Author: main-admin

ತುಮಕೂರು: ತುಮಕೂರಿನ ಪ್ರಾದೇಶಿಕ ಸಾರಿಗೆ ಕಚೇರಿ ಮೇಲೆ ಅಕ್ರಮವಾಗಿ ನೊಂದಣಿ ಪ್ರಕ್ರಿಯೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬುಧವಾರ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಗುರುವಾರವೂ ತನಿಖೆಯನ್ನು ಮುಂದುವರೆಸಿದ್ದು, ದಾಖಲೆಗಳ ತಪಾಸಣೆ ನಡೆಸುತ್ತಿದ್ದಾರೆ.ಈ ವೇಳೆ ಆರ್ ಟಿ ಓ ಕಚೇರಿಯಲ್ಲಿ ಅಕ್ರಮ ನೋಂದಣಿ ಪ್ರಕ್ರಿಯೆಯಿಂದ ಸರ್ಕಾರಕ್ಕೆ ಸುಮಾರು 300 ಕೋಟಿ ರೂಪಾಯಿ ತೆರಿಗೆ ನಷ್ಟವಾಗಿದೆ ಎಂಬುದು ಬೆಳಕಿಗೆ ಬಂದಿದೆ. ಹೌದು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಯಾಗಿರುವ ಸುಮಾರು 6 ಸಾವಿರಕ್ಕೂ ಹೆಚ್ಚಿನ ಟ್ರ್ಯಾಕ್ಟರ್‌ಗಳಲ್ಲಿ 2,500 ಕೃಷಿ ದೃಢೀಕರಣ ಪತ್ರ (ಬೋನಾಫೈಡ್) ನೀಡಿ ಮಧ್ಯವರ್ತಿಯೊಬ್ಬ ಟ್ರ್ಯಾಕ್ಟರ್ ಗಳನ್ನು ನೋಂದಣಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.ಸಾರಿಗೆ ಅಧಿಕಾರಿಗಳು ಹಾಗೂ ಮಧ್ಯವರ್ತಿಯಿಂದ ನಡೆದಿರುವ ಈ ಅಕ್ರಮದಲ್ಲಿ ಸರ್ಕಾರಕ್ಕೆ 300 ಕೋಟಿಗೂ ಹೆಚ್ಚು ತೆರಿಗೆ ನಷ್ಟವಾಗಿದೆ ಎನ್ನಲಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ನಕಲಿ ಕೃಷಿ ದೃಢೀಕರಣ ಪತ್ರ ನೀಡಿ ನೋಂದಣಿ ಮಾಡಿಸಿರುವ ಕಡತಗಳ ಬೆನ್ನತ್ತಿದ್ದಾರೆ. 2,500 ಟ್ರ್ಯಾಕ್ಟರ್, 500ಕ್ಕೂ ಹೆಚ್ಚು ಜೆಸಿಬಿಗಳನ್ನು ನಕಲಿ ಕೃಷಿ ದೃಢೀಕರಣ ಪತ್ರವನ್ನು…

