ಮಂಗಳೂರು : ನಿವೃತ್ತ ಕರ್ನಲ್ ರತ್ನ ಕುಮಾರ್ ಅಡಪ (61 ) ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ. ಭಾರತೀಯ ಸೇನೆಯ ಬೆಂಗಳೂರಿನ ಪ್ಯಾರಾ ರೆಜಿಮೆಂಟ್‌ನ ನಿವೃತ್ತ ಕರ್ನಲ್ ರತ್ನ ಕುಮಾರ್ ಅಡಪ (61 ) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ (ಅ.12ರಂದು) ಬೆಂಗಳೂರಿನಲ್ಲಿ ನಿಧನ ಹೊಂದಿದರು.ಮೂಲತಃ ಸೋಮವಾರ ಪೇಟೆಯವರಾಗಿರುವ ರತ್ನ ಕುಮಾರ್ ಅಡಪ ಅವರು 35 ವರ್ಷ ಕಾಲ ಸೇನೆಯಲ್ಲಿ ಸೇವೆಯಲ್ಲಿದ್ದು 2021ರಲ್ಲಿ ನಿವೃತ್ತರಾಗಿದ್ದರು. ಶನಿವಾರದಂದು ಬೆಂಗಳೂರಿನಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಅವರು ಪತ್ನಿ ಶಾಂತಲಾ ಅಡಪ, ಮತ್ತು ಪುತ್ರ ಮೋಹಿತ್ ಶರಣ್ ಅಡಪ ಅವರನ್ನು ಅಗಲಿದ್ದಾರೆ. ಅ.13ರಂದು ಪದವು ಮೇಗಿನ ಮನೆಯ ಬಳಿ ಇರುವ ಅವರ ಸ್ವಗೃಹ “ಅರ್ಪಣಾ’ದಲ್ಲಿ ಮೃತರ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು. ನಂತರ ಶಕ್ತಿನಗರದ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರವನ್ನು ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Author: main-admin
ಮಂಗಳೂರು :ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈಗೆ ತೆರಳುವ ವೇಳೆ ಬಾಂಗ್ಲಾ ಪ್ರಜೆ ಮಹಮ್ಮದ್ ಮಾಣಿಕ್ ಎಂಬಾತ ಬಂಧಿತನಾಗಿದ್ದು, ಆತನನ್ನು ಪೊಲೀಸರು ಒಂದು ವಾರ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಆತನ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ಕಸ್ಟಡಿಗೆ ಪಡೆದು ವಿಚಾರಣೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಶುಕ್ರವಾರ ಸಂಜೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ವೇಳೆ ಮಹಮ್ಮದ್ ಮಾಣಿಕ್ ಭಾರತೀಯ ಪಾಸ್ ಪೊರ್ಟ್ ಹಾಗೂ ಇತರೆ ದಾಖಲಾತಿಗಳನ್ನು ಹಾಜರುಪಡಿಸಿದ್ದಾನೆ. ಈ ವೇಳೆ ಆತ ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆ ಮಾಣಿಕ್‌ಚೌಕ್‌ನ ನಿವಾಸಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಬಾಂಗ್ಲದೇಶದ ರಾಷ್ಟ್ರೀಯ ಗುರುತು ಚೀಟಿ ಸಂಖ್ಯೆ 601 ಆಗಿದ್ದು ಈತನು 2017 ರಲ್ಲಿ ಇಂಡೋ -ಬಾಂಗ್ಲ ಅಂತರಾಷ್ಟ್ರೀಯ ಗಡೀರೇಖೆ ಪಶ್ಚಿಮ ಬಂಗಾಳದ ಮುರ್ಷಿದಬಾದ್ ಜಿಲ್ಲೆಯ ಲಾಲ್‌ಗೊಲ್ ಮುಖೇನ ಭಾರತಕ್ಕೆ ಬಂದಿದ್ದ ಎಂದು ಹೇಳಲಾಗಿದೆ. ಶೆಲ್ಲಾ-ಹೌರ-ಚೆನ್ನೈ ಮುಖಾಂತರ ಮಂಗಳೂರು ಮೂಡಬಿದರೆ ಮೂಲಕ ಉಡುಪಿಗೆ ಬಂದಿದ್ದ ಎಂದು ತಿಳಿದು ಬಂದಿದೆ.…
