Author: main-admin

ಉಡುಪಿ: ತುಳುನಾಡಿನ ದೇವಾಲಗಳ ಜಾತ್ರೆಗಳಲ್ಲಿ ಒಂದೊಂದು ವಿಶಿಷ್ಟ ಆಚರಣೆ ಇದೆ. ಉಡುಪಿಯ ಕೆಮ್ತೂರು ವಿಷ್ಣು ಮೂರ್ತಿ ದೇವರ ಕಟ್ಟೆ ಪೂಜೆಯ ಸಂದರ್ಭ ವಿಶಾಲಗದ್ದೆಯಲ್ಲಿ ತೂಟೆದಾರ ಎಂಬ ವಿಶಿಷ್ಟ ಆಚರಣೆ ನಡೆದಿದೆ. ತೆಂಗಿನಗರಿಯನ್ನು ಒಂದೊಂದು ಕಟ್ಟುಗಳನ್ನಾಗಿ ಮಾಡಿ ಅದಕ್ಕೆ ಬೆಂಕಿ ಕೊಟ್ಟು ಎಸೆಯುತ್ತಾರೆ. ಇದನ್ನೇ ತೂಟೆದಾರ ಎನ್ನುತ್ತಾರೆ. ಜನ ಎರಡು ಗುಂಪುಗಳಾಗಿ ವಿಂಗಡಿಸಿ ಪರಸ್ಪರ ಎಸೆಯುತ್ತಾರೆ. ದೇವರು ಕಟ್ಟೆ ಪೂಜೆಗೆ ಬಂದಾಗ ಎದುರು ಭಾಗದ ಗದ್ದೆಯಲ್ಲಿ ಈ ವಿಶಿಷ್ಟ ಆಚರಣೆ ನಡೆಯುತ್ತೆ. ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಯ ಜಾತ್ರೆಯಲ್ಲಿ ಎರಡು ಗ್ರಾಮಸ್ಥರು ಇದೇ ರೀತಿ ಆಚರಣೆಯನ್ನು ಮಾಡುತ್ತಾರೆ. ಕತ್ತಲಲ್ಲಿ ಬೆಂಕಿಯ ಚೆಂಡುಗಳು ಗದ್ದೆಯಲ್ಲಿ ಇತ್ತಿಂದತ್ತ ಅತ್ತಿಂದತ್ತ. ರವಾನೆಯಾಗುತ್ತದೆ. ಇದನ್ನು ನೋಡೋದಕ್ಕೆ ಅಧಿಕ ಸಂಖ್ಯೆಯ ಭಕ್ತಾದಿಗಳು ಸೇರುತ್ತಾರೆ. ಅದೆಷ್ಟೋ ವರ್ಷಗಳ ಸಂಪ್ರದಾಯ ಇಂದಿಗೂ ಮುಂದುವರಿದು ಬಂದಿದೆ.

Read More

ಮಂಗಳೂರು: ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ನಗರದ ಹಂಪನಕಟ್ಟೆ ಜಂಕ್ಷನ್ ಬಳಿಯ ಶೆಟ್ಟಿ ಆಟೋ ಪಾರ್ಕ್ ಬಳಿ ನಡೆದಿದೆ. ಮಲ್ಲೂರು ಉದ್ದಬೆಟ್ಟು ನಿವಾಸಿಗಳಾದ ಮರಿಯಂ ಮುಫೀದಾ (18), ಫಾಹಿಮಾ ಮರಿಯಂ (17) ಹಾಗೂ ಅಬ್ಬೆಟ್ಟು ನಿವಾಸಿ ಅಫ್ರತ್ (18) ಗಾಯಗೊಂಡವರು ಎಂದು ತಿಳಿದು ಬಂದಿದೆ. ನಗರದ ಬಲ್ಮಠದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರಾಗಿರುವ ಇವರು ಮಾ.17ರಂದು ಸಂಜೆ ಹಂಪನಕಟ್ಟೆಯ ಬಳಿ ಮನೆಗೆ ತೆರಳಲು ಸಂಜೆ ಬಸ್ಸಿಗೆ ಕಾಯುತ್ತಿದ್ದಾಗ ಮರದ ಕೊಂಬೆ ಬಿತ್ತು ಎನ್ನಲಾಗಿದೆ. ಹಲವು ಮಂದಿ ಇಲ್ಲಿಯೇ ಬಸ್‌ಗೆ ಕಾಯುತ್ತಿದ್ದರು ಎನ್ನಲಾಗಿದ್ದು, ಬಹುತೇಕ ಮಂದಿ ಅಪಾಯದಿಂದ ಪಾರಾಗಿದ್ದಾರೆ.

