ಮಂಗಳೂರು: ಇತ್ತೀಚೆಗೆ ನಗರದ ಹಂಪನಕಟ್ಟೆಯ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಾಮಗಾರಿ ಶರವು ಗುಳಿಗ ದೈವದ ಆಗ್ರಹಕ್ಕೆ ತುತ್ತಾಗಿ, ಗುತ್ತಿಗೆದಾರನೇ ದೈವಕ್ಕೆ ಶರಣಾಗಿದ್ದ ಸುದ್ದಿ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಅದೇ ಶರವು ಗುಳಿಗ ದೈವವು ವೆನ್ಲಾಕ್ ಜಿಲ್ಲಾಸ್ಪತ್ರೆಯ ಆವರಣದಲ್ಲಿಯೇ ಆರಾಧನೆಗೆ ಒಳಪಡುವ ಮೂಲಕ ಮತ್ತೆ ಸುದ್ದಿಯಲ್ಲಿದೆ. ಹಂಪನಕಟ್ಟೆಯ ವೆನ್ಲಾಕ್ ಜಿಲ್ಲಾಸ್ಪತ್ರೆ ನೂತನ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಕಟ್ಟಡದ ಮುಂಭಾಗದ ಅಶ್ವತ್ಥಮರದ ಬುಡದಲ್ಲಿ ಗುಳಿಗನನ್ನು ಕಲ್ಲುಹಾಕಿ ಆರಾಧಿಸಲಾಗುತ್ತಿದೆ. ಸುಮಾರು 40ವರ್ಷಗಳ ಹಿಂದೆ ಈ ಜಾಗದಲ್ಲಿ ದಲಿತ ಕುಟುಂಬಗಳು ವಾಸವಾಗಿತ್ತು. ಅವರನ್ನು ಬಳಿಕ ವಾಮಂಜೂರಿಗೆ ಸ್ಥಳಾಂತರಿಸಲಾಗಿತ್ತು. ಆಗ ಅವರು ತಾವು ಆರಾಧಿಸಿಕೊಂಡಿದ್ದ 5ದೈವಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದರು. 4ದೈವಗಳು ಹೋದರೂ ಜಾಗದದೈವ ಗುಳಿಗ ಮಾತ್ರ ಹೋಗಿರಲಿಲ್ಲ. ಗುಳಿಗ ದೈವದ ಸಾನಿಧ್ಯ ಆಸ್ಪತ್ರೆಯ ಆವರಣದ ಅಶ್ವತ್ಥ ಮರದ ಬುಡದಲ್ಲಿತ್ತು. ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಳಿಗ ದೈವದ ಸಾನಿಧ್ಯವಿದ್ದ ಮರವನ್ನು ಅಲ್ಲಿಯೇ ಸ್ಥಳಾಂತರಿಸಲಾಗಿತ್ತು. ಕಾಮಗಾರಿ ಸಂದರ್ಭ ನಾಗಹತ್ಯೆಯೂ ಆಗಿತ್ತು. ಕಾರ್ಮಿಕರಿಗೆ…
Author: main-admin
ಮಂಗಳೂರು: ನಗರದ ಅತ್ತಾವರದ ಶ್ರೀಮತಿ ಶೆಟ್ಟಿ ಎಂಬವರನ್ನು ಕೊಲೆಗೈದು ಮೃತದೇಹವನ್ನು 29ತುಂಡುಗಳನ್ನಾಗಿ ಮಾಡಿ ಬೇರೆಬೇರೆ ಕಡೆಗಳಲ್ಲಿ ಎಸೆದ ಪ್ರಕರಣದಲ್ಲಿ ದಂಪತಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು ಮೂರನೇ ಅಪರಾಧಿಗೆ ಆರುವರೆ ತಿಂಗಳು ಸಜೆಯನ್ನು ವಿಧಿಸಿದೆ. ಸೂಟರ್‌ಪೇಟೆಯ ಜೋನಸ್ ಸ್ಯಾಮ್ಸನ್ (35), ವಿಕ್ಟೋರಿಯಾ ಮಥಾಯಿಸ್ (47) ಹಾಗೂ ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ವಿರುದ್ಧ ಆರೋಪ ಮೊದಲೇ ಸಾಬೀತಾಗಿತ್ತು. ಮಂಗಳವಾರ ತೀರ್ಪು ಪ್ರಕಟಿಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್.