Author: main-admin

ಮಂಗಳೂರು: ಪುತ್ತೂರು ಶಾಸಕ ಅಶೋಕ್ ರೈಯವರ ಬೇಡಿಕೆಗೆ ಅಸ್ತು ಎಂದ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಮಂಗಳೂರಿನಲ್ಲಿ ಪೊಲೀಸ್ ವಸತಿ ಸಮುಚ್ಚಯ ಉದ್ಘಾಟನೆಯ ವೇದಿಕೆಯಲ್ಲಿಯೇ ಪುತ್ತೂರಿಗೆ ಮಹಿಳಾ ಠಾಣೆಯನ್ನು ಮಂಜೂರು ಮಾಡಿ ಒಂದು ಕೋಟಿ ರೂ. ಮೊತ್ತ ಅನುದಾನ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ಪುತ್ತೂರು ಶಾಸಕ ಅಶೋಕ್ ರೈಯವರು, ಗೃಹಸಚಿವರಲ್ಲಿ ಪುತ್ತೂರಿಗೊಂದು ಮಹಿಳಾ ಠಾಣೆಯ ಅಗತ್ಯವಿದೆ. ಈಗ ಇರುವ ಠಾಣೆಯನ್ನು ಬದಲಾವಣೆ ಮಾಡಬೇಕು. ಅದಕ್ಕಾಗಿ 9ಸೆಂಟ್ಸ್ ಜಾಗವನ್ನು ಗುರುತಿಸಿದ್ದೇವೆ. ಜೊತೆಗೆ ಎಸ್ಪಿ ಆಫೀಸನ್ನು ಪುತ್ತೂರಿಗೆ ವರ್ಗಾವಣೆ ಮಾಡಬೇಕು. ಅಧಿಕಾರಿಗಳಿಗೆ ಅದು ದೂರ ಆಗುವುದಿದ್ದಲ್ಲಿ ಕನಿಷ್ಠ ಪಕ್ಷ ಡಿಎಆರ್ ಅನ್ನಾದರೂ ನೀಡಬೇಕು. ಈಗಾಗಲೇ ಅದಕ್ಕೆ ನಾವು 2.10ಎಕ್ರೆ ಜಾಗವನ್ನು ಮೀಸಲಿಟ್ಟಿದ್ದೇವೆ‌‌. ಗುಪ್ತಚರ ಇಲಾಖೆಗೆ ದ.ಕ.ಜಿಲ್ಲೆಯಲ್ಲೊಂದು ಪ್ರತ್ಯೇಕ ಕಚೇರಿ ಮಾಡಬೇಕು ಎಂದು ಮೂರು ಬೇಡಿಕೆಗಳನ್ನು ಗೃಹಸಚಿವರ ಮುಂದಿಟ್ಟಿದ್ದರು. ಬಳಿಕ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಮಾತನಾಡಿ, ಮೊದಲನೇ ಬಾರಿಗೆ ಶಾಸಕರಾಗಿರುವ ಅಶೋಕ್ ರೈಯವರು ಬೇರೆಬೇರೆ ಕೆಲಸ ಮಾಡಬೇಕೆಂಬ ಉತ್ಸಾಹದಲ್ಲಿದ್ದಾರೆ. ನಾನೂ ಮೊದಲ ಬಾರಿ ಗೆದ್ದಾಗ ನಿಮಗಿಂತ…

