Author: main-admin

ಮಂಗಳೂರು : ಕಾರವಾರ ಹಾಗೂ ಪಣಂಬೂರಿನಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಕರಾವಳಿ ಕರ್ನಾಟಕದ ಮಂಗಳೂರು, ಉತ್ತರ ಒಳನಾಡಿನ ಬಾಗಲಕೋಟೆ ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರಿನಲ್ಲಿ ಗರಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಹಾಗಾಗಿ ಹವಮಾನ ಇಲಾಖೆಯು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಿದೆ. ಹೊನ್ನಾವರದಲ್ಲಿ 37.6 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ, ಚಾಮರಾಜನಗರಲ್ಲಿ 14.3 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ರಾಜ್ಯದ ಹಲವೆಡೆ ಒಣಹವೆ ಇದ್ದು, ಕರಾವಳಿಯಲ್ಲಿ ಉಷ್ಣ ಅಲೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರಾವಳಿಯಲ್ಲಿ ಗರಿಷ್ಠ ತಾಪಮಾನ 36-37 ಡಿಗ್ರಿ ಸೆಲ್ಸಿಯಸ್​ನಷ್ಟಿದೆ, ಬೆಳಗಾವಿ, ಬೀದರ್, ವಿಜಯಪುರ, ಧಾರವಾಡ, ಗದಗ, ಕೊಪ್ಪಳ, ರಾಯಚೂರು ಮತ್ತ ಹಾವೇರಿಯಲ್ಲಿ 32-34 ಡಿಗ್ರಿ ಸೆಲ್ಸಿಯಸ್​, ಬಾಗಲಕೋಟೆ, ಕಲಬುರಗಿಯಲ್ಲಿ 35-37 ಡಿಗ್ರಿ ಸೆಲ್ಸಿಯಸ್, ದಾವಣಗೆರೆ, ಹಾಸನ, ಚಿಂತಾಮಣಿ, ಮಂಡ್ಯ, ಮಡಿಕೇರಿ, ಶಿವಮೊಗ್ಗ ಮತ್ತು ಮೈಸೂರು, ಆಗುಂಬೆಯಲ್ಲಿ 35 ಡಿಗ್ರಿ ಸೆಲ್ಸಿಯಸ್​ನಷ್ಟಿದೆ. ಮಡಿಕೇರಿಯಲ್ಲಿ ಕಳೆದ 24…

Read More

ತಿರುವನಂತಪುರಂ: ಕೇರಳದಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತಿರುವನಂತಪುರಂ, ಕೊಲ್ಲಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ನ್ನು ಘೋಷಿಸಲಾಗಿದೆ. ಕೇರಳದ ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ, ಆಲಪ್ಪುಳ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಈ ನಡುವೆ ಕೇರಳದಲ್ಲಿ ಬೇಸಿಗೆಯ ಬಿಸಿ ಜೋರಾಗಿಯೇ ಇದ್ದು, ತಾಪಮಾನವು ಸಾಮಾನ್ಯಕ್ಕಿಂತ 2°C ನಿಂದ 3°C ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.ಕೇಂದ್ರ ಹವಾಮಾನ ಇಲಾಖೆಯು ದಿನಾಂಕ 01/03/2025 ರಂದು ದಕ್ಷಿಣ ಕೇರಳ ಕರಾವಳಿಯಲ್ಲಿ ಮೀನುಗಾರಿಕೆ ಮಾಡಬಾರದು ಮತ್ತು ದಿನಾಂಕ 01/03/2025 & 02/03/2025 ರಂದು ಲಕ್ಷದ್ವೀಪ ಪ್ರದೇಶದಲ್ಲಿ ಮೀನುಗಾರಿಕೆ ಮಾಡಬಾರದು ಎಂದು ತಿಳಿಸಿದೆ.

Read More

ಮೂಡುಪೆರಾರು ಗ್ರಾಮದ ಅರ್ಕೆ ಪದವು ನಿವಾಸಿ, ನಗರದ ಮಂಗಳ ಕಾಲೇಜು ಪ್ಯಾರಾ ಮೆಡಿಕಲ್‌ ಸೈನ್ಸ್‌ನಲ್ಲ್‌ ವ್ಯಾಸಂಗ ಮಾಡುತ್ತಿದ್ದ ನಿತೇಶ್‌ ಬೆಲ್ಬಡ (19) ಎಂಬಾತ ಫೆ. 13ರಿಂದ ಕಾಣೆಯಾಗಿದ್ದಾರೆ. 5, 5 ಅಡಿ ಎತ್ತರದ, ಗೋಧಿ ಮೈಬಣ್ಣದ, ಸಾಧಾರಣ ಶರೀರದ ಈತ ಕಾಲೇಜಿನಿಂದ ಮನೆಗೆ ಬಂದು ಯಾರಿಗೂ ಹೇಳದೆ ಹೊರಗೆ ಹೋದವರು ಮರಳಿ ಬಂದಿಲ್ಲ ಎನ್ನಲಾಗಿದೆ. ಕಾಣೆಯಾದ ದಿನ ಕೆಂಪು ಬಣ್ಣದ ಟೀಶರ್ಟ್‌, ಬಿಳಿ ಬಣ್ಣದ ಪ್ಯಾಂಟ್‌ ಧರಿಸಿದ್ದರು.

