ ಆಕೆಯನ್ನು ಮರಕ್ಕೆ ಕಟ್ಟಿ ಹಾಕಿ ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ಬೈದು ಕಪಾಳಕ್ಕೆ ಎರಡು ಬಾರಿ ಹಲ್ಲೆ ನಡೆಸಿರುವುದಾಗಿ ವಿಡಿಯೋದಲ್ಲಿದೆ. ಇದೀಗ ಈ ವಿಡಿಯೋ ವೈರಲ್ ಆಗಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮಲ್ಪೆ ಪೊಲೀಸರು ತನಿಖೆ ನಡೆಸುತಿದ್ದಾರೆ. ಅಲ್ಲದೆ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಟ್ಲ: ಡ್ರೆಸ್ ಶಾಪ್ ನಲ್ಲಿ ಒಂಟಿ ಮಹಿಳೆ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಅಂಗಡಿಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿದ ನವೀನ್ ಕುಂಪಲ ಮತ್ತು ಇತರ ಮೂರು ಮಂದಿಯ ತಂಡ, ಆಕೆಯನ್ನು ಬೆದರಿಸಿ ಅಂಗಡಿಯಲ್ಲಿದ್ದ ಬಟ್ಟೆ ಮತ್ತು ಇತರ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ವಿಟ್ಲ ಶಾಲಾ ರಸ್ತೆ ಬಳಿ ನಡೆದಿದೆ. ಮಾರ್ಚ್ 18 ರಂದು ಮಧ್ಯಾಹ್ನ ವೇಳೆ ಘಟನೆ ನಡೆದಿದೆ. ಏಕಾಏಕಿ ಅಂಗಡಿಗೆ ಅಕ್ರಮ ಪ್ರವೇಶಿಸಿದ ನಾಲ್ಕು ಮಂದಿಯ ತಂಡ, ಅಂಗಡಿಯಲ್ಲಿದ್ದ ವಸ್ತುಗಳನ್ನು ಹಾಗೂ ಬಟ್ಟೆಯನ್ನು ತಮ್ಮ ಬ್ಯಾಗಿನೊಳಗೆ ತುಂಬಿಸಿ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾಗ ಮಹಿಳಾ ಸಿಬ್ಬಂದಿಯು ಯಾಕೆ ಬಟ್ಟೆಗಳನ್ನು ತುಂಬಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆರೋಪಿಗಳು “ನಿನಗೆ ಎಷ್ಟು ಕೆಲಸವಿದೆಯೋ ಅಷ್ಟೇ ಮಾಡು, ನಮ್ಮ ಸುದ್ದಿಗೆ ಬಂದ್ರೆ ಜಾಗ್ರತೆ” ಎಂದು ಬೆದರಿಸಿ ಬಲಾತ್ಕಾರದಿಂದ ಬಟ್ಟೆ ಮತ್ತು ವಸ್ತುಗಳನ್ನು ಕೊಂಡೊಯ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು : ಮುಖ್ಯಮಂತ್ರಿ ಪದಕ ಪ್ರಧಾನ ಸಮಾರಂಬದಲ್ಲಿ ಪಾಲ್ಗೊಳ್ಳುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಸುತ್ತೋಲೆಯಲ್ಲಿ 2022, 2023 ಮತ್ತು 2024ನೇ ಸಾಲಿನ ಮುಖ್ಯಮಂತ್ರಿ ಪದಕ ವಿಜೇತರು ದಿನಾಂಕ: 02.04.2025ರಂದು ನಡೆಸುವ ಪೊಲೀಸ್ ಪ್ಲಾಗ್ ದಿನ Police Flag Day ದಿನದಂದು ಬಾಗವಹಿಸುವ ಸಂಬಂಧ 3ನೇ ಪಡೆ ಕಮಾಂಡೆಂಟ್, ಕೆ.ಎಸ್.ಆರ್.ಪಿ ಕವಾಯಿತ್ ಮೈದಾನ, ಬೆಂಗಳುರು ರವರ ಮುಂದೆ ದಿನಾಂಕ:27.03.2025ರಂದು ಮದ್ಯಾಹ್ನ 03 ಗಂಟೆಗೆ ವರದಿ ಮಾಡಿಕೊಂಡು ದಿನಾಂಕ: 28.03.2025 ರಿಂದ 31.03.2025ರವರೆಗೆ ಪೂರ್ವಾಬ್ಯಾಸ ಕೈಗೊಳ್ಳಲು ಈ ಮೂಲಕ ಸೂಚಿಸಲಾಗಿದೆ. ಇದರೊಂದಿಗೆ 2022 & 2023 ನೇ ಸಾಲಿನ ಮಾನ್ಯ ಮುಖ್ಯಮಂತ್ರಿ ಪದಕ ನಿಜೇತರ ಪಟ್ಟಿಗಳನ್ನು ಲಗತ್ತಿಸಿದೆ ಅಂತೆಯೇ 2024ನೇ ಸಾಲಿನ ಮುಖ್ಯಮಂತ್ರಿ ಪದಕ ವಿಜೇತರ ಮಾಹಿತಿಯನ್ನು ಕಳುಹಿಸಲಾಗುವುದು.
