ಬೆಂಗಳೂರು : ರಾಜ್ಯದಲ್ಲಿ ವಿಐಪಿ ಸಂಚಾರದ ವೇಳೆ ಸೈರನ್ ಬಳಕೆಗೆ ಕಡಿವಾಣ ಹಾಕುವ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.ಸೈರನ್ಗಳನ್ನು ಕೇವಲ ತುರ್ತು ಸೇವಾ ವಾಹನಗಳಾದ ಅಂಬ್ಯುಲೆನ್ಸ್, ಪೊಲೀಸ್ ವಾಹನಗಳು ಮತ್ತು ಅಗ್ನಿಶಾಮಕ ವಾಹನಗಳು ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಬಳಸಬೇಕು. ಈ ಅದೇಶವನ್ನು ಘಟಕಾಧಿಕಾರಿಗಳು ಸಂಪೂರ್ಣವಾಗಿ ಪಾಲಿಸುವಂತೆ ತಮ್ಮ ಅಧೀನದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸುವುದು ಎಂದು ಸೂಚನೆ ನೀಡಲಾಗಿದೆ. ಗಣ್ಯ ವ್ಯಕ್ತಿಗಳ ಸಂಚರಣೆ ಸಮಯದಲ್ಲಿ ಅನವಶ್ಯಕವಾಗಿ ಸೈರನ್ ಬಳಕೆ ಮಾಡುವುದರಿಂದ ಗಣ್ಯ ವ್ಯಕ್ತಿಗಳು ಯಾವ ರಸ್ತೆಯಲ್ಲಿ ಚಲಿಸುತ್ತಿದ್ದಾರೆ ಎಂಬ ಬಗ್ಗೆ ಅನಧಿಕೃತ ವ್ಯಕ್ತಿಗಳಿಗೆ ಮಾಹಿತಿ ರವಾನೆಯಾಗುವುದಲ್ಲದೆ ಗಣ್ಯ ವ್ಯಕ್ತಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಇದಲ್ಲದೆ, ಅನಗತ್ಯ ಸೈರನ್ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಲ್ಲದೇ ಶಬ್ದ ಮಾಲಿನ್ಯವೂ ಉಂಟಾಗುತ್ತದೆ. ಸಾರ್ವಜನಿಕ ರಸ್ತೆಗಳ ಮೇಲೆ ಹಠಾತ್ತಾಗಿ ಸೈರನ್ ಬಳಸುವುದರಿಂದ ಇತರ ವಾಹನ ಚಾಲಕರಿಗೆ ದ್ವಂದ್ವ ಉಂಟಾಗಿ ಯಾವ ಕಡೆಗೆ ಚಲಿಸಬೇಕೆಂಬುದು ತಿಳಿಯದೆ ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಿಸಿ ಬೆಂಗಾವಲು ಮತ್ತು ಇತರ ವಾಹನಗಳಿಗೆ ಗೊಂದಲ ಉಂಟುಮಾಡುವ…
Author: main-admin
ಮಂಗಳೂರು: ಹಲವರಿಗೆ ಕೋಟ್ಯಂತರ ಹಣ ವಂಚಿದ ಆರೋಪಿ ಕಂಕನಾಡಿ ಬೊಳ್ಳಗುಡ್ಡೆ ನಿವಾಸಿ ರೋಶನ್ ಸಲ್ಡಾನ ನನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದ್ದು, ಜು.23ರಂದು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ವಂಚನೆಗೊಳಗಾದವರು ಇದೀಗ ಪೊಲೀಸರಿಗೆ ದೂರು ನೀಡುತ್ತಿದ್ದಾರೆ. ಬಿಹಾರ ಮೂಲದ ಉದ್ಯಮಿ ಯೊಬ್ಬರಿಗೆ ಭೂ ಖರೀದಿ ವಿಚಾರದಲ್ಲಿ 10 ಕೋಟಿ ರೂ. ವಂಚಿಸಿರುವುದಾಗಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಲಾಗುವುದು ಆಯುಕ್ತರು ಮಾಹಿತಿ ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸುವಂತೆ ಈ ಮೊದಲು ಸಿಐಡಿಗೆ ಪತ್ರ ಬರೆಯಲಾಗಿತ್ತು. ಸಿಐಡಿ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ ಎಂದು ಅವರು ಹೇಳಿದ್ದಾರೆ. ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ತನಗೆ ರೋಶನ್ 1 ಕೋ.ರೂ. ವಂಚನೆ ಮಾಡಿರುವುದಾಗಿ ಆರೋಪಿಸಿ ದೂರು ನೀಡಿದ್ದಾರೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದ ಉದ್ಯಮಿಯೊಬ್ಬರು ರೂ 5 ಕೋಟಿ ಹಣವನ್ನು ಜು.16ರಂದು…
ವಿಟ್ಲ: ಮಿನಿ ಟಿಪ್ಪರ್ ಮತ್ತು ಆಲ್ಟೊ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಗಂಡ- ಹೆಂಡತಿ ಸಹಿತ ಮಗು ಗಂಭೀರ ಗಾಯಗೊಂಡ ಘಟನೆ ಕೆಲಿಂಜದಲ್ಲಿ ನಡೆದಿದೆ. ಕಲ್ಲಡ್ಕದಿಂದ ವಿಟ್ಲ ಕಡೆ ಬರುತ್ತಿದ್ದ ಆಲ್ಟೊ ಕಾರಿಗೆ ವಿಟ್ಲದಿಂದ ಕಲ್ಲಡ್ಕ ಕಡೆ ಚಲಿಸುತ್ತಿದ್ದ ಮಿನಿ ಟಿಪ್ಪರ್ ನಡುವೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರಿನಲ್ಲಿದ್ದ ಗಂಡ ಹೆಂಡತಿ ಮಗು ಗಂಭೀರ ಗಾಯಗೊಂಡಿದ್ದಾರೆ. ಗಾಯಳುಗಳನ್ನು ಅನಂತಾಡಿ ಆಶ್ವತ್ತಡಿ ಮೂಲದದವರೆಂದು ಗುರುತಿಸಲಾಗಿದೆ. ಘಟನೆಯಲ್ಲಿ ಕಾರು ನಜ್ಜು ಗುಜ್ಜಾಗಿದ್ದು , ಗಾಯಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಬಂಟ್ವಾಳ: ಪೋಲಿಸ್ ಉಪನೀರಿಕ್ಷರುಗಳ ವರ್ಗಾವಣೆ ಆದೇಶವನ್ನು ಸರಕಾರ ಹೊರಡಿಸಿದ್ದು ಬಂಟ್ವಾಳ ನಗರ ಪೋಲಿಸ್ ಠಾಣೆಯ ಎಸೈ ಆಗಿ ಕಾರ್ಕಳ ಮೂಲದ ದಕ್ಷ ಪ್ರಾಮಣಿಕ ಜನಸ್ನೇಹಿ ಅಧಿಕಾರಿ ಸಂದೀಪ್ ಶೆಟ್ಟಿ ಅವರನ್ನು ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ ಸಂದೀಪ್ ಶೆಟ್ಟಿಯವರು ಈ ಹಿಂದೆ ವಿಟ್ಲ ಪೋಲಿಸ್ ಠಾಣೆಯ ಎಸೈ ಆಗಿ ಜನಸ್ನೇಹಿ ಪೋಲಿಸ್ ಅಧಿಕಾರಿಯಾಗಿ ವಿಟ್ಲದಲ್ಲಿ ಕಾರ್ಯನಿರ್ವಹಿಸಿ ಜನರ ಪ್ರಶಂಸನೀಯಗೆ ಪಾತ್ರರಾಗಿದ್ದರು..