Read More

ಉಡುಪಿ: ಬ್ರಹ್ಮಾವರದ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಮಾ.1ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯಿಂದಾಗಿ ತ್ಯಾಜ್ಯ ಸಂಗ್ರಹಣೆ ವಾಹನವೊಂದು ಸ್ಫೋಟಗೊಂಡಿದೆ. ಸಂಪೂರ್ಣ ಎಸ್‌ಎಲ್‌ಆರ್‌ಎಂ ಘಟಕ ಬೆಂಕಿಗೆ ಆಹುತಿಯಾಗಿದ್ದು, ಭಾರಿ ನಷ್ಟವಾಗಿದೆ.ಮಲ್ಪೆ, ಉಡುಪಿ, ಕುಂದಾಪುರದ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಮತ್ತು ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತ್ತಿರದ ಇತರ ಪ್ರದೇಶಗಳಿಗೆ ವ್ಯಾಪಿಸದಂತೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾರಂಬಳ್ಳಿ ಪಂಚಾಯಿತಿಗೆ ಸೇರಿದ್ದ ಈ ಎಸ್ ಎಲ್ ಆರ್ ಎಂ ಘಟಕ ಘಟಕದಲ್ಲಿದ್ದ ಎಲ್ಲಾ ಯಂತ್ರೋಪಕರಣಗಳು ಮತ್ತು ಉಪಕರಣಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.

Read More

ಆಗ್ರಾ : ಇತ್ತೀಚೆಗೆ ದೇಶದಾದ್ಯಂತ ಸಂಚಲನ ಮೂಡಿಸಿದ್ದ ಐಟಿ ಉದ್ಯೋಗಿ ಅತುಲ್ ಆತ್ಮಹತ್ಯೆ ಪ್ರಕರಣದ ಬಳಿಕ ಇದೀಗ ಅದೇ ರೀತಿಯ ಮತ್ತೊಂದು ಆತ್ಮಹತ್ಯೆ ಪ್ರಕರಣ ನಡೆದಿದೆ, ಉತ್ತರ ಪ್ರದೇಶದ ಆಗ್ರಾದಲ್ಲಿ ಐಟಿ ಕಂಪನಿ ಮ್ಯಾನೇಜರ್ ಮಾನವ್ ಶರ್ಮಾ ಎಂಬುವವರು ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಹಾಕಿಕೊಳ್ಳುವ ಮೊದಲು ಮಾನವ್ ಶರ್ಮಾ ವಿಡಿಯೋ ಮಾಡಿದ್ದು, ಅದು ವೈರಲ್ ಆಗಿದೆ. ಮಾನವ್ ಶರ್ಮಾ ಮೂಲತಃ ಆಗ್ರಾದ ಡಿಫೆನ್ಸ್ ಕಾಲೋನಿಯ ನಿವಾಸಿಯಾಗಿದ್ದು. ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮಾನವ್ ಅವರ ತಂದೆ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದು ನಿವೃತ್ತರಾಗಿದ್ದಾರೆ. ಮಾನವ್ ಶರ್ಮ ಅವರ ತಂದೆ ನರೇಂದ್ರ ಶರ್ಮಾ ಅವರ ಹೇಳಿಕೆಯಂತೆ ತನ್ನ ಮಗನಿಗೆ ಕಳೆದ ವರ್ಷ ಜನವರಿಯಲ್ಲಿ ಮದುವೆಯಾಗಿದ್ದು ಮಗ, ಸೊಸೆ ಇಬ್ಬರೂ ಮುಂಬೈಯಲ್ಲಿ ವಾಸವಾಗಿದ್ದರು. ಆದರೆ ಕೆಲವೇ ತಿಂಗಳ ಬಳಿಕ ಸೊಸೆ ಮಗನ ಜೊತೆ ಜಗಳ ಮಾಡಲು ಆರಂಭಿಸಿದ್ದಾಳೆ. ಅಲ್ಲದೆ ತಮ್ಮ ಕುಟುಂಬದ ಮೇಲೆ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡುವ ಬಗ್ಗೆಯೂ…

