Author: main-admin

ಮಂಗಳೂರು: ಆಸ್ತಿ ಪಹಣಿಯಲ್ಲಿ ವಾರಸುದಾರರ ಹೆಸರು ಸೇರ್ಪಡೆ ಮಾಡಲು 4ಲಕ್ಷ ರೂ‌. ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಮುಲ್ಕಿ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಪಿರ್ಯಾದಿದಾರರು ತಮ್ಮ ಮೃತಪಟ್ಟ ಅಜ್ಜಿಯ ಹೆಸರಿನಲ್ಲಿದ್ದ ಆಸ್ತಿಯ ಪಹಣಿಯಲ್ಲಿ ವಾರಸುದಾರರ ಹೆಸರನ್ನು ಸೇರ್ಪಡೆ ಮಾಡಲು ಕಳೆದ ವರ್ಷ ಮುಲ್ಕಿ ತಾಲೂಕು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮುಲ್ಕಿ ಕಂದಾಯ ನಿರೀಕ್ಷಕರ ಕಚೇರಿಗೆ ವಿಚಾರಣೆಗಾಗಿ ಕಳುಹಿಸಲಾಗಿತ್ತು. ಈ ಅರ್ಜಿಯನ್ನು ಮುಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್ ದಿನೇಶ್ ಒಂದು ವರ್ಷಕ್ಕಿಂತ ಅಧಿಕ ಕಾಲ ಯಾವುದೇ ಕ್ರಮ ಕೈಗೊಳ್ಳದೇ ಬಾಕಿ ಇರಿಸಿಕೊಂಡಿದ್ದನು. ಪಿರ್ಯಾದಿದಾರರು ಡಿಸೆಂಬರ್ 9ರಂದು ಕಂದಾಯ ನಿರೀಕ್ಷಕರ ಕಚೇರಿಗೆ ಹೋಗಿ ಈ ಬಗ್ಗೆ ವಿಚಾರಿಸಿದ್ದಾರೆ. ಆಗ ಕಂದಾಯ ನಿರೀಕ್ಷಕ ಜಿ.ಎಸ್ ದಿನೇಶ್ ರವರು ಆಸ್ತಿಗೆ ಸಂಬಂಧಿಸಿದ ಪಹಣಿಯಲ್ಲಿ ವಾರಸುದಾರರ ಹೆಸರು ಸೇರ್ಪಡೆಗೆ 4 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಆದ್ದರಿಂದ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಪಿರ್ಯಾದಿದಾರರು ದೂರು ನೀಡಿದ್ದಾರೆ. ಡಿಸೆಂಬರ್ 19ರಂದು…

