Author: main-admin

ಮಂಗಳೂರು: ನೀಟ್ ಹೋರಾಟವನ್ನು ಧಾರ್ಮಿಕವಾಗಿ ಥಳುಕು ಹಾಕಿ, ಅವಹೇಳನಕಾರಿ ಬರಹ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ವಿಟ್ಲ ಠಾಣೆಯಲ್ಲಿ ಓರ್ವನ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ. ಪ್ರಕರಣದ ವಿವರ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಭರತ್ (36) ಎಂಬಾತ KFC KHANDIGA ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ನೀಟ್ ಹೋರಾಟಕ್ಕೆ ಸಂಬಂಧಿಸಿದಂತೆ ಸಮುದಾಯಗಳ ನಡುವೆ ವೈಮನಸ್ಸು ಮೂಡುವಂತೆ ಹಾಗೂ ಸಾರ್ವಜನಿಕರಿಗೆ ಸಾರ್ವಜನಿಕ ನೆಮ್ಮದಿಗೆ ಭಂಗವುಟಾಗುವಂತಹ ಬರಹಗಳ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾನೆ. ಜೊತೆಗೆ ಇದೇ ಬರಹಗಳನ್ನು ತನ್ನ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಾನೆ. ಈ ಹಿನ್ನೆಲೆ ವಿಟ್ಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ಅ.ಕ್ರ: 160/2026 ಕಲಂ: 197(1)(a), 197(1)(c), 353(2) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ಆರೋಪಿತ ಭರತ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Read More

ಪುತ್ತೂರು: ಜುಲೈ 23 ರಂದು ಸೇಡಿಯಾಪು ಬಳಿಯ ಕಾಪು ಬಳಿಸರಕು ಸಾಗಣೆ ವಾಹನವೊಂದು ಪಲ್ಟಿಯಾಗಿ 11 ವರ್ಷದ ಬಾಲಕ ಗಾಯಗೊಂಡಿದ್ದಾನೆ. ಕೊಯಿಲಾದ ಸನ್ಯಾಸಿಗುಡ್ಡೆ ನಿವಾಸಿ ಅಬ್ದುಲ್ ಮಜೀದ್ ಅವರು ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಟಾಟಾ ಏಸ್ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ವಾಹನದ ಚಕ್ರಗಳು ರಸ್ತೆಯಂಚಿಗೆ ಇಳಿದು ಮಗುಚಿ ಬಿತ್ತು ಎಂದು ವರದಿಯಾಗಿದೆ.ವಾಹನದಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ಮಜೀದ್ ಅವರ ಪುತ್ರ ಮೊಹಮ್ಮದ್ ಅಮೀನ್ (11) ಅಪಘಾತದಲ್ಲಿ ಗಾಯಗೊಂಡಿದ್ದಾರೆ.ಸ್ಥಳೀಯರ ಪ್ರಕಾರ, ಸ್ಥಳದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗಳು ಇತ್ತೀಚೆಗೆ ಪೂರ್ಣಗೊಂಡಿವೆ, , ರಸ್ತೆಯಂಚಿಗೆ ಮಣ್ಣು ಹಾಕದ್ದರಿಂದ ಅದು ಆಳವಿದೆ. ಅಲ್ಲದೇ, ಡಿವೈಡರ್ ಕಾಮಗಾರಿಯೂ ಇಲ್ಲಿ ನಡೆಯದಿರುವುದರಿಂದ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತಗಳಾಗುವ ಸಾಧ್ಯತೆ ಇದೆ.ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಳ್ತಂಗಡಿ: ಶಿಬಾಜೆಯಲ್ಲಿರುವ ಮನೆಯೊಂದಕ್ಕೆ ಬಂದು, ಛಾವಣಿಯ ಹೆಂಚುಗಳಿಗೆ ಕಲ್ಲು ಎಸೆದು, ನಿವಾಸಿಗಳನ್ನು ನಿಂದಿಸಿ, ಜೀವ ಬೆದರಿಕೆ ಹಾಕಿ, ಹಣ ದೋಚಿದ್ದಾರೆ ಎಂಬ ಆರೋಪದ ಮೇಲೆ ಧರ್ಮಸ್ಥಳ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬೆಳ್ತಂಗಡಿಯ ಶಿಬಾಜೆ ನಿವಾಸಿ ಎಲಿಯಮ್ಮ ಥಾಮಸ್ (60) ದೂರು ನೀಡಿದ್ದವರು. ಆಕೆಯ ದೂರಿನ ಪ್ರಕಾರ, ಜುಲೈ 10 ರ ರಾತ್ರಿ ಈ ಘಟನೆ ನಡೆದಿದ್ದು, ಆಕೆ ತನ್ನ ಕುಟುಂಬ ಸದಸ್ಯರೊಂದಿಗೆ ತನ್ನ ನಿವಾಸದಲ್ಲಿದ್ದಾಗ. ಮನೋಜ್ ಎನ್.ಕೆ ಮತ್ತು ರಾಜು ಎಂದು ಗುರುತಿಸಲಾದ ಆರೋಪಿಗಳು ಮನೆಯ ಬಳಿ ಬಂದು, ಛಾವಣಿಯ ಹಂಚುಗಳ ಮೇಲೆ ಕಲ್ಲು ತೂರಾಟ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ದೂರುದಾರರ ಮಗನಿಗೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಮನೆಯ ವರಾಂಡಾದಲ್ಲಿ ಇರಿಸಲಾಗಿದ್ದ 2,900 ರೂ. ನಗದನ್ನು ಮನೋಜ್ ತೆಗೆದುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರಿನ ಆಧಾರದ ಮೇಲೆ, ಧರ್ಮಸ್ಥಳ ಪೊಲೀಸ್ ಠಾಣೆಯು ಅಪರಾಧ ಸಂಖ್ಯೆ 50/2026 ರಲ್ಲಿ ಭಾರತೀಯ ನ್ಯಾಯ…

