Author: main-admin

ಮಂಗಳೂರು ನಗರದಲ್ಲಿ ಪೋಕ್ಸೋ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಗಣಪತಿ ಗುಡಿಯ ಅರ್ಚಕ ಶಂಕರ ಅಲೆವೂರಾಯನನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಈತ 2021ರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಬಗ್ಗೆ ಇತ್ತೀಚೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣದಾಖಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಅಮಾನತು ಮಾಡಲಾಗಿದೆ ಎಂದು ದೇವಳದ ಕಾರ್ಯ ನಿರ್ವಹಣಾಧಿಕಾರಿಯವರು ಹೇಳಿದ್ದಾರೆ.

Read More

ಮಂಗಳೂರು : ನಗರದ ಪದವಿನಂಗಡಿ ಸಮೀಪದ ಭಟ್ರಕುಮೇರು ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ಸ್ವಾಮಿ ಕೊರಗ ತನಿಯ ದೈವದ ತೃತೀಯ ವರ್ಷದ ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆಯು ಸಾನಿಧ್ಯದ ಯಜಮಾನರು ಹಾಗೂ ದೈವಾರಾಧಕರಾದ ಶ್ರೀ ಭಾಸ್ಕರ ಬಂಗೇರ ಇವರ ನೇತ್ರತ್ವದಲ್ಲಿ ಇದೇ ಬರುವ ತಾ| 08-12-2024ನೇ ಅದಿತ್ಯವಾರದಂದು ಬೆಳಿಗ್ಗೆ 6 ಗಂಟೆಗೆ ತಂತ್ರಿಗಳಾದ ಶ್ರೀ ರವಿ ಆನಂದ ಶಾಂತಿ ಆಡುಮರೋಳಿ ಇವರ ಮಾರ್ಗದರ್ಶನದಲ್ಲಿ ಜರುಗಲಿದೆ. ಅಂದು ಬೆಳಿಗ್ಗೆ 6ರಿಂದ ಪಂಚಗವ್ಯಶುದ್ಧಿ, ಸ್ವಸ್ತಿಪುಣ್ಯಹ, ಮಹಾಗಣಪತಿ ಹೋಮ ಸಾನಿಧ್ಯಕಲಶ, ಪ್ರಸನ್ನ ಸೇವೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಗಂಧಕಾಡು ಇವರಿಂದ ಭಜನ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಸ್ವಾಮಿ ಕೊರಗ ತನಿಯ ದೈವದ ಕೋಲ ಸೇವೆ ಜರುಗಲಿದೆ. ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ಮಧ್ಯಾಹ್ನ 1 ಗಂಟೆಯಿಂದ ಶ್ರೀಮತಿ ವಿಜಯ ಭಾಸ್ಕರ್ ಮತ್ತು ಶ್ರೀ ಗಣೇಶ್ ಮಂಗಳೂರು ಇವರಿಂದ “ಭಕ್ತಿಗಾನ ಸುಧೆ” ಸಂಜೆ 4 ಗಂಟೆಯಿಂದ “ಸ್ಪೂರ್ತಿ…

Read More

ಉಪ್ಪಿನಂಗಡಿ: ಬಸ್ ನಿಲ್ದಾಣ ಬಳಿಯಿರುವ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ವ್ಯಕ್ತಿಯೊಬ್ಬರ ಶವ ಕಂಬಳಿ ಹೊದ್ದು ಮಲಗಿದ ರೀತಿಯಲ್ಲಿ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. ಅಪರಿಚಿತ ವ್ಯಕ್ತಿಯ ಮೃತದೇಹ ಇದಾಗಿದ್ದು ಸುಮಾರು 45 ವರ್ಷ ಪ್ರಾಯದ ಈ ವ್ಯಕ್ತಿಯ ತಲೆಗೆ ಕಲ್ಲು ಅಥವಾ ಆಯುಧದಿಂದ ಹೊಡೆದು ಕೊಲೆ ನಡೆಸಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮೃತದೇಹದ ಸ್ವಲ್ಪ ದೂರದಲ್ಲಿ ಸಿಮ್ ತೆಗೆದ ಮೊಬೈಲ್ ಒಂದು ಪತ್ತೆಯಾಗಿದೆ. ಉಪ್ಪಿನಂಗಡಿ ಗ್ರಾ.ಪಂ. ಗೆ ಸೇರಿದ್ದು, ಗ್ರಂಥಾಲಯ ನಿರ್ಮಾಣಕ್ಕಾಗಿ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಕೆಲಸಗಾರರು ಕೆಲಸಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ನಡೆಸಿ ತನಿಖೆ ಕೈಗೊಂಡಿದ್ದಾರೆ.

