ಮಧ್ಯಪ್ರದೇಶ: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇಲ್ಲಿನ ಕಮಲರಾಜ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಸಿಕಂದರ್ ಕಂಪೂ ಪ್ರದೇಶದ ಆರತಿ ಕುಶ್ವಾಹ ಅವರು ಬುಧವಾರ ಈ ಮಗುವಿಗೆ ಜನ್ಮ ನೀಡಿದ್ದಾರೆ. ನವಜಾತ ಶಿಶು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜಯರೋಗ್ಯ ಆಸ್ಪತ್ರೆ ಸಮೂಹದ ಸೂಪರಿಂಟೆಂಡೆಂಟ್ ಡಾ.ಆರ್.ಕೆ.ಎಸ್.ಧಕಡ್ ಮಾತನಾಡಿ, ‘ಮಗುವಿಗೆ ಹುಟ್ಟಿನಿಂದಲೇ ನಾಲ್ಕು ಕಾಲುಗಳಿವೆ. ಆಕೆಗೆ ದೈಹಿಕ ವಿಕಲತೆ ಇದೆ. ಕೆಲವು ಭ್ರೂಣಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ಇಶಿಯೋಪಾಗಸ್ ಎಂದು ಕರೆಯಲಾಗುತ್ತದೆ. ಭ್ರೂಣವು ಎರಡು ಭಾಗಗಳಾಗಿ ವಿಭಜನೆಯಾದಾಗ, ದೇಹವು ಎರಡು ಸ್ಥಳಗಳಲ್ಲಿ ಬೆಳವಣಿಗೆಯಾಗುತ್ತದೆ. ಈ ಹೆಣ್ಣು ಮಗುವಿನ ಸೊಂಟದ ಕೆಳಗಿನ ಭಾಗವು ಎರಡು ಹೆಚ್ಚುವರಿ ಕಾಲುಗಳೊಂದಿಗೆ ಅಭಿವೃದ್ಧಿಗೊಂಡಿದೆ. ಆದರೆ ಆ ಕಾಲುಗಳು ನಿಷ್ಕ್ರಿಯವಾಗಿವೆ’ ಎಂದಿದ್ದಾರೆ. ಇದೀಗ ಮಕ್ಕಳ ವಿಭಾಗದ ವೈದ್ಯರು ದೇಹದ ಯಾವುದೇ ಭಾಗದಲ್ಲಿ ಬೇರೆ ಯಾವುದೇ ಅಂಗವಿಕಲತೆ ಇದೆಯೇ ಎಂದು ತಪಾಸಣೆ ನಡೆಸುತ್ತಿದ್ದು, ಪರೀಕ್ಷೆ ಬಳಿಕ…
Author: main-admin
ದೌಸಾ (ರಾಜಸ್ಥಾನ): ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ 100 ದಿನಕ್ಕೆ ಕಾಲಿಟ್ಟಿದ್ದು, ಸಂಭ್ರಮವನ್ನಾಚರಿಸುತ್ತಿದೆ. ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಕಾಲ್ನಡಿಗೆಯ ಮೆರವಣಿಗೆಯು ಶುಕ್ರವಾರ ತನ್ನ 100 ದಿನಗಳನ್ನು ಪೂರೈಸಿದ್ದು, ಈ ಯಾತ್ರೆಯು ಶುಕ್ರವಾರ ರಾಜಸ್ಥಾನದ ದೌಸಾದಿಂದ ಪುನರಾರಂಭಗೊಂಡಿದೆ. ವೈನಾಡ್ ಸಂಸದ ರಾಹುಲ್ ಗಾಂಧಿ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಬೆಳಿಗ್ಗೆ 6 ಗಂಟೆಗೆ ಮೀನಾ ಹೈಕೋರ್ಟ್, ದೌಸಾದಿಂದ ಪಾದಯಾತ್ರೆಯನ್ನು ಪುನರಾರಂಭಿಸಿದರು ಮತ್ತು ಬೆಳಿಗ್ಗೆ 11 ಗಂಟೆಗೆ ಗಿರಿರಾಜ್ ಧರಣ್ ದೇವಸ್ಥಾನದಲ್ಲಿ ವಿರಾಮ ತೆಗೆದುಕೊಳ್ಳಲಿದ್ದಾರೆ. ರಾಜ್ಯಸಭಾ ಸಂಸದ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಟ್ವೀಟ್ ಮಾಡಿ, ‘ಇಂದು ಭಾರತ್ ಜೋಡೋ ಯಾತ್ರೆಯ ಐತಿಹಾಸಿಕ ಪ್ರಯಾಣವು 100 ದಿನಗಳನ್ನು ಪೂರ್ಣಗೊಳಿಸುತ್ತದೆ. ದ್ವೇಷ, ಮತಾಂಧತೆ, ವಿಭಜನೆ, ಹಿಂಸೆ, ಅನ್ಯಾಯ, ನಿರುದ್ಯೋಗ ಮತ್ತು ಬೆಲೆ ಅಕ್ಕಿ ವಿರುದ್ಧ ದೇಶವನ್ನು ಒಂದುಗೂಡಿಸುತ್ತದೆ. ಈ ಯಾತ್ರೆ 8 ರಾಜ್ಯಗಳು ಮತ್ತು 2,763 ಕಿಮೀ ಸಂಚರಿಸಿದ್ದು, ಲಕ್ಷಾಂತರ ಜನರ ಹೃದಯಗಳನ್ನು…
