Author: main-admin

ಬೆಂಗಳೂರು : ಮಾವನ ಆಸ್ತಿಗಳಿಗೆ ಅಳಿಯ ಉತ್ತರಾಧಿಕಾರಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಕಾನೂನುಬದ್ಧ ಉತ್ತರಾಧಿಕಾರಿ ಮಾತ್ರ ಆಸ್ತಿಗೆ ಪ್ರತಿನಿಧಿ ಎಂದು ತಿಳಿಸಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ ಬಸವರಾಜು ಸಲ್ಲಿಸಿಸದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನಗಂಟಿ ಅವರ ಪೀಠ ಈ ಆದೇಶ ನೀಡಿದೆ. ಮೃತ ಮಾವನಿಗೆ ನಾಲ್ಕು ಹೆಣ್ಣು ಮಕ್ಕಳಿರುವುದರಿಂದ ತನ್ನನ್ನೇ ಮೃತನ ಆಸ್ತಿಯನ್ನು ಪ್ರತಿನಿಧಿಸಲು ಮತ್ತು ಹಿತಾಸಕ್ತಿ ರಕ್ಷಣೆ ಮಾಡಲು ಕಾನೂನುಬದ್ಧ ಉತ್ತರಾಧಿಕಾರಿ ಎಂಬುದಾಗಿ ಘೋಷಣೆ ಮಾಡುವಂತೆ ಕೋರಿ ವ್ಯಕ್ತಿಯೋರ್ವ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಕಾನೂನು ಬದ್ದ ಉತ್ತರಾಧಿಕಾರಿ ಮಾತ್ರ ಮೃತಪಟ್ಟ ವ್ಯಕ್ತಿಯ ಆಸ್ತಿ ಪ್ರತಿನಿಧಿಸುವ ಮತ್ತು ಹಿತಾಸಕ್ತಿ ರಕ್ಷಣೆ ಮಾಡುವ ಜವಾಬ್ದಾರಿ ಹೊಂದಿರುತ್ತಾನೆ. ಆದರೆ ಈ ಪ್ರಕರಣದಲ್ಲಿ ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು ಮೃತರ ಆಸ್ತಿಯಲ್ಲಿ ಭಾಗಕ್ಕೆ ಅರ್ಹರಾಗಿದ್ದಾರೆಯೇ ಹೊರತು ಉತ್ತರಾಧಿಕಾರಿಯಾಗುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕೋರ್ಟ್ ತಿಳಿಸಿದೆ. ತನ್ನದೇ ಗ್ರಾಮದ ಮಹಿಳೆಯನ್ನು ವಿವಾಹವಾಗಿ ವ್ಯಕ್ತಿಯೊಬ್ಬರು ಮಾವನ ಆಸ್ತಿಯಲ್ಲಿ ಪತ್ನಿಗೆ…

Read More

ವಿಟ್ಲ: ವ್ಯಕ್ತಿಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಮುನ್ನೂರು ನ ಅಲಂಗಾರು ಎಂದು ತಿಳಿದು ಬಂದಿದೆ.ಮೃತರನ್ನು ರಮೇಶ್ ಪಲ್ಲೆದಗುರಿ (37) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ರಮೇಶ್ ನಿನ್ನೆ ಕೆರೆಗೆ ಹಾರಿದ್ದರು ಇಂದು ಅವರ ಮೃತದೇಹ ಪತ್ತೆಯಾಗಿದೆ.ಮೃತರು ಪತ್ನಿ ಹಾಗು ಓರ್ವ ಪುತ್ರನನ್ನು ಅಗಲಿದ್ದಾರೆ.ಶವವನ್ನು ಪ್ರೆಂಡ್ಸ್ ವಿಟ್ಲದ ಮುರಳೀದರ ಮತ್ತು ತಂಡದವರು ಕೆರೆಯಿಂದ ಮೇಲಕ್ಕೆತ್ತಿದರು.

