ಬೆಳ್ತಂಗಡಿ: ಬೈಕ್ ಸವಾರನನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಮೂವರು ಯೂಟ್ಯೂಬರ್ ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆ 6ರಂದು ಘಟನೆ ನಡೆದಿದ್ದು, ಈ ಬಗ್ಗೆ ಹರೀಶ್ ನಾಯ್ಕ ಎಂಬವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ. ತಾನು ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಪಾಂಗಳ ಕ್ರಾಸ್ ಬಳಿ ತಡೆದು ನಿಲ್ಲಿಸಿದ ಯುಟ್ಯೂಬರ್ ಗಳು ತಾವು ಕುಡ್ಲ ರಾಂಪೇಜ್ ನವರು ಎಂದು ಹೇಳಿದ್ದು, ಈ ರಸ್ತೆಯ ಪಕ್ಕದಲ್ಲಿ ಹೆಣಗಳನ್ನು ಹೂತು ಹಾಕಿದ್ದೀರಾ ? ಇದರ ಬಗ್ಗೆ ನಿಮಗೆ ಗೊತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಅವರು ಹೆಸರನ್ನು ಕೇಳಿದ್ದು ಈ ವೇಳೆ ನಾವು ಹರೀಶ್ ನಾಯ್ಕ ಎಂದಾಗ ಅವರು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುವುದಾಗಿ ಹರೀಶ್ ನಾಯ್ಕ ದೂರು ನೀಡಿದ್ದಾರೆ. ಅದರಂತೆ ಧರ್ಮಸ್ಥಳ ಠಾಣೆಯಲ್ಲಿ ಅಪರಾಧ ಕ್ರಮ ಸಂಖ್ಯೆ 50/2025 ಕಲಂ126(2)115(2) 352 ಜೊತೆಗೆ 3(5) ಬಿಎನ್.ಎಸ್. ನಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Author: main-admin
ಪುತ್ತೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ‘ಭಾರತೀಯ ಸೇನೆ’ ಎಂಬ ಹೆಸರಿನ ಫೇಸ್‌ಬುಕ್ ಪುಟದ ನಿರ್ವಾಹಕನ ವಿರುದ್ಧ ಪುತ್ತೂರು ನಗರ ಠಾಣೆ ಪೊಲೀಸರು ಗುರುವಾರ (ಆ. 10) ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಭಾರತೀಯ ಸೇನೆ’ ಹೆಸರಿನ ಫೇಸ್‌ಬುಕ್ ಪುಟದಲ್ಲಿ ಧರ್ಮಗಳು ಮತ್ತು ಸಮುದಾಯಗಳ ನಡುವೆ ದ್ವೇಷವನ್ನು ಪ್ರಚೋದಿಸುವ, ಕೋಮು ಸೌಹಾರ್ದವನ್ನು ಕದಡುವ ಮತ್ತು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುವಂತಹ ಸುಳ್ಳು ಸುದ್ದಿಗಳನ್ನು ವ್ಯವಸ್ಥಿತವಾಗಿ ಪ್ರಸಾರ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಈ ಪೋಸ್ಟ್‌ಗಳು ಸಮಾಜದ ಶಾಂತಿಗೆ ಭಂಗ ತರುತ್ತಿರುವುದನ್ನು ಗಮನಿಸಿದ ಪೊಲೀಸರು, ಸ್ವಯಂಪ್ರೇರಿತವಾಗಿ (ಸುಮೋಟೊ) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 70/2025 ರ ಅಡಿಯಲ್ಲಿ, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 196(1)(ಎ) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 353(2) (ಸಾರ್ವಜನಿಕ ಶಾಂತಿ ಕದಡುವ ಹೇಳಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು. ಫೇಸ್‌ಬುಕ್…
