ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪ ಹೊಳೆಯಲ್ಲಿ ಬಲೆ ಬೀಸುತ್ತಿದ್ದಾಗ ದೋಣಿಯ ವಾಡಿ ಮೇಲೆ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಉದ್ಯಾವರ ಪಿತ್ರೋಡಿಯಲ್ಲಿ ಸಂಭವಿಸಿದೆ. ಪಿತ್ರೋಡಿಯ ವಾಸು ಅವರಿಗೆ ಸೇರಿದ ದೋಣಿಯಲ್ಲಿ ಪಿತ್ರೋಡಿ ಪಾಪನಾಶಿನಿ ಹೊಳೆಯಲ್ಲಿ ಮೀನು ಹಿಡಿಯಲೆಂದು ತೆರಳಿದ್ದ ಉದ್ಯಾವರ ನಿವಾಸಿ ಅನಿಲ್ (46) ಮೃತ ಮೀನುಗಾರ ಎಂದು ತಿಳಿಯಲಾಗಿದೆ. ಹೊಳೆಯಲ್ಲಿ ಬಲೆ ಬೀಸುತ್ತಿದ್ದಾಗ ಆಯತಪ್ಪಿ ದೋಣಿಯೊಳಗೆ ಅಳವಡಿಸಿರುವ ವಾಡಿ ಮೇಲೆ ತಲೆಕೆಳಗಾಗಿ ಬಿದ್ದು ಗಂಭೀರ ಗಾಯಗೊಂಡಿದ್ದು,ಅವರ ಜತೆಗಿದ್ದ ಭರತೇಶ್ ಅನಿಲ್ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಗಾಯಾಳು ಮೃತಪಟ್ಟಿರುವುದಾಗಿ ತಿಳಿಸಿದ್ದರು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ
Author: main-admin
ಲೋಕಸಭೆ ಚುನಾವಣೆ ಮತ ಎಣಿಕೆ ಜೂ.4ರಂದು ನಡೆಯಲಿದ್ದು ದಕ್ಷಿಣ ಕನ್ನಡದಲ್ಲಿಯೂ ಸಕಲ ತಯಾರಿ ನಡೆಸಿರುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. ಇಂದು ಅವರು ಮತ ಎಣಿಕೆ ಕೇಂದ್ರದ ಸಿದ್ದತೆ ಕುರಿತು ಪಕ್ಷಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಜೂ.4ರಂದು ಬೆಳಗ್ಗೆ ಸ್ಟ್ರಾಂಗ್ ರೂಮ್ ತೆರೆಯುವುದರಿಂದ ಹಿಡಿದು EVM ಮಷಿನ್ ಭದ್ರತಾ ಕೊಠಡಿಗೆ ಇರಿಸುವವರೆಗಿನ ಎಲ್ಲ ಹಂತಗಳನ್ನು ಪ್ರತಿನಿಧಿಗಳಿಗೆ ವಿವರಿಸಿದರು. ಪ್ರತಿ ಪಕ್ಷಗಳು ತಮ್ಮ ಚುನಾವಣಾ ಏಜೆಂಟ್, ಮತ ಎಣಿಕಾ ಏಜೆಂಟರಿಗೆ ಕಡ್ಡಾಯವಾಗಿ ಆಯೋಗ ನೀಡಿರುವ ಮಾರ್ಗಸೂಚಿ ಪಾಲಿಸುವುದಕ್ಕೆ ಸೂಚಿಸಿದರು.
