Author: main-admin

ಬೆಳ್ತಂಗಡಿ: ನವ ವಿವಾಹಿತೆಯೋರ್ವರು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಪಡಂಗಡಿ ಗ್ರಾಮದ ಬದ್ಯಾರು ಬರಾಯ ಮನೆ ನಿವಾಸಿ ಪ್ರಕಾಶ್ ಅವರ ಪತ್ನಿ ಪೂಜಾಶ್ರೀ(23) ಎಂದು ಗುರುತಿಸಲಾಗಿದೆ. ಮಾ.1ರಂದು ಪೂಜಾಶ್ರೀ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸ ಹುಡುಕುತ್ತಿದ್ದ ಪೂಜಾರನ್ನು ಪತಿ ಪ್ರಕಾಶ್ ಅವರು ಬೆಂಗಳೂರಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಪ್ರಕಾಶ್ ಬದ್ಯಾರು ಬರಾಯದ ತಮ್ಮ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು. ಪೂಜಾ ಮೂಲತಃ ಕಣಿಯೂರು ಗ್ರಾಮದ ನಲ್ಲಿ ಬಾಕಿಮಾರು ಮನೆಯ ವಾರಿಜ ಹಾಗೂ ಸೇಸಪ್ಪ ಪೂಜಾರಿ ದಂಪತಿಯ ಪುತ್ರಿಯಾಗಿದ್ದು, 10 ತಿಂಗಳ ಹಿಂದೆ ಇವರ ವಿವಾಹವಾಗಿತ್ತು. ಪೂಜಾ ಸಾವಿನ ಬಗ್ಗೆ ಸಂಶಯವಿದೆ ಎಂದು ಹೆತ್ತವರು ಆರೋಪಿಸಿದ್ದಾರೆ. ಬೆಂಗಳೂರು ಜಾಲಹಳ್ಳಿ ಬಾಗಲಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ಗ್ಯಾರಂಟಿ ಯೋಜನೆಗಳು ಇರುವುದೇ ಬಡವರಿಗಾಗಿ, ಪಕ್ಷಾತೀತವಾಗಿ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಯಜಮಾನಿಯರ ಖಾತೆಗೆ ಹಾಕಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಮಾತ್ರ ಗೃಹಲಕ್ಷ್ಮೀ ಹಣ ಹಾಕಲಾಗುತ್ತದೆ ಎಂಬುದು ಶುದ್ಧ ಸುಳ್ಳು. ಇದು ಆಧಾರ‌ರಹಿತ ಆರೋಪ‌ ಎಂದರು. ಜಿಎಸ್ಟಿ, ಜಿಎಸ್ಟಿಯೇತರ, ಆದಾಯ ತೆರಿಗೆ… ಹೀಗೆ ಫಲಾನುಭವಿಗಳನ್ನು ವಿಂಗಡಿಸಲಾಗಿದೆ. ಈಗಾಗಲೇ ನವೆಂಬರ್, ಡಿಸೆಂಬರ್ ತಿಂಗಳ ಬಿಲ್ ಆಗಿದ್ದು, ಎಲ್ಲಾ ಫಲಾನುಭವಿಗಳಿಗೂ ಹಣ ಸಂದಾಯವಾಗಲಿದೆ ಎಂದು ತಿಳಿಸಿದರು. ಇದು ಚುನಾವಣೆಗೋಸ್ಕರ ಮಾಡಿರುವ ಯೋಜನೆಗಳಲ್ಲ. ಚುನಾವಣೆ ಮುಗಿದ ಬಳಿಕವೂ ಯೋಜನೆಗಳು ಮುಂದುವರಿದಿವೆ. ಗೃಹಲಕ್ಷ್ಮೀ ಯೋಜನೆ‌ ನಿರಂತರವಾಗಿ ಮುಂದುವರಿಯಲಿದೆ. ಕಾಂಗ್ರೆಸ್ ಸರ್ಕಾರ ಇರುವವರೆಗೂ ಗೃಹಲಕ್ಷ್ಮೀ ಯೋಜನೆ ಇರಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Read More

