Facebook Twitter Instagram
    Saturday, April 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಉಳ್ಳಾಲ: ರಿಕ್ಷಾ ಮರಕ್ಕೆ ಢಿಕ್ಕಿ – ಓರ್ವ ಸಾವು, ಇಬ್ಬರಿಗೆ ಗಾಯ
    ಇತ್ತೀಚಿನ ಸುದ್ದಿ

    ಉಳ್ಳಾಲ: ರಿಕ್ಷಾ ಮರಕ್ಕೆ ಢಿಕ್ಕಿ – ಓರ್ವ ಸಾವು, ಇಬ್ಬರಿಗೆ ಗಾಯ

    November 25, 2024
    Share

    ಉಳ್ಳಾಲ:  ಆಟೋ ರಿಕ್ಷಾ ಒಂದು ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಕೊಣಾಜೆ ಪುಳಿಂಚಾಡಿ ಇಳಿಜಾರು ಪ್ರದೇಶದಲ್ಲಿ ಭಾನುವಾರ ಸಂಜೆ ಸಂಭವಿಸಿದೆ.

    ಆಟೋದಲ್ಲಿದ್ದ ಮತ್ತಿಬ್ಬರು ಗಂಭೀರಗಾಯಗೊಂಡಿದ್ದಾರೆ. ಕುಂಬಳೆ ಮಂಜತ್ತಡ್ಕ ನಿವಾಸಿ ನಾರಾಯಣ ಗಟ್ಟಿ (50) ಮೃತ ದುರ್ದೈವಿಯಾಗಿದ್ದಾರೆ.  ಸಂಬಂಧಿಕರೊಬ್ಬರ ಆರೋಗ್ಯ ವಿಚಾರಿಸಲೆಂದು ಕೊಣಾಜೆ ಪುಳಿಂಚಾಡಿಯ ಕಲ್ಕಾರ್ ಎಂಬಲ್ಲಿಗೆ ನಾರಾಯಣ ಗಟ್ಟಿ ಅವರು ಆಟೋ ಒಂದರಲ್ಲಿ ತೆರಳಿದ್ದರು. ಅಲ್ಲಿ ಇಳಿಜಾರು ಪ್ರದೇಶದಲ್ಲಿ ಆಟೋ ಇಳಿಯುತ್ತಿದ್ದಂತೆ ಬ್ರೇಕ್ ವೈಫಲ್ಯಕ್ಕೀಡಾಗಿ ಮರವೊಂದಕ್ಕೆ ಢಿಕ್ಕಿ ಹೊಡೆದಿದೆ. ಈ ವೇಳೆ ಗಂಭೀರ ಗಾಯಗೊಂಡ ನಾರಾಯಣ ಗಟ್ಟಿ ಅವರುಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಟೋದಲ್ಲಿದ್ದ ಸಂಬಂಧಿ ಮಹಿಳೆ, ಅವರ ಪುತ್ರ ಹಾಗೂ ಇನ್ನೋರ್ವರಿಗೆ ಗಾಯಗಳಾಗಿವೆ. ನಾರಾಯಣ ಗಟ್ಟಿ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Post Views: 171

    Related Posts

    ಭಾರತದ ನಕ್ಷೆಯಲ್ಲಿ ಮಹತ್ವದ ಬದಲಾವಣೆ: ರಾಜ್ಯ ರಾಜಧಾನಿಗೆ ಸಂಸತ್ತಿನ ಕಾನೂನು ಮಾನ್ಯತೆ

    April 24, 2026

    ಪಾತ್ರೆಯಲ್ಲಿ ಸಿಲುಕಿದ ಪುಟ್ಟ ಮಗು: ಪೊಲೀಸರ ಸಮಯೋಚಿತ ರಕ್ಷಣಾ ಕಾರ್ಯಕ್ಕೆ ಶ್ಲಾಘನೆ

    April 24, 2026

    ವಿದ್ಯುತ್ ಅವಘಡದಲ್ಲಿ ನವವಿವಾಹಿತ ಸೇರಿದಂತೆ ಇಬ್ಬರ ಸಾವು

    April 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.