Read More

ಸುರತ್ಕಲ್ : ಮಂಗಳೂರು ಹೊರವಲಯದ ಸುರತ್ಕಲ್ ಮುಕ್ಕ  ಶ್ರೀನಿವಾಸ ಕಾಲೇಜಿನಲ್ಲಿ ರ‍್ಯಾಗಿಂಗ್  ನಡೆದಿದೆ. ಕಾಲೀಜಿನ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗೆ ರ‍್ಯಾಗಿಂಗ್ ಮಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲೇಜಿನಲ್ಲಿ ಮೊದಲನೇ ವರ್ಷದ ವೈದ್ಯಕೀಯ ಮನೋಶಾಸ್ತ್ರ ವ್ಯಾಸಂಗ ಮಾಡುತ್ತಿರುವ 19 ವರ್ಷದ ವಿದ್ಯಾರ್ಥಿ ರ‍್ಯಾಗಿಂಗ್ ಪಿಡುಗಿಗೆ ಒಳಗಾದ ವಿದ್ಯಾರ್ಥಿಯಾಗಿದ್ದು ನವೆಂಬರ್ 25 ರಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಿದಾಯಿಸ್ ಎಂಬಾತ ಲೊಕೇಶನ್ ಕಳುಹಿಸಿ, ಅಲ್ಲಿಗೆ ಬರುವಂತೆ ಕಿರಿಯ ವಿದ್ಯಾರ್ಥಿಗೆ ತಿಳಿಸಿದ್ದಾನೆ. ಆತ ತನ್ನ ಇತರ ಸ್ನೇಹಿತರನ್ನು ಕರೆದುಕೊಂಡು ನಿಗದಿತ ಸ್ಥಳಕ್ಕೆ ತೆರಳಿದ್ದಾನೆ. ಹಿರಿಯ ವಿದ್ಯಾರ್ಥಿಯ ಕೊಠಡಿಯೊಳಗೆ ಹೋದ ಬಳಿಕ, ಅಲ್ಲಿಯೇ ಇದ್ದ ಸಿದಾಯಿಸ್, ಅಮಲ್ ಕೃಷ್ಣ ಹಾಗೂ ಸಾಜೀದ್ ಅವರುಗಳು ಅವಾಚ್ಯ ಶಬ್ದಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ರೇಗಿಸಿದ್ದಾರೆ. ಬಳಿಕ ಕೊಠಡಿ ಬಾಗಿಲನ್ನು ಮುಚ್ಚಿ ಕಿರಿಯ ವಿದ್ಯಾರ್ಥಿಗೆ ಹಾಡಲು ಮತ್ತು ನೃತ್ಯ ಮಾಡಲು ಹೇಳಿದ್ದಾರೆ.ಇದಕ್ಕೆ ಕಿರಿಯ ವಿದ್ಯಾರ್ಥಿ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿರೋಧ ಒಡ್ಡಿದಾಗ ಹಿರಿಯ ವಿದ್ಯಾರ್ಥಿಗಳಾದ…

Read More

ಬೆಳ್ತಂಗಡಿ : ಭಜರಂಗದಳ ಕಾರ್ಯಕರ್ತರು ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ಕು ಗೋವುಗಳನ್ನು ರಕ್ಷಣೆ ಮಾಡಿದ ಘಟನೆ ಉಜಿರೆಯಲ್ಲಿ ಸಂಭವಿಸಿದ. ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಸಂದರ್ಭ, ಉಜಿರೆಯ ಗುರಿಪಳ್ಳದಲ್ಲಿ ಭಜರಂಗದಳದ ಕಾರ್ಯಕರ್ತರು ತಡೆದು ನಿಲ್ಲಿಸಿ ಗೋವುಗಳನ್ನು ರಕ್ಷಿಸಿದ್ದಾರೆ. ರಕ್ಷಿಸಿದ ಗೋವುಗಳನ್ನು ಬೆಳ್ತಂಗಡಿ ಠಾಣೆಗೆ ಒಪ್ಪಿಸಲಾಗಿದೆ.

Read More

ಪುತ್ತೂರು: ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಗೆ ಬೈಕ್‌ ಢಿಕ್ಕಿ ಹೊಡೆದು ಆಕೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲನಾ ಪರವಾನಿಗೆ ಇಲ್ಲದ ಬೈಕ್‌ ಸವಾರನಿಗೆ ಕೋರ್ಟ್ ದಂಡ ವಿಧಿಸಿದ್ದು, ಬೈಕ್ ಮಾಲಿಕನಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.  2022ರ ಫೆ.27ರಂದು ನೆಟ್ಟಣಿಗೆ ಮುಟ್ನೂರು ಕೊಟ್ಯಾಡಿಯಲ್ಲಿ ಈ ಅಪಘಾತ ಸಂಭವಿಸಿತ್ತು. ಅಪಘಾತದ ವೇಳೆ ಮುಳಿಯೂರು ನಿವಾಸಿ ಶಾಹೀದ್‌ ಕೇರಳ ರಾಜ್ಯದ ನೋಂದಣಿಯ ಬೈಕ್ ಚಲಾಯಿಸುತ್ತಿದ್ದ. ಈತ ಚಲಾಯಿಸುತ್ತಿದ್ದ ಬೈಕ್ ರಸ್ತೆ ಬದಿಯಲ್ಲಿ ನಿಂತಿದ್ದ ದುಗ್ಗಮ್ಮ (55) ಅವರಿಗೆ ಢಿಕ್ಕಿ ಹೊಡೆದಿತ್ತು. ಈ ಬಗ್ಗೆ ಸಂಪ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಸವಾರ ಶಾಹೀದ್‌ ಮತ್ತು ಬೈಕ್‌ ಮಾಲಕ ಮಹಮ್ಮದ್‌ ಶಾಕೀರ್‌ ವಿರುದ್ಧ ಸೆಕ್ಷನ್‌ 279, 338, 304(ಎ)1 ರಂತೆ ಪ್ರಕರಣ ದಾಖಲಿಸಿ, ಜೊತೆಗೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪುತ್ತೂರು ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶ ದೇವರಾಜ್‌ ವೈ.ಎಚ್‌.ಅವರ ಪೀಠ ಚಾಲನಾ ಪರವಾನಿಗೆ ಇಲ್ಲದ ಬೈಕ್‌ ಸವಾರ…