ರವರು, ಜೋನಸ್ ಸ್ಯಾಮ್ಸನ್ ಹಾಗೂ ವಿಕ್ಟೋರಿಯಾ ಮಥಾಯಿಸ್‌ಗೆ ಐಪಿಸಿ ಸೆಕ್ಷನ್ 302 (ಕೊಲೆ) ಹಾಗೂ ಸೆಕ್ಷನ್ 34 (ಸಮಾನ ಉದ್ದೇಶದ ಕೊಲೆ) ಅಡಿ ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ದಂಡ ವಿಧಿಸಿದ್ದಾರೆ. ಅಪರಾಧಿಗಳು ದಂಡ ತೆರಲು ತಪ್ಪಿದಲ್ಲಿ ಮತ್ತೆ 1 ವರ್ಷ ಸಾದಾ ಸಜೆ ಅನುಭವಿಸಬೇಕು. ಐಪಿಸಿ ಸೆಕ್ಷನ್ 201 (ಸುಳ್ಳು ಸಾಕ್ಷ್ಯ…
ಕಾರ್ಕಳ: ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಕ್ಸಲ್ ಸದಸ್ಯರಾದ ಕನ್ಯಾಕುಮಾರಿ ಮತ್ತು ರಮೇಶ್ (ಶಿವ ಕುಮಾರ್) ಅವರನ್ನು ಪ್ರಕರಣವೊಂದಕ್ಕೆ ಸಂಬಂಧಿಸಿ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬೆಂಗಳೂರು ಪೊಲೀಸರು ಬಿಗು ಭದ್ರತೆಯೊಂದಿಗೆ ಕರೆತಂದು ಕಾರ್ಕಳ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. 2011ರ ನವಂಬರ್ 19ರಂದು ಹೆಬ್ರಿ ತಾಲೂಕು ಕಬ್ಬಿನಾಲೆಯಲ್ಲಿ ನಡೆದ ಸದಾಶಿವ ಗೌಡ ಅವರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲಾಯಿತು.ಸದಾಶಿವ ಗೌಡ ಅವರನ್ನು ಕನ್ಯಾಕುಮಾರಿಯನ್ನೊಳಗೊಂಡ ನಕ್ಸಲ್ ತಂಡ ಅಪಹರಿಸಿ ಗುಂಡು ಹಾರಿಸಿ ಕೊಲೆ ನಡೆಸಿತ್ತು ಎನ್ನುವ ಆರೋಪ ಇವರ ಮೇಲಿದೆ.
ಮಂಗಳೂರು:ರಾತ್ರಿ ಸುರಿದ ಮಳೆಗೆ ನಗರದ ಹೊರವಲಯ ಉಳ್ಳಾಲ ಟಿಸಿ ರೋಡ್ ಮುಳಿಗುಡ್ಡೆ ಎಂಬಲ್ಲಿ ಮನೆಯ ಅವರಣ ಗೋಡೆ ಮೇಲೆ ಮಣ್ಣು ಕುಸಿದು ಬಿದ್ದಿದ್ದು ಮನೆ ಮಂದಿ ಅತಂಕದಲ್ಲಿದ್ದಾರೆ. ಮನೆಯೊಂದು ಕುಸಿಯುವ ಭೀತಿ ಎದುರಾಗಿದೆ. ರಾತ್ರಿ ಸುಮಾರು 2 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. (ಸೆ.23)ನಿನ್ನೆ ರಾತ್ರಿ ಮಂಗಳೂರು ಸೇರಿದಂತೆ ನಗರದ ಹೊರವಲಯದ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಸ್ಥಳಕ್ಕೆ ಉಳ್ಳಾಲ ಪುರಸಭೆ ಅಧಿಕಾರಿಗಳು ಭೇಟಿ ನೀಡಿದ್ದು ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸುವ ಕಾರ್ಯಚರಣೆ ನಡೆಯುತ್ತಿದೆ.
ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸಚಿವ ಸಂಪುಟದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದ್ದು ಸರಿಯಾಗಿದೆ. ರಾಜ್ಯಪಾಲರು ವಿವೇಚನೆ ಬಳಸಿದ್ದಾರೆ. ‘17 ಎ’ ಅಡಿಯ ಆದೇಶ ಸಮರ್ಪಕವಾಗಿದೆ ಎಂದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಸಿಎಂ ಸಿದ್ದರಾಮಯ್ಯ ಅರ್ಜಿಯನ್ನು ವಜಾಗೊಳಿಸಿದರು. ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ಬಗ್ಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಸುದೀರ್ಘ ವಾದ ಮಂಡನೆ ಆಲಿಸಿತ್ತು. ಸಿಎಂ ಸಿದ್ದರಾಮಯ್ಯ ಪರ ವಕೀಲರು, ಸಾಲಿಸಿಟರ್ ಜನರಲ್ ಹಾಗೂ ದೂರುದಾರರ ಪರ ವಕೀಲರು ಸುದೀರ್ಘ ವಾದ ಮಂಡನೆ ಮಾಡಿದ್ದರು. ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್…
ಸುಳ್ಯ: ಕಳೆದ ಕೆಲವು ದಿನಗಳಿಂದ ಕೆಟ್ಟು ನಿಲ್ಲಿಸಿದ್ದ ಓಮ್ನಿ ಕಾರಿನೊಳಗೆ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ಸುಳ್ಯದ ಪರಿವಾರಕಾನ ಬಳಿ ನಡೆದಿದೆ. ಪರಿವಾರಕಾನದ ಸ್ನೇಹ ಶಾಲೆಗೆ ಹೋಗುವ ರಸ್ತೆಯ ಬದಿ ಸ್ವಲ್ಪ ಸಮಯದಿಂದ ಈ ಓಮ್ನಿ ಕಾರು ಕೆಟ್ಟು ನಿಂತಿತ್ತು. ಸೋಮವಾರ ಸಂಜೆ ಕೊಳೆತ ವಾಸನೆ ಬರುತ್ತಿದ್ದ ವೇಳೆ ಸ್ಥಳೀಯರು ಪರಿಶೀಲನೆ ನಡೆಸಿದ್ದಾಗ ಸುಮಾರು 45 ವರ್ಷ ಪ್ರಾಯದ ವ್ಯಕ್ತಿಯ ಮೃತದೇಹ ವಾಹನದ ಒಳಗೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಹಾಗೂ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಯುಭಾರ ಕುಸಿತದ ಪರಿಣಾಮ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಇನ್ನಷ್ಟು ಬಿರುಸುಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯದ 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮತ್ತು ಉತ್ತರ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಸೆಪ್ಟೆಂಬರ್ 24ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ನೀಡಲಾಗಿದೆ. ಇನ್ನು ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿಯಲ್ಲಿ ಕೂಡ ಭಾರಿ ಮಳೆ ಸುರಿಯುವ ಸಂಭವ ಇರುವುದರಿಂದ ಆರೆಂಜ್ ಅಲರ್ಟ್ ಕೊಡಲಾಗಿದೆ. ವಿಜಯಪುರ, ರಾಯಚೂರು, ಗದಗ, ಧಾರವಾಡ, ಹಾವೇರಿ, ಬಳ್ಳಾರಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಯೆಲ್ಲೋ ಅಲರ್ಟ್ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರವಿವಾರದಿಂದ ಕರಾವಳಿಯಲ್ಲಿ ವಿವಿಧಡೆ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಉಡುಪಿ,ಕಾರ್ಕಳ, ಕುಂದಾಪುರ, ಹೆಬ್ರಿ…
ಹೊಸದಿಲ್ಲಿ: ಮಕ್ಕಳ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದು, ಸಂಗ್ರಹಿಸಿಡುವುದು ಪೋಕ್ಸೊ ಕಾಯ್ದೆಯಡಿ ಅಪರಾಧ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಯಾವುದೇ ಉದ್ದೇಶವಿಲ್ಲದೆ ಮಕ್ಕಳ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದು, ಸ್ಟೋರೇಜ್ ಮಾಡುವುದು ಪೋಕ್ಸೊ ಕಾಯ್ದೆ ಅಡಿಯಲ್ಲಿ ಅಪರಾಧವಲ್ಲ ಎಂಬ ಮದ್ರಾಸ್ ಹೈಕೋರ್ಟ್‌ನ ಈ ಹಿಂದಿನ ತೀರ್ಪನ್ನು ಬದಿಗೊತ್ತಿದ ಸುಪ್ರೀಂಕೋರ್ಟ್ ಈ ಮಹತ್ವದ ಆದೇಶವನ್ನು ನೀಡಿದೆ. ಸಿಜೆಐ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪನ್ನು ನೀಡಿದ್ದು, ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಪಡಿಸುವಲ್ಲಿ ಮದ್ರಾಸ್ ಹೈಕೋರ್ಟ್ ದೋಷ ಎಸಗಿದೆ ಎಂದು ಹೇಳಿದೆ.
ಮಂಗಳೂರು : ಪಾರ್ಟ್ ಟೈಂ ಜಾಬ್ ಆಫರ್ ನೀಡಿ ವ್ಯಕ್ತಿಯೊಬ್ಬರಿಗೆ 28 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ಕೋಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ. 