Author: main-admin

ಬೆಳ್ತಂಗಡಿ: ಚಾರ್ಮಾಡಿ ಕಡೆಯಿಂದ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಗುರುವಾಯನಕೆರೆಯಲ್ಲಿ ಪಲ್ಟಿಯಾಗಿದ್ದು, ಆ ಸಂದರ್ಭದಲ್ಲಿ ಇದರಲ್ಲಿ ಗೋ ಸಾಗಾಟ ಮಾಡುತ್ತಿದ್ದ ಕೃತ್ಯ ಬೆಳಕಿಗೆ ಬಂದಿದೆ. ಇನ್ನೋವಾ ‌ಕಾರಿನಲ್ಲಿ ಆರೋಪಿಗಳು ಗೋವುಗಳನ್ನು ‌ಸಾಗಾಟ ಮಾಡುತ್ತಿದ್ದು, ಎರಡು ನಂಬರ್ ಪ್ಲೇಟ್‌ಗಳನ್ನು ಬಳಸಿ ಈ ಕೃತ್ಯ ನಡೆಸಲಾಗಿತ್ತು. ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಸಂಚಾರ ಅಸ್ತವ್ಯಸ್ತವಾಗಿತ್ತು. ಅಪಘಾತದಿಂದ ಕಾರಿನಲ್ಲಿದ್ದ ಹಸು ರಸ್ತೆಗೆ ಬಿದ್ದಿದ್ದು, ಇದರಿಂದಾಗಿ ಅಕ್ರಮ ಗೇಸಾಗಾಟದ ಘಟನೆ ಬೆಳಕಿಗೆ ಬಂದಿದೆ.

Read More

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಮಹತ್ವದ ಟ್ವಿಸ್ಟ್ ಸಿಕ್ಕಿದ್ದು, ದೂರುದಾರ ತೋರಿಸಿರುವ ಸ್ಥಳಗಳಲ್ಲಿ ಈಗಾಗಲೇ ಅಸ್ಥಿಪಂಜರಕ್ಕಾಗಿ ಶೋಧಕಾರ್ಯ ನಡೆಸಿದರೂ ಒಂದು ಸ್ಥಳವನ್ನು ಹೊರತುಪಡಿಸಿ ಬೇರೆಲ್ಲೂ ಯಾವುದೇ ಅಸ್ಥಿಪಂಜರಗಳ ಅವಶೇಷ ಸಿಕ್ಕಿಲ್ಲ. ಇದರಿಂದ ಎಸ್ ಐಟಿ ತಂಡ ದೂರುದಾರ ಮಂಪರು ಪರೀಕ್ಷೆಗೆ ಮುಂದಾಗಿದೆ ಎನ್ನಲಾಗಿದೆ. ಹೌದು, ದೂರುದಾರ ಮಾಸ್ಕ್ ಮ್ಯಾನ್ ತೋರಿಸಿದ್ದ 6 ನೇ ಪಾಯಿಂಟ್ ಹೊರತುಪಡಿಸಿದರೆ ಬೇರೆ ಯಾವುದೇ ಸ್ಥಳದಲ್ಲಿ ಅಸ್ಥಿಪಂಜರ ಸಿಗದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ನಡುವೆ ದೂರುದಾರ 30 ಕಡೆಗಳಲ್ಲಿ 300ಕ್ಕೂ ಹೆಚ್ಚು ಶವಗಳನ್ನು ತಾನು ಹೂತಿಟ್ಟಿರುವುದಾಗಿ ಎಸ್ ಐಟಿ ಮುಂದೆ ಹೇಳಿಕೆ ನೀಡಿದ್ದಾನೆ. ಅಲ್ಲದೇ ಈಗಾಗಲೇ ಶೋಧ ನಡೆಸಿರುವ ಸ್ಥಳವೂ ಸೇರಿದಂತೆ ತಾನು ತೋರಿಸುವ ಎಲ್ಲಾ ಸ್ಥಳಗಳಲ್ಲಿಯೂ ಜಿಪಿಆರ್ ಬಳಸಿ ಶೋಧ ನಡೆಸುವಂತೆ ಮನವಿ ಮಾಡಿದ್ದಾನೆ. ಶವ ಹೂತಿದ್ದಾಗಿ ದೂರುದಾರ ತಪ್ಪೊಪ್ಪಿಕೊಂಡ ನಂತ್ರ, ರಾಜ್ಯ ಸರ್ಕಾರ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಗೆ ಸೂಚಿಸಿತ್ತು. ನಿನ್ನೆ ಎಸ್ಐಟಿಯಿಂದ 13ನೇ ಪಾಯಿಂಟ್ ನಲ್ಲಿ ಉತ್ಕನನ ಕಾರ್ಯವನ್ನು…