Read More

ಬೆಳ್ತಂಗಡಿ : ಬೆಳ್ತಂಗಡಿ ಮಿತ್ತಬಾಗಿಲು ದ್ವಿತೀಯ ಪಿಯುಸಿ ವಿಧ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಯುವಕನೊಬ್ಬನ ಮೇಲೆ ಇದೀಗ ವಿಧ್ಯಾರ್ಥಿನಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಳ್ತಂಗಡಿಯಲ್ಲಿ ಪ್ರಿಯಕರನ ವಂಚನೆಗೆ ಬಲಿಯಾಗಿ 17 ವರ್ಷದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ಘಟನೆ ನಡೆದಿದೆ. 17 ವರ್ಷದ ಹೃಷ್ಟಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಳು. ನವೆಂಬರ್​ 20 ರಂದು ಹೃಷ್ಟಿ ವಿಷ ಸೇವಿಸಿದ್ದರು. ಚಿಕಿತ್ಸೆ ಫಲಿಸದೇ ಅಪ್ರಾಪ್ತ ಯುವತಿ ಹೃಷ್ವಿ ಕೊನೆಯುಸಿರೆಳೆದಿದ್ದಾರೆ. ಹೃಷ್ಟಿ ಹಾಗೂ ಆಕೆಯ ಸಂಬಂಧಿ ಯುವಕ ಪ್ರವೀಣ್‌ ಪ್ರೀತಿ ಮಾಡುತ್ತಿದ್ದರು ಎಂದು ಹೇಳಲಾಗಿದ್ದು, ಮದುವೆ ಆಗೋದಾಗಿ ನಂಬಿಸಿ ವಂಚನೆ ಆರೋಪ ಮಾಡಲಾಗಿದೆ. ಪ್ರವೀಣ್ ವಿರುದ್ಧ ಹೃಷ್ವಿ ಪೋಷಕರಿಂದ ದೂರು ದಾಖಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಹೃಷ್ವಿ ಆತ್ಮಹತ್ಯೆ ಬಳಿಕ ಆರೋಪಿ ಪ್ರವೀಣ್​ ಪರಾರಿಯಾಗಿದ್ದಾನೆ. ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸಂಬಂಧಿ ಪ್ರವೀಣ್ ಜೊತೆ ಹೃಷ್ಟಿ ಪ್ರೇಮದಲ್ಲಿದ್ದಳು.…

Read More

ಕಾಸರಗೋಡು: ನಗರದ ಸಮೀಪ ಮರ ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿದ್ದೆ ಮಾಡಿದ್ದವರ ಮೇಲೆ ಹರಿದು ಇಬ್ಬರು ಮಕ್ಕಳು ಸಹಿತ ಐವರು ಸಾವಿಗೀಡಾದ ಘಟನೆ ತೃಶ್ಶೂರಿನ ನಾಟಿಗದಲ್ಲಿ ನಡೆದಿದೆ. ನಾಟಿಗ ಜಿ.ಕೆ. ಥಿಯೇಟರ್‌ ಪರಿಸರದ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯಲ್ಲಿ ನಡೆದ ದುರಂತದಲ್ಲಿ ಕಾಳಿಯಪ್ಪನ್‌ (50), ನಾಗಮ್ಮ (39), ಬಂಗಾಳಿ (20), ಜೀವನ್‌ (4) ಮತ್ತು ಇನ್ನೊಂದು ಮಗು ಸಾವಿಗೀಡಾಗಿದ್ದಾರೆ. ಮೃತರು ಗೋವಿಂದಪುರಂ ಚೆಮ್ಮಣಂತೋಡ್‌ ನಿವಾಸಿಗಳು ಎಂದು ತಿಳಿದು ಬಂದಿದೆ. ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More

