Facebook Twitter Instagram
    Tuesday, October 27
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಗೋಹತ್ಯೆ ಅಪರಾಧ, ಆದರೆ ಕಾನೂನುಬದ್ಧ ಮಾಂಸ ಸಾಗಣೆ ಉಲ್ಲಂಘನೆಯಲ್ಲ- ಮಂಗಳೂರು ನಗರ ಪೊಲೀಸ್ ಕಮೀಷನರ್
    ಇತ್ತೀಚಿನ ಸುದ್ದಿ

    ಗೋಹತ್ಯೆ ಅಪರಾಧ, ಆದರೆ ಕಾನೂನುಬದ್ಧ ಮಾಂಸ ಸಾಗಣೆ ಉಲ್ಲಂಘನೆಯಲ್ಲ- ಮಂಗಳೂರು ನಗರ ಪೊಲೀಸ್ ಕಮೀಷನರ್

    October 27, 2026
    Share

    ಮಂಗಳೂರು: ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಕರಪತ್ರದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮೀಷನರ್ ಸ್ಪಷ್ಟನೆ ನೀಡಿದ್ದು, ಗೋಹತ್ಯೆ ನಿಷೇಧಿತವಾದರೂ ಕಾನೂನುಬದ್ಧ ಮಾಂಸ ಸಾಗಣೆ ಹಾಗೂ ಮಾರಾಟಕ್ಕೆ ಅವಕಾಶವಿದೆ ಎಂದು ತಿಳಿಸಿದ್ದಾರೆ.

    ಬಜರಂಗದಳ ಮಂಗಳೂರು ಮಹಾನಗರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕರಪತ್ರವೊಂದು ಹರಿದಾಡುತ್ತಿದ್ದು, “ತಲಪಾಡಿಯಿಂದ ಜೋಗಟ್ಟಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ರಮ ಗೋಸಾಗಾಟದ ವಾಹನದ ಮಾಹಿತಿಯನ್ನು ಕಂಕನಾಡಿ ಪೊಲೀಸ್ ಠಾಣೆಗೆ ನೀಡಿದರೂ
    ನಿರ್ಲಕ್ಷಿಸಲಾಯಿತು. ಯಾವುದೇ ಕೇಸು ದಾಖಲಿಸದೆ ಕಸಾಯಿಖಾನೆಗೆ ತಲುಪಲು ಬಿಡಲಾಗಿದೆ” ಎಂದು ಆರೋಪಿಸಲಾಗಿತ್ತು.

    ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಪೊಲೀಸ್ ಕಮೀಷನರ್, ಗೋಹತ್ಯೆ ಅಥವಾ ಜಾನುವಾರುಗಳ ಅಕ್ರಮ ಸಾಗಣೆಯ ಪ್ರತಿಯೊಂದು ಪ್ರಕರಣವನ್ನೂ ಸಾರ್ವಜನಿಕರು ಮಾಹಿತಿ ನೀಡಿದರೆ ತನಿಖೆ ನಡೆಸಿ ಪತ್ತೆಹಚ್ಚಲಾಗುವುದು ಎಂದು ಹೇಳಿದ್ದಾರೆ.

    ಈ ನಿರ್ದಿಷ್ಟ ಪ್ರಕರಣದಲ್ಲಿ ಕೇರಳದಿಂದ ಖರೀದಿಸಿದ ಮಾಂಸವನ್ನು ಇಲ್ಲಿನ ಪರವಾನಗಿ ಪಡೆದ ಅಂಗಡಿಗೆ ತರಲಾಗಿತ್ತು. ಕರ್ನಾಟಕದಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿದೆ ಮತ್ತು ಅದು ಅಪರಾಧವಾಗಿದೆ. ಆದರೆ, ನಿಯಮಾನುಸಾರ ಮಾಂಸದ ಮಾರಾಟ ಮತ್ತು ಸಾಗಣೆಗೆ ಕಾನೂನಿನಲ್ಲಿ ಅವಕಾಶವಿದೆ ಎಂದು ಕಮೀಷನರ್ ಸ್ಪಷ್ಟಪಡಿಸಿದ್ದಾರೆ.