ನವದೆಹಲಿ: ಜೂನ್ 1ರ ಇಂದಿನಿಂದ ದೇಶಾದ್ಯಂತ ಡ್ರೈವಿಂಗ್ ಲೈಸೆನ್ಸ್ ನಿಯಮದಲ್ಲಿ ಹಲವು ಬದಲಾವಣೆಗಳು ಆಗಲಿದ್ದು, ರಸ್ತೆ ಸಾರಿಗೆ ಸಚಿವಾಲಯವು ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (RTO) ಉದ್ದನೆಯ ಸರತಿ ಸಾಲುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹೊಸ ನಿಯಮಗಳನ್ನು ಪ್ರಕಟಿಸಿದೆ. ಜೂನ್ 1 ರಿಂದ, ಅರ್ಜಿದಾರರು ಸರ್ಕಾರಿ ಸ್ವಾಮ್ಯದ ಆರ್ಟಿಒಗಳಿಗೆ ಹೋಗುವ ಬದಲು ಖಾಸಗಿ ಚಾಲನಾ ತರಬೇತಿ ಕೇಂದ್ರಗಳಲ್ಲಿ ಚಾಲನಾ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. ಈ ಬದಲಾವಣೆಯು ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಹೆಚ್ಚಿನ ಜನಸಂಖ್ಯೆಗೆ ಹೆಚ್ಚು ಪ್ರವೇಶಿಸುವಂತೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ʻಡ್ರೈವಿಂಗ್ ಲೈಸೆನ್ಸ್ʼ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳು ಅತ್ಯಂತ ಗಮನಾರ್ಹ ಬದಲಾವಣೆಯೆಂದರೆ ಅರ್ಜಿದಾರರು ಈಗ ಖಾಸಗಿ ತರಬೇತಿ ಕೇಂದ್ರಗಳಲ್ಲಿ ತಮ್ಮ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು, ಇದು ಪರವಾನಗಿ ಅರ್ಹತೆಗಾಗಿ ಪ್ರಮಾಣಪತ್ರಗಳನ್ನು ನೀಡಲು ಸಹ ಅಧಿಕಾರ ನೀಡುತ್ತದೆ. ಈ ಕ್ರಮವು ಸರ್ಕಾರಿ ಸ್ವಾಮ್ಯದ ಆರ್ಟಿಒಗಳ ಮೇಲಿನ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಅನೇಕರಿಗೆ ಹತಾಶೆಯ…
ಪುತ್ತೂರು : ನಿನ್ನೆ ಸಂಜೆ ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ಸೇತುವೆ ಮೇಲೆ ಸಂಚರಿಸುತ್ತಿದ್ದ ಪಿಕಪ್ ವಾಹನವೊಂದು ಹಠಾತ ಏರಿಕೆಯಾದ ಹೊಳೆಯ ನೀರಿಗೆ ಸಿಲುಕಿದ ಘಟನೆ ಸುಬ್ರಹ್ಮಣ್ಯ ಸಮೀಪದ ಕಲ್ಮಕಾರಿನಲ್ಲಿ ನಡೆದಿದೆ. ನಿನ್ನೆ ಸಂಜೆ ಸುಬ್ರಹ್ಮಣ್ಯ ಪರಿಸದಲ್ಲಿ ಬಾರೀ ಮಳೆಯಾಗಿತ್ತು, ಒಂದೇ ಸಮನೆ ಸುರಿದ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಹೊಳೆಯ ನೀರು ಏರಿಕೆಯಾಗಿತ್ತು. ಈ ನಡುವೆ ಸುಬ್ರಹ್ಮಣ್ಯ ಸಮೀಪದ ಕಲ್ಮಕಾರಿನಲ್ಲಿ ಸುರಿದ ಭಾರೀ ಮಳೆಗೆ ಕಲ್ಮಕಾರು ಹೊಳೆಗೆ ನಿರ್ಮಿಸಲಾದ ಸೇತುವೆ ಮೇಲೆ ಹಠಾತ ಪ್ರವಾಹ ಬಂದಿತ್ತು. ಈ ವೇಳೆ ಸೇತುವೆ ದಾಟುತ್ತಿದ್ದ ಪಿಕಪ್ ವಾಹನವೊಂದು ಸಿಕ್ಕಿಹಾಕಿಕೊಂಡಿತ್ತು. ತೆಂಗಿನಕಾಯಿ ಲೋಡ್ ಮಾಡಿಕೊಂಡು ಹೊಳೆ ದಾಟುತ್ತಿದ್ದ ಪಿಕ್ ಅಪ್ ವಾಹನ ಹೊಳೆಯಲ್ಲಿ ಏಕಾಏಕಿ ನೀರು ಹರಿದ ಪರಿಣಾಮ ಕೊಚ್ಚಿಹೋಗು ಸ್ಥಿತಿಗೆ ತಲುಪಿತ್ತು, ಈ ವೇಳೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ವಾಹನದಿಂದ ತೆಂಗಿನ ಕಾಯಿಯನ್ನು ತೆಗೆದು, ವಾಹನ ಮತ್ತು ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಪ್ರವಾಹದಿಂದಾಗಿ ಕಲ್ಮಕಾರು…
ಮಂಗಳೂರು: ಸ್ಕೀಮ್ ಹಾಗೂ ಸೇವಿಂಗ್ ಯೋಜನೆಯ ಇತಿಹಾಸದಲ್ಲೇ ಅತೀ ದೊಡ್ಡ ಬಹುಮಾನವನ್ನು ನೀಡುವ ಮಹತ್ತರ ಯೋಜನೆಗೆ ವಿಷನ್ 2 ಇಂಡಿಯಾ (ಸೀಸನ್ 2) ಚಾಲನೆ ನೀಡಿದೆ. 1ಕೋಟಿ ನಗದು ಹಾಗೂ ಚಿನ್ನಾಭರಣ, ಒಟ್ಟು ಹದಿನೇಳು ಕಾರು, ಹತ್ತು ಸುಸಜ್ಜಿತ ಮನೆ, ನೂರಕ್ಕಿಂತ ಹೆಚ್ಚು ದ್ವಿಚಕ್ರ ವಾಹನ, 50ಕ್ಕಿಂತ ಹೆಚ್ಚು ಐಪೋನ್, ವಿದೇಶ ಪ್ರಯಾಣ ಹಾಗೂ ಸಮಾಧಾನಕರ ಬಹುಮಾನವಾಗಿ ನಗದು, ಚಿನ್ನ ಹಾಗೂ ಇನ್ನಿತರ ಫರ್ನಿಚರ್, ಎಲೆಕ್ಟ್ರಾನಿಕ್, ಗೃಹೋಪಯೋಗಿ ವಸ್ತುಗಳನ್ನು ನೀಡಲಿದೆ ಎಂದು ಸಂಸ್ಥೆಯ ಸಂಸ್ಥಾಪಕರು ತಿಳಿಸಿದ್ದಾರೆ. ಪ್ರತಿ ತಿಂಗಳು ಸಾವಿರ ರೂಪಾಯಿಗಳಂತೆ ಪಾವತಿಸುವ ಉಳಿತಾಯ ಯೋಜನೆ ಇದಾಗಿದ್ದು, ಇದರಲ್ಲಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಗೆಲ್ಲಬಹುದಾಗಿದೆ. ವಿಷನ್ ಇಂಡಿಯಾ ಮೂಲಕ ತಮ್ಮ ಕನಸಿನ ಮನೆ, ಕಾರು ಹಾಗೂ ನಗದು, ಚಿನ್ನವನ್ನು ಗೆಲ್ಲುವ ಮೂಲಕ ಕನಸನ್ನು ನನಾಗಿಸಲು ಇದೊಂದು ಸುವರ್ಣವಕಾಶವಾಗಿದೆ. ಈಗಾಗಲೇ ಮಡಿಕೇರಿ, ಮೈಸೂರು, ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ವಿಷನ್ ಇಂಡಿಯಾ ಸಂಸ್ಥೆಯು ಪುತ್ತೂರು ಭಾಗದ ಜನರಿಗೆ ಉತ್ತಮ ಸೇವೆ…
ಉಡುಪಿ: ಉಡುಪಿಯಲ್ಲಿ ನಡೆದ ಗ್ಯಾಂಗ್ ವಾರ್ ಪ್ರಕರಣದ ಹಿನ್ನೆಲೆ ಮಾದಕ ದ್ರವ್ಯದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮಣಿಪಾಲದಲ್ಲಿ ರಾತ್ರಿ 10ಗಂಟೆಯಿಂದ ಹೊಟೇಲ್ ಬಾರ್ ಸೇರಿದಂತೆ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಕೆ ಅರುಣ್ ಅವರು ಸೂಚನೆ ನೀಡಿದ್ದಾರೆ. ಕಳೆದೆರಡು ದಿನಗಳಿಂದ ಮಣಿಪಾಲದ ಬಾರ್, ಹೊಟೇಲ್, ಅಂಗಡಿ ಮಾಲಕರಿಗೆ ರಾತ್ರಿ 10ಗಂಟೆಯೊಳಗೆ ಅಂಗಡಿ ಬಂದ್ ಮಾಡುವಂತೆ ಪೊಲೀಸರು ಸೂಚನೆ ನೀಡುತ್ತಿದ್ದಾರೆ. ಬುಧವಾರ ರಾತ್ರಿ ಭಾಗಃಶ ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡಿದ್ದವು. ಆದರೆ ಕೆಲವು ಬಾರ್‌ಗಳು ರಾತ್ರಿ 