Author: main-admin

ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ ದೂರಿನ ಮೇರೆಗೆ ಮಂಗಳೂರಿನ ಪೊಲೀಸ್ ಕಾನ್ಸ್ ಟೇಬಲ್ ಸಿದ್ದೇಗೌಡ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ನಾಲ್ಕು ತಿಂಗಳ ಹಿಂದೆ ರಚನೆಯಾಗಿರುವ ಕೋಮು ಸಂಘರ್ಷ ವಿರೋಧಿ ದಳದಲ್ಲಿ (ಎಸ್‌ಎಎಫ್) ಕಾನ್ಸ್‌ಟೇಬಲ್ ಆಗಿರುವ ಸಿದ್ದೇಗೌಡ ಎಂಬವರ ವಿರುದ್ಧ ಅತ್ಯಾಚಾರದ ಆರೋಪ ಕೇಳಿಬಂದಿದೆ. ವೃತ್ತಿಯಲ್ಲಿ ವಕೀಲೆಯಾಗಿರುವ ಯುವತಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ್ದರು ಎನ್ನಲಾಗ್ತಿದೆ. ಯುವತಿ ದೂರಿನ ಮೇಲೆ ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ಪೊಲೀಸರು ಆರೋಪಿ ಸಿದ್ದೇಗೌಡನನ್ನು ಬಂಧಿಸಿದ್ದಾರೆ. ಸಿದ್ದೇಗೌಡ ನಂಬಿಸಿ ಅತ್ಯಾಚಾರಗೈದು ಬಳಿಕ ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಾರೆ. ಆರೋಪಿ ಸಿದ್ದೇಗೌಡನನ್ನು ಪೊಲೀಸರು ಬಂಧಿಸಿ ಕೋರ್ಟಿಗೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ನೀಡಿದೆ.

Read More

ಕಾರ್ಕಳ: ಕಾರ್ಕಳ ರಥಬೀದಿಯಲ್ಲಿರುವ ಎರಡು ಜ್ಯುವೆಲ್ಲರಿಗೆ ನುಗ್ಗಿ ಕಳವಿಗೆ ಯತ್ನಿಸಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಹರ್ಷವರ್ಧನ ಆಚಾರ್ಯ ಎಂಬವರ ಕರ್ನಾಟಕ ಜ್ಯುವೆಲ್ಲರಿ ಹಾಗೂ ಪ್ರಕಾಶ್ ಎಂಬವರ ಪ್ರಣವ್ ಜ್ಯುವೆಲ್ಲರಿ ಅಂಗಡಿಗಳಿಗೆ ಅಳವಡಿಸಿದ್ದ ಶಟರ್‌ನ್ನು ಗ್ಯಾಸ್ ಕಟರ್‌ನಿಂದ ಮುರಿದು ಕಳವು ಮಾಡಲು ಯತ್ನಿಸಿರುವುದು ಕಂಡುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬಂಟ್ವಾಳ: ಲಂಚ ಸ್ವೀಕರಿಸುವ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶನಿವಾರ (ಸೆ.6) ನಡೆದಿದೆ. ಪೆರುವಾಯಿ ಗ್ರಾಮಪಂಚಾಯತ್ ಅಧ್ಯಕ್ಷೆ ನಫೀಸಾ ಮತ್ತು ಬಿಲ್ ಕಲೆಕ್ಟರ್ ವಿಲಿಯಂ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ. ಪೆರುವಾಯಿ ಗ್ರಾಮಕ್ಕೆ ಸಂಬಂಧ ಪಟ್ಟ ದೂರುದಾರರು ತಮ್ಮ ಜಾಗಕ್ಕೆ ಕೊಳವೆಬಾವಿ ಮಂಜೂರಾತಿಗಾಗಿ 2024ರಲ್ಲಿ ಪೆರುವಾಯಿ ಗ್ರಾಮ ಪಂಚಾಯತ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಬಳಿಕ ಪೆರುವಾಯಿ ಗ್ರಾಮ ಪಂಚಾಯತ್ ಕಚೇರಿಗೆ ಎರಡು ಮೂರು ಬಾರಿ ಹೋಗಿ ವಿಚಾರಿಸಿದರೂ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ. ದೂರುದಾರ ಮಾವನಿಗೆ ಸುಮಾರು 75 ವರ್ಷ ವಯಸ್ಸಾಗಿದ್ದು, ಅವರಿಗೆ ಅಸೌಖ್ಯ ಇದ್ದುದರಿಂದ ಫಿರ್ಯಾದಿದಾರರನ್ನು ಕರೆದು ಕೊಳವೆ ಬಾವಿ ಬಗ್ಗೆ ಪಂಚಾಯತ್ ಗೆ ಹೋಗಿ ವಿಚಾರಿಸಿಕೊಂಡು ತಿಳಿಸಿದ್ದಾರೆ. ಈ ಹಿನ್ನಲೆ ಸೆ. 2 ರಂದು ಪೆರುವಾಯಿ ಗ್ರಾಮ ಪಂಚಾಯತ್ ಗೆ ಹೋಗಿ ಗ್ರಾಮ ಪಂಚಾಯತ್ ನ ಅಧ್ಯಕ್ಷೆಯಾದ ನಫೀಸಾ ರವರಲ್ಲಿ ತನ್ನ ಮಾವನವರ ಹೆಸರಿಗೆ ಕೊಳವೆ ಬಾವಿ ಮಂಜೂರು ಆಗಿದೆಯೇ…

