Author: main-admin

ಉಡುಪಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಉಡುಪಿ ಪೊಲೀಸರು 76 ಬಡಗುಬೆಟ್ಟು ಗ್ರಾಮದ ಬಲಾಯಿಪಾದೆ ಜಂಕ್ಷನ್ ಬಳಿ ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ಪ್ರಶಾಂತ್ ಹಾಗೂ ಪ್ರವೀಣ್ ಎಂದು ಗುರುತಿಸಲಾಗಿದೆ. ಆರೋಪಿಗಳಿಬ್ಬರ ಬಳಿ ಇದ್ದ ವಿವಿಧ ಬ್ರ್ಯಾಂಡ್‌ನ ಮದ್ಯದ ಸಾಚೇಟ್, ಬೀಯರ್ ಬಾಟಲ್, ನೀರಿನ ಬಾಟಲ್‌ಗಳು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು: ಗ್ಲಾಸ್‌ಗಳಿಗೆ ಕಪ್ಪು ಬಣ್ಣದ ಫಿಲ್ಮ್‌ ಸನ್‌ ಫಿಲ್ಮ್‌ ಅಥವಾ ಟಿಂಟೆಡ್‌ ಕ್ಲಾಸ್‌ ಅಂಟಿಸಿಕೊಂಡು ಸಂಚರಿಸುತ್ತಿರುವ ವಾಹನಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್‌ ತಿಳಿಸಿದ್ದಾರೆ. ಮೇ 2ರಿಂದ 11ರ ವರೆಗೆ 10 ದಿನಗಳಲ್ಲಿ 504 ಕಾರುಗಳ ವಿರುದ್ಧ ಪ್ರಕರಣ ಕಾಖಲಿಸಿ ₹2.53 ಲಕ್ಷ ದಂಡ ವಿಧಿಸಲಾಗಿದೆ. ಅಲ್ಲದೇ ವಾಹನಗಳಿಗೆ ಅಳವಡಿಸಿರುವ ಟಿಂಟೆಡ್‌ ಗ್ಲಾಸ್‌, ಸ್ಟಿಕರ್‌ಗಳನ್ನು ವಾಹನ ಚಾಲಕರಿಂದಲೇ ತೆಗೆಸಿ ಸೂಕ್ತ ತಿಳಿವಳಿಕೆ ನೀಡಲಾಗಿದೆ. ಈ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ. ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸ್‌ ವತಿಯಿಂದ ವಿವಿಧ ಕಡೆಗಳಲ್ಲಿ ವಿಶೇಷ ಚೆಕ್‌ಪೋಸ್ಟ್‌ಗಳನ್ನು ತೆರೆದು ವಾಹನಗಳ ತಪಾಸಣೆ ಹಾಗೂ ದಾಖಲಾತಿ ಪರಿಶೀಲನೆ ನಡೆಸಲಾಗುತ್ತಿದೆ. ವಾಹನಗಳಲ್ಲಿ ಟಿಂಟೆಡ್‌ ಗ್ಲಾಸ್‌ ಬಳಸದಂತೆ ಹಾಗೂ ಅಂತಹ ಟಿಂಟೆಡ್‌ ಗ್ಲಾಸ್‌ಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ನ ಆದೇಶ ಇದೆ. ವಾಹನಗಳ ಗಾಜುಗಳಿಗೆ ಇದನ್ನು ಅಂಟಿಸುವಂತಿಲ್ಲ. ಸಾರ್ವಜನಿಕರು ತಮ್ಮ ವಾಹನಗಳಿಗೆ ಅಂಟಿಸಿರುವ ಇಂತಹ ವಸ್ತುಗಳನ್ನು…

