ಪುತ್ತೂರು: ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಗೆ ಬೈಕ್ ಢಿಕ್ಕಿ ಹೊಡೆದು ಆಕೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲನಾ ಪರವಾನಿಗೆ ಇಲ್ಲದ ಬೈಕ್ ಸವಾರನಿಗೆ ಕೋರ್ಟ್ ದಂಡ ವಿಧಿಸಿದ್ದು, ಬೈಕ್ ಮಾಲಿಕನಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2022ರ ಫೆ.27ರಂದು ನೆಟ್ಟಣಿಗೆ ಮುಟ್ನೂರು ಕೊಟ್ಯಾಡಿಯಲ್ಲಿ ಈ ಅಪಘಾತ ಸಂಭವಿಸಿತ್ತು. ಅಪಘಾತದ ವೇಳೆ ಮುಳಿಯೂರು ನಿವಾಸಿ ಶಾಹೀದ್ ಕೇರಳ ರಾಜ್ಯದ ನೋಂದಣಿಯ ಬೈಕ್ ಚಲಾಯಿಸುತ್ತಿದ್ದ. ಈತ ಚಲಾಯಿಸುತ್ತಿದ್ದ ಬೈಕ್ ರಸ್ತೆ ಬದಿಯಲ್ಲಿ ನಿಂತಿದ್ದ ದುಗ್ಗಮ್ಮ (55) ಅವರಿಗೆ ಢಿಕ್ಕಿ ಹೊಡೆದಿತ್ತು. ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಸವಾರ ಶಾಹೀದ್ ಮತ್ತು ಬೈಕ್ ಮಾಲಕ ಮಹಮ್ಮದ್ ಶಾಕೀರ್ ವಿರುದ್ಧ ಸೆಕ್ಷನ್ 279, 338, 304(ಎ)1 ರಂತೆ ಪ್ರಕರಣ ದಾಖಲಿಸಿ, ಜೊತೆಗೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪುತ್ತೂರು ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶ ದೇವರಾಜ್ ವೈ.ಎಚ್.ಅವರ ಪೀಠ ಚಾಲನಾ ಪರವಾನಿಗೆ ಇಲ್ಲದ ಬೈಕ್ ಸವಾರ…
Author: main-admin
ಬೆಳ್ತಂಗಡಿ : ಬೆಳ್ತಂಗಡಿ ಮಿತ್ತಬಾಗಿಲು ದ್ವಿತೀಯ ಪಿಯುಸಿ ವಿಧ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಯುವಕನೊಬ್ಬನ ಮೇಲೆ ಇದೀಗ ವಿಧ್ಯಾರ್ಥಿನಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಳ್ತಂಗಡಿಯಲ್ಲಿ ಪ್ರಿಯಕರನ ವಂಚನೆಗೆ ಬಲಿಯಾಗಿ 17 ವರ್ಷದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ಘಟನೆ ನಡೆದಿದೆ. 