Read More

ಉಡುಪಿ: ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಲ್ಪೆ ಪೊಲೀಸರು ಸೆ.5ರಂದು ಸಂಜೆ ವೇಳೆ ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟು ಕೆಎಂಪಿ ರಸ್ತೆಯಲ್ಲಿರುವ ಶ್ರೀಬೊಬ್ಬರ್ಯ ದೈವಸ್ಥಾನದ ಬಳಿ ಬಂಧಿಸಿದ್ದಾರೆ. ಮಂಗಳೂರು ಉರ್ವ ಬೋಳೂರು ನಿವಾಸಿ ಅಚ್ಚುತ ಎನ್. ಯಾನೆ ಕಿರಣ್ ಮೆಂಡನ್(45), ಗುಜ್ಜರಬೆಟ್ಟುವಿನ ಪುನೀತ್ ಯಾನೆ ಪುನೀತ್ ರಾಜ್(24), ಒಡಿಸ್ಸಾ ಮೂಲದ ಪ್ರಸ್ತುತ ಪಡುತೋನ್ಸೆ ನಿವಾಸಿ ಚಂದ್ರಕಾಂತ ಕಟ್ವ ಬಂಧಿತ ಆರೋಪಿಗಳು. ಪೊಲೀಸ್ ದಾಳಿ ವೇಳೆ ಕೊಳಲಗಿರಿಯ ಕಿಶೋರ ಎಂಬಾತ ಪರಾರಿಯಾಗಿದ್ದಾನೆ. ಆರೋಪಿಗಳು ಬೈಕಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಪೊಲೀಸರನ್ನು ಕಂಡು ಓರ್ವ ಆರೋಪಿ ಓಡಿ ಹೋಗಿದ್ದು, ಉಳಿದ ಮೂವರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ 3‌ ಗ್ರಾಂ 480 ಮಿಲ್ಲಿ ಗ್ರಾಂ ತೂಕದ ಗಾಂಜಾ ಅಂದಾಜು ಮೌಲ್ಯ 3,000ರೂ. ಹಾಗೂ MDMAನ ಅಂದಾಜು ಮೌಲ್ಯ 10,000 ರೂ. ಎಂದು ಅಂದಾಜಿಸಲಾಗಿದೆ. ಎಂಡಿಎಎ ಮತ್ತು ಕೃತ್ಯಕ್ಕೆ ಬಳಸಿದ 1,50,000…

Read More

ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2016ರಲ್ಲಿ ನಡೆದ ಕೊಲೆಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಕಾವೂರು ಕೆಎಚ್‌ಬಿ ಕಾಲನಿಯ ನಿವಾಸಿ ವಿಶಾಲ್ ಕುಮಾರ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು 2022ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿತ್ತು. ದುಬೈಗೆ ಹೋಗಿರುವ ಖಚಿತ ಮಾಹಿತಿ ಮೇರೆಗೆ ಈತನ ಮೇಲೆ ಎಲ್‌ಒಸಿ ಹೊರಡಿಸಲಾಗಿತ್ತು. ಗುರುವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಬಗ್ಗೆ ಮಾಹಿತಿ ಪಡೆದ ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆದು ಮುಂದಿನ ಕ್ರಮದ ಬಗ್ಗೆ ಕಾವೂರು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಅದರಂತೆ ಶುಕ್ರವಾರ ಆರೋಪಿಯನ್ನು 3ನೇ ಹೆಚ್ಚುವರಿ ಜಿಲ್ಲಾ ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಸೆ.18ರವರೆಗೆ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈತನ ಮೇಲೆ ಬರ್ಕೆ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ.

