Author: main-admin

ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜದ ಬಾಡಿಗೆ ಮನೆಯೊಂದರಲ್ಲಿ ಎಲೆಕ್ಟ್ರಾನಿಕ್ ಯಂತ್ರಗಳನ್ನು ಬಳಸಿ ನಡೆಯುತ್ತಿದ್ದ ಖೋಟಾ ನೋಟು ದಂಧೆ ಪ್ರಕರಣದಲ್ಲಿ ಬಂಧಿತ ಎಳು ಆರೋಪಿಗಳ ಪೈಕಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ನಾಲ್ವರು ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆದಿದ್ದು, ಉಳಿದ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದಲ್ಲಿ ಬಂಧಿತ ಎಲ್ಲ ಏಳು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದು, ಮಂಗಳವಾರ ಕಸ್ಟಡಿಯ ಅವಧಿ ಮುಗಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಕರಣದ ಪೊಲೀಸ್ ತನಿಖೆ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಕೇಳಿದ್ದರು. ಹೀಗಾಗಿ ನ್ಯಾಯಾಲಯ ನಾಲ್ವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಪುತ್ತೂರು ಬಪ್ಪಳಿಗೆ ನಿವಾಸಿ ಇಬ್ರಾಹಿಂ, ಉತ್ತರ ಕನ್ನಡ ಮೂಲದ ಸಂದೀಪ ಪುಂಡಲೀಕ ಶೋಳಂಬಿ, ಬೆಳ್ತಂಗಡಿ ಉರುವಾಲು ನಿನ್ನಿಕಲ್ಲು ನಿವಾಸಿ ಸಿರಾಜುದ್ದೀನ್, ಬೆಳ್ತಂಗಡಿ ಪುತ್ತಿಲ ನಿವಾಸಿ ಇರ್ಷಾದ್ ಅವರನ್ನು ಜು. 26ರ ವರೆಗೆ ಮತ್ತೆ…

Read More

ಮಂಗಳೂರು: ಮನೆ ದುರಸ್ತಿ ಕಾಮಗಾರಿ ವೇಳೆ ಸುಮಾರು ₹6.37 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ವಾಚ್ ಕಳವು ಮಾಡಿದ ಆರೋಪಿಯನ್ನು ಮಂಗಳೂರು ಗ್ರಾಮಾಂತರ ಪೊಲೀಸರು 24 ಗಂಟೆಯೊಳಗೆ ಬಂಧಿಸಿ, ಕಳವಾಗಿದ್ದ ಸಂಪೂರ್ಣ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಜಹೀರುದ್ದೀನ್ (24), ನಿರಾಜುದ್ದೀನ್ ಅವರ ಪುತ್ರ, ಮೂಲತಃ ಉತ್ತರ ಪ್ರದೇಶದ ಬಲರಾಮ್ಪುರ ಜಿಲ್ಲೆಯ ಮುಜಾಹನಿ, ಗುಮಾರಿ ನಿವಾಸಿಯಾಗಿದ್ದು, ಪ್ರಸ್ತುತ ಮಂಗಳೂರಿನ ಬಂದರು ಪ್ರದೇಶದ ಅಜಿಜುದ್ದೀನ್ ರಸ್ತೆಯಲ್ಲಿ ವಾಸವಾಗಿರುವವನಾಗಿ ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಮಂಗಳೂರು ನಗರದ ಮೇರಿಹಿಲ್ ಬಾಂದೋಟ್ಟು ಪ್ರದೇಶದ ಮನೆಯೊಂದರಲ್ಲಿ ಹಿಂಭಾಗದ ಕೊಠಡಿಯ ಛಾವಣಿ ಬದಲಾವಣೆ ಹಾಗೂ ಹಾಲ್ನಲ್ಲಿ ಫಾಲ್ಸ್ ಸೀಲಿಂಗ್ ಕಾಮಗಾರಿ ನಡೆಯುತ್ತಿತ್ತು. ಈ ಕಾಮಗಾರಿಯನ್ನು ಮೇಸ್ತ್ರಿ ಹಾಗೂ ಸಹಾಯಕ ಕೆಲಸಗಾರರು ನಡೆಸುತ್ತಿದ್ದ ವೇಳೆ ಮನೆಯ ಟೇಬಲ್ ಡ್ರಾಯರ್ನಲ್ಲಿದ್ದ ಸಣ್ಣ ಪರ್ಸ್ನಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಕಡಗ, 17 ಗ್ರಾಂ ತೂಕದ ಚಿನ್ನದ ಸರ, 8 ಗ್ರಾಂ ತೂಕದ ಚಿನ್ನದ ಉಂಗುರ, 4 ಗ್ರಾಂ ತೂಕದ ಮತ್ತೊಂದು ಚಿನ್ನದ ಉಂಗುರ…

