ಬಜ್ಪೆ: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಟ್ರೋಲಿ ಬ್ಯಾಗ್ ತೆರೆದು 4.5ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈದಿರುವ ಪ್ರಕರಣದಲ್ಲಿ 5 ಮಂದಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಲೋಡಿಂಗ್ ಅನ್ ಲೋಡಿಂಗ್ ಮಾಡುವ ಸಾಟ್ಸ್ ನೌಕರರಾದ ನಿತಿನ್, ಮೂಡುಪೆರಾರದ ನಿವಾಸಿಗಳಾದ ಸದಾನಂದ, ರಾಜೇಶ್, ಬಜ್ಪೆ ನಿವಾಸಿ ಪ್ರವೀಣ್ ಫೆರ್ನಾಂಡಿಸ್ ಮತ್ತು ಚಿನ್ನಾಭರಣ ಪಡೆದುಕೊಂಡು ಚಿನ್ನದ ಗಟ್ಟಿಯಾಗಿಸಿದ್ದ ಬಜ್ಪೆ ಮೂಡು ಪೆರಾರ ನಿವಾಸಿ ರವಿರಾಜ್ ಎಂದು ತಿಳಿದು ಬಂದಿದೆ. ರಾಜೇಶ್ವರಿ ಪದ್ಮಶಾಲಿ ಅವರು ಆ.30ರಂದು ಬೆಂಗಳೂರಿನಿಂದ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ಸಂದರ್ಭ ಅವರ ಲಗೇಜ್ ಟ್ರೋಲಿ ಬ್ಯಾಗನ್ನು ತೆರೆದು 4.5ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಲಾಗಿತ್ತು. ಈ ಕುರಿತು ಅವರು ಬಜ್ಪೆ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡ ಬಜ್ಪೆ ಪೊಲೀಸರು ತನಿಖೆ ಆರಂಭಿಸಿ ವಿಮಾನ ನಿಲ್ದಾಣದ ಲೋಡ್ ಮತ್ತು ಅನ್ ಲೋಡ್…
Author: main-admin
ಬಾಡಿಗೆ ಮನೆಯನ್ನು.ಪರಭಾಷಿಗರಿಗೆ ಹಾಗೂ ವಿದೇಶಿಗರು ಮನೆಗಳನ್ನು ಬಾಡಿಗೆಗೆ ಪಡೆದು ವಾಸಿಸುತ್ತಾರೆ. ಯಾವುದೇ ಮಾಹಿತಿ ತಿಳಿಯದೆ ಮನೆ ಬಾಡಿಗೆಗೆ ಕೊಡುವುದ್ರಿಂದ ನಾನಾ ಅನಾಹುತ ಕೂಡ ಸಂಭವಿಸುತ್ತದೆ. ಹೀಗಾಗಿ ಪೊಲೀಸರು ಸಿಲಿಕಾನ್ ಸಿಟಿ ಮನೆ ಮಾಲೀಕರಿಗೆ ಗೈಡ್ ಲೈನ್ಸ್ ಹೊರಡಿಸಿದ್ದಾರೆ. ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆಗೆ ಕೊಡುವುದು ಸಿಕ್ಕಾಪಟ್ಟೆ ಡೇಂಜರ್ ಎನ್ನಲಾಗ್ತಿದೆ. ಕೆಲವರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರ್ತಾರೆ. ಇಂಥವರನ್ನ ಗುರುತಿಸೋದು ಕಷ್ಟವಾಗಿದೆ. ಹೀಗಾಗಿ ವಿದೇಶಿ ಪ್ರಜೆಗಳು ವಾಸವಿರುವ ಮನೆ ಮಾಲೀಕರಿಗಾಗಿ ಮಾರ್ಗಸೂಚಿ ಹೊರಡಿಸಿದ್ದಾರೆ. ಮನೆ ಮಾಲೀಕರಿಗೆ 7 ಗೈಡ್ಲೈನ್ಸ್ 1. ಮನೆ ಮಾಲೀಕರು ಸಿ ಫಾರ್ಮ್ ಅನ್ನ ಎಫ್ಆರ್ ಆರ್ ಓ/ ಎಫ್ಆರ್ ಓಗೆ ಸಲ್ಲಿಸಬೇಕು. 