Read More

ಕಾಸರಗೋಡು: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತೃಕ್ಕರಿಪುರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಉದಿನೂರು ಸರಕಾರಿ ಹಯರ್ ಸೆಕಂಡರಿ ಶಾಲಾ ವಿದ್ಯಾರ್ಥಿಬಿ ಕೆ . ಮೀರಾ ( 17) ಎಂದು ಗುರುತಿಸಲಾಗಿದೆ. ಮನೆಯಲ್ಲಿ ನೇಣು ಬಿಗಿದು ಈ ಕೃತ್ಯ ನಡೆಸಿದ್ದಾಳೆ. ಅಸೌಖ್ಯದಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ತೃಕ್ಕರಿಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಮಂಗಳೂರು : ಬ್ಯಾಂಕ್ ಸಾಲದ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊನನ್ನು ಪೊಲೀಸರು ಬಂಧಿಸಿದ್ದಾರೆ. ಉಳಾಯಿಬೆಟ್ಟು ಕುಟಿನೋ ಪದವು ನಿವಾಸಿ ಮನೋಹರ್ ಪಿರೇರಾ ಆತ್ಮಹತ್ಯೆ ಮಾಡಿದವರು. ಆತ್ಮಹತ್ಯೆಗೂ ಮುನ್ನ ಅವರು ತಾನು ಆತ್ಮಹತ್ಯೆ ಮಾಡಲು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋನೇ ಕಾರಣ ಎಂದು ಮೊಬೈಲ್ ವೀಡಿಯೋ ಮಾಡಿದ್ದರು. ಮನೋಹರ್ ಪಿರೇರಾ ಅವರು ಉಳಾಯಿಬೆಟ್ಟುವಿನ ಕುಟಿನೋ ಪದವಿನಲ್ಲಿರುವ ತಮ್ಮ ಮನೆಯ ಮೇಲೆ ಎಂಸಿಸಿ ಬ್ಯಾಂಕ್‌ನಲ್ಲಿ 10ವರ್ಷಗಳ ಹಿಂದೆ ಸಾಲ ಪಡೆದಿದ್ದರು. ಈ ಸಾಲದ ಕಂತನ್ನು ಅವರ ದೊಡ್ಡಣ್ಣ ಮೆಲ್ಬಮ್‌ರವರು ತೀರಿಸುತ್ತಿದ್ದರು. ಕೊರೋನಾ ಸಂದರ್ಭ ಮೆಲ್ಬಮ್‌ರವರಿಗೆ ವ್ಯವಹಾರದಲ್ಲಿ ನಷ್ಟ ಉಂಟಾಗಿ ಲೋನ್ ಕಂತು ಬ್ಯಾಂಕಿಗೆ ಕಟ್ಟಲು ಸಾಧ್ಯವಾಗಿರಲಿಲ್ಲ. ಆದ್ದರಿಂದ 2ವರ್ಷಗಳ ಹಿಂದೆ ಬ್ಯಾಂಕ್‌ನವರು ಮನೆಯನ್ನು ಸೀಜ್ ಮಾಡಿದ್ದರು. ಇದರಿಂದ ಮನೋಹರ್ ಪಿರೇರಾರಿಗೆ ಮಾನಸಿಕ ಖಿನ್ನತೆ ಉಂಟಾಗಿ 2ಸಲ ಹೃದಯಾಘಾತವಾಗಿತ್ತು. ಬಳಿಕ ಸಿಸ್ಟರ್ ಕ್ರಿಸ್ಟಿನ್ ಅವರು ದತ್ತಿ ಸಂಸ್ಥೆಯಿಂದ 2023ರ ಫೆಬ್ರವರಿಯಲ್ಲಿ…

Read More

ಮಂಗಳೂರು: ನಗರದ ಕೂಳೂರು ನದಿ ದಂಡೆಯಲ್ಲಿ ಮಾರಾಟಕ್ಕೆಂದು ತಂದಿದ್ದ ಸುಮಾರು 9ಲಕ್ಷ ರೂ. ಮೌಲ್ಯದ ವಿವಿಧ ಮಾದಕದ್ರವ್ಯವನ್ನು ವಶಪಡಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಡುಪಿ, ಪೊನ್ನ, ಉದ್ಯಾವರ, ಸಂಪಿಗೆ ನಗರ ನಿವಾಸಿ ದೇವರಾಜ್ (37), ಉಡುಪಿ, ರಾಮಚಂದ್ರ ಲೈನ್ ಕಿನ್ನಿ ಮುಲ್ಕಿ ಹತ್ತಿರ ನಿವಾಸಿ ಮೊಹಮ್ಮದ್ ಫರ್ವೆಜ್ ಉಮರ್ (25), ಉಡುಪಿ, ಬ್ರಹ್ಮಗಿರಿ ನಿವಾಸಿ ಶೇಖ್ ತಹೀಮ್ (20) ಬಂಧಿತ ಆರೋಪಿಗಳು. ಬಂಧಿತರಿಂದ 5 ಕೆಜಿ ಗಾಂಜಾ, 100 ಗ್ರಾಂ ಎಂಡಿಎಂಎ, 7ಗ್ರಾಂ ಕೋಕೆನ್, 17ಗ್ರಾಂ ತೂಕದ 35 ಎಂಡಿಎಂಎ ಪಿಲ್ಸ್, 100 ಗ್ರಾಂ ಚರಸ್, 8 ಗ್ರಾಂ ಹೈಡೋವಿಡ್ ಗಾಂಜ, 3 ಎಲ್ಎಸ್‌ಡಿ ಸ್ಕ್ರಿಪ್‌ಗಳು ಸೇರಿದಂತೆ ಒಟ್ಟು 9 ಲಕ್ಷ ರೂ. ಮೌಲ್ಯದ ಮಾದಕದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಒಂದು ಚಾಕು, ತೂಕ ಮಾಪನ, ಪ್ಲಾಸ್ಟಿಕ್ ಕವರ್ ಗಳನ್ನು ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ಹುಂಡೈ ಐ10 ಕಾರು ಮತ್ತು ನಂಬರ್ ಇಲ್ಲದ ಏಕ್ಸೆಸ್ 125 ಸ್ಕೂಟರ್ ಅನ್ನು ಡ್ರಗ್ಸ್…

