Author: main-admin

ಸುಳ್ಯದಲ್ಲಿ ವ್ಯಕ್ತಿಯೊಬ್ಬರು ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿ ಆತ್ಯಹತ್ಯೆಗೆ ಶರಣಾದ ಘಟನೆ ಸಂಭವಿಸಿದೆ. ‌ ಸುಳ್ಯದ ಮಂಡೆಕೋಲು ಶಿವಾಜಿನಗರ ನಿವಾಸಿ ಪುರುಷೋತ್ತಮ್ (30) ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ. “ಓಂ ಶಾಂತಿ ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ ಅಣ್ಣ” ಎಂದು ವಾಟ್ಸಾಪ್ ಗೆ ಸ್ಟೇಟಸ್ ಹಾಕಿ ಮನೆಯ ಸಮೀಪವಿರುವ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುರುಷೋತ್ತಮ್ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಪತ್ನಿ ಹಾಗೂ ಇಬ್ಬರ ಮಕ್ಕಳನ್ನ ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಉಡುಪಿ: ತೆಂಗಿನ ಕಾಯಿ ನಾರು ಸಾಗಿಸುತ್ತಿದ್ದ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಾರಿ ಸಂಪೂರ್ಣ ಸುಟ್ಟುಹೋದ ಘಟನೆ ಕೆನರಾ ಬ್ಯಾಂಕ್ ಬಳಿ ನಡೆದಿದೆ. ವಿದ್ಯುತ್ ತಂತಿ ತಗುಲಿ ಶಾರ್ಟ್ ಸರ್ಕ್ಯೂಟ್ ಆದ ಕಾರಣ ಘಟನೆ ನಡೆದಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ‌. ತಕ್ಷಣ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಕದಲ್ಲೆ ವಸತಿ, ಹೊಟೇಲ್, ಕೆಫೆಯಿದ್ದು ಬೆಂಕಿ ವ್ಯಾಪಿಸಿದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಸೂಕ್ತ ಸಮಯದಲ್ಲಿ ಅಗ್ನಿ ಶಾಮಕ ದಳದ ವಾಹನ ಬಂದು ನಂದಿಸಿದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

Read More

ಕಾರ್ಕಳ: ಹೋಂ ನರ್ಸ್‌ ಆಗಿ ಮನೆ ಸೇರಿಕೊಂಡು ಮನೆ ಯಜಮಾನರ ಗೂಗಲ್‌ ಪೇ ಪಿನ್‌ ಕದ್ದು 9 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಮುಂಬಯಿ ದಹಿಸರ್‌ನಲ್ಲಿ ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು ಕುಕ್ಕುಂದೂರಿನ ಕುಪ್ಪಬೆಟ್ಟು ನಿವಾಸಿ ಕಾರ್ತಿಕ್‌ ಶೆಟ್ಟಿ (28) ಮತ್ತು ತೆಳ್ಳಾರು ನಿವಾಸಿ ರತ್ನಾಕರ್‌ (50) ಎಂದು ಗುರುತಿಸಲಾಗಿದೆ. ಆರೋಪಿಗಳು ಶಶಿಧರ್‌ (75) ಎಂಬುವವರಿಗೆ 9 ಲ. ರೂ ವಂಚನೆ ಮಾಡಿದ್ದಾರೆ. ಶಶಿಧರ್‌ ಅವರ ಕೋರಿಕೆಯ ಮೇರೆಗೆ ಅಲೈಟ್‌ಕೇರ್‌ ಎಂಬ ಸಂಸ್ಥೆಯ ಆರೋಪಿ ರತ್ನಾಕರ್ ನಿಂದ ಆರೋಪಿ ಕಾರ್ತಿಕ್‌ ಶೆಟ್ಟಿ ಹೋಂ ನರ್ಸ್‌ ಆಗಿ ಮನೆಗೆ ಕೆಲಸಕ್ಕೆ ನಿಯೋಜನೆಗೊಂಡಿದ್ದ. ಈ ವೇಳೆ ಶಶಿಧರ್‌ ಅವರು ಬೇರೆಯವರಿಗೆ ಹಣ ವರ್ಗಾವಣೆ ಮಾಡುವ ವೇಳೆ ಆರೋಪಿಯು ಗೂಗಲ್‌ ಪೇ ಪಿನ್‌ ನಂಬರ್‌ ಗಮನಿಸಿದ್ದ. ಬಳಿಕ ಹಂತಹಂತವಾಗಿ ಲಕ್ಷಾಂತರ ರೂ. ಹಣವನ್ನು ಭಾರತ್‌ ಬ್ಯಾಂಕ್‌ ಕೋ-ಅಪರೇಟಿವ್‌ ಸೊಸೈಟಿ ಖಾತೆಗೆ ಗೂಗಲ್‌ ಪೇ ಮುಖಾಂತರ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು…

