Author: main-admin

ಮಂಗಳೂರು: ಸಾಂಸ್ಕೃತಿಕ ಮನಸ್ಸುಗಳನ್ನು ಒಗ್ಗೂಡಿಸಿಕೊಂಡು, ಎಲ್ಲರಲ್ಲೂ ಸಾಂಸ್ಕೃತಿಕ ಉಲ್ಲಾಸ ಮೂಡಿಸುವ ಸದುದ್ದೇಶದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ “ಆಳ್ವಾಸ್‌ ವಿರಾಸತ್‌’ 30ನೇ ವರ್ಷದ ಹೊಸ್ತಿಲಲ್ಲಿದ್ದು, ಸುಮನಸರ ಸ್ವಾಗತಕ್ಕಾಗಿ ವಿದ್ಯಾಗಿರಿ ಕ್ಯಾಂಪಸ್‌ ಸಜ್ಜಾಗುತ್ತಿದೆ. ಈ ವರ್ಷದ “ವಿರಾಸತ್‌’ ಸಂಭ್ರಮವು ಡಿ.10ರಿಂದ 15ರ ವರೆಗೆ ನಡೆಯಲಿದೆ.ಡಿ.10ರಿಂದ ಪುತ್ತಿಗೆಯ ವನಜಾಕ್ಷಿ ಕೆ. ಶ್ರೀಪತಿ ಭಟ್‌ ಬಯಲು ರಂಗ ಮಂದಿರದಲ್ಲಿ ಮುಖ್ಯ ಕಾರ್ಯ ಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಉಳಿದಂತೆ ಕೃಷಿ ಮೇಳ, ಆಹಾರ ಮೇಳ, ಕರಕುಶಲ ಮೇಳ, ಫಲಪುಷ್ಪ ಮೇಳ, ಚಿತ್ರಕಲಾ ಮೇಳ, ಕೈಮಗ್ಗ ಸೀರೆಗಳ ಪ್ರದರ್ಶನ ಮುಂತಾದ ವೈಶಿಷ್ಟéಪೂರ್ಣ ಮೇಳಗಳೂ ಇರಲಿವೆ. ದೇಶದ ವಿವಿಧೆಡೆಗಳ ಖ್ಯಾತ ತಂಡ, ವ್ಯಕ್ತಿಗಳಿಂದ ನಡೆಯಲಿರುವ ಸಾಂಸ್ಕೃತಿಕ ಸಂಜೆಯು ಭರಪೂರ ಮನರಂಜನೆ ಒದಗಿಸಲಿದೆ. ಪಂಡಿತ್‌ ವೆಂಕಟೇಶ್‌ ಕುಮಾರ್‌ ಹಿಂದೂ ಸ್ಥಾನಿ ಗಾಯನಸಂಜೆ, ಒಸ್ಮಾನ್‌ ಮೀರ್‌ ಸಂಗೀತ ಲಹರಿ, ನೀಲಾದ್ರಿ ಕುಮಾರ್‌ ಅವರ ಸೌಂಡ್‌ ಆಫ್‌ ಇಂಡಿಯಾ, ಭರತ ನಾಟ್ಯ-ಒಡಿಸ್ಸಿ-ಕಥಕ್‌ ನೃತ್ಯ ಸಂಗಮ, ಸ್ಟೆಕೆಟೊ ಚೆನ್ನೈ ಅವರ ಸಂಗೀತ ಸಂಜೆ ಹೀಗೆ ಪ್ರತಿದಿನವೂ…