Read More

ಮಂಗಳೂರು: ಶಾಲಾ-ಕಾಲೇಜುಗಳಿಗೆ ಡ್ರಗ್ಸ್ ರವಾನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸರದ್ದಾಗಿದೆ. ಆದ್ದರಿಂದ ಡ್ರಗ್ಸ್ ದಂಧೆ ನಡೆದಲ್ಲಿ ಆಯಾ ಠಾಣಾ ವ್ಯಾಪ್ತಿಯ ಇನ್‌ಸ್ಪೆಕ್ಟರ್, ಡಿವೈಎಸ್ಪಿ, ಕಮಿಷನರ್, ಎಸ್ಪಿಗಳೇ ಕಾರಣ. ತಮ್ಮನ್ನೇ ಹೊಣೆ ಮಾಡಲಾಗುತ್ತದೆ ಎಂದು ರಾಜ್ಯ ಗೃಹಸಚಿವ ಡಾ.ಜಿ.ಪರಮೇಶ್ವರ್ ಖಡಕ್ ವಾರ್ನಿಂಗ್ ನೀಡಿದರು. ಮಂಗಳೂರು ನಗರದ ಪೊಲೀಸ್ ಲೇನ್‌ನಲ್ಲಿ ಪೊಲೀಸ್ ವಸತಿ ಸಮುಚ್ಚಯವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಡ್ರಗ್ಸ್ ದಂಧೆ ಮಿತಿಮೀರಿದ್ದ, ಕಳೆದ ವರ್ಷ 200ಕೋಟಿ ಮೌಲ್ಯದ ಡ್ರಗ್ಸ್ ಹಿಡಿಯಲಾಗಿದೆ‌. ಡ್ರಗ್ಸ್ ಪೆಡ್ಲರ್‌ಗಳಿಗೆ ಯಾವುದೇ ಕ್ಷಮೆಯಿಲ್ಲ. ಡ್ರಗ್ಸ್ ವಿರುದ್ಧ ಏನುಕ್ರಮ ಕೈಗೊಳ್ಳುತ್ತೀರೋ ನಾನು ಪೊಲೀಸರೊಂದಿಗೆ ಇರುತ್ತೇನೆ. ಪ್ರತೀ ತಿಂಗಳು ಶಾಲಾ-ಕಾಲೇಜುಗಳಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಆ್ಯಂಟಿ ಡ್ರಗ್ ಕಾರ್ಯಾಚರಣೆ ನಡೆಸಬೇಕು ಎಂದರು. ಪೊಲೀಸ್ ಸಿಬ್ಬಂದಿಗೆ ಉತ್ತಮ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಸುಸಜ್ಜಿತ ಪೊಲೀಸ್ ಗೃಹ ನಿರ್ಮಿಸಿ ಕೊಡಲಾಗಿದೆ. ಪ್ರಾರಂಭದಲ್ಲಿ ಒಂದು ಯುನಿಟ್ ವೆಚ್ಚ 16-17 ಲಕ್ಷ ಇದ್ದದ್ದು ಇಂದು 27 ಲಕ್ಷ ರೂ. ಆಗಿದೆ. ಸದ್ಯ ರಾಜ್ಯದಲ್ಲಿ ಲಕ್ಷಕ್ಕೂ ಮಿಕ್ಕಿ ಪೊಲೀಸರಿದ್ದಾರೆ.…

Read More

ಧರ್ಮಸ್ಥಳ: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೈಭವದಿಂದ ನಡೆಯುತ್ತಿದ್ದು, ಈ ಪ್ರಯುಕ್ತ ಸರ್ವಧರ್ಮ ಸಮ್ಮೇಳನ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು. ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನದ ಉದ್ಘಾಟನೆಯನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ನೆರವೇರಿಸಿದರು. ಕೈಲಾಸ ಆಶ್ರಮ‌ ಮಹಾಸಂಸ್ಥಾನದ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿ ಶುಭ ಸಂದೇಶಗೈದರು. ಇನ್ನು, ಸರ್ವಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮ ಹಾಗೂ ಸಮನ್ವಯದ ವಿಷಯದಲ್ಲಿ ಡಾ.ಜಿ.ಬಿ. ಹರೀಶ್ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಡಾ.ಜೋಸೆಪ್ ಎನ್. ಎಮ್. ಕ್ರೈಸ್ತ ಧರ್ಮದಲ್ಲಿ ಸಮನ್ವಯದ ದೃಷ್ಟಿ ಎಂಬ ವಿಚಾರವಾಗಿ ಉಪನ್ಯಾಸ ನೀಡಿದರು. ಇಸ್ಲಾಂ ಹಾಗೂ ಮಾನವತೆಯ ಕುರಿತು ಮೆಹತಾಬ ಇಬ್ರಾಹಿಮ್ ಸಾಬ ಕಾಗವಾಡ ಉಪನ್ಯಾಸ ನೀಡಿದರು.