ಪುತ್ತೂರು: ಕೆಎಸ್ ಆರ್ ಟಿಸಿ ಬಸ್ಸಿಗೆ ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದು ರಿಕ್ಷಾದಲ್ಲಿದ್ದ ಇಬ್ಬರು ಮೃತಪಟ್ಟ ಹಾಗೂ ಚಾಲಕ ಗಂಭೀರಗೊಂಡ ದಾರುಣ ಘಟನೆ ನಗರದ ಹೊರವಲಯದ ಮಂಜಲ್ಪಡ್ಪು ಎಂಬಲ್ಲಿನ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸಿಗೆ ಪುತ್ತೂರು ಕಡೆಯಿಂದ ಕಬಕ ಕಡೆಗೆ ಕೆದಂಬಾಡಿ ಗ್ರಾಮದ ಮಹಮ್ಮದ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ರಿಕ್ಷಾ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ರಿಕ್ಷಾ ಚಾಲಕ ಮಹಮ್ಮದ್ ಅವರ ಎರಡನೇ ಪತ್ನಿ ಜಮೀಲ(49) ಮತ್ತು ಆಕೆಯ ಪುತ್ರಿಯ ಮಗ ತಪ್ಸಿಬ್(5) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ರಿಕ್ಷಾ ಚಾಲಕ ಮಹಮ್ಮದ್ ಗಂಭೀರ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಳ್ತಂಗಡಿ ತಾಲೂಕಿನ ನವ ವಿವಾಹಿತೆ ಪಡಂಗಡಿ ಗ್ರಾಮದ ಬದ್ಯಾರು ಬರಾಯ ಮನೆ ನಿವಾಸಿ ಪ್ರಕಾಶ್‌ ಅವರ ಪತ್ನಿ ಪೂಜಾಶ್ರೀ(23) ಬೆಂಗಳೂರಿನಲ್ಲಿ ಮಾ. 2ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸ ಹುಡುಕುತ್ತಿದ್ದ ಪೂಜಾರನ್ನು ಪತಿ ಪ್ರಕಾಶ್‌ ಅವರು ಬೆಂಗಳೂರಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಪ್ರಕಾಶ್‌ ಬದ್ಯಾರು ಬರಾಯದ ತಮ್ಮ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು.

Read More

ಹೂಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದೀರಾ? ಹಾಗಿದ್ರೆ ನಿಮ್ಮಗೆ ಈ ವಿಷಯದ ಬಗ್ಗೆ ತಿಳಿದಿರಲೇಬೇಕು ಹೌದು, ಮಾರ್ಚ್‌ನಿಂದ ಹೊಸ ನಿಯಮ ಜಾರಿಗೆ ಬಂದಿದೆ. ಪಾಸ್‌ಪೋರ್ಟ್ ಪಡೆಯಲು ನಿಮ್ಮ ಬಳಿ ಈ ದಾಖಲೆಗಳು ಇರಬೇಕು. ಈ ಹೊಸ ನಿಯಮ ಯಾವುದು? ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕು ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ… ವಿದೇಶಾಂಗ ಸಚಿವಾಲಯ ಫೆ. 24ರಂದು ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ಈ ಕುರಿತು ಆದೇಶವನ್ನು ಹೊರಡಿಸಿದೆ. ಪಾಸ್‌ಪೋರ್ಟ್ ಕಾಯ್ದೆ 1967ರ ಸೆಕ್ಷನ್ 24ರ ನಿಬಂಧನೆಗಳ ಅಡಿಯಲ್ಲಿ ಪಾಸ್‌ಪೋರ್ಟ್ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಮಾಹಿತಿಯನ್ನು ತಿಳಿಸಲಾಗಿದೆ. ಭಾರತದಲ್ಲಿ ಪಾಸ್‌ಪೋರ್ಟ್ ಪಡೆಯಲು ಇರುವ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದ್ದು,2023ರ ಅಕ್ಟೋಬರ್ 1ರಿಂದ, ಜನಿಸಿದವರಿಗಾಗಿ ಪಾಸ್‌ಪೋರ್ಟ್ ಅರ್ಜಿಗೆ ಜನನ ಪ್ರಮಾಣಪತ್ರ (Birth Certificate) ಕಡ್ಡಾಯವಾಗಿದ್ದು,ಈ ನಿಯಮವನ್ನು ಕೇಂದ್ರ ಸರ್ಕಾರ ಆದೇಶವನ್ನು ಹೊರಡಿಸಿದೆ. 1980ರ ಪಾಸ್‌ಪೋರ್ಟ್ ನಿಯಮಗಳನ್ನು ಸರ್ಕಾರ ತಿದ್ದುಪಡಿ ಮಾಡಿದ್ದು, ಜನನ ಮತ್ತು ಮರಣಗಳ ನೋಂದಣಿ, ನಗರ ಪಾಲಿಕೆ ಅಥವಾ ಇತರ ಯಾವುದೇ…

