ಮಹಿಳೆಗೆ ಬ್ಯಾಂಕ್ ಸಹಾಯವಾಣಿ ಹೆಸರಿನಲ್ಲಿ ಕರೆ ಮಾಡಿ 2 ಲಕ್ಷ ರೂ. ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬ್ಯಾಂಕ್ ಪ್ರತಿನಿಧಿಯ ಹೆಸರಿನಲ್ಲಿ ಮಹಿಳೆಗೆ ಸೈಬರ್ ವಂಚಕ ಕರೆ ಮಾಡಿ, “ನಿಮ್ಮ ಖಾತೆಯಿಂದ ಬೇರೆ ಖಾತೆಗೆ 2 ಲಕ್ಷ ರೂ. ಹಣ ವರ್ಗಾವಣೆಯಾಗುತ್ತಿದೆ, ಈ ಹಣವನ್ನು ನೀವೇ ವರ್ಗಾಯಿಸಿದ್ದರೆ ಮೂರನ್ನು ಒತ್ತಿ, ಇಲ್ಲವಾಗಿದ್ದಲ್ಲಿ ಒಂದನ್ನು ಒತ್ತಿ” ಎಂದು ಹೇಳಿದ್ದಾರೆ. ಫೋನ್ ಕಾಲ್‌ಗೆ ಹೆದರಿ ತಕ್ಷಣವೇ ಮಹಿಳೆ ಒಂದನ್ನು ಒತ್ತಿದ್ದಾರೆ. ಬಳಿಕ, ವಂಚಕ “ನಿಮ್ಮ ಬ್ಯಾಂಕ್ ಮ್ಯಾನೇಜರ್‌ರನ್ನು ಸಂಪರ್ಕಿಸಿ” ಎಂದು ಕರೆ ಕಟ್ ಮಾಡಿದ್ದಾನೆ. ನಂತರ ಮಹಿಳೆ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಖಾತೆಯಲ್ಲಿದ್ದ 2 ಲಕ್ಷ ರೂ. ಹಣ ಇರಲಿಲ್ಲ. ತಕ್ಷಣ ಮಹಿಳೆ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ (1930)ಗೆ ಪ್ರಾಥಮಿಕ ದೂರು ನೀಡಿದ್ದಾಳೆ. ಸದ್ಯ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: main-admin
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಡೆತನದ ಜಮೀನಿನಲ್ಲಿ ಬಾಡಿಗೆಗಿದ್ದ ಕುಟುಂಬವೊಂದರ ಕಟ್ಟಡಗಳನ್ನು ಕಾನೂನು ಬಾಹಿರವಾಗಿ ಧ್ವಂಸಗೊಳಿಸಲಾಗಿದೆ ಎಂದು ಬಾಡಿಗೆದಾರರ ಪೈಕಿ ಓರ್ವರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹಾಗೂ ಶಾಸಕ ಅಶೋಕ್ ಕುಮಾರ್ ರೈ ವಿರುದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಉಜಿರೆ ನಿವಾಸಿ ದಿ| ಜಯಶ್ರೀ ಹೊಳ್ಳ ಅವರ ಪುತ್ರ ವಿಜಯ ರಾಘವೇಂದ್ರ ದೂರು ನೀಡಿದವರು. ಇವರ ಅಜ್ಜ ವಿಷ್ಣಯ್ಯ ಹೊಳ್ಳ ಎಂಬವರಿಗೆ ದೇಗುಲದಿಂದ ಬಾಡಿಗೆಗೆ ನೀಡಿದ ಸ್ಥಳದಲ್ಲಿ ವಿಷ್ಣಯ್ಯ ಹೊಳ್ಳರ ನಿಧನದ ಬಳಿಕ ಪುತ್ರ ಗಣಪತಿ ವಿಷ್ಣು ಹೊಳ್ಳ, ಅವರ ಸಾವಿನ ಬಳಿಕ ಪತ್ನಿ ಶಾರದಮ್ಮನವರು ವಾಸಿಸುತ್ತಿದ್ದರು. ಈ ಮಧ್ಯೆ ಇಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಪುತ್ತೂರು ಪುರಸಭೆಯಿಂದ ಮನೆ ನಂಬರುಗಳನ್ನು ಪಡೆಯಲಾಗಿತ್ತು. 