Author: main-admin

ಕಾಸರಗೋಡು: ಮಲೆಯಾಳಂ ನಲ್ಲಿ ನಾಗೇಂದ್ರನ್ ಹನಿಮೂನ್ ಎನ್ನುವ ಒಂದು ವೆಬ್ ಸೀರಿಸ್ ಬಂದಿತ್ತು, ನಟ ಸೂರಜ್ ನಟಿಸಿದ್ದ ಈ ವೆಬ್ ಸಿರಿಸ್ ಬಾರಿ ಮೆಚ್ಚುಗೆಗೆ ಪಾತ್ರವಾಗಿತ್ತು, ಅದರಲ್ಲೂ ನಟ ಹಣಕ್ಕಾಗಿ ಬೇರೆ ಬೇರೆ ಊರುಗಳಿಗೆ ತೆರಳಿ ಬೇರೆ ಬೇರೆ ಹೆಸರಿನಲ್ಲಿ ನಾಲ್ಕು ಮದುವೆಯಾಗುತ್ತಾನೆ. ಕೊನೆಗೆ ಸಿಕ್ಕಿಬಿಳುವ ಕಥೆ ಇರುವ ಸಿನೆಮಾ. ಇದೀಗ ಅದೇ ರೀತಿಯ ಸಿನೆಮಾ ಕಥೆಯನ್ನೇ ಹೋಲುವ ಘಟನೆಯ ನಿಜ ಜೀವನದಲ್ಲಿ ನಡೆದಿದ್ದು, ನಾಲ್ಕು ಮದುವೆಯಾದವನ್ನು ಇದೀಗ ಕಾಸರಗೋಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ನಿವಾಸಿ ದೀಪು ಫಿಲಿಪ್ (36) ಬಂಧಿತ ಆರೋಪಿ. ಇತ ನಾಲ್ಕು ಮದುವೆಯಾಗಿದ್ದು. ಇದೀಗ ಪತ್ನಿಯರ ದೂರಿನಂತೆ ಕೇರಳದ ಕೊನ್ನಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ ಆತ ಬಂಧನಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣ ಫೆಸ್ ಬುಕ್, ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ ಆರೋಪಿ ದೀಪು ಫಿಲಿಫ್ ಕಾಸರಗೋಡು ಜಿಲ್ಲೆಯವನು, ಈತ 10 ವರ್ಷಗಳ ಹಿಂದೆ ಕಾಸರಗೋಡಿನ…

Read More

ಪಡುಬಿದ್ರಿ : ಖಾಸಗಿ ವೇಗದೂತ ಬಸ್ಸಿನ ಚಾಲಕನಿಗೆ ಅಪಸ್ಮಾರ ಸಂಭವಿಸಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಧರಗೆ ಚಲಿಸಿದ ಘಟನೆ ಬುಧವಾರ ಬೆಳಿಗ್ಗೆ ಎರ್ಮಾಳು ತೆಂಕ ಜಾಮಿಯಾ ಮಸೀದಿ ಬಳಿ ಸಂಭವಿಸಿದೆ. ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ವೇಗದೂತ ಬಸ್ಸಿನ ಚಾಲಕ ಶಂಭು ಮುಲ್ಕಿಯವರು ಎರ್ಮಳು ತೆಂಕ ಸಮೀಪಿಸುತ್ತಿದ್ದಂತೆ ಅವರಿಗೆ ಅಪಸ್ಮಾರ ಸಂಭವಿಸಿದೆ. ಇದೇ ಸಂದರ್ಭ 24 ಬಸ್ಸು ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಧರೆಗೆ ಚಲಿಸಿದೆ. ಈ ಸಂದರ್ಭ ಮೂರು ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿ, ವಿದ್ಯುತ್ ತಂತಿಗಳು ತುಂಡಾಗಿ, ವಿದ್ಯುತ್ ವ್ಯತ್ಯಯ ಉಂಟಾಗಿದೆ.ಬಸ್ಸಿನಲ್ಲಿದ್ದ ಹತ್ತಕ್ಕೂ ಅಧಿಕ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಅಂಬುಲೆನ್ಸ್ ಮೂಲಕ ಉಡುಪಿ ಆಸ್ಪತ್ರೆಗೆ ರವಾನಿಸಲಾಗಿದೆ. ಚಾಲಕ ಶಂಬುರವರು ಚೇತರಿಸುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Read More