11ಗಂಟೆಯವರೆಗೂ ತೆರೆದಿರುವುದು ಕಂಡುಬಂದವು. ಮಣಿಪಾಲದ ಎಲ್ಲ ಅಂಗಡಿಮುಗ್ಗಟ್ಟುಗಳನ್ನು ಬಂದ್ ಮಾಡಿಸಿ ಡ್ರಗ್ಸ್ ಗಾಂಜಾ ಸೇರಿದಂತೆ ಮಾದಕ ದ್ರವ್ಯ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು. ಮಣಿಪಾಲದಲ್ಲಿ ಈ ರೀತಿ ಕಾರ್ಯಾಚರಣೆ ಮಾಡಿದರೆ ಡ್ರಗ್ಸ್ ದಂಧೆಯ ಮೂಲಗಳ ಬಗ್ಗೆ ಮಾಹಿತಿ ಸಿಗಲಿದೆ. ಅದರಂತೆ ಮುಂದೆ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು ಎಂದು ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ. ಈಗಾಗಲೇ ಬಾರ್, ಹೊಟೇಲ್, ಅಂಗಡಿಗಳ ಮಾಲಕರನ್ನು…
ಬಂಟ್ವಾಳ: ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಡಿವೈಡರ್ ಮೇಲೆ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ.75ರ ತುಂಬೆ ಸಮೀಪದ ಕಡೆಗೋಳಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿದ್ದು, ಯಾವುದೇ ಲಿಕೇಜ್ ಇಲ್ಲದೇ ಇರುವುದರಿಂದ ಹೆಚ್ಚಿನ ಹಾನಿ ಉಂಟಾಗಿಲ್ಲ. ಮಂಗಳೂರಿನಿಂದ ಗ್ಯಾಸ್ ತುಂಬಿಕೊಂಡು ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಕೆಲ ಹೊತ್ತು ಟ್ರಾಫಿಕ್ ಜಾಮ್ ಆಗಿದ್ದು ವಾಹನ ಸವಾರರು ಪರದಾಡಿದ್ದಾರೆ. ಬಂಟ್ವಾಳ ಅಗ್ನಿಶಾಮಕ ದಳದವರು, ಸಂಚಾರ ಪೊಲೀಸರು, ಘಟನಾ ಸ್ಥಳಕ್ಕೆ ಆಗಮಿಸಿದ್ದು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.
ಉಡುಪಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸುತ್ತಿರುವ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಜೊತೆ ಗುರುತಿಸಿಕೊಂಡಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಠಾಕೂರ್ ಸಹಿತ ನಾಲ್ವರು ಬಿಜೆಪಿ ಪದಾಧಿಕಾರಿಗಳನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಠಾಕೂರ್, ಕಾಪು ಮಂಡಲ ಉಪಾಧ್ಯಕ್ಷ ಉಪೇಂದ್ರ ನಾಯಕ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ರೋಷನ್ ಶೆಟ್ಟಿ ಮತ್ತು ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜುನೈದ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಬಂಡಾಯ ಅಭ್ಯರ್ಥಿಗೆ ಮತ ಯಾಚಿಸುತ್ತಿರುವ ವಿಚಾರ ಪಕ್ಷದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ನಾಲ್ವರಿಗೂ 