Read More

ಉಡುಪಿ : ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಪುಟ್ಟ ಮಗುವೊಂದು ಆಕಸ್ಮಿಕವಾಗಿ ದೇವಾಳಯದ ಕೆರೆಯಲ್ಲಿ ಮುಳುಗಿ ಸಾವನಪ್ಪಿ ಘಟನೆ ನಂದಿಕೂರಿನಲ್ಲಿ ಮೇ 11ರಂದು ಸಂಭವಿಸಿದೆ.ಮೃತಪಟ್ಟ ಮಗುವನ್ನು ಕಾಪು, ಕುರ್ಕಾಲು ಗ್ರಾಮದ ನಿವಾಸಿಗಳಾದ ಸತ್ಯನಾರಾಯಣ (38) ಮತ್ತು ಸೌಮ್ಯ ಅವರ ಪುತ್ರ ವಾಸುದೇವ (4) ಎಂದು ಗುರುತಿಸಲಾಗಿದೆ. ಸತ್ಯನಾರಾಯಣ ಅವರು ನೀಡಿದ ದೂರಿನ ಪ್ರಕಾರ, ಕುಟುಂಬವು ನಂದಿಕೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಿವಾಹಕ್ಕೆ ಹಾಜರಾಗಿತ್ತು. ಮಧ್ಯಾಹ್ನ 2:00 ಗಂಟೆ ಸುಮಾರಿಗೆ ಸೌಮ್ಯ ಅವರು ತಮ್ಮ ಕಿರಿಯ ಮಗುವಿಗೆ ಸಭಾಂಗಣದ ಒಳಗೆ ಊಟ ಮಾಡಿಸುತ್ತಿದ್ದರು. ವಾಸುದೇವ ಕೂಡ ತಾಯಿಯ ಸಮೀಪವಿದ್ದನು. ಮಗುವಿಗೆ ಊಟ ಮಾಡಿಸಿದ ನಂತರ, ಸೌಮ್ಯ ಅವರು ಕೈ ತೊಳೆಯಲು ಹೊರಗೆ ಹೋದರು ಎನ್ನಲಾಗಿದೆ. ಹಿಂತಿರುಗಿದಾಗ, ವಾಸುದೇವ ಕಾಣೆಯಾಗಿರುವುದು ಅವರ ಗಮನಕ್ಕೆ ಬಂದಿತು. ತಕ್ಷಣ ಅವರು ಸಭಾಂಗಣದಲ್ಲಿದ್ದ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ತಿಳಿಸಿ ಆವರಣದಲ್ಲಿ ಹುಡುಕಾಟ ನಡೆಸಿದ್ದಾರೆ. ಎಷ್ಟು ಹುಡುಕಿದರೂ, ಮಗು ಸಭಾಂಗಣದ ಒಳಗೆ ಪತ್ತೆಯಾಗಲಿಲ್ಲ. ಸುಮಾರು 2:15…

Read More

ಬೆಂಗಳೂರು : ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಪಾಕ್ ಸೈಬರ್ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರಿಂದ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದು, ಅಪರಿಚಿತ ಲಿಂಕ್, ಇ-ಮೇಲ್ ಗಳ ಮೇಲೆ ನಿಗಾವಹಿಸಿ, ಎಕ್ಸ್ ಕ್ಲೂಸಿವ್ ನ್ಯೂಸ್ ಲಿಂಕ್ ಗಳು ಹಾಗೂ ಎಪಿಕೆ ಫೈಲ್ಸ್, ಅಪರಿಚಿತ ಫಾರ್ವರ್ಡ್ ಲಿಂಕ್ ಕ್ಲಿಕ್ ಮಾಡದಂತೆ ಸೂಚನೆ ನೀಡಿದ್ದಾರೆ. ವಾಟ್ಸಪ್ ಸೆಕ್ಯೂರಿಟಿ ಅಪ್ಡೇಟ್ ಮಾಡಿಕೊಳ್ಳಲು ಸೂಚನೆ ಸಹ ನೀಡಲಾಗಿದೆ. ನಾಗರಿಕರು ಜಾಗೃತರಾಗಿರುವಂತೆ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