Read More

ಮಂಗಳೂರು: ಭೂಗತಪಾತಕಿ ಕಲಿ ಯೋಗೇಶ್ ಸಹಚರನನ್ನು ಸಿಸಿಬಿ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಿಸುತ್ತಿದ ವೇಳೆ ಮಂಗಳೂರು ಸಿಸಿಬಿ ಪೊಲೀಸರು ಆರೋಪಿ ಅಬ್ದುಲ್ ಅಸಿರ್ (32) ನನ್ನು ಬಂಧಿಸಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ನಾಂಗಿ ಕಡ್ದಪುರಂ ನಿವಾಸಿಯಾಗಿರುವ ಈತ ಕಾಸರಗೋಡಿನಿಂದ ಮಂಗಳೂರಿಗೆ MDMA ತಂದು ಮಾರಾಟ ಮಾಡುತ್ತಿದ್ದ. ನಂತೂರಿನಲ್ಲಿ ಎಂಡಿಎಂಎ ಮಾರುತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಸದ್ಯ ಈತನಿಂದ 5 ಲಕ್ಷ ರೂಪಾಯಿ ಮೌಲ್ಯದ 53 ಗ್ರಾಂ ಎಂಡಿಎಂಎ ಜಪ್ತಿ ಮಾಡಿಕೊಳ್ಳಲಾಗಿದೆ. ಭೂಗತ ಪಾತಕಿ ಕಲಿ ಯೋಗೆಶ ಪರವಾಗಿ ಅಬ್ದುಲ್ ಕೆಲಸ ಮಾಡುತ್ತಿದ್ದ. ಪುತ್ತೂರಿನ ಚಿನ್ನಾಭರಣ ಮಳಿಗೆಯ ಮೇಲೆ ಫೈರಿಂಗ್ ಪ್ರಕರಣದ ಆರೋಪಿ ಕೂಡ ಆಗಿದ್ದಾನೆ. ಅಬ್ದುಲ್ ವಿರುದ್ಧ ಕೊಲೆ, ಕಳ್ಳತನ ಅಲ್ಲದೆ ಪೋಕ್ಸೋ ಪ್ರಕರಣವಿದೆ.

Read More

ಕಾಸರಗೋಡು: ಬೈಕ್ ಮತ್ತು ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಶಿರಿಯ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ನಡೆದಿದೆ. ಮೃತಪಟ್ಟ ಸವಾರನನ್ನು ಕುಂಬಳೆ ಕಣ್ಣೂರಿನ ತ್ಯಾಂಪಣ್ಣ ಪೂಜಾರಿ ರವರ ಪುತ್ರ ರವಿಚಂದ್ರ (35) ಎಂದು ಗುರುತಿಸಲಾಗಿದೆ. ರವಿಚಂದ್ರ ಅವರು ಮೆಡಿಕಲ್ ರೆಪ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ರವಿಚಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಂಬಳೆ ಕಡೆಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಕುಂಬಳೆ ಠಾಣಾ ಪೊಲೀಸರು ಮಹಜರು ನಡೆಸಿದ್ದಾರೆ. ರವಿಚಂದ್ರ ಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯ ಜನಾರ್ಧನರವರ ಸಹೋದರರಾಗಿದ್ದಾರೆ.

Read More

ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಾರ್ವಜನಿಕ ಆರೋಗ್ಯ ಸಲಹೆಯನ್ನು ಅನುಸರಿಸುವ ಮೂಲಕ ತಮ್ಮ ಆರೋಗ್ಯದ ಕಾಳಜಿ ವಹಿಸುವಂತೆ ರಾಜ್ಯ ಸರ್ಕಾರ ಸಲಹೆ ಮಾಡಿದೆ. ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಅಲ್ಲದೆ ಮಾರ್ಚ್ ಯಿಂದ ಮೇ ವರೆಗೆ ವಾತಾರವಣದಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ನೀಡಿದೆ. ಇದರಿಂದಾಗಿ ವಾತಾವರಣದಲ್ಲಿ ಅನೇಕ ರೀತಿಯ ಬದಲಾವಣೆ ಉಂಟಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಅಂತ ತಿಳಿಸಿದೆ. ರಾಜ್ಯದ ವಿವಿಧ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗಿದೆ. ದಿನೇ ದಿನೇ ಸಾರ್ವಜನಿಕರು ಕೆಲಸದ ಒತ್ತಡದ ಜೊತೆಗೆ ಬಿಸಿಲಿನ ಬೇಗೆಯನ್ನು ಸಹಿಸಿಕೊಳ್ಳದ ಸ್ಥಿತಿಗೆ ತಲುಪಿದ್ದಾರೆ. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಮನುಷ್ಯನ ದೇಹದ ಉಷ್ಣತೆಯು 36.4 ಡಿಗ್ರಿ ಸೆ ನಿಂದ 37.2 ಡಿಗ್ರಿ ಸೆ( 97.5 ಡಿಗ್ರಿ ಸೆ…