ಕಾಸರಗೋಡು: ಮಾದಕ ವಸ್ತು ಸಂಬಂಧಿತ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಉಳಿಯತ್ತಡ್ಕ ಎಸ್. ಪಿ ನಗರದ ಮೊಯ್ದೀನ್ ಎಂ. ಎಚ್ (28) ಎಂದು ಗುರುತಿಸಲಾಗಿದೆ. ಕಾಫಾ ಕಾಯ್ದೆಯಂತೆ ಈತನನ್ನು ಬಂಧಿಸಲಾಗಿದೆ. ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ 10 ಕ್ಕೂ ಅಧಿಕ ಪ್ರಕರಣಗಳ ಆರೋಪಿಯಾಗಿರು ಈತ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದನು. 2019 ರಲ್ಲಿ ಗಾಂಜಾ , 2021 ರ್‍ಯಾಲಿಯಲ್ಲಿ ಓರ್ವನನ್ನು ಅಪಹರಿಸಿದ್ದ ಪ್ರಕರಣ,2023 ರಲ್ಲಿ ಗಾಂಜಾ ಬಳಕೆ, 2024 ರಲ್ಲಿ ಹೊಡೆದಾಟ ಸೇರಿದಂತೆ ಹಲವಾರು ಪ್ರಕರಣಗಳ ಆರೋಪಿಯಾಗಿದ್ದಾನೆ. ಇದೀಗ ಕಾಸರಗೋಡು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Read More

ಮಂಗಳೂರು: ಐಟಿಐ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ (ಪೋಕ್ಸೋ-ಎಫ್‌ಟಿಎಸ್‌ಸಿ-1) ಅಪರಾಧಿಗೆ 1 ವರ್ಷ ಸಾದಾ ಜೈಲು ಮತ್ತು 10ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸಜಿಪನಡು ಕಂಚಿನಡ್ಕ ನಿವಾಸಿ ಜಮಾಲ್‌ (24) ಶಿಕ್ಷೆಗೊಳಗಾದಾತ. ಜಮಾಲ್‌ ಬೆಳ್ತಂಗಡಿಯಲ್ಲಿ ಮೆಕ್ಯಾನಿಕ್‌ ಕೆಲಸ ಮಾಡುತ್ತಿದ್ದ. 2024ರ ಅ. 5ರಂದು ವಿದ್ಯಾರ್ಥಿನಿ ಬೆಳ್ತಂಗಡಿಯ ಐಟಿಐ ಕಾಲೇಜೊಂದಕ್ಕೆ ತನ್ನ ಸಂಬಂಧಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ಅ. 10ರಂದು ಬೆಳಗ್ಗೆ 7.45ರ ಸುಮಾರಿಗೆ ಮತ್ತೆ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಆತ ಅಪ್ರಾಪ್ತ ವಯಸ್ಸಿನ ಬಾಲಕಿ ಸೇರಿದಂತೆ ಇಬ್ಬರಿಗೂ ಬೈಕ್‌ ತಾಗಿಸಿಕೊಂಡು ಚಲಾಯಿಸಿದ್ದಾನೆ. “ನಿನ್ನನ್ನು ಕಾಲೇಜು ವರೆಗೆ ಬಿಡಬೇಕಾ? ನಿನ್ನ ಮೊಬೈಲ್‌ ನಂಬರ್‌ ನನಗೆ ಕೊಡು’ ಎಂದು ಕೇಳಿದ್ದಾನೆ. ಅ. 15ರಂದು ಬೆಳಗ್ಗೆ 7.45ಕ್ಕೆ ಮತ್ತೆ ಬೈಕ್‌ನಲ್ಲಿ ಬಂದು ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾನೆ. ವಿದ್ಯಾರ್ಥಿನಿ ನೀಡಿದ…

Read More

ಬಂಟ್ವಾಳ: ಅಸೌಖ್ಯದಿಂದ ಬಳಲುತ್ತಿದ್ದ ಯುವ ಪೊಲೀಸ್‌ ಸಿಬ್ಬಂದಿಯೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಇಂದು (ಫೆ.11) ಸಂಭವಿಸಿದೆ. ಮೂಲತಃ ದಾವಣಗೆರೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿದ್ದ ಅಭಿಷೇಕ್ ( 26) ಮೃತಪಟ್ಟ ಪೋಲೀಸ್ ಸಿಬ್ಬಂದಿಯಾಗಿದ್ದಾನೆ ಎಂದು ತಿಳಿಯಲಾಗಿದೆ. ಅವಿವಾಹಿತನಾಗಿದ್ದ ಅಭಿಷೇಕ್ ಅವರು 2020 ರಲ್ಲಿ ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣೆಯ ಎಚ್.ಸಿ.ಯಾಗಿ ನೇಮಕಗೊಂಡಿದ್ದರು. ಅ ಬಳಿಕ ಟ್ರಾಫಿಕ್ ಪೋಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರಿಗೆ ಕಳೆದ ಒಂದು ವರ್ಷದ ಹಿಂದೆ ಬೆನ್ನುಮೂಳೆಯ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಬ್ಲಡ್ ಕ್ಯಾನ್ಸರ್ ಕಂಡು ಬಂದಿತ್ತು. ಅ ಬಳಿಕ ಸುಮಾರು 8 ತಿಂಗಳಿನಿಂದ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ಕುಟುಂಬ ಮೂಲಗಳು ತಿಳಿಸಿವೆ. ಅಭಿಷೇಕ್ ಅವರ ತಂದೆ ಕೂಡ ಪೋಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿತ್ತಿದ್ದು, ಬೆಂಗಳೂರು ನಗರದಲ್ಲಿ ವಾಸವಾಗಿದ್ದಾರೆ ಎಂದು ಹೇಳಲಾಗಿದೆ. ಅಭಿಷೇಕ್ ಅವರ ಮೃತದೇಹವನ್ನು ಹುಟ್ಟೂರು ದಾವಣಗೆರೆ ಜಿಲ್ಲೆಗೆ ಕೊಂಡು ಹೋಗಿದ್ದು,…