Read More

ಉಡುಪಿ: ಅಪರಾಧ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನಿಗೆ ಅರ್ಜಿ ಸಲ್ಲಿಸುವ ವೇಳೆ ನ್ಯಾಯಾಲಯಕ್ಕೆ ನಕಲಿ ಆಧಾರ್‌ ಕಾರ್ಡ್‌ ನೀಡಿದ ಘಟನೆಗೆ ಸಂಬಂಧಿಸಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣವೊಂದು ದಾಖಲಾಗಿತ್ತು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯ, ಎಫ್.ಟಿ.ಎಸ್‌.ಸಿ-1,ರಲ್ಲಿ ವಿಚಾರಣೆ ಹಂತದಲ್ಲಿತ್ತು. ಡಿ. 7ರಂದು ಈ ಪ್ರಕರಣದ ವಿಚಾರಣೆಯ ಸಮಯ ಇಬ್ರಾಹಿಂ ಎಂ.ಐ. ಮತ್ತು ಎ.ಕೆ. ಹಮೀದ್‌ ನ್ಯಾಯಾಲಯದ ಮುಂದೆ ಹಾಜರಾಗಿ ಪ್ರಕರಣದಲ್ಲಿನ ಆರೋಪಿಗಳ ಪರ ಜಾಮೀನು ನೀಡಲು ಆಧಾರ್‌ ಕಾರ್ಡ್‌ ಅನ್ನು ನ್ಯಾಯಾ ಧೀಶರ ಮುಂದೆ ಹಾಜರುಪಡಿಸಿದ್ದರು. ಇವರುಗಳುಈಗಾಗಲೇ ವಿವಿಧ ನ್ಯಾಯಾಲಯಗಳಲ್ಲಿ ಹಾಜರುಪಡಿ ಸಿದ್ದ ಆಧಾರ್‌ ಕಾರ್ಡ್‌ಗಳನ್ನು ಹಾಗೂ ಈ ದಿನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಆಧಾರ್‌ ಕಾರ್ಡ್‌ಗಳನ್ನು ಪರಿಶೀಲಿಸಿದಾಗ ಸಾಮ್ಯತೆ ಇಲ್ಲದೇ ಇರುವುದು ಕಂಡುಬಂದಿತ್ತು. ಕೋರ್ಟಿಗೆ ಮೋಸ ಮಾಡುವ ದುರುದ್ದೇಶದಿಂದ ಆಧಾರ್‌ ಕಾರ್ಡ್‌ ಫೋರ್ಜರಿಮಾಡಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಜಿಲ್ಲಾನ್ಯಾಯಾಲಯದ ಮುಖ್ಯ ಕಾರ್ಯನಿರ್ವಾಹಕ ಅಬ್ಟಾಸ್‌ ಎಸ್‌. ಅವರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.

Read More

ಮಂಗಳೂರು: ಷೇರು ಟ್ರೇಡಿಂಗ್‌ನಲ್ಲಿ ಹಣ ತೊಡಗಿಸಿದರೆ 500% ಲಾಭಾಂಶ ಬರುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 46 ಲಕ್ಷ ರೂ. ವಂಚಿಸಿರುವ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ವ್ಯಕ್ತಿಯ ವಾಟ್ಸ್‌ಆ್ಯಪ್‌ಗೆ ಶ್ರದ್ಧಾ ಬೆಲಾನಿ ಎಂಬ ಅಪರಿಚಿತಳು ARES MANAGEMENT CORPORATION ಪರವಾಗಿ ಷೇರು ಟ್ರೇಡಿಂಗ್‌ನಲ್ಲಿ ಹಣ ತೊಡಗಿಸಿದರೆ 500% ಲಾಭಾಂಶ ಬರುವುದಾಗಿ ನಂಬಿಸಿದ್ದಳು. ಅದರಂತೆ https://play.google.someco.shop/com.rehvu.dqlgdf/install.html ಎಂಬ ಲಿಂಕ್ ಒತ್ತಿ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದರು. ಬಳಿಕ ಅವರು H 777 ARES Stock Exchange Group ಎಂಬ ವಾಟ್ಸಾಪ್ ಗ್ರೂಪ್‌ಗೆ ಸೇರಿಸಿದ್ದರು. ಗ್ರೂಪ್‌ನಲ್ಲಿ ಶ್ರದ್ಧಾ ಬೆಲಾನಿ ಗ್ರೂಪ್ ಅಡ್ಮಿನ್ ಆಗಿದ್ದು, ಈ ಟ್ರೇಡ್‌ನಲ್ಲಿ ಅಭಿಷೇಕ್ ರಾಮ್ ಜೀ ಚೀಫ್ ಆಗಿರುತ್ತಾರೆ. ಮೊದಲಿಗೆ ಸ್ಟಾಕ್ ಪರ್ಚೇಸ್ ಮಾಡಲು ತನ್ನ ಬ್ಯಾಂಕ್‌ನಿಂದ 2 ಲಕ್ಷ ಹಣವನ್ನು ಆರ್‌ಟಿಜಿಎಸ್ ಮಾಡಿದ್ದರು. ಮರುದಿನ ಆ ಸ್ಟಾಕ್‌ನ್ನು ಸೇಲ್ ಮಾಡಿದ್ದು, ಇದರಿಂದ 50,000 ರೂ. ಲಾಭವಾಗಿ ಬಂದಿರುತ್ತದೆ. ಇದನ್ನು ನಂಬಿದ ಇವರು ಇನ್ನು ಹೆಚ್ಚಿನ ಲಾಭ ಪಡೆಯುವ…