ಮಂಗಳೂರು: ನಗರದ ಕಂಕನಾಡಿ ಸಿಗ್ನಲ್ ವೃತ್ತದ ಬಳಿ ಅಕ್ಟೋಬರ್ 10ರಂದು ನಡೆದ ಖಾಸಗಿ ಬಸ್‌ಗಳೆರಡರ ಚಾಲಕರು ಹಾಗೂ ನಿರ್ವಾಹಕರ ನಡುವೆ ನಡೆದ ಹೊಡೆದಾಟಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು – ಪ್ರತಿದೂರು ದಾಖಲಾಗಿದೆ. ಸೆಲಿನಾ ಬಸ್ ನಿರ್ವಾಹಕ ಭುವನೇಶ್ವರ ಬಿ.ವಿ. ನೀಡಿರುವ ದೂರಿನಂತೆ ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಿಂದ ವಿಟ್ಲಕ್ಕೆ ಹೋಗುತ್ತಿರುವಾಗ ಬೆಳಗ್ಗೆ 8.15ಕ್ಕೆ ಕಂಕನಾಡಿ ಸಿಗ್ನಲ್‌ನಲ್ಲಿ ಧರಿತ್ರಿ ಬಸ್ ಅನ್ನು ತಮ್ಮ ಬಸ್ಸಿಗೆ ಅಡ್ಡಲಾಗಿ ನಿಲ್ಲಿಸಿದ ಅದರ ಚಾಲಕ ಸುರೇಶ್ ಹಾಗೂ ನಿರ್ವಾಹಕ ರಾಕೇಶ್ ಎಂಬವರು ತಮ್ಮ ಬಸ್ಸಿನ ಒಳಗಡೆ ಬಂದು ಅವಾಚ್ಯವಾಗಿ ಬೈಯ್ದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಅದೇ ರೀತಿ ಈ ಹೊಡೆದಾಟಕ್ಕೆ ಸಂಬಂಧಪಟ್ಟಂತೆ ಧರಿತ್ರಿ ಬಸ್ಸಿನ ಚಾಲಕ ಧರ್ಮಸ್ಥಳದ ಸುರೇಶ್ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ದೂರಿನಲ್ಲಿ ಸೆಲಿನಾ ಬಸ್ಸು ಕಂಡಕ್ಟರ್ ಭುವನೇಶ್ವರ್ ಜ್ಯೋತಿ ಸರ್ಕಲ್ ಬಳಿ ತಮಗೆ ಅವಾಚ್ಯ…
ಕಾರವಾರ: ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಿಸಿದ ಘಟನೆ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ನಡೆದಿದೆ. ಮೈಸೂರು ಮೂಲದ ಅಭಿ ಹಾಗೂ ಇನ್ನೋರ್ವ ಪ್ರವಾಸಿಗನನ್ನು ಇಲ್ಲಿನ ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇವರಿಬ್ಬರು ರಜೆಯ ಹಿನ್ನಲೆ ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದರು. ಸಮುದ್ರದಲ್ಲಿ ಈಜಾಡುವ ವೇಳೆ ಅಲೆಗಳಿಗೆ ಸಿಲುಕಿ ಮುಳುಗುವ ಹಂತದಲ್ಲಿದ್ದರು. ಇದನ್ನು ಗಮನಿಸಿದ ಲೈಫ್‌ಗಾರ್ಡ್ ಸಿಬ್ಬಂದಿಗಳಾದ ಶಿವಪ್ರಸಾದ್, ಮೋಹನ್, ಶಿವಪ್ರಸಾದ್ ಅಂಬಿಗ ಎನ್ನುವವರು ಯುವಕರನ್ನು ರಕ್ಷಿಸಿದ್ದಾರೆ. ಇನ್ನು ರಕ್ಷಿಸಲ್ಪಟ್ಟ ಇನ್ನೊರ್ವ ಪ್ರವಾಸಿಗ ಲೈಫ್‌ಗಾರ್ಡ್ ಸಿಬ್ಬಂದಿಗೆ ಮಾಹಿತಿ ನೀಡದೇ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಸಣ್ಣ ಕಾಫಿ ಶಾಪ್ ಹೊಂದಿರುವ ವ್ಯಕ್ತಿ ತನ್ನ ಬ್ಯಾಂಕ್ ಖಾತೆ ನೋಡಿ ತಲೆ ತಿರುಗಿ ಬಿದ್ದಿದ್ದಾರೆ. ಅಂದರೆ ದಿನಕ್ಕೆ ನೂರು ಅಥವಾ ಸಾವಿರ ರೂ.