ಮಂಗಳೂರು: ಇನ್‌ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡ ಅಪ್ರಾಪ್ತ ಬಾಲಕಿಗೆ ಆಮಿಷವೊಡ್ಡಿ, ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರು ಯುವಕರನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಉಡುಪಿಯ ಬಡಗುಬೆಟ್ಟುವಿನ ಬಸ್ ಕಂಡಕ್ಟರ್ ದೀಪಕ್ (19) ಮತ್ತು ಆತನ ಸ್ನೇಹಿತ, ಪರ್ಕಳ, ಅತ್ರಾಡಿ ನಿವಾಸಿ ನವೀನ್ ಶೆಟ್ಟಿ (21) ಎಂದು ಗುರುತಿಸಲಾಗಿದೆ.ಪೊಲೀಸರ ಪ್ರಕಾರ, ಆರೋಪಿಗಳು ಜುಲೈ 19 ರಂದು ಬಪ್ಪನಾಡು ಬಳಿಯಿಂದ ಸ್ಕೂಟರ್‌ನಲ್ಲಿ ಬಾಲಕಿಯನ್ನು ಅಪಹರಿಸಿ ಉಡುಪಿಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಂಗಳೂರು : ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನೆ ಮಿಲಾಗ್ರಿಸ್ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ನೆರವೇರಿತು. ಮಿಲಾಗ್ರಿಸ್ ವಿದ್ಯಾ ಸಂಸ್ಥೆಯ ಸಂಚಾಲಕರು ವಂದನೀಯ ಗುರು ಬೊನವೆಂಚರ್ ನಜರೆತ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವೃಧ್ದಿಸಿಕೊಳ್ಳುವುದು. ನಾಯಕನಾದವನು ಶಿಸ್ತುಬದ್ಧತೆ, ಸಮಯದ ಪಾಲನೆ ಉತ್ತಮ ನಡೆ ನುಡಿ ಹೊಂದಿ ಇತರರಿಗೆ ಮಾಧರಿಯಾಗಬೇಕೆಂದು ಹೇಳಿದರು. ಮುಖ್ಯ ಅತಿಥಿಯಾದ ಮಿಲಾಗ್ರಿಸ್ ಪದವಿ ಕಾಲೇಜಿನ ಪ್ರ‍್ರಾಂಶುಪಾಲರಾದ ವಂದನೀಯ ಗುರು ಮೈಕಲ್ ಸಾಂತುಮಾಯರ್ ಹಾಗೂ ಶ್ರೀ ಸಿಲ್ವೆಸ್ಟರ್ ಮಸ್ಕರೇನಸ್, ಉಪಾಧ್ಯಕ್ಷರು, ಪ್ಯಾರಿಷ್ ಪಾಸ್ಟೋರಲ್ ಕೌನ್ಸಿಲ್ ಮಿಲಾಗ್ರಿಸ್ ಚರ್ಚ್,್ಲ ಉಪಸ್ಥಿತರಿದ್ದರು.ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಶ್ರೀ ಮೇಲ್ವಿನ್ ವಾಸ್‌ವರು ನೂತನ ವಿದ್ಯಾರ್ಥಿ ಸಂಘದ ನಾಯಕರಿಗೆೆ ಪ್ರತಿಜ್ಞಾ ವಿಧಿ ಬೋಧಿಸಿದರು. ಶ್ರೀಮತಿ ಜ್ಯೋತಿ ರತ್ನ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಪುಲ್ ಶೆಟ್ಟಿ ವಂದಿಸಿದರು. ಶ್ರೀಮತಿ ಶೆರೆಲ್ ಡಿಸೋಜ ನಿರೂಪಿಸಿದರು. ಈ ಕಾರ್ಯಕ್ರಮ ಕಾಲೇಜು ಗೀತೆಯೊಂದಿಗೆ ಮುಕ್ತಾಯಗೊಂಡಿತು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಖೀರಪ್ಪ ಎಂಬವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಖೀರಪ್ಪ ಕಳೆದ ನಾಲ್ಕು ತಿಂಗಳಿನಿಂದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಉತ್ತರ ಕನ್ನಡದ ಕಾರವಾರ ಮೂಲದವರಾಗಿದ್ದು, ದಿನಾಂಕ 19.07.2025 ರಂದು ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸಿದ್ದರು, ರವಿವಾರ ಬೆಳಿಗ್ಗೆ ಠಾಣೆಯಿಂದ ಕರೆ ಮಾಡಿದಾಗ ಸ್ವೀಕರಿಸದ ಹಿನ್ನಲೆ ಠಾಣಾ ಸಿಬ್ಬಂದಿ ಮನೆಗೆ ತೆರಳಿ ಪರಿಶೀಲಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈಯುಕ್ತಿಕ ಹಾಗೂ ಹಣಕಾಸಿನ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
‘ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಆರೋಪ ಪ್ರಕರಣ’ವನ್ನು ವಿಶೇಷ ತನಿಖಾ ತಂಡ(ಎಸ್.ಐ.ಟಿ)ಕ್ಕೆ ವರ್ಗಾಯಿಸಿ ರಾಜ್ಯ ಸರಕಾರ ಶನಿವಾರ (ಜು.19) ಆದೇಶಿಸಿದೆ ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಶೀಘ್ರದಲ್ಲೇ ವಿಶೇಷ ತನಿಖಾ ತಂಡವು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಠಾಣಾ ಅ.ಕ್ರ 39/2025ಕ್ಕೆ ಸಂಬಂಧಿಸಿದಂತೆ, ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಿ ದಿನಾಂಕ 19.07.2025 ರಂದು ಮಾನ್ಯ ಕರ್ನಾಟಕ ಸರ್ಕಾರವು ಅದೇಶಿಸಿರುತ್ತದೆ. ಶೀಘ್ರದಲ್ಲೇ ವಿಶೇಷ ತನಿಖಾ ತಂಡವು ಪ್ರಕರಣವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ” ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಶೇಷ ತನಿಖಾ ಸಂಸ್ಥೆ (SIT) ಯ ಮುಖ್ಯಸ್ಥರಾಗಿ ಐಪಿಎಸ್ ಪ್ರಣವ ಮೋಹಾಂತಿ ಹಾಗೂ ಸದಸ್ಯರಾಗಿ ಐಪಿಎಸಸ್‌ಗಳಾದ ಎಂ.ಎನ್.ಅನುಚೇತ್, ಸೌಮ್ಯಲತ, ಜಿತೇಂದ್ರ ಕುಮಾರ್ ದಯಾಮ ರವರನ್ನು ಸರಕಾರ ನೇಮಿಸಿದೆ.