Read More

ಮಂಗಳೂರು: ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ಲಪಟಾಯಿಸಿದ ಗಡಿ ಭಾಗದ ಕಾಸರಗೋಡು ಜಿಲ್ಲೆಯ ಡಿವೈಎಫ್‌ಐ ಮಾಜಿ ನೇತಾರೆ ಸಚಿತಾ ರೈ (27) ವಿರುದ್ಧ ಕಾಸರಗೋಡು ಪೊಲೀಸರು ಮತ್ತೊಂದು ದಾಖಲಿಸಿಕೊಂಡಿದ್ದಾರೆ. ಕೇಸ್ ಕಾಸರಗೋಡು ಸಮೀಪದ ರಾಮದಾಸನಗರದ ಯುವತಿಯೋರ್ವೆ ನೀಡಿದ ದೂರಿನಂತೆ ಕೇಸು ದಾಖಲಾಗಿದೆ. ನಗರದ ಕೇಂದ್ರೀಯ ತೋಟಗಾರಿಕಾ ಕೇಂದ್ರದಲ್ಲಿ ಸಂಶೋಧನಾ ಕೇಂದ್ರೀಯವಿದ್ಯಾಲಯದಲ್ಲಿ ಅಧ್ಯಾಪಿಕೆ ಉದ್ಯೋಗದ ಭರವಸೆಯೊಡ್ಡಿ 13.26 ಲಕ್ಷ ರೂಪಾಯಿ ಪಡೆದು ವಂಚಿಸಿರುವುದಾಗಿ ಯುವತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. 2022ನೇ ಡಿಸೆಂಬರ್ 19ರಿಂದ 2024ನೇ ಜುಲೈ 14ರ ವರೆಗಿನ ಕಾಲಾವಧಿಯಲ್ಲಿ ಸಚಿತಾ ರೈಗೆ ಹಣ ನೀಡಿರುವುದಾಗಿ ತಿಳಿಸಲಾಗಿದೆ. ಇದೇ ರೀತಿಯ ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾಗಿರುವ ಈಗಲೂ ಸಚಿತಾ ರೈ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಳೆ.

