ತನ್ನ ಮನೆಯಲ್ಲಿ ತಾನೇ ಕದ್ದು ಕಳ್ಳತನದ ನಾಟಕವಾಡಿದ ಕಿಲಾಡಿ ಯುವತಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಗರಬನ್ನಿಹಟ್ಟಿ ಗ್ರಾಮದಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ತಸ್ಮೀಯ ಖಾನಂ(26) ಹಾಗೂ ಮುಜೀಬುಲ್ಲಾ ಶೇಖ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 9.5 ಲಕ್ಷ ಮೌಲ್ಯದ 155 ಗ್ರಾಂ ಚಿನ್ನದ ಆಭರಣ ಹಾಗೂ 1.27 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗದ ಇಲಿಯಾಜ್ ನಗರದ ನಿವಾಸಿ ಮುಜೀಬುಲ್ಲಾ ಶೇಖ್ ಜೊತೆ ಸೇರಿ ತಸ್ಮೀಯ ಖಾನಂ ತನ್ನದೇ ಮನೆಯಲ್ಲಿ ಕಳ್ಳತನ ಮಾಡಿದ್ದಳು. ಬಳಿಕ ಮನೆಯಲ್ಲಿ ತಾನು ಒಬ್ಬಳೇ ಇದ್ದಾಗ ಯಾರೋ ಬಂದು ಮುಖಕ್ಕೆ ಬೂದಿ ಹಾಗೂ ಕೆಮಿಕಲ್ ಹಾಕಿ ಪ್ರಜ್ಞೆ ತಪ್ಪಿಸಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಚನ್ನಗಿರಿ ಇನ್ಸ್‌ಪೆಕ್ಟರ್ ಬಾಲಚಂದ್ರ ನಾಯ್ಕ ತಂಡ ಫೋನ್ ಕಾಲ್ ಮಾಹಿತಿ ಮೇಲೆ ಮುಜೀಬುಲ್ಲಾ ಶೇಖ್‌ನನ್ನು ವಶಕ್ಕೆ ಪಡೆದಿದ್ದರು. ನಂತರ ತಸ್ಮೀಯ ಖಾನಂ ತಾನು ಮಾಡಿದ…
Author: main-admin
ಮಂಗಳೂರು: ಮರಳು ಮಾಫಿಯ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಮಾರ್ಗದರ್ಶನ ನೀಡುತ್ತಿದ್ದ ಆಲ್ವಿನ್ ಜೆರೋಮ್ ಡಿಸೋಜಾ ಎಂಬವರ ಮೇಲೆ ಹಲ್ಲೆ ನಡೆಸಿರುವ ಪ್ರಕರಣದಲ್ಲಿ, ಮಂಗಳೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಟ್ವಾಳದ ಪುದು ಗ್ರಾಮದ ಮೊಹಮ್ಮದ್ ಅಥಾವುಲ್ಲಾ (40) ಮತ್ತು ಮಂಗಳೂರಿನ ಮಾರ್ನಮಿಕಟ್ಟೆಯ ತೌಸೀರ್ (31) ಬಂಧಿತ ಆರೋಪಿಗಳು. ಅಕ್ಟೋಬರ್ 5ರಂದು ಅಡ್ಯಾರ್ ಬ್ರಿಡ್ಜ್ ಬಳಿ ಮರಳು ಮಾಫಿಯಾ ವಿರುದ್ಧ ಪ್ರತಿಭಟನೆ ನಡೆದಿತ್ತು. ಈ ಸಂದರ್ಭ ಪ್ರತಿಭಟನೆಯಲ್ಲಿ ಭಾಗಿಯಾಗಿ ನಿರ್ದೇಶನ ಮಾಡಿದ್ದ ಆಲ್ವಿನ್ ಡಿಸೋಜಾ ಮೇಲೆ ಹಲ್ಲೆಗೆ ಮುಹಮ್ಮದ್ ಅಥಾವುಲ್ಲಾ ಪ್ರಚೋದನೆ ನೀಡಿದ್ದ ಎಮದು ಹೇಳಲಾಗಿದ್ದು, ತೌಸೀರ್ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿದ್ದ. ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪುತ್ತೂರು: ಮಾದಕ ವಸ್ತು ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸಿದ್ದು ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಪುತ್ತೂರು ತಾಲೂಕು, ಪುತ್ತೂರು ಕಸಬಾ ಗ್ರಾಮದ ಹಳೆ ನಿರಾಳ ಬಾರ್ನದಲ್ಲಿ ನಡೆದಿದೆ. ಬಂಧಿತನನ್ನು ಪುತ್ತೂರು ತಾಲೂಕು ಇರ್ದೆ ಗ್ರಾಮ ದೂಮಡ್ಕ ನಿವಾಸಿ ಮೆಹಬೂಬ್ (44) ಎಂದು ಗುರುತಿಸಲಾಗಿದೆ. ಅ. 8 ರಂದು ಮದ್ಯಾಹ್ನದ ವೇಳೆ ಪುತ್ತೂರು ಕಸಬಾ ಗ್ರಾಮದ ಹಳೆ ನಿರಾಳ ಬಾರ್‌ನ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೋರ್ವ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಪುತ್ತೂರು ನಗರ ಠಾಣೆ ಉಪ ನಿರೀಕ್ಷಕರಾದ ಆಂಜನೇಯ ರೆಡ್ಡಿ ಜಿ.ವಿ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ತೆರಳಿದರು. ಈ ವೇಳೆ ವ್ಯಕ್ತಿ ಓಡಿ ಹೋಗಲು ಪ್ರಯತ್ನಿಸಿದ್ದು ಆತನನ್ನು ಸಿಬ್ಬಂದಿಗಳ ಸಹಾಯದಿಂದ ವಶಕ್ಕೆ ಪಡೆದು ವಿಚಾರಿಸಿದಾಗ ಆತನ ಹೆಸರು ವಿಳಾಸ ಮೆಹಬೂಬ್ (44) ವರ್ಷ, ದೂಮಡ್ಕ ಅಂಚೆ ಇರ್ದೆ ಗ್ರಾಮ ಪುತ್ತೂರು ತಾಲೂಕು ಎಂಬುದಾಗಿ ತಿಳಿಸಿದ. ಆತ ಯಾವುದೋ ಸೇವಿಸಿದವನಂತೆ ಕಂಡುಬಂದ ಹಿನ್ನೆಲೆಯಲ್ಲಿ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಯವರ…
ಮಂಗಳೂರು:ಆಟೊ ರಿಕ್ಷಾವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವು ದರಿಂದ ಮನ ನೊಂದು ಚಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗಡಿಭಾಗದ ಕಾಸರಗೋಡು ನಗರದಲ್ಲಿ ನಡೆದಿದೆ ಮೃತರನ್ನು ಕರ್ನಾಟಕ ಮೂಲದ ಅಬ್ದುಲ್ ಸತ್ತಾರ್ (55) ಎಂದು ಗುರುತಿಸಲಾಗಿದೆ. ಇವರು ಮೂರು ವರ್ಷಗಳಿಂದ ಕಾಸರಗೋಡು ರೈಲ್ವೆ ನಿಲ್ದಾಣ ರಸ್ತೆಯ ಸಮೀಪ ಬಾಡಿಗೆ ಕ್ವಾಟ್ರಸ್‌ನಲ್ಲಿ ವಾಸ್ತವ್ಯ ಹೂಡಿ ನಗರದಲ್ಲಿ ಆಟೊ ರಿಕ್ಷಾ ಬಾಡಿಗೆ ನಡೆಸುತ್ತಿದ್ದರು. ಡಿವೈಎಸ್ಪಿ ಕಚೇರಿಗೆ ತೆರಳಿ ಮನವಿ ಮಾಡಿದ್ದು, ಭರವಸೆ ನೀಡಿದ್ದರೂ ನಗರ ಠಾಣಾ ಪೊಲೀಸರು ಹಲವು ಕಾರಣ ನೀಡಿ ಆಟೊ ರಿಕ್ಷಾ ಬಿಟ್ಟು ಕೊಡಲು ಮುಂದಾಗಲಿಲ್ಲ ಎಂದು ಆರೋಪ ಕೇಳಿ ಬಂದಿತ್ತು. ಈ ನಡುವೆ ಸತ್ತಾರ್ ಸೋಮವಾರ ಸಂಜೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆ ಬಳಿಕ ನಗರದಲ್ಲಿ ಆಟೊ ಚಾಲಕರು ಸಂಚಾರ ಸ್ಥಗಿ ತಗೊಳಿಸಿ ಮುಷ್ಕರ ನಡೆಸಿ, ನಗರ ಠಾಣೆಗೆ ಮುತ್ತಿಗೆ ಹಾಕಿದರು. ನಾಲ್ಕು ದಿನಗಳ ಹಿಂದೆ ಸಂಜೆ ನಗರದ ಗೀತಾ ಜಂಕ್ಷನ್ ಬಳಿ ಅಬ್ದುಲ್ ಸತ್ತಾರ್‌ರ ಆಟೊ…
