Author: main-admin

ಮಂಗಳೂರು: ನಗರದ ಬಂದರಿನಲ್ಲಿ ಕಾರು ಹಾಗೂ ಅಕ್ಟೀವಾ ನಡುವೆ ನಡೆದ ಅಪಘಾತದಲ್ಲಿ ಶಾಲಾ ಶಿಕ್ಷಕಿಯೋರ್ವರು ಸಾವನ್ನಪ್ಪಿದ ಘಟನೆ ನಡೆದಿದೆ. ಕಸಬಾ ಬೆಂಗ್ರೆಯ ಖಾಸಗಿ ಶಾಲೆ ಶಿಕ್ಷಕಿ ಕೆ.ಪಿ.ಶಾಹೀದಾ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಶಾಹೀದಾ ಅವರು ತನ್ನ ಮನೆಯಿಂದ ಶಾಲೆಗೆ ತೆರಳುವಾಗ ಬಂದರ್‌ನಲ್ಲಿ ಈ ಅಪಘಾತ ನಡೆದಿತ್ತು. ಅಕ್ಟೀವಾ – ಕಾರು ನಡುವೆ ನಡೆದ ಅಪಘಾತದಲ್ಲಿ ಶಿಕ್ಷಕಿ ಶಾಹೀದಾ ಮೃತಪಟ್ಟಿದ್ದಾರೆ. ಮೂಲತಃ ಪುತ್ತೂರಿನ ಪರ್ಲಡ್ಕ ಸಮೀಪದ ಕುಂಜೂರು ನಿವಾಸಿಯಾಗಿದ್ದ ಪ್ರಸ್ತುತ ಬೆಂಗ್ರೆ ನಿವಾಸಿಯಾಗಿರುವ ಬಹುಃ ಕೆ.ಪಿ.ಇಸ್ಮಾಯಿಲ್ ಉಸ್ತಾದ್ ರವರ ಮಗಳು. ಉಳ್ಳಾಲ ಪೊಲೀಸ್ ಠಾಣೆಯ ASI ಮುಹಮ್ಮದ್ ಅವರ ಪತ್ನಿಯಾಗಿರುವ ಶಾಹಿದಾ ಒಬ್ಬ ಪುತ್ರ ಮತ್ತು ಇಬ್ಬರು ಹೆಣ್ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಇವರು ಸಮಾಜ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶಾಲೆಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವುದು, ಕಲಿಕೆಯಲ್ಲಿ ತೀರಾ ಹಿಂದುಳಿದಿದ್ದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ನೀಡುವುದು, ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು, ವಿದ್ಯಾರ್ಥಿವೇತನ ದೊರಕಿಸಿಕೊಡುವುದು…

Read More

ಬೆಂಗಳೂರು: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದ್ದು, ರಾಜ್ಯಪಾಲಥಾವರ್ಚಂದ್ಗೆಹ್ಲೋಟ್ಮುಖ್ಯಮಂತ್ರಿಸಿದ್ದರಾಮಯ್ಯವಿರುದ್ಧಪ್ರಾಸಿಕ್ಯೂಷನ್ಗೆಅನುಮತಿನೀಡಿದ್ದಾರೆ. ಇಂದು ರಾಜ್ಯಪಾಲ ಥಾವರ್ಚಂದ್ಗೆಹ್ಲೋಟ್ ಮೈಸೂರುನಗರಾಭಿವೃದ್ಧಿಪ್ರಾಧಿಕಾರ – ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ . ಈ ಮೂಲಕ ಮುಡಾ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಚಾರಣೆ ನಡೆಸಿ ತನಿಖೆ ನಡೆಸಬಹುದು ಎಂದು ರಾಜ್ಯಪಾಲರು ಅನುಮತಿ ನೀಡಿದ್ದಾರೆ . ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂನೀಡಿದ್ದದೂರಿಗೆಸಂಬಂಧಿಸಿದಂತೆಸಿಎಂ ಸಿದ್ದರಾಮಯ್ಯ ವಿರುದ್ಧಪ್ರಾಸಿಕ್ಯೂಷನ್ಗೆರಾಜ್ಯಪಾಲರುಅನುಮತಿನೀಡಿದ್ದಾರೆ.

