ಅನನ್ಯ ಭಟ್ ನಬತ್ತೆ ಆಗಿರುವ ಕುರಿತು ದೂರು ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸತತ ನಾಲ್ಕು ದಿನಗಳಿಂದ ಸುಜಾತ ಭಟ್ ಅವರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು ಎಸ್ಐಟಿ ವಿಚಾರಣೆಗೆ ಸುಜಾತ ಭಟ್ ತಬ್ಬಿಬಾಗಿದ್ದು ಸತ್ಯವನ್ನು ಬಾಯಿಬಿಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಎಸ್ಐಟಿ ವಿಚಾರಣೆಗೆ ಒಳಪಟ್ಟಿದ ಸುಜಾತ ಭಟ್ ಅವರಿಗೆ ಇದೀಗ ಬಿಗ್ ರಿಲೀಫ್ ಸಿಕ್ಕಿದೆ. ಸುಜಾತ ಭಟ್ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಅಧಿಕಾರಿಗಳು ವಿಚಾರಣೆಗೆ ಕರೆದಾಗ ಬರುವಂತೆ ಸೂಚನೆ ನೀಡಿ ಕಳುಹಿಸಿದ್ದಾರೆ ಹಾಗಾಗಿ ಸುಜಾತ ಭಟ್ ಈ ಒಂದು ಪ್ರಕರಣದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಮೊದಲಿಗೆ ಅನನ್ಯ ಭಟ್ ನನ್ನ ಮಗಳು ಎಂದು ಹೇಳಿ ದೂರು ನೀಡಿದ್ದರು. ಇದೇ ಪ್ರಕರಣದ ಕುರಿತು ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ಒಳಪಡಿಸಿದಾಗ ಸುಜಾತ ಭಟ್ ನನಗೇನು ತಪ್ಪಿಲ್ಲ ಕೆಲವರು ಹೇಳಿದಂತೆ ನಾನು ಕೇಳಿದ್ದೇನೆ ನನ್ನನ್ನು ಬಿಟ್ಟುಬಿಡಿ ಎಂದು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದರು. ಇದೀಗ ಈ ಒಂದು ಪ್ರಕರಣದಿಂದ ಸುಜಾತಾ ಭಟ್ ಅವರಿಗೆ ಬಿಗ್…
Author: main-admin
ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ , ಡಾ. ಡಿ. ವೀರೇಂದ್ರ ಹೆಗ್ಗಡೆ ,ಡಿ. ಹರ್ಷೇಂದ್ರ ಕುಮಾರ್ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ಅವಹೇಳನಾಕಾರಿ ಮಾತುಗಳನ್ನು ಆಡದಂತೆ , ವರದಿ ಪ್ರಕಟಿಸದಂತೆ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಜೊತೆಗೆ, ಆ ವಿಡಿಯೋಗಳನ್ನು ತಕ್ಷಣವೇ ಡಿಲೀಟ್ ಮಾಡಲು ಆದೇಶಿಸಿದೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ.ಡಿ.ವೀರೇಂದ್ರ ಹೆಗ್ಗಡೆಯವರ ವಿರುದ್ಧ ಪ್ರಕಟವಾದ ಮಾನಹಾನಿಕರ ವಿಡಿಯೋಗಳ ವಿಷಯದಲ್ಲಿ ಡಿ.