ಗಳ ಆದಾಯ ಮಾಡುತ್ತಿದ್ದ ಇವರ ಖಾತೆಗೆ 999 ಕೋಟಿ ಹಣ ಜಮೆ ಆಗಿದೆ. ಹೌದು, ಇವರ ಫೋನ್‌ಗೆ ಠಣ್ ಎಂದು ಒಂದು ಮೆಸೆಜ್ ಬಂದಿದೆ. ಮೆಸೆಜ್ ತೆರೆದು ನೋಡಿದ್ರೆ 999 ಕೋಟಿ ರೂ.ಗಳ ಹಣ ಜಮೆ ಆಗಿರುವುದು ತಿಳಿದುಬಂದಿದೆ. ತಕ್ಷಣಕ್ಕೆ ಏನು ಮಾಡಬೇಕೆಂದು ತೋಚದೆ ಮತ್ತೆ ಅಲ್ಲಿ ಇದ್ದ ಸಂಖ್ಯೆಯನ್ನು ಲೆಕ್ಕ ಹಾಕಲು ಮುಂದಾಗಿದ್ದಾರಂತೆ. ಪದೇ ಪದೇ ಲೆಕ್ಕ ಹಾಕಿದರೂ ಅದು 999 ಕೋಟಿ ರೂ. ಗಳನ್ನು ತೋರಿಸಿದೆ. ಅರೇ… ಇದೇನಪ್ಪ ನನ್ನ ಖಾತೆಗೆ ಇಷ್ಟು ಹಣ ಹಾಕಿದವರು ಯಾರು? ಯಾಕೆ ಹಾಕಿದ್ದಾರೆ ಎಂದು ಯೋಚಿಸುತ್ತಿರವಾಗಲೇ ಅವರಿಗೆ ಶಾಕ್ ಎದುರಾಗಿದೆ. ಅದುವೇ ಅವರ ಖಾತೆಯನ್ನು ಫ್ರೀಜ್ ಮಾಡಲಾಗಿದೆ. ಇದನ್ನು ನೋಡಿ ಸಂತಸದಿಂದ ಇದ್ದ ಇವರು ಕ್ಷಣ ಮಾತ್ರದಲ್ಲಿ ಸಂಕಷ್ಟಕ್ಕೆ ಈಡಾಗುವಂತೆ…
ನೆಲ್ಯಾಡಿ: ಬೆಂಗಳೂರು ಮೂಲದ ಖಾಸಗಿ ಸ್ಲೀಪರ್ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಸಮೀಪದ ಲಾವಂತ್ತಡ್ಕ ಎಂಬಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ 11 ಗಂಟೆಗೆ ಈ ದುರ್ಘಟನೆ ಸಂಭವಿಸಿದ್ದು, ಅಪಘಾತದಲ್ಲಿ ಬಸ್‌ನ ಡ್ರೈವರ್ ಬಸ್‌ನ ಅಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತನನ್ನು ಬೆಂಗಳೂರು ಮೂಲದವನೆಂದು ತಿಳಿದುಬಂದಿದೆ. ಈ ಖಾಸಗಿ ಸ್ವೀಪರ್ ಬಸ್ ಗುರುವಾರ ಬೆಂಗಳೂರಿನಿಂದ ಪ್ರಯಾಣಿಕರನ್ನು ಗೋಕರ್ಣದಲ್ಲಿ ಇಳಿಸಿ, ನಿನ್ನೆ ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಪಿಕ್-ಅಪ್ ಮಾಡಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.ಗೋಕರ್ಣದಿಂದ ಡ್ರೈವರ್ ಮತ್ತು ಸಹ-ಡ್ರೈವರ್ ಮಾತ್ರ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ),ಮಂಗಳೂರು ಇದರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು 2024ರ ಅಕ್ಟೋಬರ್ 10ರಂದು “ಕ್ರೆಶೆಂಡೋ” ಎಂಬ ಶೀರ್ಷಿಕೆಯ ಅಡಿಯಲ್ಲಿ ಸೆಮಿನಾರ್ ಹಾಲ್, ಸೆಂಟಿನರಿ ಬ್ಲಾಕ್‌ನಲ್ಲಿ 2022-2024 ಶೈಕ್ಷಣಿಕ ವರ್ಷದ ಎಂಬಿಎ, ಎಂಸಿಎ ವಿದ್ಯಾರ್ಥಿಗಳಿಗೆ ವಿದಾಯ ಸಮಾರಂಭವನ್ನು ಹಮ್ಮಿಕೊಂಡಿತ್ತು. ಕಾಲೇಜಿನ ಪ್ರಾಂಶುಪಾಲೆ ಡಾ. ಸಿಸ್ಟರ್ ಎಂ. ವೆನಿಸ್ಸಾ ಎ.