Read More

ಮಂಗಳೂರು: ಹುಂಡೈ ಕಾರೊಂದು ಹೊತ್ತಿ ಉರಿದ ಘಟನೆ ಮಂಗಳೂರಿನ ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್ ಬಳಿ ಸೋಮವಾರ ನಡೆದಿದೆ. ವೈದ್ಯೆಯೊಬ್ಬರು ತಮ್ಮ ಕಾರನ್ನು ಚಲಾಯಿಸಿಕೊಂಡು ಬಂದು ಅಪಾರ್ಟ್‌ಮೆಂಟ್ ಬಳಿ ತಂದು ನಿಲ್ಲಿಸಿದ್ದಾರೆ‌. ಈ ವೇಳೆ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅವರು ಕಾರಿನಿಂದ ಇಳಿದಿದ್ದಾರೆ. ಅಷ್ಟರಲ್ಲಾಗಲೇ ಕಾರಿನ ಮುಂಭಾಗ ಸುಟ್ಟು ಉರಿದು ಹೋಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಕಾರು ಬೆಂಕಿಗಾಹುತಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕಾಮಿಸಿ ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ.

Read More

ಮಂಗಳೂರು: ಬಾಲಕಿಯನ್ನು ಮದುವೆಯಾದ ವ್ಯಕ್ತಿ, ಆತನ ತಂದೆ- ತಾಯಿ ಮತ್ತು ಸಂತ್ರಸ್ತ ಬಾಲಕಿಯ ತಂದೆ ತಾಯಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ತ್ವರಿತ ಗತಿ ವಿಶೇಷ ನ್ಯಾಯಾಲಯ- 2 (ಪೊಕ್ಸೊ) ತಲಾ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ‌ ಬಾಲಕಿಯನ್ನು ವಿವಾಹವಾದ ಉಳ್ಳಾಲ ತಾಲ್ಲೂಕು ಮಂಜನಾಡಿ ಗ್ರಾಮದ ಮೋಟೆಪದವು ನಿವಾಸಿ ಮಹಮ್ಮದ್‌ ಇಮ್ತಿಯಾಜ್‌, ಆತನ ತಂದೆ ಕೆ.ಐ.ಮೊಹಮ್ಮದ್, ತಾಯಿ ಮೈಮುನಾ, ಸಂತ್ರಸ್ತ ಬಾಲಕಿಯ ತಂದೆ ಬಂಟ್ವಾಳ ತಾಲ್ಲೂಕು ಫರಂಗಿಪೇಟೆ ರಾಮಲ್‌ಕಟ್ಟೆಯ ಅಬ್ದುಲ್ ಖಾದರ್‌ ಹಾಗೂ ಬಾಲಕಿಯ ತಾಯಿ ರಮ್ಲತ್ ಶಿಕ್ಷೆಗೆ ಒಳಗಾದವರು. ಮಹಮ್ಮದ್‌ ಇಮ್ತಿಯಾಜ್‌ 2023ರ ಮೇ 31ರಂದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವಿವಾಹವಾಗಿದ್ದ. ಆತನ ತಂದೆ, ತಾಯಿ ಹಾಗೂ ಸಂತ್ರಸ್ತ ಬಾಲಕಿಯ ತಂದೆ- ತಾಯಿ ಸೇರಿ ಈ ಮದುವೆ ಮಾಡಿಸಿದ್ದರು. 2023ರ ಜೂನ್ 1ರಂದು ಉಳ್ಳಾಲ ತಾಲ್ಲೂಕು ಕೈರಂಗಳ ಗ್ರಾಮದ ನಂದರಪದವಿನಲ್ಲಿರುವ ಎಸ್.ಕೆ ಮಲ್ಟಿಪರ್ಪಸ್ ಹಾಲ್‌ನಲ್ಲಿ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಅಪ್ತಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾದ ಬಗ್ಗೆ ಮಹಿಳಾ ಮತ್ತು…

