Facebook Twitter Instagram
    Thursday, September 10
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು : ಯುವಕನ ಮೇಲೆ ಸುಳ್ಳು ಕೇಸ್ – ಸಂತ್ರಸ್ತೆ, ಕುಟುಂಬಕ್ಕೆ ನೀಡಿದ ಪರಿಹಾರ ವಾಪಸ್ ಪಡೆಯಲು ಕೋರ್ಟ್ ಆದೇಶ
    ಇತ್ತೀಚಿನ ಸುದ್ದಿ

    ಮಂಗಳೂರು : ಯುವಕನ ಮೇಲೆ ಸುಳ್ಳು ಕೇಸ್ – ಸಂತ್ರಸ್ತೆ, ಕುಟುಂಬಕ್ಕೆ ನೀಡಿದ ಪರಿಹಾರ ವಾಪಸ್ ಪಡೆಯಲು ಕೋರ್ಟ್ ಆದೇಶ

    January 25, 2025
    Share

    ಮಂಗಳೂರು : ಪೊಕ್ಸೊ , ಜಾತಿನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವನ ಮೇಲೆ ನೀಡಿರುವ ಸುಳ್ಳು ಕೇಸ್‌ಗೆ ಸಂಬಂಧಿಸಿದಂತೆ ಸಂತ್ರಸ್ತೆ ಹಾಗೂ ಆಕೆಯ ಕುಟುಂಬಕ್ಕೆ ನೀಡಿರುವ 2.50ಲಕ್ಷ ಪರಿಹಾರದ ಹಣವನ್ನು ವಾಪಸ್ ಪಡೆದುಕೊಳ್ಳುವಂತೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ ಪೊಕ್ಸೊ ವಿಶೇಷ ನ್ಯಾಯಾಲಯ ದ.ಕ.ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದೆ.

    ಬಂಟ್ವಾಳ ತಾಲೂಕಿನ ಕಾವಳಪಡವಲೂರು ನಿವಾಸಿ ತೇಜಸ್ ಎಂಬ ಯುವಕ 2024 ಮಾರ್ಚ್ 21ರಂದು ಸಂಜೆ 6.45ಕ್ಕೆ ಸಂತ್ರಸ್ತೆಯ ಮನೆಗೆ ಬಂದು ಲೈಂಗಿಕ ದೌರ್ಜನ್ಯ ನೀಡಿದ್ದಾನೆ.‌ ಈ ವೇಳೆ ಆಕೆ ತನ್ನ ಮಾವನನನ್ನು ಕರೆದಿದ್ದಾಳೆ. ಅಲ್ಲಿಗೆ ಬಂದ ಮಾವನಿಗೂ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದನು. ಈ ವೇಳೆ ಅಲ್ಲಿಗೆ ಬಂದ ಸಂತ್ರಸ್ತೆಯ ಅಜ್ಜಿಗೂ ಜಾತಿನಿಂದನೆ ಮಾಡಿದ್ದಲ್ಲದೆ ತಳ್ಳಿ ಕೊಲೆಬೆದರಿಕೆಯೊಡ್ಡಿದ್ದ ಎಂದು ದೂರು ದಾಖಲಾಗಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಮಂಗಳೂರಿನ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿನಯ್ ದೇವರಾಜ್ ಸಮಗ್ರ ವಿಚಾರಣೆ ನಡೆಸಿ ಸಂತ್ರಸ್ತ ಯುವತಿ, ಆಕೆಯ ಮಾವ, ಮನೆಯವರು, ಸಾಕ್ಷಿದಾರರ ಹೇಳಿಕೆ ದಾಖಲಿಸಿಕೊಂಡಿದ್ದರು. ಈ ವೇಳೆ ಸಂತ್ರಸ್ತೆಯ ಮನೆವರು ಸುಳ್ಳು ಕೇಸ್ ದಾಖಲಿಸಿದ್ದು ತಿಳಿದು ಬಂದಿದೆ. ಸಂತ್ರಸ್ತೆಯ ತಾಯಿ ಯುವಕನಿಂದ ಕೈಸಾಲ ಹಾಗೂ ಚಿನ್ನಾಭರಣ ಸೇರಿದಂತೆ 5.50ಲಕ್ಷ ಸಾಲ ಪಡೆದಿದ್ದರು.