ಉಡುಪಿ: ಇಸ್ಪೀಟು ಜುಗಾರಿ ಅಂದರ್-ಬಾಹರ್ ಆಡುತ್ತಿದ್ದ ವೇಳೆ ಪೊಲೀಸ್ ದಾಳಿ ನಡೆಸಿ ಏಳು ಮಂದಿಯನ್ನು ವಶಕ್ಕೆ ಪಡೆದ ಘಟನೆ ಬೀಡನಗುಡ್ಡೆ ಮಹಾತ್ಮಗಾಂಧಿ ಬಯಲು ರಂಗ ಮಂದಿರದ ಬಳಿ ನಡೆದಿದೆ. ಬಂಧಿತರನ್ನು ನಾಗರಾಜ್, ಯಮುನಪ್ಪ, ಮಂಜುನಾಥ, ಅಮಿನ್ ಸಾಬ್, ಸಿದ್ದಪ್ಪ, ಗುರು, ಪರಶುರಾಮ ಎಂದು ಗುರುತಿಸಲಾಗಿದೆ. ಬೀಡನಗುಡ್ಡೆ ಮಹಾತ್ಮಗಾಂಧಿ ಬಯಲು ರಂಗ ಮಂದಿರದ ಬಳಿ ಮಾ.16ರಂದು ಇಸ್ಪೀಟು ಜುಗಾರಿ ಅಂದರ್-ಬಾಹರ್ ಆಡುತ್ತಿದ್ದ ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು 32,800ರೂ. ನಗದು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೌಜನ್ಯ ನ್ಯಾಯಕ್ಕಾಗಿ ಶಾಂತಿಯುತ ಪ್ರತಿಭಟನೆ, ಸಭೆಗಳನ್ನು ನಡೆಸಬಹುದು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಮಂಗಳವಾರ ಸಂಜೆ ಎಐಟಿಯುಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಸೌಜನ್ಯ ನ್ಯಾಯಕ್ಕಾಗಿ ಸಮಾಲೋಚನಾ ಸಭೆಯನ್ನು ನಿಲ್ಲಿಸುವಂತೆ ಶೇಷಾದ್ರಿಪುರ ಪೊಲೀಸರು ನೀಡಿದ್ದ ನೋಟಿಸ್ ಬಗೆಗಿನ ರಿಟ್ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಈ ಆದೇಶ ನೀಡಿದ್ದಾರೆ. ಸಾಹಿತಿ-ಚಿಂತಕ- ಹೋರಾಟಗಾರರ ಸಮಾಲೋಚನಾ ಸಭೆಯ ಸಂಚಾಲಕರದಲ್ಲೊಬ್ಬರಾದ ವಿನಯ್ ಶ್ರೀನಿವಾಸ್ ಮತ್ತು ವಿಜಯಭಾಸ್ಕರ್ ಪರವಾಗಿ ಹಿರಿಯ ನ್ಯಾಯವಾದಿ ಶ್ರುತಿ ಚಗಂತಿ ರಿಟ್ ಪಿಟೀಷನ್ ಸಲ್ಲಿಸಿದ್ದರು. ರಿಟ್ ಪಿಟೀಷನ್ ಅರ್ಜಿಯ ವಿಚಾರಣೆ ನಡೆಸಿದ ಜಸ್ಟಿಸ್ ಎಂ ನಾಗಪ್ರಸನ್ನ “ಪೊಲೀಸರು, ಸರ್ಕಾರ ಸಭೆಯನ್ನು ಪ್ರತಿಭಟನೆಯನ್ನು ಯುವಂತಿಲ್ಲ. ಆದರೆ ಕಾನೂನು ಉಲ್ಲಂಘನೆಯಾದರೆ ಮಾತ್ರ ಪೊಲೀಸರು ಕ್ರಮ ತೆಗೆದುಕೊಳ್ಳಬಹುದು. ಪ್ರತಿಭಟನೆಗಳನ್ನು ಊಹೆಯ ಆಧಾರದಲ್ಲಿ ತಡೆಯುವಂತಿಲ್ಲ” ಎಂದು ಆದೇಶ ನೀಡಿದ್ದಾರೆ.
ಮುಲ್ಕಿ: ಭೀಕರವಾದ ಅಪಘಾತ ಸಂಭವಿಸಿದ್ದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ವೇಗವಾಗಿ ಬಂದಂತಹ ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲೆ ಸಂಚರಿಸುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಕಿನ್ನಿಗೋಳಿ ಎಂಬ ಗ್ರಾಮದಲ್ಲಿ ನಡೆದಿದೆ. ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ದುರ್ಮರಣ ಹೊಂದಿರುವ ಘಟನೆ ಕಿನ್ನಿಗೋಳಿ ಬಳಿಯ ಭಟ್ಟಕೋಡಿಯಲ್ಲಿ ಒಂದು ಭೀಕರ ಅಪಘಾತ ಸಂಭವಿಸಿದೆ.ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಆತ್ಮಾನಂದ (27) ನವೀನ್ ಹೂಗಾರ (26) ಮೃತ ಬೈಕ್ ಸವಾರರು ಎಂದು ತಿಳಿದುಬಂದಿದೆ. ಮೃತರು ಧಾರವಾಡ ಜಿಲ್ಲೆಯ ಕಲ್ಲೂರಿನ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪಘಾತದ ಕುರಿತು ಪ್ರಕರಣ ದಾಖಲಾಗಿದೆ.
ಮಂಗಳೂರು: ಫೇಸ್‌ಬುಕ್ ಖಾತೆಯೊಂದರಿಂದ ಬಂದ ಮೆಸೇಜ್ ನಂಬಿ ಮಹಿಳೆಯೊಬ್ಬರು 7.10 ಲಕ್ಷ ರೂ. ಕಳೆದುಕೊಂಡು ಮೋಸ ಹೋಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರೆಗೆ ಡಾ| ತುಷಾರ್ ಪಾಟೀಲ್ ಎನ್ನುವ ಹೆಸರಿನ ಫೇಸ್‌ಬುಕ್ ಖಾತೆಯಿಂದ ಹಾಯ್ ಎನ್ನುವ ಮೆಸೇಜ್ ಬಂದಿದ್ದು, ತಾನು ಯು ಹೆಲ್ತ್ ಮಿಯಾಮಿ ಫ್ಲೋರಿಡಾದಲ್ಲಿ ನ್ಯೂರೋರಜಿಸ್ಟ್ ಆಗಿದ್ದೇನೆ. ಮದುವೆ ಅಗಿ ವಿಚ್ಛೇದನವಾಗಿದ್ದು, ಒಂದು ಮಗುವಿದೆ ಎಂದು ತಿಳಿಸಿದ್ದ. ಬಳಿಕ ವಾಟ್ಸಾಪ್ ಸಂಖ್ಯೆ ಪಡೆದು ಅದಕ್ಕೆ ಮೆಸೇಜ್ ಮಾಡಿ, ನಿಮ್ಮ ಸ್ನೇಹಕ್ಕಾಗಿ ಗಿಫ್ಟ್ ಆಗಿ ಪ್ಲಾಟಿನಂ ವಾಚ್, ಡೈಮಂಡ್, ಲ್ಯಾಪ್‌ಟಾಪ್, ಐಫೋನ್, 90 ಸಾವಿರ ಯುಎಸ್ ಡಾಲರ್ ಹಾಗೂ ಬಂಗಾರ ಕಳುಹಿಸಿಕೊಡುತ್ತೇನೆ. ವಿಮಾನ ನಿಲ್ದಾಣದಿಂದ ಕರೆ ಬರಲಿದೆ ಎಂದು ತಿಳಿಸಿದ್ದಾನೆ. ಅದರಂತೆ ಮರುದಿನ ಕರೆ ಬಂದಿದ್ದು, ಕರೆ ಮಾಡಿದವರು ಡಾ| ತುಷಾರ್ ಪಾಟೀಲ್ ಅವರಿಂದ ಗಿಫ್ಟ್ ಬಂದಿದೆ. ಸೆಕ್ಯೂರಿಟಿ ಡಿಪಾಸಿಟ್ ಹಾಗೂ ಲಾಂಡರಿಂಗ್ ಕ್ಲಿಯರೆನ್ಸ್‌ಗಾಗಿ ಹಣ ಕಳುಹಿಸುವಂತೆ ತಿಳಿಸಿದ್ದಾರೆ. ಇದನ್ನು ನಂಬಿ ವಿವಿಧ ಖಾತೆಗಳಿಗೆ 7.10 ಲಕ್ಷ ರೂ.…