17 ವರ್ಷದ ಹೃಷ್ಟಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಳು. ನವೆಂಬರ್ 20 ರಂದು ಹೃಷ್ಟಿ ವಿಷ ಸೇವಿಸಿದ್ದರು. ಚಿಕಿತ್ಸೆ ಫಲಿಸದೇ ಅಪ್ರಾಪ್ತ ಯುವತಿ ಹೃಷ್ವಿ ಕೊನೆಯುಸಿರೆಳೆದಿದ್ದಾರೆ. ಹೃಷ್ಟಿ ಹಾಗೂ ಆಕೆಯ ಸಂಬಂಧಿ ಯುವಕ ಪ್ರವೀಣ್ ಪ್ರೀತಿ ಮಾಡುತ್ತಿದ್ದರು ಎಂದು ಹೇಳಲಾಗಿದ್ದು, ಮದುವೆ ಆಗೋದಾಗಿ ನಂಬಿಸಿ ವಂಚನೆ ಆರೋಪ ಮಾಡಲಾಗಿದೆ. ಪ್ರವೀಣ್ ವಿರುದ್ಧ ಹೃಷ್ವಿ ಪೋಷಕರಿಂದ ದೂರು ದಾಖಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹೃಷ್ವಿ ಆತ್ಮಹತ್ಯೆ ಬಳಿಕ ಆರೋಪಿ ಪ್ರವೀಣ್ ಪರಾರಿಯಾಗಿದ್ದಾನೆ. ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸಂಬಂಧಿ ಪ್ರವೀಣ್ ಜೊತೆ ಹೃಷ್ಟಿ ಪ್ರೇಮದಲ್ಲಿದ್ದಳು.…
ಕಾಸರಗೋಡು: ನಗರದ ಸಮೀಪ ಮರ ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿದ್ದೆ ಮಾಡಿದ್ದವರ ಮೇಲೆ ಹರಿದು ಇಬ್ಬರು ಮಕ್ಕಳು ಸಹಿತ ಐವರು ಸಾವಿಗೀಡಾದ ಘಟನೆ ತೃಶ್ಶೂರಿನ ನಾಟಿಗದಲ್ಲಿ ನಡೆದಿದೆ. ನಾಟಿಗ ಜಿ.ಕೆ. ಥಿಯೇಟರ್ ಪರಿಸರದ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯಲ್ಲಿ ನಡೆದ ದುರಂತದಲ್ಲಿ ಕಾಳಿಯಪ್ಪನ್ (50), ನಾಗಮ್ಮ (39), ಬಂಗಾಳಿ (20), ಜೀವನ್ (4) ಮತ್ತು ಇನ್ನೊಂದು ಮಗು ಸಾವಿಗೀಡಾಗಿದ್ದಾರೆ. ಮೃತರು ಗೋವಿಂದಪುರಂ ಚೆಮ್ಮಣಂತೋಡ್ ನಿವಾಸಿಗಳು ಎಂದು ತಿಳಿದು ಬಂದಿದೆ. ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
“ಜೋಜು ಜಾರ್ಜ್” ಅಭಿನಯದ ಮಲಯಾಳಂ ಚಿತ್ರ “ಪಣಿ” ಚಿತ್ರದ ಟ್ರೇಲರ್ ಗೆ ಎಲ್ಲರಲ್ಲೂ ಮೆಚ್ಚುಗೆ ಗೆ ವ್ಯಕ್ತವಾಗುತ್ತಿದೆ. ಕಳೆದ ತಿಂಗಳು ಕೇರಳದಲ್ಲಿ ಬಿಡುಗಡೆಯಾದ ಜೋಜು ಜಾರ್ಜ್ ಅಭಿನಯದ ಮತ್ತು ನಿರ್ದೇಶನದ ‘ಪಣಿ’ ಚಿತ್ರವು ಕನ್ನಡಕ್ಕೆ ಡಬ್ ಆಗಿ ನ. 29ರಂದು ರಾಜ್ಯದ್ಯಂತ ಬಿಡುಗಡೆಯಾಗುತ್ತಿದೆ. ಖ್ಯಾತ ಹೊಂಬಾಳೆ ಫಿಲಂಸ್ ಅವರು ಕರ್ನಾಟಕದಲ್ಲಿ ಈ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಜೋಜು ಜಾರ್ಜ್, ನಿರ್ದೇಶನದ ಈ ಚಿತ್ರವು ಕಳೆದ ತಿಂಗಳು ಮಲಯಾಳಂನಲ್ಲಿ ಬಿಡುಗಡೆಯಾಗಿ ಎಲ್ಲರಲ್ಲೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದೀಗ ಕನ್ನಡಕ್ಕೆ ಡಬ್ ಆಗಿ ನ. 29 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲಂಸ್ ಸಂಸ್ಥೆಯು ಕನ್ನಡ ಅವತರಣಿಕೆಯನ್ನು ಬಿಡುಗಡೆ ಮಾಡುತ್ತಿದೆ. ಇದೊಂದು ಮಾಸ್ ಮತ್ತು ಕಮರ್ಷಿಯಲ್ ಚಿತ್ರವಾಗಿದೆ. ಕೇರಳದಲ್ಲಿ ಬಿಡುಗಡೆಯಾಗಿ ಯಶಸ್ವಿಯಗಿದೆ. ಸೇಡಿನ ಕಥೆಯಾದ್ದರಿಂದ, ಎಲ್ಲಾ ಕಡೆ ಸಲ್ಲುತ್ತದೆ ಎಂಬ ನಂಬಿಕೆ ಇದೆ. ಕನ್ನಡದಲ್ಲೂ ಪ್ರೇಕ್ಷಕರು ಚೆನ್ನಾಗಿ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ. ಇದೊಂದು ಕಾಲ್ಪನಿಕ ಕಥೆಯಾಗಿದ್ದರು ಎರಡು ವರ್ಷಗಳ ಕಾಲ ಚರ್ಚೆ…
ಉಡುಪಿ: ಪೊಲೀಸ್ ಅಧಿಕಾರಿ ಎಂದು ನಂಬಿಸಿ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ವಿದ್ಯಾ ಎನ್ನುವವರಿಗೆ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ನಿಮ್ಮ ಆಧಾರ್ ನಂಬರ್ ಬಳಸಿ ಮುಂಬೈಯಲ್ಲಿ ಯಾರೋ ಸಿಮ್ ಖರೀದಿ ಮಾಡಿ ಅದರಲ್ಲಿ ಮೆಸೇಜ್ ಮತ್ತು ಟ್ರೇಡಿಂಗ್ ಮೆಸೇಜ್ ಕಳಿಸುತ್ತಿದ್ದು ನಿಮ್ಮ ಎಲ್ಲ ಮೊಬೈಲ್ ನಂಬರ್ ಲಾಕ್ ಮಾಡಲಾಗುವುದು ಎಂದು ಹೇಳಿದ ಬಳಿಕ ಕರೆಯನ್ನು ಸಹರಾ ಪೊಲೀಸ್ ಠಾಣೆಗೆ ವರ್ಗಾಯಿಸುವುದಾಗಿ ತಿಳಿಸಿದ ಅತ್ತ ಕಡೆಯಿಂದ ಮೋಹನ್ ಕುಮಾರ್ ಎಂಬಾತ ಮಾತನಾಡಿ, ತಾನು ಸಹರಾ ಪೊಲೀಸ್ ಠಾಣೆಯ ತನಿಖಾಧಿಕಾರಿ ಎಂದು ತಿಳಿಸಿ ನಿಮ್ಮ ಆಧಾರ್ ಕಾರ್ಡ್ ಮುಖಾಂತರ ಮುಂಬೈ ಎಸ್‌ಬಿಐ ಬ್ಯಾಂಕಿನಲ್ಲಿ ಖಾತೆ ತೆರದಿದ್ದು ಈ ಖಾತೆಯನ್ನು ಆಪರೇಟ್ ಮಾಡಿ ಸದರಿ ಖಾತೆಗೆ ಹ್ಯೂಮೆನ್ ಟ್ರಾಫಿಕಿಂಗ್ ಮತ್ತು ಮನಿ ಲ್ಯಾಂಡಿಂಗ್ ಮುಖಾಂತರ ಹಣ ವರ್ಗಾವಣೆ ಮಾಡಿರುತ್ತಾರೆ ಖಾತೆ ನಿಮ್ಮ ಹೆಸರಿನಲ್ಲಿ ಇರುವುದರಿಂದ ನಿಮ್ಮ ಎಲ್ಲ ಅಕೌಂಟ್ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ನಂಬಿಸಿದ್ದಾನೆ. ಪೊಲೀಸ್ ಅಧಿಕಾರಿ…
ವಿಟ್ಲ: ಅನಾರೋಗ್ಯದಿಂದ ಯುವತಿಯೋರ್ವಳು ಮೃತಪಟ್ಟ ಘಟನೆ ನಡೆದಿದೆ. ವಿಟ್ಲ ಕುಂಡಡ್ಕ ಪಾದೆ ನಿವಾಸಿ ದಿ. ನಾರಾಯಣ ಮೂಲ್ಯ ಅವರ ಪುತ್ರಿ ರಕ್ಷಿತಾ (20) ಮೃತ ಯುವತಿ. ಅನಾರೋಗ್ಯದಿಂದ ಬಳಲುತ್ತಿದ್ದ ರಕ್ಷಿತಾ ಇಂದು ಮೃತಪಟ್ಟಿದ್ದಾರೆ. ಮೃತರು ತಾಯಿ, ಅಕ್ಕ ಹಾಗು ಕುಟುಂಬಸ್ಥರನ್ನು ಅಗಲಿದ್ದಾರೆ.