Read More

ಮಣಿಪಾಲ: ಕಾರಿನಲ್ಲೇ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಮಣಿಪಾಲದಲ್ಲಿ ಸಂಭವಿಸಿದೆ. ಚಿಕ್ಕಮಗಳೂರು ಮೂಲದ ಆನಂದ (37) ಮೃತಪಟ್ಟ ಚಾಲಕ. ಇವರು ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪಾರ್ಕಿಂಗ್‌ ಸ್ಥಳದಲ್ಲಿ ಪಾರ್ಕ್ ಮಾಡಿದ ಕಾರಿನಲ್ಲಿ ರಾತ್ರಿ‌ ಮಲಗಿಕೊಂಡಿದ್ದರು. ಕಾರಿನ ಗ್ಲಾಸನ್ನು ಮುಚ್ಚಿಕೊಂಡು ಮಲಗಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಮೂಡುಬಿದಿರೆ: ಸಾರ್ವಜನಿಕ ಶಾಂತಿ ಭಂಗ ಮತ್ತು ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಮಾಡಿದ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೊಲೀಸರು ಮೂರು ಮಂದಿಯನ್ನು ವಶಕ್ಕೆ  ಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಂಧಿತರನ್ನು ಮೂಡುಬಿದಿರೆ ಒಂಟಿಕಟ್ಟೆ ನಿವಾಸಿಗಳಾದ ಮೂಡುಬಿದಿರೆ ಮುಡಾ ಸದಸ್ಯ ಪ್ರಕಾಶ್‌, ಅಬ್ದುಲ್‌ ಸತ್ತಾರ್‌ ಮತ್ತು ವಿಜೇತ್‌ ಎಂದು ತಿಳಿದು ಬಂದಿದೆ. ಮೂಡಬಿದಿರೆ ಪೊಲೀಸ್‌ ಠಾಣೆಯ ಪಿಎಸ್‌ ಐ ಕೃಷ್ಣಪ್ಪ ಎಂಬವರು ಬಸ್‌ ನಿಲ್ದಾಣದ ಬಳಿಯ ರಸ್ತೆಯಲ್ಲಿ ವಾಹನಗಳ ಪರಿಶೀಲನೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್‌ ಧರಿಸದೇ ತ್ರಿಬಲ್‌ ರೈಡ್‌ನಲ್ಲಿ ದ್ವಿಚಕ್ರ ಚಲಾಯಿಸುತ್ತಿದ್ದ ಸವಾರರಿಗೆ ಪಿಎಸ್‌ಐ ಬೈದಿದ್ದಾರೆ ಎಂದು ಆರೋಪಿಸಿ ಮೂಡುಬಿದಿರೆ ಮುಡಾ ಸದಸ್ಯ ಪ್ರಕಾಶ್‌, ಅಬ್ದುಲ್‌ ಸತ್ತಾರ್‌ ಮತ್ತು ವಿಜೇತ್‌ ಎಂಬವರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ ಮೂವರೂ ಪಿಎಸ್‌ಐ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಮೂವರನ್ನು ಠಾಣೆಗೆ ಕರೆದುಕೊಂಡು ಹೋಗಿ ನಂತರ ಪ್ರಕಾಶ್ ಮತ್ತು ವಿಜೇತ್‌ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಆಗ ಅವರು…