Read More

ಸೂರತ್ : ನೀವು ನಿಮ್ಮ ಮೊಬೈಲ್‌ನಲ್ಲಿ ಬಳಸುತ್ತಿರುವುದು ಅಸಲಿ ಬ್ಯಾಂಕಿಂಗ್ ಆ್ಯಪ್‌ ಗಳೇ? ಒಮ್ಮೆ ತಪಾಸಣೆ ಮಾಡಿಕೊಳ್ಳಿ! ಕೃತಕ ಬುದ್ಧಿಮತ್ತೆ (AI) ಮತ್ತು ಟೆಲಿಗ್ರಾಂ ಬಳಸಿ ಬರೋಬ್ಬರಿ 121 ನಕಲಿ ಬ್ಯಾಂಕಿಂಗ್ ಆ್ಯಪ್‌ ಗಳನ್ನು ತಯಾರಿಸಿ, ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ 17 ವರ್ಷದ ಯುವಕನನ್ನು ಸೂರತ್ ಸೈಬರ್ ಕ್ರೈಮ್ ಪೋಲಿಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದ 11ನೇ ತರಗತಿ ಡ್ರಾಪೌಟ್ ವಿದ್ಯಾರ್ಥಿ ರೋಹಿತ್ ವೀರೇಂದ್ರಸಿಂಗ್ ಶಾಕ್ಯ ಬಂಧಿತ ಆರೋಪಿ. ಈತ ತಯಾರಿಸಿದ ನಕಲಿ ಆ್ಯಪ್‌ ಗಳಿಗೆ ಸಿಲುಕಿ ಇದುವರೆಗೆ 2,928 ಜನರು ಬರೋಬ್ಬರಿ 64.38 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ! ಜಮ್ತಾರಾ ಗ್ಯಾಂಗ್‌ಗೆ ಮಾಸಿಕ ಬಾಡಿಗೆಗೆ ‘ಮಾಲ್‌ವೇರ್’ ಆರೋಪಿ ರೋಹಿತ್, ಸೈಬರ್ ಅಪರಾಧಗಳಿಗೆ ಹೆಸರಾದ ಜಾರ್ಖಂಡ್‌ನ ಜಮ್ತಾರಾ, ಹರಿಯಾಣ ಹಾಗೂ ರಾಜಸ್ಥಾನದ ಸೈಬರ್ ಗ್ಯಾಂಗ್‌ಗಳಿಗೆ ನಕಲಿ APK ಫೈಲ್‌ಗಳನ್ನು ಸರಬರಾಜು ಮಾಡುತ್ತಿದ್ದ. ಆ್ಯಪ್‌ ಗಳ ನಕಲು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಆಕ್ಸಿಸ್…

