Facebook Twitter Instagram
    Sunday, September 6
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»Uncategorized»ಉಳ್ಳಾಲ: ಮನೆಯಲ್ಲಿ ಅಕ್ರಮ ಮದ್ಯ ತಯಾರಿಕಾ ಘಟಕ ಪತ್ತೆ , ಇಬ್ಬರು ಆರೋಪಿಗಳು ಅರೆಸ್ಟ್
    Uncategorized

    ಉಳ್ಳಾಲ: ಮನೆಯಲ್ಲಿ ಅಕ್ರಮ ಮದ್ಯ ತಯಾರಿಕಾ ಘಟಕ ಪತ್ತೆ , ಇಬ್ಬರು ಆರೋಪಿಗಳು ಅರೆಸ್ಟ್

    September 2, 2025
    Share

    ಉಳ್ಳಾಲ: ಇಲ್ಲಿನ ಪಜೀರು ಗ್ರಾಮದ ಕಂಬಳಪದವು ಶ್ರೀ ದುರ್ಗಾ ಕಾಳಿ ದೇವಸ್ಥಾನದ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ಆಕ್ರಮವಾಗಿ ಮದ್ಯ ತಯಾರಿಸುತ್ತಿದ್ದ ಘಟಕವನ್ನು ಕೊಣಾಜೆ ಪೊಲೀಸರು ಪತ್ತೆ ಹಚ್ಚಿ, ಕೇರಳ ಮೂಲದ ಇಬ್ಬರನ್ನು ಬಂಧಿಸಿ 1,15,110  ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ಕೇರಳದ ಕಾಸರಗೋಡಿನ ಬೀಚ್‌ ರೋಡ್‌ ನಿವಾಸಿ ಪ್ರಣವ್ ಪಿ ಶೆಣೈ (24) ಮತ್ತು ತಾಳಿಪಡ್ಪು ಅಡ್ಕತ್ತಬೈಲ್ ನಿವಾಸಿ ಅನೂಷ್ ಆರ್. ( 24) ಬಂಧಿತ ಆರೋಪಿಗಳು.   ಆರೋಪಿಗಳಿಂದ ಅಕ್ರಮವಾಗಿ ಮದ್ಯ ತಯಾರಿಸುವ ಮೂರು ಮೆಶಿನ್ ಗಳು, ಮಿಕ್ಸರ್ ಮೆಶಿನ್, ಆಕ್ರಮ ಮದ್ಯದ ಬಾಟ್ಲಿಗಳು, ಗೋವಾ ರಾಜ್ಯದಲ್ಲಿ ಮಾತ್ರ  ಮಾರಾಟ ಮಾಡುವ ಪರವಾನಿಗೆ ಇರುವ 8 ಮ್ಯಾನ್ಶನ್‌ ಹೌಸ್‌ ಎಂಬ ಹೆಸರಿನ ಮದ್ಯದ ಬಾಟ್ಲಿಗಳು ಹಾಗೂ ಮದ್ಯ ತಯಾರಿಕೆಗೆ ಬೇಕಾದ ಇತರ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ವಿ.ಸಿ. ತೋಮಸ್ ಮತ್ತು ಮಣಿಕುಟ್ಟನ್ ಎಂಬ ಇನ್ನಿಬ್ಬರು ಆರೋಪಿಗಳು ಬಂಧನಕ್ಕೆ ಬಾಕಿ ಇದ್ದು  ಅವರ ಪತ್ತೆ ಕಾರ್ಯ ಮುಂದುವರಿದಿದೆ.

    ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ವಿಜಯಕ್ರಾಂತಿ ಅವರ ನೇತೃತ್ವದಲ್ಲಿ ಕೊಣಾಜೆ ಪೊಲೀಸ್‌ ಠಾಣೆಯ ಪ್ರಭಾರ ನಿರೀಕ್ಷಕ ವಿರೂಪಾಕ್ಷ, ಪಿಎಸ್ಐ  ನಾಗರಾಜ್  ಮತ್ತು ಸಿಬಂದಿ ಈ  ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.  

    Post Views: 102

    Related Posts

    ನ್ಯಾಯಾಲಯಕ್ಕೆ ಹಾಜರಾಗದೆ ಆರು ವರ್ಷಗಳಿಂದ ಪರಾರಿಯಾಗಿದ್ದ ಆರೋಪಿ ವಶಕ್ಕೆ

    May 16, 2026

    ಕಾಪು: ಸ್ಕೂಟಿಗೆ ಬಸ್ ಡಿಕ್ಕಿ- ಬಾಲಕಿ ಸಾವು

    April 22, 2026

    ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ- ಮೆಸ್ಕಾಂ ಸಿಬ್ಬಂದಿ ಮೃತ್ಯು

    March 25, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026

    ಮಂಗಳೂರು : ಭಜನೆ ಮಾಡುತ್ತಲೇ ಕುಸಿದು ಬಿದ್ದ ಯುವಕ, ಹೃದಯಾಘಾತದಿಂದ ಸಾವು

    September 5, 2026

    ಕಾಸರಗೋಡು: ರಕ್ತದ ಮಡುವಿನಲ್ಲಿ ಕಾರ್ಮಿಕನ ಮೃತದೇಹ ಪತ್ತೆ- ಕೊಲೆ ಶಂಕಿಸಿ ತನಿಖೆ, ಇಬ್ಬರು ಪರಾರಿ

    September 5, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.