Read More

ಮಂಗಳೂರು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡ್ ಗೋಡೆಗೆ ಗುದ್ದಿದ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಪಂಚಾಯತ್ ಕಚೇರಿ ಬಳಿಯ ಪಾಡ್ಯರ್ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಕೊಂಪದವು ಕಡೆಗೆ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಕಾಂಪೌಂಡ್ ಗೋಡೆಗೆ ಗುದ್ದಿದ್ದು, ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಮೂಡಬಿದ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

Read More

ಮಂಗಳೂರು: ನಿಷೇಧಿತ ಮಾಪಿದಕ ವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ 6 ಮಂದಿಯನ್ನು ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ಪಾಂಡೇಶ್ವರ ಗ್ರೀನ್‌ಲ್ಯಾಂಡ್ ಲೇಔಟ್ ನಿವಾಸಿ ಧನಿಶ್ ಡಿ. ಕಾಂಚನ್ (19), ಪಾಂಡೇಶ್ವರ ನಿವಾಸಿ ಪೃಥ್ವಿಕ್ (18), ಬಾವುಟಗುಡ್ಡ ನಿವಾಸಿ ಫೈಜ್ ಅಂಬರ್ (23), ಜಲ್ಲಿಗುಡ್ಡೆ ನಿವಾಸಿ ತುಷಾನ್ ಡಿ. ಸುವರ್ಣ (19), ಫಳ್ನೀ‌ರ್ ನಿವಾಸಿ ರಾಜಿನ್ (21), ಫಳ್ನೀ‌ರ್ ಸ್ಟರಕ್ ರೋಡ್ ನಿವಾಸಿ ಅಫ್ಘಾನ್ (20) ಎಂದು ಗುರುತಿಸಲಾಗಿದೆ. ಫೆ.8ರಂದು ಸಂಜೆ ವೇಳೆ ಫಳ್ನೀ‌ರ್ ರಸ್ತೆಯ ಸಾರ್ವಜನಿಕ ರಸ್ತೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನದಲ್ಲಿ 6 ಮಂದಿ ಯುವಕರು ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿಯ ಮೇರೆಗೆ ಬಂದರು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಪರಾರಿಯಾಗಳು ಯತ್ನಿಸಿದಾಗ ವಾಹನವನ್ನು ಅಡ್ಡಗಟ್ಟಿ ಆರೋಪಿಗಳನ್ನು ಬಂಧಿಸಿ 20.52ಗ್ರಾಂ ಎಂಡಿಎಂಎ ಸಹಿತ ಲಕ್ಷಾಂತರ ರೂ. ಮೌಲ್ಯದ ವಸ್ತುಗಳಲ್ಲದೆ ಕೃತ್ಯಕ್ಕೆ…

Read More

ಬಂಟ್ವಾಳ: ಸಮೀಪ ಗೋಣಿ ಚೀಲ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಸೋಮವಾರ ಮಧ್ಯರಾತ್ರಿ ಬಂಟ್ವಾಳ ತಾಲೂಕಿನ ಬಡಕಬೈಲ್ ಎಂಬಲ್ಲಿ ಸಂಭವಿಸಿದೆ. ಘಟನೆಯಿಂದಾಗಿ ಇಲ್ಲಿನ ನಿವಾಸಿ ಮುಹಮ್ಮದ್ ಯಾನೆ ಮೋನಾಕ ಎಂಬವರ ಗೋಣಿ ಚೀಲ ದಾಸ್ತಾನು ಇರಿಸುವ ಗೋದಾಮು ಸಂಪೂರ್ಣ ಸುಟ್ಟು ಹೋಗಿದ್ದು, ಪಕ್ಕದ ಹಮೀದ್ ಹಾಗೂ ಸರ್ಪುದ್ದೀನ್ ಎಂಬವರ ಮನೆಗೂ ಬೆಂಕಿ ತಗುಲಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ. ತಡರಾತ್ರಿ ಘಟನೆ ಈ ಘಟನೆ ನಡೆದಿದ್ದು ಬೆಂಕಿ‌ ನಂದಿಸಲು ಅಗ್ನಿ ಶಾಮಕದಳ ಹಾಗೂ ಸಾರ್ವಜನಿಕರು ಹರಸಾಹಸ ಪಡಬೇಕಾಯಿತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಘಟನೆ ಗೆ ಕಾರಣ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬೇಟಿ ನೀಡಿದ್ದಾರೆ.