ಮಂಗಳೂರು: ಮಾದಕವಸ್ತು ಮುಕ್ತ ಮಂಗಳೂರು’ ಅಭಿಯಾನದಡಿಯಲ್ಲಿ ವ್ಯಾಪಕ ಮಾದಕವಸ್ತು ವಿರೋಧಿ ಕಾರ್ಯಾಚರಣೆಯಲ್ಲಿ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆಗಸ್ಟ್ 8 ರಂದು ನಗರದ ವಿವಿಧ ಭಾಗಗಳಲ್ಲಿ 7 ಮಂದಿಯನ್ನು ಬಂಧಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಅಕ್ರಮ ಮಾದಕವಸ್ತು ಮಾರಾಟದ ಮೇಲೆ ದಾಳಿ ನಡೆಸಿ ದ ಪೊಲೀಸರು 5 ಕಿಲೋಗ್ರಾಂಗಳಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಶೈಕ್ಷಣಿಕ ಮತ್ತು ವಸತಿ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಗಾಂಜಾ ಮಾರಾಟ ಮಾಡುತ್ತಿರುವ ವ್ಯಕ್ತಿಗಳ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಪೊಲೀಸ್ ತಂಡಗಳು ಐದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಕುದ್ರೋಳಿಯಲ್ಲಿ ಗಾಂಜಾ ಮಾರಾಟಗಾರ ಬಂಧನ ಮೊದಲ ಕಾರ್ಯಾಚರಣೆಯಲ್ಲಿ, ಕುದ್ರೋಳಿ-ಕಂಡತ್‌ಪಳ್ಳಿ ಪ್ರದೇಶದಲ್ಲಿ ಹಲವು ದಿನಗಳಿಂದ ರಹಸ್ಯವಾಗಿ ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪದ ಮೇಲೆ ಅಬ್ದುಲ್ ಸಮದ್ ಅಲಿಯಾಸ್ ಚಮ್ಮುನನ್ನು ಪೊಲೀಸರು ಬಂಧಿಸಿದ್ದಾರೆ. ಶಂಕಿತ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಜನರನ್ನು ಗುರಿಯಾಗಿಸಿಕೊಂಡಿದ್ದ ಎಂದು ವರದಿಯಾಗಿದೆ. “ಸಮದ್ ವಸತಿ ಪ್ರದೇಶಗಳಲ್ಲಿ ರಹಸ್ಯವಾಗಿ ಮಾದಕ…
ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ ಗ್ರಾಹಕ ಸೇವೆ ಮತ್ತು ಬ್ಯಾಂಕಿ0ಗ್ ಶ್ರೇಷ್ಟತೆಯ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲಾಗಿ ಆಗಸ್ಟ್ 9, 2025 ರಂದು ಬೆಳ್ಮಣ್ ಶಾಖೆಯಲ್ಲಿ ತನ್ನ 9 ನೇ ಎಟಿಎಂ ಅನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಎಟಿಎಂ ಅನ್ನು ಬೆಳ್ಮನ್‌ನ ಮಾನ್ಯ ಡೆವಲಪರ್ಸ್ ಮತ್ತು ಹೋಟೆಲ್ ಸೂರಜ್ ಇನ್‌ನ ಮಾಲೀಕ ಶ್ರೀ ಶೋಧನ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಬೆಳ್ಮಣ್ ನ ಸೇಂಟ್ ಜೋಸೆಫ್ ಚರ್ಚ್ನನ ಧರ್ಮಗುರುಗಳಾದ ರೆವೆರೆಂಡ್ ಫಾದರ್ ಫ್ರೆಡ್ರಿಕ್ ಮಸ್ಕರೇನ್ಹಸ್ ಅವರು ಎಟಿಎಂ ಅನ್ನು ಆಶಿರ್ವಚಿಸಿ ಶಾಖೆ ಮತ್ತು ಅದರ ಗ್ರಾಹಕರಿಗೆ ಅನುಗ್ರಹ ಮತ್ತು ಸಮೃದ್ಧಿಯನ್ನು ಕೋರಿದರು. ಎಟಿಎಂನಿoದ ಮೊದಲ ನಗದು ಹಿಂಪಡೆಯುವಿಕೆಯನ್ನು ಶ್ರೀ ಫ್ರೆಡ್ರಿಕ್ ವಿನ್ಸೆಂಟ್ ಅಂದ್ರಾದೆಮಾಡಿದರು.