ನವದೆಹಲಿ: ಪುಣೆ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಮಾಡ್ಯೂಲ್ನ ಪ್ರಮುಖ ಸದಸ್ಯ ರಿಜ್ವಾನ್ ಅಬ್ದುಲ್ ಹಾಜಿ ಅಲಿಯನ್ನು ದೆಹಲಿ ಪೊಲೀಸ್ ವಿಶೇಷ ಸೆಲ್ ಬಂಧಿಸಿದೆ. ಆತನ ತಲೆಗೆ 3 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ದೆಹಲಿಯ ದರಿಯಾಗಂಜ್ ನಿವಾಸಿಯಾಗಿರುವ ಅಲಿ, ಪುಣೆ ಐಸಿಸ್ ಮಾಡ್ಯೂಲ್ನ ಇತರ ಸದಸ್ಯರೊಂದಿಗೆ ದೆಹಲಿ ಮತ್ತು ಮುಂಬೈನ ಹಲವಾರು ಉನ್ನತ ಗುರಿಗಳ ಮೇಲೆ ಬೇಹುಗಾರಿಕೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅವರ ಬಂಧನಕ್ಕೆ ವಾರಂಟ್ ಹೊರಡಿಸಿತ್ತು ಮತ್ತು ಪುಣೆ ಪೊಲೀಸರ ವಶದಿಂದ ತಪ್ಪಿಸಿಕೊಂಡಾಗಿನಿಂದ ಅವರು ಬಂಧನದಿಂದ ತಪ್ಪಿಸಿಕೊಂಡಿದ್ದರು. ಎನ್‌ಐಎ ಸಲ್ಲಿಸಿದ ಪೂರಕ ಚಾರ್ಜ್ಶೀಟ್ನಲ್ಲಿ ಅಲಿ ಮತ್ತು ಇತರ ಮೂವರು ಆರೋಪಿಗಳನ್ನು ಹೆಸರಿಸಲಾಗಿದೆ
Author: main-admin
ಬಂಟ್ವಾಳ: ಪಾದಚಾರಿ ಮಹಿಳೆಗೆ ಪಿಕಪ್ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಘಟನೆ ವಾಮದಪದವಿನಲ್ಲಿ ನಡೆದಿದೆ. ಪಿಲಿಮೊಗರು ಗ್ರಾಮದ ಜತ್ತನಕೆರೆ ನಿವಾಸಿ ಪುಷ್ಪಾವತಿ ( 70) ಎಂಬವರು ಗಾಯಗೊಂಡ ಮಹಿಳೆ. ಬೆಂಜನಪದವಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಂಬಂಧಿ ಬಾಲಕನ ಅಂತ್ಯ ಸಂಸ್ಕಾರದ ಕಾರ್ಯ ಮುಗಿಸಿ ವಾಪಸು ಮಗನ ಜೊತೆಗೆ ಬೈಕಿನಲ್ಲಿ ಬರುವ ವೇಳೆ ಮಳೆ ಬಂದ ಕಾರಣ ತಾಯಿಯನ್ನು ಮಗ ಬಸ್ ನಲ್ಲಿ ಕಳುಹಿಸಿದ್ದ ಎಂದು ತಿಳಿದು ಬಂದಿದೆ. ಬಿಸಿರೋಡಿನಿಂದ ಬಸ್ ನಲ್ಲಿ ಬಂದು ವಾಮದಪದವಿನಲ್ಲಿ ಇಳಿದು ಮನೆ ಕಡೆಗೆ ಹೋಗುವ ವೇಳೆ ಪಿಕಪ್ ಇವರಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಇವರು ಡಾಮರು ರಸ್ತೆಗೆ ಎಸೆಯಲ್ಪಟ್ಟು,, ತಲೆಗೆ ಗಂಭೀರವಾದ ಗಾಯವುಂಟಾಗಿದೆ. ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ನಗರದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯಂದು ಉಗ್ರರ ಕರಿನೆರಳಿನ ಮುನ್ಸೂಚನೆ ತಿಳಿದು ಬಂದಿದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಬೆಂಗಳೂರು ನಗರ ಪೊಲೀಸರು ಹೈ ಎಲರ್ಟ್ ಆಗಿದ್ದು, ಹೋಟೆಲ್ ಗಳಲ್ಲಿ ಉಳಿದುಕೊಳ್ಳುವ ಪ್ರವಾಸಿಗರ ಬಗ್ಗೆ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ದಿನಾಂಕ 15-08-2024ರಂ ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕವಾಯತು ಮತ್ತು ಸಮಾರಂಭಗಳು ನಡೆಯಲಿದೆ ಎಂದಿದ್ದಾರೆ. ಉಗ್ರಗಾಮಿಗಳು ಬೆಂಗಳೂರು ನಗರವನ್ನು ಗುರಿಯಾಗಿಟ್ಟುಕೊಂಡಿರುವ ಹಿನ್ನಲೆಯಲ್ಲಿ ತಾವು ಸಂಘದಲ್ಲಿ ಸದಸ್ಯರಾಗಿರುವ ಹೋಟೆಲ್ ಗಳ ಮಾಲೀಕರಿಗೆ, ಹೋಟೆಲ್ ಗಳ ಮ್ಯಾನೇಜರ್ ಹಾಗೂ ಇತರೆ ನೌಕರರಿಗೆ ಹೋಟೆಲ್ ಗಳಲ್ಲಿ ತಂಗುವ ವಿದೇಶಿಯರು ಮತ್ತು ಸಂಶಯಾಸ್ಪದ ಹಾಗೂ ಅಪರಿಚಿತ ವ್ಯಕ್ತಿಗಳು ಹೋಟೆಲ್ ಗಳಲ್ಲಿ ತಂಗಿದಲ್ಲಿ ಅವರ ಬಗ್ಗೆ ನಿಗಾವಹಿಸಿ, ವಿಶೇಷವೇನಾದರೂ ಕಂಡು ಬಂದಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಈ ಭದ್ರತಾ ಕಾರ್ಯದಲ್ಲಿ ಪೊಲೀಸರಿಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಬೇಕೆಂದು…
ಕಾಸರಗೋಡು ಜಿಲ್ಲಾ ನ್ಯಾಯಾಲಯ ಸಮುಚ್ಚಯದ ಬೀಗ ಮುರಿದು ಕಳವಿಗೆ ಯತ್ನಿಸಿದ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಕೋಜಿಕ್ಕೋ ಡ್ ತೋಟಿಲ್ ಪಾಳ ದ ಸನಿಶ್ ಜೋರ್ಜ್ (44) ಬಂಧಿತ ಆರೋಪಿ. ಆಗಸ್ಟ್ ನಾಲ್ಕರಂದು ಮುಂಜಾನೆ ಕೃತ್ಯ ನಡೆದಿತ್ತು. ನ್ಯಾಯಾಲಯದ ಬೀಗ ಮುರಿದು ಒಳನುಗ್ಗಿದ ಈತ ಕಳವಿಗೆತ್ನಿಸಿದ್ದು , ಶಬ್ದ ಕೇಳಿ ಬೊಬ್ಬೆ ಹಾಕಿದಾಗ ಈತ ಪರಾರಿಯಾಗಿದ್ದನು.