“ಜೋಜು ಜಾರ್ಜ್” ಅಭಿನಯದ ಮಲಯಾಳಂ ಚಿತ್ರ “ಪಣಿ” ಚಿತ್ರದ ಟ್ರೇಲರ್ ಗೆ ಎಲ್ಲರಲ್ಲೂ ಮೆಚ್ಚುಗೆ ಗೆ ವ್ಯಕ್ತವಾಗುತ್ತಿದೆ. ಕಳೆದ ತಿಂಗಳು ಕೇರಳದಲ್ಲಿ ಬಿಡುಗಡೆಯಾದ ಜೋಜು ಜಾರ್ಜ್ ಅಭಿನಯದ ಮತ್ತು ನಿರ್ದೇಶನದ ‘ಪಣಿ’ ಚಿತ್ರವು ಕನ್ನಡಕ್ಕೆ ಡಬ್‍ ಆಗಿ ನ. 29ರಂದು ರಾಜ್ಯದ್ಯಂತ ಬಿಡುಗಡೆಯಾಗುತ್ತಿದೆ. ಖ್ಯಾತ ಹೊಂಬಾಳೆ ಫಿಲಂಸ್ ಅವರು ಕರ್ನಾಟಕದಲ್ಲಿ ಈ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಜೋಜು ಜಾರ್ಜ್, ನಿರ್ದೇಶನದ ಈ ಚಿತ್ರವು ಕಳೆದ ತಿಂಗಳು ಮಲಯಾಳಂನಲ್ಲಿ ಬಿಡುಗಡೆಯಾಗಿ ಎಲ್ಲರಲ್ಲೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದೀಗ ಕನ್ನಡಕ್ಕೆ ಡಬ್‍ ಆಗಿ ನ. 29 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲಂಸ್‍ ಸಂಸ್ಥೆಯು ಕನ್ನಡ ಅವತರಣಿಕೆಯನ್ನು ಬಿಡುಗಡೆ ಮಾಡುತ್ತಿದೆ. ಇದೊಂದು ಮಾಸ್‍ ಮತ್ತು ಕಮರ್ಷಿಯಲ್‍ ಚಿತ್ರವಾಗಿದೆ. ಕೇರಳದಲ್ಲಿ ಬಿಡುಗಡೆಯಾಗಿ ಯಶಸ್ವಿಯಗಿದೆ. ಸೇಡಿನ ಕಥೆಯಾದ್ದರಿಂದ, ಎಲ್ಲಾ ಕಡೆ ಸಲ್ಲುತ್ತದೆ ಎಂಬ ನಂಬಿಕೆ ಇದೆ. ಕನ್ನಡದಲ್ಲೂ ಪ್ರೇಕ್ಷಕರು ಚೆನ್ನಾಗಿ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ. ಇದೊಂದು ಕಾಲ್ಪನಿಕ ಕಥೆಯಾಗಿದ್ದರು ಎರಡು ವರ್ಷಗಳ ಕಾಲ ಚರ್ಚೆ…