ಬೆಂಗಳೂರು : ರಸ್ತೆ ಗುಂಡಿಗಳಿಂದ ಅಪಘಾತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡ ಮತ್ತು ಸಾವನ್ನಪ್ಪಿದ ಪ್ರಕರಣಗಳಲ್ಲಿ ಎಫ್ ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಗೃಹ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರಸ್ತೆ ಗುಂಡಿಗಳ ಅವಾಂತರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ರಸ್ತೆ ಗುಂಡಿಗಳಿಂದ ಅಪಘಾತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರೆ ಮತ್ತು ಸಾವನ್ನಪ್ಪಿದರೆ ತಾಂತ್ರಿಕ ಕಾರಣಗಳನ್ನು ನೀಡದೇ ಎಫ್ ಐಆರ್ ದಾಖಲಿಸುವಂತೆ ಗೃಹ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಮತ್ತು ನ್ಯಾ. ಅಶೋಕ್ ಎಸ್ ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ನಿರ್ದೇಶನ ನೀಡಿದೆ.
ಬೆಂಗಳೂರು: ಖಾಸಗಿ ಕಾಲೇಜ್ ಒಂದರ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ಹಾಸ್ಟೆಲ್‍ನ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಬನ್ನೇರುಘಟ್ಟ ಸಮೀಪದ ಖಾಸಗಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ನಿತಿನ್ (19) ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾದ ಕೇರಳ ಮೂಲದ ವಿದ್ಯಾರ್ಥಿ. ನಿತಿನ್ ಇದೇ ತಿಂಗಳು ಡಿ.1ಕ್ಕೆ ಕಾಲೇಜು ಸೇರಿದ್ದ. ಪ್ರಥಮ ವರ್ಷದ ಇಂಜಿನಿಯರಿಂಗ್ ಪದವಿಗೆ ಅಡ್ಮಿಷನ್ ಮಾಡಿಸಿದ್ದ ನಿತಿನ್ ಚಾಕುವಿನಿಂದ ತಾನೇ ಚುಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಾಲೇಜ್ ಕ್ಯಾಂಪಸ್ ಒಳಗಿನ ಹಾಸ್ಟೆಲ್‍ನಲ್ಲಿ ವಾಸವಿದ್ದ ನಿತಿನ್ ನಿನ್ನೆ ಮಧ್ಯಾಹ್ನ ಹಾಸ್ಟೆಲ್ ಕೊಠಡಿಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಹಾಸ್ಟೆಲ್ ಸಹಪಾಠಿ ಬಂದು ಬಾಗಿಲು ಬಡಿದಿದ್ದ. ಬಾಗಿಲು