Author: main-admin

ಮಂಗಳೂರು : ಪೊಕ್ಸೊ , ಜಾತಿನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವನ ಮೇಲೆ ನೀಡಿರುವ ಸುಳ್ಳು ಕೇಸ್‌ಗೆ ಸಂಬಂಧಿಸಿದಂತೆ ಸಂತ್ರಸ್ತೆ ಹಾಗೂ ಆಕೆಯ ಕುಟುಂಬಕ್ಕೆ ನೀಡಿರುವ 2.50ಲಕ್ಷ ಪರಿಹಾರದ ಹಣವನ್ನು ವಾಪಸ್ ಪಡೆದುಕೊಳ್ಳುವಂತೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ ಪೊಕ್ಸೊ ವಿಶೇಷ ನ್ಯಾಯಾಲಯ ದ.ಕ.ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದೆ. ಬಂಟ್ವಾಳ ತಾಲೂಕಿನ ಕಾವಳಪಡವಲೂರು ನಿವಾಸಿ ತೇಜಸ್ ಎಂಬ ಯುವಕ 2024 ಮಾರ್ಚ್ 21ರಂದು ಸಂಜೆ 6.45ಕ್ಕೆ ಸಂತ್ರಸ್ತೆಯ ಮನೆಗೆ ಬಂದು ಲೈಂಗಿಕ ದೌರ್ಜನ್ಯ ನೀಡಿದ್ದಾನೆ.‌ ಈ ವೇಳೆ ಆಕೆ ತನ್ನ ಮಾವನನನ್ನು ಕರೆದಿದ್ದಾಳೆ. ಅಲ್ಲಿಗೆ ಬಂದ ಮಾವನಿಗೂ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದನು. ಈ ವೇಳೆ ಅಲ್ಲಿಗೆ ಬಂದ ಸಂತ್ರಸ್ತೆಯ ಅಜ್ಜಿಗೂ ಜಾತಿನಿಂದನೆ ಮಾಡಿದ್ದಲ್ಲದೆ ತಳ್ಳಿ ಕೊಲೆಬೆದರಿಕೆಯೊಡ್ಡಿದ್ದ ಎಂದು ದೂರು ದಾಖಲಾಗಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳೂರಿನ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿನಯ್ ದೇವರಾಜ್ ಸಮಗ್ರ…

Read More

ಮಂಗಳೂರು: ಮದುವೆ ನಿಶ್ಚಿಯವಾಗಿ ಇನ್ನೇನು ಮದುವೆಗೆ ಕೆಲ ದಿನ ಇರುವಾಗಲೇ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ. 24 ರಂದು ಮೀಂಜ ಸಮೀಪದ ಬೆಜ್ಜದಲ್ಲಿ ನಡೆದಿದೆ. ಅಜಿತ್ ಕುಮಾರ್ (28) ಆತ್ಮಹತ್ಯೆಗೆ ಶರಣಾದ ಯುವಕ.ಅಜಿತ್ ಕುಮಾರ್ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ನ ಉಪ್ಪಳ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.ಇವರಿಗೆ ಹೊಸಂಗಡಿ ಸಮೀಪದ ಯುವತಿ ಜೊತೆ ಫೆಬ್ರವರಿ ಎರಡರಂದು ವಿವಾಹ ನಿಗದಿಯಾಗಿತ್ತು. ಅದಕ್ಕಾಗಿ ಮನೆಯವರು ವಿವಾಹಕ್ಕೆ ತಯಾರಿಗಾಗಿ ಸಾಮಾಗ್ರಿಗಳನ್ನು ಖರೀದಿಸಲು ಪೇಟೆಗೆ ತೆರಳಿದ್ದರು. ಮನೆಯಲ್ಲಿ ಚಿಕ್ಕಪ್ಪ ಮಾತ್ರ ಇದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೃತ್ಯ ಎಸಗಲಾಗಿದೆ. ಸಂಜೆ ಅಜಿತ್ ಮನೆ ಮುಂಭಾಗದ ಮಾವಿನ ಮರದಲ್ಲಿ ಕೇಬಲ್ ವಯರ್ ನಲ್ಲಿ ನೇಣು ಬಿಗಿದಿರುವುದನ್ನು ಮನೆಯವರು ಗಮನಿಸಿದ್ದು, ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮೃತಪಟ್ಟಿದ್ದರು. ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More