Read More

ಮಂಗಳೂರು: ಸುರತ್ಕಲ್‌ ಬಳಿಯ ಮುಕ್ಕದ ಲೇಔಟ್‌ ಒಂದರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ರತುವಾ ಪರಂಪುರ್‌ ನಿವಾಸಿ ಮುಖೇಶ್‌ ಮಂಡಲ್‌ (27) ಎಂಬವರನ್ನು ಕೊಲೆ ಮಾಡಿ ಎಸ್‌ಟಿಪಿ ಟ್ಯಾಂಕ್ ನಲ್ಲಿ ಹಾಕಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಆರೋಪಿಯನ್ನು ಸುರತ್ಕಲ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿಯನ್ನು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ರತುವಾ ಬಾದೋ ಗ್ರಾಮದ ನಿವಾಸಿ ಲಕ್ಷ್ಮಣ್‌ ಮಂಡಲ್‌ ಯಾನೇ ಲಖನ್‌ (30) ಎಂದು ಗುರುತಿಸಲಾಗಿದೆ. ಮುಖೇಶ್‌ ಮಂಡಲ್‌ ಲೇ ಔಟ್‌ನಿಂದ ಜೂ.24ರಂದು ದಿಢೀರ್‌ ಕಣ್ಮರೆಯಾಗಿದ್ದು, ಈ ಬಗ್ಗೆ ಆತನ ಜತಗೆ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ನಿವಾಸಿ ದೀಪಾಂಕರ್‌ ಜು.2ರಂದು ಸುರತ್ಕಲ್‌ ಠಾಣೆಗೆ ದೂರು ನೀಡಿದ್ದರು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಈ ನಡುವೆ ಆ.21ರಂದು ಬೆಳಗ್ಗೆ 10 ಗಂಟೆಗೆ ಲೇಔಟ್‌ ಎಸ್‌ಟಿಪಿ ಟ್ಯಾಂಕ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮುಖೇಶ್‌ ಮಂಡಲ್‌ನ ಮೃತ ದೇಹ ಪತ್ತೆಯಾಗಿತ್ತು. ಮುಖೇಶ್‌ನನ್ನು ಲಕ್ಷ್ಮಣ್‌ ಮಂಡಲ್‌ ಕೊಲೆ ಮಾಡಿ…

