Facebook Twitter Instagram
    Saturday, July 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಮಂಗಳೂರು – ಮಾನವಸೇವೆಯ ಹದಿನಾರು ವೈಭವಯುತ ವರ್ಷಗಳ ಸಂಭ್ರಮಾಚರಣೆ
    ಇತ್ತೀಚಿನ ಸುದ್ದಿ

    ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಮಂಗಳೂರು – ಮಾನವಸೇವೆಯ ಹದಿನಾರು ವೈಭವಯುತ ವರ್ಷಗಳ ಸಂಭ್ರಮಾಚರಣೆ

    August 28, 2025
    Share

    2025ರ ಆಗಸ್ಟ್ 26ರಂದು, ಕೋಲ್ಕತ್ತಾದ ಸಂತ ಮದರ್ ತೆರೆಸಾ ಅವರ ಜನ್ಮದಿನದ ಸುದಿನದಂದೇ, ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಇವರ ಮಾನವಸೇವೆಯ ಹದಿನಾರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸಂತೋಷವನ್ನು ಭಾವಪೂರ್ಣವಾಗಿ ಹಾಗೂ ಅತ್ಯಂತ ಸಡಗರದಿಂದ ಆಚರಿಸಿತು.

    ಕಾರ್ಯಕ್ರಮವು ದಿವ್ಯ ಬಲಿಪೂಜೆಯೊಂದಿಗೆ ಪ್ರಾರಂಭವಾಯಿತು. ಮಂಗಳೂರು ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಕುಲಪತಿಗಳಾದ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಪ್ರಧಾನ ಗುರುಗಳಾಗಿ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ವಂ. ಫಾ. ಪೀಟರ್ ರೆಜಿನಾಲ್ಡ್ ಡಿ’ಸೋಜ, ವಂ. ಫಾ. ಲೀಗೊರಿ ಕ್ರಾಸ್ಟಾ ಓಸಿಡಿ (ನಿರ್ವಹಣಾಧಿಕಾರಿ, ರಿಷಿವನ–ಆಧ್ಯಾತ್ಮಿಕ ಕೇಂದ್ರ, ರಾಣಿಪುರ), ವಂ. ಫಾ. ಸಿರಿಲ್ ಡಿ’ಸೋಜ (ಸ್ನೇಹಾಲಯದ ಚಾಪ್ಲೇನ್), ಹಾಗೂ ವಂ. ಫಾ. ಡೊಮಿನಿಕ್ ಸೆಕ್ವೇರಾ ಎಸ್ಡಿಬಿ (ಹೋಲಿ ಕ್ರಾಸ್ ಚರ್ಚ್, ಪಾವೂರು) ದಿವ್ಯ ಬಲಿ ಪೂಜೆಯಲ್ಲಿ ಸಹಭಾಗಿಯಾಗಿದ್ದರು.


    ಈ ಧನ್ಯಾತಾ ಬಲಿಪೂಜೆಯನ್ನು ಕಳೆದ ಹದಿನಾರು ವರ್ಷಗಳಲ್ಲಿ ಸ್ನೇಹಾಲಯಕ್ಕೆ ಸಹಕಾರ, ದಾನ, ಪ್ರೀತಿ ಮತ್ತು ಪ್ರೋತ್ಸಾಹವನ್ನು ನೀಡಿದ ಎಲ್ಲಾ, ಶುಭಚಿಂತಕರು ಹಾಗೂ ಹಿತೈಷಿಗಳಿಗಾಗಿ ಅರ್ಪಿಸಲಾಯಿತು.

    ಸಾಹಿತ್ಯ ಕೃತಿಗಳ ಬಿಡುಗಡೆಃ
    ಬಲಿಪೂಜೆಯ ನಂತರ, ಶ್ರೀ ಜಿಯೋ ಡಿ. ಸಿಲ್ವಾ ಅಗ್ರಾರ್ ಅವರ ಎರಡು ಸೃಜನಶೀಲ ಕೃತಿಗಳ ಸ್ಮರಣೀಯ ಅನಾವರಣ ನೆರವೇರಿತು.

    ಮೊದಲ ಕೃತಿ: “The Chosen One” – ಆಂಗ್ಲ ಭಾಷೆಯಲ್ಲಿ ರಚಿಸಲ್ಪಟ್ಟ ಈ ಕೃತಿಯಲ್ಲಿ ಸಂಸ್ಥಾಪಕರಾದ ಶ್ರೀ ಜೋಸೆಫ್ ಕ್ರಾಸ್ತಾ ಅವರ ಅಮೋಘ ಜೀವನಗಾಥೆ, ಸಾಧನೆಗಳು, ಹಾಗೂ ಸಂಸ್ಥೆಯ ನಿರ್ಮಾಣಕ್ಕಾಗಿ ನಡೆಸಿದ ದುರ್ಗಮವಾದ ಹೋರಾಟವನ್ನು ಸಾಹಿತ್ಯಮಯ ಶೈಲಿಯಲ್ಲಿ ಚಿತ್ರಿಸಲಾಗಿದೆ. “ದಿ ಚೊಸನ್ ಒನ್” ಅಂದರೆ “ಆರಿಸಲ್ಪಟ್ಟವನು” ಎನ್ನುವ ಶೀರ್ಷಿಕೆಯಲ್ಲಿ ಲೋಕಾರ್ಪಣೆಗೊಂಡ ಈ ಪುಸ್ತಕಕ್ಕೆ ಶ್ರಿಯುತ ಜೆ. ವಿ. ಡಿ ಮೆಲ್ಲೊ ಇವರು ಸೊಗಸಾದ ಪ್ರಸ್ತಾವನೆಯನ್ನು ಬರೆದಿರುತ್ತಾರೆ.
    ಎರಡನೇ ಕೃತಿ: ಕೊಂಕಣಿ ಭಾಷೆಯ “ಪಾಟಿಂ ಯಾ ಮುಕಾರ್ ಮೇಟಾಂ ತುಜಿಂ” – ಸಕಾರಾತ್ಮಕ ಚಿಂತನೆಗಳನ್ನು ಯುವಪೀಳಿಗೆಗೆ ಪ್ರೇರಕವಾಗುವಂತೆ ಲೇಖನರೂಪದಲ್ಲಿ ಸಂಕಲಿಸಿದ ಪುಸ್ತಕವಾಗಿದೆ.. ಈ ಅದ್ವಿತೀಯ ಕೃತಿಗಳು ರೂಪಗೊಂಡಿರುವ ಶ್ರಮದ ಹಿಂದೆ ಪ್ರಭಾವಿ ಲೇಖಕರಾದ ಶ್ರೀ ಜಿಯೋ ಡಿ’ ಸಿಲ್ವ ಅವರ ಅದ್ಭುತ ಸಾಹಿತ್ಯ ಮತ್ತು ಕೌಶಲ್ಯವನ್ನು ಕಾಣಬಹುದಾಗಿದೆ. ಈ ಕೃತಿಗಳನ್ನು ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಗೌರವಪೂರ್ವಕವಾಗಿ ಅನಾವರಣಗೊಳಿಸಿ ಬಿಡುಗಡೆ ಮಾಡಿದರು.

    ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿ – ಸೇವೆಯ ಮೆಚ್ಚುಗೆ
    ಈ ಸಂದರ್ಭದಲ್ಲಿ, 2024–2025ರಲ್ಲಿ ಸ್ನೇಹಾಲಯದಲ್ಲಿ ನೀಡಿದ ವಿಶಿಷ್ಟ ಸೇವೆಯನ್ನು ಪರಿಗಣಿಸಿ, ಶ್ರೀ ಪುರುಷೋತ್ತಮ (ಸ್ನೇಹಾಲಯದ ನಿರ್ವಹಣಾ ಮೇಲ್ವಿಚಾರಕ) ಅವರಿಗೆ “ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿ” ಯನ್ನು ಪ್ರದಾನಿಸಿ ಅವರನ್ನು ಗೌರವಿಸಲಾಯಿತು.

    ಕೃತಜ್ಞತೆಯ ವಂದನಾ ನುಡಿಗಳು
    ಸ್ನೇಹಾಲಯದ ಸಂಸ್ಥಾಪಕರಾದ ಶ್ರೀ ಜೋಸೆಫ್ ಕ್ರಾಸ್ಟಾ ತಮ್ಮ ಭಾವಪೂರ್ಣ ಭಾಷಣದ ಸಂದರ್ಭದಲ್ಲಿ, ಸಂಸ್ಥೆಯ ದೀರ್ಘಯಾತ್ರೆಯಲ್ಲಿ ಅಡಿಗಲ್ಲಿನಂತೆ ಬೆಂಬಲಿಸಿದ ಎಲ್ಲಾ ಧಾನಿಗಳು, ಹಿತೈಷಿಗಳು ಹಾಗೂ ಸ್ನೇಹಿತರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದರು. ಅವರೊಂದಿಗೆ ಶ್ರೀಮತಿ ಒಲಿವಿಯಾ ಕ್ರಾಸ್ಟಾ ಅವರು ಅತಿಥಿಗಳಿಗೂ ಸಭಿಕರಿಗೂ ಹೃತ್ಪೂರ್ವಕ ಧನ್ಯವಾದ ವ್ಯಕ್ತಪಡಿಸಿದರು.

    ಸಹಭೋಜನ ಸಮಾರೋಪ
    ಅನೇಕ ದಾನಿಗಳು, ಹಿತೈಷಿಗಳು ಮತ್ತು ಶುಭಚಿಂತಕರ ಸಾನ್ನಿಧ್ಯದಲ್ಲಿ ಸಮಾರಂಭವು ಸೌಹಾರ್ದಪೂರ್ಣ ಸಹಭೋಜನದೊಂದಿಗೆ ಸಮಾರೋಪಗೊಂಡಿತು.

    Post Views: 181

    Related Posts

    ನಕಲಿ ಪಿಎಚ್‌ಡಿ ಹಗರಣ ಬಯಲು: 249 ಅತಿಥಿ ಉಪನ್ಯಾಸಕರಿಗೆ ವಜಾ, FIR ಆದೇಶ

    July 25, 2026

     ಜಂತರ್ ಮಂತರ್ ನಲ್ಲಿ 2500ಕ್ಕೂ ಹೆಚ್ಚು ಅಪರಾಧ ಹಿನ್ನೆಲೆ ಉಳ್ಳವರು ಪತ್ತೆ!!

    July 25, 2026

    ಖೋಟಾ ನೋಟು ಚಲಾಯಿಸಲು ಯತ್ನ : ಇಬ್ಬರು ಅರೆಸ್ಟ್!

    July 25, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ನಕಲಿ ಪಿಎಚ್‌ಡಿ ಹಗರಣ ಬಯಲು: 249 ಅತಿಥಿ ಉಪನ್ಯಾಸಕರಿಗೆ ವಜಾ, FIR ಆದೇಶ

    July 25, 2026

     ಜಂತರ್ ಮಂತರ್ ನಲ್ಲಿ 2500ಕ್ಕೂ ಹೆಚ್ಚು ಅಪರಾಧ ಹಿನ್ನೆಲೆ ಉಳ್ಳವರು ಪತ್ತೆ!!

    July 25, 2026

    ಖೋಟಾ ನೋಟು ಚಲಾಯಿಸಲು ಯತ್ನ : ಇಬ್ಬರು ಅರೆಸ್ಟ್!

    July 25, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.