Read More

ಉಳ್ಳಾಲ: ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಹಿಳೆಯೊಬ್ಬರು ಸಮುದ್ರ ಪಾಲಾಗಿ ಸಾವನ್ನಪ್ಪಿದ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಸೋಮವಾರ (ಡಿ.16) ಸಂಭವಿಸಿದೆ. ದೇರೆಬೈಲ್ ನ ದಿ.ಜಗದೀಶ್ ಭಂಡಾರಿ ಅವರ ಪತ್ನಿ ಉಷಾ (72) ಮೃತ ಮಹಿಳೆ. ಉಷಾ ಅವರ ತಂಗಿ ನಿಶಾ ಭಂಡಾರಿ ಅವರ ಗಂಡ ಕರುಣಾಕರ ಭಂಡಾರಿ ಎಂಬವರು ಕೆಲವು ದಿನಗಳ ಹಿಂದೆ ನಿಧನರಾಗಿದ್ದು, ಸೋಮವಾರ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಸಂಬಂಧಿಕರ ಜೊತೆಗೆ ಸೋಮೇಶ್ವರಕ್ಕೆ ಆಗಮಿಸಿದ್ದರು. ಪಿಂಡ ಪ್ರದಾನದ ಬಳಿಕ ಸಮುದ್ರ ದಲ್ಲಿ ಸ್ನಾನ ಪ್ರಕ್ರಿಯೆ ಮುಗಿಸುತ್ತಿದ್ದಾಗ ಸಂಬಂಧಿಕರು ನೋಡುತ್ತಿದ್ದಂತೆಯೇ ಕಾಲು ಜಾರಿ ಸಮುದ್ರ ಪಾಲಾಗಿದ್ದಾರೆ. ಸಹಾಯಕ್ಕಾಗಿ ಕೂಗಿದಾಗ ಸ್ಥಳೀಯರು ಸಮುದ್ರಕ್ಕೆ ಧುಮುಕಿದ್ದು, ಅವರನ್ನು ಸಮುದ್ರ ತಟಕ್ಕೆ ತರುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.ಉಷಾ ಅವರು ಏನ್.ಎಮ್.ಪಿ.ಟಿಯಲ್ಲಿ ನಲ್ವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಅಸಿಸ್ಟೆಂಟ್ ಸೆಕ್ರೆಟರಿ ಆಗಿ ನಿವೃತ್ತರಾಗಿದ್ದರು. ಮೃತರು ಪುತ್ರಿಯನ್ಬು ಅಗಲಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆ ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ರವಾನಿಸಲಾಗಿದೆ.

Read More

ಬೆಳ್ತಂಗಡಿ: ಧರ್ಮಸ್ಥಳ – ಸುಬ್ರಹ್ಮಣ್ಯ ರಸ್ತೆಯ ಕೊಕ್ಕಡ ಸಮೀಪದ ಕಾಪಿನಬಾಗಿಲು ಎಂಬಲ್ಲಿ ಬಸ್ಸಿನಡಿಗೆ ಬೈಕ್‌ ಬಿದ್ದ ಪರಿಣಾಮ ಸವಾರ ಮೃತಪಟ್ಟ ಘಟನೆ ನಡೆದಿದೆ. ಮೃತ ಬೈಕ್‌ ಸವಾರನನ್ನು ಮೂಡುಬೈಲು ನಿವಾಸಿ ಮಾಧವ ಆಚಾರ್ಯ (46) ಎಂದು ತಿಳಿಯಲಾಗಿದೆ. ಖಾಸಗಿ ಬಸ್ಸಿನಲ್ಲಿ ಆಂಧ್ರಪ್ರದೇಶ ಮೂಲದ ಅಯ್ಯಪ್ಪ ಮಾಲಾಧಾರಿಗಳು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದರು. ಆ ಬಸ್‌, ಕೊಕ್ಕಡದಿಂದ ಮೂಡುಬೈಲಿನ ತನ್ನ ಮನೆಗೆ ಹೋಗುತ್ತಿದ್ದ ಮಾಧವ ಆಚಾರ್ಯ ಅವರ ಬೈಕಿಗೆ ಕಾಪಿನಬಾಗಿಲು ಸಪ್ತಗಿರಿ ಕಾಂಪ್ಲೆಕ್ಸ್‌ ಸಮೀಪ ಮುಖಾಮುಖಿ ಢಿಕ್ಕಿ ಆಗಿದೆ. ಅಪಘಾತದ ರಭಸಕ್ಕೆ ಬೈಕ್‌ ಸವಾರನ ತಲೆಗೆ ಗಂಭೀರ ಗಾಯವಾಗಿದ್ದು, ತತ್‌ಕ್ಷಣ ಅವರನ್ನು ಆ್ಯಂಬುಲೆನ್ಸ್‌ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮೃತರು ಮರದ ಕೆಲಸ (ಬಡಗಿ) ಮಾಡುತ್ತಿದ್ದರು. ತಂದೆ, ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