Read More

ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂಘಟನೆಯ 2025-26 ನೇ ಸಾಲಿನ ವಾರ್ಷಿಕ ಚುನಾವಣೆಯು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ನಿವಾಸದ ಸಭಾ ಭವನದಲ್ಲಿ ಇಂದು ಮೇ 11ರಂದು ಆದಿತ್ಯವಾರ ನಡೆಯಿತು. ನೂತನ ಕೇಂದ್ರೀಯ ಅಧ್ಯಕ್ಷರಾಗಿ ಸಂತೋಷ್ ಡಿಸೋಜ ಬಜ್ಪೆ ಸರ್ವಾನುಮತದಿಂದ ಆಯ್ಕೆಯಾದರು. ಕೇಂದ್ರೀಯ ಆದ್ಯಾತ್ಮಿಕ ನಿರ್ದೇಶಕರಾದ ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾರವರು ಚುನಾವಣೆಯ ಮೊದಲು ನೂತನ ಪೋಪ್ ಲಿಯೋ 14ರವರ ಚುನಾವಣೆಯನ್ನು ಸ್ಮರಿಸಿ ಅದೇ ರೀತಿ ಪ್ರಾರ್ಥನೆಯ ಮೂಲಕ ಚುನಾವಣೆಯನ್ನು ನಡೆಸಲು ಮಾರ್ಗದರ್ಶನ ನೀಡೀದರು. ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಪ್ರಥಮ ಉಪಾಧ್ಯಕ್ಷ ಲೋರೆನ್ಸ್ ಡಿಸೋಜ ಸುರತ್ಕಲ್, ದ್ವಿತೀಯ ಉಪಾಧ್ಯಕ್ಷ ಲಿಯೋ ರೊಡ್ರಿಗಸ್ ಮಡಂತ್ಯಾರ್, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ ದೇರೆಬೈಲ್, ಸಹ ಕಾರ್ಯದರ್ಶಿ ಆಲ್ವಿನ್ ರೊಡ್ರಿಗಸ್ ಮೂಡಬಿದಿರೆ ಅಲಂಗಾರ್, ಖಜಾಂಚಿ ಫ್ರಾನ್ಸಿಸ್ ಮೊಂತೇರೊ ಮರಿಯಾಶ್ರಮ್ ತಲಪಾಡಿ, ಸಹ ಖಜಾಂಚಿ ಲವೀನಾ ಗ್ರೆಟ್ಟಾ ಡಿಸೋಜ ರಾಣಿಪುರ ಇವರೆಲ್ಲರೂ ಅವಿರೋಧವಾಗಿ ಆಯ್ಕೆಯಾದರು. ಮಾಜಿ ಅಧ್ಯಕ್ಷ ಲ್ಯಾನ್ಸಿ ಡಿಕುನ್ಹಾ ಚುನಾವಣಾಧಿಕಾರಿಯಾಗಿ ಮತ್ತು…

Read More

ಕಾರ್ಕಳ: ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಪೂಜಾರಿ (34) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾರ್ಕಳ ತಾಲೂಕಿನ‌ ನಿಟ್ಟೆಯಲ್ಲಿ ರಾಕೇಶ್ ಮೆಹಂದಿ ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಆಗಿದೆ. ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೇ 11ರಂದು ತಡರಾತ್ರಿ ಮಿಯ್ಯಾರು ಎಂಬಲ್ಲಿ ತನ್ನ ಗೆಳೆಯನ ಮೆಹೆಂದಿ ಕಾರ್ಯಕ್ರಮದಲ್ಲಿ ಡಾನ್ಸ್‌ ಮಾಡುತ್ತಿದ್ದ ಸಂದರ್ಭ ರಾಕೇಶ್‌ ಪೂಜಾರಿ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಕಾರ್ಕಳ ಗಾಜ್ರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಬಳಿಕ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆಗಾಗಲೇ ರಾಕೇಶ್‌ ಪೂಜಾರಿ ಹೃದಯಾಘಾತದಿಂದ ನಿಧನ ಹೊಂದಿದರು ಎಂದು ತಿಳಿದುಬಂದಿದೆ. ಮೃತರು ತಾಯಿ ಹಾಗೂ ತಂಗಿಯನ್ನು ಅಗಲಿದ್ದಾರೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಮುಕ್ತ ಸುದ್ದಿ ವಾಹಿನಿಯಲ್ಲಿ ಕಾಮಿಡಿ ಶೋ ನಡೆಸುತ್ತಿದ್ದ ರಾಕೇಶ್‌ ಪೂಜಾರಿ ಅವರು ಪ್ರಶಂಸ ನಾಟಕ ತಂಡದಲ್ಲಿ ಕಲಾವಿದರಾಗಿದ್ದರು. ಕಿರುತೆರೆಯಲ್ಲಿ ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ…