ಸಿ. ಅವರು ಬೀಳ್ಕೊಡುಗೆ ಭಾಷಣದಲ್ಲಿ -“ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಣವು ಶಕ್ತಿಯುತ ಶಸ್ತ್ರಾಸ್ತ್ರವಿದ್ದಂತೆ. ಜೀವನಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ನೀವು ಪಡೆದ ಶಿಕ್ಷಣ ಸಹಾಯ ಮಾಡುತ್ತದೆ” ಎಂದು ಕರೆಯಿತ್ತರು. ಮಾತ್ರವಲ್ಲದೆ ಸ್ವತಂತ್ರವಾಗಿ, ಗೌರವದಿಂದ ಮತ್ತು ಜವಾಬ್ದಾರಿಗಳಿಂದ ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ಬದುಕಿನ ಅಧ್ಯಾಯದ ಮುಕ್ತಾಯವು ಹೊಸ ಬದುಕಿನ ಆರಂಭದ ಉಲ್ಲಾಸ ಮತ್ತು ತೃಪ್ತಿಗೆ ಕಾರಣವಾಗುತ್ತದೆ ಎಂದರು. ಅವರ ಭವಿಷ್ಯದ ಜೀವನದ ಹೊಸ ಅಧ್ಯಾಯಕ್ಕೆ ಶುಭಾಶಯಗಳನ್ನು ಹೇಳಿದರು. ವಿದ್ಯಾರ್ಥಿಗಳಿಗೆ ತಮ್ಮನ್ನು ಸುತ್ತುವರಿದ ಜಗತ್ತನ್ನು ರೂಪಿಸುವ, ಪ್ರೇರೇಪಿಸುವ ಮತ್ತು ಬದಲಾಯಿಸುವ ಶಕ್ತಿಯನ್ನು ಹೊಂದಲು ಪ್ರೇರೇಪಿಸಿದರು. ಎಂಬಿಎ ಮತ್ತು ಎಂಸಿಎ ವಿಭಾಗದ ಪ್ರಾಧ್ಯಾಪಕ…
ಬೆಂಗಳೂರು : ಅಪಘಾತಕ್ಕೆ ಕಾರಣವಾಗುವ ವಾಹನವು ಅಪಘಾತದ ಸಮಯದಲ್ಲಿ ಮಾನ್ಯವಾದ ಪರವಾನಗಿ ಮತ್ತು ಫಿಟ್‌ನೆಸ್ ಪ್ರಮಾಣಪತ್ರವನ್ನು ಹೊಂದಿರದಿದ್ದರೂ, ವಿಮಾ ಕಂಪನಿಯು ಹಕ್ಕುದಾರರಿಗೆ ಪಾವತಿಸಬೇಕಾದ ಪರಿಹಾರದ ಮೊತ್ತವನ್ನು ಪಾವತಿಸಲು ಮತ್ತು ಅದನ್ನು ವಾಹನದಿಂದ ವಸೂಲು ಮಾಡಲು ಹೊಣೆಗಾರನಾಗಿರುತ್ತಾನೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಸಂತ್ರಸ್ತರಿಗೆ ಪರಿಹಾರ ಪಾವತಿಸಲು ತನಗೆ ಸೂಚಿಸಿದ ಅಧೀನ ನ್ಯಾಯಾಲಯ ಆದೇಶ ರದ್ದು ಕೋರಿ ಶ್ರೀರಾಮ ಜನರಲ್ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ. ಜಿ. ಶಿವಶಂಕರೇಗೌಡ ಅವರ ನ್ಯಾಯಪೀಠ ಈ ಆದೇಶ ನೀಡಿದೆ ಅಪಘಾತ ಉಂಟು ಮಾಡಿರುವ ಸರಕು ಸಾಗಣೆ ವಾಹನಕ್ಕೆ ರಹದಾರಿ ಪರವಾನಿಗೆ ಮತ್ತು ಸದೃಢ ಪ್ರಮಾಣ ಪತ್ರವೇ ಚಾಲ್ತಿಯಲ್ಲಿ ಇರಲಿಲ್ಲ. ಈ ಪ್ರಮಾಣ ಪತ್ರ ನವೀಕರಣ ಮಾಡದಿರುವುದು ವಾಹನ ಮಾಲೀಕನ ತಪ್ಪು. ಇದರಿಂದ ಅವರೇ ಘಟನೆಯ ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕಿದ್ದು, ಸರಕು ಸಾಗಣೆ ವಾಹನಕ್ಕೆ ವಿಮಾ ಪಾಲಿಸಿ ವಿತರಿಸಿದ್ದ ಶ್ರೀರಾಮ ಜನರಲ್ ವಿಮಾ ಕಂಪನಿಯು ಕೋರಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್, ಸದೃಢ…