Read More

ಕಾಪು: ಉಡುಪಿ ಜಿಲ್ಲೆಯ ಕಾಪು ಪೇಟೆ ನ್ಯಾಯಬೆಲೆ ಅಂಗಡಿ ಸಮೀಪ ಮಾ.14 ರಂದು ಪಡಿತರದಾರರಿಗೆ ವಿತರಿಸುವ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಇಟ್ಟುಕೊಂಡಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ಹೆಜಮಾಡಿಯ ಕಲಂದರ್ ಶಾಫಿ(43) ಹಾಗೂ ಬಂಟ್ವಾಳ ತಾಲೂಕಿನ ಸಜಿಪ ಗ್ರಾಮದ ಉಬೈದುಲ್ಲ(31) ಎಂದು ಗುರುತಿಸಲಾಗಿದೆ. ಕಾಪು ಆಹಾರ ನಿರೀಕ್ಷಕ ಎಂ.ಟಿ.ಲೀಲಾನಂದ ನೇತೃತ್ವದಲ್ಲಿ ದಾಳಿ ನಡೆಸಿದಾಗ ಇವರು ಪಡಿತರ ದಾರರಿಗೆ ವಿತರಿಸುತ್ತಿರುವ ಸುಮಾರು 8,500ರೂ. ಮೌಲ್ಯದ 250 ಕೆ.ಜಿ. ಅಕ್ಕಿಯನ್ನು 6 ಚೀಲಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವುದು ಕಂಡು ಬಂದಿತ್ತು. ಇವರು ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಪಡಿತರದಾರರಿಂದ ಕೆ.ಜಿ ಅಕ್ಕಿಗೆ 20ರೂ.ನಂತೆ ಖರೀದಿಸಿದ್ದು, ಅದನ್ನು ಮುದರಂಗಡಿ ಪ್ರತಾಪ್ ಎಂಬವರಿಗೆ ಮಾರಾಟ ಮಾಡಲು ತೆಗೆದು ಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹೆಬ್ರಿ,: ಹೆಬ್ರಿ ತಾಲೂಕಿನ ಬೆಳಂಜೆ ಗ್ರಾಮದ ಈಶ್ವರನಗರದಲ್ಲಿ ನಡೆದ ಅನಧಿಕೃತ ಸಂಗೀತ ಕಾರ್ಯಕ್ರಮದ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ 15 ಮಾರ್ಚ್ 2025 ರಂದು ರಾತ್ರಿ ಸುಮಾರು 11.45 ಗಂಟೆಗೆ ನಡೆದಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಘಟನೆಯ ಸಂಕ್ಷಿಪ್ತ ವಿವರ:ಹೆಬ್ರಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶೈಲೇಶ ಕುಮಾರ್ ಅವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ, ಬೆಳಂಜೆ ಗ್ರಾಮದ ಈಶ್ವರನಗರದಲ್ಲಿ ಜೋರಾದ ಸಂಗೀತ ಶಬ್ದ ಕೇಳಿಸಿಕೊಂಡಿದ್ದರು. ಘಟನಾಸ್ಥಳಕ್ಕೆ ತೆರಳಿದ ಪೊಲೀಸರು, ಅದು ಬೆಳಂಜೆ ಗ್ರಾಮದ ನಿವಾಸಿ ಎಂ. ಕೃಷ್ಣ ಮೂರ್ತಿ ಅವರ ಮನೆಯಲ್ಲಿ ನಡೆಯುತ್ತಿದ್ದ ಮಗಳ ಮೆಹಂದಿ ಕಾರ್ಯಕ್ರಮ ಎಂದು ತಿಳಿದುಕೊಂಡರು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಗೀತ ಸಂಸ್ಥೆಯಾದ ಸಾಯಿ ಸೌಂಡ್ಸ್ನ ಈಶ್ವರ ಪೂಜಾರಿ ಅವರು ಡಿಜೆ ಸಂಗೀತವನ್ನು ನಿರ್ವಹಿಸುತ್ತಿದ್ದರು. ಪೊಲೀಸರ ಪ್ರಕಾರ, ಈ ಕಾರ್ಯಕ್ರಮಕ್ಕೆ ಯಾವುದೇ ಅಧಿಕೃತ ಪರವಾನಗಿ ಪಡೆದಿರಲಿಲ್ಲ. ಇದರಿಂದಾಗಿ, ರಾತ್ರಿ ತಡವಾಗಿ ಕರ್ಕಶವಾದ ಸಂಗೀತ ಶಬ್ದದಿಂದ ಸಾರ್ವಜನಿಕರ ನೆಮ್ಮದಿಗೆ…