Read More

ಉಳ್ಳಾಲ: ಮನೆಯೊಳಗಡೆ ಭಾರೀ ಸ್ಫೋಟವುಂಟಾಗಿ ತಾಯಿ ಹಾಗೂ ಮೂವರು ಹೆಣ್ಮಕ್ಕಳು ಗಂಭೀರ ಸುಟ್ಟ ಗಾಯಗಳಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಅಡುಗೆ ಗ್ಯಾಸ್ ಸಿಲಿಂಡರ್ ಸ್ಫೋಟಿಸಿ ಘಟನೆ ಸಂಭವಿಸಿದೆ ಎನ್ನಲಾಗಿದೆ. ಶನಿವಾರ ಮಧ್ಯರಾತ್ರಿ ನಾಟೆಕಲ್ ಮಂಜನಾಡಿ ಎಂಬಲ್ಲಿ ಘಟನೆ ಸಂಭವಿಸಿದೆ. ಮಂಜನಾಡಿಯ ಖಂಡಿಕ ನಿವಾಸಿ ವಿದೇಶದಲ್ಲಿರುವ ಮುತ್ತಲಿಬ್ ಎಂಬವರ ಮನೆಯಲ್ಲಿ ಸ್ಫೋಟ ನಡೆದಿದೆ. ಮುತ್ತಲಿಬ್ ಪತ್ನಿ ಖುಬ್ರಾ ಮತ್ತು ಮೂವರು ಮಕ್ಕಳಾದ ಮೆಅದಿಯಾ, ಮಝಿಯಾ, ಮಾಯಿದಾ ಅವರು ಒಂದೇ ಕೊಠಡಿಯಲ್ಲಿ ಮಲಗಿದ್ದರು. ಮಧ್ಯರಾತ್ರಿ ವೇಳೆ ಮನೆಯೊಳಗಡೆ ಭಾರೀ ಸ್ಫೋಟದ ಸದ್ದು ಕೇಳಿಸಿದೆ. ಸ್ಫೋಟದ ತೀವ್ರತೆಗೆ ತಾರಸಿ ಮನೆಯ ಮೇಲ್ಭಾಗದ ಸಿಮೆಂಟ್ ಶೀಟ್ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದೆ. ತಾಯಿ ,ಮಕ್ಕಳು ಮಲಗಿದ್ದ ಕೊಠಡಿ, ಮಂಚ, ಕಿಟಕಿ ಸಂಪೂರ್ಣ ಛಿಧ್ರಗೊಂಡು ಸುಟ್ಟು ಕರಕಲಾಗಿದೆ. ಈ ಸಂದರ್ಭ ತಾಯಿ ಜೊತೆ ಮಲಗಿದ್ದ ಹಿರಿ ಮಗಳು ಬಾಗಿಲು ತೆರೆದಿದ್ದಾಳೆ. ತಕ್ಷಣ ನೆರವಿಗೆ ಧಾವಿಸಿದ ಸ್ಥಳೀಯರು ಬೆಂಕಿ ನಂದಿಸಿ, ಗಂಭೀರ ಸ್ಥಿತಿಯಲ್ಲಿದ್ದ…