Read More

ಬೆಂಗಳೂರು: ಮೈಕ್ರೋ ಫೈನಾನ್ಸ್‌ ಸುಗ್ರೀವಾಜ್ಞೆ ಜಾರಿ ಕುರಿತು ಸಿಎಂ ಸಿದ್ದರಾಮಯ್ಯ ಇಂದು ಸಂಜೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಕೆಲ ಸೂಚನೆಗಳನ್ನ ನೀಡಿದರು. 1) ಈ ಕಾಯ್ದೆಯ ಎಲ್ಲಾ ಅಂಶಗಳನ್ನು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು. 2) ಪರವಾನಿಗೆ ಪಡೆಯದ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಮೇಲೆ ನಿರಂತರ ನಿಗಾ ಇರಿಸಬೇಕು. 3)ಪರವಾನಿಗೆ ಪಡೆದಿರುವ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ಆರ್‌ಬಿಐ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವುದನ್ನು ಖಾತ್ರಿಪಡಿಸಬೇಕು. 4) ಬಲವಂತದ ವಸೂಲಾತಿ ಮಾಡುವವರ ವಿರುದ್ದ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. 5) ಬಲವಂತದ ಸಾಲ ವಸೂಲಾತಿ ಮಾಡುವ ಪ್ರಕರಣಗಳಲ್ಲಿ ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಬೇಕು 6) ಯಾವುದೇ ಜಿಲ್ಲೆಗಳಲ್ಲಿ ಸಾಲಗಾರರ ಕಿರುಕುಳ ಮುಂದುವರೆದಿರುವುದು ಗಮನಕ್ಕೆ ಬಂದರೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

Read More

ಉಡುಪಿ: ತೆಳ್ಳಾರು ರಸ್ತೆ 11ನೇ ಕ್ರಾಸ್‌ನ ಮರತ್ತಪ್ಪ ಶೆಟ್ಟಿ ಕಾಲನಿಯ ಕಿಶೋರ್‌ ಕುಮಾರ್‌ ಶೆಟ್ಟಿ ಅವರ ಮನೆಯಲ್ಲಿ ಚಾರ್ಜ್‌ಗಿಟ್ಟ ಮೊಬೈಲ್‌ ಸ್ಫೋಟಗೊಂಡು ಇಡೀ ಮನೆ ಸುಟ್ಟುಹೋಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಸಂಭವಿಸಿದೆ. ಎರಡು ಅಂತಸ್ತುಗಳ 6 ಕೋಣೆಗಳ ಮನೆಯಲ್ಲಿ ಮುಂಜಾನೆ 4 ಗಂಟೆ ವೇಳೆಗೆ ಅವಘಡ ಸಂಭವಿಸಿದೆ. ಮೊಬೈಲನ್ನು ಸೋಫಾದ ಮೇಲೆ ಇರಿಸಿದ್ದ ಕಾರಣ ಸ್ಫೋಟಗೊಂಡ ಕೂಡಲೇ ಬೆಂಕಿ ಹತ್ತಿಕೊಂಡು ಇಡೀ ಮನೆಯನ್ನು ಆವರಿಸಿತು. ಮಾಹಿತಿ ತಿಳಿದ ತತ್‌ಕ್ಷಣ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿ ಎರಡೂವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಈ ವೇಳೆ ಮನೆಯಲ್ಲಿ ಎಸಿ ಆನ್‌ ಇದ್ದುದು ಕೂಡ ಬೆಂಕಿ ವ್ಯಾಪಿಸಲು ಕಾರಣವಾಯಿತು ಎನ್ನಲಾಗಿದೆ. ಮನೆಯ ಮಾಲಕ ಕಿಶೋರ್‌ ಕುಮಾರ್‌ ಶೆಟ್ಟಿ ಅವರಿಗೆ ಬೆಂಕಿಯಿಂದ ಸಣ್ಣಪುಟ್ಟ ಗಾಯಗಳಾಗಿವೆ. ಠಾಣಾಧಿಕಾರಿ ಆಲ್ಪರ್ಟ್‌ ಮೊನಿಸ್‌, ಪ್ರಮುಖರಾದ ಹರಿಪ್ರಸಾದ್‌ ಶೆಟ್ಟಿಗಾರ್‌, ಚಾಲಕ ಜಯ ಮೂಲ್ಯ, ರವಿಚಂದ್ರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Read More

ಮಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಬಂಟ್ವಾಳ ಮೂಲದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಎಫ್‌ಟಿಎಸ್‌ಸಿ-1) ನ್ಯಾಯಾಧೀಶ ವಿನಯ್ ದೇವರಾಜ್ 5 ವರ್ಷಗಳ ಶಿಕ್ಷೆ ವಿಧಿಸಿ ನಿನ್ನೆ (ಫೆ.15) ತೀರ್ಪು ನೀಡಿದ್ದಾರೆ. ಅಬ್ದುಲ್ ಅಶ್ರಫ್ (42) ಶಿಕ್ಷೆಗೊಳಗಾದ ಆರೋಪಿ ಎಂದು ಗುರುತಿಸಲಾಗಿದೆ. ಏನಿದು ಪ್ರಕರಣ ? ಆರೋಪಿತು 2024ರ ಆ.11ರಂದು ತನ್ನ ಅಂಗಡಿಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದದೆ. ಮನೆಯಲ್ಲಿ ನೊಂದು ಕುಳಿತಿದ್ದ ಬಾಲಕಿಯನ್ನು ತಾಯಿ ಪ್ರಶ್ನಿಸಿದಾಗ ನಡೆದ ಘಟನೆಗಳನ್ನು ವಿವರಿಸಿದ್ದಳು. ಘಟನೆಯ ಕುರಿತು ಆ.12ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಸೈ ರತನ್ ಕುಮಾರ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ವೇಳೆ ನ್ಯಾಯಾಧೀಶರು ಆರೋಪಿ ಅಶ್ರಫ್ ಗೆ ಬಿಎನ್‌ಎಸ್ ಕಲಂ 74ರಡಿ 3 ವರ್ಷ ಸಾದಾ ಸಜೆ, 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ,…

Read More

ಕಾರ್ಕಳ: ಚಾಲಕನ ಮೇಲೆ ಟಿಪ್ಪರ್ ಮಾಲೀಕ ಮತ್ತು ಅವರ ಜೊತೆಗಿದ್ದ ವ್ಯಕ್ತಿಯೋರ್ವ ಹಲ್ಲೆ ಮಾಡಿ ಅಟ್ಟಹಾಸ ಮೆರೆದ ಘಟನೆ ಕಾರ್ಕಳದಲ್ಲಿ ನಡೆದಿದೆ. ಯೋಗಿಶ್ ಎಂಬವರು ಬಂಧಿತ ಆರೋಪಿ. ಚಾಲಕ ಅರ್ಜುನ್ ಹಲ್ಲೆಗೊಳಗಾದ ವ್ಯಕ್ತಿ. ಯೋಗಿಶ್ ಎಂಬವರ ಟಿಪ್ಪರ್ ನಲ್ಲಿ ಅರ್ಜುನ್ ಚಾಲಕರಾಗಿ ದುಡಿಯುತ್ತಿದ್ದರು. ಅರ್ಜುನ್ ಗೆ ಸಂಬಳ ಬಾಕಿಯಿಟ್ಟದ್ದನ್ನು ಕೇಳಿದ ಪದೇ ಪದೇ ಕೇಳಿದ ಬಳಿಕ ಯೋಗಿಶ್ ಅದನ್ನು ನವೆಂಬರ್ ನಲ್ಲಿ ಕೊಟ್ಟಿದ್ದರು. ಫೆ.೧೩ಕ್ಕೆ ರಾತ್ರಿ ಬೆಳ್ಮಣ್ ನಲ್ಲಿರುವ ತನ್ನ ಮಾವನ ಹೋಟೆಲ್ ಗೆ ಅರ್ಜುನ್ ಹೋದಾಗ ಅಲ್ಲಿದ್ದ ಯೋಗಿಶ್ ಅವಾಚ್ಯ ಶಬ್ಧಗಳಿಂದ ಬೈದು ಆತನ ಮುಖಕ್ಕೆ ಹೊಡೆದಿದ್ದಾನೆ. ಯೋಗಿಶ್ ಜೊತೆಗಿದ್ದ ಗಡ್ಡಧಾರಿ ವ್ಯಕ್ತಿ ಕೂಡಾ ಸೋಡಾ ಬಾಟಲಿಯಿಂದ ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ಅರ್ಜುನ್ ಕಾರ್ಕಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಅವರು ಹಲ್ಲೆ ನಡೆಸಿದ ಸಂದರ್ಭ ತನ್ನ ಜೇಬಿನಲ್ಲಿದ್ದ ಹಣ ಕಳೆದುಹೋಗಿದೆ ಎಂದು ಕೂಡಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Read More

