Author: main-admin

ಉಳ್ಳಾಲ: ರೂಟ್ ಬಸ್ ಮತ್ತು ಮೆಡಿಕಲ್ ಕಾಲೇಜು ಬಸ್ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಗಾಯಗೊಂಡ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಉರುಮಣೆ ಬಳಿ ನಡೆದಿದೆ. ಪುತ್ತೂರಿನಿಂದ ಮಂಜನಾಡಿ ರಸ್ತೆಯಾಗಿ ಮಂಗಳೂರಿಗೆ ತೆರಳುತ್ತಿದ್ದ ಶಿವಶಂಕರ್ ಬಸ್ ಮತ್ತು ಯೇನಪೋಯ ಮೆಡಿಕಲ್ ಕಾಲೇಜಿನ ಬಸ್ ಪರಸ್ಪರ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಎರಡು ವಾಹನಗಳಿಗೂ ಹಾನಿಯಾಗಿದೆ. ಘಟನೆಯಿಂದ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಘಟನಾ ಸ್ಥಳಕ್ಕೆ ದಕ್ಷಿಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಪುತ್ತೂರು: ನೀರು ತುಂಬಿಸುವ ಡ್ರಮ್‌ಗಳನ್ನು ಸರಬರಾಜು ಮಾಡುವುದಾಗಿ ನಂಬಿಸಿ ಕೃಷಿ ಉತ್ಪನ್ನ ಮಾರಾಟ ಸಂಸ್ಥೆಗೆ ಅಪರಿಚಿತರು ಲಕ್ಷಾಂತರ ರೂ. ವಂಚಿಸಿದ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿರುವ ಅಗ್ರೋ ಉತ್ಪನ್ನಗಳನ್ನು ಮಾರಾಟ ಮಾಡುವ ಗಣೇಶ್ ಭಟ್ ವಂಚನೆಗೊಳಗಾದವರು, ಗಣೇಶ್ ಭಟ್ ಅವರನ್ನು Unity Poly Barrels PVT Ltd Ashoka Nagar Shivaji Nagar Pune Maharsasthra ಎಂಬ ಹೆಸರಿನಿಂದ ಸಂಪರ್ಕಿಸಿದ ಅಪರಿಚಿತರು ಆನ್ ಲೈನ್ ಮೂಲಕ ಡ್ರಮ್ ಗಳನ್ನು ಮಾರಾಟ ಮಾಡುವುದಾಗಿ ಹೇಳಿದ್ದರು. ಇದನ್ನು ನಂಬಿದ ಗಣೇಶ್ ಭಟ್ ಅವರು ಮೇ 8ರಿಂದ ಮೇ 10ರ ಒಳಗಡೆ 1,30,500 ರೂ. ಅನ್ನು ಮೂರು ಹಂತಗಳಲ್ಲಿ ಫೋನ್ ಪೇ ಮೂಲಕ ಅಪರಿಚಿತರ ಖಾತೆಗೆ ಕಳುಹಿಸಿದ್ದಾರೆ. ಹಣ ಪಾವತಿಸಿ 20 ದಿನ ಕಳೆದರೂ ಡ್ರಮ್ ಸರಬರಾಜು ಮಾಡಿಲ್ಲ ಎಂದು ಗಣೇಶ್ ಭಟ್‌ ಪುತ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read More