Read More

ಮಂಗಳೂರು: ನಗರದ ಕೆಂಜಾರಿನಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಇ-ಸಿಗರೇಟ್ ಅನ್ನು ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಡಿಸೆಂಬರ್ 1ರಂದು IX832/IX814 ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಕೇರಳದ ಕಾಸರಗೋಡಿನ ನಿವಾಸಿಗಳಾದ ಇಬ್ಬರು ಪ್ರಯಾಣಿಕರು ಅನುಮಾನಾಸ್ಪದವಾಗಿ ವಿಮಾನ ನಿಲ್ದಾಣದಲ್ಲಿ ವರ್ತಿಸಿದ್ದರು. ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಮಗ್ಲಿಂಗ್ ಬೆಳಕಿಗೆ ಬಂದಿದೆ. ಇಬ್ಬರಿಂದ ಅಕ್ರಮ ಸಾಗಾಟದ ಚಿನ್ನ ಮತ್ತು ಇ-ಸಿಗರೇಟ್ ವಶಪಡಿಸಲಾಗಿದೆ. ಓರ್ವ ಪ್ರಯಾಣಿಕನಿಂದ 24ಕ್ಯಾರಟ್ ಶುದ್ಧತೆಯ ಚಿನ್ನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈತನಿಂದ 625ಗ್ರಾಂ ತೂಕದ 48,75,000 ರೂಪಾಯಿ ಮೌಲ್ಯದ ಚಿನ್ನ ವಶಪಡಿಸಲಾಗಿದೆ. ಇನ್ನೊರ್ವ ಪ್ರಯಾಣಿಕನಿಂದ 1,41,134 ರೂಪಾಯಿ ಮೌಲ್ಯದ ಇ-ಸಿಗರೇಟ್‌ಗಳನ್ನು ವಶಪಡಿಸಲಾಗಿದೆ.

Read More

ಕುಕ್ಕೆ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಕೆ.ಎಸ್‌.ಆರ್.ಟಿ.ಸಿ ಬಸ್‌ನ ಚಾಲಕ ಎದೆನೋವಿನಿಂದ ಅಸ್ವಸ್ಥಗೊಂಡ ಘಟನೆ ನಡೆದಿದೆ.ಕಡಬ ತಾಲೂಕಿನ ಆತೂರು ಎಂಬಲ್ಲಿ ಈ ಘಟನೆ ನಡೆದಿದ್ದು, ವೇಗವಾಗಿ ಬರುತ್ತಿದ್ದ ಬಸ್ ಇದ್ದಕ್ಕಿದ್ದಂತೆ ನಿಧಾನಗೊಂಡಿದೆ. ಈ ವೇಳೆ ಜಾಗೃತಗೊಂಡ ನಿರ್ವಾಹಕ ಚಾಲಕನತ್ತ ಗಮನಿಸಿದ್ದು, ಚಾಲಕ ಎದೆನೋವಿನಲ್ಲಿ ಒದ್ದಾಡುವುದು ಕಂಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ನಿರ್ವಾಹಕ ಚಾಲಕನ ಮೂಲಕ ಬಸ್ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಅವರನ್ನು ಸೀಟೊಂದರಲ್ಲಿ ಮಲಗಿಸಿ ತಾನೇ ಬಸ್ ಚಲಾಯಿಸಿಕೊಂಡು ಉಪ್ಪಿನಂಗಡಿ ತನಕ ಕರೆ ತಂದಿದ್ದಾರೆ. ಉಪ್ಪಿನಂಗಡಿಯಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆ ತರಲಾಗಿದೆ. ಬಸ್‌ ನಲ್ಲಿ ಮೂವತ್ತು ಜನ ಪ್ರಯಾಣಿಕರಿದ್ದು, ಬಸ್ ನಿರ್ವಾಹಕನ ಸಮಯಪ್ರಜ್ಞೆಯನ್ನು ಮೆಚ್ಚಿಕೊಂಡಿದ್ದಾರೆ. ಬಸ್ ಚಾಲಕ ಗಣಪತಿ ಅವರು ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣವಾಗಿಗಾಂಜಾ ದಂಧೆಯನ್ನು ನಿಷೇಧಿಸಲು ಇಲಾಖೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮುಲೈ ಮುಹಿಲನ್ ಎಂ.ಪಿ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಸೂಚನೆ ನೀಡಿದ್ದಾರೆ.ಶಿಕ್ಷಣ ಸಂಸ್ಥೆಗಳಲ್ಲಿ ಸಂಪೂರ್ಣವಾಗಿ ಡ್ರಗ್ಸ್‌ ಜಾಲವನ್ನು ನಿಷೇಧಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಡ್ರಗ್ಸ್ ಚಟದಲ್ಲಿ ಭಾಗಿಯಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ವಿದ್ಯಾರ್ಥಿಗಳ ಚಲನವಲನಗಳನ್ನು ಆಪ್ತ ಸಮಾಲೋಚಕರನ್ನಿಟ್ಟುಕೊಂಡು ಗಮನಿಸಿ, ವಿದ್ಯಾರ್ಥಿಗಳ ಮನಃಪರಿವರ್ತನೆ ಹಾಗೂ ಅವರಿಗೆ ಎಲ್ಲಿಂದ ಡ್ರಗ್ಸ್ ಲಭ್ಯವಾಗುತ್ತಿದೆ ಎಂಬುವುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. ಇದರಿಂದ ಪೊಲೀಸರ ಕಾರ್ಯಾಚರಣೆಯು ಸುಲಭ ಎಂದು ಅವರು ತಿಳಿಸಿದರು.

Read More

ಮಂಗಳೂರು: ಹಲ್ಲೆಗೆ ಪ್ರತೀಕಾರಕ್ಕೆ ನಡೆದ ತಲವಾರ ದಾಳಿ ನಡೆಸಿದ್ದರೆನ್ನಲಾದ ಪ್ರಕರಣದಲ್ಲಿ ಬಜರಂಗದಳದ ಸಂಯೋಜಕ ಅರ್ಜುನ್ ಮಾಡೂರುನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ತೊಕ್ಕೊಟ್ಟುವಿನ ಮೇಲ್ಸೇತುವೆಯಲ್ಲಿ ಅ.16ರಂದು ರಾತ್ರಿ ಕುಂಪಲದ ಶರತ್, ಕೇರಳದ ಇಬ್ರಾಹಿಂ ಖಲೀಲ್ ಅವರ ಕಾರುಗಳ ನಡುವೆ ನಡೆದಿದ್ದ ಸಣ್ಣ ಅಪಘಾತ ಪ್ರಕರಣವು ಉಳ್ಳಾಲ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಶರತ್ ಸ್ನೇಹಿತ ಅರ್ಜುನ್ ಮಾಡೂರು ಉಳ್ಳಾಲ ಪೊಲೀಸ್ ‌ ಠಾಣೆಗೆ ಭೇಟಿ ನೀಡಿ ಇನ್‌ಸ್ಪೆಕ್ಟರ್ ಕೊಠಡಿಯೊಳಗೆ ಕಾರು ಚಾಲಕರಾದ ಶರತ್, ಖಲೀಲ್‌ರೊಂದಿ ಸಂಧಾನ ನಡೆಸುತ್ತಿದ್ದ ವೇಳೆ ಖಲೀಲ್ ಸಹೋದರ ಹೊಸಂಗಡಿ ಕಡಂಬಾರು ನಿವಾಸಿ ಮಹಮ್ಮದ್ ಆಸಿಫ್ ಎಂಬಾತ ಅರ್ಜುನ್ ಮಾಡೂರಿಗೆ ಏಕಾಏಕಿ ಹಲ್ಲೆ ನಡೆಸಿದ್ದ. ಅರ್ಜುನ್ ಮಾಡೂರು ಹಲ್ಲೆಗೈದಿದ್ದ ಆರೋಪಿ ಮಹಮ್ಮದ್ ಆಸಿಫ್ ಜಾಮೀನಿನಲ್ಲಿ ಜೈಲಿನಿಂದ ಹೊರಬರುತ್ತಲೇ ಪ್ರತೀಕಾರ ತೀರಿಸಲು ಆತನ ಮೇಲೆ ತಲವಾರು ದಾಳಿಗೆ ಯತ್ನಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದರು. ಇದೀಗ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿ ಅರ್ಜುನ್ ಮಾಡೂರುನನ್ನು ಉಳ್ಳಾಲ ಪೊಲೀಸರು…

