Author: main-admin

ಲಕ್ನೋ: 9 ತಿಂಗಳ ಮಗುವಿನ ಮೇಲೆ 12 ವರ್ಷದ ಬಾಲಕ ಅತ್ಯಾಚಾರ ಎಸಗಿದ್ದು, ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಈ ಘಟನೆ ಗೋರಖ್‌ಪುರ ಜಿಲ್ಲೆಯ ಗುಲರಿಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಯಿಯ ಪಕ್ಕದಲ್ಲಿ ಮಲಗಿದ್ದ 9 ತಿಂಗಳ ಮಗು ಶುಕ್ರವಾರ ತಡರಾತ್ರಿ ಕಾಣೆಯಾಗಿತ್ತು. ಬಳಿಕ ಮಗು ಕಾಣೆಯಾಗಿರುವುದನ್ನು ಗಮನಿಸಿದ ಕುಟುಂಬದವರು ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಡಿದ್ದಾರೆ.ಶನಿವಾರ ಬೆಳಗ್ಗೆ ಮನೆಯ ಸಮೀಪದ ಜಮೀನೊಂದರಲ್ಲಿ ಮಗು ಪತ್ತೆಯಾಗಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯ ಬಳಿಕ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕುಟುಂಬ ಸದಸ್ಯರು ಹಾಗೂ ಸಂಬಂಧಿಕರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಂಬಂಧಿಯಾಗಿದ್ದ 12 ವರ್ಷದ ಬಾಲಕನ ಮೇಲೆ ಅನುಮಾನ ವ್ಯಕ್ತವಾಗಿತ್ತು. ಮೂರು ದಿನಗಳ ಹಿಂದೆ ಚಂಡೀಗಢದಿಂದ ಗ್ರಾಮಕ್ಕೆ ಬಂದಿದ್ದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ಬಾಲಕ ಅತ್ಯಾಚಾರ ಎಸಗಿರುವುದಾಗಿ…

Read More

ಬೆಂಗಳೂರು: ಕೇರಳ ಮೂಲದ ಉದ್ಯಮಿಯನ್ನು ಬೆದರಿಸಿ ಬರೋಬ್ಬರಿ 20 ಲಕ್ಷ ರೂ ದರೋಡೆ ಮಾಡಿದ ಸಿಐಡಿ ಪೊಲೀಸ್ ಇನ್‌ಸ್ಪೆಕ್ಟರ್ ಮಹೇಶ್ ಕನಕಗಿರಿಯನ್ನು ಸದ್ಯ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಆರೋಪಿ ಮಹೇಶ್ ಕನಕಗಿರಿಯ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್​ ಜಾಗ ಒತ್ತುವರಿ ಮಾಡಲು ಭೂಗಳ್ಳರಿಗೆ ಸಾಥ್​​ ನೀಡಿದ್ದಾರೆ. ಅಷ್ಟೇ ಅಲ್ಲದೆ ವಿಧಾನ ಪರಿಷತ್ ಸುಳ್ಳು ಮಾಹಿತಿ ನೀಡಿದ್ದರು.ಮುಖ್ಯಾಂಶಗಳುಇಂಡಿಯನ್ ಆಯಿಲ್ ಜಾಗ ಒತ್ತುವರಿಯಲ್ಲಿ ಇನ್ಸ್‌ಪೆಕ್ಟರ್ ಕನಕಗಿರಿ ಕೈವಾಡವಿಧಾನ ಪರಿಷತ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದ ಆರೋಪಿಭೂಗಳ್ಳರಿಗೆ ಸಾಥ್​ ನೀಡಿದ ಮಹೇಶ್ ಕನಕಗಿರಿಭೂಗಳ್ಳರಿಗೆ ಸಾಥ್ಮಾಜಿ‌ ಕಾರ್ಪೊರೇಟರ್ ಮೋಹನ್ ರಾಜ್ ಮತ್ತಿತರಿಗೆ ಮಹೇಶ್ ಕನಕಗಿರಿ ಸಾಥ್​ ನೀಡಿದ್ದರು. ಇಂಡಿಯನ್ ಆಯಿಲ್ ಕಾರ್ಪೊರೇಷನ್​​ 1 ಕೋಟಿ 53 ಲಕ್ಷ ರೂ ಹಣ ನೀಡಿ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಬಿಡಿಎಯಿಂದ ಸಿಎ ನಿವೇಶನ ಖರೀದಿಸಿದ್ದರು. ಆದರೆ ರಿಸರ್ವ್ ಪೊಲೀಸ್ ಭದ್ರತೆಯಲ್ಲಿ ಜಾಗಕ್ಕೆ ಭೇಟಿ ನೀಡಿದ್ದ ಮಹೇಶ್ ಕನಕಗಿರಿ ಪೆಟ್ರೋಲ್ ಪಂಪ್ ಅಳವಡಿಸಿದ್ದರೂ ಡ್ಯಾಮೇಜ್ ಮಾಡಿ ಬೆದರಿಕೆ ಹಾಕಿದ್ದರು.ಇನ್ನು ಮಹೇಶ್…