ಈ ಸಮಾರಂಭದಲ್ಲಿ ಮುಖ್ಯ ಅತಿಥಿ ಶ್ರೀ ಫ್ರಾನ್ಸಿಸ್ ಡಿ’ಸೋಜಾ, ಸೇಂಟ್ ಜೋಸೆಫ್ ಅರ್ಥ್ ಮೂವರ್ಸ್ ಮತ್ತು ಸೇಂಟ್ ಜೋಸೆಫ್ ಪ್ಯೂಯೆಲ್ಸ್ಮಾಲೀಕ ಶ್ರೀ ಡೊಮಿನಿಕ್ ಆಂದ್ರಾದೆ ಮತ್ತು ಬೆಳ್ಮನ್‌ನ ಸೇಂಟ್ಜೋ…
ಉಡುಪಿ : ಎಕ್ಸ್‌ಪ್ರೆಸ್ ಬಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಮೃತಪಟ್ಟ ಘಟನೆ ಹೆಜಮಾಡಿ ಹಳೆಯ ಎನ್‌ಬಿಸಿ ರಸ್ತೆಯ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಮೃತರನ್ನು ಹೆಜಮಾಡಿ ಕೋಡಿ ಮಾನಂಪಾಡಿಯ ನಿವಾಸಿ ತುಷಾರ್ (20) ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದಾಗ ತುಷಾರ್ ಅವರು ಕರ್ತವ್ಯದಲ್ಲಿದ್ದರು. ಅವರು ಹೆಜಮಾಡಿ ಒಳರಸ್ತೆಯ ಟೋಲ್ ಗೇಟ್‌ನಿಂದ ತಮ್ಮ ಸ್ಕೂಟರ್‌ನಲ್ಲಿ ಮುಲ್ಕಿಯ ಕಡೆಗೆ ಹೆದ್ದಾರಿ ದಾಟಲು ಪ್ರಯತ್ನಿಸುತ್ತಿದ್ದರು. ಆ ಸಮಯದಲ್ಲಿ ಮಂಗಳೂರಿನಿಂದ ಕಾರ್ಕಳಕ್ಕೆ ಹೋಗುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಅವರಿಗೆ ಡಿಕ್ಕಿ ಹೊಡೆದಿದ್ದು, ಸ್ಕೂಟರ್ ವಾಹನದ ಮುಂಭಾಗದಲ್ಲಿ ಸಿಲುಕಿಕೊಂಡಿದೆ.ತುಷಾರ್ ತಲೆ ಮತ್ತು ಎದೆಗೆ ತೀವ್ರ ಗಾಯಗಳಾಗಿವೆ. ಹೆಜಮಾಡಿ ಟೋಲ್ ಆಂಬ್ಯುಲೆನ್ಸ್ ಮೂಲಕ ಅವರನ್ನು ಮುಕ್ಕಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಂಜೆ ಮೃತಪಟ್ಟರು. ತುಷಾರ್ ಅವರು ಹೊಸ ಮಂಗಳೂರು ಬಂದರಿನಲ್ಲಿರುವ ಪ್ರಾಜೆಕ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತುಷಾರ್…
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳಜ್ಯೋತಿ ಜಂಕ್ಷನ್ ಬಳಿ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವಾಮಂಜೂರು ನಿವಾಸಿ ಬದ್ರುದ್ದೀನ್ (35) ಅವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 2 ಕೆ.ಜಿ. ಗಾಂಜಾ, ₹20,000 ನಗದು, ಒಂದು ಮೊಬೈಲ್ ಫೋನ್ ಹಾಗೂ ಒಂದು ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕ ಗವಿರಾಜು ಆರ್.ಪಿ., ಎಸ್ಸೆ ಅರುಣ್ ಕುಮಾರ್ ಡಿ, ಹೆಡ್‌ಕಾನ್ಸ್ಟೆಬಲ್‌ಗಳು ಕಮಲಾಕ್ಷ, ಶಶಿಧರ್, ಶಂಕ್ರಪ್ಪ ಹಾಗೂ ಪಿಸಿಗಳಾದ ಸಿಕಂದರ್, ಬೀರೇಂದ್ರ, ಪ್ರದೀಪ್ ಭಾಗವಹಿಸಿದ್ದರು.