48 ಗಂಟೆಗಳ ಒಳಗಾಗಿ ಜಿಲ್ಲಾಧ್ಯಕ್ಷರ ಮುಂದೆ ಸ್ಪಷ್ಟೀಕರಣವನ್ನು ನೀಡುವಂತೆ ನೋಟೀಸ್ ಜಾರಿ ಮಾಡಲಾಗಿದೆ. ಇದರಲ್ಲಿ ಕೆಲವರು ಉತ್ತರ ಕೊಟ್ಟಿದ್ದಾರೆ. ಆದರೆ ಅವರ ಸಬೂಬು ನಮ್ಮ ನೋಟೀಸ್‌ಗೆ ಸರಿಯಾದ ಉತ್ತರ ಆಗಿಲ್ಲ. ಆದುದರಿಂದ ಅವರ ಹೇಳಿಕೆಯನ್ನು ಪರಿಗಣಸದೆ ನೋಟೀಸ್ ಜಾರಿ…
ಮಂಗಳೂರು: ಮನೆಯಿಂದ ಹೊರಟ ತಾಯಿ ಹಾಗೂ ಮಗು ನಾಪತ್ತೆಯಾಗಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕಂಪಾಡಿ ಮೀನಕಳಿಯ ನಿವಾಸಿ ಶ್ವೇತಾ(31) ಹಾಗೂ ಮಗಳು ಇಶಿಕಾ(6) ನಾಪತ್ತೆಯಾದವರು ಎಂದು ತಿಳಿಯಲಾಗಿದೆ. (ಮೇ 29 ) ಮಧ್ಯಾಹ್ನ 3 ಗಂಟೆ ಹೊತ್ತಿಗೆ ತಾಯಿ ಮನೆಯಿಂದ ಗಂಡನ ಮನೆ ಕುಳೂರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ತಾಯಿ ಮಗಳು ಪತ್ತೆಯಾಗಿಲ್ಲ. ಈಗಾಗಲೇ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾರಿಗಾದರೂ ತಾಯಿ ಮಗಳ ಬಗ್ಗೆ ಮಾಹಿತಿ ಸಿಕ್ಕಿದರೆ ಕೂಡಲೇ ಪಣಂಬೂರು ಪೊಲೀಸರನ್ನು ಸಂಪರ್ಕಿಸಿ 9480805331,0824222053
ಮಂಗಳೂರು: ಅಪರಿಚಿತನೋರ್ವನ ಮಾತು ನಂಬಿ ಕ್ರಿಪ್ಟೋ ಕರೆನ್ಸಿ ವ್ಯವಹಾರಕ್ಕೆ ಕೈಹಾಕಿ ಉಪ್ಪಿನಂಗಡಿ ಬಳಿಯ ಇಚ್ಲಂಪಾಡಿ ನಿವಾಸಿ ಯುವಕನೊಬ್ಬ ಒಂದು ಕೋಟಿ ರೂ ಗೂ ಅಧಿಕ ದುಡ್ಡು ಕಳಕೊಂಡಿದ್ದಾನೆ ಎಂದು ತಿಳಿಯಲಾಗಿದೆ ಇಚ್ಲಂಪಾಡಿ ಗ್ರಾಮದ ಕೆಡೆಂಬೈಲು ಪುಲಿಕ್ಕಲ್ ನ 43 ವರ್ಷದ ವ್ಯಕ್ತಿ ಹಣ ಕಳಕೊಂಡವರು ಎಂದು ಮಾಹಿತಿ ತಿಳಿದು ಬಂದಿದೆ. ಮೇ 25ರಂದು ಟೆಲಿಗ್ರಾಮ್ ನಲ್ಲಿ ಅಪರಿಚಿತನೊಬ್ಬ ಪರಿಚಯವಾಗಿದ್ದಾನೆ. ಆತ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಬರುವುದಾಗಿ ನಂಬಿಸಿದ್ದಾನೆ. ಅದರಂತೆ, ಅಮೆರಿಕದ ಕ್ರಿಪ್ಟೋ ಕರೆನ್ಸಿಗೆ ಹಣ ಹೂಡಿಕೆ ಮಾಡಲು ಬಿನೇನ್ಸ್ ಆ್ಯಪ್ ಮತ್ತು ಡಿಫೈ ಆ್ಯಪ್ ಡೌನ್ಹೋಡ್ ಮಾಡುವಂತೆ ತಿಳಿಸಿದ್ದಾನೆ. ಅಪರಿಚಿತ ಹೇಳಿದಂತೆ ವ್ಯಕ್ತಿ ತಮ್ಮ ಮೊಬೈಲ್ ನಲ್ಲಿ ಎರಡೂ ಆ್ಯಪ್ ಗಳನ್ನು ಡೌನ್ಫೋಡ್ ಮಾಡಿ, ಅಪರಿಚಿತನ ಸೂಚನೆಯಂತೆ ತನ್ನ ಬ್ಯಾಂಕ್ ಖಾತೆಗಳಿಂದ 1,05,79,711 ರೂ ಹಣ ವರ್ಗಾಯಿಸಿದ್ದಾರೆ. ಕ್ರಿಪ್ಟೋ ಕರೆನ್ಸಿಯಲ್ಲಿ ಟ್ರೇಡಿಂಗ್ ಮಾಡುವುದಕ್ಕಾಗಿ ಆ್ಯಪ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದರು. ಆದರೆ, ಆ ಬಳಿಕ ಹಣ ಹಿಂತಿರುಗಿ…










