ಉಡುಪಿ:ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಅಂಗಡಿ ಬಳಿ ಮಾ.12ರಂದು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಗುಂಡೇಟಿಗೆ ಒಳಗಾಗಿದ್ದ ಗರುಡ ಗ್ಯಾಂಗಿನ ಸದಸ್ಯ ನಾವುಂದ ಮೂಲದ ಇಸಾಕ್(27)ನನ್ನು ಶುಕ್ರವಾರ ಮಣಿಪಾಲ ಆಸ್ಪತ್ರೆಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿದೆ. ಬೆಂಗಳೂರಿನ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲ ದಲ್ಲಿ ಮಾ.4ರಂದು ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಇಸಾಕ್ ತನ್ನ ಕಾರಿನಲ್ಲಿ ಇತರ ವಾಹನ ಗಳಿಗೆ ಢಿಕ್ಕಿ ಹೊಡೆದು ತಪ್ಪಿಸಿಕೊಂಡಿದ್ದನು. ತನಿಖೆ ನಡೆಸಿದ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ನೇತೃತ್ವದ ತಂಡ ಇಸಾಕ್ ಹಾಗೂ ಆತನಿಗೆ ಸಹಕಾರ ನೀಡಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ಮಾ.12ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಂಧಿಸಿತ್ತು.ಇವರನ್ನು ಖಾಸಗಿ ವಾಹನದಲ್ಲಿ ಮಣಿಪಾಲಕ್ಕೆ ಕರೆತರುವಾಗ ದಾರಿ ಮಧ್ಯೆ ಹಿರಿಯಡ್ಕ ಸಮೀಪ ಇಸಾಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದನು.ಈ ವೇಳೆ ಪೊಲೀಸ್ ನಿರೀಕ್ಷಕ ದೇವರಾಜ್ ಇಲಾಖಾ ಪಿಸ್ತೂಲಿನಿಂದ ಮೊದಲು ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದರು. ಬಳಿಕ ಇಸಾಕ್ ಪೊಲೀಸ್…
Author: main-admin
ಮಂಗಳೂರು: ನಗರದ ಬಿಜೈ ಕಾಪಿಕಾಡಿನಲ್ಲಿ ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿಯೊಬ್ಬರು ಹಳೆ ದ್ವೇಷದಲ್ಲಿ ನೆರೆಮನೆಯಾತನನ್ನು ಕೊಲ್ಲುವ ಉದ್ದೇಶದಿಂದ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದು ಮುಂದಕ್ಕೆ ಚಲಿಸಿ ನಡೆದುಕೊಂಡು ಹೋಗುತ್ತಿದ್ದ ಹೆಂಗಸಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಬಿ.ಎಸ್.ಎನ್.ಎಲ್ ಉದ್ಯೋಗಿ ಸತೀಶ್ ಕುಮಾರ್ ಮತ್ತು ಮುರಳಿ ಪ್ರಸಾದ ಅವರು ಅಕ್ಕಪಕ್ಕದ ನಿವಾಸಿಯಾಗಿರುತ್ತಾರೆ. ಸತೀಶ್ ಕುಮಾರ್.ಕೆ.ಎಂ ರವರಿಗೆ ಮುರಳಿ ಪ್ರಸಾದ್ ಹಾಗೂ ಅವರ ಮನೆಯವರೊಂದಿಗೆ ಮೊದಲಿನಿಂದಲು ಸದಾಕಾಲ ತಂಟೆತಕರಾರು ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು, ಈ ಹಿಂದೆ ಮುರಳಿ ಪ್ರಸಾದ ತಂದೆಯವರು ನಡೆದುಕೊಂಡು ಹೋಗುತ್ತಿರುವಾಗ ಆರೋಪಿತ ಸತೀಶ್ ಕುಮಾರ್.ಕೆ.ಎಂ ಎಂಬಾತನು ಕಾರಣ ವಿಲ್ಲದೆ ಬೈಕ್ನಲ್ಲಿ ಬಂದು ತಾಗಿಸಿಕೊಂಡು ಹೋಗಿ ಅವಾಚ್ಯ ಶಬ್ದದಿಂದ ನಿಂದಿಸಿದ್ದು, ಈ ಬಗ್ಗೆ ಉರ್ವಾ ಠಾಣೆಯಲ್ಲಿ 2023 ರಲ್ಲಿ ದೂರು ದಾಖಲಾಗಿರುತ್ತದೆ. ಆದರೆ ಇದೀಗ ಇಂದು ಬೆಳಗ್ಗೆ 8.15 ರ ಸುಮಾರಿಗೆ ಬಿಜೈ ಕಾಪಿಕಾಡ್ನ 6 ನೇ ಮುಖ್ಯ ರಸ್ತೆಯಲ್ಲಿ ಮುರಳಿ ಪ್ರಸಾದ ರವರು ತನ್ನ ಬೈಕ್ ನಲ್ಲಿ ಮನೆಯಿಂದ…
