ಪುತ್ತೂರು: ಸಾಲ್ಮರ ಕೆರೆಮೂಲೆಯಲ್ಲಿ ಕೂಲಿ ಕಾರ್ಮಿಕನ ಮೃತದೇಹವನ್ನು ರಸ್ತೆಬದಿಯಲ್ಲಿ ಇರಿಸಿ ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಹೆನ್ರಿತಾವೋ ಸಹಿತ ಮೂವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಓರ್ವಆರೋಪಿಯನ್ನು ಈ ಹಿಂದೆಯೇ ಬಂದಿಸಿದ್ದರು. ತನ್ನೊಂದಿಗೆ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕ ಶಿವಪ್ಪ ಅವರ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು ಅವರ ಮನೆಯ ಮುಂದಿನ ರಸ್ತೆ ಸಮೀಪ ಇರಿಸಿಹೋದ ಘಟನೆ ನ.16ರಂದು ಸಾಲ್ಮರ ಕೆರೆಮೂಲೆಯಲ್ಲಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶಿವಪ್ಪ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲಕಹೆನ್ರಿ ತಾವೋ ಅವರ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಸ್ಪ್ಯಾನಿ ಮೇಸ್ತ್ರಿ ಎಂಬವರನ್ನು ಆರಂಭದಲ್ಲಿಬಂಧಿಸಿದ್ದರು. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ಹೆನ್ರಿ ತಾವೋ ಅವರ ಪುತ್ರನವಿರುದ್ಧವೂ ಆದಿ ದ್ರಾವಿಡ ಸಂಘಟನೆ ಪೊಲೀಸರಿಗೆ ದೂರು ನೀಡಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಹೆನ್ರಿ ತಾವೋ, ಅವರ ಪುತ್ರಕಿರಣ್ ಮತ್ತು ಸಹಾಯಕ ಪ್ರಕಾಶ್ ಎಂಬವರನ್ನು ಬಂಧಿಸಿದ್ದಾರೆ.
Author: main-admin
ಉಳ್ಳಾಲ: ಆಟೋ ರಿಕ್ಷಾ ಒಂದು ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಕೊಣಾಜೆ ಪುಳಿಂಚಾಡಿ ಇಳಿಜಾರು ಪ್ರದೇಶದಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಆಟೋದಲ್ಲಿದ್ದ ಮತ್ತಿಬ್ಬರು ಗಂಭೀರಗಾಯಗೊಂಡಿದ್ದಾರೆ. ಕುಂಬಳೆ ಮಂಜತ್ತಡ್ಕ ನಿವಾಸಿ ನಾರಾಯಣ ಗಟ್ಟಿ (50) ಮೃತ ದುರ್ದೈವಿಯಾಗಿದ್ದಾರೆ. ಸಂಬಂಧಿಕರೊಬ್ಬರ ಆರೋಗ್ಯ ವಿಚಾರಿಸಲೆಂದು ಕೊಣಾಜೆ ಪುಳಿಂಚಾಡಿಯ ಕಲ್ಕಾರ್ ಎಂಬಲ್ಲಿಗೆ ನಾರಾಯಣ ಗಟ್ಟಿ ಅವರು ಆಟೋ ಒಂದರಲ್ಲಿ ತೆರಳಿದ್ದರು. ಅಲ್ಲಿ ಇಳಿಜಾರು ಪ್ರದೇಶದಲ್ಲಿ ಆಟೋ ಇಳಿಯುತ್ತಿದ್ದಂತೆ ಬ್ರೇಕ್ ವೈಫಲ್ಯಕ್ಕೀಡಾಗಿ ಮರವೊಂದಕ್ಕೆ ಢಿಕ್ಕಿ ಹೊಡೆದಿದೆ. ಈ ವೇಳೆ ಗಂಭೀರ ಗಾಯಗೊಂಡ ನಾರಾಯಣ ಗಟ್ಟಿ ಅವರುಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಟೋದಲ್ಲಿದ್ದ ಸಂಬಂಧಿ ಮಹಿಳೆ, ಅವರ ಪುತ್ರ ಹಾಗೂ ಇನ್ನೋರ್ವರಿಗೆ ಗಾಯಗಳಾಗಿವೆ. ನಾರಾಯಣ ಗಟ್ಟಿ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಶಿರ್ಲಾಲು ನಿಡ್ಡೆಪಾದೆ ಬಳಿ ಕಾರೊಂದು ಅಪಘಾತಕ್ಕೀಡಾದ ಘಟನೆ ಸಂಭವಿಸಿದೆ. ಗದಗದಿಂದ ಧರ್ಮಸ್ಥಳದ ಕಡೆಗೆ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಕಾರಿನಲ್ಲಿ 2 ಮಹಿಳೆಯರು ಹಾಗೂ 2 ಪುರುಷರು ಪ್ರಯಾಣಿಸುತ್ತಿದ್ದರು. ಅಪಘಾತದ ಪರಿಣಾಮ ಕಾರು ಪಲ್ಟಿಯಾಗಿ ನಜ್ಜುಗುಜ್ಜಾಗಿದೆ. ಓರ್ವರಿಗೆ ಗಾಜ್ರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗಂಭೀರ ಗಾಯಗೊಂಡಿದ್ದ ಇನ್ನೋರ್ವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಉಳ್ಳಾಲ: ಇಲ್ಲಿನ ಸೋಮೇಶ್ವರದ ರುದ್ರಬಂಡೆಯಿಂದ ವಿದ್ಯಾರ್ಥಿನಿಯೋರ್ವಳು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಮಂಗಳೂರಿನ ಕಾರ್‌ಸ್ಟ್ರೀಟ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಉಳ್ಳಾಲದ ಮಾಡೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ರವಿವಾರ ಈಕೆ ಸೋಮೇಶ್ವರದ ರುದ್ರಬಂಡೆಯ ಮೇಲಿನಿಂದ ಸಮುದ್ರಕ್ಕೆ ಹಾರಿದ್ದಾಳೆ. ತಕ್ಷಣ ಅಲ್ಲಿಯೇ ಇದ್ದ ಸ್ಥಳೀಯ ವೀನುಗಾರರೋರ್ವರು ಸಮುದ್ರಕ್ಕೆ ಹಾರಿ ಆಕೆಯನ್ನ ರಕ್ಷಿಸಿದ್ದಾರೆ. ಬಳಿಕ ಟಯರ್ ಟ್ಯೂಬ್ ಮೂಲಕ ಬಂದ ಮತ್ತೋರ್ವ ಮೀನುಗಾರ ಆಕೆಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಜೇಸಿಸ್ ವಿದ್ಯಾ ಸಂಸ್ಥೆಯ ಬಸ್ ಮತ್ತು ಬೈಕ್ ನಡುವೆ ಇಂದು ಬೆಳಿಗ್ಗೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಶಾಲಾ ಬಸ್ ಬಜಗೋಳಿಯಿಂದ ಕಾರ್ಕಳಕ್ಕೆ ತೆರಳುತ್ತಿದ್ದ ಸಂದರ್ಭ ಜೋಡುಕಟ್ಟೆಯ ಬಳಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಬೈಕ್ ಸವಾರ ಅಜಿತ್ (24) ಮೃತಪಟ್ಟಿದ್ದಾನೆ. ಮಕ್ಕಳಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ.ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪುತ್ತೂರು: ಚಿಕ್ಕಮುಟ್ನೂರು ಗ್ರಾಮದ ಸಾಲ್ಮರ ಎಂಬಲ್ಲಿ ಮಾದಕದ್ರವ್ಯ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಮಹಮ್ಮದ್ ಇಬಾಶ್ (19) ಮತ್ತು ಅಹಮ್ಮದ್ ಇಝಾಜ್ (27)ಬಂಧಿತ ಆರೋಪಿಗಳು. ಪುತ್ತೂರು ನಗರ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಸಾರ್ವಜನಿಕರ ಮಾಹಿತಿ ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಲಾಯಿತು. ಈ ವೇಳೆ ಅವರು ಮಾದಕದ್ರವ್ಯ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರು: ನಗರದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಕೂಗು ಕೇಳಿ ಬಂದಿದ್ದು, ಈಗಾಗಲೇ ಮಂಗಳೂರು ಹೈಕೋರ್ಟ್ ಪೀಠ ಹೋರಾಟ ಸಮಿತಿ ಆರಂಭವಾಗಿದೆ. ಶನಿವಾರ ಈ ಹೋರಾಟ ಸಮಿತಿಯಿಂದ ಮಂಗಳೂರು ವಕೀಲರ ಸಂಘದ ಟಿವಿ ಹಾಲ್‌ನಲ್ಲಿ ಸಭೆ ನಡೆದಿದೆ. ಮಂಗಳೂರು ವಕೀಲರ ಸಂಘದ ವತಿಯಿಂದ ಎಂಎಲ್‌ಸಿ ಐವನ್ ಡಿಸೋಜ ಅವರ ಸಂಚಾಲಕತ್ವದಲ್ಲಿ ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಈಗಾಗಲೇ ಪ್ರಾರಂಭವಾಗಿದೆ. ಈ ಹೋರಾಟ ನಿರಂತರವಾಗಿ ನಡೆಯಬೇಕು, ಸರ್ಕಾರಕ್ಕೆ ಕೂಗು ಕೇಳಬೇಕೆಂಬ ಉದ್ದೇಶದಿಂದ ಈ ಸಮಿತಿಯನ್ನು ವಿಸ್ತರಿಸಿ ನಮ್ಮ ಹೋರಾಟಕ್ಕೆ ಹೆಚ್ಚಿನ ಶಕ್ತಿಯನ್ನು ತುಂಬಬೇಕೆಂಬು ಉದ್ದೇಶದಿಂದ ಇಂದು ಸಭೆ ನಡೆಯಿತು. ಈಗಾಗಲೇ ಹಲವಾರು ಹಿರಿಯ ವಕೀಲರ ನೇತೃತ್ವದಲ್ಲಿ ಸಭೆಗಳನ್ನು ಮಾಡಲಾಗಿದೆ. ಜಿಲ್ಲೆಯ ಹಲವಾರು ತಾಲೂಕು ವಕೀಲರ ಸಂಘಗಳಿಗೆ ಭೇಟಿ ನೀಡಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಆಗಬೇಕೆಂಬ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಮತ್ತು ಮೂಡುಬಿದಿರೆ ವಕೀಲರ ಸಂಘದ ಪದಾಧಿಕಾರಿಗಳು ಈ ಹೋರಾಟ ಸಮಿತಿಯೊಂದಿಗೆ ಕೈಜೋಡಿಸಿದೆ. ಗ್ರಾಮಾಂತರ ಪ್ರದೇಶಗಳಲ್ಲೂ ಕೂಡ…
ಬೆಂಗಳೂರು : ಜಿಮ್‌ನಲ್ಲಿ ಸ್ನೇಹದ ಬಲೆಗೆ ಬೀಳಿಸಿಕೊಂಡು ಸಾಫ್ಟ್‌ವೇರ್ ಉದ್ಯೋಗಿಗೆ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳಿವೆ ಎಂದು ಬೆದರಿಸಿ ಎರಡೂವರೆ ಕೋಟಿ ರುಪಾಯಿ ಸುಲಿಗೆ ಮಾಡಿದ್ದ ಅಣ್ಣ-ತಂಗಿ ಸೇರಿದಂತೆ ಮೂವರನ್ನು ಸಿಸಿಬಿ ಬಂಧಿಸಿದೆ. ಉಡುಪಿ ಜಿಲ್ಲೆಯ ತಬಸಂ ಬೇಗಂ, ಆಕೆಯ ಸೋದರ ಅಜೀಂ ಉದ್ದೀನ್ ಹಾಗೂ ಅಭಿಷೇಕ್ ಅಲಿಯಾಸ್ ಅವಿನಾಶ್ ಬಂಧಿತನಾಗಿದ್ದು, ಆರೋಪಿಗಳಿಂದ ಮೊಬೈಲ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ. ನಾಲ್ಕು ವರ್ಷಗಳ ಹಿಂದೆ ಆರ್.ಟಿ.ನಗರದಲ್ಲಿರುವ ತಬಸಂನ ಅಣ್ಣ ಅಜೀಂ ಒಡೆತನದ ಜಿಮ್‌ಗೆ ಟೆಕ್ಕಿ ತೆರಳುತ್ತಿದ್ದ. ಆ ವೇಳೆ ಫಿಟ್ನೆಸ್ ಮಾರ್ಗದರ್ಶಿಯಾಗಿದ್ದ ಆಕೆ, ಸಂತ್ರಸ್ತ ಟೆಕ್ಕಿ ಜತೆ ಸಲುಗೆ ಬೆಳೆಸಿಕೊಂಡು ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡಿದ್ದಳು. ಕೊನೆಗೆ ಬ್ಲ್ಯಾಕ್‌ಮೇಲ್ ಕಿರುಕುಳ ಸಹಿಸಲಾರದೆ ಪೊಲೀಸ್ ಆಯುಕ್ತರಿಗೆ ಸಂತ್ರಸ್ತ ನೀಡಿದ ದೂರು ಆಧರಿಸಿ ಸಿಸಿಬಿ ತನಿಖೆ ಕೈಗೆತ್ತಿಕೊಂಡಿತ್ತು. ದೂರು ದಾಖಲಾದ ಕೂಡಲೇ ನಗರ ತೊರೆದು ಉಡುಪಿ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಗು ಇದೆ ಎಂದು ಬೆದರಿಸಿ ಬ್ಲ್ಯಾಕ್‌ಮೇಲ್:…