Read More

ಪುತ್ತೂರು: ಕೌಟುಂಬಿಕ ಕಿರುಕುಳದಿಂದ ಸಾವಿಗೀಡಾಗಿದ್ದಾಳೆ ಎನ್ನಲಾದ ಸುಳ್ಯದ ಸಂಪಾಜೆಯ ಮಹಿಳೆಯ ಅಸಹಜ ಸಾವಿನ ಪ್ರಕರಣದಲ್ಲಿ ಸುಳ್ಯ ಪೊಲೀಸರು ಆಕೆಯ ಮಾವ, ಅತ್ತೆ ಮತ್ತು ನಾದಿನಿಯನ್ನು ಬಂಧನ ಮಾಡಿದ್ದಾರೆ. ಪೊಲೀಸರು ಇದೀಗ ಮಾವ ಸಿಪಿ ಅಳವಿ (54), ಅತ್ತೆ ಆಯಿಷಾ ಸಿಎ ಹಾಗೂ ನಾದಿನಿ ಫಸೀಲಾ ಸಿಎ (29) ಎಂಬುವವರನ್ನು ಬಂಧನ ಮಾಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಫಾತಿಮಾಳನ್ನು ಮದುವೆ ಮಾಡಿಕೊಡಲಾಗಿತ್ತು. ಆದರೆ ಅತ್ತೆ ಮಾವ ಮತ್ತು ನಾದಿನಿ ನಿರಂತರ ಕಿರುಕುಳ ನೀಡಿದ್ದಲ್ಲದೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಮೊನ್ನೆ ಜುಲೈ 18ರಂದು ರಾತ್ರಿ ತನ್ನ ತಾಯಿ ಜೊತೆಗೆ ಫಾತಿಮಾ ಮಾತನಾಡುತ್ತಿದ್ದಾಗಲೇ ಮಾವ ಅಳವಿ ಫೋನ್‌ ಕಿತ್ತುಕೊಂಡು ನಿನ್ನ ಮಗಳನ್ನು ಕೊಂದೇ ತೀರುತ್ತೇನೆಂದು ಹೇಳಿದ್ದರು. ಮರುದಿನ ಬೆಳಗ್ಗೆ ನೋಡಿದರೆ ಫಾತಿಮಾ ಮೃತಪಟ್ಟ ಸ್ಥಿತಿಯಲ್ಲಿದ್ದಳು. ಇದೀಗ ಮೂವರ ಬಂಧನವಾಗಿದ್ದು, ವಿಚಾರಣೆ ನಂತರ ಸಾವಿನ ಕಾರಣ ತಿಳಿಯಲಿದೆ.