ಉಡುಪಿ : ಅಪರಿಚಿತನೋರ್ವ ಐದು ವರ್ಷದ ಮಗುವನ್ನು ಪುಸಲಾಯಿಸಿ ನಿರ್ಜನ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ನೀಡಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ನಗರ ಪೂರ್ಣಪ್ರಜ್ಞ ಆಡಿಟೋರಿಯಂ ಎದುರಿನ ಓಣಿಯಲ್ಲಿ ನಿನ್ನೆ ಮಧ್ಯಾಹ್ನ ನಾಲ್ಕು ಗಂಟೆಗೆ ಸುಮಾರು ಮೂವತ್ತು ವರ್ಷದ ಅಪರಿಚಿತ ಐದು ವರ್ಷದ ಹೆಣ್ಣು ಮಗುವಿಗೆ ಚಾಕಲೇಟ್ ನೀಡಿ ಅಲ್ಲೇ ಹತ್ತಿರದ ಪೊದೆಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಲು ಯತ್ನಿಸಿದ್ದ ಎನ್ನಲಾಗಿದೆ. ದೂರದಲ್ಲಿ ನೋಡಿದ ಸ್ಥಳೀಯರು ಆತನನ್ನು ಬೆನ್ನಟ್ಟಿದರು. ತಕ್ಷಣ ಅಪರಿಚಿತ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಮಗುವಿನ ಫೋಷಕರು ದೂರು ದಾಖಲಿಸಿದ್ದಾರೆ.

Read More

ಮಂಗಳೂರು: ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿರುವ ಪ್ರಕರಣದ ರಾಮಸೇನಾ ಸಂಘಟನೆಯ 13 ಮಂದಿ ಕಾರ್ಯಕರ್ತರು ಹಾಗೂ ಓರ್ವ ಟಿವಿ ಕ್ಯಾಮರಾಮ್ಯಾನ್‌ಗೆ ಮಂಗಳೂರು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ರಾಮಸೇನಾ ಸಂಘಟನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ ಸೇರಿದಂತೆ 14‌ ಮಂದಿಯನ್ನು ಬರ್ಕೆ ಪೊಲೀಸರು ಮಂಗಳೂರು ಜೆಎಂಎಫ್‌ಸಿ 6ನೇ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ‌. ನ್ಯಾಯಾಲಯವು ಫೆ.7ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಗುರುವಾರ ಬೆಳಗ್ಗೆ ಸುಮಾರು 11:50ರ ಸುಮಾರಿಗೆ 11ಮಂದಿಯ ತಂಡ ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜೈ ಕೆಎಸ್‌ಆರ್‌ಟಿಸಿ ಬಳಿಯ ಆದಿತ್ಯ ಕಾಂಪ್ಲೆಕ್ಸ್‌ನಲ್ಲಿರುವ “ಕಲರ್ಸ್” ಎಂಬ ಯೂನಿಸೆಕ್ಸ್ ಮಸಾಜ್ ಪಾರ್ಲರ್‌ಗೆ ನುಗ್ಗಿ ದಾಂಧಲೆ ನಡೆಸಿತ್ತು. ಮಸಾಜ್ ಪಾರ್ಲರ್‌ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎಂದು ಆರೋಪಿಸಿ ಮಹಿಳಾ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿದ್ದರು. ಅಷ್ಟು ಮಾತ್ರವಲ್ಲದೆ, ಪಾರ್ಲರ್ ಉಪಕರಣಗಳನ್ನು ಧ್ವಂಸಗೊಳಿಸಿ, ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ್ದರು. ಆದ್ದರಿಂದ ಪಾರ್ಲರ್ ಮಾಲಕ ನೀಡಿದ ದೂರಿನ ಆಧಾರದ ಮೇಲೆ,…