ತನಗೆ ಹೆಣ್ಣು ಸಿಗುತ್ತಿಲ್ಲ ಎಂಬುದಾಗಿ ಮನನೊಂದು ಹೋಂಗಾರ್ಡ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಜೆಬಿ ಹಳ್ಳಿಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಜೆ.ಬಿ ಹಳ್ಳಿಯಲ್ಲಿ ಹೋಂಗಾರ್ಡ್ ತಿರುಮಲ(31) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ನೇಣಿಗೆ ಹೋಂಗಾರ್ಡ್ ತಿರುಮಲ ಶರಣಾಗಿದ್ದಾರೆ. ಇತ್ತೀಚೆಗೆ ಮೂರು ಕಡೆಯಲ್ಲಿ ತಿರುಮಲ ಹೆಣ್ಣು ನೋಡಿಕೊಂಡು ಬಂದಿದ್ದರು. ಅವರಲ್ಲಿ ಯಾರೂ ಒಪ್ಪದ ಹಿನ್ನಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಗಳೂರು : ಹಲವರಿಗೆ ಕೋಟ್ಯಂತರ ಹಣ ವಂಚಿದ ಆರೋಪಿ ಕಂಕನಾಡಿ ಬೊಳ್ಳಗುಡ್ಡೆ ನಿವಾಸಿ ರೋಶನ್ ಸಲ್ದಾನ (43) ಎಂಬಾತನಿಂದ ವಂಚನೆಗೊಳಗಾದ ಮಹಾರಾಷ್ಟ್ರ ಮತ್ತು ಅಸ್ಸಾಂನ ಇಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಮಹಾರಾಷ್ಟ್ರದ ಉದ್ಯಮಿಯೊಬ್ಬರು 5 ಕೋಟಿ ರೂ. ಹಣವನ್ನು ಜು.16ರಂದು ಮತ್ತು ಅಸ್ಸಾಂ ರಾಜ್ಯದ ವ್ಯಕ್ತಿಯೊಬ್ಬರು 20 ಲಕ್ಷ ರೂ. ಹಣವನ್ನು ಜು.17 ಬ್ಯಾಂಕ್ ಮೂಲಕ ಆರೋಪಿಯ ಖಾತೆಗೆ ವರ್ಗಾಯಿಸಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿ ವಿರುದ್ಧ ಇವರು ನೀಡಿದ ದೂರಿನಂತೆ ಇನ್ನೊಂದು ಎಫ್‌ಐಆರ್ ದಾಖಲಾಗಿದೆ. ಮಹಾರಾಷ್ಟ್ರದ ಉದ್ಯಮಿ ಮತ್ತು ಅಸ್ಸಾಂನ ವ್ಯಕ್ತಿ ಹಣ ವರ್ಗಾಯಿಸಿರುವುದನ್ನು ಪೊಲೀಸರು ಬ್ಯಾಂಕ್‌ಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಯ ಹೆಚ್ಚಿನ ವಿಚಾರಣೆಗೆ ಸೋಮವಾರ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಗುರುವಾರ ತಡರಾತ್ರಿ ನಡೆಸಲಾದ ಮಹತ್ವದ ಕಾರ್ಯಾಚರಣೆಯಲ್ಲಿ ಉದ್ಯಮಿ ಮತ್ತು ಶ್ರೀಮಂತ ವ್ಯಕ್ತಿಗಳಿಗೆ 200ಕೋಟಿ ರೂ.ಗೂ…