Read More

ಮಂಗಳೂರು: ರಾಷ್ಟ್ರೀಯ ಭದ್ರತಾ ದಳ (ಎನ್ ಎಸ್ ಜಿ) ತಂಡವು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದು, ಜುಲೈ 22 ರಿಂದ 25ರವರೆಗೆ ಮಂಗಳೂರಿನ ವಿವಿಧ ಪ್ರದೇಶಗಳಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ನಡೆಸಲಿದೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಕೇವಲ ಭದ್ರತಾ ಸನ್ನದ್ಧತೆಯನ್ನು ಪರೀಕ್ಷಿಸುವ ಉದ್ದೇಶದಿಂದ ನಡೆಸಲಾಗುತ್ತಿದ್ದು, ಕಾರ್ಯಾಚರಣೆಯ ಅವಧಿಯಲ್ಲಿ ಸಾರ್ವಜನಿಕರು ಸಂಚಾರ ನಿಯಂತ್ರಣ ಸೇರಿದಂತೆ ಭದ್ರತಾ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಿ ಅಗತ್ಯ ಸಹಕಾರ ನೀಡುವಂತೆ ಹಾಗೂ ಯಾವುದೇ ವದಂತಿಗಳಿಗೆ ಕಿವಿಗೊಡದೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಬೆಂಗಳೂರು: ರಾಜಧಾನಿಯಲ್ಲಿ ಬೇರೂರುತ್ತಿರುವ ಮಾದಕ ಜಾಲದ ವಿರುದ್ಧ ಸಮರ ಸಾರಿರುವ ನಗರ ಪೊಲೀಸರು ಹಾಗೂ ಸಿಸಿಬಿ (CCB) ಅಧಿಕಾರಿಗಳು ನಡೆಸಿದ ಬೃಹತ್ ಜಂಟಿ ಕಾರ್ಯಾಚರಣೆಯಲ್ಲಿ ಅಂದಾಜು 15.29 ಕೋಟಿ ರೂಪಾಯಿ ಮೌಲ್ಯದ ಬೃಹತ್ ಪ್ರಮಾಣದ ಮಾದಕ ದ್ರವ್ಯಗಳನ್ನು ಜಪ್ತಿ ಮಾಡಲಾಗಿದೆ. ನಗರದ ಬೇರೆ ಬೇರೆ ಠಾಣಾ ವ್ಯಾಪ್ತಿಗಳಲ್ಲಿ ದಾಳಿ ನಡೆಸಿರುವ ವಿಶೇಷ ಪಡೆಗಳು ಒಬ್ಬ ವಿದೇಶಿ ಪ್ರಜೆ, ಹತ್ತು ಮಂದಿ ಹೊರರಾಜ್ಯದವರು ಹಾಗೂ ಆರು ಮಂದಿ ಸ್ಥಳೀಯರು ಸೇರಿದಂತೆ ಒಟ್ಟು 17 ಮಂದಿ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ. ಪ್ರಮುಖ ಬಡಾವಣೆಗಳಲ್ಲಿ ಸಿಸಿಬಿ ಭರ್ಜರಿ ಕಾರ್ಯಾಚರಣೆ ಚಾಮರಾಜಪೇಟೆ, ಕೋರಮಂಗಲ, ವೈಟ್‌ಫೀಲ್ಡ್, ಬಾಣಸವಾಡಿ, ಮಲ್ಲೇಶ್ವರಂ ಹಾಗೂ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ಪ್ರತ್ಯೇಕ ದಾಳಿಗಳು ನಡೆದಿವೆ. ಬಂಧಿತ ಅಂತರರಾಜ್ಯ ಹಾಗೂ ಅಂತಾರಾಷ್ಟ್ರೀಯ ಜಾಲದ ಆರೋಪಿಗಳಿಂದ ಭಾರಿ ಪ್ರಮಾಣದ ಮೈಂಡ್ ಬ್ಲೋಯಿಂಗ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 13 ಕೆಜಿಗೂ ಹೆಚ್ಚು ಎಂಡಿಎಂಎ, 181 ಗ್ರಾಂ ಕೋಕೇನ್, 15 ಗ್ರಾಂ ಹೆರಾಯಿನ್, 59 ಕೆಜಿಗೂ…