2024 ಜುಲೈ 21ರಂದು ಸಂತ್ರಸ್ತ ವ್ಯಕ್ತಿಗೆ ಪಾರ್ಟ್ ಟೈಂ ಜಾಬ್ ಬಗ್ಗೆ ವಾಟ್ಸ್ಆ್ಯಪ್ ಮೆಸೇಜ್ ಬಂದಿತ್ತು. ಮೆಸೇಜ್‌ನಲ್ಲಿ ಟೆಲಿಗ್ರಾಂ ಆ್ಯಪ್ ತೆರೆದು ಲಿಂಕ್ ಕ್ಲಿಕ್ ಮಾಡಲು ತಿಳಿಸಿದ್ದರು. ಅದಕ್ಕೆ 123 ರೂ. ಪಾವತಿಸಿದ್ದು, ಆರೋಪಿಗಳು ತಿಳಿಸಿದಂತೆ ವಿಡಿಯೋದ ಸ್ಕ್ರೀನ್ ಶಾಟ್ ಕಳುಹಿಸಿದ್ದಕ್ಕೆ ಅವರಿಗೆ 130 ರೂ. ಹಾಕಿದ್ದರು. ಆ ಬಳಿಕ ಕಳುಹಿಸಿರುವ ವಿಡಿಯೋ ತಪ್ಪಾಗಿದೆಯೆಂದು ಮತ್ತೊಂದು ಲಿಂಕ್ ಕಳುಹಿಸಿದ್ದರು. ಅಲ್ಲದೆ ವ್ಯಕ್ತಿಗೆ ಹೆಚ್ಚಿನ ಲಾಭದ ಆಮೀಷವೊಡ್ಡಿ 1 ಸಾವಿರ ಹಾಕಲು ಸೂಚಿಸಿದ್ದರು. ಅದರಲ್ಲಿ ಅವರಿಗೆ 1300 ರೂ. ಹಣ ಬಂದಿರುವುದು ತೋರಿಸಿತ್ತು. ಆ ಬಳಿಕ ವಂಚಕರ ಮಾತು ನಂಬಿ ಅವರು ನೀಡಿರುವ ಬೇರೆಬೇರೆ ಖಾತೆಗಳಿಗೆ ಒಟ್ಟು 28,18,065 ರೂ. ಹಣವನ್ನು ಪಾವತಿಸಿದ್ದಾರೆ. ಆದರೆ ಆ ಬಳಿಕ ಹಣ ಹಿಂದಿರುಗಿ ಪಾವತಿಯಾಗಲೇ ಇಲ್ಲ. ಇದರಿಂದ ಸಂತ್ರಸ್ತ ವ್ಯಕ್ತಿ ಮೋಸ…
ಅಂಕೋಲಾ: ಶಿರೂರು ಗುಡ್ಡ ಕುಸಿತದ ಮೂರನೇ ಹಂತದ ಮೂರನೇ ದಿನದ ಶೋಧ ಕಾರ್ಯಾಚರಣೆ ವೇಳೆ ಮೂಳೆಯೊಂದು ಸಿಕ್ಕಿದೆ. ಗಂಗಾವಳಿ ನದಿಯ ಆಳದಿಂದ ಮೇಲೆತ್ತಲಾದ ಮಣ್ಣು ರಾಶಿಯಲ್ಲಿ ಮೂಳೆಯ ತುಂಡೊಂದು ಪತ್ತೆಯಾಗಿದ್ದು, ಇದು ಜುಲೈ 16 ರಂದು ನಡೆದ ದುರ್ಘಟನೆಯಲ್ಲಿ ಕಣ್ಮರೆಯಾಗಿ ಇದುವರೆಗೂ ಪತ್ತೆಯಾಗದ ಮೂವರಲ್ಲಿ ಯಾರದಾದರೂ ಆಗಿರಬಹುದೇ ಎಂಬ ಜಿಜ್ಞಾಸೆ ಆರಂಭವಾಗಿದೆ. ಇದು ಮನುಷ್ಯರ ಮೂಳೆಯೇ ಅಥವಾ ಯಾವುದೋ ಪ್ರಾಣಿಯ ಮೂಳೆಯೇ ಎನ್ನುವ ಪ್ರಶ್ನೆಯೂ ಕಾಡಲಾರಂಭಿಸಿದ. ಶಿರೂರು ದುರಂತದಲ್ಲಿ ಕಣ್ಮರೆಯಾಗಿರುವ ಶಿರೂರಿನ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ, ಮತ್ತು ಕೇರಳದ ಲಾರಿ ಚಾಲಕ ಅರ್ಜುನ್ ಅವರ ಮೃತದೇಹಗಳು ಘಟನೆ ಸಂಭವಿಸಿ ಎರಡು ತಿಂಗಳು ಕಳೆದರೂ ಪತ್ತೆಯಾಗಿಲ್ಲ. ಕಣ್ಮರೆಯಾದವರ ಎಲುಬಿನ ತುಂಡಾದರೂ ಸಿಕ್ಕರೆ ಸಂಸ್ಕಾರ ಕಾರ್ಯ ನಡೆಸುವ ನಿರೀಕ್ಷೆಯಲ್ಲಿ ಅವರ ಕುಟುಂಬದವರಿದ್ದಾರೆ. ಹೀಗಾಗಿ ಪ್ರತಿದಿನ ಶೋಧ ಕಾರ್ಯಾಚರಣೆ ಸ್ಥಳದಲ್ಲಿ ಕುಟುಂಬದವರು ಹಾಜರಿರುವುದು ಕಂಡುಬರುತ್ತಿದೆ. ವೈಜ್ಞಾನಿಕ ಪರೀಕ್ಷೆ ಬಳಿಕವೇ ಈ ಮೂಳೆಯ ಕುರಿತು ನಿಖರವಾದ ಮಾಹಿತಿ ಸಿಗಲಿದೆ.