ಬೆಳ್ತಂಗಡಿ: ತಾಲೂಕಿನ ವೇಣೂರಿನ ಸ್ನೇಹಿತನ ಮನೆಗೆ ಬಂದಿದ್ದ ಮೂವರು ಯುವಕರು ಬರ್ಕಜೆ ಎಂಬಲ್ಲಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಲಾರೆನ್ಸ್(21), ಸೂರಜ್ (19) ಹಾಗೂ ಜೈಸನ್ (19) ಮೃತಪಟ್ಟ ಯುವಕರು. ವೇಣೂರು ಚರ್ಚ್‌ನಲ್ಲಿ ಕಾರ್ಯಕ್ರಮವಿರುವ ಹಿನ್ನೆಲೆಯಲ್ಲಿ ಇವರು ಸ್ನೇಹಿತನ ಮನೆಗೆ ಬಂದಿದ್ದರು ಬಳಿಕ ಕಿಂಡಿ ಅಣೆಕಟ್ಟಿನ ಸಮೀಪ ಇವರು ಸ್ನಾನಕ್ಕೆ ಇಳಿದಿದ್ದಾರೆ. ಈ ವೇಳೆ ಮೂವರು ನದಿ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕದಳದವರು ತೆರಳಿದ್ದು, ಸ್ಥಳೀಯರ ಸಹಕಾರದೊಂದಿಗೆ ಮೃತದೇಹಗಳನ್ನು ಮೇಲೆತ್ತಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳೂರು : ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ನಕಲಿ ಇ ಚಲನ್ ಕಳುಹಿಸಿ ವ್ಯಕ್ತಿಯೊಬ್ಬರ ಖಾತೆಯಿಂದ 1.31 ಲಕ್ಷ ರೂ. ಗಳನ್ನು ವರ್ಗಾಯಿಸಿಕೊಂಡ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ.24ರಂದು ತನಗೆ ವಾಟ್ಸಾಪ್ ನಂಬರ್ ವೊಂದರಿಂದ ಮೆಸೇಜ್ ಬಂದಿದ್ದು, ಅದನ್ನು ಡೌನ್‌ಲೋಡ್ ಮಾಡಿದಾಗ ಮೊಬೈಲ್ ಗೆ 16 ಒಟಿಪಿಗಳು ಬಂದಿದ್ದವು. ಬಳಿಕ ಪ್ಲಿಪ್ ಕಾರ್ಟ್ ಹಾಗೂ ಅಮೇಜಾನ್ ನಲ್ಲಿ ತನ್ನ ಕ್ರೆಡಿಟ್ ಕಾರ್ಡ್ ಮೂಲಕ 30,400 ರೂ., ಡೆಬಿಟ್ ಕಾರ್ಡ್ ಮೂಲಕ 16,700 ರೂ. ಮತ್ತು ಪೇ ಲೇಟರ್ ನಲ್ಲಿ 71,496 ರೂ. ಹಣ ವರ್ಗಾವಣೆಯಾದ ಬಗ್ಗೆ ಮೊಬೈಲ್‌ಗೆ ಮೆಸೇಜ್ ಬಂತು. ತಕ್ಷಣ ಮೊಬೈಲ್ ಮೂಲಕ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ನ್ನು ಬ್ಲಾಕ್ ಮಾಡಿದೆ. ಯಾರೋ ಅಪರಿಚಿತರು ಎಪಿಕೆ ಫೈಲ್ ಮೂಲಕ ತನ್ನ ಡೆಬಿಟ್, ಕ್ರೆಡಿಟ್ ಕಾರ್ಡ್‌ನ ಮಾಹಿತಿ ಪಡೆದು ಪ್ಲಿಪ್‌ಕಾರ್ಟ್ ನಲ್ಲಿ 39,398 ರೂ. ಮೌಲ್ಯದ ಒನ್ ಪ್ಲಸ್ ಮೊಬೈಲ್, 32,398 ರೂ.…