Read More

ಉಪ್ಪಿನಂಗಡಿ: ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಐಷಾರಾಮಿ ಈಚರ್ ಲಾರಿಯೊಂದರಲ್ಲಿ ಅತ್ಯಂತ ಅಮಾನವೀಯವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಭಾರಿ ಅಕ್ರಮ ಜಾಲವನ್ನು ಭೇದಿಸಿರುವ ಉಪ್ಪಿನಂಗಡಿ ಪೊಲೀಸರು, 16 ಜಾನುವಾರುಗಳನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿ ಪರ್ದಿನ್ ಖಾನ್ (24) ಮತ್ತು ಹಾಸನ ಜಿಲ್ಲೆಯ ಹೊಳೆನರಸಿಪುರ ನಿವಾಸಿ ಜಾವೀದ್ ಪಾಷಾ (34) ಎಂದು ಗುರುತಿಸಲಾಗಿದೆ.ಜೂನ್ 17ರಂದು ಮುಂಜಾನೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ (PSI) ಸುತೇಶ್‌ ಕೆ.ಪಿ. ಅವರು ತಮ್ಮ ಸಿಬ್ಬಂದಿಯೊಂದಿಗೆ ಉಪ್ಪಿನಂಗಡಿಯ ಆನೆಬೈಲು ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಆ ಮಾರ್ಗವಾಗಿ ಬಂದ ಈಚರ್ ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ, ಲಾರಿಯೊಳಗೆ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಜಾನುವಾರುಗಳನ್ನು ಕೂಡಿ ಹಾಕಿರುವುದು ಪತ್ತೆಯಾಗಿದೆ.ಲಾರಿಯಲ್ಲಿದ್ದ ಚಾಲಕ ಪರ್ದಿನ್ ಖಾನ್ ಹಾಗೂ ಮತ್ತೋರ್ವ ಆರೋಪಿ ಜಾವೀದ್ ಪಾಷಾ ಅವರನ್ನು ವಶಕ್ಕೆ ಪಡೆದು ಜಾನುವಾರು ಸಾಗಾಟದ ಪರವಾನಗಿ ಮತ್ತು ದಾಖಲಾತಿಗಳ ಬಗ್ಗೆ…