Read More

ಮಂಗಳೂರು: ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಅವರ ಹೆಸರು ಹೇಳಿ ವ್ಯಕ್ತಿಯೊಬ್ಬರು ನೇಣಿಗೆ ಶರಣಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮನೋಹರ್ ಪಿರೇರಾ ಅವರು ಉಳಾಯಿಬೆಟ್ಟುವಿನ ಕುಟಿನೋ ಪದವಿನಲ್ಲಿರುವ ತಮ್ಮ ಮನೆಯ ಮೇಲೆ ಎಂಸಿಸಿ ಬ್ಯಾಂಕ್‌ನಲ್ಲಿ 10ವರ್ಷಗಳ ಹಿಂದೆ ಸಾಲ ಪಡೆದಿದ್ದರು. ಈ ಸಾಲದ ಕಂತನ್ನು ಅವರ ದೊಡ್ಡಣ್ಣ ಮೆಲ್ಬಮ್‌ರವರು ತೀರಿಸುತ್ತಿದ್ದರು. ಕೊರೊನಾ ಸಂದರ್ಭ ಮೆಲ್ಬಮ್‌ರವರಿಗೆ ವ್ಯವಹಾರದಲ್ಲಿ ನಷ್ಟ ಉಂಟಾಗಿ ಲೋನ್ ಕಂತು ಬ್ಯಾಂಕಿಗೆ ಕಟ್ಟಲು ಸಾಧ್ಯವಾಗಿರಲಿಲ್ಲ. ಆದ್ದರಿಂದ 2ವರ್ಷಗಳ ಹಿಂದೆ ಬ್ಯಾಂಕ್‌ನವರು ಮನೆಯನ್ನು ಸೀಜ್ ಮಾಡಿದ್ದರು. ಇದರಿಂದ ಮನೋಹರ್ ಪಿರೇರಾರಿಗೆ ಮಾನಸಿಕ ಖಿನ್ನತೆ ಉಂಟಾಗಿ 2 ಸಲ ಹೃದಯಾಘಾತವಾಗಿತ್ತು. ಬಳಿಕ ಅವರ ಅತ್ತೆ 2023ರ ಫೆಬ್ರವರಿಯಲ್ಲಿ ಮನೋಹರ್‌ರವರ ಬ್ಯಾಂಕ್ ಖಾತೆಗೆ 15 ಲಕ್ಷ ಕಳಿಸಿದ್ದಾರೆ. ಈ ಹಣದಲ್ಲಿ ಬ್ಯಾಂಕ್ ಸಾಲ ತೀರಿಸುವ ಬಗ್ಗೆ ಮನೋಹರ್ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋರೊಂದಿಗೆ ಮಾತನಾಡಿ ಸೆಲ್ಸ್ ಚೆಕ್ ನೀಡಿದ್ದರು. ಬಳಿಕ ಬ್ಯಾಂಕಿನವರು ಸೀಜ್ ಮಾಡಿದ ಮನೆಯನ್ನು 6 ತಿಂಗಳ ಹಿಂದೆ ವಾಪಸ್ ವಾಸಕ್ಕೆ…

Read More

ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ವಿಮಾನ ನಿಲ್ದಾಣದ ಸರಹದ್ದಿನಲ್ಲಿ ಕಾಮಗಾರಿ ನಡೆಸಿ ತೆರಳುತ್ತಿದ್ದ ಬೃಹತ್ ಕ್ರೇನೊಂದು ಪಲ್ಟಿಯಾಗಿ ಉರುಳಿದ ಘಟನೆ ಕೆಂಜಾರು ವಿಮಾನ ನಿಲ್ದಾಣದ ನಿರ್ಗಮನ ರಸ್ತೆಯ ಬಳಿ ಸಂಭವಿಸಿದೆ. ಕ್ರೇನ್ ಪಲ್ಟಿಯಾಗಿ ಕ್ರೇನ್ ಆಪರೇಟರ್ ಪ್ರಾಣ ಕಳೆದುಕೊಂಡಿದ್ದಾನೆ. ಮೃತರನ್ನು ಉತ್ತರ ಪ್ರದೇಶದ ಕ್ರೇನ್ ಆಪರೇಟರ್ ಅರುಣ್ ಕುಮಾರ್ ಜಾಧವ್ ಎಂದು ಗುರುತಿಸಲಾಗಿದೆ. ಕ್ರೇನ್ ಅದ್ಯಪಾಡಿಯಿಂದ ಕೆಂಜಾರ್ ಜಂಕ್ಷನ್ ಕಡೆಗೆ ವಿಮಾನ ನಿಲ್ದಾಣದ ನಿರ್ಗಮನ ಮಾರ್ಗವಾಗಿ ತೆರಳುತ್ತಿತ್ತು. ರಸ್ತೆಯ ಇಳಿಜಾರಿನ ಭಾಗದಲ್ಲಿ ವಾಹನ ನಿಯಂತ್ರಣ ಕಳೆದುಕೊಂಡು 20 ಅಡಿ ಆಳದ ಕಂದಕಕ್ಕೆ ಉರುಳಿದೆ ಎನ್ನಲಾಗಿದೆ. ಕ್ರೇನ್ ಅಡಿಗೆ ಸಿಲುಕಿಕೊಂಡ ಆಪರೇಟರ್ ಅನ್ನು ಮೇಲೆಕ್ಕೆತ್ತಲು ಸುಮಾರು ಅರ್ಧ ತಾಸು ಕಾರ್ಯಾಚರಣೆ ಮಾಡಲಾಗಿದೆ. ಇನ್ನೊಂದು ಕ್ರೇನ್ ಮೂಲಕ ಮೇಲಕ್ಕೆತ್ತಿ ಅದರಡಿಗೆ ಸಿಲುಕಿಕೊಂಡ ಅಪರೇಟರ್ ಅನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆಯಲ್ಲಿ ಅರುಣ್ ಕುಮಾರ್ ಅವರಿಗೆ ತೀವ್ರ ಗಾಯಗಳಾಗಿವೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಅರುಣ್ ಕುಮಾರ್ ಸಾವನ್ನಪ್ಪಿದ್ದಾರೆ