    ಅಲ್ಲದೆ, ಕಾನೂನುಬದ್ಧವಾಗಿ ಅನುಮತಿಸಲಾದ ಚಟುವಟಿಕೆಗಳನ್ನು ತಡೆಯಲು ಯತ್ನಿಸುವುದು, ವಾಹನಗಳನ್ನು ಅಡ್ಡಗಟ್ಟುವುದು, ಸಂಬಂಧಪಟ್ಟವರ ಮೇಲೆ ಹಲ್ಲೆ ನಡೆಸುವುದು ಅಥವಾ ಬೆದರಿಕೆ ಹಾಕುವುದು ಕೂಡ ಅಪರಾಧವಾಗಿದ್ದು, ಇದಕ್ಕೆ 10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.

    ಬೆಳಿಗ್ಗೆ ವಾಹನವೊಂದನ್ನು ತಡೆಯಲು ಯತ್ನಿಸಲಾಗಿದೆ ಎಂಬ ದೂರು ಬಂದಿದ್ದು, ತನಿಖೆಯಲ್ಲಿ ಇದು ಸತ್ಯವೆಂದು ಕಂಡುಬಂದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಯಾರಾದರೂ ಮಾಂಸದ ಮಾರಾಟ ಅಥವಾ ಸಾಗಣೆಯನ್ನು ನಿಲ್ಲಿಸಲು ಬಯಸಿದರೆ, ಅವರು ಅದಕ್ಕಾಗಿ ಸೂಕ್ತ ಕಾನೂನು ರೂಪಿಸಿಕೊಳ್ಳಲಿ, ಆಗ ನಾವು ಅದನ್ನು ತಡೆಯುತ್ತೇವೆ ಎಂದು ಕಮಿಷನರ್ ಹೇಳಿದರು

    Post Views: 1

    Related Posts

    ಮಂಗಳೂರು: ಜಪ್ಪಿನಮೊಗರು ಬಳಿ ಬಸ್ ಡಿಕ್ಕಿ- ಗಂಭೀರ ಗಾಯಗೊಂಡಿದ್ದ ಅಪರಿಚಿತ ಯುವಕ ಸಾವು

    October 27, 2026

    ಉಡುಪಿ: ಗಾಜಿನ ಕಾರ್ಖಾನೆಯಲ್ಲಿ ಅವಘಡ – ಸಾಮಾಜಿಕ ಕಾರ್ಯಕರ್ತ ಸುನಿಲ್ ಬೈಲಕೆರೆ ಮೃತ್ಯು

    October 27, 2026

    ಬಂಟ್ವಾಳ: ಆಟವಾಡುತ್ತಿದ್ದ 9 ವರ್ಷದ ಬಾಲಕನ ಕುತ್ತಿಗೆಗೆ ಹಗ್ಗ ಸಿಲುಕಿ ಸಾವು

    October 27, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಗೋಹತ್ಯೆ ಅಪರಾಧ, ಆದರೆ ಕಾನೂನುಬದ್ಧ ಮಾಂಸ ಸಾಗಣೆ ಉಲ್ಲಂಘನೆಯಲ್ಲ- ಮಂಗಳೂರು ನಗರ ಪೊಲೀಸ್ ಕಮೀಷನರ್

    October 27, 2026

    ಮಂಗಳೂರು: ಜಪ್ಪಿನಮೊಗರು ಬಳಿ ಬಸ್ ಡಿಕ್ಕಿ- ಗಂಭೀರ ಗಾಯಗೊಂಡಿದ್ದ ಅಪರಿಚಿತ ಯುವಕ ಸಾವು

    October 27, 2026

    ಉಡುಪಿ: ಗಾಜಿನ ಕಾರ್ಖಾನೆಯಲ್ಲಿ ಅವಘಡ – ಸಾಮಾಜಿಕ ಕಾರ್ಯಕರ್ತ ಸುನಿಲ್ ಬೈಲಕೆರೆ ಮೃತ್ಯು

    October 27, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.