Read More

ಮಂಗಳೂರು ಕೋಟೆಕಾರು ಸಹಕಾರಿ ಬ್ಯಾಂಕ್ ನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲ್ಲೈ ಮೂಲದ ಮೂವರನ್ನು ಬಂಧಿಸಲಾಗಿದ್ದು, ಅವರಿಂದ 15 ಕೆಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನಕ್ಕೆ 6ಕ್ಕೂ ಹೆಚ್ಚು ವಿಶೇಷ ತಂಡಗಳನ್ನು ರಚಿಸಿ ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಇನ್ಸ್ ಪೆಕ್ಟರ್ ರಾಜೇಂದ್ರನ್ ನೇತೃತ್ವದ ಪೊಲೀಸರ ತಂಡ ನೆಲ್ಲೈಗೆ ಆಗಮಿಸಿದ್ದರು. ಮುರುಗಂಡಿ ಅವರ ಮನೆಯಲ್ಲಿ ಬಚ್ಚಿಟ್ಟಿದ್ದ ಸುಮಾರು 15 ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮುರುಗಂಡಿ ಅವರ 65 ವರ್ಷದ ತಂದೆ ಷಣ್ಮುಗ ಸುಂದರಂ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರೂ ನೆಲ್ಲೈ ಜಿಲ್ಲೆಯವರಾಗಿದ್ದು, ಹಲವು ವರ್ಷಗಳಿಂದ ಅವರು ಮುಂಬೈನಲ್ಲಿ ನೆಲೆಸಿದ್ದರು. ವಿಶೇಷ ಪೊಲೀಸರು ಮೊದಲು ಮುಂಬೈನಲ್ಲಿ ಕಣ್ಣನ್ ಮಣಿಯನ್ನು ಬಂಧಿಸಿದರು. ಆತ ನೀಡಿದ ಮಾಹಿತಿ ಮೇರೆಗೆ ನೆಲ್ಲೈಯಲ್ಲಿ ತಲೆಮರೆಸಿಕೊಂಡಿದ್ದ ಮುರುಗಂಡಿ ಹಾಗೂ ಜೋಶುವಾ ಇಬ್ಬರನ್ನೂ ಬಂಧಿಸಿದ್ದಾರೆ.

Read More

ಮಂಗಳೂರು : ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲಸ್೯ ಮಂಗಳೂರಿನ ಗ್ರಾಹಕರಿಗಾಗಿ ನಾಲ್ಕುದಿನಗಳ ವಿಶೇಷ ಆಭರಣಗಳ ಪ್ರದರ್ಶನ ಮತ್ತು ಮಾರಾಟವನ್ನು ಆಕರ್ಷಕ ಆಭರಣಗಳನ್ನು ಪ್ರದರ್ಶಿಸಲಿದೆ. ಜ.24 ರಿಂದ 27 ರವರೆಗೆ ಮಂಗಳೂರಿನ ಗೋಲ್ಡ್ಫಿಂಚ್ ಹೊಟೇಲ್‌ನಲ್ಲಿ ವಿಶೇಷ ಆಭರಣ ಪ್ರದರ್ಶನಕ್ಕೆ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ಅವರು ಈ ಆಭರಣ ಪ್ರದರ್ಶನ ಮೇಳಕ್ಕೆ ಚಾಲನೆ ನೀಡಿದರು. ಶುದ್ಧ ಚಿನ್ನ ಮತ್ತು ರತ್ನಗಳು ಹಾಗೂ ಅತ್ಯುತ್ತಮವಾದ ಕರಕುಶಲತೆಯೊಂದಿಗೆ ಸಾಂಪ್ರದಾಯಿಕ ಮತ್ತು ಸಮಕಾಲೀನ ಸೃಷ್ಟಿಗಳ ಸಂಗ್ರಹವನ್ನು ವಿಶಿಷ್ಟ ಶ್ರೇಣಿಯೊಂದಿಗೆ ಪ್ರದರ್ಶಿಸಲಿದೆ. ಸಿ.ಕೃಷ್ಣಯ್ಯಚೆಟ್ಟಿ ಜ್ಯುವೆಲರ್ಸ್ನಲ್ಲಿ ವೈಡೂರ್ಯ, ಸಿಟ್ರಿನ್, ಮುತ್ತುಗಳು, ನೀಲ, ಮಾಣಿಕ್ಯಗಳಂತಹ ಅಪರೂಪದ ವಜ್ರಗಳ ಸೂಕ್ಷ್ಮ ವಿನ್ಯಾಸಗಳೊಂದಿಗೆ ಸೊಬಗು ಮತ್ತು ಕ್ಲಾಸಿಕ್ಶೈಲಿಯ ಸಮ್ಮಿಲನವಾಗಿವೆ. crash.club ನ ನಮ್ಮ ಲ್ಯಾಬ್ ಗ್ರೋನ್ ಡೈಮಂಡ್ಸ್ ಭಾಗದಲ್ಲಿ ಒಂದು ಸೊಗಸಾದ ಸ್ವರೂಪ ಹೊಂದಿದ್ದು, ಕಾಸ್ಮಿಕ್ಮತ್ತು ಸೊಗಸಾದ ಕರಕುಶಲತೆಯ ಸಮ್ಮಿಳನವಿದೆ. ಸಿಕೆಸಿಯ crash.club, ಬೆಳ್ಳಿ ಆಭರಣ ಬ್ರಾಂಡ್ ಕೃಷ್ಣ ಉದಯ ಆಗಿದ್ದು, 6 ನೇ ತಲೆಮಾರಿನ ಚೈತನ್ಯವಿ ಕೋಥಾ,ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್…