Read More

ಬೆಳ್ತಂಗಡಿ : ದಿನಸಿ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ಕಳ್ಳತನ ಮಾಡಿರುವ ಘಟನೆ ಪಡಂಗಡಿ ಗ್ರಾಮದ ಓಡೀಲು ಎಂಬಲ್ಲಿ ನಡೆದಿದೆ. ಹರೀಶ್ ಕುಲಾಲ ಎಂಬುವರಿಗೆ ಸೇರಿದ ದಿನಸಿ ಅಂಗಡಿ ಇದಾಗಿದ್ದು, ಫೆ.10 ರಂದು ರಾತ್ರಿ ಕಳ್ಳರು ನುಗ್ಗಿ ಹಲವರು ವಸ್ತುಗಳ ಕದ್ದಿದ್ದಾರೆ. ಇಂದು ಮುಂಜಾನೆ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳರು ಬೀಗ ಮುರಿದು, ಶಟರ್‌ ತೆರೆದು ಒಳನುಗ್ಗಿ ಕಳ್ಳತನ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಂಗಡಿಯಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಕೃತ್ಯದ ಕುರಿತು ಹೆಚ್ಚಿನ ಮಾಹಿತಿ ಇನ್ನು ತಿಳಿದು ಬರಬೇಕಿದೆ.

Read More

ಮುಲ್ಕಿ: ಇಲ್ಲಿನ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ಶಾಲಾ ಮಕ್ಕಳನ್ನು ಕಿಡ್ನಾಪ್ ಮಾಡಲು ಕಾರಿನಲ್ಲಿ ಆಗಮಿಸಿದ ದುಷ್ಕರ್ಮಿಗಳ ತಂಡ ಯತ್ನಿಸಿದ್ದು ಮಕ್ಕಳ ಧೈರ್ಯ ಕಂಡು ಸ್ಥಳದಿಂದ ಪರಾರಿಯಾಗಿದ ಬಗ್ಗೆ ತಡವಾಗಿ ವರದಿಯಾಗಿದೆ ಶಾಲಾ ಮಕ್ಕಳನ್ನು ಕಿಡ್ನ್ಯಾಪ್ ಮಾಡಲು ಕಾರಿನಲ್ಲಿ ಬಂದ ತಂಡ ಶಾಲೆ ಬಿಡುವಾಗ ಮಕ್ಕಳಿಗೆ ಚಾಕೊಲೇಟ್ ಆಸೆ ತೋರಿಸಿ ಕಾರಿನಲ್ಲಿ ಕುಳಿತುಕೊಳ್ಳಲು ಹೇಳಿದ್ದಾರೆ. ಇದಕ್ಕೆ ಮಕ್ಕಳು ಬಗ್ಗಲಿಲ್ಲ ಕೂಡಲೇ ತಂಡದಲ್ಲಿ ಒಬ್ಬ ಚಾಕು ತೋರಿಸಿದಾಗ ಕೂಡಲೇ ಮಕ್ಕಳು ಧೈರ್ಯದಿಂದ ಶಾಲೆಗೆ ಓಡಿ ಹೋಗಿ ಶಾಲಾ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ಶಾಲಾ ಪ್ರಾಂಶುಪಾಲರು ಸಹಿತ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ ದುಷ್ಕರ್ಮಿಗಳ ತಂಡ ಸ್ಥಳದಿಂದ ಪರಾರಿಯಾಗಿದೆ ಮಕ್ಕಳ ಧೈರ್ಯಕ್ಕೆ ಮೆಚ್ಚಿದ್ದು ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಹಚ್ಚುವಂತೆ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದುಷ್ಕರ್ಮಿಗಳು ಆಗಮಿಸಿದ ಕಾರಿನಲ್ಲಿ ಮಧ್ಯದ ಬಾಟಲ್ ಗಳನ್ನು ಮಕ್ಕಳು ನೋಡಿದ್ದು ಪೊಲೀಸರು ಶಾಲಾ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಶಾಲಾ ಮಕ್ಕಳ…

Read More