ಜೈಸಲ್ಮೇರ್: ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ ಎರಡೂ ಕಡೆಯಿಂದ ಪ್ರಬಲ ದಾಳಿ ನಡೆಯುತ್ತಿದೆ. ಪಾಕಿಸ್ತಾನದ ಸತತ ದಾಳಿಯನ್ನು ಭಾರತ ವಿಫಲಗೊಳಿಸಿದೆ. ಪಾಕ್ ಪ್ರಧಾನಿ ಮನೆ ಬಳಿಯೂ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ 3 ಫೈಟರ್ ಜೆಟನ್ನು ಭಾರತ ಹೊಡೆದುರುಳಿಸಿದೆ. ಈ ಪೈಕಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಪಾಕಿಸ್ತಾನದ ಫೈಟರ್ ಜೆಟ್ ಹೊಡೆದುರುಳಿಸಿದ ಭಾರತ ಪಾಕಿಸ್ತಾನದ ಪೈಲೆಟನ್ನು ಜೀವಂತವಾಗಿ ಸೆರೆ ಹಿಡಿದಿದೆ.
Author: main-admin
ಮಂಗಳೂರು/ಉಡುಪಿ: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ’ಆಪರೇಷನ್ ಸಿಂಧೂರ್” ಕಾರ್ಯಾಚರಣೆ ಬೆನ್ನಲ್ಲೇ ರಾಜ್ಯದ ಕರಾವಳಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ 324 ಕಿಮೀ ಉದ್ದದ ಕರಾವಳಿ ಪ್ರದೇಶದಲ್ಲಿ ಮಂಗಳೂರು, ಮಲ್ಪೆ, ಕಾರವಾರ, ಕುಮಟಾ, ಭಟ್ಕಳ, ಹೆಜಮಾಡಿ, ಹೊನ್ನಾವರ, ಬೇಲೆಕೇರಿ ಮತ್ತು ಗಂಗೊಳ್ಳಿಯಲ್ಲಿ ಸಿಎಸ್‌ಪಿ ಕೇಂದ್ರಗಳು ಸೇರಿವೆ. ಈ ಎಲ್ಲಾ ಕೇಂದ್ರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಒಂಬತ್ತು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 340 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅದರಲ್ಲಿ 180 ಸಿಬ್ಬಂದಿಯನ್ನು ಕರಾವಳಿ ನಿಯಂತ್ರಣ ಪಡೆಗೆ ಸೇರಿಸಲಾಗಿದೆ. 13 ದೋಣಿಗಳು ಮತ್ತು ಜೆಟ್ ಸ್ಕೀ ಗಳನ್ನು ಬಳಸಿಕೊಂಡು 24/7 ಕಣ್ಗಾವಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕರಾವಳಿ ಭದ್ರತಾ ಎಸ್‌ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. “ಪಹಲ್ಗಾಮ್ ಘಟನೆಯ ನಂತರ, ನಮ್ಮ ಸಿಬ್ಬಂದಿ ಹೆಚ್ಚಿನ ಎಚ್ಚರಿಕೆಯಲ್ಲಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಇಂದು ಕಾರವಾರದಲ್ಲಿ ಅಣಕು ನಾಗರಿಕ ರಕ್ಷಣಾ ಕವಾಯತು ನಡೆಸಲಾಯಿತು. ಸಮುದ್ರದಲ್ಲಿ ಕಾರ್ಯನಿರ್ವಹಿಸುವ…
ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಕಾರ್ಯಚರಿಸುತ್ತಿರುವ M11 ಎನರ್ಜಿ ಟ್ರಾನಿಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಐದು ಲಕ್ಷ ಮೌಲ್ಯದ ಅತ್ಯಾಧುನಿಕ L.P.D ಟೆಸ್ಟ್ ಹಾಗೂ ರೀನಲ್ ಫಂಕ್ಷನ್ ಟೆಸ್ಟ್ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ. ಪಡುಬಿದ್ರಿ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದ ಜನರಿಗೆ ಉಚಿತ ಸೇವೆಯೊಂದಿಗೆ ಇದು ಸಹಕಾರಿಯಾಗಲಿದ್ದು ಇದು ಆರೋಗ್ಯ ಕೇಂದ್ರದ ಫಲಾನುಭವಿಗಳ ದೂರ ಪ್ರಯಾಣ ಶ್ರಮವನ್ನು ತಪ್ಪಿಸುತ್ತದೆ.M11 ಸಂಸ್ಥೆಯು ಪರಿಸರದಲ್ಲಿ ಹಾನಿಕಾರಕ ರಾಸಾಯನಿಕ ತ್ಯಾಜ್ಯಗಳು ವಿಷಾನಿಲಗಳು ಸೇರಿ ವಾತಾವರಣ ಕಲುಷಿತಗೊಳ್ಳುವುದನ್ನು ತಗ್ಗಿಸುವ, ಅದಾಗಲೇ ಬಳಸಿದ ಅಡುಗೆ ಎಣ್ಣೆ, ಖಾದ್ಯ ತೈಲಗಳು ಮತ್ತೆ ಆಹಾರ ವ್ಯವಸ್ಥೆಯನ್ನು ಸೇರಿ ಜನರ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುವುದನ್ನು ತಪ್ಪಿಸುವ ಮೂಲಕ ಸ್ವಚ್ಛ ಆರೋಗ್ಯಕರ ಜಗತ್ತನ್ನು ಸೃಷ್ಟಿಸುವ ಗುರಿಯನ್ನಿರಿಸಿಕೊಂಡು ಕಾರ್ಯ ತತ್ಪರವಾಗಿದೆ. ಮುಖ್ಯವಾಗಿ ವಿವಿಧ ಮೂಲಗಳಿಂದ ಕಲುಷಿತ ತ್ಯಾಜ್ಯ ಬಳಸಿದ ಎಣ್ಣೆಯನ್ನು ಸಂಗ್ರಹಿಸಿ ಅದನ್ನು ಸಂಸ್ಕರಿಸಿ ಪ್ರಬಲ- ಪರ್ಯಾಯ ಜೈವಿಕ ಇಂಧನವಾಗಿ ಪರಿವರ್ತಿಸಿ ಇಂಧನಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲೂ ನಮ್ಮ…
ಕಾರ್ಕಳ: ಸುಹಾಸ್ ಶೆಟ್ಟಿ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಬೇಕೆಂದು ಒತ್ತಾಯಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಶಾಸಕರು ಮೇ 9 ರಂದು ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆಯ ಹಿಂದೆ 100 ಕ್ಕೂ ಹೆಚ್ಚು ಜನರು ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂಬ ಬಲವಾದ ಅನುಮಾನವಿದೆ. ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣ ಹರಿದಾಡಿದೆ. ಪ್ರಕರಣದಲ್ಲಿ ಕೆಲವು ಮಂಗಳೂರು ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಸಹ ಕೇಳಿ ಬಂದಿವೆ. ಜೊತೆಗೆ ಕೊಲೆಗೆ ಸಹಾಯ ಮಾಡಿದ ಆರೋಪ ಹೊತ್ತಿರುವ ಮಹಿಳೆಯರನ್ನು ಇನ್ನೂ ಬಂಧಿಸಲಾಗಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆಯಂತಹ ಸಮಗ್ರ ತನಿಖೆಯಿಂದ ಮಾತ್ರ ಸಂಪೂರ್ಣ ಸತ್ಯ ಹೊರಬರಲು ಸಾಧ್ಯ. ಆದರೆ ಇಂತಹ ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಸರ್ಕಾರದಿಂದ ಹೆಚ್ಚಿನ ಇಚ್ಛಾಶಕ್ತಿ ಇಲ್ಲ ಎಂದು ತೋರುತ್ತದೆ. ಆದ್ದರಿಂದ, ಎರಡೂ ಕರಾವಳಿ ಜಿಲ್ಲೆಗಳ ಶಾಸಕರು ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ರಾಜ್ಯಪಾಲರನ್ನು ಒತ್ತಾಯಿಸಲಿದ್ದಾರೆ ಎಂದು ಶಾಸಕ ಸುನಿಲ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಗುಂಪುಗಳು ಮತ್ತು ಇತರ ಸಾಮಾಜಿಕ ಮಾಧ್ಯಮಗಳಂತಹ ವೇದಿಕೆಗಳಲ್ಲಿ ಕೋಮು ದ್ವೇಷ, ಸುಳ್ಳು ಮಾಹಿತಿ ಮತ್ತು ಬೆದರಿಕೆ ಸಂದೇಶಗಳನ್ನು ಹರಡುವುದರ ವಿರುದ್ಧ ಮಂಗಳೂರು ನಗರ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಇಂತಹ ಅಪರಾಧಗಳ ಪ್ರಕರಣಗಳು ತೀವ್ರವಾಗಿ ಹೆಚ್ಚಿವೆ. ಪೊಲೀಸ್ ಇಲಾಖೆ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಹೇಳಿದ್ದಾರೆ. ಕಳೆದ ವಾರವೊಂದರಲ್ಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಇಂತಹ 30 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಎಸಿಪಿ ನೇತೃತ್ವದ ವಿಶೇಷ ತನಿಖಾ ತಂಡವು ಈ ಪ್ರಕರಣಗಳ ತನಿಖೆ ನಡೆಸುತ್ತಿದೆ ಮತ್ತು ಈಗಾಗಲೇ ಹಲವಾರು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದರು.ಕೆಲವು ಅಪರಾಧಿಗಳು ನಕಲಿ ಪ್ರೊಫೈಲ್‌ಗಳು ಅಥವಾ ವಿದೇಶಗಳಲ್ಲಿ ನೋಂದಾಯಿಸಲಾದ ಖಾತೆಗಳ ಮೂಲಕ ದುರುದ್ದೇಶಪೂರಿತ ವಿಷಯವನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದು ಅನುಪಮ್ ಅಗರ್‌ವಾಲ್ ಹೇಳಿದರು. ಆದಾಗ್ಯೂ, ಅಂತಹ ಖಾತೆಗಳನ್ನು ಸಹ ಪತ್ತೆಹಚ್ಚಬಹುದು ಮತ್ತು ಅವುಗಳನ್ನು…
ಬೆಳ್ತಂಗಡಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಆಕೆ ಗರ್ಭವತಿಯಾಗಿದ್ದು, ಆರೋಪಿ ಯುವಕನ ವಿರುದ್ಧ ವೇಣೂರು ಪೊಲೀಸರಿಗೆ ದೂರು ನೀಡಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಆರೋಪಿ ಶಿರ್ಲಾಲು ಗ್ರಾಮದ ಸನತ್ (28) ಎಂಬ ಯುವಕನನ್ನು ವೇಣೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿ ಸನತ್ ಬಾಲಕಿಯ ತಂದೆಯ ಕಾರಿನಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಆಗಾಗ್ಗೆ ಮನೆಗೆ ಬಂದವನು ಬಾಲಕಿ ಜೊತೆ ಸಲುಗೆಯಿಂದ ಇದ್ದ. ಆಕೆಯ ಜನ್ಮ ದಿನದಂದು ಬಂದಾತ ಅದೇ ದಿನ ರಾತ್ರಿ ಅಲ್ಲೇ ಉಳಿದುಕೊಂಡಿದ್ದು, ಬಲಾತ್ಕಾರದಿಂದ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ದೂರಿನಲ್ಲಿ ಆರೋಪಿಸಲಾಗಿದೆ. ಇದನ್ನೂ ಓದಿ: ಬಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಕಳವಳಕಾರಿ ವೀಡಿಯೋ ವೈರಲ್ ಬಳಿಕ ನಿರಂತರವಾಗಿ ಆಕೆಗೆ ಬೆದರಿಕೆ ಹಾಕಿ ಅತ್ಯಾಚಾರ ನಡೆಸಿದ್ದಾನೆ. ಇದೀಗ ಆಕೆ ಗರ್ಭಿಣಿಯಾಗಿದ್ದು, ಆರೋಪಿ ಸನತ್ ವಿರುದ್ಧ ಬಾಲಕಿ ವೇಣೂರು ಪೊಲೀಸರಿಗೆ ದೂರು ನೀಡಿದ್ದಾಳೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ: ಮೀನು ಮಾರಾಟದ ಹಣವನ್ನು ಕಂಪೆನಿಗೆ ನೀಡದೆ ಸ್ವಂತಕ್ಕೆ ಬಳಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ನ್ಯಾಯಾಲಯದ ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರ, ದಕ್ಷಿಣ ಭಾರತ ಕಡೆಗಳಿಗೆ ಹೋಲ್ ಸೇಲ್ ಮೀನು ಮಾರಾಟ ವ್ಯವಹಾರ ನಡೆಸುತ್ತಿದ್ದ ಅಬ್ದುಲ್ ರೆಹಮಾನ್ ಎಂಬವರ ಶರ್ಫುನ್ನೀಸ ಫಿಶ್ ಅಸೋಸಿಯೇಟ್ಸ್‌ನಲ್ಲಿ ಪ್ರಶಾಂತ ಎಂಬಾತ ಕೆಲವು ವರ್ಷಗಳಿಂದ ಮಾರ್ಕಿಟಿಂಗ್ ವ್ಯವಹಾರವನ್ನು ನಡೆಸುತ್ತಿದ್ದನು. ಈತ ಕಮಿಷನ್ ಆಧಾರದಲ್ಲಿ ಮೀನು ವ್ಯವಹಾರ ನಡೆಸಿದ ಗ್ರಾಹಕರಿಂದ ಹಣವನ್ನು ಸಂಗ್ರಹಿಸಿ ಸಂಸ್ಥೆಗೆ ನೀಡುತ್ತಿರುವ ಕೆಲಸ ಮಾಡಿಕೊಂಡಿದ್ದನು. ಇತ್ತೀಚಿಗೆ ಪರಿಶೀಲಿಸಿದಾಗ ವ್ಯವಹಾರದಿಂದ ಬರಬೇಕಾದ ಹಣವು ಸರಿಯಾಗಿ ಸಂಸ್ಥೆಯ ಖಾತೆಗೆ ಜಮಾ ಆಗದೇ ಇರುವುದು ಕಂಡುಬಂದಿದ್ದು, ಈ ಬಗ್ಗೆ ಮೀನು ಖರೀದಿಸಿದ ಗ್ರಾಹಕರನ್ನು ವಿಚಾರಿಸಿದಾಗ ಮೀನು ವ್ಯವಹಾರದ ಹಣವನ್ನು ಪ್ರಶಾಂತ ಅವರಿಗೆ ನೀಡಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ಪರಿಶೀಲಿಸಿದಾಗ ಒಟ್ಟು 90,00,000ರೂ. ಹಣವು ಸಂಸ್ಥೆಗೆ ಜಮಾ ಆಗದೇ ಇರುವುದು ತಿಳಿದು ಬಂದಿದೆ. ಪ್ರಶಾಂತ್ ಆ ಹಣವನ್ನು ಸಂಸ್ಥೆಗೆ ಜಮಾ ಮಾಡದೇ ಸ್ವಂತಕ್ಕೆ…
ಮಂಗಳೂರು: ಇಲ್ಲಿನ ಕುಲಶೇಖರ ಚರ್ಚ್ ಬಳಿಯ ಅಂಗಡಿಯ ಹಿಂದೆ ಕೊಳೆತ ಶವ ಪತ್ತೆಯಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಮೃತ ವ್ಯಕ್ತಿಯನ್ನು ಶಕ್ತಿನಗರದ ನಿವಾಸಿ ಸುರೇಂದ್ರ (46) ಎಂದು ಗುರುತಿಸಲಾಗಿದೆ. ಸುರೇಂದ್ರ ಅಪಸ್ಮಾರದಿಂದ ಬಳಲುತ್ತಿದ್ದರು ಮತ್ತು ಆ ಪ್ರದೇಶದಲ್ಲಿ ಕಸ ಸಂಗ್ರಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಂಗಡಿಯ ಹಿಂಭಾಗದ ಶೌಚಾಲಯದ ಬಳಿ ಕೊಳೆತ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಕದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಸಹಾಯಕ ಪೊಲೀಸ್ ಆಯುಕ್ತ ಪ್ರತಾಪ್ ಸಿಂಹ ಥೋರಟ್ ಕೂಡ ಪರಿಶೀಲನೆ ನಡೆಸಿದ್ದಾರೆ. ಪೊಲೀಸರಿಂದ ತನಿಖೆ ನಡೆಯುತ್ತಿದೆ.