Read More

ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ದಿನಕ್ಕೊಂದರಂತೆ ಹೆಚ್ಚಾಗುತ್ತಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಮ್ಯಾಟ್ರಿಮೋನಿ ಆ್ಯಪ್‌ ಮೂಲಕ ಪರಿಚಯವಾದ ಮಹಿಳೆಯೊಬ್ಬಳು ಉದ್ಯಮಿಯೊಬ್ಬರಿಗೆ ಬರೋಬ್ಬರಿ 87 ಲಕ್ಷ ರೂಪಾಯಿಗೂ ಅಧಿಕ ಹಣ ವಂಚಿಸಿರುವ ಜಾಲ ಬೆಳಕಿಗೆ ಬಂದಿದೆ. ಹಂತ ಹಂತವಾಗಿ ಕೋಟಿ ರೂಪಾಯಿಯ ಸಮೀಪದ ಮೊತ್ತವನ್ನು ಕಸಿದು, ಸದ್ಯ ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿರುವ ಆರೋಪಿ ಮಹಿಳೆಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳ್ತಂಗಡಿ ತಾಲೂಕು ನಿವಾಸಿಯಾಗಿರುವ ಉದ್ಯಮಿಯೊಬ್ಬರಿಗೆ 2024ರ ಮೇ ತಿಂಗಳಿನಲ್ಲಿ ಮ್ಯಾಟ್ರಿಮೋನಿ ಆ್ಯಪ್‌ ಒಂದರ ಮೂಲಕ ‘ಅನಿಷಾ ಪಾಲನ್ನ’ (35) ಎಂಬ ಮಹಿಳೆಯ ಪರಿಚಯವಾಗಿತ್ತು. ಆರಂಭದಲ್ಲಿ ಮೊಬೈಲ್ ಕರೆ ಹಾಗೂ ವಾಟ್ಸಾಪ್ ಸಂದೇಶಗಳ ಮೂಲಕ ಉದ್ಯಮಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಆಕೆ, ತನ್ನ ಸಿಹಿ ಮಾತುಗಳಿಂದ ಉದ್ಯಮಿಯ ಸಂಪೂರ್ಣ ನಂಬಿಕೆಯನ್ನು ಗಳಿಸಿಕೊಂಡಿದ್ದಳು ಎಂದು ವಂಚನೆಗೊಳಗಾದ ಉದ್ಯಮಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಉದ್ಯಮಿಯ ವಿಶ್ವಾಸ ಗಳಿಸಿದ ಬಳಿಕ ತನ್ನ ಅಸಲಿ ಆಟ ಆರಂಭಿಸಿದ್ದ ಅನಿಷಾ,…

Read More

ಬೆಳ್ತಂಗಡಿ: ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿ ಬಾಲಕಿ ಗರ್ಭಿಣಿಯಾಗಿರುವ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಉಪ್ಪಿನಂಗಡಿ ನಿವಾಸಿ ಶುಭರಾಜ್ (28) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.ಬೆಳ್ತಂಗಡಿಯ 16 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿರುವ ಶುಭರಾಜ್ ಪುಸಲಾಯಿಸಿ, ಬಲವಂತವಾಗಿ ಅತ್ಯಾಚಾರ ಮಾಡಿ ಬೆದರಿಕೆ ಹಾಕಿದ್ದ ಎಂದು ದೂರಲಾಗಿದೆ. ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಆಕೆಯ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿದಾಗ ಬಾಲಕಿ ಗರ್ಭಿಣಿ ಎಂದು ತಿಳಿದುಬಂದಿದೆ. ಈ ಬಗ್ಗೆ ಬಾಲಕಿಯ ತಾಯಿ ನೀಡಿದ ದೂರಿನ ಜು.18ರಂದು ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸರು ಆರೋಪಿ ಶುಭರಾಜ್ ನನ್ನು ಲಾಯಿಲ ಗ್ರಾಮದ ಪುತ್ರಬೈಲಿನಲ್ಲಿ ಜು.19 ರಂದು ಸಂಜೆ ಬಂಧಿಸಿ ವಿಚಾರಣೆ ನಡೆಸಿ ಜು.20ರಂದು ಮಂಗಳೂರು ಪೋಕ್ಸೋ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ

Read More

ಕೊಲೆಗಡುಕರನ್ನು ಪತ್ತೆಹಚ್ಚಿ ಜೈಲಿಗಟ್ಟುವ ನೈಜ ಜವಾಬ್ದಾರಿಯನ್ನು ಬದಿಗಿಟ್ಟು, ಸಾಮಾಜಿಕ ಜಾಲತಾಣಗಳಲ್ಲಿ ಜನರು ವ್ಯಕ್ತಪಡಿಸುವ ವೈಯಕ್ತಿಕ ಅಭಿಪ್ರಾಯಗಳನ್ನು ಬೆನ್ನಟ್ಟಿ ಎಫ್‌ಐಆರ್ ದಾಖಲಿಸುತ್ತಿರುವುದು ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗಲು ದಾರಿ ಮಾಡಿಕೊಡುತ್ತದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ನಡೆದ ಯುವತಿ ಲಾವಣ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿದ್ದ ಬೆಂಗಳೂರಿನ ಕಾನೂನು ವಿದ್ಯಾರ್ಥಿ ಕಿರಣ್ ಆರಾಧ್ಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ಹೈಗ್ರೌಂಡ್ಸ್ ಹಾಗೂ ಬಂಟ್ವಾಳ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಪೊಲೀಸರ ತನಿಖೆಗೆ ಮಧ್ಯಂತರ ತಡೆ ಆದೇಶ ಹೊರಡಿಸಿದೆ. ಕೋಮು ಬಣ್ಣ ಹಚ್ಚುವ ದುರುದ್ದೇಶದ ವಾದ ವಿಚಾರಣೆ ವೇಳೆ ಅರ್ಜಿದಾರ ಕಿರಣ್ ಪರವಾಗಿ ಸಂಸದ ಹಾಗೂ ನ್ಯಾಯವಾದಿ ತೇಜಸ್ವಿ ಸೂರ್ಯ ಅವರು ವಾದ ಮಂಡಿಸಿದರು.…

Read More

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಇದರ ಆಶ್ರಯದಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ಮೂಲ್ಕಿ ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಸಭಾಭವನದ ಕಾಮಗಾರಿಯ ಕುರಿತು ಹಾಗೂ ಡಿಸೆoಬರ್ ದಿನಾಂಕ 31 ರ ಒಳಗೆ ಸಭಾಭವನವನ್ನು ಸಂಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಕುರಿತು ಸಮಾಲೋಚನಾ ಸಭೆಯು “ಬಂಟರ ಸಂಘ ಮುಂಬೈಯ ಶ್ರೀಮತಿ ರಂಜನಿ ಸುಧಾಕರ್ ಹೆಗ್ಡೆ ಸಭಾಂಗಣ, ಅನೆಕ್ಸ್ ಕಟ್ಟಡ, ಬಂಟರ ಭವನ, ಕುರ್ಲಾ ಮುಂಬೈ ಇಲ್ಲಿ ಜರಗಿತು.ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ವಹಿಸಿದ್ದರು. ಸಭೆಯಲ್ಲಿ ಹಾಜರಿದ್ದ ದಾನಿಗಳು ಹಾಗೂ ಸದಸ್ಯರುಗಳಿಗೆ ಸಭಾಭವನ ನಿರ್ಮಾಣದ ಸಾಕ್ಷ್ಯಚಿತ್ರವನ್ನು ಪ್ರಾಜೆಕ್ಟರ್ ಮೂಲಕ ಪ್ರದರ್ಶಿಸಲಾಯಿತು. ಮತ್ತು ಸಭಾಭವನದ ಬಗ್ಗೆ ದಾನಿಗಳ ಹಾಗೂ ಸದಸ್ಯರುಗಳು ಅನಿಸಿಕೆಗಳನ್ನು ತಿಳಿಸಿದರು.ಸಭೆಯಲ್ಲಿ ದಾನಿಗಳಾದ ತೋನ್ಸೆ ಆನಂದ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ರಾಜೇಶ್ ಎನ್ ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ ದಂಪತಿಗಳು, ಶಶಿಧರ್ ಶೆಟ್ಟಿ ಇನ್ನಂಜೆ, ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಶಂಕರ್ ಶೆಟ್ಟಿ ವಿರಾರ್,…