Read More

ಉಡುಪಿ: ಸಣ್ಣಪುಟ್ಟ ವಿಚಾರಕ್ಕೆ ಉಡುಪಿಯ ಸಿಟಿ ಸೆಂಟರ್ ಮಾಲ್‌ನ ಸಿಬ್ಬಂದಿ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ. ಗಾಯಾಳುಗಳನ್ನು ನಿಹಾಲ್ (17) ಮತ್ತು ಫೈಝಲ್ (18) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ವಿದ್ಯಾರ್ಥಿಗಳು ತಮ್ಮ ತರಗತಿಗಳನ್ನು ಮುಗಿಸಿದ ನಂತರ ಸಿಟಿ ಸೆಂಟರ್‌ಗೆ ಭೇಟಿ ನೀಡಿದ್ದರು. ಮೂರನೇ ಮಹಡಿಯಿಂದ ಕೆಳಗಿಳಿಯುವಾಗ, ಲಿಫ್ಟ್ ಕೆಟ್ಟದ್ದನ್ನು ಕಂಡು ಸ್ವಯಂಚಾಲಿತ ಎಸ್ಕಲೇಟರ್ ಅನ್ನು ಬಳಸಲು ನಿರ್ಧರಿಸಿದರು. ಆದರೆ, ಇಬ್ಬರು ಸಿಬ್ಬಂದಿಗಳು ಅವರನ್ನು ತಡೆದು ಎಸ್ಕಲೇಟರ್ ಬಳಸುವುದನ್ನು ಪ್ರಶ್ನಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಸಿಬ್ಬಂದಿ ದೈಹಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.ಪರಿಣಾಮವಾಗಿ, ನಿಹಾಲ್ ಅವರ ತುಟಿಗೆ ಗಾಯವಾಗಿದ್ದು, ಫೈಝಲ್ ಅವರ ಹೊಟ್ಟೆ ಮತ್ತು ಬೆನ್ನಿಗೆ ಪೆಟ್ಟು ಬಿದ್ದಿದೆ. ವೀಕ್ಷಕರು ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳನ್ನು ದಾಳಿಯಿಂದ ರಕ್ಷಿಸಿದ್ದಾರೆ. ತಕ್ಷಣ ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಸುಳ್ಯ: ನಿಗೂಢ ಕಾರಣಕ್ಕೆ ವಿದ್ಯಾರ್ಥಿನಿಯೋರ್ವಳು ಕಾಲೇಜಿನ ಹಾಸ್ಟೆಲ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದಲ್ಲಿ ಬುಧವಾರ ರಾತ್ರಿ ನಡೆದಿದೆ. ಮೃತರನ್ನು ಸುಳ್ಯ ಕೆವಿಜಿ ಡೆಂಟಲ್ ಕಾಲೇಜಿನ ಬಿ.ಡಿ.ಎಸ್. ವಿದ್ಯಾರ್ಥಿನಿ ಬೆಳಗಾವಿ ಮೂಲದ ಕೃತಿಕಾ ನಿಡೋಣಿ (21) ಎಂದು ಗುರುತಿಸಲಾಗಿದೆ. ಕೃತಿಕಾ ಬುಧವಾರ ರಾತ್ರಿ ವಸತಿ ನಿಲಯದ ತನ್ನ ಕೊಠಡಿಯಲ್ಲಿ ನೇಣು ಬಿಗಿದು ನೇತಾಡಿಕೊಂಡಿದ್ದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಯಾರಿಗೋ ಫೋನ್ ಮಾಡಿ ತಾನು ಸಾಯುತ್ತೇನೆ ಎಂದು ಕೃತಿಕಾ ಸಾಯುವ ಮೊದಲು ಹೇಳುತ್ತಿದ್ದಳು ಎನ್ನಲಾಗಿದ್ದು, ಯಾವುದೋ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸುಳ್ಯ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪುರ: ನಕ್ಸಲ್ ತೊಂಬಟ್ಟು ಲಕ್ಷ್ಮೀಯ ನ್ಯಾಯಾಂಗ ಬಂಧನ ಅವಧಿ ಮತ್ತೆ 14 ದಿನಗಳ ಕಾಲ ವಿಸ್ತರಿಸಲಾಗಿದೆ. ಲಕ್ಷ್ಮೀಯ ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಲೆ ಕುಂದಾಪುರದ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಂಗ ಬಂಧನವನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ನಕ್ಸಲ್ ಲಕ್ಷ್ಮೀಯನ್ನು ಮಂಗಳೂರಿನ ಜೈಲಿಗೆ ಸ್ಥಳಾಂತ ಮಾಡಲಾಗಿದೆ.