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ನಿವಾಸಿ ವಿದೇಶಿ ಉದ್ಯೋಗಿ ಅಪರಿಚಿತೆ ಲಕ್ಷ್ಮೀ ಎಂಬಾಕೆಯ ಮಾತು ನಂಬಿ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿ ಬರೋಬ್ಬರಿ 42.42 ಲಕ್ಷ ರೂ. ಕಳೆದುಕೊಂಡ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮ ನಿವಾಸಿ ಗಿಲ್ಬರ್ಟ್ ಡಿಸೋಜ(44) ಹಣವನ್ನು ಕಳೆದುಕೊಂಡವರು. ಗಿಲ್ಬರ್ಟ್ ಡಿಸೋಜ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಇವರಿಗೆ 2024 ಮಾರ್ಚ್ 13ರಂದು ಲಕ್ಷ್ಮೀ ಎಂಬ ಅಪರಿಚಿತೆಯೊಬ್ಬಳು ಕರೆ ಮಾಡಿ ಆನ್‌ಲೈನ್ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿದ್ದರು. ಆಕೆ ಟೆಲಿಗ್ರಾಂ ಖಾತೆಯನ್ನು ತೆರೆಯುವಂತೆ ಸೂಚಿಸಿದಂತೆ ಇವರು ಟೆಲಿಗ್ರಾಂ ಖಾತೆ ತೆರೆದಿದ್ದಾರೆ. ಬಳಿಕ ಇನ್ನೊಂದು ಟೆಲಿಗ್ರಾಂ ಲಿಂಕ್ ನೀಡಿ ಈ ಟೆಲಿಗ್ರಾಂನಲ್ಲಿ ಪ್ರೋಡಕ್ಟ್ ಮಾಹಿತಿಯನ್ನು ಹಾಕಿ 10,000ರೂ. ಪಾವತಿಸುವಂತೆ ತಿಳಿಸಿದ್ದರು. ಅದರಂತೆ ಮಾ.13ರಂದು ಅಪರಿಚಿತ ವ್ಯಕ್ತಿ ತಿಳಿಸಿದ ಖಾತೆಗೆ 10,000 ರೂ. ವರ್ಗಾಯಿಸಿದ್ದಾರೆ. ಈ ಹಣ ಅವರಿಗೆ ಮರುಪಾವತಿ ಆಗಿರುತ್ತದೆ. ಬಳಿಕ ಟ್ರೇಡಿಂಗ್ ಮಾಡಲು ಹೆಚ್ಚಿನ ಹಣವನ್ನು ಪಾವತಿಸುವಂತೆ ತಿಳಿಸಿದ್ದಕ್ಕೆ ಮಾ.15ರಿಂದ ಆಗಸ್ಟ್…