ಮಂಗಳೂರು: ಸಿಗರೇಟ್ ನಲ್ಲಿ ಮಾದಕ ವಸ್ತುವನ್ನು ಬೆರೆಸಿ ಸಾರ್ವಜನಿಕ ಸ್ಥಳದಲ್ಲಿ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನ ಬಿಜೈಯಲ್ಲಿ ನಡೆದಿದೆ. ಕೇರಳ ಕೋಯಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ನಿವಾಸಿ ಶಾಮಿಲ್ (21) ಹಾಗೂ ಬಿಜೈ ನ್ಯೂ ರೋಡ್ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಸಿಗರೇಟು ಸೇದುತ್ತಿದ್ದ ಮಲಪ್ಪುರ ಜಿಲ್ಲೆಯ ಪೆರುಂಪಡಪ್ಪು ನಿವಾಸಿ ಸಫ್ವಾನ್ (22) ಬಂಧಿತ ಆರೋಪಿಗಳು. ಇವರು ಸಾರ್ವಜನಿಕ ಸ್ಥಳಗಳಲ್ಲಿ ಡ್ರಗ್ಸ್ ಸೇದುತ್ತಿದ್ದ ಬಗ್ಗೆ ಅನುಮಾನಗೊಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದರು. ಇದೀಗ ಅವರನ್ನು ವಶಪಡಿಸಿಕೊಂಡು ಪೊಲೀಸರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಡ್ರಗ್ಸ್ ಸೇವಿಸಿರೋದು ದೃಢಪಟ್ಟಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು: ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿನ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಸಂಚಾರದ ಗಣತಿಯನ್ನು ನಡೆಸಲಾಗುತ್ತಿದೆ. 2025ನೇ ಸಾಲಿನಲ್ಲಿ ರಸ್ತೆ ಸಂಚಾರ ಗಣತಿಯನ್ನು ಫೆಬ್ರವರಿ 17ರಂದು ಬೆಳಗ್ಗೆ 6ರಿಂದ ಫೆಬ್ರವರಿ 24ರ ಬೆಳಗ್ಗೆ 6ರವರೆಗೆ ಸತತವಾಗಿ 7 ದಿನಗಳ ಕಾಲ ನಡೆಸಲಾಗುವುದು. ದ.ಕ. ಜಿಲ್ಲೆಯಲ್ಲಿ ಈ ಗಣತಿಗೆ ಸುಮಾರು 126 ಗಣತಿ ಕೇಂದ್ರಗಳನ್ನು ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಆಯ್ಕೆ ಮಾಡಲಾಗಿದೆ. ವಾಹನ ಸಂಚಾರದ ಬೆಳವಣಿಗೆಯ ತೀವ್ರತೆಯನ್ನು ಗಮನಿಸಿ ರಸ್ತೆಗಳ ಮೇಲೈಯನ್ನು ಅಭಿವೃದ್ಧಿ ಪಡಿಸುವುದು, ರಸ್ತೆಗಳನ್ನು ಅಗಲಪಡಿಸುವುದು ಹಾಗೂ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು ಇತ್ಯಾದಿ ರಸ್ತೆಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರಕಾರವು ರೂಪಿಸಲು ಮತ್ತು ಕೈಗೆತ್ತಿಗೊಳ್ಳುವ ಉದ್ದೇಶದಿಂದ ವಾಹನಗಳ ಸಂಚಾರ ಗಣತಿ ನಡೆಸಲಾಗುತ್ತದೆ. ವಾಹನ ಸಂಚಾರ ವಿವರಗಳನ್ನು ಸಂಗ್ರಸಲು ದ.ಕ. ಜಿಲ್ಲೆಯ 126 ಗಣತಿ ಕೇಂದ್ರಗಳಲ್ಲಿ ಸಹಾಯಕ ಇಂಜಿನಿಯರ್/ಕಿರಿಯ ಇಂಜಿನಿಯರ್‌ಗಳನ್ನು ನೇಮಿಸಲಾಗಿದೆ. ಈ ವಾಹನ ಸಂಚಾರದ ಗಣತಿಗೆ ಚಾಲಕರು ಮತ್ತು ಸಾರ್ವಜನಿಕರು ಸಹಕರಿಸಬೇಕು…