ಹರ್ಷೇಂದ್ರ ಕುಮಾರ್ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯವು ಏಕಪಕ್ಷೀಯ ತಡೆಯಾಜ್ಞೆ ನೀಡಿತ್ತು. ಆದರೆ, ಥರ್ಡ್ ಐ ಯೂಟ್ಯೂಬ್ ಚಾನಲ್ ಇದನ್ನು “ಗ್ಯಾಗ್ ಆರ್ಡರ್” ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಿಟ್ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಿತು. ಸುಪ್ರೀಂ ಕೋರ್ಟ್ ಈ ವಿಷಯವನ್ನು ಹೈಕೋರ್ಟ್‌ನಲ್ಲಿ ಇತ್ಯರ್ಥಗೊಳಿಸಲು ಸೂಚಿಸಿತು. ಕುಡ್ಲ ರಾಂ ಪೇಜ್ ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಿತು, ಇದನ್ನು ಪುರಸ್ಕರಿಸಿದ ಹೈಕೋರ್ಟ್ ಸಿಟಿ ಸಿವಿಲ್ ಕೋರ್ಟ್‌ನ ಏಕಪಕ್ಷೀಯ ಆದೇಶವನ್ನು ರದ್ದುಗೊಳಿಸಿ ಮರುತನಿಖೆಗೆ…
ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ವ್ಯಕ್ತಿಯೊಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ.ದಿನಾಂಕ 29-08-2025 ಮೇರೆಗೆ ದೇರಳಕಟ್ಟೆ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯಿಂದ 53.29 ಗ್ರಾಂ, 2.33 ಗಾಂಜಾಹಾಗೂ 0.45 ಗ್ರಾಂ MDMA ಪಿಲ್ಸ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ವಸ್ತುಗಳ ಮೌಲ್ಯ ಸುಮಾರು ರೂ. 10.85 ಲಕ್ಷ ಆಗಿದ್ದು, ಡಿಜಿಟಲ್ ತೂಕ ಮಾಪನ ಯಂತ್ರ, ಮೊಬೈಲ್ ಫೋನ್ ಸೇರಿದಂತೆ ಒಟ್ಟು ರೂ. 11.05 ಲಕ್ಷ ಮೌಲ್ಯದ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಬಂಧಿತನನ್ನು ಮೋಹಮ್ಮದ್ ಅರ್ಶದ್ ಖಾನ್ (29), ಮೂಲತಃ ಕೇರಳದ ಕೊಚ್ಚಿ, ಪ್ರಸ್ತುತ ದೇರಳಕಟ್ಟೆ ನಿವಾಸಿ ಎಂದು ಗುರುತಿಸಲಾಗಿದೆ.ಆರೋಪಿ ಬೆಂಗಳೂರಿನಿಂದ ಎಂಡಿಎಂಎ ಖರೀದಿಸಿ ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಸುತ್ತಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ. ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆ ಕಾರ್ಯ ಪೊಲೀಸರು ಮುಂದುವರೆಸಿದ್ದಾರೆ.ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ…
ಮಂಗಳೂರು: ವಿದೇಶದಲ್ಲಿ ಉದ್ಯೋಗ ಮಾಡಲು ವೀಸಾ ಮಾಡಿಕೊಡುವುದಾಗಿ ಹೇಳಿ ಹಣ ಪಡೆದ ಬಳಿಕ ವೀಸಾ ನೀಡದೆ ವಂಚಿಸಿದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ತಾನು ವಿದೇಶದಲ್ಲಿ ಉದ್ಯೋಗ ಮಾಡುವ ಉದ್ದೇಶದಿಂದ ವಿದೇಶದಲ್ಲಿದ್ದ ಬೆಳ್ತಂಗಡಿಯ ಮುಹಮ್ಮದ್ ಅಝ್ಮಾನ್ ಬಳಿ 2025ರ ಜನವರಿಯಲ್ಲಿ ಮೊಬೈಲ್ ಮೂಲಕ ಮಾತುಕತೆ ನಡೆಸಿದ್ದೆ. 