ತೆಗೆಯದ ಹಿನ್ನೆಲೆ ಹಾಸ್ಟೆಲ್ ವಾರ್ಡನ್‍ಗೆ ವಿಷಯ ತಿಳಿಸಿದ್ದಾನೆ. ಕೂಡಲೇ ವಾರ್ಡನ್ ಹಾಗೂ ಸಿಬ್ಬಂದಿ ಬಂದು ಬಾಗಿಲು ಒಡೆದಿದ್ದಾರೆ. ಆಗ ಕತ್ತು ಕೊಯ್ದ ಸ್ಥಿತಿಯಲ್ಲಿ ಶೌಚಾಲಯದಲ್ಲಿ ನಿತಿನ್ ಶವವಾಗಿ ಪತ್ತೆಯಾಗಿದ್ದಾನೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಣಿಪಾಲ: ಉಡುಪಿ ನಗರ ಸಭೆಯ ಮಾಜಿ ಅಧ್ಯಕ್ಷೆ ಶಾಂತಾ ನಾಯ್ಕ್ ಅವರ ಮನೆಗೆ ನುಗ್ಗಿದ ಯುವಕನೋರ್ವ ಅವರ ಪತಿಗೆ ರಾಡ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಡೆದಿದೆ. ಮಣಿಪಾಲ ಠಾಣೆ ವ್ಯಾಪ್ತಿಯ ಅಲೆವೂರು ಸಮೀಪದ ಮಂಚಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಕೃಷ್ಣ ನಾಯ್ಕ್ (54) ಹಲ್ಲೆಗೆ ಒಳಗಾದವರು. ಅರ್ಜುನ್ ಎಂಬ ಯುವಕ ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೃಷ್ಣ ನಾಯ್ಕ್ ಅವರ ಮನೆಗೆ ಬಂದಿದ್ದ. ಈ ವೇಳೆ ಗೇಟ್ ಮುಂದೆಯೇ ಕೃಷ್ಣ ನಾಯ್ಕ್ ಅವರ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಧಿಕ ರಕ್ತಸ್ರಾವವಾಗಿರುವ ಕಾರಣ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಮೂಡಬಿದಿರೆ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮುಲ್ಲರಪಟ್ನ ನಿವಾಸಿ 45 ವರ್ಷದ ಇಸ್ಹಾಕ್ ಎಂಬವರಿಗೆ ಬಸ್ ಕಂಡೆಕ್ಟರ್ ಸೇರಿದಂತೆ ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ರಾಯಿ ಎಂಬಲ್ಲಿ ನಡೆದಿದೆ. ಈಗ ಬಿಸಿರೋಡಿನಲ್ಲಿ ವಾಸವಿರುವ ಇಸ್ಹಾಕ್ ಮೇಸ್ತ್ರಿ ಕೆಲಸ ಮಾಡುತ್ತಿದ್ದು, ನಿನ್ನೆ ಬೆಳಗ್ಗೆ ಬಿ.ಸಿ.ರೋಡ್ ನಿಂದ ಮೂಡುಬಿದಿರೆಗೆ ತೆರಳಲೆಂದು ಖಾಸಗಿ ಬಸ್ ಹತ್ತಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಕರ ದಟ್ಟಣೆಯಿದ್ದುರಿಂದ ಇಸ್ಹಾಕ್ ಕುಳಿತಿದ್ದ ಸೀಟಿನ ಬಳಿ ನಿಂತಿದ್ದ ಮಹಿಳೆಯೊಬ್ಬರು ಬ್ಯಾಗ್ ಹಿಡಿದುಕೊಳ್ಳುವಂತೆ ಇಸ್ಹಾಕ್ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ. ಮಹಿಳೆ ತಾನು ಇಳಿಯುವ ಜಾಗ ತಲುಪಿದಾಗ ಇಸ್ಹಾಕ್ ಅವರಿಂದ ಬ್ಯಾಗ್ ಪಡೆದು ಬಸ್ಸಿನಿಂದ ಇಳಿದು ಹೋದರೆನ್ನಲಾಗಿದೆ. ಬಳಿಕ ಕಂಡೆಕ್ಟರ್ ಇಸ್ಹಾಕ್ ಅವರನ್ನು ಬಸ್ಸಿನಿಂದ ಕೆಳಗಿಳಿಸಿ ಅವರಿಗೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಕೆಲವು ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ಕೆಲವು ಯುವಕರನ್ನು ಕರೆಸಿ ಇಸ್ಹಾಕ್ ಅವರನ್ನು ಒಪ್ಪಿಸಿದ್ದಾನೆ. ಬಳಿ ಕದುಷ್ಕರ್ಮಿಗಳ ಗುಂಪು ಇಸ್ಹಾಕ್ ಅವರನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ರಾಯಿ ಎಂಬಲ್ಲಿ ನಿರ್ಜನ ಪ್ರದೇಶದಲ್ಲಿ ಮರಕ್ಕೆ ಕಟ್ಟಿ ಹಾಕಿ…
ಮಂಗಳೂರು : ದ.ಕ. ಜಿಲ್ಲಾ ಕಾಂಗ್ರೆಸ್ ಭವನದ ಪ್ರವೇಶ ದ್ವಾರದ ಮೆಟ್ಟಿಲುಗಳ ನವೀಕರಣ ಕಾಮಗಾರಿಯು ಇದೀಗ “ವಾಸ್ತು’ ವಿಚಾರದ ಚರ್ಚೆಗೆ ವೇದಿಕೆ ಒದಗಿಸಿದೆ. ಕಚೇರಿ ಪ್ರವೇಶಕ್ಕೆ ಈ ಹಿಂದೆ 8 ಮೆಟ್ಟಿಲುಗಳಿದ್ದವು. ಇದನ್ನು ಬೆಸ ಸಂಖ್ಯೆಗೆ ಪರಿವರ್ತಿಸುವ ಕಾಮಗಾರಿ ನಡೆಯುತ್ತಿದೆ ಎಂಬ ಮಾತು ರಾಜಕೀಯವಾಗಿ ಚರ್ಚೆ ಹುಟ್ಟುಹಾಕಿದೆ. ಆದರೆ “ಅಂಡರ್ ಗ್ರೌಂಡ್ ನೀರಿನ ಟ್ಯಾಂಕ್ ದುರಸ್ತಿಗಾಗಿ ಮೆಟ್ಟಿಲು ದುರಸ್ತಿ ಮಾಡಲಾ ಗಿದ್ದು, ಇದರಲ್ಲಿ ವಾಸ್ತು ವಿಚಾರ ಇಲ್ಲ’ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು “ಹಿಂದೂಗಳ ಪ್ರತೀ ಆಚರಣೆಯನ್ನೂ ಅಣಕ ಮಾಡುವ ಕಾಂಗ್ರೆಸ್ ಈಗ ಸೋಲಿನ ಭೀತಿಯಿಂದ ವಾಸ್ತುದೋಷದ ಮೊರೆ ಹೋಗಿರುವುದು ತಲೆಗೆ ಹೊಯ್ದ ನೀರು ಕಾಲಿಗೆ ಬರಲೇಬೇಕು ಎಂಬು ದಕ್ಕೆ ಉದಾಹರಣೆ’ ಎಂದಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರತಿಕ್ರಿಯಿಸಿ, “ಕಟ್ಟಡಕ್ಕೆ 10 ವರ್ಷ ಆಗಿದೆ. ಹೀಗಾಗಿ ಮೆಟ್ಟಿಲು, ನೀರಿನ ಟ್ಯಾಂಕ್ ಸಹಿತ ಕೆಲವು ಗಾರೆ ಕೆಲಸ ಮಾಡಲು ಇತ್ತು. ಅದನ್ನೇ…
ಸುರತ್ಕಲ್: ಸಾಮಾಜಿಕ ಜಾಲತಾಣದಲ್ಲಿ ಚಿನ್ನ ಹಾಗೂ ಹಣಕ್ಕಾಗಿ ಉದ್ಯಮಿಯೋರ್ವರಿಗೆ ಖಾಸಗಿ ಮಾಹಿತಿಯನ್ನು ಬಹಿರಂಗಗೊಳಿಸುವ ಬೆದರಿಕೆಯನ್ನೊಡ್ಡಿದ್ದ ಆರೋಪದ ಮೇರೆಗೆ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಅವರನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಪವಿತ್ರನ್, ಕಾವೂರು ನಿವಾಸಿ ಸುರೇಶ್ ಎಂಬವರು ಸುರತ್ಕಲ್‌ನಲ್ಲಿ ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸಲು ಮುಂದಾಗಿದ್ದರು. ಆದರೆ, ರಾಜೇಶ್ ಪವಿತ್ರನ್ ನಡೆಸುತ್ತಿದ್ದ ಅವ್ಯವಹಾರಗಳು ಗಮನಕ್ಕೆ ಬಂದ ಕಾರಣ ಆತನೊಂದಿಗೆ ಪಾಲುದಾರಿಕೆಯಿಂದ ಹೊರ ಬರಲು ಬಯಸಿದ್ದಾಗಿ ಪೊಲೀಸರಿಗೆ ಸುರೇಶ್ ಅವರು ತಿಳಿಸಿದ್ದಾರೆ. ಇದುವೆ ರಾಜೇಶ್ ಪವಿತ್ರನ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.