ಬೆಳ್ತಂಗಡಿ: ಅಕ್ರಮವಾಗಿ ಜಾನುವಾರು ಸಾಗಾಟ ಮತ್ತು ಕಸಾಯಿಖಾನೆಗೆ ಖಚಿತ ಮಾಹಿತಿ ಮೇರೆಗೆ ಪುಂಜಾಲಕಟ್ಟೆ ಪೊಲೀಸರು ದಾಳಿ ನಡೆಸಿದ ಘಟನೆ ಪುತ್ತಿಲ ಗ್ರಾಮದ ಪಲ್ಕೆ ಎಂಬಲ್ಲಿ ನಡೆದಿದೆ. ಕರಾಯದ ಸಿರಾಜ್ ಎಂಬಾತ ಅಕ್ರಮವಾಗಿ ಜಾನುವಾರನ್ನು ಕಡಿದು ಮಾಂಸ ಮಾಡುತ್ತಿರುವ ಬಗ್ಗೆ, ಹಾಗೂ ಪುತ್ತಿಲ ಗ್ರಾಮದ ಪಲ್ಕೆ ಎಂಬಲ್ಲಿ, ಅಶ್ರಪ್ ಎಂಬಾತ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಜೂ. 1 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣಾ ಪಿಎಸ್‌ಐ ಉದಯರವಿ ವೈ ಎಂ ರವರು ಹಾಗೂ ಸಿಬ್ಬಂದಿಗಳು, ಆರೋಪಿ ಅಶ್ರಫ್ ಎಂಬಾತನ ಮನೆಯ ಬಳಿ ತೆರಳಿದಾಗ, ವಾಹನದಿಂದ ಜಾನುವಾರುಗಳನ್ನು ಇಳಿಸುತ್ತಿದ್ದ ಆರೋಪಿಯು ಪೊಲೀಸರನ್ನು ಕಂಡು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ಸ್ಥಳದಲ್ಲಿದ್ದ ಎರಡು ಜಾನುವಾರುಗಳನ್ನು ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ವಾಹವನ್ನು ಮತ್ತು ವಾಹನದಲ್ಲಿದ್ದ ಮೊಬೈಲ್‌ನ್ನು ವಶಪಡಿಸಿಕೊಂಡಿದ್ದಾರೆ.. ಬಳಿಕ ಸ್ಥಳದ ಹತ್ತಿರದಲ್ಲಿಯೇ ಅಕ್ರಮವಾಗಿ ಜಾನುವಾರನ್ನು ಕಡಿದು ಮಾಂಸ ಮಾಡುತ್ತಿದ್ದ, ಸಿರಾಜ್ ಎಂಬಾತನ ಮನೆಯ ಬಳಿ ತೆರಳಿದಾಗ ಸ್ಥಳದಲ್ಲಿದ್ದ ಕರಾಯದ ಸಿರಾಜ್…

Read More

ಬೆಂಗಳೂರು: ವಿಧಾನ ಪರಿಷತ್‌ನ ಶಿಕ್ಷಕರು ಮತ್ತು ಪದವೀಧರ 6 ಕ್ಷೇತ್ರಗಳಿಗೆ ಇಂದು (ಸೋಮವಾರ) ಚುನಾವಣೆ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೂ ಮತದಾನ ನಡೆಯಲಿದೆ. ಇದಕ್ಕಾಗಿ ಚುನಾವಣೆಗೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆದಿದೆ. 6 ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡುತ್ತಿದ್ದು, ಬಿಜೆಪಿ 4 ಮತ್ತು ಜೆಡಿಎಸ್ 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಆಡಳಿತ ಪಕ್ಷ ಕಾಂಗ್ರೆಸ್‌ಗೆ ಸವಾಲ್ ಹಾಕಿದೆ. ಮತದಾನ ಮಾಡುವವರು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಪಾಸ್‍ ಪೋರ್ಟ್ ಸೇರಿ ಸರ್ಕಾರದ ಅಧಿಕೃತ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದಾಗಿದೆ. ಪದವೀಧರ ಕ್ಷೇತ್ರದಲ್ಲಿ ಒಟ್ಟು 3,63,573 ಮತಗಳಿವೆ. 461 ಒಟ್ಟು ಮತ ಕೇಂದ್ರಗಳಿವೆ. ಇನ್ನು ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 70260 ಮತಗಳಿದ್ದು, 170 ಮತ ಕೇಂದ್ರಗಳಿವೆ. ಒಟ್ಟಾರೆ 78 ಅಭ್ಯರ್ಥಿಗಳಿದ್ದಾರೆ.

Read More

ರಾಜ್ಯದಲ್ಲಿ ಲವ್​ ಜಿಹಾದ್​ಗೆ ಸಿಲುಕಿದ ಹಿಂದೂ ಯುವತಿಯರು ಹಾಗೂ ಮಹಿಳೆಯರ ರಕ್ಷಣೆಗಾಗಿ ಶ್ರೀರಾಮಸೇನೆ ಸಹಾಯವಾಣಿ ಕೇಂದ್ರ ಆರಂಭಿಸಿದೆ. ಆದರೆ, ಈ ಸಹಾಯವಾಣಿ ಕೇಂದ್ರಕ್ಕೆ ಬೆದರಿಕೆ ಕರೆಗಳು ಬಂದಿವೆ. ನಾಲ್ಕು ದಿನದಲ್ಲಿ 17 ಬೆದರಿಕೆ ಕರೆಗಳು ಬಂದಿವೆ ಎಂದು ಶ್ರೀರಾಮಸೇನೆ ಮುಖಂಡ ಗಂಗಾಧರ ಕುಲಕರ್ಣಿ ತಿಳಿಸಿದ್ದಾರೆ. ಲವ್ ಜಿಹಾದ್‌ನಲ್ಲಿ ಸಿಲುಕಿದ ಹಿಂದೂ ಯುವತಿಯರ ರಕ್ಷಣೆಗೆ ಮೇ 29 ರಂದು ಶ್ರೀರಾಮಸೇನೆ ಸಹಾಯವಾಣಿ ಆರಂಭಸಿತ್ತು. ನಾಲ್ಕು ದಿನಗಳಲ್ಲಿ 400ಕ್ಕೂ ಅಧಿಕ ಕರೆಗಳು ಬಂದಿವೆ. 37 ಜನ ತಾಯಂದಿರು, 42 ಪ್ರೋತ್ಸಾಹಕ ಕತೆಗಳು, 52 ಜನ ಲವ್ ಜಿಹಾದ್​ನಲ್ಲಿ ಸಿಲುಕಿರುವ ಸಂತ್ರಸ್ತೆಯರು ಕರೆ ಮಾಡಿದ್ದಾರೆ. ಅಲ್ಲದೆ ನಮ್ಮ ಕಾರ್ಯಕ್ಕೆ ಅಭಿನಂದಿಸಿ ಮಹಿಳೆಯರು, ವಕೀಲರು ಮತ್ತು ಕೆಲ ಮಾಧ್ಯಮದವರೂ ಕರೆ ಮಾಡಿ ಒಳ್ಳೆ ಕಾರ್ಯ ಮಾಡುತ್ತಿದ್ದೀರಿ ಎಂದು ಹಾರೈಸುತ್ತಿದ್ದಾರೆ. ಆದರೆ ಈ ಮಧ್ಯೆ 17 ಬೆದರಿಕೆ ಕರೆಗಳು ಕೂಡ ಬಂದಿವೆ ಎಂದು ತಿಳಿಸಿದರು. ಅಲ್ಲದೆ, ಸಹಾಯವಾಣಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದನ್ನೂ ಕೂಡ ರಿಪೋರ್ಟ್​ ಮಾಡಿ…

Read More

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಗೆ ನೀರು ಪೂರೈಕೆ ವ್ಯವಸ್ಥೆಯ ಕಾಮಗಾರಿಯ ಹಿನ್ನೆಲೆಯಲ್ಲಿ ಜೂ. 3ರಂದು ಬೆಳಗ್ಗೆ 6ರಿಂದ ಜೂ. 4ರ ಬೆಳಗ್ಗೆ 6ರವರೆಗೆ ನೀರು ಪೂರೈಕೆಯಲ್ಲಿ ಹಲವೆಡೆ ವ್ಯತ್ಯಯ ಉಂಟಾಗಲಿದೆ ಎಂದು ಪಾಲಿಕೆ ಪ್ರಕಟನೆ ತಿಳಿಸಿದೆ. ತುಂಬೆ 18 ಎಂಜಿಡಿ ರೇಚಕ ಸ್ಥಾವರದಿಂದ ಪಣಂಬೂರು ಕಡೆಗೆ ಪಂಪಿಂಗ್ ಮಾಡುವ 900 ಎಂ.ಎಂ ವ್ಯಾಸದ ಕೊಳವೆಯನ್ನು ಕೊಟ್ಟಾರ ಚೌಕಿಯಿಂದ ಗೋಲ್ಡ್ ಫಿಂಚ್ ಗ್ರಂಡ್ ತನಕ ಮರುಜೋಡಣೆ ಕಾಮಗಾರಿ ಕೆಯುಐಡಿಎಫ್‌ಸಿ ವತಿಯಿಂದ ನಡೆಯಲಿದೆ. ಈ ಕಾರಣ 24 ಗಂಟೆ ಅವಧಿಯಲ್ಲಿ ಸುರತ್ಕಲ್, ಕಾಟಿಪಳ್ಳ ಎನ್‌ಐಟಿಕೆ, ಎಂಸಿಎಫ್, ಕಾಪಿಕಾಡ್, ಕೂಳೂರು, ಜಲ್ಲಿಗುಡ್ಡೆ, ಕಾವೂರು ಭಾಗಶಃ, ಕೋಡಿಕಲ್ ಭಾಗಶಃ, ಪಚ್ಚನಾಡಿ, ಅಶೋಕ ನಗರ, ಮೂಡ ಪಂಪ್ ದೇರೆಬೈಲ್, ಕುಳಾಯಿ, ಮುಕ್ಕ ಪಣಂಬೂರು ಮುಂತಾದ ಪ್ರದೇಶಗಳಲ್ಲಿ ನೀರು ನಿಲುಗಡೆಗೊಳಿಸಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Read More