ಮಂಗಳೂರು : ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸೋದರ ಮುಮ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎ ಒನ್ ಆರೋಪಿ ಆಗಿರುವ ರೆಹಮದ್ ಅಲಿಯಾಸ್ ಆಯೇಷಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು: ಮಾಜಿ ಶಾಸಕ ಮೊಯ್ದೀನ್ ಬಾವ ಸೋದರ, ಹೆಸರಾಂತ ಉದ್ಯಮಿ ಮುಮ್ತಾಜ್ ಆಲಿ ನಿಗೂಢ ಸಾವಿಗೆ ಬ್ಲಾಕ್ಮೇಲ್ ಮತ್ತು ಹನಿಟ್ರ್ಯಾಪ್ ಜಾಲವೇ ಕಾರಣ ಎನ್ನಲಾಗುತ್ತಿದೆ. ಆರೋಪಿಗಳ ಪತ್ತೆಗಾಗಿ ಮಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ಸೂತ್ರಧಾರೆ ಎನ್ನಲಾದ ಮಹಿಳೆ, ಆಕೆಯ ಪತಿ ಮತ್ತು ಇನ್ನೊಬ್ಬ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಮುಮ್ತಾಜ್ ಸಾವಿಗೆ ಆರು ಮಂದಿಯ ತಂಡ ನಡೆಸಿದ ಬ್ಲಾಕ್ಮೇಲ್ ಕಾರಣ ಎಂದು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಮಂಗಳೂರು ಸಿಸಿಬಿ ಪೊಲೀಸರು ಸೇರಿದಂತೆ ಎರಡು ವಿಶೇಷ ತಂಡ ತನಿಖೆ ಆರಂಭಿಸಿದ್ದಾರೆ. ಪ್ರಕರಣ ಸಂಬಂಧಿಸಿ ಪೊಲೀಸರು ಆಯೆಷಾ…
ಬ್ರಹ್ಮಾವರ : ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿಯೋರ್ವರ ಅಂತ್ಯಕ್ರಿಯೆಯನ್ನು ಪೊಲೀಸರಿಗೆ ಮಾಹಿತಿ ನೀಡದೆ ನೆರವೇರಿಸಿದ ಕಾರಣ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುದಿ ಗ್ರಾಮದ ಬಿಯಾಳಿಯ ಸುಬ್ರಾಯ ನಾಯ್ಕ (66) ಸೆ. 27ರಂದು ಸೀತಾ ನದಿ ಸಮೀಪ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಸಾವು ಅಸ್ವಾಭಾವಿಕ ಆಗಿದ್ದರೂ ಪೊಲೀಸ್ ಠಾಣೆ ಅಥವಾ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡದೆ ಹಿರಿಯ ಪುತ್ರ ಸೀತಾರಾಮ ನಾಯ್ಕ ಅಂತ್ಯಕ್ರಿಯೆ ನೆರವೇರಿಸಿದ್ದರು. ಹಿರಿಯ ಪುತ್ರ ಸೀತಾರಾಮ ನಾಯ್ಕ ಯಾರಿಗೂ ಮಾಹಿತಿ ನೀಡದೆ ದಹನ ಕ್ರಿಯೆ ನೆರವೇರಿಸಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ. ಇನ್ನು ಸುಬ್ರಾಯ ನಾಯ್ಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.