ಮಂಗಳೂರು: ಕರಾವಳಿಯ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೆಮ್ಮೆಯ ಸಂಸ್ಥೆಯಾಗಿದ್ದು ತನ್ನದೇ ಆದ ಹೆಗ್ಗಳಿಕೆ ಗಳಿಸಿರುವ ರೋಹನ್ ಕಾರ್ಪೊರೇಶನ್ ಸಂಸ್ಥೆಯು ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರನ್ನು ಘೋಷಣೆ ಮಾಡಿದೆ. ರೋಹನ್ ಕಾರ್ಪೊರೇಶನ್ ಸಂಸ್ಥೆಯ ರಾಯಭಾರಿಯಾಗಿ ಬಾಲಿವುಡ್ ನಟ ಶಾರುಖ್ ಖಾನ್ ತನ್ನ ಸಹಿ ಮಾಡುವ ಮೂಲಕ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ್ದಾರೆ. ಅತ್ಯಾಧುನಿಕ ವಿಶ್ವಾಸ, ಗುಣಮಟ್ಟ, ಆಧುನಿಕತೆಗೆ ಒಗ್ಗಿಕೊಳ್ಳುವಂತೆ ಗ್ರಾಹಕರ ಮನಗೆದ್ದು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ವಿಸ್ತರಿಸಿರುವ ರೋಹನ್ ಕಾರ್ಪೊರೇಶನ್ ಸಂಸ್ಥೆ ಇದೀಗ ನಟ ಶಾರುಖ್ ಖಾನ್ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿ ತನ್ನ ಪಯಣದಲ್ಲಿ ಮತ್ತೊಂದು ಯಶಸ್ಸನ್ನು ಸಾಧಿಸಿದೆ.
ಮಂಗಳೂರು: ಮಂಗಳೂರು ನಗರದ ಬಜ್ಪೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಬಜ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ರಶೀದ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ರಶೀದ್ ಅವರು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇಬ್ಬರು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಿಂದೂ ಜಾಗರಣ ವೇದಿಕೆಯು ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಹೆಡ್ ಕಾನ್‌ಸ್ಟೆಬಲ್ ರಶೀದ್ ಪರೋಕ್ಷವಾಗಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿತ್ತು. ಈ ಆರೋಪದ ಬೆನ್ನಲ್ಲೇ, ಹಿಂದೂ ಮುಖಂಡ ಮೂಡಬಿದ್ರೆಯ ಸಮಿತ್ ರಾಜ್ ದರೆಗುಡ್ಡೆ ಮತ್ತು ಹಿಂದೂ ಜಾಗರಣ ವೇದಿಕೆ ಮುಖಂಡ ಕೆ.ಟಿ. ಉಲ್ಲಾಸ್ ಎಂಬುವರು ಯಾವುದೇ ಆಧಾರವಿಲ್ಲದೆ ತಮ್ಮ ಹೆಸರನ್ನು ಈ ಪ್ರಕರಣದಲ್ಲಿ ತಳುಕು ಹಾಕಿ ಅವಹೇಳನಕಾರಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ರಶೀದ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಇದರಿಂದ ತಮ್ಮ ತೇಜೋವಧೆಯಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.ಈ ದೂರಿನ ಆಧಾರದ ಮೇಲೆ ಬಜ್ಪೆ ಪೊಲೀಸರು ಸಮಿತ್…