2. ಬಾಡಿಗೆದಾರರ ಪಾಸ್ ಪೋರ್ಟ್ ಮತ್ತು ವೀಸಾ ಪ್ರತಿಗಳು ಕಡ್ಡಾಯವಾಗಿ ಸಂಗ್ರಹಿಸಬೇಕು. 3. ಬಾಡಿಗೆ ನೀಡುವ ಮೊದಲು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. 4. ಮಾನ್ಯ ವೀಸಾ/ಅನುಮತಿ ಇಲ್ಲದೆ ವಾಸಿಸಲು ಅವಕಾಶ ನೀಡಬಾರದು. 5. ನೊಂದಾಯಿತ ಬಾಡಿಗೆ ಒಪ್ಪಂದ ಮಾಡಬೇಕು. 6. ವಿದೇಶಿ ಬಾಡಿಗೆದಾರರ…
ಮಂಗಳೂರು : ನಗರದ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿ ಸುನೀಲ್ ಎಂದು ತಿಳಿದು ಬಂದಿದೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಸಹಿತ ಸೊತ್ತುಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದಿನಾಂಕ: 01-09-2025 ರಂದು ಸಂಜೆ:4-00 ಗಂಟೆಗೆ ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣೆಯ ಉಪ ನಿರೀಕ್ಷಕ ವಿನಾಯಕ ರವರಿಗೆ ಬಾತ್ಮೀದಾರರೊಬ್ಬರಿಂದ ಮಂಗಳೂರು ನಗರದ ಸುಲ್ತಾನ್ ಭತ್ತೇರಿ ಎಂಬಲ್ಲಿ ಒಬ್ಬ ವ್ಯಕ್ತಿಯು KA-19 HJ1184 ನೇ ಬಿಳಿ ಬಣ್ಣದ ಸ್ಕೂಟರ್ ನಲ್ಲಿ ಅಕ್ರಮವಾಗಿ ಗಾಂಜಾ ಎಂಬ ಮಾದಕ ವಸ್ತುವನ್ನು ಇಟ್ಟು ಕೊಂಡು ಮಾರಾಟ ಮಾಡಲು ಬರುತ್ತಿದ್ದಾನೆಂದು ಮಾಹಿತಿ ಬಂದಂತೆ ಸಂಜೆ 7-15 ಗಂಟೆಗೆ ದಾಳಿ ನಡೆಸಿದಾಗ ಆರೋಪಿ ಸುನೀಲ್ ನು ಎನ್.ಡಿ.ಪಿ.ಎಸ್ ಕಾಯ್ದೆಯನ್ನು ಉಲ್ಲಂಘಿಸಿ ಅಕ್ರಮ ಲಾಭ ಗಳಿಸಲು ಯಾವುದೇ ಪರವಾನಿಗೆ ಇಲ್ಲದೇ ಆರೋಗ್ಯಕ್ಕೆ ಹಾನಿಕಾರಕವಾದ ಒಟ್ಟು 1 ಕೆಜಿ 394 ಗ್ರಾಂ ತೂಕದ ವಾಣಿಜ್ಯ ಪ್ರಮಾಣದ ನಿಷೇದಿತ ಗಾಂಜಾ ಎಂಬ ಮಾಧಕ ವಸ್ತುವನ್ನು…