Read More

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಡೀಪ್‌ಫೇಕ್ ಫೋಟೋಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಸೈಬರ್ ಕಮಾಂಡ್ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆಯಲ್ಲಿ ಆರೋಪಿಗಳ ಹಿನ್ನೆಲೆ ಬಹಿರಂಗವಾಗಿದ್ದು, ಬಂಧಿತರೆಲ್ಲರೂ ಸುಶಿಕ್ಷಿತರು ಮತ್ತು ಉತ್ತಮ ಉದ್ಯೋಗದಲ್ಲಿದ್ದವರು ಎಂಬುದು ಬೆಳಕಿಗೆ ಬಂದಿದೆ.ಬಂಧಿತರನ್ನು ಬಾಗಲಕೋಟೆ ಜಿಲ್ಲೆಯ ರವಿಕುಮಾರ್ (24), ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ರಂಜಿತ್ ಕುಮಾರ್ (25) ಹಾಗೂ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾಗಿರುವ ಚಂದ್ರಕಾಂತ್ (33) ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಮೊದಲ ಆರೋಪಿ ರವಿಕುಮಾರ್ ಬಿಎಸ್‌ಸಿ ನರ್ಸಿಂಗ್ ಪದವಿ ಪಡೆದಿದ್ದು, ತನ್ನದೇ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ. ಯೂಟ್ಯೂಬ್ ಮೂಲಕ ಆದಾಯ ಗಳಿಸಲು ಆರಂಭಿಸಿದ್ದ ಆತ ಹೆಚ್ಚು ವೀಕ್ಷಣೆ ಪಡೆಯುವ ಉದ್ದೇಶದಿಂದ ನಟಿಯರ ಡೀಪ್‌ಫೇಕ್ ವಿಡಿಯೋಗಳನ್ನು ಸೃಷ್ಟಿಸಿ ಅಪ್‌ಲೋಡ್ ಮಾಡಲು ಆರಂಭಿಸಿದ್ದಾನೆ ಎನ್ನಲಾಗಿದೆ. ಎರಡನೇ ಆರೋಪಿ ರಂಜಿತ್ ಕುಮಾರ್ ಖಾಸಗಿ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ…

Read More

ಬೆಂಗಳೂರು: ಸ್ಯಾಂಡಲ್‌ವುಡ್ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಕರಾವಳಿ ಪ್ರವಾಸೋದ್ಯಮದ ರಾಯಭಾರಿಯನ್ನಾಗಿ (ಬ್ರಾಂಡ್ ಅಂಬಾಸಿಡರ್) ನೇಮಕ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಇದರ ಬೆನ್ನಲ್ಲೇ ಕರಾವಳಿಯ ಪ್ರಗತಿಪರ ವಲಯ ಮತ್ತು ರಾಜಕೀಯ ಪಕ್ಷಗಳ ನಡುವೆ ಪರ-ವಿರೋಧದ ತೀವ್ರ ಚರ್ಚೆಗಳು ಆರಂಭವಾಗಿವೆ.ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮುಖ್ಯಮಂತ್ರಿ ಹಾಗೂ ಪ್ರವಾಸೋದ್ಯಮ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಕರಾವಳಿ ಪ್ರವಾಸೋದ್ಯಮದ ಉನ್ನತ ಮಟ್ಟದ ಸಭೆಯಲ್ಲಿ ಸಚಿವರು ಮತ್ತು ಅಧಿಕಾರಿಗಳ ಜೊತೆಗೆ ನಟ ರಿಷಬ್ ಶೆಟ್ಟಿ ಕೂಡ ಭಾಗವಹಿಸಿದ್ದರು. ಕರಾವಳಿ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದು, ಚಿತ್ರೀಕರಣಕ್ಕೆ ಹೆಚ್ಚಿನ ಸೌಲಭ್ಯ ನೀಡುವುದು ಹಾಗೂ ಉದ್ಯೋಗ ಸೃಷ್ಟಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ರಿಷಬ್ ಶೆಟ್ಟಿ ಅವರನ್ನು ರಾಯಭಾರಿಯನ್ನಾಗಿ ಮಾಡುವ ಸರ್ಕಾರದ ತೀರ್ಮಾನಕ್ಕೆ ಕರಾವಳಿ ಭಾಗದ ಪ್ರಗತಿಪರರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಿಷಬ್ ಶೆಟ್ಟಿ ಅವರು ಬಲಪಂಥೀಯ ಒಲವು ಹೊಂದಿರುವ ನಟರಾಗಿದ್ದು, ಅವರಿಗೆ ಈ ಜವಾಬ್ದಾರಿ ನೀಡುವುದು ಸರಿಯಲ್ಲ ಎಂದು…