Read More

ಉಳ್ಳಾಲ: ಜಿಲ್ಲೆಯ ಉಳ್ಳಾಲ ಹತ್ತಿರದ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಓವರ್‌ ಬ್ರಿಡ್ಜ್ ಬಳಿಯ ಸರ್ವೀಸ್‌ ರಸ್ತೆಯಲ್ಲಿ ಅತೀ ವೇಗದಲ್ಲಿ ಆಗಮಿಸಿದ ಜೀಪ್‌, ಸ್ಕೂಟರ್‌ಗೆ ಢಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ್ದಾರೆ. ಸಹ ಸವಾರೆ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ಸಂಪಿಗೆದಡಿ ನಿವಾಸಿ ಅರುಣ್‌ ಕುಮಾರ್‌ (43) ಮೃತಪಟ್ಟವರು ಎಂದು ತಿಳಿಯಲಾಗಿದೆ. ಸ್ಕೂಟರ್‌ನ ಹಿಂಬದಿಯಲ್ಲಿದ್ದ ರಾಣಿಪುರ ನಿವಾಸಿ ಹೇಮಾವತಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರುಣ್‌ ಅವರು ತೊಕ್ಕೊಟ್ಟು ಕಾಪಿಕಾಡಿನ ವೈನ್‌ ಆ್ಯಂಡ್‌ ಡೈನ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ವೈಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ಶನಿವಾರ ರಾತ್ರಿ ಕೆಲಸ ಮುಗಿಸಿ ತನ್ನ ಸ್ಕೂಟರ್‌ನಲ್ಲಿ ಬಾರ್‌ನ ಸ್ವಚ್ಛತಾ ಸಿಬಂದಿ ರಾಣಿಪುರ ನಿವಾಸಿ ಹೇಮಾವತಿಯವರನ್ನು ಕುಳ್ಳಿರಿಸಿಕೊಂಡು ಹೆದ್ದಾರಿಯ ಸರ್ವಿಸ್‌ ರಸ್ತೆಯಲ್ಲಿ ಮನೆಗೆ ಹಿಂದಿರುಗುವಾಗ ಜೀಪ್‌ ಮುಖಾಮುಖೀ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಸ್ಕೂಟರ್‌ ಸವಾರ ಅರುಣ್‌ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮಂಗಳೂರು…