ಮೂಲ್ಕಿ : ಆಗಸ್ಟ್ 25 ರಂದು ರೈಲ್ವೆ ಬೋಗಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದ ವ್ಯಕ್ತಿ ನಂತರ ಮೃತ ಪಟ್ಟ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚಿಕ್ಕಬಳ್ಳಾಪುರದ ಕುಮಾರ್ ಪೇಟೆಯ ಮೌಜಾಮ್ (35) ಕೊಲೆಯಾಗಿದ್ದ ವ್ಯಕ್ತಿ. ಮೂಲ್ಕಿ ಠಾಣಾ ಪೊಲೀಸರು ಆರೋಪಿಯಾದ ರಾಹುಲ್ ನನ್ನು ಗುಜರಾತ್ ನ ಪರ್ದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. ಈತ ವಿವಿಧ ರಾಜ್ಯಗಳಲ್ಲಿ 3 ಅತ್ಯಾಚಾರ ಸಹಿತ 5 ಕೊಲೆ ನಡೆಸಿರುವುದಾಗಿ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ವಿಟ್ಲ: ಆಟೋರಿಕ್ಷಾ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಸಾಲೆತ್ತೂರು ಸಮೀಪದ ಕಾಡುಮಠ ಸೇತುವೆ ಬಳಿ ನಡೆದಿದೆ. ಆಟೋ ಚಾಲಕ ಸಾಲೆತ್ತೂರು ನಿವಾಸಿ ರಫೀಕ್, ಬೈಕ್ ಸವಾರರಾದ ಕಡಂಬು ನಿವಾಸಿ ಉಮ್ಮರ್ ಮತ್ತು ರಾದುಕಟ್ಟೆ ನಿವಾಸಿ ಅಬೂಬಕ್ಕರ್ ಗಾಯಾಳುಗಳು ಎಂದು ತಿಳಿಯಲಾಗಿದೆ. ಸುಂಕದಕಟ್ಟೆ ಮಜೀರ್ ಪಳ್ಳದಲ್ಲಿ ಸೆಂಟ್ರಿಂಗ್ ಕೆಲಸ ಮುಗಿಸಿ ಮನೆಗೆ ಹಿಂತಿರುತ್ತಿದ್ದ ಉಮ್ಮರ್ ಮತ್ತು ಅಬೂಬಕ್ಕರ್ ಅವರ ಬೈಕ್ ಸಾಲೆತ್ತೂರು ಕಡೆಗೆ ಸಂಚರಿಸುತ್ತಿದ್ದ ರಫೀಕ್ ಎಂಬವರ ಆಟೋಗೆ ಕಾಡುಮಠ ಸೇತುವೆಯಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಆಟೋ ಮತ್ತು ಬೈಕ್ ಸಂಪೂರ್ಣ ಜಖಂಗೊಂಡು ಮೂವರೂ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಸ್ಥಳೀಯರು ಗಾಯಾಳುಗಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳುಗಳ ಪೈಕಿ ಅಬೂಬಕ್ಕರ್ ಅವರ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