ಮಂಗಳೂರು: ಕುಖ್ಯಾತ ರೌಡಿ ಶೀಟರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಈ ವೇಳೆ ಆತ ಪೊಲೀಸ್ ಅಧಿಕಾರಿಗಳಿಗೇ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆಂದು ತಿಳಿದು ಬಂದಿದೆ. ಉಳ್ಳಾಲದ ಧರ್ಮನಗರ ನಿವಾಸಿ ದಾವೂದ್ (43) ಬಂಧಿತ ಕುಖ್ಯಾತ ರೌಡಿಶೀಟರ್. ರೌಡಿಶೀಟರ್ ದಾವೂದ್ ಹಲವಾರು ಗಂಭೀರ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಆರೋಪಿ ಮಂಗಳೂರಿನ ತಲಪಾಡಿ-ದೇವಿಪುರ ರಸ್ತೆಯ ಬಳಿ ಪ್ರತಿಸ್ಪರ್ಧಿ ಗ್ಯಾಂಗ್ ವಿರುದ್ಧ ಅಪರಾಧ ಎಸಗಲು ಸಂಚು ರೂಪಿಸುತ್ತಿದ್ದ ಎಂದು ತಿಳಿದು ಬಂದಿತ್ತು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪಿಎಸ್ಐ ನರೇಂದ್ರ ನೇತೃತ್ವದ ತಂಡ ದಾವೂದ್‌ನನ್ನು ಬಂಧಿಸಲು ಮುಂದಾಗಿದೆ. ಕಾರ್ಯಾಚರಣೆ ವೇಳೆ ದಾವೂದ್ ಬಂಧನದಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಅಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಪಿಎಸ್ಐ ನರೇಂದ್ರ ಮತ್ತು ಇತರ ಸಿಬ್ಬಂದಿಗೆ ಗಾಯಗಳಾಗಿವೆ. ದಾಳಿಯ ನಡುವೆಯೂ ತಂಡ ಆತನನ್ನು ಸದೆಬಡಿದು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ. ದಾವೂದ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸಿಆರ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದಾವೂದ್ ಕೊಲೆ ಸೇರಿದಂತೆ ಹಲವು ಘೋರ…
ಮಂಗಳೂರು: ಮಾನಸಿಕ ಕಿರುಕುಳ ನೀಡಿ ದೈಹಿಕವಾಗಿ ಹಲ್ಲೆ ನಡೆಸಿ ಪತ್ನಿಗೆ ತ್ರಿಪಲ್ ತಲಾಖ್ ನೀಡಿದ ಆರೋಪಿ ಪತಿಯನ್ನು ಮಂಗಳೂರಿನ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಸಮ್ಮರ್ ಸ್ಯಾಂಡ್ ಹತ್ತಿರ ನಿವಾಸಿ ಮಹಮ್ಮದ್ ದಿಲ್ಫಾಜ್ ತ್ರಿವಳಿ ತಲಾಖ್ ನೀಡಿದ ಆರೋಪಿ. ಈತ ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಹೀನಾ ಫಾತಿಮಾ ಎಂಬಾಕೆಯನ್ನು 2019ರಲ್ಲಿ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮದುವೆಯ ಸಂದರ್ಭ ಹೀನಾ ಫಾತಿಮಾ ಮನೆಯವರು ಆಕೆಗೆ 22 ಪವನ್ ಚಿನ್ನ ಹಾಕಿದ್ದು, ಮೊಹಮ್ಮದ್ ದಿಲ್ಫಾಜ್‌ಗೆ ವಾಚ್ ಖರೀದಿಸಲು 50,000 ರೂ. ನೀಡಿದ್ದರು. ಮದುವೆಯಾದ ಬಳಿಕ ಮೊಹಮ್ಮದ್ ದಿಲ್ಫಾಜ್ ಪತ್ನಿಯೊಂದಿಗೆ ಸಂತೋಷದಿಂದಿದ್ದು, ಬಳಿಕ ಬೇರೆ ಅನ್ಯ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಲು ಆರಂಭಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ, ಪತ್ನಿ ವಿಚಾರಿಸಿದಾಗ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಪರಿಣಾಮ ಹೀನಾ ಫಾತಿಮಾ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬಳಿಕ ಕುಟುಂಬದ ಹಿರಿಯರು ಪಂಚಾಯಿತಿ ನಡೆಸಿ ಮೊಹಮ್ಮದ್ ದಿಲ್ಫಾಜ್‌ಗೆ ಬುದ್ಧಿ ಮಾತನ್ನು ಹೇಳಿದ್ದರು. ಆದರೂ ತನ್ನ…