Read More

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ರೋಹನ್ ಕಾರ್ಪೋರೇಶನ್ ರೇಶನ್ ಸಂಸ್ಥೆಯ ವತಿಯಿಂದ ರೋಹನ್ ಸಿಟಿ ಕಛೇರಿಯಲ್ಲಿ ಒಣಂ ಹಬ್ಬವನ್ನು ಆಚರಿಸಲಾಯಿತು. ಸಿಬ್ಬಂದಿಗಳು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು, ಸಾಂಸ್ಕೃತಿಕ ವೈಭವವನ್ನು ಹಂಚಿಕೊಂಡರು.ಕಾರ್ಯಕ್ರಮವು ದೀಪಪ್ರಜ್ವಲನದೊಂದಿಗೆ ಆರಂಭಗೊಂಡಿತು. ಸಂಸ್ಥೆಯ ನಿರ್ದೇಶಕ ಶ್ರೀ ಡಿಯೋನ್ ಮೊಂತೆರೋ ಮತ್ತು ಜನರಲ್ ಮ್ಯಾನೇಜರ್ ಶ್ರೀಮತಿ ಸುಮನಾ ಅವರು ದೀಪ ಬೆಳಗುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಓಣಂ ಹಬ್ಬದ ಹೂವಿನ ಅಲಂಕಾರ ( ಪೂಕಳಂ ), ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಂಸ್ಥೆಯ ಸಿಬ್ಬಂದಿಗಳ ಸಕ್ರಿಯ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿರ್ದೇಶಕ ಶ್ರೀ ಡಿಯೋನ್ ಮೊಂತೆರೋ “ಒಣಂ ಹಬ್ಬವು ಏಕತೆ ಸಂಕೇತ. ಇಂತಹ ಆಚರಣೆಗಳು ನಮ್ಮ ಬಾಂಧವ್ಯವನ್ನು ಬಲಪಡಿಸುತ್ತವೆ” ಎಂದು ಹೇಳಿದರು.“ಎಲ್ಲರೂ ಒಗ್ಗಟ್ಟಿನಿಂದ ಒಂದು ಕುಟುಂಬದಂತೆ ಹಬ್ಬವನ್ನು ಆಚರಿಸುತ್ತಿರುವುದು ಸಂತೋಷಕರ. ಇಂತಹ ಸಂದರ್ಭಗಳು ಪರಸ್ಪರ ಗೌರವ ಮತ್ತು ಸ್ನೇಹವನ್ನು ಹೆಚ್ಚಿಸುತ್ತವೆ” ಎಂದು ಜನರಲ್ ಮ್ಯಾನೇಜರ್ ಶ್ರೀಮತಿ ಸುಮನಾ ಹೇಳಿದರು. ರೋಹನ್ ಕಾರ್ಪೋರೇಶನ್ ವತಿಯಿಂದ ಹಮ್ಮಿಕೊಂಡಿದ್ದ ಈ…

Read More

ಉಪ್ಪಿನಂಗಡಿ: ಹಟ್ಟಿಯಿಂದ ದನವನ್ನು ಕದ್ದುಕೊಂಡು ಹೋಗಿ ದನದ ಮಾಲಕನ ತೋಟದಲ್ಲೇ ಅದನ್ನು ಕೊಂದು ಅದರ ಕರುಳು ಸಹಿತ ಹೊಟ್ಟೆಯೊಳಗಿನ ತ್ಯಾಜ್ಯವನ್ನು ಅಲ್ಲೇ ಬಿಸಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಇರ್ಷಾದ್ (34), ಮಂಗಳೂರು ಕುದ್ರೋಳಿ ನಿವಾಸಿ ಮಹಮ್ಮದ್ ಮನ್ಸೂರ್ (48), ಮಂಗಳೂರು ಕಣ್ಣೂರು ನಿವಾಸಿ ಅಬ್ದುಲ್ ಅಝೀಮ್ (18) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಸೆ.4ರಂದು ನಸುಕಿನ ವೇಳೆ ಪೆರ್ನೆಯ ಕಡಂಬು ನಿವಾಸಿ ದೇಜಪ್ಪ ಮೂಲ್ಯರ ಹಟ್ಟಿಯಿಂದ ದನವನ್ನು ಕದ್ದು, ದೇಜಪ್ಪ ಮೂಲ್ಯರ ಜಾಗದಲ್ಲೇ ಅದನ್ನು ಕೊಂದು ಅದರ ಹೊಟ್ಟೆಯೊಳಗಿನ ಕರುಳು ಸೇರಿದಂತೆ ತ್ಯಾಜ್ಯವನ್ನು ಹೊರತೆಗೆದು, ಅದನ್ನು ಅಲ್ಲೇ ಎಸೆದು ಹೋಗಿರುವುದಾಗಿ ದೂರಲಾಗಿತ್ತು. ದುಷ್ಕರ್ಮಿಗಳ ಇಂತಹ ಹೀನ ಕೃತ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