ಅದೇ ದಿನ ರಾತ್ರಿ ನಾಯಮ್ಮರಮೂಲೆ ಶಾಲೆಯ ಬೀಗ ಮುರಿದು ಒಳನುಗ್ಗಿದ ಈತ ೫೦೦ ರೂ . ನಗದನ್ನು ಕಳವುಗೈದಿದ್ದನು.. ರಾಜ್ಯದ ವಿವಿಧೆಡೆಗಳಲ್ಲಾಗಿ ಹದಿನೈದಕ್ಕೂ ಅಧಿಕ ಸ್ಥಳಗಳಲ್ಲಿ ಕಳವು ನಡೆಸಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ. ಹೊಸದುರ್ಗ , ನೀಲೇಶ್ವರ , ಚೋಮಲಾ , ಪಯಂಗಡಿ , ಕೊಯಿಲಾಂಡಿ , ಪಾಲಕ್ಕಾಡ್ ಕಸಬಾ , ಧರ್ಮಡ, ವೆಳ್ಳ೦ಮುಂಡ, ಸುಲ್ತಾನ್ ಬತ್ತೇರಿ , ನಾದಪುರಂ ಮೊದಲಾದ ಠಾಣೆ ಗಳಲ್ಲಿ ಈತನ ವಿರುದ್ಧ ಪ್ರಕರಣಗಳಿವೆ. ಇವುಗಳಲ್ಲಿ ಅಂಚೆ ಕಚೇರಿ , ನ್ಯಾಯಾಲಯದಲ್ಲಿನ ಕಳವು ಒಳಗೊಂಡಿದೆ. ಪೊಲೀಸರು ಸಿ ಸಿ ಟಿ ವಿ…
ಮಂಗಳೂರು : ಮಂಗಳೂರಿಗೆ ವ್ಯವಹಾರ ನಿಮಿತ್ತ ಬಂದಿದ್ದ ಕೇರಳ ಮೂಲದ ಉದ್ಯಮಿಯನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ನಡೆದಿದೆ. ಈ ಸಂಬಂಧ ಮಂಗಳೂರು ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ಕೈಗೆತ್ತಿಕೊಂಡಿದ್ದಾರೆ.ಮಂಗಳೂರಿನ ಖಾಸಾಗಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸೀಟು ಮಾಡಿಸಿಕೊಡಲು ಕೇರಳದಿಂದ ಬಂದಿದ್ದ ಶರತ್ ಕೆಲಸ ಮುಗಿಸಿ ಬೆಂಗಳೂರಿಗೆ ತೆರಳಲು ಮಂಗಳವಾರ ರಾತ್ರಿ ನಗರ ಪಿವಿಎಸ್ ಬಳಿ ಬಸ್ ಕಾಯುತ್ತಿದ್ದಾಗ ಕಾರಿನಲ್ಲಿ ಬಂದ ನಾಲ್ವರ ತಂಡ ಶರತ್ ಅವರನ್ನು ಬಲವಂತವಾಗಿ ಕಾರಿಗೆ ಹಾಕಿ ಅಪಹರಿಸಿದ್ದಾರೆ. ಬಳಿಕ ಆತನ ಮನೆಯವರಿಗೆ ಫೋನ್ ಮಾಡಿ 10 ಲಕ್ಷ ರೂಪಾಯಿಗಳ ಡಿಮಾಂಡ್ ಇಟ್ಟಿದ್ದಾರೆ.10 ಲಕ್ಷ ಕೊಟ್ಟರೆ ಆತನನ್ನು ಬಿಡುಗಡೆ ಮಾಡುವುದಾಗಿ ಅವಾಜ್ ಹಾಕಿದ್ದಾರೆ ಎನ್ನಲಾಗಿದ್ದು ಶರತ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ ಎನ್ನಲಾಗಿದ್ದು ಈ ಬಗ್ಗೆ ಕದ್ರಿ ಪೊಲೀಸರು ಪ್ರಕರಣ ದಾಖಲು ಮಾಡಿ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು ತನಿಖೆ ಕೈಗೊಂಡಿದ್ದಾರೆ.
