Author: main-admin

ಮಂಗಳೂರು: ನಗರದ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೂರು ಮನೆಗಳವು ಹಾಗೂ ಪಂಪ್‌ವೆಲ್‌ ಕಪಿತಾನಿಯೋ ಬಳಿಯ ಅಂಗಡಿಗಳವು ಪ್ರಕರಣವನ್ನು ಬೇಧಿಸಿದ ಮಂಗಳೂರು ಪೊಲೀಸರು ನಾಲ್ವರನ್ನು ಬಂಧಿಸಿ 10ಲಕ್ಷ ನಗದು ಸೇರಿದಂತೆ 12.50ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಜೇಶ್ವರದ ಮಹಮ್ಮದ್ ಸಿಯಾಬ್, ಬಜ್ಪೆಯ ಮಹಮ್ಮದ್ ಅರ್ಫಾಝ್, ಸಫ್ವಾನ್ ಹಾಗೂ ಉತ್ತರಪ್ರದೇಶ ಮೂಲದ ಮಹಮ್ಮದ್ ನಜೀರ್ ಹೌಸಿಲ್ ಖಾನ್ ಮತ್ತು ಇಲಿಯಾಸ್ ಖಾನ್ ಬಂಧಿತ ಆರೋಪಿಗಳು. ಕಳೆದ 2-3 ತಿಂಗಳಿನಿಂದ ಕೊಣಾಜೆ ಠಾಣಾ ವ್ಯಾಪ್ತಿಯಲ್ಲ 3ಮನೆಗಳಲ್ಲಿ ಕಳವು ನಡೆದಿತ್ತು. ಪ್ರಕರಣದಲ್ಲಿ 9,25,000 ಲಕ್ಷ ಮೌಲ್ಯದ ಸೊತ್ತು ಕಳವಾಗಿತ್ತು. ಜುಲೈ 10ರಂದು ಮುದುಂಗಾರಕಟ್ಟೆ, ಚೆಕ್ ಪಾಯಿಂಟ್‌ ಬಳಿ ಬಂದ ಕಾರನ್ನು ಪೊಲೀಸರು ತಪಾಸಣೆ ನಡೆಸಿದಾಗ ಕಾರ್‌ನಲ್ಲಿ ಮಾರಕಾಯುಧ, ಮಂಕಿಕ್ಯಾಪ್, ಹ್ಯಾಂಡ್‌ಗ್ಲೌಸ್ ಪತ್ತೆಯಾಗಿದೆ‌. ತಕ್ಷಣ ಅದನ್ನು ವಶಪಡಿಸಿ, ಕಾರಿನಲ್ಲಿದ್ದ ಮೂವರನ್ನು ಬಂಧಿಸಲಾಗಿತ್ತು. ಈ ಮೂವರು ಮನೆಗಳವು ನಡೆಸಿದವರೆಂದು ಅವರು ಒಪ್ಪಿದ್ದಾರೆ‌. ಆರೋಪಿಗಳು ಮಾಹಿತಿಯಂತೆ ಮಹಮ್ಮದ್ ಜಂಶೀರ್‌ ಎಂಬಾತನನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಜುಲೈ 8ರಂದು…

Read More

ಉಡುಪಿ: ಬಬ್ಬು ಸ್ವಾಮಿ ಕಾಣಿಕೆ ಡಬ್ಬಿ ಕದ್ದ ಕಳ್ಳನನ್ನು ದೈವ 24 ಗಂಟೆಯೊಳಗೆ ಹುಡುಕಿಕೊಟ್ಟ ಅಚ್ಚರಿಯ ಘಟನೆ ಉಡುಪಿಯಲ್ಲಿ ನಡೆದಿದೆ. ಚಿಟ್ಪಾಡಿ ಕಸ್ತೂರ್ಬಾ ನಗರದ ಬಬ್ಬು ಸ್ವಾಮಿ ಸನ್ನಿಧಾನದಲ್ಲಿ ಕಳ್ಳತನ ನಡೆದಿತ್ತು. ಕಳ್ಳನೊಬ್ಬ ಜು.4 ರ ನಡುರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ಮಾಡಿದ್ದನು. ಜು.5 ರಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಸಾಮೂಹಿಕ ಪ್ರಾರ್ಥನೆ ಮಾಡಿದ್ದರು. ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ ಎಂದು ದೈವಕ್ಕೆ ಪ್ರಶ್ನಿಸಿದ್ದರು. ಮಾತ್ರವಲ್ಲದೆ, ಊರಿನ ಸಂಕಷ್ಟ ಬಗೆಹರಿಸುವ ದೈವದ ಸನ್ನಿಧಾನದಲ್ಲಿ ಕಳ್ಳತನವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಭಕ್ತರ ಪ್ರಾರ್ಥನೆಯಿಂದ ಕಳ್ಳನನ್ನು 24 ಗಂಟೆಯೊಳಗೆ ಹುಡುಕಿ ಕೊಡುವುದಾಗಿ ದೈವ ಅಭಯ ನೀಡಿತ್ತು. ಅಚ್ಚರಿ ಎಂಬಂತೆ ಜು. 6ರಂದು ಬೆಳಗ್ಗೆ ಕಳ್ಳನನ್ನು ಸಿಕ್ಕಿದ್ದಾನೆ. ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳ ಮಲಗಿರೋದು ಗೊತ್ತಾಗಿದೆ. ಬಸ್ ನಿಲ್ದಾಣ ಪರಿಸರದಲ್ಲಿ ಆಟೋ ಚಾಲಕರು ಕಳ್ಳನ ಗುರುತು ಪತ್ತೆ ಹಚ್ಚಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳನ ವಿಡಿಯೋ ನೋಡಿದ್ದ ಆಟೋ…