Read More

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದಿದೆ. ನವೆಂಬರ್ 30 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊದಲ ಬಾರಿಗೆ ಬಾಂಬ್ ಬೆದರಿಕೆ ಬಂದಿತ್ತು. ರಾಮೇಶ್ವರಂ ಕೆಫೆ ಸ್ಫೋಟದ ಮಾದರಿಯಲ್ಲಿ ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ ಬಂದಿತ್ತು. ಈಗ ಬಂದಿರುವ ಇ-ಮೇಲ್ ಮೂಲಕ ಕಳುಹಿಸಲಾದ ಸಂದೇಶದಲ್ಲಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಲಾಗಿದೆ. ಈಗ ತಿರುಚ್ಚಿ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿರುವ ಟಿಎನ್‌ಎಲ್‌ಎ ಭಯೋತ್ಪಾದಕ ಗುಂಪಿನ ಮುಖ್ಯಸ್ಥ ಎಸ್.ಮಾರನ್ ಅವರನ್ನು ಬಿಡುಗಡೆ ಮಾಡುವಂತೆಯೂ ಇ-ಮೇಲ್ ಒತ್ತಾಯಿಸಿದೆ. ಬೆದರಿಕೆಯ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಅಧಿಕಾರಿಯೊಬ್ಬರು ದೂರು ದಾಖಲಿಸಿದೆ.