1998-99ರಲ್ಲಿ ಇದನ್ನು ಶಾರದಮ್ಮನವರಿಂದ ದೂರುದಾರರ ತಾಯಿ ಜಯಶ್ರೀ ಹೊಳ್ಳ ಹೆಸರಿಗೆ ವರ್ಗಾಯಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಸ್ತುತ ಜಯಶ್ರೀ ನಿಧನರಾಗಿದ್ದು, ಆ ಬಳಿಕ ದೂರುದಾರರು ದೇಗುಲಕ್ಕೆ ಸ್ಥಳ ಬಾಡಿಗೆ ನೀಡುತ್ತಿದ್ದಾರೆ.…
ಬೆಂಗಳೂರು: ಕರ್ನಾಟಕ ಮೈಕ್ರೋ ಫೈನಾನ್ಸ್ (ದಬ್ಬಾಳಿಕೆ ತಡೆ) ಸುಗ್ರೀವಾಜ್ಞೆ 2025 ರ ಪರಿಷ್ಕೃತ ಕರಡನ್ನು ಸೋಮವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಅನುಮೋದನೆಗೆ ಕಳುಹಿಸಲಾಗಿದ್ದು, ಕಾನೂನು ಉಲ್ಲಂಘನೆಗಾಗಿ ದೀರ್ಘಾವಧಿ ಶಿಕ್ಷೆಯನ್ನು ಒಳಗೊಂಡಿದೆ. ಗರಿಷ್ಠ ಶಿಕ್ಷೆಯ ಪ್ರಮಾಣವನ್ನು ಮೂರು ವರ್ಷದಿಂದ 10 ವರ್ಷಕ್ಕೆ ಹೆಚ್ಚಿಸಲಾಗಿದೆ. ಶಿಕ್ಷೆಯ ಅವಧಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ನೇತೃತ್ವದ ತಜ್ಞರ ಸಮಿತಿ ನಿರ್ಧರಿಸಿದ್ದು, ಮಂಗಳವಾರ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅನುಮೋದನೆ ನೀಡುವ ನಿರೀಕ್ಷೆಯಿದೆ ಎಂದು ಅಧಿಕೃತ ಮೂಲಗಳು ಟಿಎನ್‌ಐಇಗೆ ತಿಳಿಸಿವೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಬಲವಂತದ ವಸೂಲಾತಿ ವಿಧಾನಗಳಿಂದ ಆರ್ಥಿಕವಾಗಿ ದುರ್ಬಲವಾಗಿರುವ ಗುಂಪುಗಳು ಮತ್ತು ವಿಶೇಷವಾಗಿ ರೈತರು, ಮಹಿಳೆಯರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ರಕ್ಷಿಸಲು ಮತ್ತು ಪರಿಹಾರ ನೀಡಲು ಸಿದ್ದರಾಮಯ್ಯ ಸಂಪುಟ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿದೆ. ಕಠಿಣ ಕಾನೂನಿನ ಪ್ರಮುಖ ಅಂಶಗಳು ಇಂತಿವೆ: ಸುಗ್ರೀವಾಜ್ಞೆಯ ಸೆಕ್ಷನ್ 8 ಅನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ಆರು ತಿಂಗಳಿಗಿಂತ…