Read More

ಉಡುಪಿ : ಉಡುಪಿಯಲ್ಲಿ ಸಂಚಲನ ಮೂಡಿಸಿದ್ದ ಗ್ಯಾಂಗ್ ವಾರ್ ಪ್ರಕರಣ ನಡೆಸಿದ್ದ ಗರುಡ ಗ್ಯಾಂಗ್ ಸದಸ್ಯನಿಗೆ ಹಣಕಾಸು ಮತ್ತು ಆಶ್ರಯ ನೀಡಿದ್ದ ಆರೋಪದ ಮೇಲೆ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.ಬಂಟ್ವಾಳದ ಸಫರಾ ( 35) ಬಂಧಿತ ಯುವತಿ. ಉಡುಪಿಯಲ್ಲಿ ಎರಡು ತಿಂಗಳ ಹಿಂದೆ ಗರುಡ ಗ್ಯಾಂಗ್ ನ ಸದಸ್ಯರು ಹೆದ್ದಾರಿಯಲ್ಲಿ ತಲ್ವಾರ್ ಹಿಡಿದು ಅಟ್ಟಹಾಸ ಮೆರೆದಿದ್ದರು.ಈ ತಂಡವು ಯುವಕನ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿತ್ತು. ಗ್ಯಾಂಗ್ ವಾರ್ ಆರೋಪಿಗಳಲ್ಲೋರ್ವ ಇಸಾಕ್ ಎಂಬಾತನಿಗೆ ಸಫರಾ ಎಂಬ ಯುವತಿ ಆರ್ಥಿಕ ಸಹಾಯ ಮಾಡುತ್ತಿದ್ದಳು. ದ.ಕ ಜಿಲ್ಲೆಯ ಉಪ್ಪಿನಂಗಡಿ ಮೂಲದ ಸಫರಾ ಬ್ಯಾಂಕ್ ಅಕೌಂಟ್ ಮೂಲಕ ಆರೋಪಿಗೆ ಹಣ ರವಾನೆ ಮಾಡಿದ್ದು ಬೆಳಕಿಗೆ ಬಂದಿದೆ. ಮಾತ್ರವಲ್ಲ, ಆರೋಪಿಗೆ ಮೊಬೈಲ್ ಫೋನ್ ನೀಡಿ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದಳು. ಉಡುಪಿ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಈಕೆಯನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Read More