Read More

ಮಂಗಳೂರು: ಗೋವಾದಿಂದ ಮಂಗಳೂರಿಗೆ ನಿಷೇಧಿತ ಮಾದಕದ್ರವ್ಯ ಕೋಕೇನ್ ಪೂರೈಸುತ್ತಿದ್ದ ನೈಜೀರಿಯಾ ದೇಶದ ಪ್ರಜೆಯನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಆತನಿಂದ 30 ಗ್ರಾಂ ಕೋಕೆನ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನೈಜೀರಿಯಾ ದೇಶದ ಪ್ರಜೆ, ಸದ್ಯ ಗೋವಾದಲ್ಲಿ ವಾಸ್ತವ್ಯವಿರುವ ಮೈಕೆಲ್ ಒಕಾಫಾರ್ ಒಡಿಕ್ಪೊ(44) ಬಂಧಿತ ಆರೋಪಿ. 2024ರ ಮಾರ್ಚ್‌ನಲ್ಲಿ ಗೋವಾದಿಂದ ಕೋಕೆನ್ ಅನ್ನು ಖರೀದಿಸಿಕೊಂಡು ಬಂದು ಉಳ್ಳಾಲದ ಆಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಮೈದಾನದ ಬಳಿಯಲ್ಲಿ ದ್ವಿಚಕ್ರ ವಾಹನದಲ್ಲಿ ಮಾರಾಟ ಮಾಡುತ್ತಿದ್ದ ಅಂಬ್ಲಮೊಗರು ನಿವಾಸಿಗಳಾದ ಸದಕತ್ ಯು. ಹಾಗೂ ಮಹಮ್ಮದ್ ಅಶ್ಫಕ್ ಎಂಬವರನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದರು‌. ಈ ವೇಳೆ ಅವರಲ್ಲಿದ್ದ 34 ಗ್ರಾಂ ಕೋಕೆನ್ ಸೇರಿದಂತೆ 2,72,000ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿಗಳಿಗೆ ಕೊಕೇನ್ ನೀಡಿದ ಗೋವಾದ ಡ್ರಗ್ ಪೆಡ್ಲರ್ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಂಗಳೂರು ಸಿಸಿಬಿ ಪೊಲೀಸರು ಗೋವಾ ರಾಜ್ಯದ ಉತ್ತರ ಗೋವಾದ ಕಾಲನ್ ಗೂಟ್…

Read More

ಬಂಟ್ವಾಳ : ರೈಲಿನಿಂದ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆಯು ಡಿ.17ರ ಮಂಗಳವಾರದ ಬೆಳಿಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ವ್ಯಾಪ್ತಿಯ ತುಂಬೆ ಬಳಿಯ ನೆತ್ತರಕೆರೆ ಎಂಬಲ್ಲಿ ಸಂಭವಿಸಿದೆ. ಮೃತಪಟ್ಟಿರುವ ವ್ಯಕ್ತಿಯು ಕಡಬ ತಾಲೂಕಿನ ಗೂನಡ್ಕದ ನಿವಾಸಿಯಾಗಿರುವ ಶಶಿಕುಮಾರ್ ಎಸ್. ಎಂದು ಗುರುತಿಸಲಾಗಿದೆ. 11 ಗಂಟೆಯ ಸುಮಾರಿಗೆ ಸುಬ್ರಮಣ್ಯದಿಂದ ಮಂಗಳೂರಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲಿನಿಂದ ಕೆಳಗೆ ಬಿದ್ದು ಶಶಿಕುಮಾರ್ ಎಸ್. ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇವರು ರೈಲಿನ ಮೆಟ್ಟಿಲ ಮೇಲೆ ಕುಳಿತು ಪ್ರಯಾಣಿಸುತ್ತಿದ್ದರು, ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎಂದು ಸಹಪ್ರಯಾಣಿಕರು ಮಂಗಳೂರು ರೈಲ್ವೆ ಪೋಲಿಸರಿಗೆ ತಿಳಿಸಿದ್ದಾರೆ.

Read More