Read More

ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ಅಂಕೆ ಸಂಖ್ಯೆಗಳ ಮೇಲೆ ಹಣವನ್ನು ಪಣವನ್ನಾಗ್ಗಿಟ್ಟುಕೊಂಡು ಅಕ್ರಮವಾಗಿ ನಡೆಸುತ್ತಿದ್ದ ಮಟ್ಕಾ ಚೀಟಿ ದಂಧೆಗೆ ಪೊಲೀಸರು ದಾಳಿ ನಡೆಸಿ, ಆರೋಪಿಗಳ ಸಹಿತ ನಗದು ವಶ ಪಡಿಸಿಕೊಂಡ ಘಟನೆ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ತುಂಬೆ ಜಂಕ್ಷನ್ ಬಳಿ ನಡೆದಿದೆ. ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ತುಂಬೆ ಜಂಕ್ಷನ್ ಬಳಿ ಹೋಟೇಲ್‌ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮಟ್ಕಾ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯ ಪಿ.ಎಸ್.ಐ ರಾಮಕೃಷ್ಣ ನೇತೃತ್ವದ ತಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ದಂಧೆಯಲ್ಲಿ ಭಾಗಿಯಾದ ಉಳ್ಳಾಲ ತಾಲೂಕಿನ ಬೋಳಿಯಾರು ನಿವಾಸಿ ಅಬೂಬಕ್ಕರ್ (38), ಬಂಟ್ವಾಳ ತಾಲೂಕು ಸಜಿಪ ಮೂಡಾದ ದಿನೇಶ್ ಕುಮಾರ್ (36) ಎಂಬ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಂದ 2,850/- ನಗದು ಹಣವನ್ನು ಹಾಗೂ ಮಟ್ಕಾ ಚೀಟಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ ನಂ: 180/2024 ಕಲಂ:78 ಕೆ.ಪಿ…

Read More

ಉಡುಪಿ: ಅಕ್ರಮ ಮರಳುಗಾರಿಕೆಗೆ ಸಹಕಾರ ಮಾಡಿರುವ ಆರೋಪದಲ್ಲಿ ಕಾಪು ಪೊಲೀಸ್‌ ಠಾಣೆಯ ಉಪ ನಿರೀಕ್ಷಕ ಅಬ್ದುಲ್‌ ಖಾದರ್‌ ಅವರನ್ನು ಅಮಾನತು ಮಾಡಲಾಗಿದೆ. ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಮರಳು ದಂಧೆಕೋರರೊಂದಿಗೆ ಪಿಎಸ್‌ಐ ಅಬ್ದುಲ್‌ ಖಾದರ್‌ ಸಹಕರಿಸಿದ್ದಾರೆ ಎನ್ನುವುದನ್ನು ತಿಳಿಸುವ ಆಡಿಯೋವೊಂದರ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಲಾಗಿತ್ತು. ಪ್ರಾಥಮಿಕ ತನಿಖೆ ನಡೆಸಿದ ವೇಳೆ ಕಾಪು ಠಾಣಾಧಿಕಾರಿ ವಿರುದ್ಧದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.

Read More

ಮಂಗಳೂರು: ಪ್ರತಿಭಟನೆ ನಡೆದ ವೇಳೆ ಎಎಸ್ಐ ಅವರನ್ನು ತಳ್ಳಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಿ ಡಿವೈಎಫ್‌ಐ ಸಂಘಟನೆಯ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ.28ರಂದು ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಪ್ರತಿಭಟನೆ ಆಯೋಜನೆಗೊಂಡಿತ್ತು. ಈ ವೇಳೆ ಬಂದೋಬಸ್ತ್ ಕರ್ತವ್ಯನಿರತ ಕದ್ರಿ ಠಾಣೆಯ ಎಎಸ್‌ ಐ ಮುತ್ತಪ್ಪ ಗೌಡ ಬಿ. ಅವರನ್ನು ಪ್ರತಿಭಟನಾಕಾರರು ತಳ್ಳಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಎಎಸ್ಐ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಎಎಸ್ಐ ಮುತ್ತಪ್ಪ ಗೌಡರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.