Read More

ಪಡುಬಿದ್ರಿ : ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಸುಮಾರು 27 ಕೆಜಿ 970 ಗ್ರಾಂ 120 ಮಿಲಿ ಗ್ರಾಂ ತೂಕದ ಅಂದಾಜು 16.62,804 ರೂ. ಬೆಲೆಯ ಗಾಂಜಾವನ್ನು ನಾಶಪಡಿಸಲಾಯಿತು. ಪಡುಬಿದ್ರಿ ಠಾಣಾ ಸರಹದ್ದಿನ ಮೆ. ಆಯುಷ್ ಎನ್‌ವಿರೋಟೆಕ್ ಪ್ರೈ. ಲಿ., ಪಡುಬಿದ್ರಿ ಎಂಬಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಡ್ರಗ್ ಡಿಸ್‌ ಪೋಸಲ್ ಕಮಿಟಿಯ ಅಧ್ಯಕ್ಷರಾದ ಡಾ. ಅರುಣ್ ಕೆ., ಜಿಲ್ಲಾ ಡ್ರಗ್ ಡಿಸ್‌ಪೋಸಲ್ ಕಮಿಟಿ ಸದಸ್ಯರು ಹಾಗೂ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ. ಮತ್ತು ಅರವಿಂದ ಕಲಗುಜ್ಜಿ ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಮಂಗಳೂರು: ನಗರದ ಬಿಜೈನಲ್ಲಿರುವ ಮಸಾಜ್ ಪಾರ್ಲರ್‌ಗೆ ದಾಳಿಗೆ ಸಂಬಂಧಿಸಿದಂತೆ ಸ್ಥಳೀಯ ಚಾನೆಲ್ ಕ್ಯಾಮರಾಮ್ಯಾನ್ ಸಹಿತ 14ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕ್ಯಾಮರಮ್ಯಾನ್ ಶರಣ್ ರಾಜ್, ರಾಮಸೇನೆ ಸ್ಥಾಪಕ ಪ್ರಸಾದ್ ಅತ್ತಾವರ್, ರಾಮಸೇನೆಯ ಕಾರ್ಯಕರ್ತರಾದ ಫರಂಗಿಪೇಟೆಯ ಹರ್ಷರಾಜ್, ವಾಮಂಜೂರಿನ ಮೋಹನ್‌ದಾಸ್, ಕಾಸರಗೋಡಿನ ಪುರಂದರ, ವಾಮಂಜೂರಿನ ಸಚಿನ್, ರವೀಶ್, ಅಂಕಿತ್, ಬೆಂಜನಪದವಿನ ಸುಕೇತ್, ಮೂಡುಶೆಡ್ಡೆಯ ಕಾಳಿಮುತ್ತು, ಬೊಂಡಂತಿಲದ ಅಭಿಲಾಷ್, ವಾಮಂಜೂರಿನ ದೀಪಕ್, ನೀರುಮಾರ್ಗದ ವಿಘ್ನೇಶ್, ವಾಮಂಜೂರಿನ ಪ್ರದೀಪ್ ಪೂಜಾರಿ ಬಂಧಿತ ಆರೋಪಿಗಳು ಇಂದು ಬೆಳಗ್ಗೆ ಸುಮಾರು 11:50ಕ್ಕೆ, 11ಮಂದಿಯ ತಂಡ ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜೈ ಕೆಎಸ್‌ಆರ್‌ಟಿಸಿ ಬಳಿಯ ಆದಿತ್ಯ ಕಾಂಪ್ಲೆಕ್ಸ್‌ನಲ್ಲಿರುವ “ಕಲರ್ಸ್” ಎಂಬ ಯೂನಿಸೆಕ್ಸ್ ಸಲೂನ್‌ಗೆ ನುಗ್ಗಿ ದಾಂದಲೆ ನಡೆಸಿತ್ತು. ಸೆಲೂನ್ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ವ್ಯಕ್ತಿಗಳು ಆರೋಪಿಸಿ ಮಹಿಳಾ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿದ್ದರು. ಅಷ್ಟು ಮಾತ್ರವಲ್ಲದೆ ಸೆಲೂನ್ ಉಪಕರಣಗಳನ್ನು ಧ್ವಂಸಗೊಳಿಸಿ, ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ್ದರು. ಆದ್ದರಿಂದ ಸೆಲೂನ್ ಮಾಲಕ ನೀಡಿದ ದೂರಿನ ಆಧಾರದ…