Read More

ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆ ಪೂರ್ಣಗೊಳ್ಳುವವರೆಗೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ತ ದಿ: 27-08-202025 ರಿಂದ 15-09-2025 ರವರೆಗೆ ಡಿಜೆ ಸಿಸ್ಟಂ ಬಳಕೆಯನ್ನು ನಿಷೇಧಗೊಳಿಸಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ. ದಿ: 27-08-2025 ರಂದು ಗಣೇಶ ಹಬ್ಬದ ಪ್ರಯಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ, ನಂತರ ವಿವಿಧ ದಿನಗಳಂದು ವಿಸರ್ಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು ಆ.27 ರಿಂದ ಸೆ.15 ರವರೆಗೆ ಒಟ್ಟು 20 ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಪ್ರಮುಖ, ಅತಿಸೂಕ್ಷ್ಮ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಿದ್ದಾರೆ. ಹಾಗೂ ದಿ:05-09-2025 ರಿಂದ 10-09-2025 ರವರೆಗೆ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬ ಆಚರಿಸಲಿದ್ದಾರೆ. ಈ ಆಚರಣೆಗಳ ಸಂದರ್ಭದಲ್ಲಿ ಡಿಜೆ ಸಿಸ್ಟಂಗಳನ್ನು ಉಪಯೋಗಿಸುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವಯಸ್ಕರಿಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗುವುದರೊಂದಿಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ, ಸೌಹಾರ್ದತೆ ಮತ್ತು ಶಾಂತಿ…

Read More

ಮೂಡಬಿದರೆ; ದಿನಾಂಕ:08.08.2025 ರಂದು ಪಡು ಮಾರ್ನಾಡು ಗ್ರಾಮದ ಧರ್ಮಪಾಲ ಬಲ್ಲಾಳರವರ ಪತ್ನಿ ವಿಜಯ ರವರು ಕುಪ್ಪೆ ಪದವಿನಲ್ಲಿ ಅವರ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಹಿಂತಿರುಗುವ ಸಂದರ್ಭ ಮಧ್ಯಾಹ್ನ 2:00 ಗಂಟೆಗೆ ಮೂಡಬಿದ್ರೆ ಪೇಟೆಯಲ್ಲಿ ಎರಡು ಬಳೆ ಮತ್ತು ಚಿನ್ನದ ಸರ ಒಟ್ಟು ಒಂಬತ್ತು ಪವನ್ ಚಿನ್ನ ಮತ್ತು ಪರ್ಸ್ ಸಮೇತ ಕಳೆದುಕೊಂಡಿರುತ್ತಾರೆ. ಈ ಬಗ್ಗೆ ಅದೇ ದಿನ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ದೂರಿನ ಅನ್ವಯ ಪತ್ತೆ ಕಾರ್ಯದಲ್ಲಿ ಮೂಡಬಿದ್ರೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಸಂದೇಶ್ ಪಿ ಜಿ ರವರ ನೇತೃತ್ವದಲ್ಲಿ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಮಹಮದ್ ಹುಸೇನ್,ಮಹಮದ್ ಇಕ್ಬಾಲ್, ಅಖಿಲ್ ಅಹಮದ್ ನಾಗರಾಜ ಲಮಾಣಿ ಮತ್ತು ವೆಂಕಟೇಶ್ ರವರು ಎರಡು ದಿನಗಳಲ್ಲಿ ಪತ್ತೆಗೆ ಶ್ರಮಿಸಿ ಸದರಿ ಕಳೆದುಕೊಂಡ ಬಂಗಾರ ಮತ್ತು ಪರ್ಸ್ ನ್ನು ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿದ್ದಾರೆ. ಬಂಗಾರದ ಮೌಲ್ಯ ಸುಮಾರು 10 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು…