Read More

ಉಡುಪಿ: ಒಬ್ಟಾಕೆ ಜತೆ ನಿಶ್ಚಿತಾರ್ಥ ಮಾಡಿಕೊಂಡು ಅದನ್ನು ಬಚ್ಚಿಟ್ಟು ಮತ್ತೋರ್ವಳನ್ನು ವಿವಾಹವಾಗಿ ಬಳಿಕ ನಿಶ್ಚಿತಾರ್ಥವಾದ ಯುವತಿಯನ್ನು ಮದುವೆ ಮಾಡಿಕೊಂಡು ಆಕೆಗೆ ದೈಹಿಕ, ಮಾನಸಿಕ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪತಿ ಹಾಗೂ ಕೃತ್ಯಕ್ಕೆ ಸಹಕರಿಸಿದ ಇತರ ಐವರ ವಿರುದ್ಧ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವರಾಜ್‌ 2024ರ ಜೂ. 23ರಂದು ಬ್ರಹ್ಮಾವರದ ಹಂದಾಡಿಯ ಚೈತ್ರಾ (36) ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಈ ವಿಚಾರ ಬಚ್ಚಿಟ್ಟು 2024ರ ಜುಲೈ 29ರಂದು ನಂದಿನಿ ಎನ್ನುವಾಕೆಯನ್ನು ವಿವಾಹವಾಗಿದ್ದ. 2024ರ ಸೆ. 5ರಂದು ಬ್ರಹ್ಮಾವರ ಮದರ್‌ ಪ್ಯಾಲೆಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಚೈತ್ರಾಳನ್ನು ಮದುವೆಯಾಗಿದ್ದ. ಮದುವೆ ಮುಗಿದ ಬಳಿಕ ಚೈತ್ರಾಳನ್ನು ಆತನ (ನವರಾಜ್‌) ಮನೆಯಾದ ಚಿಕ್ಕಮಗಳೂರು ಜಿಲ್ಲೆಯ ಲಕ್ಯ ಹೋಬಳಿ, ಸಿಂಧಿಗೆರೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಚೈತ್ರಾಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ. ಇತರರಾದ ಜಯಣ್ಣ ಎಸ್‌.ಡಿ., ಸುಂದರಮ್ಮ, ಅಮೃತಾ, ಪವಿತ್ರಾ ಅವರೊಂದಿಗೆ ಸೇರಿ ಆಕೆಗೆ ನೆರೆಕೆರೆಯವರೊಂದಿಗೆ ಮಾತನಾಡದಂತೆ ನಿರ್ಬಂಧಿಸಿ ಮನೆಯೊಳಗೆ ಕೂಡಿ ಹಾಕಿದ್ದ. ಅವರೆಲ್ಲರೂ ಸೇರಿ…

Read More

ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಇದೆ. ಇದು ತೀವ್ರವಾದ ನೋವು, ಜ್ವರ, ವಾಂತಿ, ವಾಕರಿಕೆ ರೋಗಲಕ್ಷಣಗಳನ್ನ ನೀಡುತ್ತದೆ. ಇದು ಒಮ್ಮೊಮ್ಮೆ ತುಂಬಾ ಮುಜುಗರ ತರಬಹುದು. ಮೂತ್ರಪಿಂಡದ ಕಲ್ಲುಗಳ ರಚನೆಯ ಮೊದಲು, ನಮ್ಮ ದೇಹವು ಕೆಲವು ರೀತಿಯ ಸಂಕೇತಗಳನ್ನ ನೀಡುತ್ತದೆ. ಈಗ ಕಂಡುಹಿಡಿಯೋಣ. ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು – ಮೂತ್ರಪಿಂಡದ ಕಲ್ಲುಗಳು ಮೂತ್ರ ವಿಸರ್ಜನೆಯ ಸಮಯದಲ್ಲಿ ತೀವ್ರವಾದ ನೋವಿನ ಸಂಕೇತವಾಗಿದೆ. ಮೂತ್ರದಲ್ಲಿ ರಕ್ತ – ಕೆಲವೊಮ್ಮೆ ಮೂತ್ರ ವಿಸರ್ಜನೆಯ ಸಮಯದಲ್ಲಿ ರಕ್ತ ಹೊರಬರುತ್ತದೆ. ಇದು ಮೂತ್ರಪಿಂಡದ ಕಲ್ಲುಗಳಿಂದಲೂ ಉಂಟಾಗುತ್ತದೆ. ನೀವು ಈ ರೋಗಲಕ್ಷಣವನ್ನ ಅನುಭವಿಸುತ್ತಿದ್ದರೆ, ನೀವು ಮೂತ್ರಪಿಂಡದ ಕಲ್ಲುಗಳನ್ನು ಹೊಂದಿರಬಹುದು. ಈ ಕಲ್ಲುಗಳ ಘರ್ಷಣೆಯಿಂದಾಗಿ ಮೂತ್ರದಲ್ಲಿ ರಕ್ತ ಬರುತ್ತದೆ. ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ. ಕಡಿಮೆ ಮೂತ್ರದ ಉತ್ಪಾದನೆ – ಕೆಲವರು ಮೂತ್ರಪಿಂಡದ ಕಲ್ಲುಗಳನ್ನು ಹೊಂದಿರುವಾಗ ಸಾಕಷ್ಟು ಮೂತ್ರವನ್ನು ಉತ್ಪಾದಿಸುವುದಿಲ್ಲ. ಇದು ಕಡಿಮೆ ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ. ನೀವು ದಿನಕ್ಕೆ ಒಂದು ಅಥವಾ ಎರಡು ಬಾರಿ…

Read More