Facebook Twitter Instagram
    Saturday, September 12
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮೂಡುಬಿದಿರೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಮೂವರು ವಶಕ್ಕೆ..!
    ಇತ್ತೀಚಿನ ಸುದ್ದಿ

    ಮೂಡುಬಿದಿರೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಮೂವರು ವಶಕ್ಕೆ..!

    August 17, 2024
    Share

    ಮೂಡುಬಿದಿರೆ: ಸಾರ್ವಜನಿಕ ಶಾಂತಿ ಭಂಗ ಮತ್ತು ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಮಾಡಿದ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೊಲೀಸರು ಮೂರು ಮಂದಿಯನ್ನು ವಶಕ್ಕೆ  ಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಬಂಧಿತರನ್ನು ಮೂಡುಬಿದಿರೆ ಒಂಟಿಕಟ್ಟೆ ನಿವಾಸಿಗಳಾದ ಮೂಡುಬಿದಿರೆ ಮುಡಾ ಸದಸ್ಯ ಪ್ರಕಾಶ್‌, ಅಬ್ದುಲ್‌ ಸತ್ತಾರ್‌ ಮತ್ತು ವಿಜೇತ್‌ ಎಂದು ತಿಳಿದು ಬಂದಿದೆ. ಮೂಡಬಿದಿರೆ ಪೊಲೀಸ್‌ ಠಾಣೆಯ ಪಿಎಸ್‌ ಐ ಕೃಷ್ಣಪ್ಪ ಎಂಬವರು ಬಸ್‌ ನಿಲ್ದಾಣದ ಬಳಿಯ ರಸ್ತೆಯಲ್ಲಿ ವಾಹನಗಳ  ಪರಿಶೀಲನೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್‌ ಧರಿಸದೇ ತ್ರಿಬಲ್‌ ರೈಡ್‌ನಲ್ಲಿ ದ್ವಿಚಕ್ರ ಚಲಾಯಿಸುತ್ತಿದ್ದ ಸವಾರರಿಗೆ ಪಿಎಸ್‌ಐ ಬೈದಿದ್ದಾರೆ ಎಂದು ಆರೋಪಿಸಿ  ಮೂಡುಬಿದಿರೆ ಮುಡಾ ಸದಸ್ಯ ಪ್ರಕಾಶ್‌, ಅಬ್ದುಲ್‌ ಸತ್ತಾರ್‌ ಮತ್ತು ವಿಜೇತ್‌ ಎಂಬವರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ ಮೂವರೂ ಪಿಎಸ್‌ಐ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು.  ಸ್ಥಳಕ್ಕೆ ಆಗಮಿಸಿದ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಮೂವರನ್ನು ಠಾಣೆಗೆ ಕರೆದುಕೊಂಡು ಹೋಗಿ ನಂತರ ಪ್ರಕಾಶ್ ಮತ್ತು ವಿಜೇತ್‌ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಆಗ ಅವರು ಅಮಲು ಪದಾರ್ಥ ಸೇವಿಸಿರುವುದು ಸಾಬೀತಾಗಿ ಡ್ರಿಂಕ್ & ಡ್ರೈವ್ ಕೇಸು ದಾಖಲಾಗಿದೆ. ಪ್ರಕಾಶ್ ಕೋಟ್ಯಾನ್ ಮೂಡಾ ಸದಸ್ಯನಾಗಿದ್ದರೆ, ಸತ್ತಾರ್ ಕಾಂಗ್ರೆಸ್ ಕಾರ್ಯಕರ್ತ ಹಾಗೂ ವಿಜೇತ್ ಬಿಜೆಪಿ ಕಾರ್ಯಕರ್ತನಾಗಿದ್ದಾನೆ.

    ಈ ಮಧ್ಯೆ‌ ಪೊಲೀಸ್‌ ಅಧಿಕಾರಿಯನ್ನು ಬೈದಾಡಿಕೊಳ್ಳುತ್ತಿದ್ದ ವೀಡಿಯೋ ಮಾಡಿಕೊಂಡಿದ್ದ ಆರೋಪಿಗಳು, ತಮ್ಮ ತಪ್ಪನ್ನು ಮುಚ್ಚಿಡುವ ಸಲುವಾಗಿ ವೀಡಿಯೊವನ್ನು ನಾಗರೀಕರು ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, “ಮೂಡುಬಿದಿರೆಯ ಪೋಲಿಸ್ ಅಧಿಕಾರಿಯ ಲಂಚ ಸ್ವೀಕಾರಕ್ಕೆ ಬೇಸತ್ತ ಸಾರ್ವಜನಿಕರು” ಎಂಬ ತಲೆ ಬರಹ ನೀಡಿ ಪೊಲೀಸ್‌ ಅಧಿಕಾರಿಯ ಗೌರವಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದೂ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಆರೋಪಿಗಳಿಗೆ ತಲಾ 1 ಲಕ್ಷ ರೂ.‌ ಮೊತ್ತದ ಬಾಂಡ್ ಪಡೆದುಕೊಂಡು ಬಿಡುಗಡೆ ಮಾಡಲಾಗಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    Post Views: 205

    Related Posts

    ಬೆಳ್ತಂಗಡಿ: ಬಾವಿಗೆ ಹಾರಿ ಯುವತಿ ಆತ್ಮಹತ್ಯೆ..!!

    September 11, 2026

    ಉಪ್ಪಿನಂಗಡಿ: ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ವಾರಂಟ್‌ ಆರೋಪಿ ಅರೆಸ್ಟ್

    September 11, 2026

    ಮುಲ್ಕಿ: ಕೊರ್ದಬ್ಬು ದೈವಸ್ಥಾನ ಕಳವು ಪ್ರಕರಣ,₹17.20 ಲಕ್ಷ ಮೌಲ್ಯದ ವಸ್ತು ಜಪ್ತಿ

    September 11, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಬೆಳ್ತಂಗಡಿ: ಬಾವಿಗೆ ಹಾರಿ ಯುವತಿ ಆತ್ಮಹತ್ಯೆ..!!

    September 11, 2026

    ಉಪ್ಪಿನಂಗಡಿ: ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ವಾರಂಟ್‌ ಆರೋಪಿ ಅರೆಸ್ಟ್

    September 11, 2026

    ಮುಲ್ಕಿ: ಕೊರ್ದಬ್ಬು ದೈವಸ್ಥಾನ ಕಳವು ಪ್ರಕರಣ,₹17.20 ಲಕ್ಷ ಮೌಲ್ಯದ ವಸ್ತು ಜಪ್ತಿ

    September 11, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.