Read More

ಮಂಗಳೂರು : ಕೆತ್ತಿಕಲ್ಲು ಭೂಕುಸಿತ ಪ್ರದೇಶದಲ್ಲಿ ಅನಧಿಕೃತವಾಗಿ ಮಣ್ಣು ತೆಗೆದಿರುವ ಭೂಮಾಲಕರು ಮತ್ತು ಎನ್‌ಎಚ್‌ಐನವರು ಅನುಮತಿಸಿದ ಡಿಬಿಎಲ್ ಕಂಪೆನಿಯವರ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಹಾಗೂ ಎಂಎಂಡಿಆರ್ ಕಾಯಿದೆ-1957ರಡಿ ಪ್ರಕರಣ ದಾಖಲಿಸಲಾಗಿದೆ. ಸುರಕ್ಷತೆಗೆ ಅಪಾಯವಿರುವುದರಿಂದ ವೆಟ್‌ವೆಲ್‌ನ ಮನಪಾದಿಂದಲೂ ಕ್ರಿಮಿನಲ್ ಕ್ರಮಕ್ಕಾಗಿ ಪೊಲೀಸ್ ತನಿಖೆಯನ್ನು ನಡೆಸಲು ಪ್ರಕರಣ ದಾಖಲಿಸಲಾಗಿದೆ. ಮಂಗಳೂರು ಸೆಂಟ್ರಲ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರನ್ನು ತನಿಖಾಧಿಕಾರಿಯನ್ನಾಗಿ ಪೊಲೀಸ್ ಆಯುಕ್ತರು ನೇಮಿಸಿದ್ದಾರೆ. ಜಿಯೋಲಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ಸಲಹೆಯಂತೆ, ಘಟನಾ ಸ್ಥಳದಲ್ಲಿ ನೀರಿನ ಸಂಗ್ರಹ ಆಗದಂತೆ, ಚರಂಡಿ ಮಾಡಿ ಕಾಂಕ್ರೀಟ್ ಬಾಕ್ಸ್ ಬಳಸಿ, ನೀರು ಮಣ್ಣಿನ ಒಳಗೆ ನುಗ್ಗದೆ, ಹರಿದು ಹೋಗುವ ರೀತಿಯಲ್ಲಿ ಈಗಾಗಲೆ ವ್ಯವಸ್ಥೆ ಮಾಡಲಾಗಿದೆ. 2018 ರಿಂದ 2022 ರ ಅವಧಿಯಲ್ಲಿ ಗರಿಷ್ಠ ಮಣ್ಣು ಅಗೆಯುವಿಕೆ ನಡೆದಿರುವುದಾಗಿ ಎನ್ ಎಚ್ ಎಐ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಹಾಗೂ ಜಿ ಎಸ್ ಐ ಉಪಗ್ರಹದ ಛಾಯಚಿತ್ರಗಳ ಮೂಲಕ…

Read More

ಕನ್ನಡ ಚಿತ್ರರಂಗದ ದಶಕಗಳ ರಾಷ್ಟ್ರಪ್ರಶಸ್ತಿ ಬರವನ್ನು ನಟ ರಿಷಬ್ ಶೆಟ್ಟಿ ನೀಗಿಸಿದ್ದಾರೆ. ರಿಷಬ್ ಶೆಟ್ಟಿ ಅವರ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪ್ರಾಪ್ತಿಯಾಗಿದೆ. ‘ಕಾಂತಾರ’ ಸಿನಿಮಾದ ಅತ್ಯುತ್ತಮ ನಟನೆಯನ್ನು ಪರಿಗಣಿಸಿ ಅವರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕನ್ನಡ ಸಿನಿಮಾ ನಟರೊಬ್ಬರಿಗೆ ರಾಷ್ಟ್ರಪ್ರಶಸ್ತಿ ದೊರೆತು ದಶಕಗಳೇ ಆಗಿಬಿಟ್ಟಿದ್ದವು. ಆ ಬರವನ್ನು ಈಗ ನೀಗಿದ್ದು, ನಟ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರೆತಿದೆ. ‘ಕಾಂತಾರ’ ಸಿನಿಮಾದ ಅತ್ಯುತ್ತಮ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ದೊರೆತಿದೆ. ಈ ವರ್ಷ ರಿಷಬ್ ಶೆಟ್ಟಿಗೆ ಮಲಯಾಳಂ ನಟ ಮಮ್ಮುಟಿ, ಹಿಂದಿಯ ವಿಕ್ರಾಂತ್ ಮೆಸ್ಸಿ ಇನ್ನೂ ಹಲವು ನಟರಿಂದ ಸ್ಪರ್ಧೆ ಇತ್ತು. ಆದರೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಒಲಿದಿದೆ. ದಶಕಗಳ ಹಿಂದೆ ನಟ ಕಮಲ್ ಹಾಸನ್ ಸಹೋದರ ಚಾರುಹಾಸನ್ ಅವರಿಗೆ ಕನ್ನಡದ ‘ತಬರನ ಕತೆ’ ಸಿನಿಮಾದ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ದೊರೆತಿತ್ತು. ಅದಾದ ಬಳಿಕ ‘ನಾನು ಅವನಲ್ಲ ಅವಳು’ ಸಿನಿಮಾದ ಅತ್ಯುತ್ತಮ ನಟನೆಗೆ ಸಂಚಾರಿ ವಿಜಯ್ ಅವರಿಗೆ ಅತ್ಯುತ್ತಮ ನಟ…