Read More

ಕಾರ್ಕಳ: ಮನೆಗೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಕಾರ್ಕಳದ ನಿಟ್ಟೆ ಎಂಬಲ್ಲಿ ನಡೆದಿದೆ. ಸಂಪ ಎಂಬವರ ಮನೆಯ ಮುಂಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ಬೆಡ್ ರೂಮಿನ ಸೆಲ್ಫ್‌‌ನಲ್ಲಿ ಬ್ಯಾಗ್‌ನಲ್ಲಿ ಇಟ್ಟಿದ್ದ 79 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾಕ್ಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು : ಜಾತ್ರೆ, ಕಂಬಳ, ಮಾಲ್, ಬಸ್ಸು, ರೈಲ್ವೆ ನಿಲ್ದಾಣಗಳಲ್ಲಿ ಪಾರ್ಕ್ ಮಾಡಿದ್ದ ಬೈಕ್ ಗಳನ್ನು ಕದಿಯುತ್ತಿದ್ದ ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳ್ಳನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬದ ಮಣಿಕಂಠ ಗೌಡ ಕೆ. (24) ಬಂಧಿತ ಆರೋಪಿ. ಬಂಧಿತನಿAದ ಪೊಲೀಸರು 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಸ್ವಾಧೀನ ಪಡೆಸಿಕೊಂಡಿದ್ದಾರೆ.ಜೊತೆಗೆ ಕಳ್ಳತನ ಮಾಡಿದ ಬೈಕ್‌ಗಳನ್ನು ಮಣಿಕಂಠನಿಂದ ಖರೀದಿ ಮಾಡುತ್ತಿದ್ದ ಕಾರ್ಕಳದ ಸತೀಶ್ ಬಂಗೇರ, ಮೂಡುಬಿದಿರೆಯ ದೀಕ್ಷಿತ್, ತಾಳಿಕೋಟೆಯ ಸಂಗಣ್ಣ ಹೊನ್ನಳ್ಳಿ ಎಂಬವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂವರು ಸೂಕ್ತ ದಾಖಲೆಗಳಿಲ್ಲದೆ ವಾಹನಗಳನ್ನು ಪಡೆದು ಮಾರಾಟ ಮಾಡುತ್ತಿದ್ದ ಹಿನ್ನೆಲೆ ಅವರ ಮೇಲೂ ಪ್ರಕರಣ ದಾಖಲು ಮಾಡಲಾಗಿದೆ.ಆರೋಪಿ ಮಣಿಕಂಠನು ಮಂಗಳೂರು ನಗರ ಪೊಲೀಸ್ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಬೈಕ್ ಗಳನ್ನ ಕಳವು ಮಾಡುತ್ತಿದ್ದ. ಕದ್ದ ಕೆಲ ಬೈಕ್‌ಗಳನ್ನು ಮೂಡುಬಿದಿರೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ.ಸ್ವತಃ ಮೆಕಾನಿಕ್ ಆಗಿದ್ದ…