ಉಳ್ಳಾಲ: ಪೊಲೀಸ್ ಜೀಪ್‌ನಲ್ಲಿ ಇಟ್ಟಿದ್ದ ವಾಕಿಟಾಕಿ, ಕಳವಾಗಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .ಠಾಣೆಯ ಪಿಎಸ್‌ಐ ಧನರಾಜ್ ಎಸ್ ಅವರು ರಾತ್ರಿ ರೌಂಡ್ಸ್ ಕರ್ತವ್ಯಕ್ಕೆ ಹೊರಡುವಾಗ ಅವರಲ್ಲಿದ್ದ ವಾಕಿಟಾಕಿಗೆ ಚಾರ್ಜ್ ಇಲ್ಲದ ಕಾರಣ ಇನ್ನೊಂದು ಡಿಜಿಟಲ್ ವಾಕಿಟಾಕಿ ಒಯ್ದಿದ್ದರು. ಇಲಾಖೆಯ ಜೀಪನ್ನು ಪಿಎಸ್‌ಐ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಲ್ಲಾಪು ಬಳಿ, ಜನರು ಗುಂಪು ಸೇರಿ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿರುವುದನ್ನು ಗಮನಿಸಿದ್ದಾರೆ ಪಿಎಸ್‌ಐ ಜೀಪ್ ನಿಲ್ಲಿಸಿ, ವಾಕಿಟಾಕಿಯನ್ನು ಸೀಟ್‌ನಲ್ಲಿಟ್ಟು ಜನರನ್ನು ಚದುರಿಸಿ ಬಂದು ನೋಡಿದಾಗ ವಾಕಿಟಾಕಿ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪುತ್ತೂರು : ಪುತ್ತೂರಿನ ಜಿಡೆಕಲ್ಲಿನಲ್ಲಿ ವ್ಯಸನಿಯೊಬ್ಬ 200ಕ್ಕೂ ಹೆಚ್ಚು ಮನೆಗಳಿಗೆ ಹೋಗುವ ಕುಡಿಯುವ ನೀರಿನ ಪೈಪ್ ಕಟ್ ಮಾಡಿರುವ ಘಟನೆ ನಡೆದಿದೆ. ಫೆ.2 ರಂದು ಪುತ್ತೂರು ನಗರಸಭಾ ವ್ಯಾಪ್ತಿಯ ಜಿಡೆಕಲ್ಲು ಎಂಬಲ್ಲಿ ಘಟನೆ ನಡೆದಿದ್ದು, ಯೋಗಿಶ ಪೂಜಾರಿ ಎಂಬಾತ ನೀರಿನ ಪೈಪ್ ತುಂಡರಿಸಿ ಹುಚ್ಚಾಟ ಮೆರೆದ ಯುವಕ. ಜಿಡೆಕಲ್ಲು ಶಾಲಾ ಸಮೀಪವಿರುವ ನೀರಿನ ಟ್ಯಾಂಕ್ ನಿಂದ ಸಂಪರ್ಕವಿರುವ ಎಲ್ಲಾ ಪೈಪ್ ಗಳನ್ನು ತುಂಡರಿಸಿದ್ದಾನೆ. ಈತ ಕಳೆದ 3-4 ದಿನಗಳಿಂದ ರಸ್ತೆಯಲ್ಲಿ ಸಿಕ್ಕಿದವರಿಗೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ ಎಂದು ಊರಿನವರು ಆಪಾದಿಸಿದ್ದಾರೆ. ಪೈಪ್ ಲೈನ್ ತುಂಡರಿಸುತಿದ್ದಾಗ ಊರಿನವರ ಕೈಗೆ ಸಿಕ್ಕಿ ಬಿದ್ದಿದ್ದ, ನಂತರ ತಪ್ಪಿಸಿಕೊಂಡು ಬೆಂಗಳೂರಿಗೆ ಹೋಗಿ ಇಂದು ರೈಲಿನಲ್ಲಿ ವಾಪಾಸ್ ಬಂದಾಗ ಊರಿನವರ ಕೈಗೆ ಸಿಕ್ಕಿಬಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ವಿಟ್ಲ: ಬೀಡಿ ಮಾಲಕನ ಮನೆಯಲ್ಲಿ ನಡೆದ ನಕಲಿ ಇಡಿ ದಾಳಿ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಕೇರಳ ಮೂಲದ ಸಚಿನ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಮುಂಬೈಯಿಂದ ಪೊಲೀಸರು ಕರೆತಂದಿದ್ದಾರೆ. ಆದರೆ ಪೋಲೀಸ್ ವಶಕ್ಕೆ ಪಡೆದ ತಕ್ಷಣವೇ ಆರೋಪಿಯ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಆರೋಪಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಂಧಿತ ಆರೋಪಿ ಅಪಸ್ಮಾರ ಮತ್ತು ತಲೆನೋವು ಸಮಸ್ಯೆಯಿಂದ ಬಳಲುತ್ತಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿಗೆ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದಾರೆ. ಜನವರಿ 3 ರಂದು ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರಿನ ನಾರ್ಶ ಎಂಬಲ್ಲಿ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಎಂಬಾತನಿಗೆ ಮನೆಗೆ ನಕಲಿ ಇಡಿ ಅಧಿಕಾರಿಗಳ ಹೆಸರಲ್ಲಿ ದರೋಡೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇರಳದ ಕೊಟ್ಟಾಯಂ ನಿವಾಸಿ ಅನಿಲ್ ಫೆರ್ನಾಂಡೀಸ್ ಎನ್ನುವ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದೀಗ ಮತ್ತೊಬ್ಬ ಆರೋಪಿ ಪೊಲೀಸ್…
ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರಿಗೆ ಬಿಸಿ ಮುಟ್ಟಿಸಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಇನ್ಮುಂದೆ ಫುಟ್‌ಪಾತ್‌ನಲ್ಲಿ ರೈಡಿಂಗ್ ಮಾಡಿದರೆ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಅಮಾನತು ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಫುಟ್‌ಪಾತ್ ಮೇಲೆ ಬೈಕ್, ಕಾರು ಓಡಿಸುವ ಸವಾರರಿಗೆ ಸಂಚಾರ ವಿಭಾಗದ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪಾದಾಚಾರಿ ರಸ್ತೆಯಲ್ಲಿ ವಾಹನ ಚಲಾಯಿಸಿದರೆ ಡಿಎಲ್ ಅಮಾನತು ಮಾಡುವುದಾಗಿ ಎಚ್ಚರಿಸಿದ್ದಾರೆ. ಇದರ ಜೊತೆಗೆ ಕೇಸ್ ದಾಖಲಿಸಿ ಸೂಕ್ತ ದಂಡ ವಿಧಿಸಲಿದ್ದಾರೆ. ಫುಟ್‌ಪಾತ್ ರೈಡಿಂಗ್ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರ ನಿರ್ಧಾರಿಸಿದ್ದಾರೆ. ಪಾದಚಾರಿಗಳ ಬಳಕೆಗೆ ಫುಟ್‌ಪಾತ್ ಇರೋದು. ಅಲ್ಲಿ ವಾಹನ ಚಲಾಯಿಸುವಂತಿಲ್ಲ ಎಂದು ಸೂಚಿಸಿದ್ದಾರೆ. ಪಾದಚಾರಿಗಳು ಹೊರತುಪಡಿಸಿ ಬೇರೆ ಯಾರೇ ಬಳಸಿದರೂ ಕ್ರಮ ಆಗಲಿದೆ. ಪಾದಚಾರಿಗಳ ಸುಗಮ ಓಡಾಟಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪೊಲೀಸರು ಕಠಿಣ ನಿಯಮ ರೂಪಿಸಿದ್ದಾರೆ. ಇತ್ತೀಚೆಗೆ ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ನಿಯಮ ಉಲ್ಲಂಘಿಸಿ ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿಕೊಂಡು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಪಾದಚಾರಿಗಳಿಗೆ ಓಡಾಟಕ್ಕೆ ಕಿರಿಕಿರಿಯಾಗುತ್ತಿದೆ. ಫುಟ್‌ಪಾತ್‌ನಲ್ಲಿ ಬೈಕ್ ಅಷ್ಟೇ ಅಲ್ಲ,…
ಬಂಟ್ವಾಳ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಬ್ಯಾಗ್‌ನಿಂದ ನಗ-ನಗದು ಕಳವು ಮಾಡಿದ ಘಟನೆ ನಡೆದಿದೆ. ರಾಜಗೋಪಾಲ್ ಕಾರಂತ ಯಲಹಂಕ ಉಪನಗರ, ಬೆಂಗಳೂರು ಎಂಬವರ ದೂರಿನಂತೆ ಹೆಂಡತಿಯ ಮನೆಯು ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡ ಆಗಿರುತ್ತದೆ. ಹೆಂಡತಿಯ ಊರಿನಲ್ಲಿ ಖಾಸಗಿ ಕಾರ್ಯಕ್ರಮ ಇದ್ದುದರಿಂದ ಮನೆಯಿಂದ ಚಿನ್ನವನ್ನು ಬಾಕ್ಸ್‌ನಲ್ಲಿ ಇಟ್ಟುಕೊಂಡು ಅದರ ಜೊತೆಯಲ್ಲಿ 3000 ರೂ ಹಣವನ್ನು ತಮ್ಮ ಲಗೇಜು ಬ್ಯಾಗ್ ನಲ್ಲಿರಿಸಿ ತನ್ನ ಹೆಂಡತಿ ಮತ್ತು ಅಳಿಯನೊಂದಿಗೆ ಫೆ.1 ರಂದು ರಾತ್ರಿ ಬೆಂಗಳೂರು ಮೆಜಸ್ಟಿಕ್ ನಿಂದ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಹೊರಟಿರುತ್ತಾರೆ. ಬರುವ ದಾರಿಯಲ್ಲಿ, ಕುಣಿಗಲ್ ಬಳಿ ಬಸ್ ನಿಲ್ಲಿಸಿದಾಗ ರಾಜಗೋಪಾಲ್ ಅವರ ಹೆಂಡತಿ ಮತ್ತು ಅಳಿಯ ಚಿನ್ನಾಭರಣ ಹಾಗೂ ನಗದು ಹಣವಿದ್ದ ಬ್ಯಾಗ್‌ಗಳನ್ನು ಬಸ್ಸಿನಲ್ಲಿಯೇ ಇಟ್ಟು ಶೌಚಾಲಯಕ್ಕೆ ಹೋಗಿರುತ್ತಾರೆ. ಫೆ.2 ರಂದು ಮುಂಜಾನೆ ಬಸ್ ವಗ್ಗ ಕಾರಿಂಜಾ ಕ್ರಾಸ್ ತಲುಪಿದಾಗ ಬಸ್ಸಿನಿಂದ ಕೆಳಗೆ ಇಳಿದು, ಅಲ್ಲಿಯೇ ಬಸ್ ನಿಲ್ದಾಣದ ಪಕ್ಕದಲ್ಲಿ ಬ್ಯಾಗನ್ನು ತೆರೆದು ನೋಡಿದಾಗ ಒಟ್ಟು 144 ಗ್ರಾಂ ಚಿನ್ನ ಅಂದಾಜು…
ಉಡುಪಿ: ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ನಗರದ ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರದ ಕಿರಣ್ (24) ಬಂಧಿತ ಆರೋಪಿ. ಆತನಿಂದ ₹7 ಲಕ್ಷ ವಶಪಡಿಸಿಕೊಳ್ಳಲಾಗಿದೆ.