ಮಂಗಳೂರು: ನಗರದ ಕಾಟಿಪಳ್ಳ ಗ್ರಾಮದ ಗಣೇಶಕಟ್ಟೆ ನಿವಾಸಿ ಪ್ರಜ್ಞಾ (18) ಎಂಬವರು ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದು, ಸೆಪ್ಟೆಂಬರ್ 1 ರಂದು ಕಾಲೇಜು ಸಮವಸ್ತ್ರ ಧರಿಸಿ ಕಾಲೇಜಿಗೆ ಹೋಗುವುದಾಗಿ ತಾಯಿಯಲ್ಲಿ ತಿಳಿಸಿ ಹೋದವರು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದವರ ಚಹರೆ:- ಎತ್ತರ ಸುಮಾರು 5.3 ಅಡಿ, ಸಾಧಾರಣ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ, ಕಪ್ಪು ಕೂದಲು ಹೊಂದಿರುತ್ತಾರೆ. ಕನ್ನಡ, ತುಳು, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ಬ್ಲೂ ಬಣ್ಣದ ಅರ್ಧ ತೋಳಿನ ಕಾಲೇಜು ಸಮವಸ್ತ್ರ ಶರ್ಟ್ ಹಾಗೂ ಕಪ್ಪು ಬಣ್ಣದ ಕಾಲೇಜು ಸಮವಸ್ತ್ರ ಪ್ಯಾಂಟ್ ಧರಿಸಿದ್ದರು. ಕಾಣೆಯಾದವರ ಗುರುತು ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಲ್ಕಿಯ ಕೊಲ್ನಾಡು ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿಯಿಂದ ಮಂಗಳೂರು ಕಡೆಗೆ ಹಾದು ಹೋಗುವ ರಸ್ತೆಯ ಬಳಿ ಪೊಲೀಸರು ವ್ಯಕ್ತಿಯೋರ್ವನಿಂದ ಸುಮಾರು 1 ಕೆ.ಜಿ 160 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಮಂಗಳೂರು ಕೋಡಿಕಲ್ ನಿವಾಸಿ ಧನೇಶ್ ಎಸ್. ಕುಮಾರ್ (35) ಎಂದು ಗುರುತಿಸಲಾಗಿದೆ. ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಮುಲ್ಕಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್, ಬಿ.ಎಸ್ ರವರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದ್ದು, ಮೊಬೈಲ್ ಫೋನ್ ಹಾಗೂ ಗಾಂಜಾ ತೂಕ ಮಾಡುವ ಯಂತ್ರ ಮತ್ತು ಇತರೆ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಮೂಡುಬಿದಿರೆ: ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ ಮಹಿಳೆಗೆ ಪೊಲೀಸ್ ಸಿಬ್ಬಂದಿಯೋರ್ವ ಕರೆ ಮಾಡಿ ಅಶ್ಲೀಲ ಮಾತನಾಡಿ ಕಿರುಕುಳ ನೀಡಿರುವ ಘಟನೆ ನಡೆದಿದೆ. ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ತೋಡಾರು ಬಳಿಯ ವಿವಾಹಿತ ಮಹಿಳೆಯೊಬ್ಬರು ಕುಟುಂಬ ಸಮಸ್ಯೆಯ ಬಗ್ಗೆ ಆ.23ರಂದು ಮೂಡುಬಿದಿರೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸ್ ನಿರೀಕ್ಷಕ ಸಂದೇಶ್ ಅವರು ಪತಿ ಹಾಗೂ ಪತ್ನಿಯನ್ನು ಠಾಣೆಗೆ ಕರೆಸಿ ಮಾತನಾಡಿ ಪ್ರಕರಣವನ್ನು ಇತ್ಯರ್ಥಗೊಳಿಸಿ ಕಳುಹಿಸಿದ್ದರು ಎಂದು ತಿಳಿದು ಬಂದಿದೆ. ಈ ನಡುವೆ ಮೂಡುಬಿದಿರೆ ಪೊಲೀಸ್ ಠಾಣೆಯ ಸಿಬ್ಬಂದಿ ಶಾಂತಪ್ಪ ಎಂಬಾತ ಸಂತ್ರಸ್ತ ಮಹಿಳೆ ನೀಡಿದ್ದ ದೂರು ಪ್ರತಿಯಲ್ಲಿದ್ದ ಆಕೆಯ ಮೊಬೈಲ್ ಸಂಖ್ಯೆಯನ್ನು ಪಡೆದು ಆ.25ರಿಂದ ಸೆ.1ರ ವರೆಗೂ ಆಕೆಗೆ ನಿರಂತರ ಮೆಸೇಜ್ ಮತ್ತು ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಾ, ತನ್ನೊಂದಿಗೆ ಬರುವಂತೆ ಕರೆಯುತ್ತಿದ್ದ ಎಂದು ಮಹಿಳೆ ಸೆ.1ರಂದು ಮೂಡುಬಿದಿರೆ ಠಾಣೆಗೆ ಬಂದು ಸಿಬ್ಬಂದಿ ಶಾಂತಪ್ಪನ ವಿರುದ್ಧ ಕಾಲ್ ರೆಕಾರ್ಡ್ ಸಹಿತ ದೂರು…
ಗೃಹ ಸಚಿವ ಪರಮೇಶ್ವರ ಅವರನ್ನು SIT ಮುಖ್ಯಸ್ಥ ಪ್ರಣಬ್ ಮೋಹಂತಿ ಇಂದು ಭೇಟಿಯಾದರು. ಜಿ ಪರಮೇಶ್ವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಬೆಂಗಳೂರಿನ ಸದಾಶಿವನಾಗರದಲ್ಲಿರುವ ಪರಮೇಶ್ವರ್ ನಿವಾಸದಲ್ಲಿ ಎಸ್ಐಟಿ ಮುಖ್ಯಸ್ಥ ಆಗಿರುವ ಪ್ರಣಬ್ ಮೋಹಂತಿ ಧರ್ಮಸ್ಥಳ ಪ್ರಕರಣದ ಕುರಿತು ಚರ್ಚಿಸಿದರು. ಬೆಂಗಳೂರಿನ ಸದಾಶಿವ ನಗರ ನಿವಾಸಕ್ಕೆ ಆಗಮಿಸಿದ ಎಸ್ ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ, ಗೃಹ ಸಚಿವ ಡಾ.ಪರಮೇಶ್ವರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಧರ್ಮಸ್ಥಳ ಪ್ರಕರಣದಲ್ಲಿ ಈವರೆಗಿನ ತನಿಖಾ ಬೆಳವಣಿಗೆ, ಎಸ್ ಐಟಿ ಕೈಗೊಳ್ಳಲಿರುವ ಮುಂದಿನ ನಡೆ ವಿಚಾರವಾಗಿ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.