Read More

ಉಡುಪಿ: ಬೈಂದೂರು ಹಾಗೂ ಪಡುಬಿದ್ರಿ ಠಾಣೆಯಲ್ಲಿ 2024ನೇ ಸಾಲಿನಲ್ಲಿ ಪೋಕ್ಸೋ ಕಾಯ್ದೆಯಡಿ ದಾಖಲಾದ ಎರಡು ಪ್ರಕರಣಗಳ ಆರೋಪಿಗಳಿಗೆ ಉಡುಪಿ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಶಿಕ್ಷೆಗೆ ಗುರಿಯಾದವರನ್ನು ಬೈಂದೂರು ಠಾಣೆಯ ಪ್ರಕರಣದ ಆರೋಪಿ ಬೈಂದೂರು ಗಂಗನಾಡು ನಿವಾಸಿ ರಾಘವೇಂದ್ರ ಗೊಂಡ (35) ಹಾಗೂ ಪಡುಬಿದ್ರಿ ಠಾಣೆಯ ಪ್ರಕರಣದ ಆರೋಪಿ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಮಂಜುನಾಥ ಪಾತ್ರೋಟ (23) ಎಂದು ಗುರುತಿಸಲಾಗಿದೆ. 2025ನೇ ಜುಲೈ ತಿಂಗಳಲ್ಲಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 320 ಪ್ರಕರಣಗಳು ಇತ್ಯರ್ಥವಾಗಿದ್ದು, ಅವುಗಳಲ್ಲಿ 188 ಪ್ರಕರಣಗಳು ಸಜೆ /ದಂಡ ರೂಪದಲ್ಲಿ ಇತ್ಯರ್ಥವಾಗಿದೆ. ಕುಂದಾಪುರ ಸಂಚಾರ ಠಾಣೆಯಲ್ಲಿ 2019ನೇ ಸಾಲಿನಲ್ಲಿ ದಾಖಲಾದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನಿಗೆ 18 ತಿಂಗಳ ಜೈಲುವಾಸ ಹಾಗೂ 9,000 ರೂ. ದಂಡವನ್ನು ನ್ಯಾಯಾಲಯವು ವಿಧಿಸಿದೆ.

Read More

ಉಡುಪಿ: ಕಾರನ್ನು ಅಪಾಯಕಾರಿಯಾಗಿ ಅಡ್ಡಾದಿಡ್ಡಿ ಚಲಾಯಿಸಿಕೊಂಡು ಹೋಗುತ್ತಿದ್ದ ಆರೋಪದಲ್ಲಿ ಕೇರಳದ ಯುವಕನೋರ್ವನನ್ನು ಮಣಿಪಾಲ ಪೊಲೀಸರು ಕಾರು ಸಹಿತ ವಶಕ್ಕೆ ಪಡೆದುಕೊಂಡ ಘಟನೆ ಆ.11ರಂದು ಬೆಳಗ್ಗೆ ಮಣಿಪಾಲ ಎಂಐಟಿ ಜಂಕ್ಷನ್ ಬಳಿ ನಡೆದಿದೆ. ಮಣಿಪಾಲ ಅಂಚೆ ಕಚೇರಿ ಎದುರು ಕೇರಳ ಕಣ್ಣೂರಿನ ಕಂಡಗನ್ ನಿವಾಸಿ ಶೋಹೈಲ್ ನೀಲಾಕತ್(26) ಎಂಬಾತ ತನ್ನ ಕಾರಿಗೆ ಸಂಪೂರ್ಣ ಟಿಂಟ್ ಅಳವಡಿಸಿಕೊಂಡು ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ದ್ವಿಚಕ್ರ ವಾಹನಗಳು ಹಾಗೂ ಇತರ ವಾಹನಗಳಿಗೆ ಅಪಘಾತ ಉಂಟು ಮಾಡುವ ರೀತಿಯಲ್ಲಿ, ವಿಪರೀತ ಕರ್ಕಶ ಶಬ್ದ ಮಾಡಿ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದನೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸರು ಕಾರನ್ನು ಹಿಂಬಾಲಿಸಿ, ಮಣಿಪಾಲ ಎಂಐಟಿ ಜಂಕ್ಷನ್ ಬಳಿ ಚಾಲಕ ಸಹಿತ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಪುತ್ತೂರು: ಪುತ್ತೂರು ಬಿಜೆಪಿ ನಾಯಕ ಪಿ.ಜಿ. ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ಅವರಿಂದ ಅತ್ಯಾಚಾರ ಮತ್ತು ವಂಚನೆಗೊಳಗಾಗಿ ತಾಯಿಯಾಗಿರುವ ವಿದ್ಯಾರ್ಥಿನಿಯೊಬ್ಬಳು, ತನಗೆ ಬೆದರಿಕೆ ಇದೆ ಎಂದು ಪೊಲೀಸ್ ರಕ್ಷಣೆ ಕೋರಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರನ್ನು ಭೇಟಿ ಮಾಡಿ ಮಾನವಿ ನೀಡಿದ್ದಾರೆ. ಆಗಸ್ಟ್ 11 ರಂದು, ಸಂತ್ರಸ್ತೆ ಮಂಗಳೂರಿನಲ್ಲಿರುವ ಪಶ್ಚಿಮ ವಲಯ ಐಜಿಪಿ ಕಚೇರಿಗೆ ಭೇಟಿ ನೀಡಿ ಮನವಿ ಪತ್ರವನ್ನು ಸಲ್ಲಿಸಿದರು.ಇತ್ತೀಚೆಗೆ, ಕೆಲವು ಅಪರಿಚಿತ ವ್ಯಕ್ತಿಗಳು ನನ್ನ ಮನೆಯ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾರೆ. ನನ್ನ ತಾಯಿ ಮತ್ತು ನಾನು ಅಪರಿಚಿತರು ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಓಡಾಡುವುದನ್ನು ಗಮನಿಸಿದ್ದೇವೆ. ನಾನು ದಾಖಲಿಸಿದ ವಂಚನೆ ಪ್ರಕರಣದಲ್ಲಿ, ನ್ಯಾಯಾಲಯದಲ್ಲಿ  ನನಗೆ ನ್ಯಾಯ ಸಿಗುವುದು ನನ್ನ ಮಗುವಿನ ಮೂಲಕ ಮಾತ್ರ. ಆದ್ದರಿಂದ, ನನ್ನ ಮಗುವಿನ ಜೀವಕ್ಕೆ ಜೀವಕ್ಕೆ  ಯಾರಿಂದಲಾದರೂ ಅಪಾಯವಿರಬಹುದು ಎಂದು ನನಗೆ ಭಯವಿದೆ. ನನಗೆ ಮತ್ತು ನನ್ನ ಮಗುವಿಗೆ ಪೊಲೀಸ್ ರಕ್ಷಣೆ ಒದಗಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಅವರು ಹೇಳಿದರು.