4.50 ಲಕ್ಷ ರೂ. ನೀಡಿದರೆ ವೀಸಾ ಮಾಡಿಕೊಡುವುದಾಗಿ ಆತ ತಿಳಿಸಿದ್ದು, ಹಾಗೇ ಮೇ 9ರಂದು ಆತ ತೌಸೀಫ್ ಎಂಬಾತನ ಜೊತೆಗೂಡಿ ಕಣ್ಣೂರಿನ ದಯಂಬುಗೆ ಬಂದಿದ್ದ. ನಂತರ ತನ್ನ ಹಾಗೂ ಅಣ್ಣ ಮುಹಮ್ಮದ್ ಅಝ್ಮೀನ್‌ರನ್ನು ಭೇಟಿ ಮಾಡಿ 2 ಲಕ್ಷ ರೂ. ನಗದು ಮತ್ತು ತನ್ನ ಅಣ್ಣ ಝುನ್‌ರೈನ್‌ರ ಹೆಸರಿನಲ್ಲಿ 1.90 ಲಕ್ಷ ರೂ.ವನ್ನು ಕರ್ಣಾಟಕ ಬ್ಯಾಂಕ್ ಖಾತೆಯ 2 ಚೆಕ್ ಮೂಲಕ ಹಾಗೂ ಮುಹಮ್ಮದ್ ತಾಸೀರ್‌ರಿಂದ 4 ಲಕ್ಷ ರೂ., ಮುಹಮ್ಮದ್ ಶಬೀಬ್‌ರಿಂದ 2 ಲಕ್ಷ ರೂ., ಮುಹಮ್ಮದ್ ಇಕ್ಬಾಲ್‌ರಿಂದ 3.30 ಲಕ್ಷ ರೂ, ಮುಹಮ್ಮದ್ ಅರ್ಷಾದ್‌ರಿಂದ 3.50, ಸಲ್ಮಾನ್…
ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ ಬಗ್ಗೆ ಅವಹೇಳನ ಮಾಡಿ ವಿಡಿಯೋ ವೈರಲ್ ಮಾಡಿದ ಪ್ರಕರಣ ಸಂಬಂಧ ವಿಚಾರಣೆಗಾಗಿ ಆ.29 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಲು ಜೀವ ಭಯ ಕಾಡುತ್ತಿದ್ದು, ಇದರಿಂದ ಪೊಲೀಸ್ ಭದ್ರತೆ ನೀಡಬೇಕಾಗಿ ವಿನಂತಿ ಮಾಡಿದ್ದ ಕಾರಣ ಇಬ್ಬರು ಪೊಲೀಸರ ಜೊತೆ 1:45 ಕ್ಕೆ ತಮ್ಮ ವಕೀಲರುಗಳೊಂದಿಗೆ ಜಗದೀಶ್ ಅವರು ಠಾಣೆಗೆ ಆಗಮಿಸಿದ್ದಾರೆ.
ಪುತ್ತೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಯುವಕನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರಿನ ರೈಲ್ವೆ ಹಳಿ ಪಕ್ಕದ ಗುಡ್ಡಗಾಡು ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಮೇಲೆ ಪದೇಪದೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಅಪ್ರಾಪ್ತ ವಯಸ್ಸಿನ ಬಾಲಕಿ ನೀಡಿದ ದೂರಿನ ಮೇರೆಗೆ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಸಂತ್ರಸ್ತೆ ಕಳೆದ ಎರಡು ತಿಂಗಳಿನಿಂದ ಪುತ್ತೂರು ಪಟ್ಟಣದ ಬಾಡಿಗೆ ಮನೆಯಲ್ಲಿ ತನ್ನ ತಾಯಿ ಮತ್ತು ತಂಗಿಯೊಂದಿಗೆ ವಾಸಿಸುತ್ತಿದ್ದಳು. ಕಳೆದ ಮಾರ್ಚ್‌ನಿಂದೀಚೆಗೆ ಆಕೆ ತನ್ನ ತಾಯಿಯ ಮೊಬೈಲ್ ಬಳಸಿ ಆರೋಪಿಯೊಂದಿಗೆ ಸಂಪರ್ಕದಲ್ಲಿದ್ದಳು. ಆರೋಪಿಯು ಆಕೆಯನ್ನು ರೈಲ್ವೆ ಹಳಿಯ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಹಲ್ಲೆ ನಡೆಸಿದ್ದಾನೆ. ಆರೋಪಿಯು ತನ್ನನ್ನು ಬೆದರಿಸಿ ಅದೇ ಸ್ಥಳಕ್ಕೆ ಕರೆಸಿಕೊಂಡು ಪದೇ ಪದೆ ದೌರ್ಜನ್ಯ ನಡೆಸುತ್ತಿದ್ದನು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ. ಆಕೆಯ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ಭಾರತೀಯ…
ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿಯೊಂದು ಮಗುಚಿ ಬಿದ್ದ ಘಟನೆ ಉಡುಪಿ ಜಿಲ್ಲೆಯ ಮಲ್ಪೆಯ ಸಮುದ್ರ ತೀರದ ತೊಟ್ಟಂ ಬಳಿ ನಡೆದಿದೆ. ಅಬ್ಬರದ ಅಲೆಗಳಿಂದಾಗಿ ದೋಣಿ ಮಗುಚಿ ಬಿದ್ದಿದ್ದು, ಏಡಿ ಬಲೆಗೆ ತೆರಳಿದ ನಾಲ್ವರು ಮೀನುಗಾರರು ಸಮುದ್ರಕ್ಕೆ ಬಿದ್ದಿದ್ದಾರೆ. ತೊಟ್ಟಂ ವಾರ್ಡಿನ ನಗರ ಸಭಾ ಸದಸ್ಯ ಯೋಗೇಶ್ ಅವರು ಈಶ್ವರ್ ಮಲ್ಪೆ ತಂಡಕ್ಕೆ ಮಾಹಿತಿ ನೀಡಿದ್ದು, ಸ್ಥಳಿಯರಾದ ಪ್ರವೀಣ್, ಉದಯ್ ಜೊತೆ ಸೇರಿ ಲೈಫ್ ಜಾಕೇಟ್ ನೀಡಿ ಮೀನುಗಾರರನ್ನು ರಕ್ಷಿಸಲಾಗಿದೆ. ಕಡಲು ಪ್ರಕ್ಷುಬ್ದಗೊಂಡಿದ್ದು, ಈಜು ಬರುತ್ತದೆ ಎಂದು ಹೇಳಿ ಯಾರೂ ಸಹ ನೀರಿಗೆ ಇಳಿಯಬೇಡಿ. ಯಾವ ಕ್ಷಣದಲ್ಲಿ ಅಲೆಗಳು ಮೇಲುಕ್ಕಿ ಬರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಎಲ್ಲಾ ಮೀನುಗಾರರು ಲೈಫ್ ಜಾಕೇಟ್ ಹಾಕಿಯೇ ಮೀನುಗಾರಿಕೆಗೆ ಹೋಗಿ ಎಂದು ಈಶ್ವರ್ ಮಲ್ಪೆ ಸಲಹೆ ನೀಡಿದ್ದಾರೆ.
ಉಡುಪಿ: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಕರಣ ಸಂಬಂಧ ಮೂವರು ಆರೋಪಿಗಳಾದ ಉಜಿರೆ ನಿವಾಸಿಗಳಾದ ಸೃಜನ್ ಎಲ್ , ಹಿತೇಶ್ ಶೆಟ್ಟಿ, ಸಹನ್ ಗೆ ಉಡುಪಿ ನ್ಯಾಯಾಲಯ ಆ.28 ರಂದು ಜಾಮೀನು ಮಂಜೂರು ಮಾಡಿದೆ. ಪ್ರಕರಣ ವಿವರ: ಆ. 21 ರಂದು ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 177/2025 ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನಾದ ಮಹೇಶ್ ಶೆಟ್ಟಿ ತಿಮರೋಡಿ ರವರನ್ನು ಉಜಿರೆ ನಿವಾಸದಿಂದ ವಶಕ್ಕೆ ಪಡೆದುಕೊಂಡು ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣೆಗೆ ಕರೆತರುತ್ತಿರುವಾಗ ಅವರ ಬೆಂಬಲಿಗರು ಪೊಲೀಸ್ ವಾಹನಗಳನ್ನು ಹಿಂಬಾಲಿಸಿಕೊಂಡು ಬಂದಿದ್ದು ಎಸ್ಟೇ ಬಾರಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬಂದು ಕರ್ತವ್ಯಕ್ಕೆ ಅಡ್ಡಿ ಪಡಿಸಬೇಡಿ ಎಂದು ಸೂಚನೆ ನೀಡಿದರು ಪಾಲಿಸದೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸ್ಮಾರ್ ಹೆದ್ದಾರಿಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸುವಂತೆ ಬಂದು ಸದ್ರಿ ತಂಡದಲ್ಲಿದ್ದ ಉಡುಪಿ ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಇಲಾಖಾ ವಾಹನ ನಂಬರ್ KA-20-G-0669 ವಾಹನಕ್ಕೆ KA-70-M-3048 ಬಿಳಿ ಬಣ್ಣದ ಶಿಫ್ಟ್ ಕಾರು ಡಿಕ್ಕಿ…