Read More

ಕುಂದಾಪುರ: ಫೆರ್ರಿ ರಸ್ತೆಯಲ್ಲಿ ಅರ್ಜಿ ಕೇಂದ್ರ ನಡೆಸುತ್ತಿರುವ ಕೋಡಿ ನಾಗೇಶ್ ಎಂಬುವರು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ನಕಲಿಯಾಗಿ ತಯಾರಿಸುವ ದಸ್ತಾವೇಜಿಗೆ ಸ್ಟಾಂಪ್ ಹಾಕಿ, ಸರ್ಕಾರಿ ಅಧಿಕಾರಿಗಳ ನಕಲಿ ಸಹಿ ಹಾಗೂ ಸೀಲು ಬಳಸಿ ವಂಚಿಸುತ್ತಿರುವ ಕುರಿತು ಬಂದ ದೂರಿನ ಮೇರೆಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಕುಂದಾಪುರ ಎಸ್‌ಐ ನಂಜಾ ನಾಯ್ಕ ಹಾಗೂ ಸಿಬ್ಬಂದಿ ನ್ಯಾಯಾಲಯದ ಅನುಮತಿ ಪಡೆದು ಅರ್ಜಿ ಕೇಂದ್ರಕ್ಕೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಬೈಂದೂರು ಮುದ್ರಣಾಧಿಕಾರಿಗಳ ಸೀಲು, ಕುಂದಾಪುರ ಆಸ್ಪತ್ರೆಯ ಜನನ-ಮರಣ ಉಪನೋಂದಣಾಧಿಕಾರಿಗಳ ಸೀಲು, ಬೀಜಾಡಿ ಗ್ರಾ.ಪಂ.ನ ಸೀಲು, ಜಿಲ್ಲಾಧಿಕಾರಿಗಳ ಕಚೇರಿಯ ಸೀಲು, ಕುಂದಾಪುರದ ಮದುವೆ ನೋಂದಣಾಧಿಕಾರಿಯ ಸೀಲು, ನಗರಸಭೆಯ ಜನನ-ಮರಣ ನೋಂದಣಾಧಿಕಾರಿಯ ಸೀಲು, ಕುಂದಾಪುರ ತಹಶೀಲ್ದಾರ್ ಸೀಲು, ಬನ್ನೂರು ಗ್ರಾ.ಪಂ. ಅಧ್ಯಕ್ಷರ ಸೀಲು, ನಾವುಂದ ಶಾಲಾ ಮುಖ್ಯೋಪಾಧ್ಯಾಯರ ಸೀಲು, ಮುದೂರಿನ ಭಾರತ್ ಮಾತಾ ಪ್ರೌಢಶಾಲೆಯ ಸೀಲು, ಗೋಪಾಡಿ ಪಿಡಿಒ ಸೀಲು, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸೀಲು, ಬೈಂದೂರು ಉಪನೋಂದಣಾಧಿಕಾರಿ ಸೀಲು, ಶಿಕ್ಷಣ ಭಾರತಿ…

Read More

ಮಂಗಳೂರು : ಅಶ್ಲೀಲ ವೀಡಿಯೊ ಇರುವುದಾಗಿ ಯುವತಿಯರನ್ನು ಬೆದರಿಸಿ ಹಣ ಸುಲಿಯುತ್ತಿದ್ದ ಕಾರ್ಕಳದ ಈದು ಗ್ರಾಮದ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಈದು ಗ್ರಾಮದ ಸತೀಶ್‌ ಹೊಸ್ಮಾರು (36) ಎಂದು ಗುರುತಿಸಲಾಗಿದೆ.ಈತ ಸೋಷಿಯಲ್‌ ಮೀಡಿಯಾದ ಮೂಲಕ ಯುವತಿಯರ ಮತ್ತು ಮಹಿಳೆಯರ ಮೊಬೈಲ್‌ ನಂಬರ್‌ ಸಂಪಾದಿಸಿ ಫೋನ್‌ ಮಾಡಿ ನಿಮ್ಮ ಅಶ್ಲೀಲ ವೀಡಿಯೊ ಇದೆ, ಹಣ ಕೊಡದಿದ್ದರೆ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತೇನೆ ಎಂದು ಬೆದರಿಸುತ್ತಿದ್ದ. ಈ ರೀತಿ ಹಲವು ಯುವತಿಯರಿಂದ ಹಣ ಸುಲಿಗೆ ಮಾಡಿದ್ದಾನೆ. ಮಂಗಳೂರಿನ ಓರ್ವ ಮಹಿಳೆ ನೀಡಿದ ದೂರಿನ ಪ್ರಕಾರ ಕದ್ರಿ ಪೊಲೀಸರು ಅವನನ್ನು ಬಂಧಿಸಿದ್ದಾರೆ.ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಮತ್ತಿತರ ಸೋಷಿಯಲ್‌ ಮೀಡಿಯಾಗಳಿಂದ ಮಹಿಳೆಯರ ಮೊಬೈಲ್‌ ನಂಬರ್‌ಗಳನ್ನು ಪಡೆದುಕೊಂಡು ವೀಡಿಯೊ ಇದೆ ಎಂದು ಬೆದರಿಕೆ ಕರೆಗಳನ್ನು ಮಾಡುತ್ತಿದ್ದ. ಮಂಗಳೂರಿನ ಮಹಿಳೆ ನೀಡಿದ ದೂರಿನಂತೆ ಅವನನ್ನು ಬಂಧಿಸಿ ಮೊಬೈಲ್‌ ಪರಿಶೀಲಿಸಿದಾಗ ಅದರಲ್ಲಿ ಅನೇಕ ಯುವತಿಯರ ನಂಬರ್‌ ಸಿಕ್ಕಿದೆ. ಈತನ ವಿರುದ್ಧ ಕಾರ್ಕಳ ನಗರ ಮತ್ತು ಗ್ರಾಮಾಂತರ ಠಾಣೆಗಳಲ್ಲಿ ಅತ್ಯಾಚಾರ…