Read More

ಸುಳ್ಯ: ಬಾಡಿಗೆ ಪಾವತಿಸುವಂತೆ ಕೇಳಿದಾಗ ಹಲ್ಲೆ ನಡೆಸಿದ್ದಾರೆಎಂದು ಆರೋಪಿಸಿ ಸುಳ್ಯ ಠಾಣೆಗೆ ದೂರು ನೀಡಲಾಗಿದೆ. ಹಲ್ಲೆಗೊಳಗಾದವರನ್ನು ಕನಕಮಜಲು ಗ್ರಾಮದ ಅಬ್ದುಲ್ లతిథా ಎಂದು ಗುರುತಿಸಲಾಗಿದ್ದು ಅವರು ಸುಳ್ಯದ ಎಪಿಎಂಸಿಯಲ್ಲಿ ಅಡಿಕೆ ವ್ಯಾಪಾರ ಮಾಡುತ್ತಿದ್ದು, ಕನಕಮಜಲಿನ ಸುಣ್ಣಮೂಲೆಯಲ್ಲಿ ಒಂದು ವಾಣಿಜ್ಯ ಕಟ್ಟಡ ಹೊಂದಿದ್ದರು. ಅದರಲ್ಲಿ ಒಂದು ಅಂಗಡಿಯನ್ನು అబ్బులో ಅವರಿಗೆ ಬಾಡಿಗೆ ನೀಡಿದ್ದು, ಅಬ್ದುಲ್ ಸರಿಯಾಗಿ ಬಾಡಿಗೆ ಪಾವತಿಸುತ್ತಿರಲಿಲ್ಲ. ಫೆಬ್ರವರಿ 12ರಂದು ‘ಸಂಜೆ ಅಂಗಡಿ ಬಳಿಗೆ ಹೋಗಿ ಅಬ್ದುಲ್ ಅವರಿಗೆ ತಿಂಗಳಿಗೆ ಸರಿಯಾಗಿ ಬಾಡಿಗೆ ಪಾವತಿಸುವಂತೆ ಕೇಳಿದಾಗ, ಅಂಗಡಿಯಲ್ಲಿದ್ದ ಅಬ್ದುಲ್ ಅವರ ಮಕ್ಕಳಾದ ಬಾತಿಶಾ ಮತ್ತು ಹಫೀಶ್ ಅವಾಚ್ಯವಾಗಿ ಬೈದು ನಾವು ಬಾಡಿಗೆ ಹಣವನ್ನು ಕೊಡುವುದಿಲ್ಲ ನಾವು ಕೊಟ್ಟಾಗ ನೀವು ತೆಗೆದುಕೊಳ್ಳಬೇಕು ಎಂದು ಉಡಾಫೆಯಿಂದ ಮಾತನಾಡಿ ಬಳಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Read More

ಬೆಳ್ಳಾರೆ : ಕೊಳ್ತಿಗೆ ಗ್ರಾಮದಲ್ಲಿ ತಂದೆಯೇ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲೈಂಗಿಕ ದೌರ್ಜನ್ಯದ ಕುರಿತು ಯುವತಿಯ ತಾಯಿಯೇ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ. ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More