Read More

ಬಂಟ್ವಾಳ: ಕಟ್ಟಡವೊಂದರ ತಳಭಾಗದಲ್ಲಿ ಅಕ್ರಮವಾಗಿ ಮಟ್ಕಾ ಚೀಟಿ ವ್ಯವಹಾರ ನಡೆಸುತ್ತಿದ್ದ ವೇಳೆ ಬಂಟ್ವಾಳ ಉಪ-ವಿಭಾಗ ಬಂಟ್ವಾಳರವರು ಹಾಗೂ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದು ಕೃತ್ಯದಲ್ಲಿ ತೊಡಗಿಸಿದ್ದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದಲ್ಲಿ ನಡೆದಿದೆ. ಆರೋಪಿಗಳನ್ನು ಪಾವೂರು ಪೊಸ್ಟ್, ಮಂಜೇಶ್ವರ ,ಕೇರಳ ಸಜೀತ್ .ಕೆ (38), ಉಚ್ಚೀಲ್, ಕಾಪಿತಾನಿಯೋ ಶಾಲೆ , ಮಂಗಳೂರು, ವೀಶಾಲ್ ಸಿ.ಉಚ್ಚಿಲ್ (35), ಮಹಾಲಿಂಗೆಶ್ವರ ಬಳಿ ಬಡ್ಡಹಿತ್ತಲು, ಮಂಜೇಶ್ವರ, ಕೇರಳ ಸುನೀಲ್ ಕುಮಾರ್ (39) ಎಂದು ಗುರುತಿಸಲಾಗಿದೆ. ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪದ್ಮಕಾಂಪ್ಲೆಕ್ಸ್ ಕಟ್ಟಡದ ತಳಭಾಗದಲ್ಲಿ ಮಧ್ಯಾಹ್ನದ ವೇಳೆ ಅಕ್ರಮವಾಗಿ ಮಟ್ಕಾ ಚೀಟಿ ವ್ಯವಹಾರ ನಡೆಸುತ್ತಿದ್ದ ವೇಳೆ ವಿಜಯ್ ಪ್ರಸಾದ್ DYSP ಬಂಟ್ವಾಳ ಉಪ-ವಿಭಾಗ ಬಂಟ್ವಾಳರವರು ಹಾಗೂ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಕೃತ್ಯದಲ್ಲಿ ತೊಡಗಿಸಿದ್ದ ಮೂವರನ್ನು ವಶಕ್ಕೆ ಪಡೆದಿದ್ದು, ಕೃತ್ಯಕ್ಕೆ ಬಳಸಿದ ವಿವಿಧ ಮುಖ ಬೆಲೆಯ ನೋಟುಗಳನ್ನು, ಕ್ಯಾಲ್ಕುಲೇಟರ್, ಪೆನ್ನುಗಳು, ಪುಸ್ತಕಗಳು, ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ…