Read More

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಅಂತರರಾಜ್ಯ ಅಪರಾಧಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಕೇರಳದ ಮಂಜೇಶ್ವರ ನಿವಾಸಿ ಅಬ್ದುಲ್ ಫೈಸಲ್ (26) ಎಮದು ಗುರುತಿಸಲಾಗಿದೆ. ಅಬ್ದುಲ್ ಫೈಸಲ್ ಇತ್ತೀಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದನು. ಪೊಲೀಸರು ಆರೋಪಿಯಿಂದ ಒಂದು ಪಿಸ್ತೂಲ್, ಒಂದು ಜೀವಂತ ಗುಂಡು ಮತ್ತು ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಮೌಲ್ಯ 2.10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಅಬ್ದುಲ್ ಫೈಸಲ್ ವಿರುದ್ಧ ಒಟ್ಟು ಎರಡು ಪ್ರಕರಣಗಳು ದಾಖಲಾಗಿವೆ.

Read More

ಮಂಗಳೂರು: ಪೋಕ್ಸೊ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಆರೋಪಿ ಮಂಗಳೂರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಆರೋಪಿಯನ್ನು ಪ್ರಕಾಶ ಗೋಪಾಲ್ ಮೂಲ್ಯ (43) ಎಂದು ಗುರುತಿಸಲಾಗಿದೆ. ಈತ ಪೋಕ್ಸೊ ಪ್ರಕರಣದಲ್ಲಿ ಬಂಧಿತನಾಗಿದ್ದ. ಇಂದು ಜೈಲಿನ ಶೌಚಾಲಯದ ಕಿಟಕಿ ಗ್ರಿಲ್‌ಗೆ ಟವಲ್ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಾ.11 ರಂದು ಪ್ರಕಾಶ್ ಗೋಪಾಲ್ ಮೂಲ್ಯನನ್ನು ಮೂಡಬಿದ್ರೆಯಲ್ಲಿ ಪೊಲೀಸರು ಬಂಧಿಸಿದ್ದರು. ನೆರೆ ಮನೆಯ 13 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಬಂಧನವಾಗಿದ್ದ. ಜೈಲಿಗೆ ಬರ್ಕೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು: ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಪ್ರಮಾಣದ ಮಾದಕ ವಸ್ತುಗಳನ್ನು (ಡ್ರಗ್ಸ್) ಸೀಜ್ ಮಾಡಿದ್ದಾರೆ ಮಂಗಳೂರು ಪೊಲೀಸರು. ಸುಮಾರು 75 ಕೋಟಿ ರೂಪಾಯಿಗಳ ಮೌಲ್ಯದ 37.87 ಕಿಲೋಗ್ರಾಂ ಎಂಡಿಎಂಎ (MDMA) ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮಾದಕ ವಸ್ತುಗಳನ್ನು ರಾಜ್ಯದ ವಿವಿಧ ಭಾಗಗಳು ಮತ್ತು ಇತರ ರಾಜ್ಯಗಳಿಗೆ ಪೂರೈಕೆ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಇಬ್ಬರು ನಾಗರಿಕರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಂಧಿತರಾಗಿರುವವರು ದಕ್ಷಿಣ ಆಫ್ರಿಕಾದ ನಾಗರಿಕರಾದ ಬಂಬಾ ಫಂಟಾ (31) ಮತ್ತು ಅಬಿಗೈಲ್ ಅಡೊನಿಸ್ (30) ಎಂಬ ಇಬ್ಬರು. ಇವರು ದೇಶದ ವಿವಿಧ ಭಾಗಗಳಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಬಿ ಪೊಲೀಸರ ದೀರ್ಘ ತನಿಖೆ:ಈ ಘಟನೆಗೆ ಮುಂಚೆ, 2024ರಲ್ಲಿ ಪಂಪ್ ವೆಲ್ ಬಳಿಯ ಲಾಡ್ಜ್ ಒಂದರಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಹೈದರ್ ಆಲಿ ಎಂಬಾತನನ್ನು ಬಂಧಿಸಲಾಗಿತ್ತು. ಅವನಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ನೈಜೀರಿಯಾದ ನಾಗರಿಕ ಪೀಟರ್ ಇಕೆಡಿ ಬೆಲೊನ್ವೊ ಎಂಬಾತನನ್ನು ಬೆಂಗಳೂರಿನಲ್ಲಿ…

Read More