Read More

ಅಪರಿಚಿತ ಬೈಕ್‌ ಸವಾರನೊಬ್ಬ ವಿಳಾಸ ಕೇಳುವ ನೆಪದಲ್ಲಿ ಚಿನ್ನದ ಸರ ಸುಲಿಗೆ ಮಾಡಿದ ಘಟನೆ ಕಾರ್ಕಳದ ಬಾರಾಡಿ-ಕಾಂತಾವರ ರಸ್ತೆಯಲ್ಲಿ ಸಂಭವಿಸಿದೆ. ಬೆಳಗ್ಗೆ 11ಕ್ಕೆ ಕಾಂತಾವರ ಗ್ರಾಮದ ಗೋಪಿ ಅವರು ಕಾಂತೇಶ್ವರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಸು ಮನೆಗೆ ಬರುತ್ತಿದ್ದಾಗ ಕಾಂತಾವರ ಗ್ರಾಮದ ಅಂಬರೀಶ ಗುಹೆ ಸಮೀಪ, ಬಾರಾಡಿ-ಕಾಂತಾವರಕ್ಕೆ ಹೋಗುವ ರಸ್ತೆಯಲ್ಲಿ ಓರ್ವ ಬೈಕ್‌ನಲ್ಲಿದ್ದ ಅಪರಿಚಿತ ಹತ್ತಿರಕ್ಕೆ ಬಂದು ತುಳುವಿನಲ್ಲಿ ವಿಳಾಸ ಕೇಳಿದ್ದು, ಅನಂತರ ಅವರನ್ನು ಹಿಡಿದುಕೊಂಡು ಅವರು ಧರಿಸಿದ್ದ ಚಿನ್ನದ ಚೈನ್‌ ಅನ್ನು ಎಳೆದುಕೊಂಡು ಪರಾರಿಯಾಗಿದ್ದಾನೆ. ಗೋಪಿ ಅವರು ಪ್ರತಿರೋಧಿಸಿದ ಸಂದರ್ಭ ಚೈನ್‌ನ ಒಂದು ತುಂಡು ಅವರ ಕೈಯಲ್ಲಿ ಉಳಿದಿದ್ದು, ಕಳ್ಳ ಬಲವಾಗಿ ತಳ್ಳಿದ ಪರಿಣಾಮ ಗೋಪಿ ಅವರ ಕೈ, ಕುತ್ತಿಗೆಗೆ ಗಾಯವಾಗಿದೆ. ಸುಲಿಗೆಯಾದ ಚಿನ್ನದ ಮೌಲ್ಯ 1.20 ಲಕ್ಷ ರೂ. ಎನ್ನಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಡುಪಿ: 6ನೇ ಮಹಡಿಗೆ ವಾಟರ್’ಪೂಫಿಂಗ್ ಅಂತಾ ಹೋಗಿದ್ದ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಉಡುಪಿ ತಾಲ್ಲೂಕು ಮೂಡನಿಡಂಬೂರು ಗ್ರಾಮದ ಅಜ್ಜರಕಾಡು ಬಳಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಸಂತೋಷ್ (46) ಎಂದು ಗುರುತಿಸಲಾಗಿದೆ. ಸಂತೋಷ್ ವಾಟರ್ ಪೂಫಿಂಗ್ ಕೆಲಸವನ್ನು ಮಾಡಿಕೊಂಡಿದ್ದು ಡಿಸೆಂಬರ್ 2 ರಂದು ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ವಾಟರ್ ಪೂಫಿಂಗ್ ಕೆಲಸಕ್ಕೆ ಹೋಗಿದ್ದರು. ಸಂತೋಷ್ ರವರು ಮಧ್ಯಾಹ್ನ 2 ಗಂಟೆಗೆ ಊಟ ಮಾಡಿ ಕಟ್ಟಡದ ಆರನೇ ಅಂತಸ್ಥಿನ ಮೇಲಿರುವ ಟ್ಯಾಂಕಿಗೆ ವಾಟರ್ ಪ್ರೋಫಿಂಗ್ ಮಾಡಲು ತೆರಳಿದ್ದು, ಕೆಲಸವನ್ನು ಮುಗಿಸಿ ವಾಪಸ್ಸು ಕೆಳಗಡೆ ಬರಲು 6ನೇ ಅಂತಸ್ಥಿನ ಮೇಲೆ ಅಳವಡಿಸಿದ ಪಾಲಿಕಾರ್ಮರ್ ಶೀಟ್ ನಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅವುಗಳ ಮಧ್ಯ ಅಳವಡಿಸಿದ ಟ್ರಾಸ್ಸ್ಪರೆಂಟ್ ಶೀಟ್ ಒಂದರ ಮೇಲೆ ಕಾಲು ಇಟ್ಟ ಕಾರಣ ಶೀಟ್ ತೆಳುವಿದ್ದದ್ದರಿಂದ ಸಂತೋಷ್ ರವರು ಆಯತಪ್ಪಿ 6 ನೇ ಅಂತಸ್ಥಿನ ಮೇಲ್ಮಾವಣಿನಿಂದ ನೇರ ನೆಲಕ್ಕೆ ಅಂಗಾತ ಬಿದ್ದು ತಲೆಗೆ ಕೈಗೆ ಪೆಟ್ಟಾದವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು…