Read More

ಬಂಟ್ವಾಳ: ಕೊಡಗು ಮೂಲದ ವ್ಯಕ್ತಿಯೊಬ್ಬರು ಬಿ.ಸಿ. ರೋಡಿನಿಂದ ನರಿಕೊಂಬುವಿಗೆ ಹೋಗಲು ವಾಹನಕ್ಕೆ ಕಾಯುತ್ತಿದ್ದ ಸಂದರ್ಭ ಕಾರಿನಲ್ಲಿ ಬಂದ ತಂಡವೊಂದು ಡ್ರಾಪ್‌ ಕೊಡುವ ನೆಪದಲ್ಲಿ ಹಲ್ಲೆ ನಡೆಸಿ ನಗದು ಹಾಗೂ ಚಿನ್ನದ ಸರ ದರೋಡೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊಡಗಿನ ವೀರಾಜಪೇಟೆ ನಿವಾಸಿ ಎಂ. ಗಂಗಾಧರ ಅವರು ದರೋಡೆಗೊಳಗಾದವರು. ಅವರು ಆ. 9ರಂದು ವಿರಾಜಪೇಟೆಯಿಂದ ಬಿ.ಸಿ. ರೋಡಿಗೆ ಬಂದು ನರಿಕೊಂಬುನಲ್ಲಿರುವ ಅಣ್ಣನ ಮನೆಗೆ ತೆರಳುವುದಕ್ಕೆ ರಾತ್ರಿ ಯಾವುದಾದರೂ ವಾಹನ ಸಿಗುತ್ತದೆಯೋ ಎಂದು ಕಾಯುತ್ತಿದ್ದರು. ಈ ವೇಳೆ ಬಿಳಿ ಬಣ್ಣದ ಕಾರೊಂದು ಅವರ ಬಳಿ ಬಂದು ನಿಂತಿದ್ದು, ಅದರಲ್ಲಿದ್ದ ಅಪರಿಚಿತರು ತಾವು ಪಾಣೆಮಂಗಳೂರು ಕಡೆಗೆ ತೆರಳುತ್ತಿದ್ದು ಅಲ್ಲಿವರೆಗೆ ಬರುವಂತೆ ತಿಳಿಸಿದ್ದಾರೆ. ಹಾಗಾಗಿ ಅವರು ಹಿಂದಿನ ಸೀಟಿನಲ್ಲಿ ಕುಳಿತಿದ್ದಾರೆ. ಕಾರು ಸ್ವಲ್ಪ ಮುಂದೆ ಚಲಿಸಿದಾಗ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಅಪರಿಚಿತರು ಗಂಗಾಧರ್‌ ಮೇಲೆ ಹಲ್ಲೆ ನಡೆಸಿ ಅವರ ಬಳಿಯಿದ್ದ 80,000 ರೂ. ಮೌಲ್ಯದ ಚಿನ್ನದ ಸರ ಹಾಗೂ 2 ಸಾವಿರ ರೂ.…