Read More

ಮಂಗಳೂರು: ಹಿಂದೂ ಯುವತಿ ಮತ್ತು ಮಹಿಳೆ ಇರುವ ಮನೆಗೆ ಅನ್ಯ ಕೋಮಿನ ಯುವಕನೋರ್ವ ಬಂದು ಕಿಟಾಲೆ ಮತ್ತು ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ. ಮಾಹಿತಿ ಪಡೆದ ಸ್ಥಳೀಯರು ಯುವಕಕನ್ನು ಹಿಡಿದು ಧರ್ಮದೇಟು ನೀಡಿ ಪೋಲಿಸರಿಗೆ ಒಪ್ಪಿಸಿದ್ದಾರೆ. ಈತ ಮಹಿಳೆಗೆ ರವಿ ಎಂಬ ಹೆಸರಿನಲ್ಲಿ ಒಂದು ವರ್ಷದ ಹಿಂದೆ ಪರಿಚಯವಾಗಿದ್ದು ಆಗಾಗ ಮಹಿಳೆ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಇವರಿಬ್ಬರ ಮಧ್ಯೆ ಹಣಕಾಸಿನ ವ್ಯವಹಾರವೂ ಇತ್ತೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಬಂದಿದ್ದ ಯುವಕ ಮಹಿಳೆ ಮತ್ತು ಮಹಿಳೆಯ ಅಕ್ಕನ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಇದರಿಂದ ಮಹಿಳೆ ಮತ್ತು ಯುವಕನ ಮಧ್ಯೆ ಗಲಾಟೆ ನಡೆದಿದೆ. ಮಾಹಿತಿ ಪಡೆದ ಸ್ಥಳಿಯರು ಬಂದು ಯುವಕಕನ್ನು ಹಿಡಿದು ಧರ್ಮದೇಟು ನೀಡಿ ವಿಚಾರಿಸಿದ್ದಾರೆ. ಈ ವೇಳೆ ತಾನು ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದು, ತನ್ನ ಹೆಸರು ಸೈಯದ್ ನಹೀಮ್ (25) ಎಂದು ಬಾಯ್ಬಿಟ್ಟಿದ್ದಾನೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಯುವಕಕನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಂಕನಾಡಿ ನಗರ ಠಾಣಾ…

Read More

ಮಂಗಳೂರು : ಬೆಂಗಳೂರಿನಿಂದ ಮಂಗಳೂರು ನಗರಕ್ಕೆ ನಿಷೇಧಿತ ಮಾದಕದ್ರವ್ಯ ಎಂಡಿಎಂಎಯನ್ನು ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು 200 ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಅಂದ್ರಹಳ್ಳಿ ನಿವಾಸಿ ದರ್ಶನ್ ಕೆ.ಜಿ.(25), ನೈಜೀರಿಯಾ ಪ್ರಜೆ, ಹಾಲಿ ಬೆಂಗಳೂರಿನ ಬೆಟ್ಟಹಲ್ಸೂರ್ ನಲ್ಲಿ ವಾಸ್ತವ್ಯವಿರುವ ಚಿಕ ಜೋಸೇಫ್ ಇಝಿ(26) ಬಂಧಿತ ಆರೋಪಿಗಳು. ಇತ್ತೀಚೆಗೆ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಇಕ್ಬಾಲ್ ಎಂಬಾತನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳಿಗೆ ಎಂಡಿಎಂಎಯನ್ನು ಪೂರೈಕೆ ಮಾಡುತ್ತಿದ್ದ ಡ್ರಗ್ ಪೆಡ್ಲರ್‌ಗಳ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿದ್ದಾರೆ. ಆದ್ದರಿಂದ ಮಂಗಳೂರಿನಿಂದ ಹಾಗೂ ಬೆಂಗಳೂರಿನಿಂದ ಮಾದಕ ವಸ್ತುವಾದ ಎಂಡಿಎಂಎಯನ್ನು ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 10,00,000 ರೂ‌. ಮೌಲ್ಯದ 200 ಗ್ರಾಂ ನಿಷೇಧಿತ ಮಾದಕದ್ರವ್ಯ ಎಂಡಿಎಂಎ, ಮಾರುತಿ ಬಲೆನೋ ಕಾರು, 5…

Read More