Read More

ವಿಟ್ಲ: ಆಟೋ ಚಾಲಕ ಯುವಕನೊಬ್ಬ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀರಕಂಬ ಗ್ರಾಮದ ಬಾಯಿಲ ನಿವಾಸಿ ಪದ್ಮನಾಭ ನಾಯ್ಕ ಅವರ ಪುತ್ರ ಧನರಾಜ್‌( 28) ನಾಪತ್ತೆಯಾದ ಆಟೋ ಚಾಲಕ. ನವಂಬರ್‌ 28ರಂದು ಎಂದಿನಂತೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಬಾಯಿಲದಿಂದ ಬೆಳಿಗ್ಗೆ 8.30 ಗಂಟೆಗೆ ಅಟೋರಿಕ್ಷಾವನ್ನು ತೆಗೆದುಕೊಂಡು ಬಾಡಿಗೆಗೆ ಹೋಗುತ್ತೇನೆಂದು ಹೇಳಿ ಹೋದವನು ಈ ದಿನ ಇನ್ನೂ ಮನೆಗೆ ಬಂದಿರುವುದಿಲ್ಲ, ಈ ಕಾರಣ ಈ ಬಗ್ಗೆ ಸಂಬಂದಿಕರಲ್ಲಿ ,ನೆರೆಕರೆಯವರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗದೆ ಕಾಣೆಯಾಗಿರುತ್ತಾನೆ.ಧನರಾಜ್‌ನ ರಿಕ್ಷಾ ಮಾತ್ರ ಉಪ್ಪಿನಂಗಡಿಯಲ್ಲಿದ್ದು ಆತನ ಮೊಬೈಲ್‌ ನಂಬ್ರ 9008117093ನೇಯದ್ದು ಸ್ವೀಚ್‌ ಆಫ್‌ ಆಗಿರುತ್ತದೆ. ಮನೆಗೂ ಬಾರದೆ ಸಂಭಂದಿಕರ ಹಾಗೂ ಸ್ನೇಹಿತರ ಮನೆಗೂ ಹೋಗದೆ ಕಾಣೆಯಾದ ಧನರಾಜ್‌ನನ್ನು ಪತ್ತೆಮಾಡಿ ಕೊಡಬೇಕಾಗಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Read More

ಕಾಸರಗೋಡು: ಜಿಲ್ಲಾಧಿಕಾರಿಯವರ ನಿವೃತ್ತ ದಫೆದಾರ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕೂಡ್ಲು ರಾಮ ದಾಸ್ ನಗರ ಕಾಳ್ಯಾಂಗಾಡ್ ನ ಪ್ರವೀಣ್ ರಾಜ್ (60) ಎಂದು ಗುರುತಿಸಲಾಗಿದೆ. ಪತ್ನಿ ಆಶಾ ಮನೆಯ ಹೊರಗಡೆ ವಸ್ತ್ರ ತೊಳೆಯುತ್ತಿದ್ದು, ಶಬ್ದ ಕೇಳಿ ಮನೆಯೊಳಗೆ ಬಂದಾಗ ಕೋಣೆಯಲ್ಲಿ ನೇಣು ಬಿಗಿದಿರುವುದು ಕಂಡುಬಂದಿದೆ. ಬೊಬ್ಬೆ ಕೇಳಿ ಪರಿಸರವಾಸಿಗಳು ಆಗಮಿಸಿದ್ದು, ಬಳಿಕ ಪ್ರವೀಣ್‌ರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಜೀವ ಉಳಿಸಲಾಗಲಿಲ್ಲ. ಕಾಸರಗೋಡು ನಗರ ಠಾಣಾ ಪೊಲೀಸರು ಮಹಜರು ನಡೆಸಿದರು. ಪ್ರವೀಣ್ ಅವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಹಲವು ವರ್ಷಗಳ ಕಾಲ ಜಿಲ್ಲಾಧಿಕಾರಿಗಳ ದಫೆಧಾರ್ ರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೂವರು ಜಿಲ್ಲಾಧಿಕಾರಿಗಳಿಂದ ಉತ್ತಮ ಸೇವೆಗಾಗಿ ಗೌರವಿಸಲ್ಪಟ್ಟಿದ್ದರು.