ಬೆಳ್ತಂಗಡಿ: ಅಪ್ರಾಪ್ತ ವಯಸ್ಸಿನಲ್ಲಿ ಬಾಲಕಿ ಮೇಲೆ ಬೇರೆ ಬೇರೆ ಸಮಯದಲ್ಲಿ ಮೂವರು ಯುವಕರು ಬಲತ್ಕಾರ ಮಾಡಿ ಅತ್ಯಾಚಾರ ಎಸಗಿ ಆಕೆ ಆರು ತಿಂಗಳ ಗರ್ಭಿಣಿಯಾಗಲು ಕಾರಣವಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಗ್ಯಾಂಗ್ ರೇಪ್ ಹಾಗೂ ಪೋಕ್ಸೋ ಅಡಿಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಮೂವರು ಮೂಡಬಿದ್ರೆ ನಿವಾಸಿಗಳಾದ ಮಹಮ್ಮದ್ ಇಕ್ಬಾಲ್(26), ಫಾರೂಕ್(19) ಹಾಗೂ 18 ವರ್ಷದ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ.ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 18.5 ವಯಸ್ಸಿನ ಬಾಲಕಿಗೆ ಮೂವರು ಯುವಕರು ಬೇರೆ ಬೇರೆ ಸಮಯದಲ್ಲಿ ಬಲತ್ಕಾರ ಮಾಡಿ ಅತ್ಯಾಚಾರ ಎಸೆದಿದ್ದಾರೆ. ಇದೀಗ ಬಾಲಕಿ 6 ತಿಂಗಳ ಗರ್ಭಿಣಿಯಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಾಲಕಿ ಮೇ.31 ರಂದು ನೀಡಿದ ದೂರಿನ ಮೇರೆಗೆ ಮೂವರ ವಿರುದ್ಧ ಗ್ಯಾಂಗ್ ರೇಪ್ ಮತ್ತು ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಇಂದು ಮೂವರನ್ನು ಬಂಧಿಸಲಾಗಿದೆ. ಈ ಪೈಕಿ ಇಬ್ಬರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ…

Read More

ಕಾಪು: ದರೋಡೆಗೆ ಸಂಚು ರೂಪಿಸಿ ಅದಕ್ಕಾಗಿ ಹೊಂಚು ಹಾಕಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ ಆರೋಪಿಗಳನ್ನು ಕಾಪು ಪೊಲೀಸರು ಶನಿವಾರ ರಾತ್ರಿ ಸಿನಿಮೀಯ ರೀತಿಯ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಅಮಿತ್ ರಾಜ್, ಪ್ರಕಾಶ್ ಸುರತ್ಕಲ್, ವರುಣ್ ನೀರುಮಾರ್ಗ, ಕಾರ್ತಿಕ್ ಶೆಟ್ಟಿ ಸುರತ್ಕಲ್, ಅಭಿಷೇಕ್, ಶ್ರೀಕಾಂತ್ ಶ್ರೀಪತಿ ಫರಂಗಿಪೇಟೆ ಬಂಧಿತ ಆರೇಪಿಗಳು. ಕಾಪು ಸಿಐ ಜಯಶ್ರೀ ಮಾನೆ ಮತ್ತು ಕಾಪು ಎಸ್ ಐ ಅಬ್ದುಲ್ ಖಾದರ್ ಹಾಗೂ ಸಿಬಂದಿ ಯಶಸ್ವೀ ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಬಂಧಿಸಿದ್ದು, ಸ್ಕಾರ್ಪಿಯೋ ಕಾರು ಮತ್ತು ಅದರಲ್ಲಿದ್ದ ಡ್ರ್ಯಾಗನ್, ಚೂರಿ, ಕಬ್ಬಿಣದ ಪೈಪ್ ಮತ್ತು ಮರಳು ಮಿಶ್ರಿತ ಮೆಣಸಿನ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Read More