ಮಂಗಳೂರು: ಜಿಲ್ಲೆಯಲ್ಲಿ ಮತ್ತೆ ಲವ್‌ ಜಿಹಾದ್ ಕರಿನೆರಳು ಕಾಣಿಸಿಕೊಂಡಿದೆ. ನಟೋರಿಯಸ್ ಕ್ರಿಮಿನಲ್‌ನೊಂದಿಗೆ ಕಾಸರಗೋಡಿನ ಹಿಂದೂ ಯುವತಿ ಪರಾರಿಯಾಗಿದ್ದಾಳೆ. ಇದೀಗ ಆಕೆಯ ತಂದೆ ತಮ್ಮ ಪುತ್ರಿಯನ್ನು ರಕ್ಷಿಸಿಕೊಡುವಂತೆ ವಿಎಚ್‌ಪಿ ಕಚೇರಿ ಮುಂದೆ ಕಣ್ಣೀರು ಹಾಕಿದ್ದಾರೆ. ಈ ದೃಶ್ಯ ಎಂಥವರ ಕರಳು ಕಿವುಚುವಂತಿತ್ತು. ಇನ್ನೂ 20ರ ಪ್ರಾಯದ ಈಕೆ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿನಿಯಾಗಿದ್ದಾಳೆ. ಉಳ್ಳಾಲದ ಬಂದಿಕೊಟ್ಯದಲ್ಲಿ ಸಹೋದರಿ ಮನೆಯಲ್ಲಿದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದಳು. ಈಕೆಗೆ ಕಾಸರಗೋಡಿನ ಮಹಮ್ಮದ್ ಅಶ್ಫಕ್‌ನೊಂದಿಗೆ ಪ್ರೇಮಾಂಕುರವಾಗಿದೆ. ಜೂನ್ 30ರಂದು ಆತನೊಂದಿಗೆ ಉಳ್ಳಾಲದ ಮನೆಯಿಂದ ಪರಾರಿಯಾಗಿದ್ದಾಳೆ. ಹೆತ್ತವರು ಯುವತಿಯನ್ನು ಹುಡುಕಾಟ ನಡೆಸಿದಾಗ ಕೇರಳದಲ್ಲಿ ಅಶ್ಫಕ್‌ನೊಂದಿಗೆ ಇರುವುದು ಗೊತ್ತಾಗಿದೆ. ಬರುವಂತೆ ಮನವಿ ಮಾಡಿದರೂ ಆಕೆ ಅಶ್ಫಕ್‌ನನ್ನು ತೊರೆದುಬರಲು ಸುತಾರಾಂ ಒಪ್ಪುತ್ತಿರಲಿಲ್ಲ. ಆದ್ದರಿಂದ ಆಕೆಯ ತಂದೆ ಮಂಗಳೂರು ಪೊಲೀಸ್ ಕಮಿಷನರ್ ಮೊರೆಹೋಗಿ, ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು ಹೊರಟವಳನ್ನು ರಕ್ಷಿಸುವಂತೆ ಅವಲತ್ತುಕೊಂಡಿದ್ದಾರೆ. ಸದ್ಯ ಪೊಲೀಸರು ಯುವತಿಯನ್ನು ಕೇರಳದಿಂದ ಕರೆತಂದು ಮುಡಿಪುವಿನ ಪ್ರಜ್ಞಾ ಕೌನ್ಸಿಲಿಂಗ್ ಕೇಂದ್ರದಲ್ಲಿಟ್ಟಿದ್ದಾರೆ. ಅಶ್ಫಕ್ ಹಿನ್ನೆಲೆಯೇ ಬಡ ತಂದೆಯನ್ನು ದಂಗುಬಡಿಸಿದೆ. ನಟೋರಿಯಸ್ ಕ್ರಿಮಿನಲ್…

Read More

ಬೆಂಗಳೂರು: ವಾಲ್ಮೀಕಿ ನಿಗಮದ ಕೋಟ್ಯಾಂತರ ರೂ. ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ಇಂದು ಬೆಳಗ್ಗೆ ವಶಕ್ಕೆ ಪಡೆದುಕೊಂಡಿದ್ದಾರೆ. ನಾಗೇಂದ್ರ ಅವರನ್ನು ವಶಕ್ಕೆ ಪಡೆದ ಅಧಿಕಾರಿಗಳು ಶಾಂತಿನಗರ ಇಡಿ ಕಚೇರಿಗೆ ಕರೆತಂದಿದ್ದಾರೆ. ಇನ್ನು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರನ್ನು ಕೂಡ ವಶಕ್ಕೆ ಪಡೆಯಲು ಇಡಿ ತಂಡ ತೆರಳಿದೆ ಎನ್ನಲಾಗಿದೆ. ಈಗಾಗಲೇ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿದೆ. ಇದರ ಬೆನ್ನಲ್ಲೇ ಜುಲೈ 10ರಂದು ಇಡಿ ಮಾಜಿ ಸಚಿವ ನಾಗೇಂದ್ರ ಹಾಗೂ ಬಸನಗೌಡ ದದ್ದಲ್ ಅವರ ಮನೆಯ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿತ್ತು. ನಾಗೇಂದ್ರ ಹಾಗೂ ಬಸನಗೌಡ ದದ್ದಲ್ ಅವರ ಮನೆ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ಹಾಗೂ ಅವರ ಪಿಎ ಹರೀಶ್ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಆತ ನೀಡಿದ ಕೆಲ ಮಾಹಿತಿಯ ಆಧಾರದ ಮೇರೆಗೆ ಇಂದು ನಾಗೇಂದ್ರ…