Read More

ಎಂಸಿ.ಸಿ.ಬ್ಯಾ0ಕಿನ 113ನೇ ಸಂಸ್ಥಾಪಕರ ದಿನಾಚರಣೆಯನ್ನು ದಿನಾಂಕ 10.05.2025ರ0ದು ಎಂ.ಸಿ.ಸಿ. ಬ್ಯಾಂಕಿನ ಆಡಳಿತ ಕಛೇರಿಯ ಅವರಣದಲ್ಲಿ ಆಚರಿಸಲಾಯಿತು. ಈ ಆಚರಣೆಯು ಬ್ಯಾಂಕಿನ ಸಂಸ್ಥಾಪಕ ಶ್ರೀ ಪಿ.ಎಫ್.ಎಕ್ಸ್. ಸಲ್ಡಾನ್ಹಾ ಅವರ ಪರಂಪರೆಗೆ ಗೌರವ ಸಲ್ಲಿಸಿ ಸಹಕಾರಿ ವಲಯದಲ್ಲಿ ಬ್ಯಾಂಕಿನ ನಿರಂತರ ಪ್ರಗತಿಯನ್ನು ಗುರುತಿಸಿತು. ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಬ್ಯಾಂಕಿನ ಇತಿಹಾಸ ಮತ್ತು ಪ್ರಗತಿಯ ಕುರಿತಾದ ಸಾಕ್ಷಚಿತ್ರವನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಲಾಯಿತು. ಬ್ಯಾ0ಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತ್ಯದ ಪಿಆರ್‌ಒ ವಂ. ಫಾ| ಡೆನಿಸ್ ಡೆಸಾ, ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಪ್ರಾಂತಿಯ ಸುಪಿರೀಯರ್ ವಂ. ಸಿ| ಕ್ಲಾರ ಮಿನೇಜಸ್, ಯುಎಫ್‌ಸಿ, ಪ್ರಜ್ಞ ಕೌನ್ಸೆಲಿಂಗ್ಸೆ0ಟರ್‌ನ ನಿರ್ದೇಶಕಿ ಪ್ರೊ. ಹಿಲ್ಡಾ ರಾಯಪ್ಪನ್, ಮಂಗಳೂರು ಕೊOಕಣ್ಸ್ ದುಬಾಯ್, ಅಧ್ಯಕ್ಷ ಶ್ರೀ ಸ್ಟೇಫನ್ ಮಿನೇಜಸ್ ಮತ್ತು ಬ್ಯಾಂಕಿನ ಮಹಾಪ್ರಬಂಧಕ ಶ್ರೀ ಸುನಿಲ್ ಮಿನೇಜಸ್ ಹಾಜರಿದ್ದರು. ಸ್ವಾಗತ ಭಾಷಣದಲ್ಲಿ ಶ್ರೀ ಅನಿಲ್ ಲೋಬೊ ಅವರು, ಗಣ್ಯರು, ಆಡಳಿತ ಮಂಡಳಿ…

Read More

ಕಾರ್ಕಳ: ಭಾರತ- ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಆದರೆ ಶತ್ರು ರಾಷ್ಟ್ರ ಪಾಕಿಸ್ತಾನ ಭಾರತದ ಮೇಲೆ ಸೈಬರ್ ದಾಳಿಯನ್ನೂ ನಡೆಸುತ್ತಿದೆ. ಎಚ್ಚರವಾಗಿರಿ ಎನ್ನುವಂತಹ ಮಾಹಿತಿಯೂ ಇತ್ತೀಚೆಗೆ ಲಭ್ಯವಾಗಿತ್ತು. ಇದರ ಬೆನ್ನಲ್ಲೇ ಕಾರ್ಕಳದ ಬಜಗೋಳಿಯ ಯುವಕನಿಗೆ ಪಾಕಿಸ್ತಾನದಿಂದ ಮೆಸೇಜ್ ಬಂದಿದೆ. ಪಾಕಿಸ್ತಾನದ ನಂಬರ್ ನಿಂದ ಬಜಗೋಳಿಯ ಸುಶಾಂತ್ ಎಂಬವರಿಗೆ ಹಾಯ್ ಹೌ ಆರ್ ಯು ಎನ್ನುವಂತಹ ಸಂದೇಶ ಬಂದಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರುವ ಅವರು ಪಾಕಿಸ್ತಾನದಿಂದ ಈ ರೀತಿಯ ಮೆಸೇಜ್ ಗಳು ಬರುತ್ತಿದೆ. ನಾನು ಅದಕ್ಕೆ ಪ್ರತಿಕ್ರಿಯೆ ನೀಡದೆ ಬ್ಲಾಕ್ ಮಾಡಿದ್ದೇನೆ ಎಂದು ಹೇಳಿದರು. ಸಾರ್ವಜನಿಕರು ಈ ರೀತಿಯ ಮೆಸೇಜ್ ಬಂದ್ರೆ ಕೂಡಲೇ ಬ್ಲಾಕ್ ಮಾಡಬೇಕು ಎಂದು ಕಾರ್ಕಳ ಎಎಸ್ ಪಿ ಡಾ. ಹರ್ಷಪ್ರಿಯಂವದ ಸೂಚನೆ ನೀಡಿದ್ದಾರೆ.