ಉಡುಪಿ ಕನ್ನಾರ್ ಸಂತೋಷ ಕುಮಾರ್ ಎಂಬುವರಿಗೆ ಅಪರಿಚಿತರು ಕರೆಮಾಡಿ, ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಕರೆ ಮಾಡುತ್ತಿದ್ದು, ನಿಮ್ಮ ಮೊಬೈಲ್ ಸಂಖ್ಯೆಯಿಂದ ಕಾನೂನುಬಾಹಿರ ಜಾಹೀರಾತು ಹಾಗೂ ಸಂದೇಶ ಹೋಗಿದೆ ಎಂದು ತಿಳಿಸಿದ್ದರು. ನಿಮ್ಮ ಮೇಲೆ ಒಟ್ಟು 17 ಎಫ್‌ಐಆರ್ ಆಗಿದ್ದು, ಎರಡು ಗಂಟೆಯೊಳಗೆ ನಿಮ್ಮ ಹೆಸರಿನಲ್ಲಿರುವ ಸಂಖ್ಯೆಗಳನ್ನು ಸ್ಥಗಿತಗೊಳಿಸುತ್ತೇವೆ. ನಿಮ್ಮ ಮೇಲೆ ಅರೆಸ್ಟ್ ವಾರಂಟ್ ಆಗಿದೆ ಎಂದೂ ಹೆದರಿಸಿದ್ದರು.ಸಂತೋಷ ಕುಮಾರ್ ಅವರಿಗೆ ವಿಡಿಯೊ ಕರೆ ಮಾಡಿದ್ದು, ಕರೆ ಮಾಡಿದ ವ್ಯಕ್ತಿಯು ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲಿದ್ದು, ಅಂಧೇರಿ ಈಸ್ಟ್ ಮುಂಬೈನ ಸೈಬರ್ ವಿಭಾಗದ ಇನ್‌ಸ್ಪೆಕ್ಟರ್ ಎಂದು ಹೇಳಿದ್ದ. ಅಲ್ಲದೆ, ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯಲ್ಲಿ ಹಣ ಅಕ್ರಮ ವರ್ಗಾವಣೆಯಾಗಿದೆ ಎಂದೂ ತಿಳಿಸಿದ್ದ. ಆದಾಯದ ಮೂಲ ಪರಿಶೀಲಿಸುವುದಾಗಿ ತಿಳಿಸಿ ಸಂತೋಷ್…
ಉಡುಪಿ: ಭಾನುವಾರ ಜಿಲ್ಲಾಡಳಿತದ ಮುಂದೆ ಶರಣಾಗಿದ್ದ ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರನ್ನು ಪೊಲೀಸರ ತಂಡವು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದೆ. ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಫೆಬ್ರವರಿ 3ರಂದು ವೀಡಿಯೋ ಕಾನ್ಸರೆನ್ಸ್ ಮೂಲಕ ಹಾಜರುಪಡಿಸುವಂತೆ ನ್ಯಾಯಾಧೀಶರು ತಿಳಿಸಿದರು. ಲಕ್ಷ್ಮೀ , ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗುಟ್ಟೆಯ ನಿವಾಸಿ ಪಂಜು ಪೂಜಾರಿ – ದಾರಕ್ಕ ದಂಪತಿಯ 5ನೇ ಪುತ್ರಿಯಾಗಿದ್ದಾರೆ. ಸಹೋದರರಾದ ರಾಮ್, ರಾಜು, ವಿಠಲ, ಬಸವ ಕೃಷಿಕರಾಗಿದ್ದಾರೆ. ತಂಗಿ ರಾಜೀವಿಯ ವಿವಾಹವಾಗಿದೆ. ತಂದೆ ಹಾಗೂ ತಾಯಿ ಮೃತಪಟ್ಟಿದ್ದಾರೆ. ಈಕೆಯ ವಿರುದ್ಧ ಅಮಾಸೆಬೈಲು ಠಾಣೆಯಲ್ಲಿ ಒಟ್ಟು ಮೂರು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಈಕೆ ಆಂಧ್ರಪ್ರದೇಶದಲ್ಲಿ ಗಂಡ ಮತ್ತು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದು ನಕ್ಸಲ್ ಚಟುವಟಿಕೆಯಿಂದ ವಿಮುಖರಾಗಿದ್ದರು.