Read More

ಸುಳ್ಯ: ಗುತ್ತಿಗಾರಿನ ಬಸ್ ನಿಲ್ದಾಣದಲ್ಲಿ ಮದ್ಯ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರನ್ನು ಅಲ್ಲಿಂದ ಓಡಿಸಲು ಬಂದ ಪೊಲೀಸರೇ ಕುಡಿದು ಬಂದಿದ್ದರೆಂದು ಸಾರ್ವಜನಿಕರಿಗೆ ಅನುಮಾನ ಬಂದು ಪೊಲೀಸರನ್ನೇ ಪ್ರಶ್ನಿಸಿದ ಘಟನೆ ಗುತ್ತಿಗಾರಿನಲ್ಲಿ ನಡೆದಿದೆ.ಸದ್ಯ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಅಗುತ್ತಿದೆ. ಬುಧವಾರ ಗುತ್ತಿಗಾರು ಬಸ್ ನಿಲ್ದಾಣದಲ್ಲಿ ಕುಡಿದು ಮಲಗಿದ್ದವರಿಂದ ತೊಂದರೆ ಆಗುತ್ತಿದೆ ಎಂದು ಮಹಿಳೆಯೊಬ್ಬರು ಪೊಲೀಸ್‌ ಇಲಾಖೆಯ ಸಹಾಯವಾಣಿ ಸಂಖ್ಯೆ 112 ಗೆ ಕರೆಮಾಡಿ ದೂರು ಹೇಳಿದ್ದರು. ಬಸ್ ನಿಲ್ದಾಣದಲ್ಲಿದ್ದ ಆ ಕುಡುಕರು ಅಲ್ಲಿ ಬಾಟಲಿ ಒಡೆದು ಬಾಟಲಿ ಚೂರುಗಳನ್ನು ಚೆಲ್ಲಿದ್ದರಿಂದ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿತ್ತು. ಕರೆಯ ಆಧಾರದಲ್ಲಿ ಸ್ಥಳಕ್ಕೆ ಹೊಯ್ಸಳ ಪೋಲಿಸರು ಬಂದಿದ್ದು, ಅವರು ಕುಡುಕರನ್ನು ಗದರಿಸದೆ ವಾಹನದೊಳಗೆ ಕುಳಿತಿರುವುದನ್ನು ಕಂಡ ಸಾರ್ವಜನಿಕರು ಅನುಮಾನಗೊಂಡರು. ಪೊಲೀಸರೇ ಕುಡಿದು ಬಂದಿದ್ದಾರೆಂದು ತಿಳಿದುಕೊಂಡ ಸಾರ್ವಜನಿಕರು ಮೊಬೈಲ್ ನಲ್ಲಿ ಪೋಲೀಸರ ಚಲನವಲನವನ್ನು ಸೆರೆಹಿಡಿದಿದ್ದಾರೆ. ಇನ್ನು ಕೆಲ ಮಂದಿ ನೇರವಾಗಿ ಪೋಲೀಸರನ್ನು ಈ ಬಗ್ಗೆ ಪ್ರಶ್ನಿಸಿ, ಅದನ್ನು ವೀಡಿಯೋ ಮಾಡಿಕೊಂಡರು.‌ ಜೊತೆಗೆ ‘ಕುಡಿದು ವಾಹನ…