Read More

ಮಂಗಳೂರು : ಜ.28 ರಂದು ಅಂಕೋಲ ರಾಮನಗುಳಿ ಹೆದ್ದಾರಿ ಬದಿಯ ನಿರ್ಜನ ಪ್ರದೇಶದಲ್ಲಿ ಮಂಗಳೂರಿನ ಪ್ರಸಿದ್ಧ  ಜ್ಯುವೆಲ್ಲರಿ ಮಾಲೀಕರಾಗಿರುವ ರಾಜೇಶ ಪವಾರ್‌ ಎಂಬುವವರಿಗೆ ಸೇರಿದ್ದ ಕಾರು ದೊರಕಿತ್ತು. ಆದರೆ. ಅಚ್ಚರಿಯೆಂಬಂತೆ ಅದರಲ್ಲಿ 1.14 ಕೋಟಿ ನಗದು ಪತ್ತೆಯಾಗಿತ್ತು. ಇದಾದ ಕೆಲವು ದಿನದ ಬಳಿಕ ರಾಜೇಶ್‌ ಪವಾರ್‌ ಮತ್ತು ಕಾರಿನ ಚಾಲಕರು ಅಂಕೋಲಾ ಠಾಣೆಗೆ ತೆರಳಿ ದರೋಡೆ ಕುರಿತು ದೂರು ದಾಖಲಿಸಿದ್ದರು.ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಕಾರವಾರ ಪೊಲೀಸರು ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ತಲ್ಲತ್‌ ಗ್ಯಾಂಗ್‌ನ ಇಬ್ಬರು ಆರೋಪಿಗಳನ್ನು ಬಂದಿಸಿದ್ದಾರೆ. ಬಳಿಕ ವಿಚಾರಣೆಗೆ ಒಳಪಡಿಸಿದಾಗ ಮಂಗಳೂರಿಗೆ ಬರುತ್ತಿದ್ದ ಕಾರನ್ನು ಅಂಕೋಲಾ ಬಳಿಯ ರಾಮನಗುಳಿ ಎಂಬಲ್ಲಿ ಅಡ್ಡಗಟ್ಟಿ ಒಂದೂವರೆ ಕೋಟಿ ರೂಪಾಯಿ ದೋಚಿರುವುದಾಗಿ ಒಪ್ಪಿಕೊಂಡಿದ್ದಾರೆ.ಮಂಗಳೂರು ಹೊರವಲಯದ ಅಡ್ಯಾರ್‌, ಬಜಾಲ್‌ನಲ್ಲಿ ಸಕ್ರಿಯವಾಗಿರುವ ತಲ್ಲತ್‌ ಗ್ಯಾಂಗ್‌ನ ಸದಸ್ಯರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ದರೋಡೆ ಕುರಿತು ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಈ ಇಬ್ಬರ ಬಂಧನದ ಬಳಿಕ ಮತ್ತೂ ಕೆಲವೊಂದು ಮಹತ್ವದ ಮಾಹಿತಿ ತಿಳಿದಿದೆ. ಈ…

Read More

ಕಲಬುರಗಿಯ ಸೈಬರ್‌ ಕ್ರೈಮ್‌ ಪೊಲೀಸರು ದೇಶದ 28 ವಿಶ್ವವಿದ್ಯಾಲಯಗಳ ನಕಲಿ ಪದವಿಗಳನ್ನು ತಯಾರಿಸಿ ಮಾರಾಟಮಾಡುತ್ತಿದ್ದ ದೊಡ್ಡ ದಂಧೆಯನ್ನು ಪತ್ತೆ ಹಚ್ಚಿದ್ದು, ದೆಹಲಿ ಮೂಲದ ರಾಜೀವ ಸಿಂಗ್‌ ಆರೋರಾ ಬಂಧಿತ ಆರೋಪಿ. ಈತನನ್ನು ನವದೆಹಲಿಯ ರಾಮಪಾರ್ಕ್‌ ಅಪಾರ್ಟ್ಮೆಂಟ್‌ ದ್ವಾರಕ್‌ ಮೋಡ್‌ನಲ್ಲಿ ಬಂಧಿಸಲಾಗಿದೆ. 500ಕ್ಕೂ ಹೆಚ್ಚು ನಕಲಿ ಪದವಿ ಪ್ರಮಾಣಪತ್ರಗಳು, ಖಾಲಿ ಪ್ರಮಾಣಪತ್ರಗಳು, ನಕಲಿಸೀಲುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Read More