Read More

ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉದ್ವಿಗ್ನ ಸ್ಥಿತಿಯ ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದರೆ, ಸುಳ್ಳು ಸುದ್ದಿ ಹಬ್ಬಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಶನಿವಾರದಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೈನಿಕರಿಗೆ ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡಬೇಕು. ದೇಶದ ವಿಚಾರ ಬಂದಾಗ ನಾವೆಲ್ಲಾ ಒಂದೇ ಎಂದರು.ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಕುರಿತು ಮಾತನಾಡಿದ ಅವರು, ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಸಮರ್ಪಕ ತನಿಖೆ ನಡೆಸುತ್ತಿದ್ದಾರೆ. ಹಾಗಾಗಿ ಇದನ್ನು ಎನ್‌ಐಎಗೆ ವಹಿಸಬೇಕೆ ಬೇಡವೆ ಎಂಬ ಬಗ್ಗೆ ಯೋಚಿಸಬೇಕಿದೆ. ಪೊಲೀಸರು ಈಗಾಗಲೇ ಪ್ರಕರಣದ ಮೂಲ ತಿಳಿಯುವಲ್ಲಿಯೂ ಯಶಸ್ವಿಯಾಗಿದ್ದು, ಬೇರೆ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಬಿಜೆಪಿಯವರು ಎನ್‌ಐಎ ತನಿಖೆಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಸರ್ಕಾರ ತೀರ್ಮಾನಿಸಲಿದೆ. ಬಿಜೆಪಿಯವರ ಬಳಿ ಸ್ಪಷ್ಟ ಮಾಹಿತಿ ಇದ್ದರೆ ನೀಡಲಿ. ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಅವರ ಊಹಾಪೋಹಗಳಿಗೆ…

Read More

ಮಂಗಳೂರು: ಅಡ್ಡ ಬಂದ ವಾಹನವೊಂದನ್ನು ತಪ್ಪಿಸಲು ಹೋಗಿ ಕಂಟೈನರ್ ಲಾರಿಯೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಕೈಕಂಬ ಬಳಿಯ ಪ್ಲೈಓವರ್ ಕೆಳಗೆ ನಡೆದಿದೆ. ದೊಡ್ಡ ಕಂಟೈನರ್ ಲಾರಿಯ ಸಾಗುತ್ತಿರುವ ವೇಳೆ ಏಕಾಏಕಿ ಅಡ್ಡ ಬಂದ ವಾಹನವೊಂದನ್ನು ತಪ್ಪಿಸುವ ಸಲುವಾಗಿ ಚಾಲಕನ ವಾಹನವನ್ನು ತಿರುಗಿಸಿದ್ದಾನೆ, ಈ ವೇಳೆ ಕಂಟೈನರ್ ಲಾರಿಯ ಮುಂಭಾಗ ಸಂಪೂರ್ಣ ಟರ್ನ್ ಆಗಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಲಾರಿ ಮುಂಭಾಗಕ್ಕೆ ಹಾನಿಯಾಗಿದೆ. ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

Read More