ಕಾಸರಗೋಡು: ಸ್ಕೂಟರ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರ ಉದ್ಯಾವರದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಉಪ್ಪಳ ಕನ್ನಾಡಿಪಾರೆಯ ಮುಹಮ್ಮದ್ ಅನ್ವಾಸ್ (23) ಎಂದು ಗುರುತಿಸಲಾಗಿದೆ. ಸ್ಕೂಟರ್‌ನಲ್ಲಿದ್ದ ಅಂಗಡಿ ಮೊಗರುವಿನ ಫಸಲ್ ರಹಮಾನ್ ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ತಲಪಾಡಿ ಕಡೆಗೆ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದರೂ ಆನ್ವಾಸ್ ಮೃತಪಟ್ಟರು. ಅನ್ವಾಸ್ ಉಪ್ಪಳದಲ್ಲಿ ಮೊಬೈಲ್ ಮಳಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ: ಪೈಪ್‌ಲೈನ್ ಕೆಲಸ ವಹಿಸಿಕೊಂಡಿದ್ದ ವ್ಯಕ್ತಿಗಳಿಬ್ಬರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕದ್ದುಕೊಂಡು ಹೋಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಫೆ.15ರ ರಾತ್ರಿ 8ರಿಂದ ಫೆ. 16ರ ಬೆಳಗ್ಗೆ 11 ಗಂಟೆಯ ನಡುವೆ ಅಜೀಜ್ ಅನ್ವರ್ ಹಾಗೂ ಸೇತಾಬುದ್ದಿನ್ ಅವರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ಗುತ್ತಿಗೆದಾರ ಗೊನಳ್ಳ ವೆಂಕಟೇಶ್ವರಲು ತಿಳಿಸಿದ್ದಾರೆ.
ಮಂಗಳೂರು : ಪತ್ನಿಗೆ ಹಲ್ಲೆಗೈದು ಬಳಿಕ ಬಲವಂತವಾಗಿ ವಿಷ ಪದಾರ್ಥ ನೀಡಿ ಕೊಲೆಗೈದ ಆರೋಪಿ ಪತಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಎಸ್. ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ಆದೇಶ ಹೊರಡಿಸಿದ್ದಾರೆ. ಉಳ್ಳಾಲ ತಾಲೂಕಿನ ಸೋಮೇಶ್ವರ ಗ್ರಾಮದ ಕುಂಪಲ ಚೇತನ ನಗರದ ಜೋಸೆಫ್ ಫ್ರಾನ್ಸಿನ್ ರೆನ್ಸನ್ ಯಾನೆ ರೆನ್ಸನ್ (53) ಶಿಕ್ಷೆಗೊಳಗಾದ ಆರೋಪಿ. 2022ರ ಮೇ 11ರಂದು ಮಧ್ಯಾಹ್ನ 2:30ಕ್ಕೆ ಆರೋಪಿಯು ತನ್ನ ಪತ್ನಿ ಶೈಮಾರಿಗೆ ಹಲ್ಲೆಗೈದು ವಿಷ ಪದಾರ್ಥ ನೀಡಿ ಕೊಲೆಗೈದ ಆರೋಪ ಎದುರಿಸುತ್ತಿದ್ದ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿತ್ತು ಶೈಮಾ ತನ್ನ ಗಂಡನ ಬಳಿ ದುಶ್ಚಟಗಳನ್ನು ಬಿಡುವಂತೆ ಹೇಳುತ್ತಲಿದ್ದು, ಮೇ 11ರಂದು ಶೈಮಾ ಮತ್ತೆ ಬುದ್ಧಿವಾದ ಹೇಳಿದಾಗ ಕುಪಿತಗೊಂಡ ಆರೋಪಿ ಜೋಸೆಫನು ತನ್ನ ಪತ್ನಿಯನ್ನು ಕೊಲೆ ಮಾಡುವ ದುರುದ್ದೇಶದಿಂದ ಗೋಡೆಗೆ ದೂಡಿ ಹಾಕಿ ಚಪಾತಿಯ ಲಟ್ಟಣಿಕೆಯಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದ ಎಂದು ಆರೋಪಿಸಲಾಗಿತ್ತು. ಪ್ರಜ್ಞಾಹೀನ…