Read More

ಉಡುಪಿ : ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಗೆ ಮತ್ತು ನ್ಯಾಯಾಲಯಕ್ಕೆ ನಕಲಿ ಇನ್ಸೂರೆನ್ಸ್ ಪಾಲಿಸಿ ಸೃಷ್ಟಿಸಿ ನೀಡಿ ವಂಚಿಸಿರುವ ಬಗ್ಗೆ ಬಸ್ರೂರು ಶ್ರೀ ಶಾರದಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇದರ ಮಾಲಕರ ವಿರುದ್ಧ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಹುಣ್ಸೆಮಕ್ಕಿಯಲ್ಲಿ 25/11/2024 ರಂದು ಶಾಲಾ ವಾಹನ ರಿಕ್ಷಾಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ಕುಂದಾಪುರದ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗ ಪ್ರಕರಣದಲ್ಲಿ ರಿಕ್ಷಾ ಚಾಲಕ ಉದಯ ವಿಮಾ ಪರಿಹಾರ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಆಗ ವಿಮಾ ಕಂಪೆನಿಯವರು ಶಾಲಾ ವಾಹನದ ವಿಮಾ ಪಾಲಿಸಿಯನ್ನು ಪರಿಶೀಲಿಸಿದಾಗ ಪಾಲಿಸಿ ನಕಲಿ ಎಂಬುವುದಾಗಿ ಕಂಡುಬಂದಿರುತ್ತದೆ . ಆದ್ದರಿಂದ ಆರೋಪಿ ಶ್ರೀ ಶಾರದಾ ಇಂಗ್ಲಿಷ್ ಮೀಡಿಯಂ ಶಾಲೆಯ ಮಾಲಕರ ವಿರುದ್ಧ ನಕಲಿ ವಿಮಾ ಸೃಷ್ಟಿಸಿ ಠಾಣೆಗೆ ಮತ್ತು ಮಾನ್ಯ ನ್ಯಾಯಾಲಯಕ್ಕೆ ಹಾಜರು…

Read More

1998ರಲ್ಲಿ ಕಥೊಲಿಕ್ ಉದ್ಯಮಿಗಳು, ವೃತ್ತಿಪರರು ಹಾಗೂ ಕೃಷಿಕರು ಒಟ್ಟಾಗಿ ಸೇರಿ ಆರಂಭಿಸಿದ ರಚನಾ ಸಂಸ್ಥೆಯು ತನ್ನ ಮೂಲ ಆಶಯವಾದ ಕಥೊಲಿಕ್ ಯುವಜನರಿಗೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ತರಬೇತಿ, ಬಂಡವಾಳ ಜೋಡಿಸುವಿಕೆ, ತಾಂತ್ರಿಕ ಸಹಕಾರ ನೀಡುವುದರ ಜೊತೆಗೆ ಸಂಸ್ಥೆಯ ಸದಸ್ಯರಲ್ಲಿ ಸಹಕಾರ ಹಾಗೂ ಸಂಬಂಧವನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಾ ಬಂದಿದೆ.ಇದಕ್ಕೆ ಪೂರಕವಾಗಿ ರಚನಾ ಉದ್ಯಮ ತರಬೇತಿ ವಿಭಾಗವನ್ನು ಆರಂಭಿಸಿ ಕಳೆದ ಕೆಲವು ವರ್ಷಗಳಿಂದ ಹಲವು ಯುವ ಜನರಿಗೆ ತರಬೇತಿಯನ್ನು ನೀಡಲಾಗಿದೆ. ಕ್ರೈಸ್ತ ಕಥೊಲಿಕ್ ಸಮಾಜದ ಯಶಸ್ವಿ ಉದ್ಯಮಿಗಳು, ವೃತ್ತಿಪರರು, ಕೃಷಿಕರು, ಅನಿವಾಸಿ ಭಾರತೀಯರು ಹಾಗೂ ಸಾಧಕ ಮಹಿಳೆಯರನ್ನು ಗುರುತಿಸಿ ಪ್ರತಿಷ್ಠಿತ ರಚನಾ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.ಕಳೆದ ಬಾರಿಯಂತೆ ಈ ಬಾರಿಯೂ ಸುಮಾರು 25 ಜ್ಯೂರಿ ಸದಸ್ಯರನ್ನೊಳಗೊಂಡ ಸಮಿತಿಯು ಪರಿಶೀಲನೆ ನಡೆಸಿ ಈ ಕೆಳಗಿನ ವ್ಯಕ್ತಿಗಳನ್ನು 2025ನೇ ಸಾಲಿನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ:ರಚನಾ ಉದ್ಯಮಿ – ಶ್ರೀ ಆಸ್ಟಿನ್ ರೋಚ್, ಬೆಂಗಳೂರುರಚನಾ ವೃತ್ತಿಪರ – ಶ್ರೀ ಜಾನ್ ರಿಚರ್ಡ್ ಲೋಬೊ ಕೆ.ಎ.ಎಸ್, ಮಂಗಳೂರುರಚನಾ ಕೃಷಿಕ -…

Read More