Read More

ಮಂಗಳೂರು: ದೇರೆಬೈಲ್‌ನ ಕೋಟೆಕಣಿಯಲ್ಲಿ ನಡೆದ ಸುಲಿಗೆ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಸಿಸಿ ಕ್ಯಾಮರಾ ಪ್ರಮುಖ ಪಾತ್ರ ವಹಿಸಿದ್ದು, ಸಾರ್ವಜನಿಕರು ತಮ್ಮ ಮನೆಗಳ ಮುಖ್ಯ ರಸ್ತೆಗಳಿಗೆ ಹಾಗೂ ಮನೆಗಳ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಕೆಗೆ ಆದ್ಯತೆ ನೀಡಬೇಕು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸಲಹೆ ನೀಡಿದ್ದಾರೆ. ಕೋಟೆಕಣಿ ಸುಲಿಗೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿಗಳನ್ನು ಬುಧವಾರ ಬೆಳಗ್ಗೆ ಸ್ಥಳ ಮಹಜರು ನಡೆಸಲು ಕರೆದೊಯ್ದ ಸಂದರ್ಭ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಲು ಯತ್ನಿಸಿದ ಸಂದರ್ಭ ಪೊಲೀಸರು ಗುಂಡು ಹಾರಿಸಿದ ಪ್ರಕರಣದ ಬಗ್ಗೆ ಸುದ್ದಿಗೋಷ್ಟಿಯಲ್ಲಿ ವಿವರ ನೀಡಿದ ಸಂದರ್ಭ ಅವರು ಈ ವಿಷಯ ತಿಳಿಸಿದರು. ಸಿಸಿ ಕ್ಯಾಮರಾ ಅಳವಡಿಕೆ ಇಂದಿನ ದಿನಗಳಲ್ಲಿ ಅತೀ ಅಗತ್ಯವಾಗಿದೆ. ರಾತ್ರಿ ಹೊತ್ತಿನಲ್ಲೂ ದೃಶ್ಯಗಳನ್ನು ಸೆರೆ ಹಿಡಿಯುವಲ್ಲಿ ಹಾಗೂ ರೆಕಾರ್ಡಿಂಗ್ ವ್ಯವಸ್ಥೆಯನ್ನು ಮನೆ ಮಾಲಕರು ಹಾಗೂ ಅಂಗಡಿ ಮಾಲಕರು ಹೊಂದಿರುವುದನ್ನು ಖಾತರಿಪಡಿಸುವುದು ಉತ್ತಮ ಎಂದರು. ಪೊಲೀಸರು ಈಗಾಗಲೇ ಬೀಟ್ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದಾರೆ. ಇದಲ್ಲದೆ, ಮನೆಯಲ್ಲಿ ಒಂಟಿಯಾಗಿ ಇರುವವರು ಹಾಗೂ ಮನೆಯಿಂದ…

Read More

ಬೆಂಗಳೂರು: ಇದು ರಾಜ್ಯವೇ ಖುಷಿಪಡುವ ಸುದ್ದಿ ಎಂದು ಖ್ಯಾತಿ ಪಡೆ ಖಾಸಗಿ ವಾಹಿನಿಯ ನಿರೂಪಕಿ ದಿವ್ಯ ವಸಂತ ವಂಚನೆ ಪ್ರಕರಣದಲ್ಲಿ ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. ದಿವ್ಯ ವಸಂತ ಮತ್ತು ಗ್ಯಾಂಗ್‌ ನಿಂದ ಇಂದಿರಾನಗರದಲ್ಲಿರುವ ಸ್ಪಾ ಮಾಲೀಕನಿಗೆ ಚೆದರಿಕೆ ಹಾಕಿ ಹಣ ಸುಲಿಗೆ ಯತ್ನ ಪ್ರಕರಣ ಇದಾಗಿದ್ದು, ಈ ಕೇಸ್‌ ನಲ್ಲಿ ತಮ್ಮನ ಬಂಧನ ನಂತರ ಪರಾರಿಯಾಗಿ ತಲೆಮರೆಸಿಕೊಂಡಿದ್ದದಿವ್ಯ ವಸಂತ ಕೇರಳದಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಸದ್ಯ ಕೇರಳದಿಂದ ಬಂಧಿಸಿ ಕರೆತಂದಿರುವ ಜೀವನ್‌ ಭೀಮಾನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Read More