Read More

ಉಡುಪಿ : ಪರೀಕ್ಷಾ ಸಿದ್ಧತೆಯ ಪ್ರಮುಖ ಸಂಸ್ಥೆಯಾದ ಆಕಾಶ್ ಎಜ್ಯುಕೇಶನಲ್ ಸರ್ವಿಸಸ್ ಲಿಮಿಟೆಡ್ ಉಡುಪಿ ಶಾಖೆಯ 9 ವಿದ್ಯಾರ್ಥಿಗಳು ನೀಟ್ ಯುಜಿ 2026 ರ ಪರೀಕ್ಷೆಯಲ್ಲಿ ಉನ್ನತ ರ‍್ಯಾಂಕ್‌ಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಹಾಗೂ ಸಂಸ್ಥೆಯ ಶೈಕ್ಷಣಿಕ ಮಾರ್ಗದರ್ಶನ ಈ ಯಶಸ್ಸಿಗೆ ಕಾರಣವಾಗಿದೆ. ಉಡುಪಿ ಶಾಖೆಯಲ್ಲಿ ಸಮನ್ವಿ ಮಯ್ಯ (AIR 3525) ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಉಳಿದಂತೆ ಪಂಚಮಿ ಎಂ.ಎಸ್. (AIR 17331), ಮಹಮ್ಮದ್ ತಾಲ್ಹಾ (AIR 26479), ನರೇಂದ್ರ ಎಸ್. ಪ್ರಭು (AIR 50906), ದೇವ್ ಶರ್ಮಾ (AIR 57000), ಗ್ರಾಜಿಯಾ ಮಾರಿಯಾ ಬೆನ್ಸನ್ (AIR 60815), ದಿವ್ಯಂ ಹಿತೇಶ್ ಶಾಹ (AIR 72158), ಅನ್ವೇಷಾ ಜಿ. ಪಾಟೀಲ್ (AIR 88326) ಮತ್ತು ಆಯಿಷಾ ಫತೇಅಲಿ ಉಪ್ಪಿನ್ (AIR 89069) ಉನ್ನತ ಸ್ಥಾನ ಗಳಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಆಕಾಶ್ ಸಂಸ್ಥೆಯ 4 ವಿದ್ಯಾರ್ಥಿಗಳು ಟಾಪ್ 10 ರಲ್ಲಿ ಸ್ಥಾನ ಪಡೆದಿದ್ದಾರೆ.ತಮ್ಮ ಯಶಸ್ಸಿಗೆ ಆಕಾಶ್ ಸಂಸ್ಥೆಯ ನಿಯಮಿತ ಮಾಕ್…

Read More

ಮಂಗಳೂರು: ರಾತ್ರಿ ಮಲಗಿದ್ದ ತಮ್ಮನ ತಲೆಗೆ ಕಲ್ಲು ಎತ್ತಿಹಾಕಿ ಅಣ್ಣನೇ ಕೊಲೆಗೈದಿರುವ ಘಟನೆ ಚೊಕ್ಕಬೆಟ್ಟು ಮಠದ ಬಳಿ ರವಿವಾರ ತಡರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ. ಕೊಲೆಯಾದ ವ್ಯಕ್ತಿಯನ್ನು ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತೆಗ್ಯಾಳು ಗ್ರಾಮದ ನಿವಾಸಿ ಹಾಗೂ ಸದ್ಯ ಚೊಕ್ಕಬೆಟ್ಟು ಮಠದ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಲ್ಲಿಕಾರ್ಜುನ (20) ಎಂದು ಗುರುತಿಸಲಾಗಿದೆ. ಈತನ ಅಣ್ಣ ಸೋಮನಾಥ್ (21) ಕೊಲೆಗೈದ ಆರೋಪಿ ಎನ್ನಲಾಗಿದ್ದು ಆತನನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಲಗಿದ್ದಲ್ಲೇ ತಲೆಗೆ ಕಲ್ಲು ಎತ್ತಿಹಾಕಿದ ಸ್ಥಿತಿಯಲ್ಲಿ ಮಲ್ಲಿಕಾರ್ಜುನನ ಮೃತದೇಹ ಪತ್ತೆಯಾಗಿದೆ. ತಾಯಿಯೊಂದಿಗೆ ಇಬ್ಬರು ಸಹೋದರರು ವಾಸವಾಗಿದ್ದರು. ತಾಯಿ ಇತ್ತೀಚೆಗೆ ಕೊಪ್ಪಳಕ್ಕೆ ಹೋಗಿದ್ದರು. ಘಟನೆ ನಡೆದ ರಾತ್ರಿ ಸಹೋದರರಿಬ್ಬರು ಮನೆಯಲ್ಲಿ ಮಲಗಿದ್ದರು ಎನ್ನಲಾಗಿದೆ. ಆದರೆ ಬೆಳಗ್ಗೆ ನಿದ್ದೆಯಿಂದ ಎದ್ದ ಸೋಮನಾಥ್, “ನನ್ನ ತಮ್ಮಮಲಗಿದ್ದಲ್ಲಿಂದ ಏಳುತ್ತಿಲ್ಲ” ಎಂದು ನೆರೆಮನೆಯವರಿಗೆ ತಿಳಿಸಿದ್ದಾನೆ. ನೆರೆಮನೆಯವರು ಮನೆಯ ಮಾಲಕಿ ರೇಖಾ ಅವರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ಪಡೆದ…

Read More