ಉಳ್ಳಾಲ: ತಲಪಾಡಿ ಟೋಲ್ ಗೇಟ್ ಬಳಿಯಲ್ಲಿ ಬಸ್ ಹಾಗೂ ಆಟೋ ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮಗು ಸೇರಿದಂತೆ ಐವರು ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ. ತಲಪಾಡಿಯ ಟೋಲ್ ಗೇಟ್ ಬಳಿಯಲ್ಲಿ ಇಂದು ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ. ಕೆಸಿ ರೋಡ್ ನಿಂದ ತೆರಳುತ್ತಿದ್ದಂತ ಆಟೋ ರಿಕ್ಷಾ ಹಾಗೂ ಬಸ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಕೆಸಿ ರೋಡ್ ಮೂಲದವರೆನ್ನಲಾದಂತ ಐವರು ಮೃತಪಟ್ಟಿರೋದಾಗಿ ಹೇಳಲಾಗುತ್ತಿದೆ. ಮೃತರಲ್ಲಿ ನಾಲ್ವರು ಮಹಿಳೆಯರು, ಮಗು ಕೂಡ ಸೇರಿದೆ. ಆಟೋ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2025ರ ಆಗಸ್ಟ್ 26ರಂದು, ಕೋಲ್ಕತ್ತಾದ ಸಂತ ಮದರ್ ತೆರೆಸಾ ಅವರ ಜನ್ಮದಿನದ ಸುದಿನದಂದೇ, ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಇವರ ಮಾನವಸೇವೆಯ ಹದಿನಾರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸಂತೋಷವನ್ನು ಭಾವಪೂರ್ಣವಾಗಿ ಹಾಗೂ ಅತ್ಯಂತ ಸಡಗರದಿಂದ ಆಚರಿಸಿತು. ಕಾರ್ಯಕ್ರಮವು ದಿವ್ಯ ಬಲಿಪೂಜೆಯೊಂದಿಗೆ ಪ್ರಾರಂಭವಾಯಿತು. ಮಂಗಳೂರು ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಕುಲಪತಿಗಳಾದ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಪ್ರಧಾನ ಗುರುಗಳಾಗಿ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ವಂ. ಫಾ. ಪೀಟರ್ ರೆಜಿನಾಲ್ಡ್ ಡಿ’ಸೋಜ, ವಂ. ಫಾ. ಲೀಗೊರಿ ಕ್ರಾಸ್ಟಾ ಓಸಿಡಿ (ನಿರ್ವಹಣಾಧಿಕಾರಿ, ರಿಷಿವನ–ಆಧ್ಯಾತ್ಮಿಕ ಕೇಂದ್ರ, ರಾಣಿಪುರ), ವಂ. ಫಾ. ಸಿರಿಲ್ ಡಿ’ಸೋಜ (ಸ್ನೇಹಾಲಯದ ಚಾಪ್ಲೇನ್), ಹಾಗೂ ವಂ. ಫಾ. ಡೊಮಿನಿಕ್ ಸೆಕ್ವೇರಾ ಎಸ್ಡಿಬಿ (ಹೋಲಿ ಕ್ರಾಸ್ ಚರ್ಚ್, ಪಾವೂರು) ದಿವ್ಯ ಬಲಿ ಪೂಜೆಯಲ್ಲಿ ಸಹಭಾಗಿಯಾಗಿದ್ದರು. ಈ ಧನ್ಯಾತಾ ಬಲಿಪೂಜೆಯನ್ನು ಕಳೆದ ಹದಿನಾರು ವರ್ಷಗಳಲ್ಲಿ ಸ್ನೇಹಾಲಯಕ್ಕೆ ಸಹಕಾರ, ದಾನ, ಪ್ರೀತಿ ಮತ್ತು ಪ್ರೋತ್ಸಾಹವನ್ನು ನೀಡಿದ ಎಲ್ಲಾ, ಶುಭಚಿಂತಕರು ಹಾಗೂ ಹಿತೈಷಿಗಳಿಗಾಗಿ ಅರ್ಪಿಸಲಾಯಿತು. ಸಾಹಿತ್ಯ ಕೃತಿಗಳ ಬಿಡುಗಡೆಃಬಲಿಪೂಜೆಯ ನಂತರ,…