ಮಂಗಳೂರು: ನಗರದ ಕೊಣಾಜೆಯ ಕೆಎಸ್ಆರ್‌ಪಿ 7ನೇ ಬೆಟಾಲಿಯನ್‌ ಇನ್‌ಸ್ಪೆಕ್ಟರ್ ಮಹಮ್ಮದ್ ಹ್ಯಾರೀಸ್ ಎಂಬಾತ 18ಸಾವಿರ ರೂ. ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಕೆಎಸ್ಆರ್‌ಪಿ 7ನೇ ಬೆಟಾಲಿಯನ್‌‌ನ ಪೊಲೀಸ್ ಅತಿಥಿಗೃಹದಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಲು ಮೀಸಲು ಪೊಲೀಸ್ ಕಾನ್ಸ್‌ಸ್ಟೇಬಲ್‌ರಿಂದ ಮಹಮ್ಮದ್ ಹ್ಯಾರೀಸ್ 20,000 ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಜೊತೆಗೆ ಪ್ರತೀ ತಿಂಗಳು 6,000 ರೂ.ನಂತೆ ಹಣ ನೀಡಬೇಕೆಂದು ಲಂಚ ಕೇಳಿದ್ದ. ಅದರಂತೆ ಮೊದಲಿಗೆ 20000 ಹಣನೀಡಿ, ಬಳಿಕ ಪ್ರತಿ ತಿಂಗಳು 6,000ದಂತೆ ಲಂಚ ನೀಡುತ್ತಾ ಬಂದಿದ್ದಾರೆ. ಈ ಮೂಲಕ ಈವರೆಗೆ ಒಟ್ಟು 50,000 ರೂ. ಲಂಚ ನೀಡಲಾಗಿತ್ತು. ಆದರೆ ಪೊಲೀಸ್ ಕಾನ್ಸ್‌ಸ್ಟೇಬಲ್‌ ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ 3ತಿಂಗಳಿನಿಂದ ಲಂಚ ನೀಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಮಹಮ್ಮದ್ ಹ್ಯಾರೀಸ್ ಪ್ರತಿದಿನ ಕರೆಮಾಡಿ 18,000 ರೂ. ಹಣ ಲಂಚವಾಗಿ ನೀಡಬೇಕೆಂದು ಇಲ್ಲವಾದರೆ ಡ್ಯೂಟಿ ಬದಲಾಯಿಸುತ್ತೇನೆ ಎಂದು ಫಿರ್ಯಾದಿದಾರರಿಗೆ ಬೆದರಿಸುತ್ತಿದ್ದ. ಇದರಿಂದ ಬೇಸತ್ತ ಪೊಲೀಸ್ ಕಾನ್ಸ್‌ಸ್ಟೇಬಲ್‌ ಮಂಗಳೂರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಅದರಂತೆ 18,000 ಲಂಚ ಪಡೆಯುತ್ತಿದ್ದಾಗಲೇ…

Read More

ಮಂಗಳೂರು: ಪಶ್ಚಿಮ ವಲಯದ ಸಿವಿಲ್ ಪಿಎಸ್ ಐ ಗಳನ್ನು ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಳಿಸಿ ಐಜಿಪಿ ಅಮಿತ್ ಸಿಂಗ್ ಆದೇಶ ಹೊರಡಿಸಿದ್ದಾರೆ, ವರ್ಗಾವಣೆಗೊಂಡವರ ವಿವರ ಲೋಹಿತ್ ಎಲ್ ಎಸ್ – ಮೆಸ್ಕಾಂ ಜಾಗೃತ ದಳ ಚಿಕ್ಕಮಗಳೂರುಪವನ್ ಕುಮಾರ್ ಸಿಸಿ – ಕಡೂರು ಠಾಣೆ (ಕಾನೂನು ಮತ್ತು ಸುವ್ಯವಸ್ಥೆ)ಧನಂಜಯ ಡಿ ಹೆಚ್ – ಕಡೂರು ಠಾಣೆ (ತನಿಖೆ -2)ಶೋಭಾ ಕೆ – ಕಡೂರು ಠಾಣೆ (ತನಿಖೆ -2)ಅಜರುದ್ದೀನ್ ಎಂ ಎಸ್ – ಕಡೂರು ಠಾಣೆ (ತನಿಖೆ – 1)ಆದರ್ಶ ಎಂ ಎಸ್ – ಪಿಟಿಎಸ್ ಕಡೂರುಪುರಷೋತ್ತಮ ಎ – ಡಿಸಿಆರ್ ಬಿ ಘಟಕ ದಕ್ಷಿಣ ಕನ್ನಡ ಜಿಲ್ಲೆಸುನೀಲ್ ಬಂಡೀವಡ್ಡರ್ – ಕದ್ರ ಠಾಣೆ (ಕಾನೂನು ಮತ್ತು ಸುವ್ಯವಸ್ಥತೆ & ಸಂಚಾರ)ಮಯೂರ ಪಟ್ಟಣ ಶೆಟ್ಟಿ – ಕುಮಟ ಠಾಣೆ (ತನಿಖೆ-2)ನಾಗೇಶ್ ಎ – ಚಿಕ್ಕಮಗಳೂರು ಸಂಚಾರ ಠಾಣೆ (ಪಿಎಸ್ ಐ – 2)ವಿನಯ್ ಕೊರ್ಲಹಳ್ಳಿ – ಕೊಲ್ಲೂರು ಠಾಣೆ (ಕಾನೂನು ಮತ್ತು ಸುವ್ಯವಸ್ಥೆ &…

Read More