Read More

ಹಾವೇರಿ: ಸಿಎಂ ಆಗಲಿಕ್ಕೆ ಆಸೆ ಇದೆ, ಅಧ್ಯಕ್ಷ ಆಗಲಿಕ್ಕೆ ಆಸೆ ಇದೆ, ಮಂತ್ರಿ ಆಗಲಿಕ್ಕೂ ಆಸೆ ಇದೆ. ಆದ್ರೆ ಅಂತಿಮವಾಗಿ ಪಕ್ಷ ತೀರ್ಮಾನ ಮಾಡಲಿ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿಎಂ ಆಗ್ತಾರೆ ಅಂತ ಹೇಳಿ ಹೆಸರು ಓಡಾಡ್ತು. ಈಗ ಅಧ್ಯಕ್ಷ ಆಗ್ತಾರೆ ಅಂತಾ ಹೆಸರು ಓಡಾಡ್ತಾ ಇದೆ. ನಮ್ಮ ಉತ್ಸಾಹ ಅಷ್ಟೆ. ಅಂತಿಮವಾಗಿ ಪಕ್ಷ ತೀರ್ಮಾನ ಮಾಡಬೇಕು. ನಾವೆಲ್ಲಾ ಕಾದು ನೋಡಬೇಕು ಅಷ್ಟೆ. ಈ ವಿಚಾರವಾಗಿ ನಾನು ಯಾವುದೇ ರೀತಿ ಒತ್ತಡ ಹಾಕಿಲ್ಲ. ಚುನಾವಣೆಯಲ್ಲಿ ಗೆಲ್ಲಿಸಿದ್ದೀವಿ, ತೃಪ್ತಿ ಇದೆ. ಮಂತ್ರಿಯಾಗಿ ಕೆಲಸ ಮಾಡ್ತಾ ಇದ್ದೀವಿ, ತೃಪ್ತಿ ಇದೆ ಎಂದರು. ಕಾಂಗ್ರೆಸ್ ಸಮಾವೇಶ ಡಿಸೆಂಬರ್ 5 ಅಥವಾ 8 ಎಂಬುದು ಖಚಿತ ಆಗಿಲ್ಲ. ಹೇಳ್ತಾ ಇದಾರೆ. ಎಲ್ಲಿದೆ ಪತ್ರ? ಯಾರಿಗೆ ಬರೆದರು? ಯಾಕೆ ಬರೆದರು? ಏನು ಆ್ಯಕ್ಷನ್ ತಗೊಂಡ್ರು? ಬೇಕಲ್ಲಾ? ಸುಮ್ಮನೇ ಏನೋ ಒಂದು ವಾಟ್ಸಾಪ್‌ನಲ್ಲಿ ಬಂದರೆ ಇಡೀ ಪಕ್ಷದ…

Read More

ತುಮಕೂರು: ತುಮಕೂರಿನ ಪ್ರಾದೇಶಿಕ ಸಾರಿಗೆ ಕಚೇರಿ ಮೇಲೆ ಅಕ್ರಮವಾಗಿ ನೊಂದಣಿ ಪ್ರಕ್ರಿಯೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬುಧವಾರ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಗುರುವಾರವೂ ತನಿಖೆಯನ್ನು ಮುಂದುವರೆಸಿದ್ದು, ದಾಖಲೆಗಳ ತಪಾಸಣೆ ನಡೆಸುತ್ತಿದ್ದಾರೆ.ಈ ವೇಳೆ ಆರ್ ಟಿ ಓ ಕಚೇರಿಯಲ್ಲಿ ಅಕ್ರಮ ನೋಂದಣಿ ಪ್ರಕ್ರಿಯೆಯಿಂದ ಸರ್ಕಾರಕ್ಕೆ ಸುಮಾರು 300 ಕೋಟಿ ರೂಪಾಯಿ ತೆರಿಗೆ ನಷ್ಟವಾಗಿದೆ ಎಂಬುದು ಬೆಳಕಿಗೆ ಬಂದಿದೆ. ಹೌದು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಯಾಗಿರುವ ಸುಮಾರು 6 ಸಾವಿರಕ್ಕೂ ಹೆಚ್ಚಿನ ಟ್ರ್ಯಾಕ್ಟರ್‌ಗಳಲ್ಲಿ 2,500 ಕೃಷಿ ದೃಢೀಕರಣ ಪತ್ರ (ಬೋನಾಫೈಡ್) ನೀಡಿ ಮಧ್ಯವರ್ತಿಯೊಬ್ಬ ಟ್ರ್ಯಾಕ್ಟರ್ ಗಳನ್ನು ನೋಂದಣಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.ಸಾರಿಗೆ ಅಧಿಕಾರಿಗಳು ಹಾಗೂ ಮಧ್ಯವರ್ತಿಯಿಂದ ನಡೆದಿರುವ ಈ ಅಕ್ರಮದಲ್ಲಿ ಸರ್ಕಾರಕ್ಕೆ 300 ಕೋಟಿಗೂ ಹೆಚ್ಚು ತೆರಿಗೆ ನಷ್ಟವಾಗಿದೆ ಎನ್ನಲಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ನಕಲಿ ಕೃಷಿ ದೃಢೀಕರಣ ಪತ್ರ ನೀಡಿ ನೋಂದಣಿ ಮಾಡಿಸಿರುವ ಕಡತಗಳ ಬೆನ್ನತ್ತಿದ್ದಾರೆ. 2,500 ಟ್ರ್ಯಾಕ್ಟರ್, 500ಕ್ಕೂ ಹೆಚ್ಚು ಜೆಸಿಬಿಗಳನ್ನು ನಕಲಿ ಕೃಷಿ ದೃಢೀಕರಣ ಪತ್ರವನ್ನು…