ಮಂಗಳೂರು: ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುವನ್ನು ಮಾರಾಟ ಮತ್ತು ಸಾಗಾಟ ಮಾಡಿದ ಆರೋಪಿತರನ್ನು ಪಣಂಬೂರು ಪೊಲೀಸರು ದಸ್ತಗಿರಿ ಮಾಡಿ ಮಾದಕ ವಸ್ತುಗಳನ್ನು ಮತ್ತು ಮೊಬೈಲ್ ಫೋನ್ ಗಳನ್ನು ಸ್ವಾಧೀನಪಡಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಬಂಧಿತರನ್ನು ಬಿಹಾರ ರಾಜ್ಯದ ಹರ್ಷ ಕುಮಾರ್ (22) ಮತ್ತು ಅಮರ್ ಕುಮಾರ (28) ಎಂದು ಗುರುತಿಸಲಾಗಿದೆ. ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ 62 ನೇ ತೋಕೂರು ಗ್ರಾಮದ, ತೋಕೂರು ರೈಲ್ವೇ ಸ್ಟೇಶನ್ ಬಳಿ ಸಾರ್ವಜನಿಕರು ಓಡಾಡುವ ರಸ್ತೆಯ ಬದಿಯಲ್ಲಿ ಇಬ್ಬರು ಯುವಕರು ಮಾದಕ ವಸ್ತು ವಶದಲ್ಲಿ ಹೊಂದಿ ಮಾರಾಟ ಮಾಡುತ್ತಿರುವ ಬಗ್ಗೆ ಪಣಂಬೂರು ಠಾಣಾ ಪಿಎಸ್ಐ ಜ್ಞಾನಶೇಖರರವರಿಗೆ ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯಂತೆ ಮಂಗಳೂರು ನಗರ ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತಕರಾದ ಶ್ರೀಕಾಂತ್ ಕೆ ರವರ ನಿರ್ದೆಶನದಂತೆ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕರಾದ ಮೊಹಮ್ಮದ್ ಸಲೀಂ ಅಬ್ಬಾಸ್ ರವರ ನೇತೃತ್ವದಲ್ಲಿ ಜ್ಞಾನಶೇಖರ ರವರು ತಮ್ಮ ಸಿಬ್ಬಂದಿಗಳ ಆರೋಪಿತರಾದ ಬಿಹಾರ ರಾಜ್ಯದ ಹರ್ಷ ಕುಮಾರ್ ಎಂಬಾತನಿಂದ…
ಮಂಗಳೂರು : ಹೈಲ್ಯಾಂಡ್, ಫಳ್ನಿರ್ ರಸ್ತೆಯಲ್ಲಿರುವ ಯೂನಿಟಿ ಆಸ್ಪತ್ರೆ, ಹೃದಯ ಹಾಗೂ ನರವ್ಯವಸ್ಥಾ ಚಿಕಿತ್ಸೆಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಫಿಲಿಪ್ಸ್ ಅಜುರಿಯನ್ ಕ್ಯಾಥ್ಲ್ಯಾಬ್ – ಆವೃತ್ತಿ 3.0 ಅನ್ನು ಲೋಕಾರ್ಪಣೆಗೊಳಿಸಿದೆ. ಈ ಅತ್ಯಾಧುನಿಕ ಸೀಲಿಂಗ್-ಮೌಂಟೆಡ್ ಕ್ಯಾಥ್ಲ್ಯಾಬ್ ಕರಾವಳಿ ಕರ್ನಾಟಕದಲ್ಲಿ ಪ್ರಪ್ರಥಮವಾಗಿದ್ದು ಹೃದಯ, ನರವ್ಯವಸ್ಥೆ ಹಾಗೂ ಇಂಟರ್ವೆನ್ಶನಲ್ ರೇಡಿಯಾಲಜಿ ಚಿಕಿತ್ಸೆಗಳಿಗಾಗಿ ಜಾಗತಿಕ ಮಟ್ಟದ ನಿಖರತೆ ಹಾಗೂ ನವೀನತೆಯನ್ನು ಒದಗಿಸುತ್ತದೆ. ಇದು ರೋಗಿಗಳಿಗೆ ಉತ್ತಮ ಚಿಕಿತ್ಸಾ ಫಲಿತಾಂಶಗಳನ್ನು ನೀಡಲು, ಪ್ರಕ್ರಿಯೆಯ ಸಮಯವನ್ನು ಕಡಿಮೆ ಮಾಡಲು