Read More

ಉಡುಪಿ: ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು  ಮಾರಾಟ ಮಾಡುತ್ತಿದ್ದ ಅನಿಲಾ ಪಾನ್ ಸ್ಟಾಲ್ ಹೆಸರಿನ ಅಂಗಡಿಗೆ ದಾಳಿ ನಡೆಸಿ 625.83 ಗ್ರಾಂ ಗಾಂಜಾ ಸಹಿತ ಆರೋಪಿ ಅನಿಲ್ ಎಂಬಾತನನ್ನು ಕಾಪು ತಾಲೂಕಿನ ಬಡಾ ಗ್ರಾಮದ ಎರ್ಮಾಳುವಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್. ವಿಜಯಪ್ರಸಾದ್, ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಮಾರ್ಗದರ್ಶನದಂತೆ ಪಡುಬಿದ್ರಿ ಪೊಲೀಸ್ ಠಾಣಾ ಪಿಎಸ್‌ಐ ಸಕ್ತಿವೇಲು ಮತ್ತು ಅನಿಲ್ ಕುಮಾರ್ ಟಿ. ನಾಯಕ್ ನೇತೃತ್ವದಲ್ಲಿ ಎಎಸ್‌ಐ ಗಿರೀಶ್ ಯು.ಆರ್, ಸಿಬ್ಬಂದಿಗಳಾದ ಕೃಷ್ಣಪ್ರಸಾದ್, ಮಿಥುನ್, ಸಂದೇಶ್ ಭಂಡಾರಿ, ರಾಘವೇಂದ್ರ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಉಡುಪಿ ಜಿಲ್ಲಾ ಸೊಕೋ(ಎಸ್‌ಒಸಿಒ) ಅಧಿಕಾರಿಗಳು ಈ ಸಂದರ್ಭ ಮಾದಕ ವಸ್ತುವನ್ನು ಪರೀಕ್ಷಿಸಿ ತನಿಖಾಧಿಕಾರಿಗಳಿಗೆ ಸಹಕರಿಸಿದ್ದರು. ಆರೋಪಿ ಅನಿಲ್‌ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Read More

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ನಡೆದ ಕಳವು ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಜೂನ್ 13ರಂದು ಕೆನರಾ ಬ್ಯಾಂಕ್‌ನ ಮೇಲ್ಪಾವಣಿಯನ್ನು ಕೊರೆದು ಒಳನುಗ್ಗಿದ ದುಷ್ಕರ್ಮಿಗಳು ಬ್ಯಾಂಕ್‌ನಲ್ಲಿದ್ದ ಹಣ ಹಾಗೂ ಚಿನ್ನಾಭರಣ ಕಳವು ಮಾಡಲು ಯತ್ನಿಸಿದ್ದರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ BNS-2023ರ ಕಲಂ 331(3), 331(4), 305(a) ಹಾಗೂ 62ರಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳ ಪೈಕಿ ಬಂಟ್ವಾಳದ ಮಾರಿಪಳ್ಳ ನಿವಾಸಿ ಮೊಹಮ್ಮದ್ ಶಾಖಿರ್ (33) ಎಂಬಾತನನ್ನು ಜುಲೈ 22ರಂದು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಉಡುಪಿ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಕೋಟ ಸಮೀಪದ ಪಡುಕರೆ ಬೀಚ್‌ನಲ್ಲಿ ಪತ್ತೆಯಾಗಿದೆ. ಶಿವಪುರ ಹೆಬ್ರಿ ನಿವಾಸಿ ಗ್ರೇಪ್ತಾ ಕ್ರಾಸ್ತಾ ಅವರ ಮಾವನ ಮಗ ಶಿವಪ್ರಸಾದ್ (27) ಅವರು ಜುಲೈ 20ರಂದು ನಾಪತ್ತೆಯಾಗಿದ್ದರು. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಹಾಗೂ ಕುಟುಂಬಸ್ಥರು ಯುವಕನಿಗಾಗಿ ಹುಡುಕಾಟ ನಡೆಸಿದಾಗ ಶಿವಪ್ರಸಾದ್ ಅವರು ಚಲಾಯಿಸುತ್ತಿದ್ದ ಬೈಕ್ ಬಾರ್ಕೂರು ಸೇತುವೆ ಸಮೀಪ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಲಾಗಿತ್ತು. ಜುಲೈ 22, ಬೆಳಿಗ್ಗೆ ಸುಮಾರು 7.30 ಗಂಟೆಗೆ ಪಡುಕರೆ ಬೀಚ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿತು. ಸ್ಥಳಕ್ಕೆ ಧಾವಿಸಿದ ಸಂಬಂಧಿಕರು ಮೃತದೇಹವನ್ನು ಪರಿಶೀಲಿಸಿದಾಗ, ಅದು ನಾಪತ್ತೆಯಾಗಿದ್ದ ಶಿವಪ್ರಸಾದ್ ಅವರದ್ದೇ ಎಂಬುದು ದೃಢಪಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತದೇಹವನ್ನು ಕೋಟ ಜೀವನ್…