ಮಂಗಳೂರು : ಬಂಟ್ವಾಳದ ಫರಂಗಿಪೇಟೆ ನಿವಾಸಿ ದಿಗಂತ್ ನಾಪತ್ತೆಯಾದ ವೇಳೆ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಹೆಬಿಯಸ್ ಕಾರ್ಪಸ್ ಹಿನ್ನಲೆ ಇಂದು ದಿಂಗತ್ ಪತ್ತೆಯಾದ ಬಗ್ಗೆ ಹೈಕೋರ್ಟ್ ನಲ್ಲಿ ನ್ಯಾಯಾಧೀಶರ ಮುಂದೆ ಪೊಲೀಸರು ಅಫಿಡವಿಟ್ ಸಲ್ಲಿಸಿದ್ದಾರೆ. ಈ ಅಫಿಡವಿಟ್ ನಲ್ಲಿ ದಿಗಂತ್ ಮನೆಗೆ ಹೋಗಲು ನಿರಾಕರಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯಿತು. ವಿಚಾರಣೆ ವೇಳೆ, ಪೊಲೀಸರ ಪರ ವಕೀಲರು “ದಿಗಂತ್ ಪೋಷಕರ ಬಳಿ ಹೋಗಲು ನಿರಾಕರಿಸುತ್ತಿರುವ ಬಗ್ಗೆ ಹೈಕೋರ್ಟ್ ಗೆ ತಿಳಿಸಿದರು. ಆದರೆ ದಿಗಂತ್ ಫೋಷಕರು ಇದೇ ವೇಳೆ ಮಗನನ್ನು ಕಳುಹಿಸಿ ಕೊಡುವಂತೆ ಹೈಕೋರ್ಟ್ಗೆ ಮನವಿ ಮಾಡಿಕೊಂಡರು. ದಿಗಂತ್ ಪೋಷಕರ ಪರ ವಕೀಲರು “ದಿಗಂತ್ ಪತ್ತೆಯಾದ ದಿನ ತಾಯಿ ಜೊತೆ ಫೋನ್ನಲ್ಲಿ ಮಾತನಾಡಿದ ವಿವರ ನ್ಯಾಯಪೀಠಕ್ಕೆ ತಿಳಿಸಿದರು. ನಾನಾಗಿಯೇ ಹೋಗಿಲ್ಲ, ನನ್ನನ್ನು ಯಾರೋ ಕರೆದು ಕೊಂಡು ಹೋಗಿದ್ದಾರೆ ಅಂತ ದಿಗಂತ್ ಎಂದಿದ್ದನ್ನು ಕೋರ್ಟ್ ಮುಂದೆ…
ಉಡುಪಿ: ನಟೋರಿಯಸ್ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಪೊಲೀಸರು ಫೈರಿಂಗ್ ನಡೆಸಿ ಬಂಧಿಸಿದ ಘಟನೆ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿದೆ. ಸದ್ಯ ಗಾಯಗೊಂಡ ಇಸಾಕ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ: ನಟೋರಿಯಸ್ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಪೊಲೀಸರು ಫೈರಿಂಗ್ ನಡೆಸಿ ಬಂಧಿಸಿದ ಘಟನೆ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿದೆ. ಸದ್ಯ ಗಾಯಗೊಂಡ ಇಸಾಕ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಲು ಯತ್ನಿಸಿದ ಇಸಾಕ್ ಮೇಲೆ ಮಣಿಪಾಲ ಪೊಲೀಸ್ ದೇವರಾಜ್ ಮತ್ತು ತಂಡ ಶೂಟ್ ಔಟ್ ಮಾಡಿದೆ. ಶೂಟ್ ಔಟ್ ಮಾಡಿದ ಬಳಿಕ ಪೊಲೀಸರು ಇಸಾಕ್ ನನ್ನ ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾ. 4 ರಂದು ಬಂಧಿಸಲು ಬಂದ ಪೊಲೀಸರಿಗೆ ಇಸಾಕ್ ಚೆಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಈತ ನಟೋರಿಯಸ್ ಗರುಡ ಗ್ಯಾಂಗ್ ನ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದು, ದರೋಡೆ ಪ್ರಕರಣವೊಂದಕ್ಕೆ ಸಂಬಂಧಿಸಿ ಇಸಾಕ್ ಗಾಗಿ…