Read More

ಸ್ನೇಹಾಲಯ ಚ್ಯಾರಿಟೇಬಲ್ ಸಂಸ್ಥೆಯು 2009 ರಿಂದ ಮಾನಸಿಕ ಅಸ್ವಸ್ಥರ ರಕ್ಷಣೆ, ಶೂಶ್ರುಷೆ, ಔಷೋದೊಪಚಾರ ಆರೋಗ್ಯ, ಪುನರ್ವಸತಿ ಒದಗಿಸುವ ನಿರಂತರ ಸೇವೆ ನೀಡುತ್ತಾ 17 ವರುಷಗಳಲ್ಲಿ 1750ಕ್ಕೂ ಮಿಗಿಲಾಗಿ ರಕ್ಷಿಸಲ್ಪಟ್ಟ ನಿವಾಸಿಗಳನ್ನು ಗುಣಪಡಿಸಿ ಅವರಿಗೆ ತಮ್ಮ ಕುಟುಂಬಗಳಲ್ಲಿ ಪುನರ್ಮಿಲನಗೊಳಿಸಿ, ಪುನರ್ವಸತಿ ಕಲ್ಪಿಸಿ, ಜನಮೆಚ್ಚುಗೆ ಪಡೆದ ಮಂಗಳೂರು- ಕಾಸರಕೋಡು ಜಿಲ್ಲೆಗಳ ಪರಿಸರದಲ್ಲಿ ಜನಪ್ರಿಯ ಸಂಸ್ಥೆಯಾಗಿದೆಈ ಸಂಸ್ಥೆಯು ಹತ್ತು ಹಲವು ಯೋಜನೆಗಳ ಅನುಷ್ಠಾನ, ಪ್ರಸ್ತುತ ದಾಖಲಿರುವ 375 ನಿವಾಸಿಗಳ ಅಗತ್ಯತೆಗಳು, ಮನೋರೋಗ ಚಿಕಿತ್ಸೆ ಡಿ ಎ ಡಿಕ್ಷನ್ ಹಾಗೂ ವಿಶೇಷ ಅಗತ್ಯವುಳ್ಳ ಕುಟುಂಬ ಸದಸ್ಯರ ಶಿಕ್ಷಣ ಹಾಗೂ ಇತರ ಯೋಜನೆಗಳ ಸಹಾಯಾರ್ಥ ಸಂಗೀತ ರಸಮಂಜರಿ ಕಾರ್ಯಕ್ರಮ ಒಂದನ್ನು ಇದೇ ಭಾನುವಾರ 21-6-2026ರಂದು ಮಂಗಳೂರಿನ ಟಾನ್ ಹಾಲ್ ನಲ್ಲಿ ಸಂಜೆ 6.00 ಘಂಟೆಗೆ ಆಯೋಜಿಸಲಾಗಿದೆ ಪ್ರಖ್ಯಾತ ಸಂಗೀತಗಾರರಾಗಿದ್ದು ಖ್ಯಾತ ಉದ್ಯಮಿಯೂ ಆಗಿರುವ ಕೆವಿನ್ ಮಿಸ್ಕಿತ್, ಈ ಕಾರ್ಯಕ್ರಮದ ರೂವಾರಿಸಇವರು ಖ್ಯಾತ ಗೀತರಚನೆಕಾರ, ಸಂಗೀತ ಸಂಯೋಜಕ ಹಾಗೂ ಗಾಯಕರಾಗಿದ್ದು, ಆರು ಸಂಗೀತ ಆಲ್ಬಮ್‌ಗಳನ್ನು ನಿರ್ಮಿಸಿದ್ದಾರೆ ಮತ್ತು ವಿಶ್ವದಾದ್ಯಂತ 53ಕ್ಕೂ…