Read More

ಉಳ್ಳಾಲ: ಟೋಲ್ ಸಿಬ್ಬಂದಿಗೆ ಕಾರಿನಲ್ಲಿದ್ದ ಮೂವರ ತಂಡ ಹಲ್ಲೆ ಎಸಗಿರುವ ಘಟನೆ ರಾ.ಹೆ. 66ರ ತಲಪಾಡಿಯಲ್ಲಿ ಭಾನುವಾರ ತಡರಾತ್ರಿ ವೇಳೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ಉಳ್ಳಾಲದ ಓರ್ವನನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಹಲ್ಲೆ ನಡೆಸಿದ ಮೂವರು ಆರೋಪಿಗಳು ಮೂಲತಃ ಉಳ್ಳಾಲ ನಿವಾಸಿಗಳಾಗಿದ್ದು, ಅವರನ್ನು ಝುಲ್ಪಾನ್, ನಿಫಾನ್, ಫಯಾಝ್ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಕೇರಳ ಕಡೆಗೆ ಉತ್ತರಪ್ರದೇಶ ನೋಂದಾಯಿತ ಐ-20 ಕಾರೊಂದರಲ್ಲಿ ಐವರು ಯುವಕರು ತೆರಳುತ್ತಿದ್ದರು. ತಲಪಾಡಿ ಟೋಲ್ ಗೇಟಿನಲ್ಲಿ ಟೋಲ್ ಪಾವತಿಸದೆ ಕಾರು ಮುಂದೆ ಚಲಿಸಿದ್ದು, ಈ ವೇಳೆ ಟೋಲ್ ನಿರ್ವಹಣೆ ನಡೆಸುವ ಇಜಿಎಸ್ ಸಂಸ್ಥೆ ಉದ್ಯೋಗಿ ಕಾರಿನ ಹಿಂಭಾಗಕಕ್ಕೆ ಕೈಯಿಂದ ಬಡಿದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಕಾರಿನಲ್ಲಿದ್ದ ಯುವಕರ ತಂಡ ಕಾರನ್ನು ಮುಂದೆ ನಿಲ್ಲಿಸಿ ಸಿಬ್ಬಂದಿ ಬಳಿಗೆ ಬಂದು ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿರುತ್ತಾರೆ. ಘಟನೆಯಲ್ಲಿ ಟೋಲ್ ಸಿಬ್ಬಂದಿ ಮನು, ಸುಧಾಮ, ಅಮನ್ ಅವರು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ದೃಶ್ಯ ಸಿಸಿ…

Read More

ಬೆಳ್ತಂಗಡಿ: ಸಮೀಪ ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ಸೋಮವಾರ (ಡಿ.02) ಸಂಜೆ ನೇತ್ರಾವತಿ ನದಿಗೆ ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ‌ ಮೃತದೇಹ ಹೊರತೆಗೆಯಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ. ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಎಂಬವರು ಯಾವುದೋ ಕಾರಣಕ್ಕೆ ಸಂಜೆ‌ ಸುಮಾರು 5‌‌ರಿಂದ‌ 6 ಗಂಟೆ ಸುಮಾರಿಗೆ ನದಿಗೆ ಇಳಿದಿದ್ದು ಬಳಿಕ ಮುಳುಗಿ ನಾಪತ್ತೆಯಾಗಿದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿದ್ದು, ಮುಳುಗು ತಜ್ಞ ಈಶ್ವರ್ ಮಲ್ಪೆಗೂ ಮಾಹಿತಿ‌‌‌ ನೀಡಲಾಗಿತ್ತು. ಆದರೆ ಮುಳುಗು ತಜ್ಞ ಬೆಳ್ತಂಗಡಿ‌ಯ‌ ಸಂಜಯ ನಗರದ ಇಸ್ಮಾಯಿಲ್‌ ಹಾಗೂ ಅಗ್ನಿಶಾಮಕದಳದವರು ರಾತ್ರಿ‌11‌ರ‌ ಸುಮಾರಿಗೆ ಮೃತದೇಹ ಮೇಲೆತ್ತಿದ್ದಾರೆ. ಸಂಘದ ಪ್ರಚಾರಕರಾಗಿ ಐದು ವರ್ಷ ಕಾರ್ಯ ನಿರ್ವಹಿಸಿ ಪ್ರಸ್ತುತ ಪುತ್ತೂರು ಜಿಲ್ಲಾ ಧರ್ಮಜಾಗರಣ ಜಿಲ್ಲಾ ಸಂಯೋಜಕರಾಗಿದ್ದರು.

Read More