ಹಾಗೂ ಸುರಕ್ಷತೆ ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಫಿಲಿಪ್ಸ್ ಅಜುರಿಯನ್ ವ್ಯವಸ್ಥೆ ಕಡಿಮೆ ಆಕ್ರಮಣಕಾರಿಯಾದ ಚಿಕಿತ್ಸೆಗಳಲ್ಲಿ ಒಂದು ಮಹತ್ತರವಾದ ಮೆಟ್ಟಿಲಾಗಿದೆ. ಮುಖ್ಯ ಲಕ್ಷಣಗಳು ಮತ್ತು ಲಾಭಗಳು:• ಆಧುನಿಕ ಚಿತ್ರಣ ಶಕ್ತಿ ಮತ್ತು ನಿಖರತೆ: ಸಂಕುಲ ಹೃದಯ ಹಾಗೂ ನರವ್ಯವಸ್ಥಾ ಚಿಕಿತ್ಸೆಗಳ ಸಮಯದಲ್ಲಿ ಅತ್ಯುತ್ತಮ ಚಿತ್ರ ಗುಣಮಟ್ಟವನ್ನು ಒದಗಿಸಿ, ನಿಖರತೆ ಹೆಚ್ಚಿಸುತ್ತದೆ.• ರೇಡಿಯೇಶನ್ ಸುರಕ್ಷತೆ: ಪಾರಂಪರಿಕ ಕ್ಯಾಥ್ಲ್ಯಾಬ್ಗಳಿಗಿಂತ ಸುಮಾರು 30% ವಿಕಿರಣ ಹಾಗೂ ಕಾಂಟ್ರಾಸ್ಟ್ ಮಾಧ್ಯಮ ಬಳಕೆಯನ್ನು ಕಡಿಮೆ ಮಾಡುತ್ತದೆ—ಇದರಿಂದ ರೋಗಿಗಳ ಹಾಗೂ…
ಉಳ್ಳಾಲ: ಇಲ್ಲಿನ ಪಜೀರು ಗ್ರಾಮದ ಕಂಬಳಪದವು ಶ್ರೀ ದುರ್ಗಾ ಕಾಳಿ ದೇವಸ್ಥಾನದ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ಆಕ್ರಮವಾಗಿ ಮದ್ಯ ತಯಾರಿಸುತ್ತಿದ್ದ ಘಟಕವನ್ನು ಕೊಣಾಜೆ ಪೊಲೀಸರು ಪತ್ತೆ ಹಚ್ಚಿ, ಕೇರಳ ಮೂಲದ ಇಬ್ಬರನ್ನು ಬಂಧಿಸಿ 1,15,110 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳದ ಕಾಸರಗೋಡಿನ ಬೀಚ್ ರೋಡ್ ನಿವಾಸಿ ಪ್ರಣವ್ ಪಿ ಶೆಣೈ (24) ಮತ್ತು ತಾಳಿಪಡ್ಪು ಅಡ್ಕತ್ತಬೈಲ್ ನಿವಾಸಿ ಅನೂಷ್ ಆರ್. ( 24) ಬಂಧಿತ ಆರೋಪಿಗಳು. ಆರೋಪಿಗಳಿಂದ ಅಕ್ರಮವಾಗಿ ಮದ್ಯ ತಯಾರಿಸುವ ಮೂರು ಮೆಶಿನ್ ಗಳು, ಮಿಕ್ಸರ್ ಮೆಶಿನ್, ಆಕ್ರಮ ಮದ್ಯದ ಬಾಟ್ಲಿಗಳು, ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟ ಮಾಡುವ ಪರವಾನಿಗೆ ಇರುವ 8 ಮ್ಯಾನ್ಶನ್ ಹೌಸ್ ಎಂಬ ಹೆಸರಿನ ಮದ್ಯದ ಬಾಟ್ಲಿಗಳು ಹಾಗೂ ಮದ್ಯ ತಯಾರಿಕೆಗೆ ಬೇಕಾದ ಇತರ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ವಿ.ಸಿ. ತೋಮಸ್ ಮತ್ತು ಮಣಿಕುಟ್ಟನ್ ಎಂಬ ಇನ್ನಿಬ್ಬರು ಆರೋಪಿಗಳು ಬಂಧನಕ್ಕೆ ಬಾಕಿ ಇದ್ದು ಅವರ ಪತ್ತೆ ಕಾರ್ಯ ಮುಂದುವರಿದಿದೆ. ಮಂಗಳೂರು…