Read More

ಕೊಚ್ಚಿ: ಪ್ರಯಾಗರಾಜ್ ಮಹಾಕುಂಭಮೇಳದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ವೈರಲ್ ಆಗಿ ದೇಶದಾದ್ಯಂತ ಪ್ರಸಿದ್ಧಿ ಪಡೆದಿದ್ದ ಮೊನಾಲಿಸಾ ಭೋಂಸ್ಲೆ ಅವರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ರಕ್ಷಣೆ ಒದಗಿಸುವಂತೆ ಕೇರಳ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ತಮಗೆ ಮತ್ತು ತಮ್ಮ ಪತಿಗೆ ತುರ್ತಾಗಿ ಪೊಲೀಸ್ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರ ಮತ್ತು ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಗೆ ಆದೇಶಿಸಬೇಕು ಎಂದು ಕೋರಿ ಮೊನಾಲಿಸಾ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.ಕೋರ್ಟ್ ಹೇಳಿದ್ದೇನು?: ಅರ್ಜಿದಾರರ ಪರ ವಕೀಲರು ಹಾಗೂ ಸರ್ಕಾರಿ ಅಭಿಯೋಜಕರ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, “ಅರ್ಜಿದಾರರಿಗೆ ರಕ್ಷಣೆ ನೀಡುವ ಅಗತ್ಯವಿರುವುದು ಮೇಲ್ನೋಟಕ್ಕೆ ಮನವರಿಕೆಯಾಗಿದೆ. ಅದರಂತೆ, ಈ ರಿಟ್ ಅರ್ಜಿ ಸಂಪೂರ್ಣವಾಗಿ ಇತ್ಯರ್ಥವಾಗುವವರೆಗೆ ಅರ್ಜಿದಾರರಿಗೆ ಸೂಕ್ತ ರಕ್ಷಣೆ ನೀಡಬೇಕು” ಎಂದು ಪೊಲೀಸರಿಗೆ ತುರ್ತು ನಿರ್ದೇಶನ ನೀಡಿದೆ. ಇದರೊಂದಿಗೆ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಪೀಠವು, ಮುಂದಿನ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದೆ.ಪ್ರಕರಣದ ಹಿನ್ನೆಲೆ ಮತ್ತು…

Read More

ನವದೆಹಲಿ: ಟಿಕೆಟ್‌ರಹಿತ ಪ್ರಯಾಣ ಸೇರಿದಂತೆ ಹಲವು ಉಲ್ಲಂಘನೆಗಳಿಗೆ ದುಪ್ಪಟ್ಟು ದಂಡ ವಿಧಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಈ ಹೊಸ ನಿಯಮ ಜುಲೈ 1ರಿಂದ ಜಾರಿಯಾಗುತ್ತಿದೆ.ಇದುವರೆಗೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದರೆ ಟಿಕೆಟ್ ದರದ ಜೊತೆಗೆ 250 ರೂ. ದಂಡ ವಿಧಿಸಲಾಗುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ ಟಿಕೆಟ್ ದರದ ಜೊತೆಗೆ 500 ರೂ. ದಂಡ ಪಾವತಿಸಬೇಕಾಗುತ್ತದೆ. ಈ ಮೂಲಕ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುವವರ ವಿರುದ್ಧ ಇಲಾಖೆ ಸಮರ ಸಾರಿದೆ.ಸುಮಾರು 13 ವರ್ಷಗಳ ಬಳಿಕ ರೈಲ್ವೆ ಇಲಾಖೆ ದಂಡದ ಮೊತ್ತವನ್ನು ಪರಿಷ್ಕರಿಸಿದೆ. ಪ್ರಯಾಣಿಕರಲ್ಲಿ ಶಿಸ್ತು ಮೂಡಿಸುವುದು ಮತ್ತು ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಜಾರಿಗೆ ತರಲಾಗುತ್ತಿದೆ.ಮಹಿಳಾ ಕೋಚ್‌ಗೆ ಅನಧಿಕೃತವಾಗಿ ಪ್ರವೇಶಿಸುವ ಪುರುಷ ಪ್ರಯಾಣಿಕರಿಗೆ 2,500 ರೂ. ವರೆಗೆ ದಂಡ, ರೈಲ್ವೆ ಆವರಣದಲ್ಲಿ ಪರವಾನಗಿ ಇಲ್ಲದೇ ವ್ಯಾಪಾರ ನಡೆಸುವುದು ಅಥವಾ ಭಿಕ್ಷೆ ಬೇಡುವುದಕ್ಕೂ 2,000 ರೂ. ದಂಡ ವಿಧಿಸಲಾಗುತ್ತದೆ. ನಿಷೇಧಿತ ವಸ್ತುಗಳನ್ನ ಸಾಗಿಸುವವರಿಗೆ 10,000 ರೂ. ವರೆಗೆ ದಂಡ ವಿಧಿಸುವ ಅವಕಾಶವಿದೆ.…