ಉಡುಪಿ : ಪ್ರಧಾನ ಮಂತ್ರಿ ಕಾರ್ಯಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿಯ ಸೋಗಿನಲ್ಲಿ ಶ್ರೀಕೃಷ್ಣ ಮಠಕ್ಕೆ ಕರೆ ಮಾಡಿ, ವಿಶೇಷ ದರ್ಶನಗೈದ ವ್ಯಕ್ತಿಯ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಅಕ್ಟೋಬರ್ 9ರಂದು ಉದಯ್ ಎನ್ನುವಾತ ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ್ ಆಚಾರ್ಯ ಅವರಿಗೆ ಕರೆ ಮಾಡಿದ್ದು, ತಾನು ಪ್ರಧಾನಮಂತ್ರಿ ಕಾರ್ಯಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ನಾವು ಕುಟುಂಬ ಸಮೇತರಾಗಿ ಮಠಕ್ಕೆ ಆಗಮಿಸುತ್ತಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದರು. ಅನುಮಾನ ವ್ಯಕ್ತವಾಯಿತು ಅದರಂತೆ ಅಕ್ಟೋಬರ್ 9ರಂದು ಭಾರತ ಸರಕಾರ ಎಂದು ಬರೆದ ವಾಹನದಲ್ಲಿ ಆಗಮಿಸಿದ ಡಾ| ಉದಯ್ ಹಾಗು ಕುಟುಂಬಸ್ಥರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಬೆಳಗ್ಗೆ ವಿಶೇಷ ದರ್ಶನ ಮಾಡಿಸಿದ್ದೇವೆ. ಆದರೆ ಅವರ ಚಲನವಲನದಿಂದ ಅನುಮಾನ ವ್ಯಕ್ತವಾಗಿ ಅವರನ್ನು ವಿಚಾರಿಸಿದಾಗ ಸೂಕ್ತ ಉತ್ತರವನ್ನು ನೀಡದೇ ತೆರಳಿದ್ದಾರೆ. ಪ್ರಧಾನ ಮಂತ್ರಿಗಳ ವೆಬ್‌ಸೈಟ್ ಅನ್ನು ಪರಿಶೀಲಿಸಿದಾಗ ಇವರ ಬಗ್ಗೆ ಸಮರ್ಪಕವಾದ ಮಾಹಿತಿ ದೊರೆತಿಲ್ಲ. ಕೇಂದ್ರ ಸರಕಾರದ ಅಧಿಕಾರಿ…
ಕಾಪು (ಉಚ್ಚಿಲ): ದಸರಾ ಗೌಜಿನ ನಡುವೆ ಕಾರಿನ ಗಾಜು ಒಡೆದು ಲ್ಯಾಪ್ಟಾಪ್ ಕಳವು ಮಾಡಲಾಗಿದೆ. ಉಡುಪಿಯ ಉಚ್ಚಿಲ ದೇವಸ್ಥಾನದ ಹೊರಬಾಗದಲ್ಲಿ ನಿಲ್ಲಿಸಿದ್ದ ಕಾರಿನ ಎಡಬದಿಯ ಗಾಜು ಒಡೆದು ಲ್ಯಾಪ್ಟಾಪ್ ಅನ್ನು ಕಳವು ಮಾಡಲಾಗಿದೆ. ಉಡುಪಿ ನಿವಾಸಿ ವಸಂತ್ ಅವರು ಕುಟುಂಬ ಸಮೇತ ನವರಾತ್ರಿಯ ಪ್ರಯುಕ್ತ ಉಚ್ಚಿಲ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಾಸು ಕಾರಿನ ಬಳಿ ಬಂದಾಗ ವಿಷಯ ಬೆಳಕಿಗೆ ಬಂದಿದೆ. ದೇವಸ್ಥಾನದ ಬಳಿ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಗಾಜನ್ನು ಒಡೆದು ಖದೀಮರು ಸುಮಾರು 45,000 ಬೆಲೆಬಾಳುವ ಲ್ಯಾಪ್ಟಾಪ್ ಅನ್ನು ಕದ್ದಿದ್ದಾರೆ.ಪೊಲೀಸರಿಗೆ ವಿಷಯ ತಿಳಿಸಿದಾಗ ಲ್ಯಾಪ್ಟಾಪ್ ನ ಸೀರಿಯಲ್ ನಂಬರ್ ಇದ್ದರೆ ಮಾತ್ರ ಕೇಸ್ ಮಾಡಲು ಸಾಧ್ಯ ಎಂದು ತಿಳಿಸಿದ್ದಾರೆ.