ಉಡುಪಿ: ಮಿನಿ ಲಾರಿ ಹಾಗೂ ದ್ವಿಚಕ್ರ ವಾಹನ ಮಧ್ಯೆ ಭೀಕರ ಅಪಘಾತ ನಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಾರ್ಕಳ- ಧರ್ಮಸ್ಥಳ- ಸುಬ್ರಹ್ಮಣ್ಯ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.ಬೈಕ್ ನಲ್ಲಿ ಪತಿ, ಪತ್ನಿ ಮತ್ತು ಮೂವರು ಮಕ್ಕಳು ಪ್ರಯಾಣಿಸುತ್ತಿದ್ದು, ಅಪಘಾತದ ರಭಸಕ್ಕೆ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ಸುರೇಶ್ ಆಚಾರ್ಯ (36 ವ), ಮಕ್ಕಳಾದ ಸುಮೀಕ್ಷಾ (7 ವ) ಸುಶ್ಮಿತಾ (5 ವ), ಸುಶಾಂತ್ (2 ವ) ಎಂದು ಗುರುತಿಸಲಾಗಿದೆ. ಸುರೇಶ್ ಆಚಾರ್ಯ ಅವರ ಪತ್ನಿ ಮೀನಾಕ್ಷಿ (32 ವ) ಗಂಭೀರ ಗಾಯಗೊಂಡಿದ್ದು, ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಮಣೇಲು ಗಾಂಧಿನಗರ ನಿವಾಸಿ ಸೀತರಾಮ ಆಚಾರ್ಯ ರವರ ಕುಟುಂಬಿಕರು ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿಯಬೇಕಿದೆ.
Author: main-admin
ಉಡುಪಿ: ಉಡುಪಿ ನಗರದಲ್ಲಿ ಸರಣಿ ಕಳ್ಳತನ ನಡೆದಿದ್ದು ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ. ಉಡುಪಿಯ ಪೊಲೀಸ್ ಸ್ಟೇಷನ್ ಎದುರೇ ಇರುವ ಸರ್ಕಾರಿ ನೌಕರರ ವಸತಿ ಸಮುಚ್ಚಯದಲ್ಲಿ ಈ ಘಟನೆ ಸಂಭವಿಸಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ವಸತಿ ಸಮುಚ್ಚಯದ ಸುಮಾರು ಆರು ಮನೆಗಳಿಗೆ ಕಳ್ಳರು ನುಗ್ಗಿದ್ದು ,ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರು ಮನೆಗಳಿಗೆ ನುಗ್ಗಿದ ಕಳ್ಳರು, ನಾಲ್ಕು ಮನೆಗಳಲ್ಲಿ ಕಳ್ಳತನದ ವಿಫಲ ಯತ್ನ ನಡೆಸಿದ್ದಾರೆ. ಒಂದು ಮನೆಯಿಂದ 120 ಗ್ರಾಂ ಚಿನ್ನ, 20,000 ನಗದು ಕಳ್ಳತನ ಮಾಡಿದ್ದಾರೆ .ಮತ್ತೊಂದು ಮನೆಯಿಂದ 20,000 ನಗದು ಕಳ್ಳತನ ಮಾಡಿದ್ದಾರೆ. ವಾರಾಂತ್ಯದ ಎರಡು ರಜೆಗಳಿದ್ದ ಕಾರಣ ಇವರೆಲ್ಲ ಮನೆಗೆ ಬೇಗ ಹಾಕಿ ತೆರಳಿದ್ದರು. ಮನೆಯಲ್ಲಿ ವಾಸ್ತವ್ಯ ಇಲ್ಲದ್ದನ್ನು ಗಮನಿಸಿ ಕಳ್ಳತನಗೈಯಲಾಗಿದೆ. ಅಂದಹಾಗೆ ,ವಸತಿ ಸಮುಚ್ಚಯದ ಆಸುಪಾಸಿನಲ್ಲಿ ಯಾವುದೇ ಸಿಸಿ ಕ್ಯಾಮೆರಾಗಳಿರಲ್ಲ ಎಂಬುದು ಗಮನಾರ್ಹ ಸಂಗತಿ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ…