Read More

ಬೆಂಗಳೂರು: ನೀಟ್ (NEET) ಪರೀಕ್ಷೆ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಕಾದಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭಾರಿ ಹೈಡ್ರಾಮಾವೇ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬೆನ್ನಲ್ಲೇ, ಬಿಜೆಪಿ ನಾಯಕರು ಕಂಟೋನ್ಮೆಂಟ್ ಬಳಿ ಇರುವ ಕೆಪಿಸಿಸಿ (KPCC) ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರು ಮುಖಾಮುಖಿಯಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಈ ಪ್ರತಿಭಟನೆಯ ನಡುವೆ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರು ಕೆಪಿಸಿಸಿ ಕಚೇರಿ ಮುಂಭಾಗಕ್ಕೆ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಅವರ ಮೇಲೆ ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದ್ದಾರೆ. ಶಾಸಕರ ವಿರುದ್ಧ ತೀವ್ರವಾಗಿ ಧಿಕ್ಕಾರ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು, ಬಿ.ಪಿ. ಹರೀಶ್ ಅವರನ್ನು ಅಲ್ಲಿಂದ ಕಾಲ್ತೆಗೆಯುವಂತೆ ಮಾಡಿ ವಾಪಸ್ ಕಳುಹಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ತಮ್ಮ ಶಾಸಕರ ಮೇಲಿನ ಮೊಟ್ಟೆ ಎಸೆತ ಹಾಗೂ…

Read More

ಬಂಟ್ವಾಳ: ಫರಂಗಿಪೇಟೆಯ ಬ್ಯಾಂಕ್‌ನಲ್ಲಿ ನಡೆದ ಕಳ್ಳತನ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದ್ದು, ತನಿಖೆ ಚುರುಕುಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಬಂಟ್ವಾಳ ಹೆಚ್ಚುವರಿ ಪೊಲೀಸ್ ಅಧೀಕ್ಷಕರ (ಎಎಸ್‌ಪಿ) ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಆರೋಪಿಗಳ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಜುಲೈ 12ರ ರಾತ್ರಿ ಫರಂಗಿಪೇಟೆಯ ಬ್ಯಾಂಕ್ ಶಾಖೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿತ್ತು. ದುಷ್ಕರ್ಮಿಗಳು ಕಟ್ಟಡದ ಮೇಲ್ಛಾವಣಿಯನ್ನು ಕೊರೆದು ಬ್ಯಾಂಕ್ ಒಳನುಗ್ಗಿದ್ದರು. ಆದರೆ ಬ್ಯಾಂಕ್‌ನ ಲಾಕರ್ ತೆರೆಯಲು ವಿಫಲರಾದ ಅವರು ಯಾವುದೇ ನಗದು ಅಥವಾ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡದೇ ಸ್ಥಳದಿಂದ ಪರಾರಿಯಾಗಿದ್ದರು. ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ನಡೆಸಿರುವ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆಯ ವೇಳೆ ಮಹತ್ವದ ಸುಳಿವು ದೊರೆತ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಪ್ರತ್ಯೇಕ ವಿಶೇಷ ತಂಡವನ್ನು ರಚಿಸಿ ತನಿಖೆ ಮುಂದುವರಿಸಲಾಗಿದೆ. ಘಟನೆ ನಡೆದ ದಿನದ ಮರುದಿನ ಎರಡನೇ ಶನಿವಾರದ ರಜೆ ಹಿನ್ನೆಲೆ ಬ್ಯಾಂಕ್ ಮುಚ್ಚಲಾಗಿತ್ತು. ಹೀಗಾಗಿ ಶನಿವಾರ ರಾತ್ರಿ ಮತ್ತು ಭಾನುವಾರದ ನಡುವಿನ…

Read More