Read More

ಕಾಸರಗೋಡು: ರಾಷ್ಟ್ರ ಧ್ವಜವನ್ನು ಸಂಜೆ ಕೆಳಗಿಳಿಸುವಾಗ ವಿದ್ಯುತ್‌ ಶಾಕ್‌ನಿಂದ ಇಗರ್ಜಿಯ ಫಾದರ್‌ ಒಬ್ಬರು ಸಾವಿಗೀಡಾಗಿದ್ದಾರೆ. ಪಕ್ಕದಲ್ಲೇ ಇದ್ದ ಮತ್ತೋರ್ವರಿಗೆ ಗಾಯ ವಾಗಿದ್ದು, ಆಸ್ಪತ್ರೆಗೆ ದಾಖಲಿಸಸಲಾಗಿದೆ ಎಂದು ತಿಳಿದು ಬಂದಿದೆ. ಮೃತಪಟ್ಟವರು ಮುಳ್ಳೇರಿಯ ಇನ್‌ಫೆಂಟ್‌ ಸೈಂಟ್‌ ಜೀಸಸ್‌ ಇಗರ್ಜಿಯ ಫಾದರ್‌ ಶಿನ್ಸ್‌ (30) ಎಂದು ತಿಳಿಯಲಾಗಿದೆ. ಆ. 15ರಂದು ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಆರೋಹಣ ಮಾಡಿದ್ದ ರಾಷ್ಟ್ರ ಧ್ವಜವನ್ನು ಸಂಜೆ ಆರು ಗಂಟೆಗೆ ಕೆಳಗಿಳಿಸುವಾಗ ಘಟನೆ ನಡೆದಿದೆ. ಗುರುವಾರ ಸಂಜೆ 6 ಗಂಟೆಗೆ ಮುಳ್ಳೇರಿಯದ ಇಗರ್ಜಿಗೆ ತಲುಪಿ ರಾಷ್ಟ್ರ ಧ್ವಜವನ್ನು ಕೆಳಗಿಳಿಸುತ್ತಿದ್ದಾಗ ರಾಷ್ಟ್ರ ಧ್ವಜಾರೋಹಣಗೈದ ಕಬ್ಬಿಣದ ದಂಡಕ್ಕೆ ಸಿಲುಕಿಕೊಂಡ ಧ್ವಜವನ್ನು ತೆಗೆಯಲು ಕಂಬವನ್ನು ಮೇಲಕ್ಕೆತ್ತಿದ್ದಾಗ ಹೈಟೆನ್ಶನ್‌ ತಂತಿಗೆ ಸ್ಪರ್ಶಿಸಿ ವಿದ್ಯುತ್‌ ಶಾಕ್‌ ಆಯಿತು. ಮತ್ತೋರ್ವ ಫಾದರ್‌ ಸೈಬಿನ್‌ ಜೋಸೆಫ್‌ ಅವರಿಗೂ ವಿದ್ಯುತ್‌ ಶಾಕ್‌ ತಗಲಿದೆ. ಇಬ್ಬರನ್ನು ಆಸ್ಪತ್ರೆಗೆ ಸಾಗಿಸಿದರೂ, ಫಾದರ್‌ ಶಿನ್ಸ್‌ ಸಾವಿಗೀಡಾದರು ಎಂದು ಎನ್ನಲಾಗಿದೆ.

Read More

ಬೆಂಗಳೂರು : ಇಂದು ದೇಶಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಿಎಂ ಪದಕ ನೀಡಲಾಗುತ್ತದೆ. ಅದರಂತೆ ರಾಜ್ಯದ 126 ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ 2023 ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡಲಾಗಿದ್ದು, ಆದರೆ ಇದರಲ್ಲಿ ಅಮಾನತುಗೊಂಡ ಹೆಡ್ ಕಾನ್ಸ್ಟೆಬಲ್‌ಗೆ ಸಿಎಂ ಪದಕ ವಿತರಣೆ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಹೌದು ಇದರಲ್ಲಿ ಅಮಾನತುಗೊಂಡಿರುವ ಮೈಸೂರು ಸಿಸಿಬಿ ಘಟಕದ ಹೆಡ್ ಕಾನ್ಸಟೇಬಲ್ ಸಲೀಂ ಪಾಷಾಗೆ ಸಿಎಂ ಪದಕ ನೀಡಿದ್ದು, ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಕಳುವು ಹಾಗೂ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಂಬಂಧಿಕರ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಆರೋಪ ಸಾಭೀತಾದ ಹಿನ್ನೆಲೆ ಕಳೆದ ತಿಂಗಳಷ್ಟೇ ಹೆಡ್​​ ಕಾನ್ಸ್​ಟೇಬಲ್ ಸಲೀಂ ಪಾಷಾ ಎಂಬುವವರನ್ನು ಅಮಾನತುಗೊಳಿಸಲಾಗಿತ್ತು. ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳುವು ಹಾಗೂ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಂಬಂಧಿಕರ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಆರೋಪ ಕೇಳಿಬಂದಿತ್ತು.…

Read More