ಮಂಗಳೂರು: ಅಧಿಕ ಲಾಭಾಂಶ ನೀಡುವುದಾಗಿ ಹೇಳಿ ಹಣ ಹೂಡಿಕೆ ಮಾಡಿಸಿ 120 ಮಂದಿಗೆ ಒಟ್ಟು 55,81,582 ರೂ. ವಂಚಿಸಿರುವ ಬಗ್ಗೆ ಬಲ್ಮಠದ ಕೆನರಾ ಫಿಶ್ ಆ್ಯಂಡ್ ಫಾರ್ಮಸ್ ಸಂಸ್ಥೆಯ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಸ್ಥೆಯ ರೀಜನಲ್ ಮ್ಯಾನೇಜರ್ ಮತ್ತು ಬ್ರಾಂಚ್ ಮ್ಯಾನೇಜರ್ ಸಂಪರ್ಕಿಸಿ ಅಧಿಕ ಲಾಂಭಾಂಶ ನೀಡುವುದಾಗಿ ಭರವಸೆ ನೀಡಿ ಹಣ ಹೂಡಿಕೆ ಮಾಡಿಸಿದ್ದರು. ಹಣದ ಬಾಂಡ್ ಅವಧಿ ಮುಕ್ತಾಯವಾದರೂ ಹೂಡಿಕೆ ಮಾಡಿದ ಹಣವನ್ನಾಗಲಿ, ಲಾಭಾಂಶವನ್ನಾಗಲಿ ನೀಡದೆ ವಂಚಿಸಿದ್ದಾರೆ ಎಂದು ವಂಚನೆಗೊಳಗಾದ ವ್ಯಕ್ತಿ ಕದ್ರಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Read More

ಪುತ್ತೂರು ಹುಲಿವೇಷದ ತಂಡ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಆರೋಪಿಗಳ ಜಾಮೀನು ನಿರಾಕರಣೆ ಬೆನ್ನಲ್ಲೇ ನೇರ ನಡೆಯ ನ್ಯಾಯವಾದಿ ಮಹೇಶ್ ಕಜೆ ಅವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ರಾಜ್ಯ ಸರಕಾರ ನೇಮಕ‌ ಮಾಡಿ ಅದೇಶ ಮಾಡಿದೆ. ಮಹೇಶ್ ಕಜೆ ಪ್ರಸ್ತುತ ಜಾರಿ ನಿರ್ದೇಶನಾಲಯ ( ಇಡಿ ) ಇದರ ಕೇಂದ್ರ ಸರಕಾರದ ಸರಕಾರಿ ಅಭಿಯೋಜಕರು ಹಾಗೂ ಹಿರಿಯ ನ್ಯಾಯಾಲಯಗಳೂ ಹೌದು. ಇವರನ್ನು ನೇಮಕ ಮಾಡಿರುವುದು ಈಗಾಗಲೇ ಈ ಪ್ರಕರಣವನ್ನು ಸಮರ್ಥವಾಗಿ ನಿರ್ವಹಣೆ ಮಾಡಿ ಜಾಮೀನು ನಿರಾಕರಣಯಾಗುವಂತೆ ಮಾಡಿದ ಸರಕಾರಿ ಅಭಿಯೋಜಕರಾದ ಜಯಂತಿಯವರಿಗೆ ಆನೆಭಲ ಬಂದಂತಾಗಿದ್ದು, ಆರೋಪಿಗಳ ಎದೆಯಲ್ಲಿ ನಡುಕ ಹುಟ್ಟುವಂತೆ ಮಾಡಿದೆ.

Read More