ಬೆಂಗಳೂರು: ಇತ್ತಚಿನ ಹಂಪಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವು ಕರ್ನಾಟಕದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡಿರುವುದರ ನಡುವೆ ಪೊಲೀಸ್ ಇಲಾಖೆಯಲ್ಲಿ 18,581 ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಹೊರಬಿದ್ದಿದೆ. ಪೊಲೀಸ್ ಇಲಾಖೆಯಲ್ಲಿ 1,11,330 ಅನುಮೋದಿತ ಹುದ್ದೆ ಇದ್ದು, ಅವುಗಳ ಪೈಕಿ ಶೇಕಡಾ 16.69ರಷ್ಟು ಸಿಬ್ಬಂದಿ ಕೊರತೆ ಇದೆ. ಕರ್ನಾಟಕದಲ್ಲಿ ಪೊಲೀಸ್-ಸಾರ್ವಜನಿಕ ಅನುಪಾತವು 1 ಲಕ್ಷ ಜನಸಂಖ್ಯೆಗೆ 165.04 ರಷ್ಟಿದೆ, ಇದು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (BPR and D) ಪ್ರಕಾರ ರಾಷ್ಟ್ರೀಯ ಸರಾಸರಿ 196.88 ಕ್ಕೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ. ಪ್ರಸ್ತುತ, ಪೊಲೀಸ್ ಪಡೆಯಲ್ಲಿ ಅನುಮೋದಿತ ಹುದ್ದೆ 1,11,330 ರಷ್ಟಿದ್ದು, ವಾಸ್ತವಿಕ ಬಲ 92,749 ರಷ್ಟಿದೆ. ಅಧಿಕೃತ ಮಾಹಿತಿಯ ಪ್ರಕಾರ, 6,591 ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳು ಮತ್ತು 819 ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳು ಖಾಲಿ ಉಳಿದಿವೆ. ಹೆಚ್ಚುವರಿಯಾಗಿ, 2,107 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ನಗರ ಸಶಸ್ತ್ರ ಮೀಸಲು/ಜಿಲ್ಲಾ ಸಶಸ್ತ್ರ ಮೀಸಲು) ಮತ್ತು…
ಮೂಡುಬಿದಿರೆ: ಬಾಲಕಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪ್ರಾಂತ್ಯ ಗ್ರಾಮದ ಲಾಡಿ ಸಮೀಪದ ಅಜಂಕಲ್ಲುವಿನ ನಿವಾಸಿ ಪ್ರಕಾಶ್ (57) ಎಂಬಾತನನ್ನು ಪೊಲೀಸರು ಬಂಧಿಸಿ ಪೋಕ್ಸೋ ಕೇಸು ದಾಖಲಿಸಲಾಗಿದೆ. ಆರೋಪಿಯು ತನ್ನ ಮನೆಯ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಬಾಲಕಿಯ ಮನೆಗೆ ಯಾರೂ ಇಲ್ಲದಾಗ ಕಳೆದ ಒಂದು ವರ್ಷದಿಂದ ಬರುತ್ತಿದ್ದು, ಬಾಲಕಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿರುತ್ತಾನೆ ಎಂದು ಸಂತ್ರಸ್ತೆಯ ಹೆತ್ತವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪುತ್ತೂರು : ದಾರಿ ಕೇಳುವ ನೆಪದಲ್ಲಿ ಚಿನ್ನದ ಉಂಗುರವನ್ನು ಎಳೆದು ಕದ್ದೊಯ್ದು ಪರಾರಿಯಾಗಿರುವ ಘಟನೆ ಪುತ್ತೂರಿನ ರಾಗಿಕುಮೇರ್ ಬಳಿಯ ಅಂದ್ರಟ್ಟ ಎಂಬಲ್ಲಿ ನಡೆದಿದೆ. ರಾತ್ರಿ ವೇಳೆ ಬೈಕ್ ನಲ್ಲಿ ಅಪರಿಚಿತ ವ್ಯಕ್ತಿಯೋರ್ವ ದಾರಿ ಕೇಳಿದ್ದಾನೆ. ಈ ಸಂದರ್ಭ ದಾರಿ ಹೇಳಲು ಬಂದ ವ್ಯಕ್ತಿಯ ಕೈಯಲ್ಲಿದ್ದ ಉಂಗುರವನ್ನು ಕಿತ್ತು ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