Read More

ಸುರತ್ಕಲ್ : ಮಂಗಳೂರು ಹೊರವಲಯದ ಸುರತ್ಕಲ್ ಮುಕ್ಕ  ಶ್ರೀನಿವಾಸ ಕಾಲೇಜಿನಲ್ಲಿ ರ‍್ಯಾಗಿಂಗ್  ನಡೆದಿದೆ. ಕಾಲೀಜಿನ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗೆ ರ‍್ಯಾಗಿಂಗ್ ಮಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲೇಜಿನಲ್ಲಿ ಮೊದಲನೇ ವರ್ಷದ ವೈದ್ಯಕೀಯ ಮನೋಶಾಸ್ತ್ರ ವ್ಯಾಸಂಗ ಮಾಡುತ್ತಿರುವ 19 ವರ್ಷದ ವಿದ್ಯಾರ್ಥಿ ರ‍್ಯಾಗಿಂಗ್ ಪಿಡುಗಿಗೆ ಒಳಗಾದ ವಿದ್ಯಾರ್ಥಿಯಾಗಿದ್ದು ನವೆಂಬರ್ 25 ರಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಿದಾಯಿಸ್ ಎಂಬಾತ ಲೊಕೇಶನ್ ಕಳುಹಿಸಿ, ಅಲ್ಲಿಗೆ ಬರುವಂತೆ ಕಿರಿಯ ವಿದ್ಯಾರ್ಥಿಗೆ ತಿಳಿಸಿದ್ದಾನೆ. ಆತ ತನ್ನ ಇತರ ಸ್ನೇಹಿತರನ್ನು ಕರೆದುಕೊಂಡು ನಿಗದಿತ ಸ್ಥಳಕ್ಕೆ ತೆರಳಿದ್ದಾನೆ. ಹಿರಿಯ ವಿದ್ಯಾರ್ಥಿಯ ಕೊಠಡಿಯೊಳಗೆ ಹೋದ ಬಳಿಕ, ಅಲ್ಲಿಯೇ ಇದ್ದ ಸಿದಾಯಿಸ್, ಅಮಲ್ ಕೃಷ್ಣ ಹಾಗೂ ಸಾಜೀದ್ ಅವರುಗಳು ಅವಾಚ್ಯ ಶಬ್ದಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ರೇಗಿಸಿದ್ದಾರೆ. ಬಳಿಕ ಕೊಠಡಿ ಬಾಗಿಲನ್ನು ಮುಚ್ಚಿ ಕಿರಿಯ ವಿದ್ಯಾರ್ಥಿಗೆ ಹಾಡಲು ಮತ್ತು ನೃತ್ಯ ಮಾಡಲು ಹೇಳಿದ್ದಾರೆ.ಇದಕ್ಕೆ ಕಿರಿಯ ವಿದ್ಯಾರ್ಥಿ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿರೋಧ ಒಡ್ಡಿದಾಗ ಹಿರಿಯ ವಿದ್ಯಾರ್ಥಿಗಳಾದ…

Read More

ಬೆಳ್ತಂಗಡಿ : ಭಜರಂಗದಳ ಕಾರ್ಯಕರ್ತರು ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ಕು ಗೋವುಗಳನ್ನು ರಕ್ಷಣೆ ಮಾಡಿದ ಘಟನೆ ಉಜಿರೆಯಲ್ಲಿ ಸಂಭವಿಸಿದ. ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಸಂದರ್ಭ, ಉಜಿರೆಯ ಗುರಿಪಳ್ಳದಲ್ಲಿ ಭಜರಂಗದಳದ ಕಾರ್ಯಕರ್ತರು ತಡೆದು ನಿಲ್ಲಿಸಿ ಗೋವುಗಳನ್ನು ರಕ್ಷಿಸಿದ್ದಾರೆ. ರಕ್ಷಿಸಿದ ಗೋವುಗಳನ್ನು ಬೆಳ್ತಂಗಡಿ ಠಾಣೆಗೆ ಒಪ್ಪಿಸಲಾಗಿದೆ.

Read More