Read More

ಬೆಳ್ತಂಗಡಿ: ತನ್ನನ್ನು ಕೆಲವರು ಹಿಂಬಾಲಿಸಿಕೊಂಡು ಬಂದು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು 17 ಮಂದಿಯ ವಿರುದ್ಧ ಧರ್ಮಸ್ಥಳ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಯುವತಿಯ ಮೃತದೇಹವನ್ನು ಹೂತು ಹಾಕಿರುವುದನ್ನು ನೋಡಿದ್ದೇನೆ ಎಂದು ಎಸ್ಐಟಿ ಗೆ ಮಾಹಿತಿ ನೀಡಿರುವ ಎರಡನೇ ದೂರುದಾರ ಜಯಂತ್ ಟಿ. ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ. ಎಸ್ಐಟಿಗೆ ದೂರು ನೀಡಿದ ದಿನದಿಂದ ತನ್ನ ಮೇಲೆ ಹಲ್ಲೆ ಮಾಡಲು ಮಾಧ್ಯಮಗಳ ಮೂಲಕ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ವಸಂತ್ ಗಿಳಿಯಾರು, ಕಿರಿಕ್ ಕೀರ್ತಿ, ವಿಕಾಸ್ ಶಾಸ್ತ್ರಿ ಮತ್ತು ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಎಂಬವರನ್ನು ದೂರಿನಲ್ಲಿ ಉಲ್ಲೇಖಿಸಿರುವ ಜಯಂತ್ ಟಿ. ಅವರು, ತಂಡವೊಂದು ತನ್ನನ್ನು ಹಿಂಬಾಲಿಸಿಕೊಂಡು ಬಂದು ಕೊಲೆಗೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಬಗ್ಗೆ ಪರಿಶೀಲಿಸಲಾಗುತ್ತಿದ್ದು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದ್ದಾರೆ.