Read More

ಉಡುಪಿ: ಕಾರು ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಣಿಪಾಲದ ಈಶ್ವರ ನಗರದ ಪೆಟ್ರೋಲ್ ಬಂಕ್ ಜಂಕ್ಷನ್ ಬಳಿ ನಡೆದಿದೆ.ಗಾಯಗೊಂಡವರನ್ನು ಹೆರ್ಗಾ ಗ್ರಾಮದ ಗರಡಿಯ ನಿವಾಸಿ ಅಭಿಷೇಕ್ ಎಂದು ಗುರುತಿಸಲಾಗಿದೆ.ಅಪಘಾತದಲ್ಲಿ ಅಭಿಷೇಕ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಕೈ ಮತ್ತು ಕಾಲುಗಳಿಗೂ ಪೆಟ್ಟು ಬಿದ್ದಿದೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.ಕುಂದಾಪುರದಿಂದ ಬಜಗೋಳಿಯತ್ತ ಕಾರು ಚಲಿಸುತ್ತಿದ್ದಾಗ, ಪೆಟ್ರೋಲ್ ಬಂಕ್ ಬಳಿ ಸ್ಕೂಟರ್ ಸವಾರ ತಿರುವು ಪಡೆಯಲು ಪ್ರಯತ್ನಿಸಿದಾಗ ಈ ಅಪಘಾತ ಸಂಭವಿಸಿದೆ. ಮಣಿಪಾಲ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಕೊರಟಗೆರೆ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹಾಗೂ ಹಠಾತ್ ಎದೆನೋವಿನಿಂದ ಮೃತಪಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಕೊರಟಗೆರೆಯಲ್ಲಿ ಕರ್ತವ್ಯದ ಮೇಲಿದ್ದ ಕೆಎಸ್‌ಆರ್‌ಪಿ (KSRP) ಬೆಟಾಲಿಯನ್‌ನ ಸಹಾಯಕ ಉಪನಿರೀಕ್ಷಕರೊಬ್ಬರು (ASI) ತೀವ್ರ ಎದೆನೋವಿನಿಂದ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಎಎಸ್‌ಐ ಎನ್.ಜಿ. ಪವಾರ್ (54) ಎಂದು ಗುರುತಿಸಲಾಗಿದೆ. ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನವರಾಗಿದ್ದಾರೆ.ಕೊರಟಗೆರೆಯಲ್ಲಿ ನಿಯೋಜನೆಗೊಂಡಿದ್ದ ಪವಾರ್ ಅವರು, ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಕೆಎಸ್‌ಆರ್‌ಪಿ ಬೆಟಾಲಿಯನ್‌ನ ಸಿಬ್ಬಂದಿ ಬ್ಯಾರಕ್‌ನಲ್ಲಿ ವಿಶ್ರಾಂತಿಗೆ ತೆರಳಿದ್ದರು. ಈ ವೇಳೆ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಸಹೋದ್ಯೋಗಿ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಸಾಗಿಸಲು ಜಿಪ್ಸಿ ವಾಹನದ ಮೂಲಕ ಧಾವಿಸಿದ್ದಾರೆ. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಸಿಗುವ ಮುನ್ನವೇ ಮಾರ್ಗಮಧ್ಯದಲ್ಲಿ ಪವಾರ್ ಅವರು ಕೊನೆಯುಸಿರೆಳೆದಿದ್ದಾರೆ.ಮೃತ ಎನ್.ಜಿ. ಪವಾರ್ ಅವರ ಪತ್ನಿ ಬಾಗಲಕೋಟೆಯಲ್ಲೇ ಹೆಡ್ ಕಾನ್ಸ್‌ಟೇಬಲ್ ಆಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಘಟನೆಗೆ…

Read More