ಬೆಂಗಳೂರು : ಚುನಾವಣಾ ಬಾಂಡ್ ಮೂಲಕ ಸುಲಿಗೆ ಆರೋಪದಲ್ಲಿ ವ್ಯಕ್ತಿಯೊಬ್ಬರು ನೀಡಿದಂತ ದೂರಿನ ಅನ್ವಯ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್, ಇಡಿ, ನಳೀನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಪದಾಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದೀಗ ಬಿಜೆಪಿ ನಾಯಕ ನಳೀನ್ ಕುಮಾರ್ ಕಟೀಲ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ನಳೀನ್ ಕುಮಾರ್ ಕಟೀಲ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ತುರ್ತು ಅರ್ಜಿ ವಿಚಾರಣೆ ನಡೆಸುವಂತೆಯೂ ನ್ಯಾಯಾಲಯಕ್ಕೆ ನಳೀನ್ ಕಟೀಲ್ ಪರ ವಕೀಲರು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದ ಬಳಿಕ ನಳೀನ್ ಕುಮಾರ್ ಕಟೀಲ್ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಬೆಂಗಳೂರಿನ ತಿಲಕ್ ನಗರದಲ್ಲಿ ಆದರ್ಶ್ ಎಂಬುವರು ನೀಡಿದಂತ ದೂರಿನ ಹಿನ್ನಲೆಯಲ್ಲಿ ಪೊಲೀಸರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಎ1 ಆರೋಪಿಯಾಗಿ, ಎ2 ಆರೋಪಿಯಾಗಿ ಇಡಿ, ಎ3 ಆರೋಪಿಯಾಗಿ ಬಿಜೆಪಿ ಪದಾಧಿಕಾರಿಗಳು, ಎ4 ಆರೋಪಿಯಾಗಿ ನಳೀನ್ ಕುಮಾರ್ ಹಾಗೂ ರಾಜ್ಯ…
ಕಾಸರಗೋಡು : ಕೆರೆಗೆ ಬಿದ್ದು ಮೂರು ವರ್ಷದ ಬಾಲಕ ಮೃತಪಟ್ಟ ಘಟನೆ ಬೆದ್ರಡ್ಕ ಕಂಬಾರ್ ನಲ್ಲಿ ಭಾನುವಾರ ಸಂಜೆ ನಡೆದಿದೆ. ಕಂಬಾರಿನ ನೌಶಾದ್ ರವರ ಪುತ್ರ ಮುಹಮ್ಮದ್ ಸೋಹಾನ್ ಹಬೀಬ್ ಮೃತಪಟ್ಟ ಬಾಲಕ.ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮುಹಮ್ಮದ್ ಸೋಹಾನ್ ಹಬೀಬ್ ದಿಢೀರ್ ನಾಪತ್ತೆಯಾಗಿದ್ದಾನೆ. ಈ ವೇಳೆ ಸಂಬಂಧಿಕರು ಮನೆಯೊಳಗೆ ಹಾಗೂ ಪರಿಸರದ ಮನೆಗಳಲ್ಲಿ ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದಾಗ್ಯು ಬಾಲಕ ಪತ್ತೆಯಾಗದ ಹಿನ್ನಲೆಯಲ್ಲಿ ಸಂಬಂಧಿಕರು, ಶೋಧ ನಡೆಸಿದಾಗ ಮನೆ ಸಮೀಪದ 200 ಮೀಟರ್ ದೂರದ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.ಬಾಲಕ ಹಬೀಬ್ ಕೃಷಿಕರಾದ ನೌಶಾದ್ ರವರ ಏಕೈಕ ಪುತ್ರನಾಗಿದ್ದನು. ಕಾಸರಗೋಡು ನಗರ ಠಾಣಾ ಪೊಲೀಸರು ಮಹಜರು ನಡೆಸಿದರು.