Read More

ಹೈದರಾಬಾದ್‌: ಪತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು ಆಕೆಯ ದೇಹವನ್ನು ಕತ್ತರಿಸಿ ಪೀಸ್ ಪೀಸ್ ಮಾಡಿ ಕುಕ್ಕ‌ರ್ ನಲ್ಲಿ ಬೇಯಿಸಿದ ಘಟನೆ ಹೈದರಾಬಾದ್ ನ ಮೀ‌ರ್ ಪೇಟೆಯಲ್ಲಿ ನಡೆದಿದೆ.ಕೊಲೆಯಾದ ಮಹಿಳೆಯನ್ನು ವೆಂಕಟ ಮಾಧವಿ(35) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ನಿವೃತ್ತ ಯೋಧ ಗುರುಮೂರ್ತಿ ಕೊಲೆ ಮಾಡಿದ ಆರೋಪಿ. ಗುರುಮೂರ್ತಿ ಹಾಗೂ ಮಾಧವಿ ಹದಿಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು ದಂಪತಿಗೆ ಇಬ್ಬರು ಮಕ್ಕಳು, ಇತ್ತೀಚಿಗೆ ಕೆಲ ವರ್ಷದ ಹಿಂದೆ ಕುಟುಂಬ ಜಿಲ್ಲಾಲಗುಡ ನ್ಯೂ ವೆಂಕಟೇಶ್ವರ ಕಾಲನಿಯಲ್ಲಿ ಬಾಡಿಗೆ ಮಾಡಿಕೊಂಡು ವಾಸವಾಗಿದ್ದಾರೆಗುರುಮೂರ್ತಿ, ಮಾಜಿ ಸೈನಿಕ, ಪ್ರಸ್ತುತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಉದ್ಯೋಗಿಯಾಗಿದ್ದಾರೆ.

Read More

ಮಂಗಳೂರು: ವಿಟ್ಲ ಬೋಳಂತೂರು ಉದ್ಯಮಿಯ ಮನೆಗೆ ನಕಲಿ ಇಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಪ್ರಕರಣವನ್ನು ಭೇದಿಸಿದ ದ.ಕ.ಜಿಲ್ಲಾ ಪೊಲೀಸರು ಅಂತಾರಾಜ್ಯ ದರೋಡೆಕೋರನನ್ನು ಬಂಧಿಸಿ, ಕಾರು, ನಗದು ವಶಪಡಿಸಿಕೊಂಡಿದ್ದಾರೆ. ಕೇರಳದ ಕೊಲ್ಲಂ ನಿವಾಸಿ ಅನಿಲ್‌ ಫರ್ನಾಂಡಿಸ್ (49) ಬಂಧಿತ ಆರೋಪಿ. ಜನವರಿ 3ರ ರಾತ್ರಿ ಬಂಟ್ವಾಳ ತಾಲೂಕಿನ ವಿಟ್ಲದ ಬೋಳಂತೂರು ನಾರ್ಶ ಎಂಬಲ್ಲಿನ ಸಿಂಗಾರಿ ಬೀಡಿ ಉದ್ದಿಮೆಯ ಮಾಲಕರ ಮನೆಗೆ ನಕಲಿ ಇಡಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆದಿತ್ತು. ಆರು ಮಂದಿಯಿಂದ ಕೃತ್ಯ ನಡೆದಿತ್ತು. ಮನೆಯಲ್ಲಿ ಶೋಧ ನಡೆಸಿದ ದರೋಡೆಕೋರ ದಂಡು 30 ಲಕ್ಷ ರೂಪಾಯಿ ನಗದು ದರೋಡೆಗೈದು ಪರಾರಿಯಾಗಿತ್ತು. ಸದ್ಯ ಪೊಲೀಸರು ಅನಿಲ್‌ ಫರ್ನಾಂಡಿಸ್‌‌ನನ್ನು ಬಂಧಿಸಿ, ಬಂಧಿತನಿಂದ ಕೃತ್ಯಕ್ಕೆ ಉಪಯೋಗಿಸಿದ ಎರ್ಟಿಗಾ ಕಾರು, 5 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಾಹನ ಹಾಗೂ ಸೊತ್ತಿನ ಮೌಲ್ಯ 11ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಕೃತ್ಯಕ್ಕೆ ಬಳಸಿದ ಕಾರಿಗೆ ಅಳವಡಿಸಿದ್ದ ನಕಲಿ TN-20-DB-5517 ನಂಬರ್ ಪ್ಲೇಟ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೃತ್ಯ ಎಸಗಿ ತಲೆಮರೆಸಿಕೊಂಡಿರುವ…

Read More