    ಇದನ್ನು ಯುವಕ ಮರಳಿ ಕೇಳುತ್ತಿದ್ದ. ಇದೇ ವಿಚಾರದಲ್ಲಿ ಯುವಕ ಹಾಗೂ ಸಂತ್ರಸ್ತೆಯ ಮನೆಯವರಲ್ಲಿ ವಾಗ್ವಾದ ನಡೆದಿತ್ತು. ಆದ್ದರಿಂದ ಯುವಕನ ಮೇಲೆ ಪೊಕ್ಸೊ ಹಾಗೂ ಜಾತಿನಿಂದನೆ ಕೇಸ್ ದಾಖಲಿಸಿದ್ದಾರೆ. ಕೇಸು ದಾಖಲಾದ ಬಳಿಕ ಸಂತ್ರಸ್ತೆ ಹಾಗೂ ಆಕೆಯ ಮನೆಯವರಿಗೆ 2.50ಲಕ್ಷ ಪರಿಹಾರ ರೂಪವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಹಣ ದೊರಕಿತ್ತು. ಬಳಿಕ ಮನೆಯವರು ಬಾಲಕಿಯ ತಾಯಿ ಯುವಕನಿಂದ ಹಣ, ಚಿನ್ನಾಭರಣಸಾಲ ಪಡೆದಿದ್ದಾಗಿ ಒಪ್ಪಿಕೊಂಡಿದ್ದಾರೆ. ನ್ಯಾಯಾಲಯ ಮತ್ತಷ್ಟು ವಿಚಾರಣೆ ನಡೆಸಿದಾಗ ಯುವಕನ ಮೇಲೆ ಸುಳ್ಳು ಕೇಸ್ ದಾಖಲಿಸಿದ ಬಗ್ಗೆ ತಿಳಿದು ಬಂದಿದೆ.

    Post Views: 264

    Related Posts

    ಮಂಗಳೂರು: ಲೇಡಿಗೋಷನ್ ಆಸ್ಪತ್ರೆಗೆ ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಲ ಶುದ್ದೀಕರಣ ಉಪಕರಣ ಕೊಡುಗೆ

    September 10, 2026

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ರೂಂ ಬುಕ್ಕಿಂಗ್ ಹೆಸರಿನಲ್ಲಿ ವಂಚನೆ: ನಕಲಿ ವೆಬ್‌ಸೈಟ್ ವಿರುದ್ಧ ಪ್ರಕರಣ ದಾಖಲು

    September 10, 2026

    ಮುಲ್ಕಿ: ಕಿಲ್ಪಾಡಿ ಕೋರ್ದಬ್ಬು ದೈವಸ್ಥಾನ ಕಳವು ಪ್ರಕರಣದಲ್ಲಿ ನಾಲ್ವರು ಅರೆಸ್ಟ್

    September 10, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮಂಗಳೂರು: ಲೇಡಿಗೋಷನ್ ಆಸ್ಪತ್ರೆಗೆ ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಲ ಶುದ್ದೀಕರಣ ಉಪಕರಣ ಕೊಡುಗೆ

    September 10, 2026

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ರೂಂ ಬುಕ್ಕಿಂಗ್ ಹೆಸರಿನಲ್ಲಿ ವಂಚನೆ: ನಕಲಿ ವೆಬ್‌ಸೈಟ್ ವಿರುದ್ಧ ಪ್ರಕರಣ ದಾಖಲು

    September 10, 2026

    ಮುಲ್ಕಿ: ಕಿಲ್ಪಾಡಿ ಕೋರ್ದಬ್ಬು ದೈವಸ್ಥಾನ ಕಳವು ಪ್ರಕರಣದಲ್ಲಿ ನಾಲ್ವರು ಅರೆಸ್ಟ್

    September 10, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.