ಮಂಗಳೂರು: ನಗರದ ಮರವೂರು ಫಲ್ಗುಣಿ ನದಿಯಲ್ಲಿ ಈಜಲು ತೆರಳಿದ ನಾಲ್ವರು ಯುವಕರ ಪೈಕಿ ಇಬ್ಬರು ಯುವಕರು ನೀರುಪಾಲಾದ ಘಟನೆ ರವಿವಾರ ಸಂಜೆ ಸಂಭವಿಸಿದೆ. ಮಂಗಳೂರು ಕೊಟ್ಟಾರಚೌಕಿ ನಿವಾಸಿ ಸುಮಿತ್ (20) ಹಾಗೂ ಉರ್ವಸ್ಟೋರ್ ನಿವಾಸಿ ಅನೀಶ್ (19) ನಾಪತ್ತೆಯಾದ ಯುವಕರು. ಮರವೂರು ವೆಂಟೆಡ್ ಡ್ಯಾಂನ ಪಕ್ಕದಲ್ಲಿರುವ ರೈಲ್ವೆ ಸೇತುವೆಯ ಬಳಿಯ ಫಲ್ಗುಣಿ ನದಿಯಲ್ಲಿ ಈಜಲು ನಾಲ್ವರು ಯುವಕರ ತಂಡ ರವಿವಾರ ಸಂಜೆ 4ಗಂಟೆಗೆ ಹೋಗಿದ್ದರು. ಈ ವೇಳೆ ಸುಮಿತ್ ಹಾಗೂ ಅನೀಶ್ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಜೊತೆಗಿದ್ದ ಕೋಡಿಕಲ್ ನಿವಾಸಿಗಳಾದ ಅರುಣ್(19) ಹಾಗೂ ದೀಕ್ಷಿತ್(18) ಪಾರಾಗಿದ್ದಾರೆ. ನಾಪತ್ತೆಯಾದವರ ಹುಡುಕಾಟಕ್ಕಾಗಿ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ಆಗಮಿಸಿ, ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಜಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ರಾಜ್ಯದಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆ ನಡೆದಿದ್ದು, ಕೌಟುಂಬಿಕ ಕಲಹದಿಂದ ಬೇಸತ್ತು ಇಬ್ಬರು ಮಕ್ಕಳೊಂದಿಗೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೋಮ್ಮನಹಳ್ಳಿಯಲ್ಲಿ ಕೌಟುಂಬಿಕ ಕಲಹದಿಂದ ಬಾವಿಗೆ ಹಾರಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೌಟುಂಬಿಕ ಕಲಹದಿಂದ ನೊಂದ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಮಂಗಳೂರು: ಸೈಬರ್ ಕೈಂ ಬ್ರಾಂಚ್ ಅಧಿಕಾರಿ ಎಂಬುದಾಗಿ ಪರಿಚಯಿಸಿಕೊಂಡು ವ್ಯಕ್ತಿಯೋರ್ವರನ್ನು ಬೆದರಿಸಿ 35 ಲಕ್ಷ ರೂ ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರು ನಗರ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿಯೋರ್ವರು ಸೆಪ್ಟೆಂಬರ್ 24ರಂದು ಮನೆಯಲ್ಲಿರುವಾಗ ಮಧ್ಯಾಹ್ನ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಆತನನ್ನು ಮುಂಬಯುಯ ಡಿಎಚ್‌ಎಲ್ ಕೊರಿಯರ್ ಸರ್ವಿಸ್ ಕಂಪೆನಿಯಕಾರ್ತಿಕ್‌ಶರ್ಮಾ ಎಂದು ಪರಿಚಯಿಸಿಕೊಂಡು ‘ಮುಂಬಯಿಯಿಂದ ತೈವಾನ್‌ಗೆ ಕಾನೂನುಬಾಹಿರವಾಗಿ ಮಾದಕ ವಸ್ತುಗಳಿರುವ ಕೊರಿಯರ್ ನಿಮ್ಮ ಹೆಸರಿನಲ್ಲಿ ಬಂದಿದೆ. ಅದನ್ನು ಮುಂಬಯಿ ಸೈಬರ್ ಕೈಂ ಬ್ರಾಂಚ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ನೀವು ಸೈಬರ್ ಕ್ರೈಂ ಅಧಿಕಾರಿಗಳೊಂದಿಗೆ ಮಾತನಾಡಬೇಕು’ ಎಂದು ಹೇಳಿ 9957376759 ನಂಬರ್ ಅನ್ನು ನೀಡಿದ್ದಾನೆ. ದೂರುದಾರರು ಆ ನಂಬರ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ಆತನನ್ನು ಸೈಬರ್ ಕೈಂನ ಅಧಿಕಾರಿ ಪ್ರಾಣೇಶ್ ಗುಪ್ತಾ ಎಂದು ಪರಿಚಯಿಸಿಕೊಂಡು ವೀಡಿಯೋ ಕಾಲ್ ಮೂಲಕ ದೂರುದಾರರಲ್ಲಿ ಮಾತನಾಡಿ ‘ಅಂತಾರಾಷ್ಟ್ರೀಯ ಡ್ರಗ್ಸ್ ಪ್ರಕರಣದಲ್ಲಿ ನಿಮ್ಮ ಹೆಸರು ನಮೂದಿಸಿದ್ದು, ನಿಮ್ಮನ್ನು ಬಂಧಿಸುತ್ತೇವೆ. ಹಣ…
ಮುಲ್ಕಿ: ಡೆತ್ ನೋಟ್ ಬರೆದಿಟ್ಟು ಬಾಲಕಿಯೊಬ್ಬಳು ಪ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಲ್ಕಿ ಸಮೀಪದ ಅತಿಕಾರಿಬೆಟ್ಟು ರೈಲ್ವೆ ಗೇಟ್ ಬಳಿಯ ಕ್ವಾಟರ್ಸ್ ನಲ್ಲಿ ಶನಿವಾರ ಸಂಜೆ ನಡೆದಿದೆ. ಕೊಂಕಣ ರೈಲ್ವೆ ಗೇಟ್ ಸಿಬ್ಬಂದಿ ಮಹೇಶ್ ನಾಯಕ್ ಎಂಬುವರ ಪುತ್ರಿ ಉಜ್ವಲ (17) ಮೃತ ಬಾಲಕಿ. ಬಾಲಕಿ ಉಜ್ವಲ ಮುಲ್ಕಿ ವಿಜಯ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಕಾಲೇಜಿನಲ್ಲಿ ನಡೆದ ಮೀಟಿಂಗ್ ಮುಗಿಸಿಕೊಂಡು ಮನೆ ಕಡೆ ಬಂದಿದ್ದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ. ಈಕೆ ಆತ್ಮಹತ್ಯೆ ಸಂದರ್ಭ ತಂದೆ ಮಹೇಶ್ ನಾಯಕ್ ಮೈಲೊಟ್ಟು ರೈಲ್ವೇ ಗೇಟ್ ಬಳಿ ಕರ್ತವ್ಯಕ್ಕೆ ಹಾಜರಾಗಿದ್ದು, ತಾಯಿ ಊರಾದ ಭಟ್ಕಳಕ್ಕೆ ತೆರಳಿದ್ದು ಮೃತಳ ಅಣ್ಣ ಮುಕ್ಕ ಕಾಲೇಜಿನಲ್ಲಿ ಕಲಿಯುತ್ತಿದ್ದು ಕಾಲೇಜು ಮುಗಿಸಿ ಸಂಜೆ 6:30 ಗಂಟೆ ಸುಮಾರಿಗೆ ಮನೆಗೆ ಬಂದು ನೋಡುವಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಮೃತಳ ರೂಮ್ ನಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು ಅದರಲ್ಲಿ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಗ್ಗೆ ಬರೆದಿದ್ದಾಳೆ.…