ಇದರಿಂದ ಆಕ್ರೋಶಗೊಂಡ ಆರೋಪಿ ರಾಜೇಶ್ ಪವಿತ್ರನ್, ಸುರೇಶ್ ಅವರ ಲ್ಯಾಪ್ ಟಾಪ್ ವಶಕ್ಕೆ ಪಡೆದು ಹೆಚ್ಚುವರಿ ಹಣ ನೀಡಬೇಕು, ಇಲ್ಲದಿದ್ದಲ್ಲಿ ಅದರಲ್ಲಿದ್ದ ಎಲ್ಲಾ ಖಾಸಗಿ ಮಾಹಿತಿಗಳನ್ನು ಬಹಿರಂಗ ಪಡಿಸುವುದಾಗಿ ಬೆದರಿಕೆಯೊಡ್ಡಿದ್ದ. ಅಲ್ಲದೆ, ಕೈ, ಕಾಲು ಕಡಿದುಹಾಕುವುದಾಗಿ ಬೆದರಿಕೆ ಹಾಕಿದ್ದ ಎಂದು ಸುರೇಶ್ ಅವರು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದರು.ಸುರೇಶ್ ಅವರ ದೂರು ದಾಖಲಿಸಿಕೊಂಡ ಪೊಲೀಸರು, ರಾಜೇಶ್ ಪವಿತ್ರನ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು…
ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು ಈ ಹಿನ್ನೆಲೆಯಲ್ಲಿ ಮೀನುಗಾರರು ಎಚ್ಚರಿಕೆ ವಹಿಸಬೇಕೆಂದು ಹವಾಮಾನ ಇಲಾಖೆ ತಿಳಿಸಿದೆ. ಡಿಸೆಂಬರ್ 14ರಿಂದ 17ರವರೆಗೆ ಕಡಲು ಪ್ರಕ್ಷುಬ್ದವಾಗಲಿದ್ದು ಈ ಅವಧಿಯಲ್ಲಿ ಗಾಳಿಯ ವೇಗ ಹೆಚ್ಚರಲಿದೆ ಆದುದರಿಂದ ಮೀನುಗಾರರು ಮೀನುಗಾರಿಕೆಗೆ ಇಳಿಯದೇ ಇರುವುದು ಉತ್ತಮ ಅದರಲ್ಲೂ ಡಿಸೆಂಬರ್ 16ರಂದು ಗಾಳಿಯ ವೇಗ ಅತಿ ಹೆಚ್ಚು ಇರುವ ಸಾಧ್ಯತೆ ಇದೆ. ಈ ವೇಳೆ ಸಂಭವಿಸಬಹುದಾದ ಅನಾಹುತವನ್ನು ತಡೆಗಟ್ಟುವ ಉದ್ದೇಶದಿಂದ ಯಾವುದೇ ದೋಣಿ ಮೀನುಗಾರಿಕೆಗೆ ತೆರಳದಂತೆ ಹಾಗೂ ಈಗಾಗಲೇ ತೆರಳಿಯಲ್ಲಿರುವ ಎಲ್ಲಾ ದೋಣಿಗಳು ಕೂಡಲೇ ಧಡ ಸೇರುವಂತೆ ಮೀನುಗಾರಿಕೆ ಜಂಟ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರವಾರ: ಭೀಕರ ಕಾರು ಅಫಘಾತದಲ್ಲಿ ಪ್ರಸಿದ್ದ ಯಕ್ಷಗಾನ ಕಲಾವಿದ ತಿಮ್ಮಪ್ಪ ಭಾಗ್ವತ್ ಬಾಳೆಹದ್ದ (65) ಮೃತಪಟ್ಟಿದ್ದಾರೆ. ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ತಿಮ್ಮಪ್ಪ ಭಾಗ್ವತ್ ಬಾಳೆಹದ್ ರನ್ನು ಶಿರಶಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಯಕ್ಷಗಾನ ಹಾಗೂ ಹಲವು ರಾಗಗಳಲ್ಲಿ ತಿಮ್ಮಪ್ಪ ಭಾಗ್ವತ್ ಬಾಳೆಹದ್ದ ಸಾಕಷ್ಟು ಹೆಸರು ಮಾಡಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.