ಬಂಟ್ವಾಳ: ಬಿ.ಸಿ.ರೋಡಿನ ಗಾಣದಪಡ್ಪಿನಲ್ಲಿ ಯುವಕನೋರ್ವ ತಾನು ಕೆಲಸ ಮಾಡುತ್ತಿದ್ದ ಟಯರ್ ರಿಸೋಲ್ ಅಂಗಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕ ಬಿಹಾರದ ಮೂತಿಹಾರ್ ಜಿಲ್ಲೆಯ ಬ್ರಾಮಿಪುರ ನಿವಾಸಿ ಸಂದೀಪ್ ಕುಮಾರ್ (20) ಎಂದು ತಿಳಿದು ಬಂದಿದೆ. ಅವರು 3 ವರ್ಷಗಳಿಂದ ತನ್ನ ಮಾವ ಕೆಲಸ ಮಾಡುತ್ತಿದ್ದ ಟಯರ್ ರಿಸೋಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಜೆ ಇದ್ದು, ಮಾವನ ಮನೆಗೆ ಊಟಕ್ಕೆ ಬಾರದೇ ಇರುವುದರಿಂದ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಬಳಿಕ ಅಂಗಡಿಗೆ ಹೋಗಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಹೆಳಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು, ವೇಗವಾಗಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ಹೃದಯಾಘಾತದಂತಹ ಗಂಭೀರ ಕಾಯಿಲೆಗಳು ಹೆಚ್ಚುತ್ತಿವೆ. ಈ ಹಿಂದೆ, ಹೃದಯಾಘಾತವನ್ನು ವಯಸ್ಸಾದವರಿಗೆ ಮಾತ್ರ ಸಮಸ್ಯೆ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಯುವಕರು ಸಹ ಇದಕ್ಕೆ ಬಲಿಯಾಗುತ್ತಿದ್ದಾರೆ. ತೊಂದರೆಗೊಳಗಾದ ದಿನಚರಿ, ಅನಾರೋಗ್ಯಕರ ಆಹಾರ, ದೈಹಿಕ ಚಟುವಟಿಕೆಯ ಕೊರತೆ ಹೃದಯದ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ.ವೈದ್ಯಕೀಯ ತಜ್ಞರ ಪ್ರಕಾರ, ಈ ಕಾರಣದಿಂದಾಗಿ ಹೃದಯಾಘಾತದ ಅಪಾಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಕೆಲವೊಮ್ಮೆ ಬೆನ್ನು ನೋವಿನಂತಹ ದೇಹದ ಇತರ ಭಾಗಗಳಲ್ಲಿನ ನೋವು ಸಹ ಹೃದಯಾಘಾತದ ಸಂಕೇತವಾಗಿರಬಹುದು. ಮತ್ತು ಬೆನ್ನು ನೋವು ಮತ್ತು ಹೃದಯಾಘಾತದ ನಡುವಿನ ಸಂಬಂಧವೇನು ಎಂದು ತಿಳಿದುಕೊಳ್ಳುವುದು ಮುಖ್ಯ. ಹೃದಯಾಘಾತ ಏಕೆ ಸಂಭವಿಸುತ್ತದೆ ಎಂಬುದನ್ನು ಮೊದಲು ಕಂಡುಹಿಡಿಯೋಣ. ಹೃದಯದ ಸ್ನಾಯುವು ಸಾಕಷ್ಟು ರಕ್ತವನ್ನು ಸ್ವೀಕರಿಸದಿದ್ದಾಗ ಮತ್ತು ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಹೃದಯಾಘಾತ ಸಂಭವಿಸುತ್ತದೆ. ಸಾಕಷ್ಟು ರಕ್ತ ಸಿಗದಿರಲು ಮುಖ್ಯ ಕಾರಣವೆಂದರೆ ರಕ್ತನಾಳಗಳಲ್ಲಿ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಸಂಗ್ರಹವಾಗುವುದು. ವಯಸ್ಸು, ಧೂಮಪಾನ, ಮದ್ಯಪಾನ, ಮಧುಮೇಹ, ಬೊಜ್ಜು, ಒತ್ತಡ, ಆನುವಂಶಿಕ…
ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್ (ITBP) ಕಾನ್ಸ್‌ಟೇಬಲ್ (ಚಾಲಕ) ಹುದ್ದೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 8 ರ ಇಂದಿನಿಂದ recruitment.itbpolice.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು:ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 08.10.2024ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 06.11.2024 ಮಾಸಿಕ ಸಂಬಳ:ಕಾನ್ಸ್ಟೇಬಲ್ (ಚಾಲಕ) ಹುದ್ದೆಗೆ ಕೇಂದ್ರ ಸರ್ಕಾರದ ವೇತನ ಮಾನದಂಡದ ಪ್ರಕಾರ, ಪೇ ಮ್ಯಾಟ್ರಿಕ್ಸ್ ಲೆವೆಲ್ 3 ಪಾವತಿಸಬೇಕಾಗುತ್ತದೆ. 21,700 – 69,100 / – ಪಾವತಿಸಲಾಗುವುದು. ಇದಲ್ಲದೆ.. ಕೇಂದ್ರ ಸರ್ಕಾರಿ ನೌಕರರಿಗೆ ಇತರ ಭತ್ಯೆಗಳು ಮತ್ತು ಪ್ರಯೋಜನಗಳು ಸಹ ಲಭ್ಯವಿರುತ್ತವೆ. ಖಾಲಿ ಹುದ್ದೆಗಳು:ಒಟ್ಟು 545 ಹುದ್ದೆಗಳು ಖಾಲಿ ಇವೆ.ಯೂನಿವರ್ಸಲ್ (UR): 209ಎಸ್ಸಿ (ಎಸ್ಸಿ): 77ಎಸ್ಟಿ: 40ಒಬಿಸಿ: 164ಇಡಬ್ಲ್ಯೂಎಸ್ : 55 ವಯಸ್ಸಿನ ಮಿತಿ:ಕನಿಷ್ಠ 21 ವರ್ಷಗಳುಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಗರಿಷ್ಠ 27 ವರ್ಷ ವಯಸ್ಸಿನ ಮಿತಿಯನ್ನು ಸಡಿಲಿಸಬಹುದು. ಹುದ್ದೆಗಳ ವಿವರ ಮತ್ತು ಅರ್ಹತೆ:ಹುದ್ದೆ…
ಮೂಲ್ಕಿ: ತಾಯಿ-ಮಕ್ಕಳ ರಕ್ಷಣೆ ಕಾರಿನಲ್ಲಿ ಏಕಾಏಕಿ ಬೆಂಕಿ ಹತ್ತಿಕೊಂಡು ಉರಿದ ಘಟನೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಪೇಟೆಯಲ್ಲಿ ಸಂಭವಿಸಿದೆ. ಕಾರೊಂದಕ್ಕೆ ಆಕಸ್ಮತ್ ಬೆಂಕಿ ತಗುಲಿಗಿದ ಘಟನೆ ಕಿನ್ನಿಗೋಳಿ ಮುಖ್ಯ ರಸ್ತೆಯ ಮಾರುಕಟ್ಟೆಮುಂಭಾಗ ನಡೆದಿದೆ. ಮಕ್ಕಳು ಹಾಗೂ ತಾಯಿಯನ್ನು ಕಾರಿನಲ್ಲಿ ಕೂರಿಸಿ AC ಹಾಕಿ ಬೇಕರಿಗೆ ಹೋದ ಸಂಧರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆ ನಿವಾಸಿ ಜಾಸ್ಮಿನ್ ಅವರು ಮತ್ತೊರ್ವ ಮಹಿಳೆ ಮತ್ತು ಎರಡು ಮಕ್ಕಳೊಂದಿಗೆ ಕಿನ್ನಿಗೋಳಿ ಮಾರುಕಟ್ಟೆ ಮುಂಭಾಗ ಕಾರು ನಿಲ್ಲಿಸಿ ಹೋದ ಸಂದರ್ಭ ಕಾರಿನಲ್ಲಿ ಹೊಗೆ ಬರಲಾರಂಭಿಸಿದೆ. ಕಾರಿನಲ್ಲಿದ್ದ ಮಹಿಳೆ ಮತ್ತು ಎರಡು ಮಕ್ಕಳು ಬೊಬ್ಬೆ ಹಾಕಿದ್ದು ಕೂಡಲೇ ಸ್ಥಳೀಯರು ಸೇರಿ ಕಾರಿನಲ್ಲಿದ್ದವರನ್ನು ಅಪಾಯದಿಂದ ಪಾರುಮಾಡಿದ್ದಾರೆ. ಸ್ಥಳಿಯ ಅಂಗಡಿಮಾಲಿಯ ರಾಘವೇಂದ್ರ ಪ್ರಭು ಸ್ಥಳೀಯ ಪ್ರೆಟ್ರೋಲ್ ಪಂಪ್ ನಿಂದ ಅಗ್ನಿ ಶಮನದ ಸಾಧನದ ಮೂಲಕ, ಸ್ಥಳಿಯರೊಂದಿಗೆ ಸೇರಿ ಬೆಂಕಿ ನಂದಿಸಿದ್ದಾರೆ. ಕಾರು ಸಂಪೂರ್ಣ ಸುಟ್ಟು ಹೋಗಿದ್ದರಿಂದ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.