ಪುತ್ತೂರು:ಬಲ್ನಾಡು ಉಜಿರುಪಾದೆಯಲ್ಲಿ ಸಾಲ ಮರುಪಾವ ತಿಗೆ ಸಂಬಂಧಿಸಿ ಮನೆಗೆ ತೆರಳಿದ್ದ ಬ್ಯಾಂಕ್ ಸಿಬಂದಿಗಳಿಗೆ ಪಿಸ್ತೂಲ್ ತೋರಿಸಿಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿದೂರು ದಾಖಲಾಗಿದ್ದು, ಬ್ಯಾಂಕ್ ಸಿಬಂದಿ ವಿರುದ್ಧ ಮನೆಯಲ್ಲಿದ್ದ ಮಹಿಳೆ ಮಾನಭಂಗಕ್ಕೆ ಯತ್ನಿಸಿರುವ ದೂರು ನೀಡಿದ್ದಾರೆ. ಕಾರಿನಲ್ಲಿ ಬಂದ ಅಪರಿಚಿತರು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಸಾಲ ತೀರಿಸಲು ಸಾಧ್ಯವಿಲ್ಲದಿದ್ದರೆ ನಮ್ಮೊಂದಿಗೆ ಬನ್ನಿ ಎಂದು ಮಾನಭಂಗಕ್ಕೆ ಯತ್ನಿಸಿದ್ದಲ್ಲದೆ, ಈ ಬಗ್ಗೆ ದೂರು ನೀಡಿದರೆ ನೀವು ಪಿಸ್ತೂಲ್ ತೋರಿಸಿ ಬೆದರಿಸಿದ್ದೀರೆಂದು ನಿಮ್ಮ ವಿರುದ್ಧವೇ ದೂರು ನೀಡಿ ನಿಮ್ಮನ್ನು ಜೈಲಿಗೆ ಹಾಕಿಸುತ್ತೇವೆ ಎಂದು ಬೆದರಿಸಿರುವುದಾಗಿ ಮನೆಯಲ್ಲಿದ್ದ ಸಂತ್ರಸ್ತ ಮಹಿಳೆ ಬಲ್ನಾಡು ಉಜಿರುಪಾದೆ ನಿವಾಸಿ ಕೀರ್ತಿ ಅಖಿಲೇಶ್ ಅವರು ಮೂವರ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೆ. 25ರ ಅಪರಾಹ್ನ 3 ಗಂಟೆಗೆ ಮನೆಯಲ್ಲಿ ಮಹಿಳೆಯರು ಮಾತ್ರ ಇದ್ದ ಸಮಯದಲ್ಲಿ ಕಾರಿನಲ್ಲಿ ಬಂದ ಮೂವರು ಮನೆಯಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿದಲ್ಲದೆ ವಿಚಾರಿಸಿ ದಾಗ ತಮ್ಮ ಗುರುತು ಪರಿಚಯ ನೀಡದೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ನಿಮ್ಮ ಮನೆಯನ್ನು…
ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ಕೆಮ್ಮಾರ ಎಂಬಲ್ಲಿ ನಡೆದಿದೆ. ಅಪಘಾತದ ವಿಡಿಯೋ ಸಿಸಿಟಿವಿ ಸೆರೆಯಾಗಿದೆ. ಕಡಬ ಕಡೆಯಿಂದ ಕೆಮ್ಮಾರ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಅಡ್ಡಲಾಗಿ ಬಿದ್ದ ಕಾರನ್ನು ಕೂಡಲೇ ಸ್ಥಳೀಯರು ಕೂಡಿಕೊಂಡು ಮೇಲೆಕ್ಕೆತ್ತಿ ಸರಿ ಮಾಡಿ ನಿಲ್ಲಿಸಿದ್ದಾರೆ. ಬಸ್ ನಿಲ್ದಾಣದ ಬಳಿಯೇ ಈ ಘಟನೆ ನಡೆದಿದ್ದು, ಅಷ್ಟರಲ್ಲಾಗಲೇ ಬಸ್ ಬಂದು ಹೋಗಿದ್ದರಿಂದ ಅಲ್ಲಿ ಹೆಚ್ಚಿನ ಪ್ರಯಾಣಿಕರು ಇರಲಿಲ್ಲ.