Read More

ಕೊಣಾಜೆ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ತೌಡುಗೋಳಿ ಜಂಕ್ಷನ್ ನ ಅಂಗಡಿಯೊಂದರಿಂದ ನಗದು ಹಾಗೂ ಸಾಮಗ್ರಿಗಳನ್ನು ಕಳವುಗೈದ ಘಟನೆ ನಡೆದಿದೆ. ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತೌಡುಗೋಳಿಯ ವಸಂತ ಎಂಬವರ ಮಾಲಕತ್ವದ ಅಂಗಡಿಗೆ ಸುಮಾರು ಎರಡೂವರೆ ಗಂಟೆ ರಾತ್ರಿ ರಾಡ್ ಸಮೇತ ನುಗ್ಗಿದ ದಡೂತಿ ದೇಹದ ಕಳ್ಳ ಹೊರಗಡೆಯ ಕಬ್ಬಿಣದ ಬಾಗಿಲಿಗೆ ಒಳಗೂ ಹೊರಗೂ ಹಾಕಿದ್ದ ಬೀಗವನ್ನು ಮುರಿದು ಒಳ ನುಗ್ಗಿದ್ದಾನೆ. ಅಲ್ಲಿಂದ ಕ್ಯಾಶ್ ಕೌಂಟರ್ ಇರುವ ಕೊಠಡಿಯ ಮರದ ಬಾಗಿಲಿನ ಬೀಗ ಮುರಿಯಲು ಸುಮಾರು ಅರ್ಧಗಂಟೆ ಒದ್ದಾಡಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಸುಮಾರು ಹತ್ತು ಸಾವಿರ ರೂ. ನಗದು ಹಾಗೂ 15 ಸಾವಿರ ರೂ. ಮೌಲ್ಯದ ಸಿಗರೇಟ್ ಬಂಡಲ್, ಗುಟ್ಕಾ ಪ್ಯಾಕೇಟ್ ಗಳು, ಟೀ ಪೌಡರ್, ಆಹಾರ ಸಾಮಗ್ರಿಗಳು ಸೇರಿದಂತೆ ಸುಮಾರು ನಲ್ವತ್ತು ಸಾವಿರ ರೂ. ಮೌಲ್ಯದ ಸಾಮಗ್ರಿಗಳನ್ನು ಚೀಲವೊಂದರಲ್ಲಿ ತುಂಬಿಸಿ ಕೊಂಡೊಯ್ದಿದ್ದಾನೆ. ಕಳ್ಳ ಅಂಗಡಿಗೆ ನುಗ್ಗಿದ ಬಳಿಕ ಹಾಕಿದ್ದ ಟಿ ಶರ್ಟ್ ಅನ್ನು ಕಳಚಿದ್ದು…

Read More