ಕಾಸರಗೋಡು: ಸೂಕ್ತ ದಾಖಲೆಗಳಿಲ್ಲದೆ ಕರ್ನಾಟಕದಿಂದ ಕೇರಳಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಪ್ರಯಾಣಿಕನಿಂದ 20.80 ಲಕ್ಷ ರೂ. ಮಂಜೇಶ್ವರ ಅಬಕಾರಿ ದಳದ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಮೂಲದ ಜಯಶೀಲ ಪುಟ್ಟಣ್ಣ ಶೆಟ್ಟಿ(52) ಎಂಬಾತನನ್ನು ಬಂಧಿಸಲಾಗಿದೆ. ವಾಹನ ತಪಾಸಣೆ ಮಾಡುತ್ತಿದ್ದ ಅಬಕಾರಿ ಸಿಬ್ಬಂದಿಗಳು ಈತನ ಬ್ಯಾಗನ್ನು ಪರಿಶೀಲಿಸಿದಾಗ ನಗದು ಪತ್ತೆಯಾಗಿದೆ. ಮಂಗಳೂರಿನಿಂದ ಕಾಸರಗೋಡಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಹಣ ಸಾಗಾಟ ನಡೆದಿತ್ತು. ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಈ ಹಣ ಯಾರಿಂದ ಎಲ್ಲಿಗೆ ಸಾಗಾಟವಾಗುತ್ತಿತ್ತು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಧರ್ಮಸ್ಥಳದಲ್ಲಿ ಶವ ಹೂತಿಟ್ಟಿದ್ದಾಗಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅಸ್ಥಿ ಪಂಜರಗಳಿಗಾಗಿ ಶೋಧ ಕಾರ್ಯಾಚರಣೆಯನ್ನು ಎಸ್ಐಟಿ ನಡೆಸುತ್ತಿದೆ. ಇಂತಹ ಎಸ್ಐಟಿಗೆ ಪೊಲೀಸ್ ಠಾಣೆ ಎಂಬುದಾಗಿ ಸರ್ಕಾರ ಘೋಷಿಸಿದೆ. ಈ ಮೂಲಕ ಎಸ್ಐಟಿಗೆ ಪೊಲೀಸ್ ಠಾಣೆಯ ಮಾನ್ಯತೆಯನ್ನು ನೀಡಿದೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ವಹಿಸಿ ಆದೇಶಿಸಿತ್ತು. ಧರ್ಮಸ್ಥಳದಲ್ಲೇ ಬೀಡು ಬಿಟ್ಟಿರುವಂತ ಎಸ್ಐಟಿ ತಂಡವು ಅಸ್ಥಿ ಪಂಜರಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಎಸ್ಐಟಿಗೆ ಪೊಲೀಸ್ ಠಾಣೆ ಘೋಷಿಸಿದೆ. ಅಲ್ಲದೇ ಎಸ್ಐಟಿಗೆ ಪೊಲೀಸ್ ಠಾಣೆಯ ಮಾನ್ಯತೆ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇದಲ್ಲದೇ ವಿಶೇಷ ತನಿಖಾ ತಂಡಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಅಧಿಕಾರವನ್ನು ಬಿಎನ್ಎಸ್ಎಸ್ ಅಡಿಯಲ್ಲಿ ನೀಡಿದೆ.
ಮಂಗಳೂರು: ನಗರದ ಬ್ಯೂಟಿಪಾರ್ಲ‌್ರನ ಮಾಲಕಿ ತನ್ನ ಮೇಲೆ ಹಲ್ಲೆ ನಡೆಸಿ, ತನ್ನ ಬೆತ್ತಲೆ ವೀಡಿಯೋ ಮಾಡಿ ಬೆದರಿಕೆ ಮಾಡಿರುವುದಾಗಿ ಸಂತ್ರಸ್ತ ಮಹಿಳೆಯೊಬ್ಬರು ಮಾಧ್ಯಮದೆದುರು ಆರೋಪ ಮಾಡಿದ್ದಾರೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಈ ಆರೋಪ ಮಾಡಿರುವ ಮಹಿಳೆ, ಕಳೆದ ಒಂದೂವರೆ ತಿಂಗಳ ಹಿಂದೆ ನಗರದ ಹಂಪನಕಟ್ಟೆ ಮತ್ತು ಜ್ಯೋತಿ ಸರ್ಕಲ್ ನಡುವಿನ ಯುನಿಸೆಕ್ಸ್ ಬ್ಯೂಟಿಪಾರ್ಲ‌್ರನಲ್ಲಿ ಬ್ಯೂಟಿಶಿಯನ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾಗಿ ಹೇಳಿದರು. ಬ್ಯೂಟಿಶಿಯನ್ ಕೋರ್ಸ್ ಮಾಡಿಕೊಂಡಿರುವ ತಾನು ಕೆಲಸಕ್ಕೆ ಸೇರುವ ಸಂದರ್ಭ ಆ ಬ್ಯೂಟಿಪಾರ್ಲ‌್ರನ ಮಾಲಕರು, ಬರುವ ಗ್ರಾಹಕರೊಂದಿಗೆ ಆತ್ಮೀಯವಾಗಿದ್ದುಕೊಂಡು ಅವರು ಬಯಸುವ ಸೇವೆಯನ್ನು ಒದಗಿಸುವಂತೆ ಮತ್ತು ಅವರಿಂದ 500ರೂ.ನಿಂದ 1000 ರೂ.ವರೆಗೆ ಸೇವಾ ಭತ್ತೆಯಾಗಿ ಪಡೆಯಲು ಅವಕಾಶ ನೀಡಿದ್ದರು. ಕಳೆದ ಸೋಮವಾರ ಪರಿಚಯದ ಪುರುಷ ಗ್ರಾಹಕರೊಬ್ಬರು ಬಂದು ಮಸಾಜ್ ಮಾಡಿಸಿಕೊಂಡ ಸಂದರ್ಭ ಮಾತನಾಡಿದ್ದನ್ನು ವಾಯ್ಸ್ ರೆಕಾರ್ಡ್ ಮಾಡಿಕೊಂಡು ಮಾಲಕರಿಗೆ ನೀಡಿದ್ದಾರೆ. ಆ ಸಂದರ್ಭ ಪಾರ್ಲ‌್ರನ ಮಾಲಕರ ಪತ್ನಿ ಬಂದು ನನಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಬೆತ್ತಲೆ ವೀಡಿಯೋ…
ಮಂಗಳೂರು: ಬಹುಕೋಟಿ ವಂಚನೆ ಪ್ರಕರಣದ ಆರೋಪಿ ರೋಶನ್ ಸಲ್ದಾನ ಮತ್ತಿತರರ ಪ್ರಕರಣಕ್ಕೆ ಸಂಬಂಧಿಸಿದಂತೆ ಡೈರೆಕ್ಟೊರೇಟ್ ಆಫ್ ಎನ್‌ಫೋರ್ಸ್‌ಮೆಂಟ್ ಮಂಗಳೂರು ಸಬ್ ರೆನಲ್ ಕಚೇರಿಯು ಹಣ ವರ್ಗಾವಣೆ ತಡೆ ಕಾಯ್ದೆಯಡಿ ನಗರದ 5 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ನೆಪದಲ್ಲಿ ಅನೇಕ ಉದ್ಯಮಿಗಳಿಂದ ಸ್ಟಾಂಪ್ ಟ್ಯೂಟಿಗಾಗಿ ಹಣ ವಸೂಲಿ ಮಾಡಿ, ಭರವಸೆ ನೀಡಿದ ಸಾಲಗಳನ್ನು ನೀಡದೆ ವಂಚನೆ ಮಾಡಿದ ರೋಶನ್ ಸಲ್ದಾನ, ಆತನ ಪತ್ನಿ ಡಫ್ನಿ ನೀತು ಡಿಸೋಜ ಮತ್ತಿತರರ ವಿರುದ್ಧ ಕಾನೂನು ಜಾರಿ ಸಂಸ್ಥೆಗಳು ದಾಖಲಿಸಿದ ಅನೇಕ ಎಫ್‌ಐಆರ್‌ಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯ (ED) ತನಿಖೆ ಆರಂಭಿಸಿದೆ. ಪ್ರಮುಖ ಆರೋಪಿ ರೋಶನ್ ಸಲ್ದಾನ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಶೋಧ ಕಾರ್ಯಾಚರಣೆಯ ವೇಳೆ ಈ ಆರೋಪಿಗಳು ಸ್ಟಾಂಪ್ ಡ್ಯೂಟಿ ನೆಪದಲ್ಲಿ ಅನೇಕ ಉದ್ಯಮಿಗಳಿಂದ ಹೊಸದಾಗಿ ರಚಿಸಲಾದ ನಕಲಿ ಸಂಸ್ಥೆಗಳ ಮೂಲಕ ಸುಮಾರು 39 ಕೋ.ರೂ.ಗಳನ್ನು ಸಂಗ್ರಹಿಸಿರುವುದು ಕಂಡುಬಂದಿದೆ. ಅದಕ್ಕೆ ಸಂಬಂಧಿಸಿದ ಡೈರಿಗಳು ಮತ್ತು ದಾಖಲೆಗಳು ಲಭ್ಯವಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.…