Read More

ಆಗಸ್ಟ್ 10, 2025 ರ ಭಾನುವಾರದಂದು ಸುರತ್ಕಲ್ ಶಾಖೆಯಲ್ಲಿ ತನ್ನ 10 ನೇ ಎಟಿಎಂ ಅನ್ನು ಉದ್ಘಾಟಿಸುವ ಮೂಲಕ ಎಂ.ಸಿ.ಸಿ. ಬ್ಯಾಂಕ್ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಸಮಾರಂಭವು ಸುರತ್ಕಲ್‌ನ ಸೇಕ್ರೆಡ್ ಹಾರ್ಟ್ ಚರ್ಚ್’ನ ಧರ್ಮಗುರುಗಳಾದ ವಂದನೀಯ ಆಸ್ಟಿನ್ ಪೀಟರ್ ಪೆರಿಸ್ ಅವರ ಆಶೀರ್ವಾದದೊಂದಿಗೆ ಪ್ರಾರಂಭವಾಯಿತು, ಉಪಯೋಗಿಸಿದ ವಾಹನ ಮಾರಾಟ ಸಲಹೆಗಾರರಾದ ಶ್ರೀ ಮೊಹಮ್ಮದ್ ಹನೀಫ್ ಅವರು ಎಟಿಎಂ ಅನ್ನು ಅಧಿಕೃತವಾಗಿ ಉದ್ಘಾಟಿಸಿದರು. ಮುಕ್ಕಾದ ಹೋಲಿ ಸ್ಪಿರಿಟ್ ಚರ್ಚ್’ನ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ಪಿಂಟೊ ಅವರ ಉಪಸ್ಥಿತರಿದ್ದರು. ಎಟಿಎಂ ನಿಂದ ಮೊದಲ ನಗದು ಹಿಂಪಡೆಯುವಿಕೆಯನ್ನು ಶ್ರೀ ದುರ್ಗಾ ಫೈನಾನ್ಷಿಯಲ್ ಕಾರ್ಪೊರೇಷನ್‌ನ ಮಾಲೀಕ ಶ್ರೀ ಮೆಬೈಲ್ ಸದಾಶಿವ ಶೆಟ್ಟಿ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು, ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಕಳೆದ ಎಂಟು ವರ್ಷಗಳಲ್ಲಿ ₹500 ಕೋಟಿ ವ್ಯವಹಾರದಿಂದ ₹1,300 ಕೋಟಿಗೆ ತಲುಪಿದ ಬ್ಯಾಂಕಿನ ಪ್ರಗತಿಯನ್ನು ವಿವರಿಸಿದರು. ಈ…

Read More

ಧರ್ಮಸ್ಥಳದಲ್ಲಿ ಈಗಾಗಲೇ ನೂರಾರು ಅಪರಿಚಿತ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ತೀವ್ರ ಶೋಧಕಾರ್ಯ ಮುಂದುವರಿಸಿದ್ದಾರೆ. ಇದೀಗ 1986 ರಲ್ಲಿ ಪದ್ಮಲತಾ ಎಂಬ ಮಹಿಳೆ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ಸಹೋದರಿ ಎಸ್ಐಟಿಗೆ ದೂರು ಸಲ್ಲಿಸಿದ್ದು ಮರುತನಿಕೆಗೆ ಆಗ್ರಹಿಸಿ ದೂರು ಸಲ್ಲಿಸಿದ್ದಾರೆ. ಹೌದು ಪದ್ಮಲತಾ ಅಸಹಜ ಸಾವು ಕೇಸ್ ಮರು ತನಿಖೆಗೆ ಒತ್ತಾಯ ಕೇಳಿಬಂದಿದ್ದು, 1986 ರಲ್ಲಿ ಕೋಲಾರದಿಂದ ಧರ್ಮಸ್ಥಳಕ್ಕೆ ಬಂದಿದ್ದರು ಆದರೆ ಈ ವೇಳೆ ಪದ್ಮಲತಾ ಏಕಾಏಕಿ ನಾಪತ್ತೆಯಾಗಿದ್ದರು ಬಳಿಕ 58 ದಿನಗಳ ನಂತರ ಪದ್ಮಲತಾ ನೇತ್ರಾವತಿ ನದಿ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಅವರ ಶವ ಪತಿಯಾಗಿತ್ತು. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬೋಳಿಯರು ನಿವಾಸಿಯಾಗಿರುವ ಪದ್ಮಲತಾ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಇದೀಗ ಅವರ ಸಹೋದರಿ ಇಂದ್ರಾವತಿ ಪ್ರಕರಣದ ಮರುತನಿಕೆ ಆಗಬೇಕು ಎಂದು SIT ಗೆ ದೂರು ನೀಡಿದ್ದಾರೆ.

Read More