ಬಂಟ್ವಾಳ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೋರ್ವ ಮನೆಯ ಬಚ್ಚಲು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಜನಪದವುನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಬೆಂಜನಪದವು ಕರಾವಳಿ ಸೈಟ್ ನಿವಾಸಿ ಉದಯ ಆಚಾರ್ಯ ಅವರ ಮಗ ಭವಿಷ್ಯ ಆಚಾರ್ಯ (15) ಎಂದು ಗುರುತಿಸಲಾಗಿದೆ. ಬಡಕಬೈಲಿನ ಖಾಸಗಿ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿದ್ದ ಈತ ಕಲಿಕೆ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದನ್ನು ಮನೆಯವರು ಶಂಕಿಸಿದ್ದಾರೆ. ಅಗಸ್ಟ್ 7 ರಂದು ಬುಧವಾರ ರಾತ್ರಿ ಸುಮಾರು 7.30 ಗಂಟೆಗೆ ಸ್ನಾನ ಮಾಡಲೆಂದು ಬಚ್ಚಲು ಕೋಣೆಗೆ ತೆರಳಿದ ಮಗ 8 ಗಂಟೆಯಾದರೂ ವಾಪಸ್ ಬಾರದೇ ಇರುವುದನ್ನು ಕಂಡ ತಾಯಿ ಬಾಗಿಲು ಬಡಿದರೂ ಬಾಗಿಲು ತೆಗೆಯದ ಹಿನ್ನೆಲೆ ಬಾಗಿಲು ಮುರಿದು ಒಳಗೆ ನುಗ್ಗಿದಾಗ ಈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಬಾಲಕನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷೆ ನಡೆಸಿದಾಗ ಆತ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನ್ನಾರ್: ಪ್ರಕೃತಿಯ ವಿಕೋಪಕ್ಕೆ ನಲುಗಿ ಸರ್ವಸ್ವವನ್ನೂ ಕಳೆದುಕೊಂಡ ಕೇರಳದ ವಯನಾಡಿಗೆ ದೇಶದ ನಾನಾ ಕಡೆಯಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ. ಭೂಕುಸಿತ ದುರಂತ ಪೀಡಿತ ಕುಟುಂಬದ ಹೆಣ್ಣುಮಕ್ಕಳಿಗೆ ಬದುಕು ಕಟ್ಟಿಕೊಳ್ಳಲು ಇದೀಗ ಇಬ್ಬರು ಯುವಕರು ಮುಂದೆ ಬಂದಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬೂದನೂರು ತಯ್ಯೂರು ಮೂಲದ ವಿಷ್ಣುಕುಮಾರ್ (30) ಮತ್ತು ಮಾವೇಲಿಕ್ಕರ ಮೂಲದ ದೀಪುರಾಜ್ (31) ಹೆಸರಿನ ಇಬ್ಬರು ಯುವಕರು ಆಪತ್ಕಾಲದಲ್ಲಿ ತಮ್ಮ ಕುಟುಂಬವನ್ನೇ ಕಳೆದುಕೊಂಡು ಅನಾಥರಾದ ಯುವತಿಯರಿಬ್ಬರಿಗೆ ಮದುವೆ ಎಂಬ ಬಂಧನ ಮೂಲಕ ಉಜ್ವಲ ಬದುಕು ಕಟ್ಟಿಕೊಡಲು ಮುಂದಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಕಂಪನಿಯ ಕೆಲಸ ಬಿಟ್ಟಾಗ ಸಿಕ್ಕ ಹಣದಲ್ಲಿ ಅಕ್ಕನ ಮನೆಯ ಸಮೀಪವೇ ಮನೆ ಕಟ್ಟಲು ಆರಂಭಿಸಿದ ವಿಷ್ಣು, ಈಗ ಮನ್ನಾರ್ನ ಇರಮತ್ತೂರು ಮುಂದುವೆಲ್ನಲ್ಲಿ ನೆಲೆಸಿದ್ದಾರೆ. ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತದಿಂದ ಮನನೊಂದ ತಾಯಿಯ ಕೋರಿಕೆಯಂತೆ ವಿಷ್ಣು ಈ ನಿರ್ಧಾರಕ್ಕೆ ಬಂದಿದ್ದಾರೆ. ಡ್ರೈವಿಂಗ್ ಗೊತ್ತಿರುವುದರಿಂದ ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತಿರುವ ವಿಷ್ಣು, ವಯನಾಡಿನ ಸೂಕ್ತ ಯುವತಿಯೊಬ್ಬಳನ್ನು ಜೀವನ ಸಂಗಾತಿಯಾಗಿ ಪಡೆಯಲಿದ್ದಾರೆ. ಮಿಮಿಕ್ರಿ,…
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ತೊಕ್ಕೊಟ್ಟು ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸಿಸುತ್ತಿದ್ದ ತಾಯಿ ಹಾಗೂ ಮಕ್ಕಳಿಬ್ಬರು ನಾಪತ್ತೆಯಾದ ಘಟನೆ ನಡೆದಿದೆ. ಸ್ಕೈಹೈಟ್ಸ್ ಅಪಾರ್ಟ್‌ಮೆಂಟ್ ನಿವಾಸಿ ಮಂಜುಳಾ (31) ಮತ್ತು ಅವರ ಮಕ್ಕಳಾದ ಕೃಷ್ಣ (8) ಹಾಗೂ ಖುಷಿ (6) ನಾಪತ್ತೆಯಾದವರು. ಮಂಜುಳಾ ಅವರು ಜು. 29ರಂದು ಬೆಳಗ್ಗೆ 10 ಗಂಟೆಗೆ ಫ್ಲ್ಯಾಟ್‌ನಿಂದ ಹೊರಟಿದ್ದು, ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗಿದ್ದಾರೆ. ಅವರ ಪತಿ ದ್ಯಾಮಣ್ಣ ಮೇಟಿ ಅವರು ಆ. 3ರಂದು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಅವರು ಪತ್ತೆಯಾದಲ್ಲಿ ಉಳ್ಳಾಲ ಪೊಲೀಸ್ ಠಾಣೆಯನ್ನು (0824-2466269) ಸಂಪರ್ಕಿಸಲು ಕೋರಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪಣಂಬೂರು ಜೋಕಟ್ಟೆಯಲ್ಲಿ ಮಂಗಳವಾರ ನಡೆದಿದ್ದ ಬೆಳಗಾವಿ ಮೂಲದ ಬಾಲಕಿಯ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು,ಪ್ರಕರಣ ಹೊಸ ತಿರುವು ಪಡೆದಿದೆ. ಬೆಳಗಾವಿ ಜಿಲ್ಲೆಯ ಪ್ರಸ್ತುತ ಜೋಕಟ್ಟೆಯಲ್ಲಿ ವಾಸವಿದ್ದ ಫಕೀರಪ್ಪ ಬಂಧಿತ ಆರೋಪಿಯಾಗಿದ್ದು ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಬಳಿಕ ಆಕೆಯನ್ನು ಕತ್ತು ಹಿಸುಕಿ ಕೊಲೆಗೈದ ಬಗ್ಗೆ ಪೊಲೀಸ್ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾನೆ. ಜೋಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಹನುಮಂತಪ್ಪ ಎಂಬವರ ತಮ್ಮನ ಮಗಳು ಈಕೆಯಾಗಿದ್ದು ಜಿಲ್ಲೆಯ ಹಾಸ್ಟೆಲ್ ವೊಂದರಲ್ಲಿ ಕಲಿಯುತ್ತಿದ್ದ ಈಕೆ ಬಿದ್ದು ಕೈಗೆ ಗಾಯಗೊಂಡಿದ್ದ ಕಾರಣ ಚಿಕಿತ್ಸೆಗಾಗಿ ಜೋಕಟ್ಟೆಗೆ ದೊಡ್ಡಪ್ಪ ಹನುಮಂತನ ಮನೆಗೆ ಬಂದಿದ್ದಳು. ಮಂಗಳವಾರ ಮನೆಯವರು ಕೆಲಸಕ್ಕೆ ಹೋದ ಸಂದರ್ಭ ಬಾಲಕಿ ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪಣಂಬೂರು ತನಿಖೆ ಚುರುಕುಗೊಳಿಸಿ ಕೊಲೆ ಆರೋಪಿ ಫಕೀರಪ್ಪನನ್ನು ಬಂಧಿಸಿದ್ದಾರೆ. ಫಕೀರಪ್ಪ ಕಳೆದ ಆರು ತಿಂಗಳಿಂದ ಜೋಕಟ್ಟೆ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದನು. ಹನುಮಂತನ ಮನೆಯವರು ಮಂಗಳವಾರ ಬೆಳಗ್ಗೆ ಎಂದಿನಂತೆ ಸುರತ್ಕಲಿಗೆ ಕೂಲಿ…
ಉಪ್ಪಿನಂಗಡಿ: ಟಿಕೆಟ್ ವಿಚಾರಕ್ಕೆ ಪ್ರಯಾಣಿಕನೊಬ್ಬ ಕಂಡೆಕ್ಟರ್ ಮೇಲೆ ಹಲ್ಲೆ ಮಾಡಿರುವ ಘಟನೆ ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್‌ನಲ್ಲಿ ನಡೆದಿದೆ. ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್‌ನಲ್ಲಿ ವಿಪರೀತ ಪ್ರಯಾಣಿಕರು, ಶಾಲಾ ಮಕ್ಕಳು ತುಂಬಿ ತುಳುಕುತ್ತಿದ್ದರು. ಈ ವೇಳೆ ಕೆಮ್ಮಾರ ಬಳಿ ತಲುಪುತ್ತಿದ್ದಂತೆ ಪ್ರಯಾಣಿಕನೊಬ್ಬನಲ್ಲಿ ಕಂಡಕ್ಟರ್ ರಫೀಕ್ ಅವರು ಟಿಕೇಟ್ ಕೇಳಿದ್ದಾರೆ.ಬಳಿಕ ಈತ ಚಿಲ್ಲರೆ ವಿಚಾರದಲ್ಲಿ ತಗಾದೆ ತೆಗೆದಿದ್ದಾನೆ ಎನ್ನಲಾಗಿದೆ. ಪ್ರಯಾಣಿಕ ಜಗಳ ಮಾಡಿದ್ದಲ್ಲದೇ ಬಸ್ ನಲ್ಲಿ ರಂಪಾಟವಾಡಿ ಬಸ್ ಕಿಟಕಿಗೆ ಹಾನಿ ಮಾಡಿದ್ದಾನೆ. ಹಾನಿಗೈದಿದಲ್ಲದೆ ಬಸ್ ಕಂಡೆಕ್ಟರ್ ರಫೀಕ್ ಅವರ ಕುತ್ತಿಗೆ ಭಾಗ ಹಾಗೂ ಕೈಗೆ ಪರಚಿ ಗಾಯಗೊಳಿಸಿದ್ದಾನೆ. ಈ ಬಗ್ಗೆ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಈ ಹಿನ್ನೆಲೆಯಲ್ಲಿ ಬಸ್ ಸಹಿತ ರಂಪಾಟ ನಡೆಸಿದ ಪ್ರಯಾಣಿಕನನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ರಂಪಾಟ ಮಾಡಿದ ಪ್ರಯಾಣಿಕ ಮದ್ಯದ ನಶೆಯಲ್ಲಿದ್ದ ಎನ್ನಲಾಗಿದ್ದು ಪೊಲೀಸರು ಆತನಿಗೆ ಎಚ್ಚರಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಪ್ರಯಾಣಿಕನ ಅವಾಂತರದಿಂದ ಹಲವು ಪ್ರಯಾಣಿಕರು ಮತ್ತು ಶಾಲಾ ಮಕ್ಕಳು ಪರದಾಡುವಂತಾಯಿತು.