Read More

ಉಡುಪಿ: ಪೊಲೀಸ್ ಅಧಿಕಾರಿ ಎಂದು ನಂಬಿಸಿ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ವಿದ್ಯಾ ಎನ್ನುವವರಿಗೆ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ನಿಮ್ಮ ಆಧಾರ್ ನಂಬರ್ ಬಳಸಿ ಮುಂಬೈಯಲ್ಲಿ ಯಾರೋ ಸಿಮ್ ಖರೀದಿ ಮಾಡಿ ಅದರಲ್ಲಿ ಮೆಸೇಜ್ ಮತ್ತು ಟ್ರೇಡಿಂಗ್ ಮೆಸೇಜ್ ಕಳಿಸುತ್ತಿದ್ದು ನಿಮ್ಮ ಎಲ್ಲ ಮೊಬೈಲ್ ನಂಬರ್ ಲಾಕ್ ಮಾಡಲಾಗುವುದು ಎಂದು ಹೇಳಿದ ಬಳಿಕ ಕರೆಯನ್ನು ಸಹರಾ ಪೊಲೀಸ್ ಠಾಣೆಗೆ ವರ್ಗಾಯಿಸುವುದಾಗಿ ತಿಳಿಸಿದ ಅತ್ತ ಕಡೆಯಿಂದ ಮೋಹನ್ ಕುಮಾರ್ ಎಂಬಾತ ಮಾತನಾಡಿ, ತಾನು ಸಹರಾ ಪೊಲೀಸ್ ಠಾಣೆಯ ತನಿಖಾಧಿಕಾರಿ ಎಂದು ತಿಳಿಸಿ ನಿಮ್ಮ ಆಧಾರ್ ಕಾರ್ಡ್ ಮುಖಾಂತರ ಮುಂಬೈ ಎಸ್‌ಬಿಐ ಬ್ಯಾಂಕಿನಲ್ಲಿ ಖಾತೆ ತೆರದಿದ್ದು ಈ ಖಾತೆಯನ್ನು ಆಪರೇಟ್ ಮಾಡಿ ಸದರಿ ಖಾತೆಗೆ ಹ್ಯೂಮೆನ್ ಟ್ರಾಫಿಕಿಂಗ್ ಮತ್ತು ಮನಿ ಲ್ಯಾಂಡಿಂಗ್ ಮುಖಾಂತರ ಹಣ ವರ್ಗಾವಣೆ ಮಾಡಿರುತ್ತಾರೆ ಖಾತೆ ನಿಮ್ಮ ಹೆಸರಿನಲ್ಲಿ ಇರುವುದರಿಂದ ನಿಮ್ಮ ಎಲ್ಲ ಅಕೌಂಟ್ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ನಂಬಿಸಿದ್ದಾನೆ. ಪೊಲೀಸ್ ಅಧಿಕಾರಿ…

Read More

ವಿಟ್ಲ: ಅನಾರೋಗ್ಯದಿಂದ ಯುವತಿಯೋರ್ವಳು ಮೃತಪಟ್ಟ ಘಟನೆ ನಡೆದಿದೆ. ವಿಟ್ಲ ಕುಂಡಡ್ಕ ಪಾದೆ ನಿವಾಸಿ ದಿ. ನಾರಾಯಣ ಮೂಲ್ಯ ಅವರ ಪುತ್ರಿ ರಕ್ಷಿತಾ (20) ಮೃತ ಯುವತಿ. ಅನಾರೋಗ್ಯದಿಂದ ಬಳಲುತ್ತಿದ್ದ ರಕ್ಷಿತಾ ಇಂದು ಮೃತಪಟ್ಟಿದ್ದಾರೆ. ಮೃತರು ತಾಯಿ, ಅಕ್ಕ ಹಾಗು ಕುಟುಂಬಸ್ಥರನ್ನು ಅಗಲಿದ್ದಾರೆ.

Read More

ಬೆಳ್ತಂಗಡಿ: ತಾಲೂಕಿನ ವೇಣೂರಿನ ಸ್ನೇಹಿತನ ಮನೆಗೆ ಬಂದಿದ್ದ ಮೂವರು ಯುವಕರು ಬರ್ಕಜೆ ಎಂಬಲ್ಲಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಲಾರೆನ್ಸ್(21), ಸೂರಜ್ (19) ಹಾಗೂ ಜೈಸನ್ (19) ಮೃತಪಟ್ಟ ಯುವಕರು. ವೇಣೂರು ಚರ್ಚ್‌ನಲ್ಲಿ ಕಾರ್ಯಕ್ರಮವಿರುವ ಹಿನ್ನೆಲೆಯಲ್ಲಿ ಇವರು ಸ್ನೇಹಿತನ ಮನೆಗೆ ಬಂದಿದ್ದರು ಬಳಿಕ ಕಿಂಡಿ ಅಣೆಕಟ್ಟಿನ ಸಮೀಪ ಇವರು ಸ್ನಾನಕ್ಕೆ ಇಳಿದಿದ್ದಾರೆ. ಈ ವೇಳೆ ಮೂವರು ನದಿ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕದಳದವರು ತೆರಳಿದ್ದು, ಸ್ಥಳೀಯರ ಸಹಕಾರದೊಂದಿಗೆ ಮೃತದೇಹಗಳನ್ನು ಮೇಲೆತ್ತಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Read More